ಗೋಪಾಲ ವಾಜಪೇಯಿ ಸವಿದ ಬೆಳದಿ೦ಗಳೂ, ಬೆಳದಿ೦ಗಳೂಟವೂ..

– ಗೋಪಾಲ ವಾಜಪೇಯಿ

ನಿನ್ನೆ ಹುಣ್ಣಿಮೆಯಂತೂ ಸೈಯೇ ಸೈ. ಜೊತೆಗೆ ‘ಹನುಮ ಜಯಂತಿ’, ‘ಅಕ್ಕ ಮಹಾದೇವಿ ಜಯಂತಿ’, ‘ಶುಭ ಶುಕ್ರವಾರ,’ ‘ಕೆಂಪೇಗೌಡರ ದಿನಾಚರಣೆ,’ ‘ಬೆಂಗಳೂರಿನ ಕರಗ,’ ಇತ್ಯಾದಿ ಇತ್ಯಾದಿ… ನನಗೆ ಇನ್ನೂ ಒಂದು ಕಾರಣಕ್ಕೆ ನಿನ್ನೆಯ ರಾತ್ರಿ ‘ವಿಶೇಷ’ವಾಗಿತ್ತು. ‘ವಿಶೇಷ’ ಅಷ್ಟೇ ಅಲ್ಲ, ‘ಅವಿಸ್ಮರಣೀಯ’ ಕೂಡ. ‘ಈಟೀವಿ’ಯ ಗೆಳೆಯ ಎಚ್.ವಿ. ಸಂಜಯನ ಮನೆಯಲ್ಲಿ ಬೆಳದಿಂಗಳೂಟ ! ಕನ್ನಡದ ಹಿರಿಯ ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರ ಮಗ ಈ ಸಂಜಯ. ನನಗೆ ತುಂಬಾ ಆತ್ಮೀಯ. ”ಬನ್ನಿ, ‘ಅಣ್ಣ’ನೂ ನಮ್ಮ ಜೊತೆ ಇರುತ್ತಾರೆ,” ಅಂತ ಹತ್ತು ದಿನಗಳ ಹಿಂದೆಯೇ ಆಮಂತ್ರಣ ನೀಡಿದ್ದ ಸಂಜಯ. ಕವಿಯೊಂದಿಗೆ ಬೆಳದಿಂಗಳೂಟ ! ಅಲಭ್ಯ ಅವಕಾಶ ! ಇವೆಲ್ಲದಕ್ಕೆ ಕಳಶವಿಟ್ಟಂತೆ ನಿನ್ನೆಯೇ ನಮ್ಮೆಲ್ಲರ ಅಭಿಮಾನದ ಕವಿ ಎಚ್ಚೆಸ್ವಿ ಅವರಿಗೆ ‘ಮಾಸ್ತಿ ಪ್ರಶಸ್ತಿ’ ಮತ್ತು ‘ಅತ್ಯುತ್ತಮ ಗೀತರಚನಕಾರ ಪ್ರಶಸ್ತಿ’ಗಳು ಪ್ರಕಟವಾದದ್ದು… ನಾನು, ನನ್ನಾಕೆ, ‘ಝೀಟೀವಿ’ಯ ಗೆಳೆಯ ಸುಕುಮಾರರ ಪರಿವಾರ, ಸಂಜಯನ ಇಬ್ಬರು ಪುಟ್ಟಿಯರು, ಅವರ ಶ್ರೀಮತಿ ಸುಮಾ, ಆಕೆಯ ತಾಯಿ… ಸಂಜಯನ ಮನೆಯ ತಾರಸಿಯ ಮೇಲಿನ ಈ ಸಂಭ್ರಮಕ್ಕೆ ತಂಗಾಳಿಯ ಸಾಥು… ಪುಟ್ಟಿಯರ ಓಡಾಟ, ಸುಕುಮಾರರ ಹಾಡು, ಸುಮಾ ಮಾಡಿದ ಆ ಪಾಯಸ, ಆ ಗೊಜ್ಜು, ಆ ಸಾರು…! ಇಡೀ ಸಂದರ್ಭ ತುಂಬಾ ಆತ್ಮೀಯವಾಗಿತ್ತು, ಆಪ್ತವಾಗಿತ್ತು. ಅಬ್ಬಾ ! ಕವಿ ಎಚ್ಚೆಸ್ವಿ ಅವರೊಂದಿಗೆ ಕಳೆದ ಸುಮಾರು ಒಂದೂವರೆ ಗಂಟೆಯ ‘ಆ’ ಸಮಯವಂತೂ…! ಊಟವೆಲ್ಲ ಮುಗಿದ ಮೇಲೆ, ನಮ್ಮೊಂದಿಗೆ ಮುಖ್ಯ ರಸ್ತೆಯ ತನಕ ಬಂದು ಮುಂದಿನ ದಾರಿ ತೋರಿ ಬೀಳ್ಕೊಟ್ಟರು ‘ಅಣ್ಣ.]]>

‍ಲೇಖಕರು G

April 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This