
ಪಿ.ಆರ್. ವೆಂಕಟೇಶ್
ಧರೆಯ ಗರ್ಭದೊಡಲಹಾಡು
ಮಾರ್ಧನಿಸಿದೆ ಎಲ್ಲಡೆ ನೇಗಿಲಕುಳ ಧರ್ಮಧಾರೆ
ಜಗದಗಲ ಹೂಡಿದೆ.
ಕೊರೆವ ಚಳಿಯಕಾವಿನಲ್ಲಿ
ಮೈತುಂಬಿದೆ ಚರಿತೆಯು
ಅನ್ನದೇವನೆದೆಯಲ್ಲಿ ದಾಂಗುಡಿಸಿದೆ ಕವಿತೆಯು
ಏನು ಏನು ಆನು ತಾನು
ಆದಿ ಬೆಳಗು ಮೂಡಿದೆ
ಮಾಪಿಳ್ಳೆಯ ತೆಲಂಗಾಣ ಧೂಪಧೂಮ ಬೆಳಗಿದೆ.
ಇನ್ಶು ದೇವಗಿಲ್ಲ ನಿದ್ದೆ
ಬಡಬಡಿಸಿದೆ ಗೋಪುರ
ಬೆವರುಕ್ಕಿದ ಬಿರುಗಾಳಿಗೆ
ತರಗೆಲೆ ಕಸ ಕಾಪುರ
ದೊರೆಯರಮನೆ ಮೌನದಲ್ಲಿ
ಧರ್ಮ ದ್ವೇಷ ಯಗ್ನ
ನಂಜ ಮನಸ ಕುಂಭದಲ್ಲಿ
ಸಾವು ಮಥಿಸಿ ಲಗ್ನ.

ಎಲ್ಲಿದ್ದರೊ ಹೇಗಿದ್ದರೊ
ಧರೆಯ ತಬ್ಬಿ ಎದ್ದರು
ಕಾನೂನಿನ ಕಂಬಳಿಗಳ
ಕಿತ್ತೆಸೆದು ನಿಂತರು
ಕೆಂಪುಕೋಟೆ ಎದುರೆ ಇವರು
ಕೆಂಡವಾಗಿ ಅರಳಿದರು
ಪ್ರಾಣ ದಾಳಿ ಶಾಸನಗಳ
ಸುಟ್ಟು ದೀಪವಾದರು.
ಹೊಲದ ಸಾಲ ಪದರಿನಲ್ಲಿ
ಜೀವ ಬಿತ್ತಿ ಬತ್ತಿದವರು
ಬೀಜಗರ್ಭ ಕಾವಿನಲ್ಲೆ
ಮೋಳೆತು ಮತ್ತೆ ಚಿಗಿತರು
ಮೊಡಕವಿದ ಬಾನ ಸರಿಸಿ
ನೀಲಿಯಾಗಿ ನಿಂತರು
ಸೂರ್ಯಕಿರಣ ಕೂರಿಗೆಯಲಿ
ಹೋರಾಟವ ಬಿತ್ತಿದರು.
ಧರೆಯ ಗರ್ಭದೋಡಲ ಹಾಡು
ಮಾರ್ಧಿನಿಸಿದೆ ಎಲ್ಲಡೆ
ನೇಗಿಲಕುಳ ಧರ್ಮಧಾರೆ
ಜಗದ ತುಂಬ ಹೂಡಿದೆ.
ಪಿ. ಆರ್. ವೆಂಕಟೇಶ ಅವರ ಕವಿತೆ ಚೆನ್ನಾಗಿದೆ.. ಈ ಸಂದರ್ಭದಲ್ಲಿ ಅರ್ಥಪೂರ್ಣ.. ಅದನ್ನು ಈಗಾಗಲೇ ಹಾಡಿದೀನಿ… ಉತ್ತಮ ಪ್ರತಿಕ್ರಿಯೆ ಬಂದಿದೆ…