ಚರಕ್ಕನೆ ಗೀರಿ ಬೆಂಕಿ ಹೊತ್ತಿಸುತ್ತಾರೆ

ಬೆಂಕಿ ಕಡ್ಡಿಗಳು

-ಡಿ.ಎಸ್.ರಾಮಸ್ವಾಮಿ
7d55d3f0-7cb4-4173-99dc-29f8a302b1521
ಬೆಂಕಿ ಕಡ್ಡಿಗಳು,
ನಾನು, ನೀನು, ಅವನು, ಅವಳು
ಹೌದು, ನಾವೆಲ್ಲರೂ ಬೆಂಕಿಯ ತುಂಡುಗಳು:

 

ನಮ್ಮ ತಲೆಯ ಮೇಲಷ್ಟು ಮದ್ದು ಮೆತ್ತಿ,
ಒಬ್ಬರ ಮೇಲೊಬ್ಬರನ್ನು ತುರುಕಿ,
ಪುಟ್ಟ ಪೆಟ್ಟಿಗೆಯೊಳಗಿಟ್ಟು ಭದ್ರ ಮಾಡಿದ್ದಾರೆ:

ಬೇಕಿನಿಸಿದಾಗೆಲ್ಲ ನಮ್ಮಲ್ಲೊಬ್ಬರನ್ನೆಳೆದು
ಚರಕ್ಕನೆ ಗೀರಿ ಬೆಂಕಿ ಹೊತ್ತಿಸುತ್ತಾರೆ,
ಚಳಿಯ ಮೈಯನ್ನು ಕಾಯಿಸಿ ಕೊಳ್ಳುತ್ತಾರೆ.

ಬೆಂಕಿ ಹೊತ್ತಿಸಿದ ಸಂಭ್ರಮದಲ್ಲಿ
ಸುಟ್ಟು ಭಸ್ಮವಾಗುವ ನಮಗೇ
ನಮ್ಮ ಶಕ್ತಿ ಗೊತ್ತಿಲ್ಲ; ಹಾಗಾಗಿ

ಜೊತೆಜೊತೆಯಾಗಿದ್ದರೂ ಅತಂತ್ರ ಸ್ಥಿತಿ ಹೋಗಲ್ಲ
ಈ ಪುಟ್ಟ ಪೆಟ್ಟಿಗೆಯ ವಾಸವೂ ತಪ್ಪೋಲ್ಲ!

‍ಲೇಖಕರು avadhi

January 27, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಜೀವನದ ಹೊಟ್ಟೆ ತುಂಬಿ

ಜೀವನದ ಹೊಟ್ಟೆ ತುಂಬಿ

ಮಾಲಾ.ಮ.ಅಕ್ಕಿಶೆಟ್ಟಿ ವಿಧ ವಿಧ ಭಕ್ಷ್ಯಗಳು ಸಿಹಿ ಖಾರ ಹುಳಿ ಒಗರು ಈರುಳ್ಳಿ ಬೆಳ್ಳುಳ್ಳಿ ಹುಣಸೆ ಬೆಲ್ಲ  ಎಣ್ಣೆ ಹೆಚ್ಚೋ ಕಡಿಮೆಯೋ ರುಚಿ ಪಾಪಿ...

ಮೋಹ ಇದಿರುಗೊಳ್ಳದ ದಿನ

ಮೋಹ ಇದಿರುಗೊಳ್ಳದ ದಿನ

ಕೆ ಜೆ ಕೊಟ್ರಗೌಡ ತೂಲಹಳ್ಳಿ ಪೋಲಿಯಾಗಿ ಬಿಡಬೇಕುಯಾವ ಶಿಲಾಬಾಲೆಯೂಎದುರುಗೊಳ್ಳದ ಕಾರಣ ಅತೀ ಆಸೆಯ ಹೊಂದಿಯೂಅಮಾಯಕತೆಯಪ್ರದರ್ಶನಕೆಯಾವ...

ಅವಿವಾಹಿತನ ವೈವಾಹಿಕ ಕಲ್ಪನೆಗಳು

ಅವಿವಾಹಿತನ ವೈವಾಹಿಕ ಕಲ್ಪನೆಗಳು

ವಿಶ್ವನಾಥ ಎನ್. ನೇರಳಕಟ್ಟೆ ನನ್ನವಳು ‘ಊಟದಲ್ಲಿದ್ದಂತೆ ಹೋಳಿಗೆನೀನು ನನ್ನ ಬಾಳಿಗೆ’ಎನ್ನದಿದ್ದರೆ ಮಾಡಿಟ್ಟ ಹೋಳಿಗೆಹಾಕುವುದೇಇಲ್ಲ ನನ್ನ...

4 ಪ್ರತಿಕ್ರಿಯೆಗಳು

 1. ಶ್ರೀಕಾಂತ ಹೆಗಡೆ

  ಈ ಅಸಹಾಯಕ ಪರಿತಾಪ ಎನಗಿಲ್ಲ,
  ಈ ಬ್ರಹ್ಮಾಂಡದ ಅಗ್ಗಿಷ್ಟಿಕೆಯಲ್ಲಿ ನಮ್ಮನ್ನಿಟ್ಟವ ಆ ಪರಮಾತ್ಮ
  ಅವ ಸುಮ್ಮ ಸುಮ್ಮನೆ ಗೀರುವುದಿಲ್ಲ. ಬೇಯಿಸಲು ಪಕ್ವವಾಗಿಸಲು
  ಭೂಮಿಗೆ ಭಾರಾದವರ ಸುಡಲು,ಬೆಳಕಾಗಿಸಲು ಆರಿಸಿ ಗೀರುತ್ತಾನೆ.

  ಪ್ರತಿಕ್ರಿಯೆ
 2. dundiraj

  82 ralli prakatavada namma godeya haadu emba sankalanadalliruva kaddigalu emba nanna kavanada kelavu salugalu illi alpa badalavaneyondige kanisikondive.adu udayavaniyallu bandittu.

  ಪ್ರತಿಕ್ರಿಯೆ
 3. ಡಿ.ಎಸ್.ರಾಮಸ್ವಾಮಿ

  ದುಂಡಿರಾಜರಲ್ಲಿ, ನಮಸ್ಕಾರ.
  ನಿಮ್ಮ ಪ್ರತಿಕ್ರಿಯೆ ಘಾಸಿಗೊಳಿಸಿದೆ.ನನ್ನ ಈ ಪದ್ಯ ೨೦೦೨ರಲ್ಲಿ ಪ್ರಕಟವಾಗಿ ಶಿವಮೊಗ್ಗ ಕರ್ನಾಟಕ ಸಂಘದ ಜಿ.ಎಸ್.ಎಸ್ ಪ್ರಶಸ್ತಿ ಪಡೆದ ನನ್ನ ಮೊದಲ ಸಂಕಲನ ’ಮರೆತ ಮಾತು’ ಕೃತಿಯಲ್ಲಿರುವ ಪದ್ಯ. ೨೦೦೧ ರಲ್ಲಿ’ಸುಧಾ’ದಲ್ಲೂ ಪ್ರಕಟವಾಗಿತ್ತು.ನಿಮ್ಮ ಪ್ರತಿಕ್ರಿಯೆ ಪದ್ಯದ ಮೇಲೆ ಕೃತಿಚೌರ್ಯದ ಗಂಭೀರ ಆಪಾದನೆ ಹೊರಿಸುವಂತಿದೆ. ಈಗಾಗಲೇ ೨ ಸಂಕಲನ ಪ್ರಕಟಿಸಿರುವ ಮತ್ತು ೨೦೦೬ರ ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಯ ಪ್ರಶಸ್ತಿಯನ್ನೂ ಪಡೆದಿರುವ ನನಗೆ ಕೃತಿಚೌರ್ಯದ ಅಗತ್ಯತೆಯಾದರೂ ಏನಿದೆ. ನಿಮ್ಮ ಪದ್ಯದ ಬಗ್ಗೆ ಕುತೂಹಲ ಹುಟ್ಟಿದೆ.ದಯೆಯಿಟ್ಟು ಮಿಂಚಂಚೆ ಕಳಿಸಿ.ನನ್ನ ವಿಳಾಸ [email protected] ಧನ್ಯವಾದ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: