ಗುಲಾಬಿ ಕೆನ್ನೆ ರಂಗು ನೆನಪಿಸುವ ರಾಣಿ – ವೀಣಾ ಭಟ್ ಬರೀತಾರೆ

ನಮ್ಮ ಮನೆಯ ರಸ್ತೆಯಲ್ಲೊಂದು ಹಳೇ ಮನೆಯಿದೆ .ದೊಡ್ಡ ಕಾಂಪೌಂಡ್ ,ಅದರೊಳಗೆ ಎರಡು ದೊಡ್ಡ ಮರಗಳಿದ್ದವು . ವಿಶಾಲವಾಗಿ ಕೊಂಬೆಗಳು ಹರಡಿಕೊಂಡು ರಸ್ತೆಯವರೆಗೆ ಚಾಚಿದ್ದವು .ರಸ್ತೆ ಬದಿಯಲ್ಲಿರುವ ಮರಗಳೂ ಸೇರಿ ಅಲ್ಲೊಂದು ಪುಟ್ಟ ಕಾಡಿನಂತಹ ಪರಿಸರವಿತ್ತು .ನಾನು ದಿನಾ ಅಲ್ಲೇ ನಡೆದುಕೊಂಡು ಹೋಗುತ್ತಿದ್ದೆ .ಆದರೂ ಈ ಮರಗಳನ್ನು, ಮರಗಳಲ್ಲಾಗುವ ಬದಲಾವಣೆಗಳನ್ನು ಗಮನಿಸಿಯೇ ಇರಲಿಲ್ಲ. ಹೀಗೆ…ಒಂದು ದಿನ ಏನೋ ಗುನುಗುನಿಸುತ್ತ .. ಅದೇ ರಸ್ತೆಯಲ್ಲಿ ನಡೆಯುತ್ತಿದ್ದೆ. ಒಂದು ಕ್ಷಣ ನೋಡುತ್ತಿದ್ದ ನನ್ನ ದೃಷ್ಟಿ ಅಲ್ಲೇ ನಿಂತಿತು .ವಾವ್ ಎಂಬ ಉದ್ಗಾರ ಹೊರಬಿತ್ತು .ಮರಗಳ ತುಂಬಾ ಗುಲಾಬಿ ಬಣ್ಣದ ಪುಟ್ಟ ಪುಟ್ಟ ಹೂಗಳು..!ಗುಲಾಬಿ ಕೆನ್ನೆ ರಂಗು ನೆನಪಿಸುವ ಬಣ್ಣ… ಎಲೆಗಳೂ ಇವೆ,ಹೂಗಳೂ ಇವೆ.ಕೊಂಬೆಯೇ ಒಂದು ಹೂಮಾಲೆಯಂತೆ…ನಾವು ಹೂಮಾಲೆ ಕಟ್ಟುತ್ತೇವಲ್ಲ..ಅದೇ ರೀತಿ… ಮರದ ಮೇಲೆಲ್ಲಾ ಹೂಮಾಲೆ ….   ಕಂಪೌಂಡ್ ಹೊರಗಡೆಯೆಲ್ಲಾ ಉದುರಿದ ಹೂಗಳು.ಹೂವಿನ ಹಾಸಿಗೆ.ಯಾಕೋ…ಮೆಟ್ಟಲು ಮನಸಾಗಲಿಲ್ಲ.   ಹೂಗಳ ಬಗ್ಗೆ ಏನೋ ವಿಶೇಷವಾದ ಆಸಕ್ತಿ ಬೆಳೆಯತೊಡಗಿತು .ದಿನಾ ಅಲ್ಲಿ ಹೋಗುವಾಗ ವಿಶೇಷವಾದ  ಆಸಕ್ತಿಯಿಂದ ನೋಡತೊಡಗಿದೆ .ಇನ್ನೂ ಹೆಚ್ಚಾಗಿ ಹೂಗಳು ಅರಳಿವೆಯೇ…ಹೂಗಳ ಹಾಸಿಗೆ ಇದೆಯೇ .. ಅಲ್ಲ ರಸ್ತೆ ಗುಡಿಸುವವಳು ಗುಡಿಸಿಬಿಟ್ಟಿದ್ದಾಳೆಯೇ ಎಂದು ಗಮನಿಸತೊಡಗಿದೆ . ಈ ಹೂವಿನ ಬಗ್ಗೆ ತಿಳಿಯಲೇಬೇಕೆಂಬ ಆಸೆ ಪ್ರಾರಂಭವಾಯಿತು.ಅಂತರ್ಜಾಲದಿಂದ ಈಕೆಯ ಹೆಸರು ,ಬೇರೆ ವಿವರಗಳನ್ನು ಸಂಗ್ರಹಿಸಿದೆ .ಆದರೆ ಈಕೆ ಭಾರತೀಯಳಲ್ಲ.ದಕ್ಷಿಣ ಅಮೆರಿಕಾದಿಂದ ಬಂದ ಚೆಲುವೆ .ಅಮೆಜಾನ್ ನದೀ ತೀರ ಈಕೆಯ ನೇಟಿವ್ ಅಂತ ತಿಳಿಯಿತು . ಸುಮಾರು ೧೮ ಮೀಟರು ಎತ್ತರ ,ಹರಡಿಕೊಂಡಿರುವ ಕೊಂಬೆಗಳು,ಕೊಂಬೆಗಳ ಸುತ್ತಲೂ ಹೂಗಳು ಅರಳುವುದು ಈಕೆಯ  ವೈಶಿಷ್ಟ್ಯ .ಗುಲ್ ಮೊಹರ್,ಅಂದರೆ ನಮ್ಮ ಮೇ ಫ್ಲವರ್ ,ಅದೇ ಕುಟುಂಬ .ಸಸ್ಯ ಶಾಸ್ತ್ರದಲ್ಲಿ ಪಿಂಕ್ ಶವರ್ ಟ್ರೀ ಎಂಬ ಹೆಸರಿದೆ. ವಾವ್ …ಗುಲಾಬಿ ರಂಗಿನ ಮಳೆ ಸುರಿಸುವಾಕೆ..ಹೆಸರೇ ಎಷ್ಟು ಚೆನ್ನಾಗಿದೆ ?   ಅಂದ ಹಾಗೆ,ಮನೆ ಕಟ್ಟಲು ಸಹಕಾರಿ ,ತನ್ನ ಸೌಂದರ್ಯದಿಂದಲೇ ಗಾರ್ಡನ್ ಗಳಲ್ಲಿ ,ರಸ್ತೆ ಬದಿಗಳಲ್ಲಿ ಗಮನ  ಸೆಳೆಯುತ್ತಾಳೆ .ವಸಂತ ರಾಣಿ ಈಕೆ .ವಸಂತ ಋತುವಿಗಾಗೇ ಕಾಯುತ್ತಿರುತ್ತಾಳೆ.ವಸಂತ ಬಂದಂತೆ ಏನೋ .. ಸಡಗರ ..ಗುಲಾಬಿ ಬಣ್ಣ ಚೆಲ್ಲಿಬಿಡುತ್ತಾಳೆ . ಏಪ್ರಿಲ್ ,ಮೇ ತಿಂಗಳಲ್ಲಿ ಚೆಲ್ಲಿದ ಬಣ್ಣ ಜೂನ್ ಬಂದಂತೆ ಮಾಯವಾಗಿಬಿಡುತ್ತದೆ .ಮತ್ತೆ ಹಸಿರು ಸುಂದರಿ ವರ್ಷವಿಡೀ ಮತ್ತೊಂದು ವಸಂತನ ಆಗಮನಕ್ಕೆ ಕಾಯುತ್ತಾಳೆ.   ಮರದ ಬಗ್ಗೆ ಎಲ್ಲಾ ವಿಷಯಗಳನ್ನು ತಿಳಿದುಕೊಂಡೆ.ದಿನಾ ಅಲ್ಲಿ ಹೋಗುವಾಗ ಹೂಗಳ ಸೌಂದರ್ಯವನ್ನು ಕಣ್ಣು ತುಂಬಿಸಿಕೊಳ್ಳುತ್ತಿದ್ದೆ .ಒಮ್ಮೊಮ್ಮೆ ಬಿದ್ದ ಹೂಗಳನ್ನು ಆರಿಸುತಿದ್ದೆ… ಒಂದಿನ…. ..ಅದೇ ದಾರಿ ಹಿಡಿದು ನಡೆಯುತ್ತಿದ್ದೆ. ಏನೋ ಬದಲಾವಣೆ ..ಎಂದಿನಂತಿಲ್ಲ,ಹೆಚ್ಚು ಬೆಳಕಿದೆಯಲ್ಲ .. ಇವತ್ತು ಬಿಸಿಲು ಯಾಕೋ ಜೋರಾಗಿದೆ ಅಂದುಕೊಂಡೆ.ಒಂದು ಹೆಜ್ಜೆ ಮುಂದಿಟ್ಟೆ…ಮಾತು ಬಾರದಾಯಿತು… ಕಣ್ಣು ಮಂಜಾಯಿತು ..ಒಂದು ಮರವಿಲ್ಲ…!! ರಸ್ತೆ ಅಗೆಯಲು ಪ್ರಾರಂಭವಾಗಿತ್ತು .ಮನೆಗೆ ಹಿಂತಿರುಗಿ ಬಂದೆ.ಮನಸ್ಸು ಮೂಕವಾಗಿ ರೋದಿಸುತ್ತಿತ್ತು .ಆ ಮರದ ನೆನಪಲ್ಲೇ ದಿನವಿಡೀ ಕಳೆದೆ .ಯಾರಿಗೂ ಹೇಳಲಿಲ್ಲ. ‘ಹುಚ್ಚಿ ..,ಒಂದು ಮರಕ್ಕಾಗಿ ಇಷ್ಟು ರೋದಿಸುತ್ತಾರಾ..? ‘ ಅಂತಾರೆ ಎಂದು ಸುಮ್ಮನಾದೆ . ಇನ್ನೊಂದು ಮರ ಏನೂ ಆಗದಂತೆ ನಗುತಿತ್ತು.ಋತು ಬದಲಾಯಿತು .ಹೂಗಳೆಲ್ಲ ಉದುರಿದವು. ಇನ್ನೊಂದು ಮರ ಎಲ್ಲಿ ಕಡಿದು ಬಿಡುತ್ತಾರೋ ಎಂಬ ಭಯ ಕಾಡುತಿತ್ತು .ಕನಸಲ್ಲೆಲ್ಲ ಅದೇ ಮರ. ರಾತ್ರಿ ಯಾರೋ ಬಂದು ಮರ ಕಡಿದಂತೆ…,ನಾನು ಮರವನ್ನು ಅಪ್ಪಿಕೊಂಡು ನಿಂತಂತೆ … ಕೊಡಲಿ ನನ್ನ ಬೆನ್ನಿಗೇ ಬಿದ್ದಂತೆ ..ಬೆಚ್ಚಿ ಬೀಳುತ್ತಿದ್ದೆ..   ತಲೆ ತುಂಬಾ ಏನೇನೋ ಯೋಚನೆಗಳು …ಸರಿಯಾಗಿ ವಸಂತ ಋತು ಬಂದಾಗ ಹೂ ಬಿಡಬೇಕು , ಚಿಗುರಬೇಕು ಅಂತೆಲ್ಲ ಹೇಗೆ ಗೊತ್ತಾಗುತ್ತೆ ಇವುಗಳಿಗೆ. ಯಾರು ಮೆಸೇಜ್ ಕಳಿಸ್ತಾರೆ….? ಅಷ್ಟೊಂದು ಹೂ ಮೈತುಂಬಾ ತುಂಬಿಸಿಕೊಂಡು ಮೆರೆಯೋದನ್ನ ಯಾರು ನೋಡ್ತಾರೆ …? ಯಾರು ಖುಷಿ ಪಡ್ತಾರೆ..? ಆದ್ರೆ ಇದ್ಯಾವುದರ ಚಿಂತೆ ಇವುಗಳಿಗಿಲ್ಲ. ಆದರೂ ನಾವು ಕಟುಕರ ಹಾಗೆ ಕಡೀತೀವಲ್ಲ..ಹೇಗೆ ಮತ್ತೆ ಚಿಗುರಿಕೊಂಡು ಬೆಳೀತಾವೆ .. ಅಲ್ಲೊಂದು ಸ್ಫೂರ್ತಿಯ ಸೆಲೆ ಇದೆ ..ಅನ್ಸಲ್ವಾ..? ಹೇಗೆ ವರ್ಷವಿಡೀ …ವಸಂತ ಋತುವಿಗೆ ಕಾಯ್ತಾ ಇರ್ತಾವೆ . ..? ನನಗೆ ಒಂದೊಂದು ಸಲ ಏನು ಅನ್ನಿಸುತ್ತೆ ಅಂದ್ರೆ ಈ ಮರಗಳು ಋತುಗಳನ್ನ ಪ್ರೀತ್ಸೋವಷ್ಟು ಯಾರು ಯಾರನ್ನೂ ಪ್ರೀತ್ಸೋಕಾಗಲ್ಲ …. ಮತ್ತೆ ಈಕೆ ಕಾಯುತ್ತಿದ್ದಾಳೆ …ಕೆನ್ನೆ ರಂಗು ನೆನಪಿಸುತ್ತಾಳೆ… ಈಗ ನಾನೂ ಅವಳ ಜೊತೆ ಕಾಯಲು ಪ್ರಾರಂಭಿಸಿದ್ದೇನೆ .. .. ವಸಂತ ಯಾವಾಗ ಬರುವನೆಂದು……  ]]>

‍ಲೇಖಕರು G

May 7, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

3 ಪ್ರತಿಕ್ರಿಯೆಗಳು

 1. D.RAVI VARMA

  ನನಗೆ ಒಂದೊಂದು ಸಲ ಏನು ಅನ್ನಿಸುತ್ತೆ ಅಂದ್ರೆ ಈ ಮರಗಳು ಋತುಗಳನ್ನ
  ಪ್ರೀತ್ಸೋವಷ್ಟು ಯಾರು ಯಾರನ್ನೂ ಪ್ರೀತ್ಸೋಕಾಗಲ್ಲ ….
  ಮತ್ತೆ ಈಕೆ ಕಾಯುತ್ತಿದ್ದಾಳೆ …ಕೆನ್ನೆ ರಂಗು ನೆನಪಿಸುತ್ತಾಳೆ… ಈಗ ನಾನೂ ಅವಳ ಜೊತೆ ಕಾಯಲು ಪ್ರಾರಂಭಿಸಿದ್ದೇನೆ .. .. ವಸಂತ ಯಾವಾಗ ಬರುವನೆಂದು……
  wordsworth ಅವರ ಒಂದು maatu nenapu barutte, nature is greter than books. books are soulless,let us go the lap of nature and there we can enjoy ನಿಮ್ಮ ಗುಲಾಬಿ ಕೆನ್ನೆ ರಂಗು nenapisuva raani nanage nammurina gulmohar maravannu nenapisidalu
  ravi varma hosapete

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: