ಗುಲಾಬಿ ಟಾಕೀಸ್ ನ ಗುಲಾಬಿ ಒಂದು ವೇಳೆ ಶ್ರೀಮಂತೆ ಆಗಿದ್ರೆ …?

-ಸಂದೀಪ್ ಕಾಮತ್
ಕಡಲ ತೀರ
ಬಡವನ ಗುಡಿಸಲಲಿ..
ಒಬ್ಬ ಕನ್ನಡದ ದೈತ್ಯ ಬರಹಗಾರರರು! ಅವರ ಬರಹಗಳನ್ನು ನಾನು ಬಹಳಷ್ಟು ಮೆಚ್ಚಿ ಓದ್ತಾ ಇದ್ದೆ.ಲೇಖಕರು ಹಿಂದೆ ಪಟ್ಟಿದ್ದ ಪಾಡು,ಬಡತನದಲ್ಲಿ ಬೆಂದು ಮೇಲೆ ಬಂದ ಬಗೆ ಇದೆಲ್ಲಾ ತುಂಬ ಹೃದಯಸ್ಪರ್ಶಿ,ಆಪ್ಯಾಯಮಾನವಾಗಿತ್ತು ಆಗ ನನಗೆ.ಬಹಳಷ್ಟು ಸಲ ಪ್ರೇರಣಾ ಶಕ್ತಿಯೂ ಆಗಿತ್ತು.
ಆದ್ರೆ ಈಗೀಗ ಹಿಡಿಸ್ತಾ ಇಲ್ಲ!ಕಾರಣ ಗೊತ್ತಿಲ್ಲ.

ನಾವು ಬಹುಷಃ ಬಡತನವನ್ನು ಇಷ್ಟಪಡದಿದ್ದರೂ ಬಡತನದ ಬಗ್ಗೆ ಕಥೆ,ಕವನಗಳನ್ನ ತುಂಬಾ ಇಷ್ಟ ಪಡ್ತೀವೇನೋ ಅನ್ಸುತ್ತೆ.ಒಬ್ಬ ಲೇಖಕ ತಾನು ಕೊಂಡ ದುಬಾರಿ ಕಾರಿನ ಬಗ್ಗೆ ಏನಾದ್ರೂ ಬರೆದ್ರೆ ನಮಗೆ ಬಹುಷಃ ಹಿಡಿಸದೆ ಹೋದೀತೇನೋ.ಆದ್ರೆ ಅದೇ ಲೇಖಕ ತಾನು ಹೊಟ್ಟೆಗಿಲ್ಲದೆ,ಕೆಲಸ ಇಲ್ಲದೆ, ಪಟ್ಟ ಪಾಡೇನಾದ್ರೂ ಬರೆದ್ರೆ ತುಂಬಾ ಇಷ್ಟ ಪಟ್ಟು ಓದ್ತೀವಿ.
ನಾವು ಬಡವರಾಗಿರಲು ಖಂಡಿತ ಇಷ್ಟಪಡದಿದ್ದರೂ ’ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ’ ಕವಿತೆ ಇಷ್ಟ ಪಡ್ತೀವಿ( ಕವಿತೆಯ ಆಶಯ ಅದಲ್ಲ ಅಂತ ಬಯ್ಯಬೇಡಿ ದಯವಿಟ್ಟು!)
ಲೇಖಕ ಊಟಕ್ಕೆ ಕಾಸಿಲ್ಲದೆ ಇದ್ದಾಗ ಕಮ್ಮಿ ಖರ್ಚಿಗೆ ಜಾಸ್ತಿ ತಿನ್ನೋಕೆ ಸಿಗುತ್ತೆ ಅನ್ನೋ ಕಾರಣಕ್ಕೆ ಶಿವಾಜಿನಗರಕ್ಕೆ ಹೋಗಿ ದನದ ಮಾಂಸ ತಿಂದ ಘಟನೆಯನ್ನು ಬರೆದಾಗ ಓದೋ ಖುಷಿ(ಖುಷಿ ಅಂದ್ರೆ ಬಹುಷಃ ಸರಿ ಆಗಲ್ಲ!) ’ನನ್ನ ಅಳಿಯ ಒಂದು ಕೋಟಿ ಖರ್ಚಿ ಮಾಡಿ ಜಿಮ್ ಮಾಡಿದ್ದಾನೆ ’ ಅನ್ನೋದನ್ನು ಬರೆದಾಗ ಯಾಕೆ ಆಗಲ್ಲ ?
ಹೊಸ ಫ್ರಾಕ್ ಕೊಡಿಸಲು ಅಪ್ಪನ ಬಳಿ ಕಾಸಿಲ್ಲದೇ ಇದ್ದಾಗ ಮಗಳು ಹಳೇ ಫ್ರಾಕ್ ಹಾಕ್ಕೊಂಡು ಹೋಗ್ತೀನಿ ಅಂತ ಹೇಳಿದ್ದನ್ನು ಬರೆದಾಗ ಓದಿದಷ್ಟು ಇಂಟೆನ್ಸ್ ಆಗಿ ’ಮಗಳಿಗೆ ಈಗ ಐದಂಕಿ ಸಂಬಳ ’ ಅಂತ ಲೇಖಕ ಹೆಮ್ಮೆಯಿಂದ ಬರೆದಾಗ ಯಾಕೆ ಓದಿಸಿಕೊಂಡು ಹೋಗಲ್ಲ?
ಕಾಸಿಲ್ಲದೆ ಇದ್ದದ್ದಕ್ಕೆ ಸಣ್ಣ ಸಣ್ಣ ಪುಸ್ತಕಗಳನ್ನು ಅಂಗಡಿಯಲ್ಲೇ ಓದ್ತಿದ್ದೆ ಅನ್ನೋದನ್ನು ಲೇಖಕ ಬರೆದಾಗ ಆಗೋ ಖುಷಿ ’ನಾನು ಕಾದಂಬರಿಗಳನ್ನು ಅಮೆಝಾನ್ ಕಿಂಡಲ್ ನಲ್ಲೇ ಓದೋದು ’ ಅಂತ ಹೇಳಿದಾಗ ಯಾಕೆ ಆಗಲ್ಲ?
’ಮುಕ್ತ ಮುಕ್ತ ’ದ ಪೆದ್ದು ಪೆದ್ದಾಗಿ ಮಾತಾಡೋ ಶಾರದತ್ತೆ ಇಷ್ಟ ಆದಷ್ಟು ’ಕ್ಯೋಂಕಿ ಸಾಸ್ ಭಿ ’ ಸೀರಿಯಲ್ ನ ಜರತಾರಿ ಸೀರೆಯ ಆಂಟಿಯರು ಯಾಕೆ ಇಷ್ಟ ಆಗಲ್ಲ?
ಎಲ್ಲೋ ನಮಗೆ ಶ್ರೀಮಂತರು ಅಂದ್ರೆ ಸರಿ ಇಲ್ಲ,ಅವರಿಗೆ ಸಂವೇದನೆಗಳೇ ಇಲ್ಲ ಅನ್ನೋ ಭಾವನೆ ಮೂಡಿದೆ ಅನ್ಸುತ್ತೆ.ಅಥವಾ ನಮಗೆ ಬೆರೆಯವರ ಉನ್ನತಿ,ಶ್ರೀಮಂತಿಕೆ ಮೆಚ್ಚೋದಕ್ಕೆ ಆಗಲ್ವೇನೋ!
ನಾನೂ ಶ್ರೀಮಂತ,ಅವಳೂ ಶ್ರೀಮಂತೆ , ಮರ್ಸಿಡಿಸ್ ನಲ್ಲೇ ನಮ್ಮ ಓಡಾಟ ಅನ್ನೋ ಥರ ಕವಿತೆಗಳು ನಮಗೆ ಇಷ್ಟವಾಗೋದೇ ಇಲ್ವೇನೋ?
ಗುಲಾಬಿ ಟಾಕೀಸ್ ನ ಗುಲಾಬಿ ಒಂದು ವೇಳೆ ಶ್ರೀಮಂತೆ ಆಗಿದ್ರೆ ನಾವು ಅವಳನ್ನು ಈಗ ಇಷ್ಟ ಪಟ್ಟಷ್ಟೇ ಇಷ್ಟ ಪಡ್ತಿದ್ವಾ?ಬಡತನದಲ್ಲಿ ಬೆಂದದ್ದಕ್ಕೇ ಉಮಾಶ್ರೀಯವರಿಗೆ ಅಂಥ ಮನೋಜ್ಞ ಅಭಿನಯ ನೀಡೋದಕ್ಕೆ ಸಾಧ್ಯ ಆಯ್ತಾ?
ಇದು ಹ್ಯೂಮನ್ ಸೈಕಾಲಜಿ ಗೆ ಸಂಬಂಧ ಪಟ್ಟಿದ್ದಾ?

‍ಲೇಖಕರು avadhi

March 1, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

11 ಪ್ರತಿಕ್ರಿಯೆಗಳು

 1. Paraanjape

  ಸ೦ದೀಪ್, ನೀವು ಹೇಳಿದ್ದು ಸರಿ. ಬಡತನಕ್ಕಿರುವ ಸ೦-ವೇದನೆ ಶ್ರೀಮ೦ತಿಕೆಗೆ ಇಲ್ಲವೆನಿಸುತ್ತದೆ. ನಾನು ನಿಮ್ಮ೦ತೆಯೇ ಆ ದೈತ್ಯ ಬರಹಗಾರರನ್ನು ಮೆಚ್ಚಿ ಓದುತ್ತಿದ್ದೆ, ಯಾಕೋ ಇತ್ತೀಚಿಗೆ ನಿಮ್ಮ ಹಾಗೆ ನನಗೂ ಅನಿಸಿದೆ. ನನ್ನ ಮನಸಿನ ಭಾವನೆ ನಿಮ್ಮ ಮೂಲಕ ಅಭಿವ್ಯಕ್ತವಾದ೦ತಾಯ್ತು.

  ಪ್ರತಿಕ್ರಿಯೆ
 2. raghavendra

  ಬಡತನ ಇಲ್ಲದ ಶ್ರೀಮಂತ ಬರಹ. ಖುಷ್ ಆಯ್ತು.

  ಪ್ರತಿಕ್ರಿಯೆ
 3. karunaa p s

  ಪ್ರಿಯರೆ, ಇದು ತುಂಬ ಸರಳವಾದ ಗ್ರಹಿಕೆ. ನಮ್ಮ ಜಗತ್ತಿನ ಶ್ರೇಷ್ಠ ಕೃತಿಗಳೆನಿಸಿದ ರಾಮಾಯಣ, ಮಹಾಭಾರತ,ಈನಿಯಡ್, ಕಾಳಿದಾಸನ ಕೃತಿಗಳು ಪಂಪ ಮುಂತಾದವರ ಕೃತಿಗಳಿಂದ ಹಿಡಿದು ಾಧುನಿಕ ಯುಗದ ಅನೇಕ ಕೃತಿಗಳು ಬಡತನವನ್ನು ಕುರಿತು ಅಥವಾ ಅದನ್ನೇ ವ್ಯಸನವಾಗಿ ಮಾಡಿಕೊಂಡ ನಿರೂಪಣೆಗಳಲ್ಲ.ಗುಲಾಬಿ ಟಾಕೀಸ್ಸಸ್್ನ ಗುಲಾಬಿಯನ್ನು ಇಷ್ಟಪಡಲು ಆಕೆಯ ಬಡತನವೇ ಕಾರಣವೆಂದು ಅದು ಹೇಗೆ ಸರಳವಾಗಿ ತೀರ್ಮಾನಿಸಿದಿರಿ? ಅಲ್ಲಿಯ ಸಾಮಾಜಿಕ, ರಾಜಕೀಯ ಹಾಗು ಆಧುನಿಕ ಜಗತ್ತಿನ ಪಲ್ಲಟಗಳ ವಿವರಗಳಿಗೆ ಯಾವ ಸ್ಥಾನವೂ ಇಲ್ಲವೇ? ಸಾಹಿಬ್ ಬೀಬಿ ಗುಲಾಮ ಕೃತಿಯ ಚೋಟಿ ಬಹು ಶ್ರೀಮಂತಳಲ್ಲವೇ? ಆಕೆಯ ಪಾತ್ರ, ಅವಳ ಸಂದಿಗ್ದಗಳು ಯಾಕೆ ಕಾಡುತ್ತವೆ? ಗುಲಾಬಿ ಶ್ರೀಮಂತಳಾಗಿದ್ದರೆ ಹೆಸರೂ ಕಪಾಲಿ ಟಾಕೀಸ್ ಒಡತಿ ಕಾಮಾಕ್ಷಿಯ ಕತೆಯಾಗಿ ಬೇರೆ ಕತೆಯಾಗಿ ಅರಳುತ್ತಿತ್ತೇನೋ ಯಾರಿಗೆ ಗೊತ್ತು. ಸಾಹಿತ್ಯ ಕೃತಿ ಅಥವಾ ಯಾವುದೇ ಸೃಜನಶೀಲ ಕೃತಿಯ ಅಂತಿಮ ಧ್ಯೇಯ ಖುಷಿನೀಡುವುದು ಮಾತ್ರವೇ?
  ಇಷ್ಟಕ್ಕೂ ಬಾಲ್ಯದ ಅಥವಾ ಬಡತನದ ನೆನಪುಗಳು ಲೇಖಕನನ್ನು ಯಾಕೆ ಕಾಡುತ್ತವೆ ಅಥವಾ ಆ ನೆನಪುಗಳು, ಸಂಕಷ್ಟಗಳು ಸೃಜನಶೀಲ ಕೃತಿಗಳಲ್ಲಿ ಯಾಕೆ ಮತ್ತೆ ಮತ್ತೆ ಎದುರಾಗುವುದು, ನೆನಪುಗಳೊಡನೆ ಲೇಖಕ ಏಗಬೇಕಾದ ಅನಿವಾರ್ಯಗಳು ಬಹಳ ಕುತೂಹಲಕರವಾದ ವಿಷಯ. ಆ ಬಗ್ಗೆ ಚಿಂತನೆ ಹರಿದು ಒಳನೋಟ ನೀಡಿದ್ದರೆ ಚೆನ್ನಿತ್ತು. ಕರುನಾ ಪಿ ಎಸ್

  ಪ್ರತಿಕ್ರಿಯೆ
 4. gundanna chickmagalur

  the common psychology of a person is to sympathise with poorness – and not with the needy poor people – to have a facination with poorness and not to be in poor condition- it is almost similar to like the fresh nature in a forest and not to live with forest – We want to see the frames of the poor old women eating cooked rice without adding anything in pather panchali – but can we spend just that time of eating in that hut with her? I am of the opinion that we will always be facinated to the things to which we cannot really accept and live..

  ಪ್ರತಿಕ್ರಿಯೆ
 5. ವಿಜಯರಾಜ್ ಕನ್ನಂತ

  Sandeep thumba ishta aaytu… nimma prati lekhanadalloo intaha nodoke thumba simple(badava) ansidru bahaLa rich aagiro thoughts irtaave… 🙂
  Really a good food for thought…. (YNK heLida haage food for thaaTu alla)

  ಪ್ರತಿಕ್ರಿಯೆ
 6. shama, nandibetta

  ಸಂದೀಪ್, ಇದೇ ರೀತಿಯ ಭಾವವೊಂದು ಸುಮಾರು ತಿಂಗಳ ಕೆಳಗೆ ಮೂಡಿತ್ತು. ಚೇತನಾ ಬರೆದ ಬರಹವೊಂದಕ್ಕೆ ಕಾಮೆಂಟ್ ಹಾಕುವಾಗ ಆಕೆಗೆ ಇದನ್ನೇ ಮೇಲ್ ಮಾಡಿದ ನೆನಪು. ಬಡತನ ಮಾತ್ರ ಅಂತಲ್ಲ.. ನನಗನಿಸಿದ ಹಾಗೆ ನೋವು, ವಿಷಾದದಂಥ ಎಲ್ಲ ಭಾವಗಳೂ ಇದೆ ರೀತಿ ಕಾಡುವುದು ನಿಮ್ಮ ಹಾಗೆ ನನಗೂ ಅಚ್ಚರಿ. ಗುಲಾಬಿ ಟಾಕೀಸಿನ ಮೇಲಾಣೆ ಕಾರಣ ಮಾತ್ರ ಗೊತ್ತಿಲ್ಲ.

  ಪ್ರತಿಕ್ರಿಯೆ
 7. Anu

  In Hindi movie “Patita” there is a song which goes as your thoughts:
  hain sabase madhur wo geet jinhen, ham dard ke sur men gaate hain,
  ham dard ke sur men gaate hain;

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: