‘ಅವಧಿ’ ನಡೆಸಿದ ಫೋಟೋ ಕ್ವಿಜ್ ಗಳಲ್ಲಿ ಅತಿ ಹೆಚ್ಚು ದಿನ ನಡೆದ-ಅತಿ ಹೆಚ್ಚು ಜನರನ್ನು ಗೊಂದಲಕ್ಕೆ ಕೆಡವಿದ ಕ್ವಿಜ್ ಇದು. ಊಹೆ ಊಹೆ..ಬರೀ ಊಹೆ.
ಕ್ವಿಜ್ ನಲ್ಲಿ ಬಂದ ಹಲವು ಹೆಸರುಗಳನ್ನು ಒಟ್ಟು ಮಾಡಿ ಇದರಲ್ಲೊಂದು ಸರಿ ಹೆಸರಿದೆ ಹುಡುಕಿ ಎಂದಾಗ ಸತೀಶ್ ಶಿಲೆ ಹಾಗಿದ್ದರೆ ಯಾರೋ ಒಬ್ಬರಿಗೆ ಬಹುಮಾನ ಬಂದುಬಿಟ್ಟಿದೆ. ಇನ್ನು ನಮಗೇಕೆ ಹೆಸರು ಹುಡುಕುವ ಉಸಾಬರಿ ಎನ್ನುವಂತೆ ಚಟಾಕಿ ಹಾರಿಸಿದರು.
ನಾವು ಆಗ ಕ್ವಿಜ್ ನೊಳಗೊಂದು ಕ್ವಿಜ್ ಹಮ್ಮಿಕೊಳ್ಳಬೇಕಾಯಿತು. ಹಾಗಾದರೆ ಆ ಬಹುಮಾನ ಪಡೆದವರು ಯಾರು ಪತ್ತೆ ಹಚ್ಚಿ ಎನ್ನುವುದೇ ಈ ಮಿನಿ ಕ್ವಿಜ್.
ಈಗ ಇಬ್ಬರು ವಿಜೇತರು ನಿಮ್ಮ ಮುಂದಿದ್ದಾರೆ.
ಕ್ವಿಜ್ ಗಾಗಿ ಸುರೇಶ್ ಕೋಟ ಮತ್ತು ಮಿನಿ ಕ್ವಿಜ್ ಗಾಗಿ ಸಂದೀಪ್ ಕಾಮತ್
ಸುರೇಶ ಕೋಟ ಅವರಿಗೆ ಡಬ್ಬಲ್ ಧಮಾಕ ಪ್ರೈಜ್
ಇಬ್ಬರೂ ತಮ್ಮ ವಿಳಾಸ ಕಳಿಸಿದರೆ ( [email protected]) ಮೇಫ್ಲವರ್ ಮೀಡಿಯಾ ಹೌಸ್ ವತಿಯಿಂದ ಬಹುಮಾನ ಅವರನ್ನು ತಲುಪುತ್ತದೆ.
ಈ ಕ್ವಿಜ್ ಗೆ ಬಳಸಿಕೊಂಡಿರುವ ಫೋಟೋ ಕೃಷ್ಣಾನಂದ ಕಾಮತ್ ಅವರದ್ದು. ಅದಕ್ಕಾಗಿ kamat.com ಗೆ ವಂದನೆಗಳು
ಇನ್ನು ಈ ಕ್ವಿಜ್ ನ ಬಗ್ಗೆ ಸಂದೀಪ್ ಕಾಮತ್ ಪತ್ರವೇ ಎಲ್ಲಾ ಮಾತನಾಡಲಿರುವುದರಿಂದ ಅದನ್ನು ಯಥಾವತ್ ಇಲ್ಲಿ ಕೊಡುತ್ತಿದ್ದೇವೆ-
ಈ ಫೋಟೋ ಎಸ್ ದಿವಾಕರ್ ಅವರದ್ದೇ .
ಈ ಫೋಟೋ ವನ್ನು ಕಾಮತ್ ರ ಈ ಲಿಂಕಿನಲ್ಲಿ ನೋಡಬಹುದು.
“http://www.kamat.com/kalranga/kar/5526.jpg”
ಈ ಪ್ರಶ್ನೆಗೆ ಸರಿಯಾದ ಉತ್ತರ ಮೊದಲು ಕೊಟ್ಟವರು ಸುರೇಶ್ ಕೋಟ ಹಾಗೂ ಬಾಲಕೃಷ್ಣ (18 ನೇ ತಾರೀಕು).
ಅದರೆ ಸ್ವಲ್ಪ ವಿವರವಾದ ಉತ್ತರ ನೀಡಿದವರು ರವೀಂದ್ರ ಮಾವಖಂಡ.ನೀವು ಪ್ರಶ್ನೆಗೆ ವಿವರವಾದ ಉತ್ತರ ಕೇಳಿರದೇ ಇದ್ದದ್ದರಿಂದ ಬಹುಮಾನ
ಸುರೇಶ್ ಹಾಗೂ ಬಾಲಕೃಷ್ಣ ಅವರಿಗೆ ಸಿಕ್ಕಿದೆ ಅಂತ ನನ್ನ ಅನಿಸಿಕೆ.
( ಈ ಪೈಕಿ ಸುರೇಶ ಕೋಟ ಅವರು ಮೊದಲು ಉತ್ತರ ಕಳಿಸಿರುವುದರಿಂದ ಅವರಿಗೆ ಬಹುಮಾನ- ಅವಧಿ)
(ದಿವಾಕರ್ ಅವರ ಈಗಿನ ಚಿತ್ರ)
ನಾನು ಫೋಟೋದ ಮೂಲ ಆಕರವನ್ನು ಆಧಾರ ಸಮೇತ ಪ್ರಸ್ತುತ ಪಡಿಸಿರುವುದರಿಂದ ನನಗೂ ಒಂದು ಬಹುಮಾನ ಕೊಡ್ತೀರಾ ಅಂತ ನನ್ನ ಆಶಯ.
ಈ ಫೋಟೋ ಕಾಮತರು ತೆಗೆದಿರೋದು/ಕಾಮತ್.ಕಾಮ್ ನಲ್ಲಿ ಹಾಕಿರೋದು ಹಾಗೂ ನಾನೂ ಕಾಮತ್ ಆಗಿರೋದು ನನಗೆ ಬಹುಮಾನ ಕೊಡಿಸಲು ಸಹಾಯ ಮಾಡೀತೇ?
ಸರೋಜಿನಿ ಪಡಸಲಗಿ ಸರಣಿ 6: ಆ ಭಟ್ರ ಮಗನೇ ‘ಯೋಗರಾಜ್ ಭಟ್ರು!’
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ...
idu tumba trasinaddu. teera isht kashtaddella kelbardappa.
divakararannu, aa vayasinalli nodidavru mattu aa photovannu ee modale nodidavru bittare bereyavru gurutisodu tumba kashta.
adare, bhari maja kotta quiz idu..
To:ಸು.ಕೋಟ.
ಕಲಾವಿದರೇ…ಮಜಾ ಮಾಡಿ!
ತಕ್ಕೊಳ್ಳಿ,ನಂದೊಂದು cheers 🙂
ಪಾಪ ಎಸ್.ದಿವಾಕರ್ ಅವರು ಭಾಗವಹಿಸಿದ್ರೂ ಸೋಲ್ತಾ ಇದ್ರೇನೋ 😉
ಅಭಿನಂದನೆಗಳು ಸುರೇಶ್ .
ಧನ್ಯವಾದಗಳು ’ಅವಧಿ’.
Full photo hakidroo uthra kododu kashta itthu..!
ಧನ್ಯವಾದಗಳು, ಅವಧಿ
ಧನ್ಯವಾದ, ಸಂದೀಪ್. ಅದು ದಿವಾಕರ್ ಅವರೇ ಅಂತ ನಂಗೆ ೧೦೦% ಖಾತ್ರಿ ಇತ್ತು. ಆದರೂ ಕುತೂಹಲ ಇನ್ನೂ ಸ್ವಲ್ಪ ಸಮಯ ಉಳಿಯಲಿ ಅಂತ ವಿವರಗಳನ್ನು ಕೊಡೋಕೆ ಹೋಗ್ಲಿಲ್ಲ. ನೀವು ಆ ವಿವರಗಳನ್ನು ಕೊಡುವ ಮೂಲಕ ಕ್ವಿಝ್ ಗೆ ಉಪಸಂಹಾರ ನೀಡಿದ್ರಿ.:)
ಡಿಯರ್ ಜೋಶಿ, ಎಷ್ಟೊಂದು ದಿನ ಆಯ್ತು ನೀವು ಸಿಗದೆ, ಸಂಜೆ ಸಿಕ್ತೀರಾ? ಎಲ್ಲಾದ್ರೂ “ಕೂತು ಮಾತಾಡೋಣ”? 😀