ಗುಜರಿ ಆಯುವ ಹುಡುಗ – ಬಿ ಎ೦ ಬಶೀರ್ ಕವಿತೆ

ಗುಜರಿ ಆಯುವ ಹುಡುಗ!

ಬಿ ಎ೦ ಬಶೀರ್

ಗುಜರಿ ಅ೦ಗಡಿ ಕಾಯಿ ವ್ಯಾಪಾರಕ್ಕೆ ಸಂತೆಗೆ ಬಂದ ಬ್ಯಾರಿಯಂತೆ ಅಪ್ಪ ಹುಟ್ಟಿದ   ಗಿಡದಲ್ಲಿ ತೂಗುವ ಮಾವು ಗೇರು, ಆಗಷ್ಟೇ ಕಣ್ಣು ಬಿಟ್ಟ ಗೊನೆ ಹೂವು ಎಲ್ಲವನ್ನು ಸರಕಿನಂತೆ ನೋಡಿದ ವ್ಯಾಪಾರವೆನ್ನುವುದು ಅವನಿಗೆ ಜೂಜಿನಂತೆ ಅಂಟಿತು ಬದುಕನ್ನೇ ಒತ್ತೆ ಇಟ್ಟು ಆಡಿದ   ಹಸಿವನ್ನು ಹೂಡಿ ದಿನಸಿ ಅಂಗಡಿ ತೆರೆದ ಗೆದ್ದ ಗೆಲುವನ್ನು ಜವಳಿ ಅಂಗಡಿಗೆ ಮಾರಿ ಸೋತ… ಸಾಲಕ್ಕೆ ಹಳೆಯ ಹೆಂಚನ್ನೇ ಮಾರಿದ ಸೂರುವ ಸೂರನ್ನು ದಿಟ್ಟಿಸುತ್ತಾ ಹೆಂಚಿನ ವ್ಯಾಪಾರಕ್ಕಿಳಿದ ಗಂಜಿಗೆ ನೆಂಜಿಕೊಳ್ಳುವುದಕ್ಕೆಂದು ತಂದ ಸಿಗಡಿಯ ರುಚಿ ಹಿಡಿದು ಕಡಲ ತಡಿಗೆ ಹೋದ ಮೀನಿನ ವ್ಯಾಪಾರಕ್ಕಿಳಿದ   ದುಂದುಗಾರ ಅಪ್ಪ ಸವಕಲು ಮಾತುಗಳನ್ನೇ ನಾಣ್ಯಗಳಂತೆ ಚಲಾವಣೆಗೆ ಬಿಟ್ಟ ಅಮ್ಮನ ಮೌನದ ತಿಜೋರಿಯನ್ನೇ ದೋಚಿದ   ಜೂಜಿನ ನಿಯಮವ ಮರೆತು ನಂಬಬಾರದವರನ್ನೆಲ್ಲ ನಂಬಿದ ಸೋಲಿನ ರುಚಿಯನ್ನು ಹಿಡಿದ ಸೋಲಿಗಾಗಿಯೇ ಆಡ ತೊಡಗಿದ…   ಕೊನೆಗೆ ಎಲ್ಲ ಬಿಟ್ಟು ಗುಜರಿ ಅಂಗಡಿ ಇಟ್ಟ ಹರಿದ ಚಪ್ಪಲಿ, ತುಕ್ಕು ಹಿಡಿದ ಡಬ್ಬ ಮುರಿದ ಬಕೀಟುಗಳ ರಾಶಿಯ ನಡುವೆ ಆ ರಾಮ ಕುರ್ಚಿಗೆ ಒರಗಿದ ಅವನ ಮೌನದ ತಿಜೋರಿ ತುಂಬಾ ಸಾಲ ಪತ್ರಗಳು ಅಂಗಡಿಯ ಬಾಗಿಲಲ್ಲಿ ಕಾಲ ವಸೂಲಿಗೆಂದು ಕುಕ್ಕರಗಾಲಿನಲ್ಲಿ ಕೂತಿದ್ದಾನೆ   ನಾನು ಅವನ ಮಗ ಅವನ ಮೌನದ ಮನೆಯ ಹಿತ್ತಲಲ್ಲಿ ನಿಂತ ಗುಜರಿ ಆಯುವ ಹುಡುಗ    ]]>

‍ಲೇಖಕರು G

July 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಲಾಕೃತಿಗೆ ಜೀವವಾಗಿ ಬಂದವಳು…

ಕಲಾಕೃತಿಗೆ ಜೀವವಾಗಿ ಬಂದವಳು…

ರತ್ನರಾಯಮಲ್ಲ ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನುನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು  ಕಡು ಬಿಸಿಲಿನ...

ನೀನೆಂದರೆ ಭಯ ಅಲ್ಲ…

ನೀನೆಂದರೆ ಭಯ ಅಲ್ಲ…

ರೇಷ್ಮಾ ಗುಳೇದಗುಡ್ಡಾಕರ್  ಪ್ರಖರ ಬೆಳಕು ಕಾಣಿಸದುನನ್ನ ರೂಪವ ಅಂತರಂಗದ ಪ್ರಲಾಪವ ಗಾಢ ಕತ್ತಲೆ ಕಾಣಿಸುವದು ನನ್ನೂಳಗಿನ ನನ್ನು ಅಲ್ಲಿನ...

ಮುಸ್ಸಂಜೆ

ಮುಸ್ಸಂಜೆ

ಜಿತೇಂದ್ರ ಬೇದೂರು ೧ ಮುಸ್ಸಂಜೆ ಯೌವ್ವನದ ಕ್ಷಣದಲ್ಲಿ ಎಷ್ಟೊಂದು ಉರಿದಿದ್ದಸೂರ್ಯ, ಈಗೇಕೋ ತಣ್ಣಗಾಗಿ ಹೋದ.ಯಾರು ಸರಿಸಿದರೋ ಏನೋಪಡುವಣ ಅಂಚ...

3 ಪ್ರತಿಕ್ರಿಯೆಗಳು

 1. Gubbachchi Sathish

  ಅಂಗಡಿಯ ಬಾಗಿಲಲ್ಲಿ
  ಕಾಲ
  ವಸೂಲಿಗೆಂದು ಕುಕ್ಕರಗಾಲಿನಲ್ಲಿ ಕೂತಿದ್ದಾನೆ
  nice lines sir.

  ಪ್ರತಿಕ್ರಿಯೆ
 2. shiva

  ಅಮ್ಮನ ಮೌನದ ತಿಜೋರಿಯನ್ನೇ
  ದೋಚಿದ
  ಸೊಗಸಾದ ಪ್ರತಿಮೆ
  ಅದ್ವಿತೀಯ ಸಂವಹನ
  ಶಿವ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: