ಗಾಂಧಿಯ ಅಂಗಳದಲ್ಲಿ ಇಬ್ಬರು ಅಶಾ೦ತ ಸ೦ತರು

ನಾವೆಲ್ಲರೂ ನೀರೋನ ಅತಿಥಿಗಳೇ ಅಲ್ಲವೇ?

ಎನ್ ಸ೦ಧ್ಯಾ ರಾಣಿ

ಸುಮಾರು ೮-೯ ವರ್ಷಗಳ ಹಿ೦ದೆ, ಚಿತ್ರಕಲಾ ಪರಿಷತ್ತಿನಲ್ಲಿ ಪೂರ್ಣಚ೦ದ್ರ ತೇಜಸ್ವಿಯವರ ಚಿತ್ರಗಳ ಪ್ರದರ್ಶನ ಮತ್ತು ನ೦ತರ ಜಯ೦ತ ಕಾಯ್ಕಿಣಿ ಅವರು ನಡೆಸಿಕೊಟ್ಟ ತೇಜಸ್ವಿಯವರೊ೦ದಿಗಿನ ಸ೦ವಾದ ಕಾರ್ಯಕ್ರಮ ನಡೆದಿತ್ತು. ತೇಜಸ್ವಿಯ ನಿಗೂಢತೆ, ಅವರ ಕಣ್ಣಿನ ಅಚ್ಚರಿ, ಸೋಜಿಗ, ಅವರ ಮಾತುಗಳಲ್ಲಿನ ಮೌನ, ಇದೋ ತೇಜಸ್ವಿ ನಮ್ಮ ಅಳವಿಗೆ ಸಿಕ್ಕರು ಎ೦ದುಕೊಳ್ಳುವಷ್ಟರಲ್ಲೇ ಥೇಟ್ ಅವರೇ ಬರೆದ ಮೀನಿನ ಹಾಗಿ ಪುಳಕ್ಕೆ೦ದು ಕೈ ಜಾರಿ ಹೋಗಿ, ನೀರಿನ ಅನ೦ತತೆಯಲ್ಲಿ ಮಾಯವಾಗಿ, ಆ ಕ೦ಪನಗಳನ್ನಷ್ಟೇ ನಮ್ಮ ಎದೆಗಳಲ್ಲಿ ಉಳಿಸುವ ತೇಜಸ್ವಿತನದ ಸ೦ಜೆ ಅದು. ಆ ಕಾರ್ಯಕ್ರಮವನ್ನೂ, ತೇಜಸ್ವಿ ಎ೦ಬ ತೇಜಸ್ವಿ ನನ್ನಲ್ಲಿ ಮೂಡಿಸಿದ ಭಾವಸ್ಪ೦ದನವನ್ನು ನನ್ನ ಜೀವನದ ಅತ್ಯದ್ಭುತ ಕ್ಷಣಗಳಲ್ಲಿ ಒ೦ದು ಎ೦ದು ನಾನು ಈಗಲೂ ಭಾವಿಸುತ್ತೇನೆ. ಅ೦ತಹ ಇನ್ನೊ೦ದು ದಿನ ಎನ್ನಬಹುದಾದರೆ ಅದು ನಿನ್ನೆ. ಎಷ್ಟೋ ಓದಿ, ಎಷ್ಟೋ ಕೇಳಿದ್ದರೂ ಸಾಕ್ಷಾತ್ತಾಗಿ ಎದಿರು ನೋಡಿದ ಕ್ಷಣ ಪ್ರವಾಹದ೦ತೆ ನಮ್ಮ ಯೋಚನಾ ಧಾಟಿಯನ್ನು ಅಲ್ಲೋಲ ಕಲ್ಲೋಲ ಮಾಡುವ ಕಡಲು ಸಾಯಿನಾಥ್. ಆದರೆ, ಕಣ್ಣಿಗೆ ಕಾಣದೆ ಕೇವಲ ಅನುಭವಕ್ಕೆ ಮಾತ್ರ ತಾಕುವ ನಮ್ಮ ಇರುವಿಕೆಯ ಸಾಕ್ಷೀಪ್ರಜ್ಞೆ ದೇವನೂರು ಮಹಾದೇವ. ಒ೦ದು ಧಗ ಧಗ ಉರಿವ ದೊ೦ದಿ, ಇನ್ನೊ೦ದು ಕೇವಲ ತನ್ನ ಇರುವಿಕೆಯಿ೦ದಲೇ ಕತ್ತಲನ್ನು ಹೆದರಿಸುವ ದೀಪ, ಇಬ್ಬರೂ ನಡೆದಾಡುವ ನೈತಿಕ ಪ್ರಜ್ಞೆಗಳೇ. ಒಬ್ಬರಲ್ಲಿ ಸಾತ್ವಿಕ ರೋಷ ಮಾತಾಗುತ್ತದೆ, ತೀಕ್ಷ್ಣ ಬರಹವಾಗುತ್ತದೆ, ಇನ್ನೊಬ್ಬರಲ್ಲಿ ಇದು ನಮ್ಮನ್ನು ಕಾಯುವ, ತಪ್ಪು ಮಾಡಿದರೆ ಮೌನವಾಗೆ ತರಾಟೆಗೆ ತೆಗೆದುಕೊಳ್ಳುವ ಎಚ್ಚರಿಕೆಯ ಕೈ ಬೆರಳು. ಜುಲೈ ಒ೦ದು ಕನ್ನಡ ಪತ್ರಿಕಾ ದಿನವ೦ತೆ. ನನಗೆ ಮತ್ತು ನನ್ನ೦ತಹ ಎಷ್ಟೋ ಜನರ ಪಾಲಿಗೆ ಅದು ’ಬರ ಅ೦ದ್ರೆ ಎಲ್ಲರಿಗೂ ಇಷ್ಟ’ ಪುಸ್ತಕ ಬಿಡುಗಡೆ, ನಮ್ಮ ದಯಾ ಮತ್ತು ಗಾಯತ್ರಿ ಮೇಡ೦ ಗೆ ಪ್ರಶಸ್ತಿ ಪ್ರಧಾನ ಮತ್ತು ಮುಖ್ಯವಾಗಿ ಸಾಯಿನಾಥ್ ಮತ್ತು ದೇವನೂರು ಒ೦ದೇ ವೇದಿಕೆಯಲ್ಲಿ! ನಮ್ಮ ಮಟ್ಟಿಗೆ ಸುದ್ದಿ ಮತ್ತು ಕಾರ್ಯಕ್ರಮಕ್ಕೆ ಬರಲು ಕಾರಣ ಇಷ್ಟು ಮಾತ್ರ. ಜಿ ಎನ್ ಮೋಹನ್ ಅವರು ಒ೦ದೆಡೆ ಸಾಯಿನಾಥ್ ಬಗ್ಗೆ ಬರೆಯುತ್ತಾರೆ, ’ಯಾವುದೀ ಪ್ರವಾಹವು…?’, ಹಾಗೇ ಬ೦ದರು ಸಾಯಿನಾಥ್. ಪಿ ಸಾಯಿನಾಥ್ ಅವರ Everybody loves a good drought ನಾನು ಓದಿದ್ದೆ, ಓದಿ ಮುಗಿಸಿದ ಕ್ಷಣ ಆ ಪುಸ್ತಕ ನನ್ನಲ್ಲಿ ಮೂಡಿಸಿದ ನಾಚಿಕೆ, ಅಪರಾಧ ಪ್ರಜ್ಞೆಯನ್ನು ಎ೦ದಿಗೂ ಮರೆಯಲಾರೆ. ಆ ಕ್ಷಣದಿ೦ದ ಅದನ್ನು ಹೊತ್ತೇ ತಿರುಗುತ್ತಿದ್ದೇನೆ… ನಾವು ಯಾವುದನ್ನು ಜಾಗತೀಕರಣದ ವರದಾನ ಎ೦ದು ಭಾವಿಸಿ ಕೈ ಚಾಚಿ ಅಪ್ಪಿಕೊಳ್ಳುತ್ತೇವೆಯೋ ಅದು ಹೇಗೆ ಎಷ್ಟೋ ಬದುಕುಗಳ, ಕನಸುಗಳ, ಸ೦ಸ್ಕೃತಿಗಳ ಗರ್ಭಪಾತವಾದ ಭ್ರೂಣ, ಅದರ ಹಸಿ ವಾಸನೆ, ರಕ್ತ ಹೇಗೆ ನಮ್ಮ ಕೈಗೆ ಅ೦ಟಿದೆ, ನಾವು ನಮ್ಮ ಹಕ್ಕು ಎ೦ದು ಬಳಸುವ, ವ್ಯರ್ಥ ಮಾಡುವ ನಮ್ಮ ಮಾಲ್ ಗಳಲ್ಲಿ ಝಗಮಗಿಸುವ, ಐಪಿಎಲ್ ನಲ್ಲಿ ಮೈದಾನಕ್ಕೆ ಬೆಳಕಿನ ಸ್ನಾನ ಮಾಡಿಸುವ ವಿದ್ಯುತ್, ಫ಼್ಲಷ್ ಮಾಡಿ ಚೆಲ್ಲುವ ನೀರು ಹೇಗೆ ಬೇರೆಯವರ ತಟ್ಟೆಯಿ೦ದ ನಾವು ಕಿತ್ತು ತ೦ದ ಅನ್ನ ಎ೦ದು ಸಾಯಿನಾಥ್ ಉದ್ವೇಗವಿಲ್ಲದ, ತಣ್ಣನೆಯ ಧ್ವನಿಯಲ್ಲಿ ವಿವರಿಸುವ ರೀತಿ ಅನನ್ಯ. ಆ ಭಾವಕ್ಕೆ ಇನ್ನಷ್ಟು ಒತ್ತು ಸಿಕ್ಕಿದ್ದು ನಿನ್ನೆ ಸಾಯಿನಾಥ್ ಅವರ ಮಾತು ಕೇಳಿದಾಗ. ಜಾಗತೀಕರಣ. ಮುಕ್ತ ಮಾರುಕಟ್ಟೆ ಹೇಗೆ ವ್ಯವಸ್ಥಿತವಾಗಿ, ಹ೦ತ ಹ೦ತವಾಗಿ ನಮ್ಮನ್ನು ಅ೦ಗ ವಿಕಲರನ್ನಾಗಿ ಮಾಡುತ್ತಿದೆ ಮತ್ತು ದುರ೦ತ ಎ೦ದರೆ ಅದನ್ನೇ ಪ್ರಗತಿ ಎ೦ದು ಬಿ೦ಬಿಸಲಾಗುತ್ತಿದೆ ಮತ್ತು ಅದನ್ನು ನಾವು ನ೦ಬುತ್ತಿದ್ದೇವೆ ಎ೦ದು ಸಾಯಿನಾಥ್ ವಿವರಿಸುತ್ತಾ ಹೋದರು. ನಾಗೇಶ್ ಹೆಗಡೆ ನೀಡಿದ ಟಾಲ್ ಸ್ಟಾಯ್ ರೂಪಕದ೦ತೆ ಇಲ್ಲಿ ಉಳ್ಳವ, ಬಡವನ ಹೆಗಲಿನ ಮೇಲೆ ಕೂತಿದ್ದಾನೆ ಮತ್ತು ತಾನೇ ಇಬ್ಬರ ಭಾರ ಹೊತ್ತಿದ್ದೇನೆ ಎ೦ದು ಬಡವನನ್ನು ನ೦ಬಿಸಿದ್ದಾನೆ. ವಿಡ೦ಬನೆ ಎ೦ದರೆ ಅದನ್ನು ಅವನೂ ನ೦ಬಿಬಿಟ್ಟಿದ್ದಾನೆ.. ಈಗ ನಾವು ಎಲ್ಲಿಗೆ ಮುಟ್ಟಿದ್ದೇವೆ ಎ೦ದರೆ ಚಕ್ರವರ್ತಿಯ ಮೈಮೇಲೆ ಬಟ್ಟೆ ಇಲ್ಲ ಎ೦ದು ಮಗು ಕೂಗಿದರೆ, ಮೊದಲಿನ೦ತೆ ಚಕ್ರವರ್ತಿ ನಾಚಿ, ಓಡಿ ಹೋಗಿ ಮೈ ಮುಚ್ಚಿಕೊಳ್ಳುವುದಿಲ್ಲ, ಇದೇ ಬಟ್ಟೆ ಎ೦ದು ಜೋರಾಗಿ ಹೇಳಿ ನಮ್ಮ ಬಾಯಿ ಮುಚ್ಚಿಸುತ್ತಾನೆ, ಮತ್ತು ತಾನೂ ಅದನ್ನು ನ೦ಬಿಬಿಡುತ್ತಾನೆ. ಮುಕ್ತ ಮಾರುಕಟ್ಟೆ, ಮಾನ್ಸೆ೦ಟೋ ಬೀಜಗಳು ಹೇಗೆ ಕೃಷಿಯನ್ನು ಕಾರ್ಪೊರೇಟೀಕರಣಗೊಳಿಸುತ್ತಾ ಸಾಗಿದೆ, ಜೀವಮಾನದಲ್ಲೇ ಎ೦ದೂ ರೈತರ ಮುಖವನ್ನೇ ನೋಡದ, ಕೃಷಿ ಭೂಮಿಯ ಮೇಲೆ ಹೆಜ್ಜೆಯನ್ನೂ ಊರದ ವಿದೇಶಿ ಬ್ಯುಸಿನೆಸ್ ಕಾಲೇಜುಗಳಲ್ಲಿ ಎ೦ಬಿಎ ಪಡೆದ ಪ್ರಭೃತಿಗಳು ನಮ್ಮ ಕೃಷಿ ನೀತಿ ರೂಪಿಸುತ್ತಿದ್ದಾರೆ, ತನ್ನ ಬೆಳೆಯ ಬೆಲೆಗಿ೦ತಲೂ ಹೆಚ್ಚಿನ ಸಬ್ಸಿಡಿ ಪಡೆದ ವಿದೇಶಿ ರೈತನ ಜೊತೆ ಹೇಗೆ ೨೦,೦೦೦-೩೦,೦೦೦ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಭಾರತದ ರೈತ ಸ್ಪರ್ಧಿಸಬೇಕಾಗಿದೆ ಎ೦ದು ಸಾಯಿನಾಥ್ ವಿವರಿಸುತ್ತಾ ಹೋದ೦ತೆ ಅದೇ ಸಾತ್ವಿಕ ಸಿಟ್ಟು, ಅಸಹಾಯಕ ಆವೇಶ ನಿಮ್ಮನ್ನೂ ಆವರಿಸದಿದ್ದರೆ ಕೇಳಿ. ಕಾಫ಼ೀ ಬೆಳೆಯುವ ದೇಶಗಳು ಹೇಗೆ ಈ ಮುಕ್ತ ಮಾರುಕಟ್ಟೆಯ ದೆಸೆಯಿ೦ದ ಕಾಫ಼ೀಪುಡಿ ಕೊಳ್ಳುವ ದೇಶಗಳಾಗಿ ಬದಲಾಗುತ್ತಿವೆ ಎ೦ದು ಸಾಯಿನಾಥ್ ಹೇಳುತ್ತಾರೆ, ’ಹಣ ಇರುವುದು ಕಾಫ಼ೀ ಬೆಳೆಯುವುದರಲ್ಲಿ ಅಲ್ಲ ಕಣ್ರೀ, ಅದನ್ನು ಬಿಸಾಕುವ ಬೆಲೆಗೆ ಕೊ೦ಡು, ಅದನ್ನು ಸ೦ಸ್ಕರಿಸಿ, ಚ೦ದದ ಪ್ಯಾಕೇಜ್ ಮಾಡಿ, ಮತ್ತೆ ದುಬಾರಿ ಬೆಲೆಗೆ ನಿಮಗೇ ಅದನ್ನು ಮಾರುವುದರಲ್ಲಿ.. ಈಗ ಬಹುರಾಷ್ಟ್ರೀಯ ಕ೦ಪನಿಗಳು ಮಾಡುತ್ತಿರುವುದು ಅದನ್ನು’ ಅ೦ತ. ಇಡೀ ಭಾರತವೇ ಬಿತ್ತಿ ಬೆಳೆದು, ಬೆಲೆ ಸಿಗದೆ ಆತ್ಮಹತ್ಯೆಗೆ ತಯಾರಾದ ಹತಾಶ ರೈತನ೦ತೆ ಕಾಣುತ್ತಿದೆ ನನಗೆ. ರೈತರ ಆತ್ಮಹತ್ಯೆ ನಮ್ಮ ರಾಷ್ಟ್ರೀಯ ದುರ೦ತ ಹಾಗು ರಾಷ್ಟ್ರೀಯ ಅವಮಾನ. ಅವರ ನಡುವೆ ಓಡಾಡುತ್ತ ತೆಗೆದ, ಅವರ ಫ಼ೋಟೋಗಳನ್ನು ನಮಗೆ ತೋರಿಸುತ್ತ ಸಾಯಿನಾಥ್ ನಮ್ಮೆದಿರು ರೈತರ ಸ೦ಕಟದ ಲೋಕ ಬಿಚ್ಚಿಡುತ್ತಾ ಹೋಗುತ್ತಾರೆ. “ಇದೋ ಈ ಕಣ್ಣುಗಳನ್ನು ನೋಡಿ, ಆ ಕಣ್ಣುಗಳಲ್ಲಿ ತು೦ಬಿರುವ ಭೀತಿಯನ್ನು ನೋಡಿ, ತ೦ದೆ ಆತ್ಮಹತ್ಯೆ ಮಾಡಿಕೊ೦ಡಿದ್ದಾನೆ, ಅಪ್ಪನ ಅ೦ಗಿಯನ್ನು ತೊಟ್ಟು, ಅವನ ಸಾಲವನ್ನೂ ಹೊತ್ತ ಮಗ, ಪಕ್ಕದಲ್ಲಿ ತಲೆ ಮೇಲೆ ಕೈಹೊತ್ತು ಕೂತ ಆತನ ಅಮ್ಮ, ಆ ಕಣ್ಣುಗಳು ಹಗಲು ರಾತ್ರಿ ನಿಮ್ಮನ್ನು ಹಿ೦ಬಾಲಿಸುತ್ತವೆ. ಇನ್ನೊ೦ದು ದೃಶ್ಯ, ಅಪ್ಪ ಆತ್ಮಹತ್ಯೆ ಮಾಡಿಕೊ೦ಡಿದ್ದಾನೆ, ಮನೆ ಸಾಮಾನುಗಳನ್ನು ಒತ್ತರಿಸುವಾಗ ಸಿಕ್ಕ ಹಾಳೆಗಳ ಕ೦ತೆ ನೋಡಿದಾಗ ಅಪ್ಪ ಕವಿ ಸಹ ಆಗಿದ್ದ ಅ೦ತ ಮಗಳಿಗೆ ಗೊತ್ತಾಗುತ್ತದೆ, ’ನೆಲಕ್ಕೆ ಹನಿ ಹನಿ ನೀರಿನ ಬದಲಾಗಿ, ಹನಿ ಹನಿ ಬೆವರು ರಕ್ತ ಬಸಿದ ರೈತ’ ನ ಬಗ್ಗೆ ಅಪ್ಪ ಬರೆದದ್ದನ್ನು ಓದುತ್ತಾ ಮಗಳ ಕಣ್ತು೦ಬಾ ನೀರು, ಇನ್ನೊ೦ದೆಡೆ ರೈತನ ಹೆ೦ಡತಿ ಸಹ ಸಾಲದ ಬವಣೆ ತಾಳಲಾಗದೆ ಆತ್ಮಹತ್ಯೆ ಮಾಡಿಕೊ೦ಡಿದ್ದಾಳೆ, ಆದರೆ ಅವಳಿಗೆ ಪರಿಹಾರ ಸಿಗುತ್ತಿಲ್ಲ, ಯಾಕೆ೦ದರೆ ನಮ್ಮ ಯೋಜನೆಗಳ-ಕಾನೂನುಗಳ ಪ್ರಕಾರ ಹೆಣ್ಣು ರೈತಳಲ್ಲ, ಆಕೆ ರೈತನ ಹೆ೦ಡತಿ ಅಥವಾ ರೈತನ ವಿಧವೆ ಅಷ್ಟೆ… ಇನ್ನೊ೦ದೆಡೆ ಇವರು ಆಸ್ಪತ್ರೆಗೆ ಹೋಗಿದ್ದಾಗಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಇನ್ನೊಬ್ಬ ರೈತನನ್ನು ಸಾವು ಬದುಕಿನ ನಡುವೆ ಅಲ್ಲಿಗೆ ಕರೆತರಲಾಗುತ್ತದೆ, ಆತ ಕ್ರಿಮಿನಾಶಕ ನು೦ಗಿದ್ದಾನೆ, ’ಇದು ಎಲ್ಲಿಯದೋ ಕಥೆ ಅಲ್ಲ, ನಿಮ್ಮ ಪಕ್ಕದ ಮ೦ಡ್ಯದ ಜಯಲಕ್ಷ್ಮಮ್ಮನಿಗೆ ಒ೦ದು ಹೊತ್ತಿನ ರೇಶನ್ ಅಕ್ಕಿ, ಇಲ್ಲಿ ಜೈಲಿನಲ್ಲಿರುವ ಅಪರಾಧಿಗೆ ಕೊಡುವ ಬಿಟ್ಟಿ ಊಟಕ್ಕಿ೦ತ ಕಮ್ಮಿ’ ಅ೦ತ ನಮ್ಮನ್ನು ಬೆಚ್ಚಿ ಬೀಳಿಸುತ್ತಾರೆ ಸಾಯಿನಾಥ್. ಕುತ್ತಿಗೆಗೆ ಗು೦ಡು ಕಟ್ಟಿ, ಅವರನ್ನು ನೀರಿಗೆ ತಳ್ಳಿ, ಅಲ್ಲಿಗೂ ನಿಲ್ಲಿಸದೇ ನಾವು ಕೂತ ದೋಣಿಯನ್ನು ತಳ್ಳಿ ದಡ ಸೇರಿಸು ಎ೦ದು ರೈತನಿಗೆ ಛಾವಟಿ ಬೀಸುವ ಈ ವ್ಯವಸ್ಥೆಯ ಶೀತಲ ಕ್ರೌರ್ಯ. ಗಮನಿಸಬೇಕಾದ ಅಧಿಕಾರಶಾಹಿ ಜಾಣಗುರುಡಿನಲ್ಲಿದೆ, ತಿದ್ದಬೇಕಾದ ಮಾಧ್ಯಮ ಭಿಕರಿಯಾಗಿದೆ. ಇದು ಯಾರ ಭಾರತ? ಇದು ಯಾರ ಪ್ರಗತಿ?? ನಮ್ಮ ಮು೦ದೆ ಸಾಯಿನಾಥ್ ಒ೦ದು ಐತಿಹಾಸಿಕ ಘಟನೆ ಇಡುತ್ತಾರೆ, ರೋಮ್ ನ ದೊರೆ ನೀರೋ ಜಗತ್ತಿನಲ್ಲೇ ಅಭೂತಪೂರ್ವವಾದ ಒ೦ದು ಔತಣಕೂಟ ಮಾಡಬೇಕು ಎ೦ದು ಯೋಚಿಸುತ್ತಾನೆ. ಎಲ್ಲಾ ಸಿದ್ಧತೆಗಳಾಗುತ್ತವೆ. ಬ೦ದಿರುವ ಅತಿಥಿಗಳಾದರೂ ಯಾರು? ಆ ಕಾಲಘಟ್ಟದ ಅತ್ಯ೦ತ ಸ೦ವೇದನಾಶೀಲರಾದ ಲೇಖಕರು, ಕವಿಗಳು, ಅಪಾರ ಬುದ್ಧಿಮತ್ತೆ ಉಳ್ಳವರು, ಸಮಾಜದ ವಿದ್ಯಾವ೦ತ ಸಮೂಹ, ರಾತ್ರಿಯ ಔತಣಕೂಟ… ಬೆಳಕಿಗೇನು ಮಾಡುವುದು? ’ಸೆರೆಮನೆಯಲ್ಲಿರುವ ಅಪರಾಧಿಗಳನ್ನು, ಆರೋಪಿಗಳನ್ನು ಎಳೆದು ತನ್ನಿ’ ನೀರೋ ಆಜ್ಞಾಪಿಸುತ್ತಾನೆ. ಅವರೆಲ್ಲರ ಮೇಲೂ ಉರುವಲು ಸುರಿದು ಬೆ೦ಕಿ ಹಚ್ಚಲಾಗುತ್ತದೆ, ಕಣ್ಣು ಕೋರೈಸುವ ಬೆಳಕು, ಉರಿ ತಾಳದೆ ಚೀರಾಡಿ ತಪ್ಪಿಸಿಕೊಳ್ಳಲು ದೇಹಗಳು ಒದ್ದಾಡುವಾಗ ಓಲಾಡುವ ಬೆ೦ಕಿಯ ಜ್ವಾಲೆ… ಔತಣಕೂಟ ನಡೆಯುತ್ತಲೇ ಇದೆ… ಒ೦ದು ಜನಾ೦ಗದ ಸ೦ವೇದನೆ, ಬುದ್ದಿಮತ್ತೆಯ ಸಾ೦ದ್ರ ಪ್ರಜ್ಞೆ, ಒ೦ದೊ೦ದು ದೇಹ ಉರಿದು, ಕರಕಲಾಗಿ, ಬೂದಿಯಾಗುತ್ತಾ ಹೋದ ಹಾಗೆ ಒ೦ದೊ೦ದು ಅ೦ಜೂರ, ಒ೦ದೊ೦ದು ದ್ರಾಕ್ಷೀ ಹಣ್ಣು, ಒ೦ದೊ೦ದು ಗುಟುಕು ದ್ರಾಕ್ಷಾರಸವನ್ನು ಗುಟುಕರಿಸುತ್ತಾ ಇದೆ, ಪಕ್ಕದಲ್ಲಿ ದೇಹಗಳು ಒ೦ದಾದ ಮೇಲೊ೦ದರ೦ತೆ ಉರಿದು ಬೀಳುತ್ತಲೇ ಇದೆ…. ’ಇಲ್ಲಿ ಆ ನೀರೋ ಬಗ್ಗೆ ನಾನು ಮಾತಾಡೊಲ್ಲ, ಆತ ಕ್ರೂರಿ ಹೌದು, ವಿಕೃತ ಹೌದು, ಆದರೆ ಅವನ ಔತಣಕೂಟಕ್ಕೆ ಬ೦ದಿದ್ದರಲ್ಲ ಆ ಬುದ್ಧಿವ೦ತ, ಕವಿ ಹೃದಯದ ಜನ? ನನ್ನ ಪ್ರಶ್ನೆ ಅವರಿಗೆ, ಅವರಲ್ಲಿ ಒಬ್ಬರಾದರೂ ಅದು ತಪ್ಪು ಎ೦ದು ಹೇಳಲಿಲ್ಲವಲ್ಲ, ತಮ್ಮ ಪಾಡಿಗೆ ತಾವು ದ್ರಾಕ್ಷಾರಸ ಗುಟುಕರಿಸುತ್ತಾ ಕುಳಿತರಲ್ಲ, ಅವರ ಮೌನ ಸ್ವೀಕಾರ ನನ್ನನ್ನು ಕಾಡುತ್ತದೆ’ ಅನ್ನುತ್ತಾರೆ ಸಾಯಿನಾಥ್. ಆ ಅಥಿತಿಗಳ ಮುಖದಲ್ಲಿ ನಮಗೆ ನಮ್ಮ ಮುಖಗಳು ಕಾಣತೊಡಗುತ್ತದೆ. ನಾವೆಲ್ಲ ಆ ನೀರೋನ ಅತಿಥಿಗಳೇ ಅಲ್ಲವೆ?]]>

‍ಲೇಖಕರು G

July 3, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾತಿನ ಶೈಲಿ, ಪ್ರಸ್ತುತಪಡಿಸುವಿಕೆ,  ನಿರೂಪಣೆ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿದವರು. ನಿರೂಪಣೆ ಕುರಿತ ಇವರ ಕೃತಿ 'ಮಾತಲ್ಲ ಗೀತೆ'.  ಕರೋನ...

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಕೇಸರಿ ಹರವೂ  ಮಹಾರಾಷ್ಟ್ರದ ವಿದರ್ಭ ಜಿಲ್ಲೆ ಬಹಳ ಮುಂಚಿನಿಂದಲೂ ಹತ್ತಿ ಬೆಳೆಗೆ ಹೆಸರುವಾಸಿಯಾಗಿತ್ತು. ಅಲ್ಲಿಯ ರೈತರು ಹತ್ತಿ ಬೆಳೆಯನ್ನು...

13 ಪ್ರತಿಕ್ರಿಯೆಗಳು

 1. Samvartha 'Sahil'

  It was almost dark with a small amount of light peeping in from the other side of the bar while we were seated in a corner separated from the other side by a wall with a window. While my two friends smoked a cigarette to pause their intake of Brandy somehow the topic of discussion went to the documentary Nero’s Guests by Deepa Bhatia. One of the two had brought in the topic and the other one had not seen the documentary. So, I took the initiative to explain the story of Nero and his guests, which Sainath does in the film. I began to quote P. Sainath from the film:
  Roman historian Tacitus writes about “Nero and the burning of Rome”. Tacitus, though he hated Nero was honest enough to say that Nero in-fact had not set Rome on fire, but Nero was scared as hell, as people believed he did (set Rome on fire). So, Nero had to do something to distract the population of Rome. He decided to hold the biggest party ever held in the history of the Roman Empire. Nero offered his gardens for the spectacle. They had a problem with this party because his garden was a concave kind of place surrounded by higher spots and it was a bit dark. The problem was how to provide nightly illumination for the party to which anyone who was anyone in Rome was an invitee. The intelligentsia, the gossip columnists, certainly the political correspondents, anybody who mattered in Rome was at that party. And they had the problem of nightly illumination. How did they solve the problem of nightly illumination? They solved the problem, writes Tacitus, by bringing the wretched criminals and prisoners and burning them at stake around the garden.
  It might sound quite filmy but trust me, when I gave a pause for my friend to digest the fact, at this point of the re-narration of the story that Sainath tells, the light above our table lit up! It lit up because there were a few others came to the area of the bar where we were seated and the area was not occupied only by us now. The lamp lit. There was an artificial illumination right above our head. I remembered what Shiv Visvanathan once told us, during a guest lecture, in our class, “The moment you switch on the fan and light you have killed ten adivasis.”
  Not long before coming to the topic of the documentary Nero’s Guests we were discussing the issue of Uttar Kannada district in the state of Karnataka, which is said to be having the highest number of tribal population in Karnataka and which is the district which has the highest number of developmental projects important and major ones being the dams constructed to generate electricity!
  The memory of Shiv’s class, our discussion about Uttar Kannada, my visits to Tadadi (in Uttar Kannada district) where the government wanted to set up a thermal power plant all crossed my mind at once. My shadow was under my feat while I looked up at the hanging light over the table. The pause had to end. The story had to be completed. I continued, after a sigh. I continued to tell my friend what Sainath says after telling the story of Nero and the party. “Sainath says, we know that Nero was mad. The issue is not Nero. The issue is Nero’s guests. Who were the guests at that party? What sort of sensibility did it require to pop another fig into your mouth as one more human being went up in flames nearby to serve as ‘a nightly illumination?’”
  We sat silently for a while after I narrated the story of Nero, as narrated by Sainath. When I went back to my glass of a cool (thanda) drink I remembered Plachimada village in the Palakkad district of Kerala.
  There are many Neros. There are many garden parties. There are many going up in flames to create an artificial illumination in the garden party. There are many and many and many Nero’s guests. I too happen to be one. What sensibility did it require to let flow the cool (thanda) drink down the throat while sitting under the hanging light, soon after narrating the story of the inhumane guests of Nero?
  Guilty. Ashamed.
  http://acrazymindseye.wordpress.com/2012/02/13/being-a-guest-at-neros-party/

  ಪ್ರತಿಕ್ರಿಯೆ
  • laxminarasimha

   Really, all of us who are ‘beneficiaries’ of “development” are guilty and need be ashamed. But as somebody put it, what next?

   ಪ್ರತಿಕ್ರಿಯೆ
 2. RJ

  ಹತ್ತಾರು ಬಗೆಯಲ್ಲಿ ಪ್ರಶ್ನಿಸುವ,ಉತ್ತರ ಅಪೇಕ್ಷಿಸುವ ಲೇಖನ.
  “ಇಲ್ಲಿ ಆ ನೀರೋ ಬಗ್ಗೆ ನಾನು ಮಾತಾಡೊಲ್ಲ, ಆತ ಕ್ರೂರಿ ಹೌದು, ವಿಕೃತ ಹೌದು, ಆದರೆ ಅವನ ಔತಣಕೂಟಕ್ಕೆ ಬ೦ದಿದ್ದರಲ್ಲ ಆ ಬುದ್ಧಿವ೦ತ, ಕವಿ ಹೃದಯದ ಜನ? ನನ್ನ ಪ್ರಶ್ನೆ ಅವರಿಗೆ, ಅವರಲ್ಲಿ ಒಬ್ಬರಾದರೂ ಅದು ತಪ್ಪು ಎ೦ದು ಹೇಳಲಿಲ್ಲವಲ್ಲ, ತಮ್ಮ ಪಾಡಿಗೆ ತಾವು ದ್ರಾಕ್ಷಾರಸ ಗುಟುಕರಿಸುತ್ತಾ ಕುಳಿತರಲ್ಲ, ಅವರ ಮೌನ ಸ್ವೀಕಾರ ನನ್ನನ್ನು ಕಾಡುತ್ತದೆ’ ಅನ್ನುತ್ತಾರೆ ಸಾಯಿನಾಥ್. ಆ ಅಥಿತಿಗಳ ಮುಖದಲ್ಲಿ ನಮಗೆ ನಮ್ಮ ಮುಖಗಳು ಕಾಣತೊಡಗುತ್ತದೆ.
  ನಾವೆಲ್ಲ ಆ ನೀರೋನ ಅತಿಥಿಗಳೇ ಅಲ್ಲವೆ?” 🙁

  ಪ್ರತಿಕ್ರಿಯೆ
 3. D.RAVI VARMA

  ’ಇಲ್ಲಿ ಆ ನೀರೋ ಬಗ್ಗೆ ನಾನು ಮಾತಾಡೊಲ್ಲ, ಆತ ಕ್ರೂರಿ ಹೌದು, ವಿಕೃತ ಹೌದು, ಆದರೆ ಅವನ ಔತಣಕೂಟಕ್ಕೆ ಬ೦ದಿದ್ದರಲ್ಲ ಆ ಬುದ್ಧಿವ೦ತ, ಕವಿ ಹೃದಯದ ಜನ? ನನ್ನ ಪ್ರಶ್ನೆ ಅವರಿಗೆ, ಅವರಲ್ಲಿ ಒಬ್ಬರಾದರೂ ಅದು ತಪ್ಪು ಎ೦ದು ಹೇಳಲಿಲ್ಲವಲ್ಲ, ತಮ್ಮ ಪಾಡಿಗೆ ತಾವು ದ್ರಾಕ್ಷಾರಸ ಗುಟುಕರಿಸುತ್ತಾ ಕುಳಿತರಲ್ಲ, ಅವರ ಮೌನ ಸ್ವೀಕಾರ ನನ್ನನ್ನು ಕಾಡುತ್ತದೆ’ ಅನ್ನುತ್ತಾರೆ ಸಾಯಿನಾಥ್. ಆ ಅಥಿತಿಗಳ ಮುಖದಲ್ಲಿ ನಮಗೆ ನಮ್ಮ ಮುಖಗಳು ಕಾಣತೊಡಗುತ್ತದೆ.
  ನಾವೆಲ್ಲ ಆ ನೀರೋನ ಅತಿಥಿಗಳೇ ಅಲ್ಲವೆ?
  aa sayinath,avara chintane haagu badukina baddategondu salaam.ಪಕ್ಕದ ಮನೆಗೆ ಬೆಂಕಿಹಚ್ಚಿ chalikaasikolluva ವಿಕೃತ ಬದುಕು ನಮ್ಮದು . ನಾವೆಲ್ಲಾ ನಿರೋ,ನಅತಿಥಿ ಗಳು ಅಲ್ಲವೇ ಅನ್ನುವ ಪ್ರಸ್ನೆ ಯಾಕೆ, ಇಲ್ಲಿ ಆತ್ಮವಿಮರ್ಶೆ ಇದ್ದಾಗ ಮಾತ್ರ ಆ ಪ್ರಸ್ನೆ ಅರ್ಥಪಡೆಯುತ್ತದೆ. ಇಲ್ಲಿ ಅದಕ್ಕೆಸ್ತಾನವೇ ಇಲ್ಲ. ಈ ಕಾರ್ಯಕ್ರಮ ಮಿಸ್ ಆದದ್ದಕ್ಕೆ ಅದೆಸ್ತು ಕೊರಗುತ್ತಿದ್ದೇನೋ ನನಗೆ ಗೊತ್ತು. ಆದರೆ ಅವರ ಚಿಂತನೆ ಕನಿಸ್ತ ಅವಧಿಯ ಓದುಗರಿಗೆ ತಲುಪುವಂತಾಗಲಿ ಅವರ ಮಾತಿನ,ಅಂತರಾಳದ ನೋವಿನ ದ್ವನಿ ಎಲ್ಲರಿಗು ಕೆಳಿಸುವಂತಾಗಲಿ ಅವಧಿ ಅವರ ಆ ದ್ವನಿಯನ್ನು ಪ್ರಕಟಿಸಲಿ
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 4. sunil rao

  said wonderfully….
  the strategy of development has got vivid description…human kind has took the same in various gaps of communications…
  really sainath deserves the best…have to acknowledge him for his vast observations in nook and corner of the problems of the rural society…
  nice writeup

  ಪ್ರತಿಕ್ರಿಯೆ
 5. malathi S

  Wonderfully voiced Sandhya!! though I have read a lot about Farmers suicide the video ‘Nero’s Guest’ shook me to the core of my being. i am not ashamed to say i cried..now each morsel of food i consume reminds me of their plight.The video i agree has a shock factor..must say well done Deepa Bhatia/P. Sainath…but what next is the question..how do we solve this agrarian crisis? This year again the rains are delayed…
  malathi S

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: