ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ..

‘ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ –
ಬಿಟ್ಟು ಕೂಡುವುದರಿಂದ..’
ಎಂಬ ಕವಿತೆಯ ಸಾಲುಗಳು ಯಾರವು ಎಂಬ ಗೊಂದಲವಿತ್ತು.
ಪತ್ರಕರ್ತೆ ವಿದ್ಯಾರಷ್ಮಿ ನಾವು ಎಕ್ಕುಂಡಿಯವರದು ಎಂದುಕೊಂಡಿದ್ದ ಈ ಕವನದ ಸಾಲುಗಳು ಕೆ ವಿ ತಿರುಮಲೇಶ್ ಅವರದ್ದು ಎಂದು ತಿಳಿಸಿದ್ದರು.
ಈಗ ಆ ಸಾಲುಗಳನ್ನೊಳಗೊಂಡ ಕವಿತೆಯನ್ನೇ ಕಳಿಸಿದ್ದಾರೆ. ವಿದ್ಯಾರಷ್ಮಿಗೆ ಥ್ಯಾಂಕ್ಸ್ ಹೇಳುತ್ತಾ ಆ ಕವನ ನಿಮಗಾಗಿ-


ಚಿತ್ರ: ಶಿವು
ಮುಖಾಮುಖಿ
1
ಪುಷ್ಟವಾದ ಒಂದು ಬೆಕ್ಕು ನನ್ನ ಮನೆಯ
ಡ್ರಾಯಿಂಗ್ ರೂಮಿನಲ್ಲಿ ಬಂದು ನನ್ನನ್ನು ಕಂಡು
ಹಠಾತ್ತನೆ ನಿಂತಿತ್ತು. ಅಲ್ಲಿ ಅದು ನನ್ನನ್ನು ನಿರೀಕ್ಷಿಸಿರಲಾರದು.
ಇಲ್ಲ, ಸೋಮವಾರ ಎಲ್ಲರೂ ಅವರವರ ಆಫೀಸಿಗೆ
ಹೋಗಿರುವ ಅಪರಾಹ್ನವಂತೂ ಖಂಡಿತ ಇಲ್ಲ.
ತುಸು ಸಮಧಾನದಿಂದ ನನ್ನ ಕಡೆ ನೋಡಿತು
ನಮ್ಮ ಕಣ್ಣುಗಳು ಪರಸ್ಪರ ನಟ್ಟು ಯಾರು ಮೊದಲು
ಮುಖ ತಿರುಗಿಸುವುದು ಎಂಬ ಒಂದು ವಿಧದ
ಅಘೋಷಿತ ಯುದ್ದದಲ್ಲಿ ಇಬ್ಬರೂ ತೋಡಗಿದೆವು.
ಒಂದು ಬೆಕ್ಕಿನ ಕಣ್ಣುಗಳು ಇಷ್ಟು ನಿಶ್ಚಲವಾಗಿರುತ್ತವೆ
ಎಂದು ನನಗೆ ಗೂತ್ತಿರಲಿಲ್ಲ.
2
ಸೆಟೆದ ಬಾಲ, ನಿಮಿರಿದ ಕೂದಲು, ಕಾಲುಗುರು-
ಒಟ್ಟಾರೆ ಹೂಡಿದ ಬಿಲ್ಲಿನಂತಿರುವ ಬೆಕ್ಕು
ಆಕ್ರಮಿಸಿತ್ತೀಗ ನನ್ನ ಇಡೀ ದೃಷ್ಟಿ ಪರಿದಿಯನ್ನು-
ದಾರಿ ತಪ್ಪಿದಂತೆ ನಾನು ಚರಿತ್ರಪೂರ್ವ ಭೂಖಂಡಗಳಲ್ಲಿ
ಬಿದ್ದಂತೆ ಅಪರಿಚಿತ ಸಮುದ್ರಗಳಲ್ಲಿ.ಆದರೂ
ಎವೆಯಿಕ್ಕಲಿಲ್ಲ ನಾನು. ಎವೆಯಿಕ್ಕಲಿಲ್ಲ ಬೆಕ್ಕು.
ಮನುಷ್ಯ ಮತ್ತು ಮೃಗಕ್ಕೆ ಮೂಲಭೂತವಾದ
ಯಾವುದೋ ಸ್ಥಿತಿ ವಿಶೇಷದಲ್ಲಿ ನಿಂತಿತ್ತು ನನ್ನೆದುರು
ಬೆಕ್ಕಿಗೆ ಬೆಕ್ಕೇ ಛಲವಾಗಿ.
ಒಂದು ಬೆಕ್ಕಿನ ಕಣ್ಣುಗಳು ಇಷ್ಟು ಅನಾಥವಾಗಿರುತ್ತದೆ
ಎಂದು ನನಗೆ ಗೂತ್ತಿರಲಿಲ್ಲ.
3
ಕೂನೆಗೂ ಸೋತದ್ದು ಮೃಗವೆ. ಅಥವಾ ಹಾಗೆಂದುಕೂಂಡುದು
ನಾನು. ಆ ಸೆಟೆದ ಮೈ ಕ್ರಮೇಣ ನುಸುಲಾಗಿ
ಹೊರಟು ಹೋಯಿತು ಬೆಕ್ಕು ಬೆಕ್ಕಿನ ಗತಿಯಲ್ಲಿ .
ಹೀಗೆ ನನ್ನ ದೃಷ್ಟಿ ಒಮ್ಮಲೆ ಖಾಲಿಯಾದಾಗ
ಅನ್ನಿಸಿತು ನನಗೆ-ಒಪ್ಪಿಕೂಳ್ಳಬಹುದಿತ್ತು ನಾನು
ಬೆಕ್ಕಿಗೆ ಬೆಕ್ಕನ ಸ್ವಾಭಿಮಾನ. ಅಷ್ಟಕ್ಕೂ ನಾನು ಗಳಿಸಿದ್ದೇನು?
ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ –
ಬಿಟ್ಟು ಕೂಡುವುದರಿಂದ.
ಒಂದು ಬೆಕ್ಕಿನ ಕಣ್ಣುಗಳಲ್ಲಿ ಇಷ್ಟೊಂದು ವಿಷಾದವಿರುತ್ತದೆ
ಎಂದು ನನಗೆ ಗೂತ್ತಿರಲಿಲ್ಲ.

‍ಲೇಖಕರು avadhi

July 31, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತುಂಬು ತಿಂಗಳಿನ ಹಾಲು ಬೆಳದಿಂಗಳು ನೀ

ತುಂಬು ತಿಂಗಳಿನ ಹಾಲು ಬೆಳದಿಂಗಳು ನೀ

ಪ್ರಕಾಶ.ಬಿ ಉಪ್ಪನಹಳ್ಳಿ ಕನಸುಗಳ ಕಟ್ಟಿದ ಹಟ್ಟಿಕೊರಳು ಹೊಟ್ಟೆ ಬಟ್ಟೆ ಕಟ್ಟಿನಿಂತ ಹೆಜ್ಜೆಗಳು ಗುರುತಾಗುವಂತೆಲೋಕದೆದುರು ತಲೆ ಎತ್ತಿ...

ನಿಜವಾದ ಸುಳ್ಳು!

ನಿಜವಾದ ಸುಳ್ಳು!

ಲಕ್ಷ್ಮೀದೇವಿ ಪತ್ತಾರ ಇಷ್ಟು ದಿನ ಹೌದಾಗಿದ್ದು ಇಂದು ಅಲ್ಲವಾಗಿದೆಇಲ್ಲವೆನ್ನುವುದು ಎದ್ದು ಕಾಣುತ್ತಿತ್ತು ಯಾವುದೊ ಭಯ, ಚಿಂತೆಗಳ...

ಈ ಆಸೆಯ ಬಸುರು ಬಲು ಭಾರ…

ಈ ಆಸೆಯ ಬಸುರು ಬಲು ಭಾರ…

ಹೇಮಂತ್ ಎಲ್ ಚಿಕ್ಕಬೆಳವಂಗಲ ಇದು ಇಂದು ನಿನ್ನೆಯದಲ್ಲ! ಸಾಗರದಂತಹ ನಿನ್ನೂರಿಗೆನಾನು ಬರುವಾಗಲೆಲ್ಲಾನಿನಗೆಹೇಳಿಯೇ ಇರುತ್ತೇನೆ.. ಎಲ್ಲ ಕೆಲಸಗಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This