ಹನಿಗವನಗಳು
– ಕೆ ಅಪ್ಪಣ್ಣ

ಗೆಳೆಯಾ,
ಬದುಕಿನ ಅಚ್ಚರಿಗಳೇ ಹಾಗೆ..
ಬರಡಾಗಿ ಹೋಯ್ತೆಂದು
ಕೈ ಚೆಲ್ಲುವ ಹೊತ್ತಿಗೆ..
ಮೈಯೆಲ್ಲಾ ವಸಂತವಾಗಿ
ಅರಳಿಕೊಳ್ಳುತ್ತದೆ..
ನೀ ನನ್ನ ಬಾಳಿಗೆ ಬಂದ ಹಾಗೆ..
ಹಸಿರು ತಂದ ಹಾಗೆ..
೨.
ಗೆಳೆಯಾ,
ಅವತ್ತಿಗೂ ಇವತ್ತಿಗೂ
ನಾ ಭೂಮಿಯಂತೇ
ಅಂದು ನನ್ನೆದೆಯಲ್ಲಿ ಕಾವಿತ್ತು..
ಮನಸು ದಣಿದಿತ್ತು..
ಇಂದು ನಿನ್ನೊಲವ ಮಳೆಯಲಿ..ನೆನೆದಿದೆ..
ಮನಸು ಮಣಿದಿದೆ…
೩
ಗೆಳೆಯಾ,
ನಾ ಸುಮ್ಮನಿದ್ದೆ..
ನನಗೊಂದು ಒಂಟಿತನವಿತ್ತು.
ಮನಸು ಖಾಲಿಯಿತ್ತು..ಅಲ್ಲಿ
ವಿಷಾದಕರ ಮೌನವಿತ್ತು..
ಆದರೆ ..
ನೀ ಬಂದ ಮೇಲೆ..
ಎದೆಯಲ್ಲಿ ಮಿಡಿಯುತಿದೆ…ಒಲುಮೆಸಂಗೀತ..
ಮತ್ತು
ನಿತ್ಯ ನಿನ್ನದೇ ಕನಸುಗಳೊಂದಿಗೆ..
ನನ್ನ ದಿವ್ಯ ಏಕಾಂತ..
]]>
Superb!
ಗೆಳೆಯಾ,
ನಾ ಸುಮ್ಮನಿದ್ದೆ..
ನನಗೊಂದು ಒಂಟಿತನವಿತ್ತು.
ಮನಸು ಖಾಲಿಯಿತ್ತು..ಅಲ್ಲಿ
ವಿಷಾದಕರ ಮೌನವಿತ್ತು..
ಆದರೆ ..
ನೀ ಬಂದ ಮೇಲೆ..
ಎದೆಯಲ್ಲಿ ಮಿಡಿಯುತಿದೆ…ಒಲುಮೆಸಂಗೀತ..
ಮತ್ತು
ನಿತ್ಯ ನಿನ್ನದೇ ಕನಸುಗಳೊಂದಿಗೆ..
ನನ್ನ ದಿವ್ಯ ಏಕಾಂತ..
ನಿಮ್ಮ ಕವಿತೆ ಓದುತಿದ್ದಂತೆ ಅದೇಕೋ ನನ್ನ ಮೈ ಪುಳಕಗೊಲ್ಲುತ್ತಿದೆ, ಅಬ್ಬಾ,ಆ ಕವಿತೆಯ ಸಾಲುಗಳು ಮತ್ತೆ ಮತ್ತೆ ನನ್ನ ಮನಸನ್ನು ಕದಡುತ್ತಿವೆ
ರತಿ ಹಂಪಿ
nice