ಗಾಂಧಿ ಕಥಾಸ್ಪರ್ಧೆ ಫಲಿತಾಂಶ ಇಲ್ಲಿದೆ

ಸ್ನೇಹಿತರೇ,

ಈ ಬಾರಿ ವರ್ತಮಾನ್.ಕಾಮ್ ಮೂಲಕ ಪ್ರಾಯೋಜಿಸಿದ್ದ ಈ ಕಥಾ ಸ್ಪರ್ಧೆಗೆ ನಾನು ವೈಯಕ್ತಿಕವಾಗಿ ಊಹಿಸಿದ್ದಕ್ಕಿಂತ ಹೆಚ್ಚು ಕತೆಗಳು ಬಂದು ಮನಸ್ಸಿಗೆ ಖುಷಿಯಾಗಿತ್ತು. ಇಂಟರ್ನೆಟ್‌ನಂತಹ ಸೀಮಿತ ವಲಯದಲ್ಲಿ ಪ್ರಕಟಿಸಿದ ಸ್ಪರ್ಧೆಯ ವಿವರಗಳಿಗೆ ಎಷ್ಟು ಕತೆಗಳು ಬರಬಹುದು ಎನ್ನುವುದು ಒಂದು ರೀತಿ ಅಸ್ಪಷ್ಟವಾಗಿತ್ತು. ಆದರೆ ನಾವು ಪ್ರೆಸ್‌ಕ್ಲಬ್ ಮೂಲಕ ಕಳುಹಿಸಿದ ಪತ್ರಿಕಾ ಪ್ರಕಟಣೆಯನ್ನು ಪ್ರಜಾವಾಣಿಯವರು ಪ್ರಕಟಿಸಿದ್ದರು. ಅವರಿಗೆ ಈ ಮೂಲಕ ಧನ್ಯವಾದಗಳನ್ನು ತಿಳಿಸುತ್ತೇನೆ. ಆ ಪ್ರಕಟಣೆ ಬೇರೆ ಇನ್ಯಾವ ಪತ್ರಿಕೆಗಳಲ್ಲಿ ಬಂದಿತ್ತೊ ಗೊತ್ತಾಗಲಿಲ್ಲ.

ಒಟ್ಟಾರೆಯಾಗಿ 70 ಕ್ಕೂಹೆಚ್ಚು ಕತೆಗಳು ನಮಗೆ ಬಂದವು. ಕತೆಗಳನ್ನು ಕಳುಹಿಸಿ ಈ ಕಥಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಈ ಎಲ್ಲಾ ಲೇಖಕರಿಗೂ ಹೃತ್ಫೂರ್ವಕ ಧನ್ಯವಾದಗಳು. ಅದರಲ್ಲಿ ನಮ್ಮ ಕಥಾ ಸ್ಪರ್ಧೆಯ ನಿಬಂಧನೆಗಳಿಗೆ ಒಳಪಟ್ಟಿದ್ದ ಕತೆಗಳು ಸರಿಯಾಗಿ 50. ಕಥಾಸ್ಪರ್ಧೆಗೆ ತೀಪ್ರುಗಾರರನ್ನು ಹುಡುಕುವ ಸಂದರ್ಭದಲ್ಲಿ ನಮ್ಮ ಬಳಗದ ಬಿ.ಶ್ರೀಪಾದ್ ಭಟ್ಟರು ಕನ್ನಡದ ಖ್ಯಾತ ಕತೆಗಾರ ಕೇಶವ ಮಳಗಿಯವರನ್ನು ಸಂಪರ್ಕಿಸಿ ಅವರನ್ನು ಈ ಕಥಾ ಸ್ಪರ್ಧೆಯ ತೀರ್ಪುಗಾರರಾಗಲು ಕೋರಿದ್ದರು. ಅವರ ಮನವಿಗೆ ಸ್ಪಂದಿಸಿ ಎಲ್ಲಾ ಕತೆಗಳನ್ನು ಓದಿ ತಮ್ಮ ಅಭಿಪ್ರಾಯ ಮತ್ತು ಉತ್ತಮ ಕತೆಗಳ ಪಟ್ಟಿಯನ್ನು ನೀಡಲು ಒಪ್ಪಿಕೊಂಡ ಕೇಶವ ಮಳಗಿಯವರಿಗೆ ನಾನು ವರ್ತಮಾನ ಬಳಗದ ಪರವಾಗಿ ಕೃತಜ್ಞತೆಗಳನ್ನು ತಿಳಿಸುತ್ತೇನೆ.

ಗಾಂಧಿ ಜಯಂತಿಗೆ ಒಂದು ವಾರದ ಮೊದಲೇ ಪಟ್ಟಿ ಸಿದ್ದಮಾಡಿ ಮತ್ತು ತಮ್ಮ “ತೀರ್ಪುಗಾರರ ಮಾತು“ಗಳನ್ನು ಬರೆದುಕೊಟ್ಟ ಕೇಶವ ಮಳಗಿಯವರ ಶಿಸ್ತನ್ನು ಅಭಿನಂದಿಸುತ್ತ, ಈ ಕಾರ್ಯಕ್ಕೆ ಅವರು ಕೊಟ್ಟ ಸಮಯಕ್ಕಾಗಿ ಅವರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತೇನೆ. ಹಾಗೆಯೇ, ಕೇಶವ ಮಳಗಿಯವರನ್ನು ಸಂಪರ್ಕಿಸುವುದರ ಜೊತೆಗೆ ಈ ಸ್ಪರ್ಧೆಯ ಒಂದಷ್ಟು ಇತರೆ ಜವಾಬ್ದಾರಿಗಳನ್ನು ಹೊತ್ತ ಬಿ.ಶ್ರೀಪಾದ್ ಭಟ್ಟರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.

ಕಲೆ: ಎಂ ಎಸ್ ಮೂರ್ತಿ

ಕಥಾ ಸ್ಪರ್ಧೆಯ ಬಹುಮಾನಿತ ಕತೆಗಳ ಮತ್ತು ಲೇಖಕರ ಪಟ್ಟಿ ಹೀಗಿದೆ:

ಮೊದಲ ಬಹುಮಾನ: ”ಹಸಿವೆಯೇ ನಿಲ್ಲು ನಿಲ್ಲು” – ಬಸು ಬೇವಿನಗಿಡದ

ದ್ವಿತೀಯ ಬಹುಮಾನ : ”ಗಾಂಧಿ ಮರ” – ಶ್ರೀನಿಧಿ. ಡಿ.ಎಸ್.

ತೃತೀಯ ಬಹುಮಾನ : ”ಸೂರೂರಿನ ದೈವ ಮಾಯವಾದ ಕತೆ” – ಶ್ರೀಲೋಲ. ಸಿ.

ಪ್ರೋತ್ಸಾಹಕ ಬಹುಮಾನ ಪಡೆದ ಕತೆಗಳು:

“ಸತ್ಯಾನ್ವೇಷಣೆ” – ಧ್ರುವಮಾತೆ

“ಹೀಗೊಂದು ಬಾನಾಮತಿ” – ಡಿ.ಎನ್.ಗೀತಾ

ಬಹುಮಾನಿತ ಕತೆಗಳನ್ನು ಬರೆದ ವಿಜೇತರಿಗೆ ಅಭಿನಂದನೆಗಳು. ಹಾಗೆಯೇ, ಕತೆಗಳನ್ನು ಕಳುಹಿಸಿ ಈ ಕಥಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಲೇಖಕರಿಗೂ ಮತ್ತೊಮ್ಮೆ ಧನ್ಯವಾದಗಳು.

ಕೇಶವ ಮಳಗಿಯವರು ಈ ಕಥಾಸ್ಪರ್ಧೆಯ ಬಗ್ಗೆ ಮತ್ತು ತಾವು ಉತ್ತಮ ಕತೆಗಳೆಂದು ಆಯ್ಕೆ ಮಾಡಿದ ಕತೆಗಳ ಬಗ್ಗೆ “ಕಥೆಗಳಿಗೆ ಇರುವ ಆಕರ್ಷಣೆಯೇ ಅಂಥದ್ದು” ಎನ್ನುವ ಲೇಖನ ಬರೆದಿದ್ದಾರೆ. ದಯವಿಟ್ಟು ಗಮನಿಸಿ.

ಹಾಗೆಯೇ, ಈ ತಿಂಗಳಿನಲ್ಲಿ ಯಾವುದಾದರೂ ಒಂದು ದಿನ ಸಾಧ್ಯವಾದರೆ ಒಂದು ಪುಟ್ಟ ಸಭೆ ಮಾಡಿ ಕಥಾಸ್ಪರ್ಧೆಯಲ್ಲಿ ವಿಜೇತರಾದವರನ್ನೆಲ್ಲ ಅಲ್ಲಿಗೆ ಕರೆಸಿ ಅಭಿನಂದಿಸಬೇಕೆಂದು ನಮ್ಮ ಬಳಗ ಅಂದುಕೊಂಡಿದೆ. ಅಷ್ಟರೊಳಗೆ ಬಹುಮಾನಿತ ಕತೆಗಳನ್ನು ಮತ್ತು ಕಥಾ ಸ್ಪರ್ಧೆಗೆ ಬಂದಿದ್ದ ಇನ್ನೊಂದಷ್ಟು ಉತ್ತಮ ಕತೆಗಳನ್ನು ಸೇರಿಸಿ ಈ ನೆನಪಿನಲ್ಲಿ ಒಂದು ಕಥಾ-ಸಂಕಲನ ತರುವ ಯೋಜನೆ ಹಾಕಿಕೊಂಡಿದ್ದೇವೆ. ಹಾಗಾಗಿ ದಿನಾಂಕದ ಬಗ್ಗೆ ಒಂದಷ್ಟು ಅಸ್ಪಷ್ಟತೆಯಿದೆ. ಅದು ಅಂತಿಮವಾದ ತಕ್ಷಣ ಕತೆಗಾರರಿಗೆ ಮತ್ತು ನಮ್ಮ ಓದುಗರಿಗೆ ತಿಳಿಸಲಾಗುತ್ತದೆ.

ಅಂದ ಹಾಗೆ, ಮೇಲಿನ ಬಹುಮಾನಿತ ಕತೆಗಳನ್ನು ಇನ್ನು ಮುಂದೆ ವಾರಕ್ಕೊಂದು ಕತೆಯಂತೆ ಪ್ರತಿ ಶನಿವಾರ ವರ್ತಮಾನ.ಕಾಮ್‌ನಲ್ಲಿ ಪ್ರಕಟಿಸಲಾಗುವುದು.

ಎಲ್ಲರಿಗೂ ಧನ್ಯವಾದಗಳು.

ನಮಸ್ಕಾರ,

ರವಿ ಕೃಷ್ಣಾರೆಡ್ಡಿ

 

‍ಲೇಖಕರು G

October 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This