ಗೂಗಲ್ ಸರ್ಚ್ ಗೂ ಒ೦ದು ಕ್ಲಾಸ್!

ಸಮರ್ಪಕ ಗೂಗಲ್ ಸರ್ಚ್ ಗಾಗಿ ಗೂಗಲ್ ತರಬೇತಿ – ಶ್ರೀನಿವಾಸ ಸೇನ ನಿಮ್ಮ ತಲೆಗೆ ಏನಾದರೂ ಡೌಟ್ ಬಂದರೆ ಮೊದಲು ಗೊತ್ತಿರುವವರನ್ನು ಕೇಳುತ್ತೀರ ಇಲ್ಲವೆ ಗೂಗಲ್ ಅನ್ನು ಹುಡುಕುತ್ತೀರ. ಕೆಲವೊಂದು ಸಾರಿ ನೀವು ಹುಡುಕಲು ಗೂಗಲ್ ನಲ್ಲಿ ಟೈಪ್ ಮಾಡುವ ಪದ ಸಮರ್ಪಕವಾಗಿ ಇಲ್ಲದಿದ್ದರೆ ನಿಮಗೆ ಬೇಕಾದ ಉತ್ತರ ಸಿಗುವುದಿಲ್ಲ. ಹಾಗಾಗಿ ನೀವು ಗೂಗಲ್ ನ ಸರ್ಚ್ ಎಂಜಿನ್ ಅನ್ನು ಅರ್ಥ ಮಾಡಿಕೊಳ್ಳಬೇಕು. ಯಾವ ಪದಗಳ ಕಾಂಬಿನೇಶನ್ ಬಳಸಿ ಟೈಪ್ ಮಾಡಿದರೆ ಗೂಗಲ್ ನಿಮಗೆ ಬೇಕಾದ ಮಾಹಿತಿಯನ್ನು ಹೆಕ್ಕಿ ಕೊಡುತ್ತದೆ ಎಂಬುದನ್ನು ತಿಳಿದಿರಬೇಕು. ಈಗ ಗೂಗಲ್ ಕಂಪನಿಯೇ ನಮಗೋಸ್ಕರ ಗೂಗಲ್ ನಲ್ಲಿ ಹುಡುಕುವುದು ಹೇಗೆ ಎಂಬ ಬಗ್ಗೆ ಉಚಿತ ಆನ್ಲೈನ್ ತರಬೇತಿ ನೀಡಲಿದೆ. ದಿನನಿತ್ಯದ ಚಟುವಟಿಕೆಗಳಿಗೆ ಗೂಗಲ್ ಅನ್ನು ಹೇಗೆ ಬಳಸಬಹುದು, ಯಾವ ತಂತ್ರಗಳನ್ನು ಬಳಸಬೇಕು ಎಂಬ ಬಗ್ಗೆ ಈ ತರಗತಿಗಳಲ್ಲಿ ಹೇಳಿಕೊಡಲಾಗುವುದು. 6 ದಿನಗಳ ಕಾಲ ನಡೆಯುವ ಈ ಕೋರ್ಸ್, ಪ್ರತಿನಿತ್ಯ 50 ನಿಮಿಷಗಳ ಕಾಲ ನಡೆಯಲಿದ್ದು ಕೋರ್ಸ್ ನ ಅಂತ್ಯಕ್ಕೆ ಪ್ರಮಾಣ ಪತ್ರ ವನ್ನೂ ಗೂಗಲ್ ಕೊಡಲಿದೆ. ಜೂನ್ 26 ರಿಂದ ನೋಂದಣಿ ಶುರುವಾಗಿದ್ದು ಜುಲೈ 16 ರ ಒಳಗೆ ನೋಂದಣಿ ಮಾಡಲು ಕೊನೆಯ ದಿನಾಂಕವಾಗಿದೆ. ಮೊದಲ ಬ್ಯಾಚ್ ಜುಲೈ 10 ಕ್ಕೆ ಶುರುವಾಗಲಿದೆ. ಈ ಕೂಡಲೇ ನೀವು ರಿಜಿಸ್ಟರ್ ಮಾಡಲು ಈ ಲಿಂಕ್ ಅನ್ನು ನೋಡಿ http://www.google.com/​insidesearch/landing/​powersearching.html  ]]>

‍ಲೇಖಕರು G

June 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This