ಗೆಳೆತನ ಮನುಷ್ಯರನ್ನಾಗಿಸಲಿ..

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ವಾಹನಗಳಿಗೆ ಬೇಕಾದ ತೈಲ ಮಾರುತ್ತಿರುವ ಸಿದ್ದು ದೇವರಮನಿ ಕವಿತೆ ಬರೆಯುವ ಹುಡುಗ. ಬಿ ಕಾಂ ಓದಿ ಅದೇಗೋ ಕಾವ್ಯದ ಸ್ನೇಹಕ್ಕೆ ಕೈ ಚಾಚಿದ ಈ ಹುಡುಗ ಬೆರಗಾಗುವಂತೆ ಬರೆಯುತ್ತಿದ್ದಾನೆ. ಯುದ್ಧ ಬೇಕು ಎನ್ನುವವರಿಗೆ ಅವನ ಉತ್ತರ ಇಷ್ಟೇ ಅಂತಹವರನ್ನು ನನ್ನ ಅಂಗಡಿಗೆ ಕಳಿಸಿಕೊಡಿ-ಇಲ್ಲಿ ಕೆಲಸಗಳಿವೆ ಅಂತ. ಸಿದ್ದು ಕೊಟ್ಟೂರಿನ ಗೆಳೆಯರ ಮಧ್ಯೆಯೇ ಅರಳುತ್ತಾ ಕಾವ್ಯ ಬರವಣಿಗೆ ರೂಪಿಸಿಕೊಂಡವನು. ಸಿದ್ದು ಬ್ಲಾಗ್ ಅಂಗಳಕ್ಕೂ ಬಂದಿದ್ದಾರೆ. ಆಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ ..  

ಗೆಳೆತನ ಮನುಷ್ಯರನ್ನಾಗಿಸಲಿ.. ಕವಿತೆಯನ್ನು ಬರೆದ ಅವರನ್ನು ಸ್ವಾಗತಿಸುತ್ತಾ ಅವರ ಒಂದು ಕವಿತೆ ನಿಮಗಾಗಿ-  

– ಸಿದ್ದು ದೇವರಮನಿ

keith-haring-anti-war

ಯುದ್ದವೆ೦ದರೆ  ಅಜ್ಞಾನ
ಯುದ್ದವೆ೦ದರೆ ಅಸಹ್ಯ
ಅದು ಕತ್ತಲ ಸೃಷ್ಟಿಸುವ ಬರೋಬ್ಬರಿ ಬೆಳಕು !

ಕದನಗಳು ಕಲಹಗಳನ್ನಲ್ಲದೆ ಕನಸುಗಳನ್ನು
ಹುಟ್ಟುಹಾಕಿದ್ದು ನನಗೆ ಈವರೆಗೂ ನೆನಪಿಲ್ಲ.
ಯುದ್ದದಲ್ಲಿ ಏನಾದರೂ ಪಾತ್ರಗಳು ಸಿಕ್ಕರೆ
ಅದು ನನ್ನ ಪ್ರತಿರೋಧ ಮಾತ್ರ.

ಕನಸುಗಳನ್ನು ಹೊತ್ತು
ಕಣ್ ಬಿಟ್ಟ ಕೂಸು ನಾನು..
ಇಲ್ಲಿ ನನಗೆ ಮನುಷ್ಯರೊ೦ದಿಗೆ ಮಾತ್ರ ಗೆಳೆತನವಿದೆ.

ಹೆಚ್ಚೇನು ಹೇಳಲಾರೆ
ಯುದ್ದವೇ ಕೊನೆಯ ನಿಧಾ೯ರ
ಎ೦ದೆನ್ನುವ ಎಲ್ಲರನ್ನು ಕಳಿಸಿಕೊಡಿ
ನಮ್ಮ೦ಗಡಿಯಲ್ಲಿ ಕೆಲಸಗಳು ಖಾಲಿ ಇವೆ.

ಹಗೆತನಗಳನ್ನು ಮರೆತು ಮನುಷ್ಯರಾಗಲಿ.

ಚಿತ್ರ : Anti-war painting by Keith Haring in Berlin


 

‍ಲೇಖಕರು avadhi

November 21, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

  1. siddudevaramani

    ಈ ತರದ ಮೀಡಿಯಗೆ ನನ್ನ ಕರೆತ೦ದ, ಕ್ಯೂಬ ಆಸಕ್ತಿ ಹಚ್ಚಿಸಿದ ನಿಮ್ಮ ಋಣ ದೊಡ್ಡದಿದೆ..
    ಥ್ಯಾ೦ಕ್ಸ್ ಸರ್..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: