ಗೂಗಲ್ ಮ್ಯಾಪಿನಲಿ ನಮ್ಮೂರು..

ಮಹಾಭಾರತ 

ಲಕ್ಷ್ಮಣ್

ಗೂಗಲ್ ಮ್ಯಾಪಿನಲಿ ನಮ್ಮೂರು
ಹುಡುಕುವುದು ಸುಲಭ
ತಲುಪುವುದು ಕಷ್ಟ.

ಟಚ್ ಸ್ರ್ಕೀನಿನ ಮೇಲೆ
ಎರಡೂ ಬೆರಳಗಲಿಸಿದಷ್ಟೂ ವಿಸ್ತಾರವಾಗುತ್ತದೆ
ಊರಬೀದಿ, ತೆರೆದ ಬಾವಿ
-ಯ
ಬೆತ್ತಲೆ ಮೀನು ಗಂಡೋ ಹೆಣ್ಣೋ
ಈಗಷ್ಟೇ ತಿಳಿಯಬೇಕು
ತೆಂಗು, ಕಂಗು, ತಾಳೆ, ಬಾಳೆ
google map2ನೇಣಿಗೆ ಬಿದ್ದ ಕೈದಿಗಳಂತೆ ಗೋಣು ಚೆಲ್ಲಿವೆ.
ಆದರೆ
ಇವು ಬರಿಗಣ್ಣಿಗೆ ಕಾಣುವುದಿಲ್ಲ
ಇವನ್ನು ನೋಡುವ ವಿಶೇಷ ಕನ್ನಡಕಗಳು
ಆನ್ ಲೈನಿನಲಿ ಲಭ್ಯವಿವೆ.

ಊರ ನೆತ್ತಿಯ ಮೇಲೆ
ಕಪ್ಪನೆಯ ಮಸಿ ಮೋಡದ ತುಂಡೊಂದು
ಇಂಚಿಂಚಾಗಿ ಚಲಿಸುತ್ತಿದೆ
ಕೆಳಗೆ ತನ್ನ ನೆರಳಿನೊಂದಿಗೆ
ವೀರ್ಯಾಣುವಿಗೆ ಈಗ ತಾನೇ
ಕೈ ಕಾಲು ಬಲಿತವರಂತೆ ನಡೆದಾಡುತ್ತಿರುವ
ಕೇವಲ ನರಮಾನವರು.

ಕಳೆದ ಮಳೆಗಾಲದಲ್ಲಿ
ಮುರಿದ ಸೇತುವೆ ಜೋಡಣೆಯ ಕಾಮಗಾರಿ
ಪ್ರಗತಿಯಲ್ಲಿದೆ
ಹೀಗಾಗಿ ನಮ್ಮೂರು ತಲುಪಲು
ಹಾಯಿದೋಣಿ, ಇಲ್ಲವೆ ಕಾಲುದಾರಿಯೇ ಗತಿ.
ಮರಳು ತುಂಬಿದ ಲಾರಿ ಲೋಡುಗಳು
ಇರುವೆಗಳಂತೆ
ಶಿಸ್ತಿನಿಂದ ಸಾಲಾಗಿ ಚಲಿಸುತಿವೆ.
ನದಿಗೆ ಉಬ್ಬರವಿದ್ದಾಗ ದೋಣಿ ನಡೆಸುವುದಿಲ್ಲ
ಆಗ
ನದಿಯ ಆ ಈಚೆಯ ಜನರು
ಕೈ ಸನ್ನೆ, ಬಾಯ್ಸನ್ನೆ, ಮಾಡುತ್ತ
ಮಾತು ಸೋತ ಮಹಾ ಭಾರತದಲ್ಲಿ
ಪ್ರೇತಾತ್ಮಗಳಂತೆ ಇರುಳಿಡೀ ಕೇವಲ
ಸಂಕೇತಗಳ ಬಳಸಿ
ಆಂಡ್ರಾಯ್ಡ ಫೋನಿನಲಿ ಬಿಜಿ.
ಗುಡಿ ಗೋಪುರಗಳಂತೆ ಕಾಣುವ ಮೊಬೈಲ್
ಟವರುಗಳು.
ಸಾದಾ ಅಂಚೆಗಳು ಇಲ್ಲಿ
ಯಾರಿಗೂ ತಲುಪುವುದಿಲ್ಲ.

ಇದನ್ನೆಲ್ಲಾ ಮೀರಿದ ಖುಷಿಯೂ ಒಂದಿದೆ ;
ಗೂಗಲ್ ಮ್ಯಾಪಿನಲಿ
ನಮ್ಮೂರಿಗೂ ಸಿಂಗಾಪೂರಿಗೆ ಕೇವಲ ನಾಲ್ಕೇ
ಇಂಚಿನ ಗ್ಯಾಪು.

‍ಲೇಖಕರು Admin

August 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಯಾವ ‘ಮೋಹನ’ ಮುರಲಿ ಕರೆಯಿತೋ…

ಯಾವ ‘ಮೋಹನ’ ಮುರಲಿ ಕರೆಯಿತೋ…

ಸಂಗೀತ ರವಿರಾಜ್ ನನ್ನನ್ನು ಅತಿಯಾಗಿ ಕಾಡಿದ ಅಗಲಿಕೆಗಳಲ್ಲಿ ಇದೂ ಒಂದು. ನಿರಂತರ ಒಡನಾಟದಲ್ಲಿ, ಮಾತುಕತೆಯಲ್ಲಿ ಇಲ್ಲದೆ ಇದ್ದರು ಕೆಲವುಸಾವು...

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ಕಮಲಾಕರ ಕಡವೆ ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ,...

ಅಂದಿನಿಂದಿಂದಿಗೆ

ಅಂದಿನಿಂದಿಂದಿಗೆ

ಶ್ಯಾಮಲಾ ಮಾಧವ ಮೊರೆಯುವ ಕಡಲು. ವಿಶಾಲ ಮರಳ ಹಾಸು. ಗಾಳಿಯಲೆಯಾಡುವ ಸುವಿಶಾಲ ಚಬುಕಿನ ತೋಪು. ಅದರ ನಡುವೆ ವೃತ್ತಾಕಾರದ, ಕಟ್ಟೆಯಿರದ, ಇಳಿಯಲು...

3 ಪ್ರತಿಕ್ರಿಯೆಗಳು

 1. vaanee. Suresh

  ಇದನ್ನೆಲ್ಲಾ ಮೀರಿದ ಖುಷಿಯೂ ಒಂದಿದೆ ;
  ಗೂಗಲ್ ಮ್ಯಾಪಿನಲಿ
  ನಮ್ಮೂರಿಗೂ ಸಿಂಗಾಪೂರಿಗೆ ಕೇವಲ ನಾಲ್ಕೇ
  ಇಂಚಿನ ಗ್ಯಾಪು.
  – Brilliant lines!…

  ಪ್ರತಿಕ್ರಿಯೆ
 2. lalitha sid

  ಹೊಸ ವಸ್ತು , ಹೊಸ ಆಲೋಚನೆ , ಹೀಗೇ ಬರಬೇಕು ಯಾವ ಭಾಷೆಗಾದರೂ. ಕವನ ಇಷ್ಟವಾಯ್ತು. ಧನ್ಯವಾದಗಳು .

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: