ಗಾಂಧಿ ನಗುತ್ತಿದ್ದಾನೆ ನೋಟಿಗಂಟಿ!

ಪುಷ್ಪರಾಜ್ ಚೌಟ

ಪುಷ್ಪ ಸಿಂಚನ

ಧೂಳೆಬ್ಬಿಸುವ ಹಗ್ಗಕೆ ತೊಟ್ಟಿಲು ತೂಗುವಾಗ ಪಿಳಿಪಿಳಿ ಕಣ್ಣುಬಿಡುವ ನನ್ನ ತಲೆಯಡಿಗೆ ಅಜ್ಜನಿಟ್ಟ ನೂರರ ನೋಟಿನಲಿ ಗಾಂಧಿ ಅದೇ ಕನ್ನಡಕದಲಿ ನಗು ಬೀರಿದ ನೆನಪು!

ಸೆಗಣಿ ಸಾರಿದ ನೆಲಕೆ ನನ್ನುಚ್ಚೆಯ ತೇವ ಅಪ್ಪನ ಕಿಸೆಯ ಹರಿದ ಐವತ್ತರ ಪರಿಮಳ ನೂಲು ಬಿಟ್ಟ ನೋಟಿನಲೂ ಗಾಂಧಿ ನಗು!

ಎಣ್ಣೆ ಜಿಡ್ಡಿನ ಕೈಯಲಿ, ಮೂಗೊರೆಸಿ ನಕ್ಕು ಅಂಗಡಿಯಾತ ಹಲ್ಲು ಬಿಟ್ಟು ಕೋಲು ಸಿಕ್ಕಿಸಿದ- ಚಾಕಲೇಟು ಕೊಡುವಾಗಲೂ, ಬೆನ್ನೆಲುಬಿಲ್ಲದ ಒಂದರ ನೋಟಿನಲೂ ಕಣ್ಣು ಬಿಡುತ್ತಾನೆ ಗಾಂಧಿ! ತೂತು ಚಡ್ದಿಯ ತೆರೆದ ಕಿಸೆಯೊಳಗೊಂದು ಹತ್ತರ ನೋಟಿನಿಣುಕು, ನಾಸಿಕಕೆ ಕನ್ನಡಕ ಸಿಗಿಸಿ, ವಾಸನೆಗೂ ನಗುತ್ತಾನೆ ಗಾಂಧಿ! ಮೀಸೆ ತಿರುವಿ, ಆಡುಗಡ್ಡದ ಮೇಲೊಂದಿಷ್ಟು ಕೈಯಾಡಿಸಿ ಜೇಬಿನಲಿ ಪೆನ್ನು ತೆಗೆದು ನೂರರ ನೋಟಿನಲಿ ನೂರೆನುವಾಗಲೂ ಹಣೆ ಮುದುಡಿಸಿದ ಗಾಂಧಿ ನಗು ಶುಭ್ರ! ತಲೆದಿಂಬಿಗೊಂದಿಷ್ಟು ತುರುಕಿ, ಹಾಸಿಗೆ ಹಾಸಿ ಬೊಜ್ಜು ಬೆಳೆದ ಸೊಂಟಕ್ಕಂಟಿದ ಚೀಲದಲಿ ಮತ್ತೆ ಐನೂರರ ಗಾಳಿ ಬೀಸುವಾಗಲೂ ಗಾಂಧಿ ನಗುತ್ತಲೇ ಇರುತ್ತಾನೆ, ಕನ್ನಡಕದೊಳಗಿಂದ!]]>

‍ಲೇಖಕರು G

June 25, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರ

ನಿರುತ್ತರ

ಪ್ರಕಾಶ್ ಬಿ ಬೊಕ್ಕುತಲೆ, ಹಸಿದ ದೇಹ, ಒಣಗಿದ ಗಂಟಲು, ಗಂಟು ಗಂಟಾದ ಕೂದಲು ತ್ರಾಣವಿಲ್ಲದ ಶರೀರ, ಮಳೆ ನಿಂತ ಕಾದ ನೆಲ. ತೆರೆದ ಬಾಯೊಳಗೆ...

ನನ್ನ ಬುದ್ಧ

ನನ್ನ ಬುದ್ಧ

ನಂದಿನಿ ಹೆದ್ದುರ್ಗ ಹೊಸಪ್ರೇಮಿಗಳ ನಡುರಾತ್ರಿಯ ಮೊರೆವಮಾತುಗಳ ನಡುವಿಂದ ಕದ್ದು ಓಡಿಬರುತ್ತವೆ ಒಂದಷ್ಟು ಮುದ್ದುಮುದ್ದು ಪದಗಳು.ಅದು ಅವಳು ಪದ್ಯ...

ಜೀವನದ ಹೊಟ್ಟೆ ತುಂಬಿ

ಜೀವನದ ಹೊಟ್ಟೆ ತುಂಬಿ

ಮಾಲಾ.ಮ.ಅಕ್ಕಿಶೆಟ್ಟಿ ವಿಧ ವಿಧ ಭಕ್ಷ್ಯಗಳು ಸಿಹಿ ಖಾರ ಹುಳಿ ಒಗರು ಈರುಳ್ಳಿ ಬೆಳ್ಳುಳ್ಳಿ ಹುಣಸೆ ಬೆಲ್ಲ  ಎಣ್ಣೆ ಹೆಚ್ಚೋ ಕಡಿಮೆಯೋ ರುಚಿ ಪಾಪಿ...

3 ಪ್ರತಿಕ್ರಿಯೆಗಳು

  1. ರವಿ ಮುರ್ನಾಡು.ಕ್ಯಾಮರೂನ್.

    ಕವಿತೆಯ ಭಾವ ಚೆನ್ನಾಗಿದೆ. ಇನ್ನಷ್ಟು ತೀಕ್ಷಣಗೊಳಿಸಲು ಅವಕಾಶವಿದೆ.

    ಪ್ರತಿಕ್ರಿಯೆ
  2. Badarinath Palavalli

    ಗಾಂಧಿಯ ಆ ಮಾಸದ ನಗೆಯ ಹಿಂದೆ, ದುಡ್ಡಿನ ಪೊಳ್ಳುತನ, ದರ್ಭಾರು, ನಿರಂತರ ಚಲನತೆ ಮತ್ತು ಅದರ ಅಶಾಶ್ವತೆಯ ಸಂಪೂರ್ಣ ಸಾರವಿದ್ದಂತಿದೆ.
    ಹಲವು ಆಯುಮಾನಗಳಲ್ಲಿ ತೆರೆದುಕೊಳ್ಳುವ ನಿಮ್ಮ ಕವನದಲ್ಲಿ ಹಣ ಮತ್ತು ಅದಕ್ಕೆ ಎಂದೂ ಬೆಲೆಕೊಡದ ಗಾಂಧಿ ವ್ಯಕ್ತಿತ್ವದ ಹೇಳದ ಹಿನ್ನಲೆಯಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: