ಚರ್ಚೆ ಆರಂಭವಾಗಿದೆ…ನೂರೆಂಟು ಬಾಳೆಹಣ್ಣು ನಿನಗೆ

‘ಜುಗಾರಿ ಕ್ರಾಸ್’ ಚರ್ಚೆಗಾಗಿಯೇ ಇರುವ ಅಂಕಣ. ಸದ್ಯದ ಆಗುಹೋಗುಗಳಿಗೆ ಹಿಡಿಯುವ ಕನ್ನಡಿ.
ಕುಂದಾಪುರದ ಒತ್ತಿನೆಣೆಯಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪನೆಗೆ ‘ಆತ ಕ್ರಿಶ್ಚಿಯನ್’ ಎಂಬ ನೆಪ ಒಡ್ಡಿ ಬಂದ ಆರೋಪ ಕುರಿತು ಜೋಗಿ ಬರೆದಿದ್ದರು. ಅದಕ್ಕೆ ಬಂದ ಪ್ರತಿಕ್ರಿಯೆಗಳು, ಬೈಗುಳಗಳು ಸಾಕಷ್ಟು.
ಒಂದು ಮಿತಿಯಾಚೆ ಇದ್ದ ಪ್ರತಿಕ್ರಿಯೆಗಳನ್ನು ದೂರವೇ ಇಟ್ಟು, ಇನ್ನು ಕೇವಲ ಹೊಗಳಿಕೆಯನ್ನೂ ಕೈಬಿಟ್ಟು ಕೆಲವನ್ನು ಪ್ರಕಟಿಸಿದ್ದೇವೆ. ಬನ್ನಿ ಚರ್ಚೆಯಲ್ಲಿ ಪಾಲ್ಗೊಳ್ಳಿ-
image1ದಕ್ಷಿಣ ಕನ್ನಡ ಎತ್ತ ಸಾಗುತ್ತಿದೆ ಮತ್ತು ಹೀಗೆ ಸಾಗಿದರೆ ಏನಾಗಬಹುದು ಎಂಬುದನ್ನು ಚಾಪ್ಲಿನ್ ಶೈಲಿಯ ವ್ಯಂಗ್ಯದಲ್ಲಿ ಹೇಳಿದ್ದಿರಿ. ಹೀಗೆ ಹೇಳುತ್ತಿರುವಂತೆ ಅತ್ತ ಹಿಂದೂ ಸಮಾಜೋತ್ಸವದ ತಯಾರಿ ನಡೆಯುತ್ತಿದೆ, ಇಂತಹ ಕೆಲಸಗಳು ತಾನಾಗಿಯೇ ಕುಸಿಯಲಿ ಅಂತ ಬಿಟ್ಟು ಬಿಡುವುದೋ ಅಥವಾ ಸಾಂಘಿಕ ಹೋರಾಟಕ್ಕೆ ತಯರಾಗುವುದೋ ಎಂಬ ಗೊಂದಲದಲ್ಲಿ ನಾವೆಲ್ಲಾ ಇದ್ದಂತಿದೆ. ಇವರನ್ನು ಇದಿರಿಸುವ ಶಕ್ತಿ ನಮ್ಮಲ್ಲಿ ಇಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕೇ? ಬೌದ್ಹಿಕವಾಗಿ ನಾವೆಲ್ಲ ಬರೆಯುವುದು, ಚರ್ಚಿಸುವುದು ಇದ್ದದ್ದೇ. ಆದರೆ ಬೆಳೆಯುವ ಕೋಮುವಾದವನ್ನು ತಡೆಗಟ್ಟುವುದು ಹೇಗೆ? ಕರಾವಳಿ ಕರ್ನಾಟಕದ ಜನ ನಾಯಕರು ಅನಿಸಿಕೊಂಡ ಶ್ರೀ, ಮೊಯಿಲಿ, ಆಸ್ಕರ್, ಪೂಜಾರಿ ಮೊದಲಾದವರ ಪ್ರತಿಕ್ರಿಯೆ ಇದಕ್ಕೆ ಏನು?
ಹೆಳವನ ಹೆಗಲ ಮೇಲೆ ಕುರುಡ ಕುಳಿತರೆ ಏನಾಗಬಹುದು? ನನಗಂತೂ ತಲೆ ಕೆಟ್ಟು ಹೋಗಿದೆ.
ಪುರುಷೋತ್ತಮ ಬಿಳಿಮಲೆ, ದೆಹಲಿ
image2no doubt, ಇಲ್ಲಿನ ಸನಾತನಿಗಳು ‘ನಾವು ತಾಲಿಬಾನಿಗಳ ಅಪ್ಪಂದಿರು’ ಅನ್ನುವುದನ್ನು ತೋರಿಸಿಕೊಳ್ಳಲು ಹೊರಟಂತಿದೆ. ಬುದ್ಧ, ಕನಕ, ಚಾಪ್ಲಿನ್, ಜಲಗಾರ, ಜಾಡಮಾಲಿಗಳನ್ನು ಮುಟ್ಟುವ ಮುಟ್ಟಿಸಿಕೊಳ್ಳುವ ತಾಕತ್ತಿನ್ನು ಈ ದೇಶದ ಗೊಡ್ಡು ಸನಾತನಿಗಳ ಎದೆಗಳಲ್ಲಿ ಹುಟ್ಟಿಕೊಂಡಿಲ್ಲ. ಬಿಟ್ಟಿ ತಿಂದು ಉಡುಪಿಯ ಮಠದ ಹಂದಿಗಳು ಮಾತ್ರ ಕೊಬ್ಬಿವೆ ಅಂದುಕೊಂಡಿದ್ದೆ, ಆದರೆ ಮಠದ ಗಟಾರದ ಪರಮ ಪವಿತ್ರ ತೀರ್ಥ ಕುಡಿದವರು ಇಷ್ಟು ವಿಕೃತರಾಗಬೇಕೆ?
ಜಾತಿಗೂ, ಮೈಬಣ್ಣಕ್ಕೂ , ಪ್ರತಿಭೆಗೂ ಒಂದಕ್ಕೊಂದು ಸಂಬಂಧವೇ ಇಲ್ಲ ಅನ್ನುವ ತಿಳಿವಳಿಕೆಯೇ ಈ ದೊಡ್ಡ ದೇಶಕ್ಕಿನ್ನು ಬಂದಿಲ್ಲ. ಯಾವತ್ತೋ ಶಿಲುಬೆಗೇರಿದ ಯೇಸು ಕ್ರಿಸ್ತನನ್ನೇ ಬಿಡದೆ ಶಿಲುಬೆಯಿಂದ ಎಳೆತಂದು ಮತ್ತೆ ಮತ್ತೆ ಕೊಂದವರಿಗೆ ಚಾಪ್ಲಿನ್ ಯಾವ ಲೆಕ್ಕ. ಜೋಗಿಯವರಿಗೆ ಲೇಖನದ ಜೊತೆಗೆ ತಮ್ಮ ಹಿಂದೂ ಐಡೆಂಟಿಟಿಯನ್ನು ಅಷ್ಟು ಉತ್ಸಾಹದಿಂದ ಹೇಳಿಕೊಳ್ಳುವ ಅಗತ್ಯವಿತ್ತೇ?
-ಕೆ.ಎಲ್.ಚಂದ್ರಶೇಖರ್ ಐಜೂರ್
image2ಜೋಗಿಯವರೆ,
ಚಾಪ್ಲಿನ್ ಘಟನೆ ನಾಚಿಕೆಗೇಡು. ತಲೆತಗ್ಗಿಸುವ ಹಾಗಾಗಿದೆ.
ದಯವಿಟ್ಟು ಇನ್ನೂ ಹೆಚ್ಚಿಗೆ ಬರೀರಿ ಇಂಥದರ ಬಗ್ಗೆ.

ಹಯ್ಯೊ, ಈಗಲೆ ಹಿಟ್ಲರನ ಮಕ್ಕಳು ಎಲ್ಲ ಕಡೆ ತಲೆಯೆತ್ತಿ ಅಬ್ಬರಿಸೋಕೆ ಶುರುಹಚ್ಚಿದಾರೆ. ಇನ್ನುಹೀಗೇ ಮುಂದುವರೆದರೆ ನಾವೆಲ್ಲ ಯಹೂದಿಗಳಿಗೆ ಇಶ್ಯೂ ಮಾಡಿದ ಸ್ಟಾರ್ ಬ್ಯಾಡ್ಜುಗಳ ಥರೆ ಜಾತಿವಾರು ಐಡೆಂಟಿಫಿಕೇಶನ್ ಬ್ಯಾಡ್ಜುಗಳನ್ನ ಧರಿಸಿ ಓಡಾಡಬೇಕಾಗಿ ಬಂದರು ಆಶ್ಚರ್ಯ ಏನಿಲ್ಲ. ಇದನ್ನು ನಾವೆ ವೋಟು ಹಾಕಿ ಕುರ್ಚಿ ಏರಿದವರು ಸುಮ್ಮನೆ ಕೂತು ನೋಡುತ್ತಾರೆ. ಎಲ್ಲ ಢಮಾಕ್ರಸಿಯ ಲೀಲೆಗಳು!! ನೀವು ಹೇಳಿದ ಹಾಗೆ ನಾವು ತಣ್ಣಗೆ ಶಿಲಾಯುಗಕ್ಕೆ ಮರಳಿದರೇ ಒಳ್ಳೆಯದು ಅಂತ ಕಾಣತ್ತೆ. ವಿ ಡಿಸರ್ವ್ ಇಟ್.
ಖೇದವಾಗುತ್ತಿದೆ.

ಟೀನಾ
image2ಜೋಗೀ,
ಇದೇನಿದು? ಕಂಪ್ಯೂಟರಿನಲ್ಲಿ ಟೈಪ್ ಮಾಡಿ ಕಳಿಸಿದ್ದೀರಾ? ನಾನು ಕೂಡ ಕಂಪ್ಯೂಟರಿನಲ್ಲಿ ಓದುತ್ತಿದ್ದೇನೆ? ಜ್ಙಾನ ಮಸ್ತಕದಿಂದ ಮಸ್ತಕಕ್ಕೆ ಹರಿಯಬೇಕೇ ಹೊರತು, ಮಸ್ತಕದಿಂದ ಕಂಪ್ಯೂಟರಿಗೆ, ಕಂಪ್ಯೂಟರಿನಿಂದ ಮಸ್ತಕಕ್ಕೆ ಬರಕೂಡದು. ಇದೇ ಕೊನೆ, ನನಗೆ ಗೊತ್ತು, ನೀವಿನ್ನೆಂದೂ ಕಂಪ್ಯೂಟರಿಗೆ ನಿಮ್ಮ ಬರಹ ಕಳಿಸಲಾರಿರಿ, ನಾನೂ ಕೂಡ ಕಂಪ್ಯೂಟರಿನಲ್ಲಿ ಓದುವ ಮಾತೇ ಇಲ್ಲ.

ಏಕೆಂದರೆ ನಿಮ್ಮ ಬರಹ ನನ್ನ ಕಣ್ಣನ್ನು ಪೂರ್ತಿ ತೆರೆಸಿದೆ, ನಾನು ನಿಮಗೆ ಚಿರಋಣಿಯಾಗಿರುತ್ತೇನೆ. ಏನು ಗುರುದಕ್ಷಿಣೆ ಬೇಕೋ ಕೇಳಿ, ಕೊಡುತ್ತೇನೆ. ಚಾಪ್ಲಿನ್ನ ನೆಪದಲ್ಲಿ ನಿಮ್ಮ ಕಣ್ಣು ತೆರೆಸಿದ ಈ ಮಹನೀಯರುಗಳಿಗೆ, ಅವರ ದೆಸೆಯಿಂದ ನಮ್ಮ ಕಣ್ಣು ತೆರೆಸಿದ ನಿಮಗೆ ನಮೋನಮಃ. ನನ್ನ ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಹೇಗೆ ಎಂದು ಅಳುತ್ತ ಕೂತಿದ್ದೇನೆ.

– ಕೇಶವ

image2ಅಯ್ಯೋ ರಾಮ ರಾಮಾ… ದೇವರೇ…. ನಾನು ಇನ್ನು ಮೇಲೆ ಕಿರಿಸ್ತಾನರ ಈ ಸಮೃದ್ಧ ದೇಶದಲ್ಲೇ ಸಿಕ್ಕಿಬಿದ್ದೆನೆ? ನಡೆದುಕೊಂಡು ಊರು ಸೇರಲೂ ಸಾಧ್ಯವಿಲ್ಲವೆ? ಭಗವಂತಾ ಹನುಮಂತಾ, ಒಮ್ಮೆ ಬಂದು ನನ್ನನ್ನೂ ನನ್ನ ಗಂಡನನ್ನೂ ಈ ದೇಶದಿಂದ ಹೊತ್ತುಕೊಂಡು ಹೋಗಿ ನಮ್ಮ ಭರತ ಭೂಮಿಯ ಪುಣ್ಯನೆಲದಲ್ಲಿ ಇಳಿಸಿಬಿಡಪ್ಪಾ. ಅಲ್ಲಿಗೆ ಸೇರಿದ ಮೇಲೆ, ಅಲ್ಲಿಯ ಮಣ್ಣಿನಲ್ಲೇ ಬೆಳೆದ ನೂರೆಂಟು ಬಾಳೆಹಣ್ಣುಗಳನ್ನು ನಿನಗೆ ಅರ್ಪಿಸುತ್ತೇನೆ.
ಈ ಜ್ಞಾನೋದಯ ನೀಡಿದ ಗುರುಃಬ್ರಹ್ಮ ಜೋಗಿಯವರೇ, ನಿಮ್ಮಡಿಗೂ ಹೊಸದೊಂದು ಪಾದುಕೆ ಅರ್ಪಿಸುತ್ತೇನೆ.
ಸುಪ್ತದೀಪ್ತಿ


‍ಲೇಖಕರು avadhi

March 15, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

4 ಪ್ರತಿಕ್ರಿಯೆಗಳು

 1. Chetana Teerthahalli

  ಜೋಗಿ,
  ಕ್ಷಕಿರಣ ಬ್ಲಾಗ್ ನೊಡುವ ಮುನ್ನ ’ಸನಾತನಿ’ಗಳಾಗಲೀ ’ವಾನರ ಸೇನ’ಯವರಾಗಲೀ ’ಚಡ್ಡಿ’ಮಂದಿಯಾಗಲೀ ಅಲ್ಲದ ಸ್ನೇಹಿತರಿಂದ ಘಟನೆಯ ಸತ್ಯಾಸತ್ಯತೆಯ ಬಗ್ಗೆ ಮಾತಾಡಿದ್ದೆ.
  ಯಾಕೆ ಜೋಗಿ? ಹಾದಿ ತಪ್ಪಿಸುವ ಆರೋಪಗಳನ್ನು ಹೊರಿಸುವ ಕೆಲಸ ಯಾಕೆ ನಡೆಯುತ್ತಿದೆ ಈಚೀಚೆಗೆ? ಹೀಗೆ ಜನರನ್ನು ಒಡೆಯುವ ಕೆಲಸ ಈ ಮೊದಲು ವಿಜಯ ಕರ್ನಾಟಕ (ಕೆಲವು ಲೇಖಕರು-ಲೇಖನಗಳ ಮೂಲಕ) ಮಾತ್ರ ಮಾಡುತ್ತಿತ್ತು. ಅವರಿಗೆ ಪೈಪೋಟಿ ನೀಡುವ ಹೊಣೆ ಯಾಕೆ ಹೊತ್ತಿರಿ? ಜನರನ್ನ ಒಡೆಯುವ ಖುಷಿ ಆ ಕ್ಷಣದ್ದು ಮಾತ್ರ. ದಯವಿಟ್ಟು ಇಂಥದನ್ನ ಮಾಡಬೇಡಿ ಅನ್ನೋದು ನನ್ನ ಕಳಕಳಿಯ ವಿನಂತಿ.
  ಚಾರ್ಲಿಯಂತಹ ಜಗತ್ಪ್ರತಿಭೆಯನ್ನು ಜಾತಿ- ದೇಶಗಳ ಅಳತೆಗೋಲಿನಿಂದ ಅಳೆಯುವುದಾದರೆ ಅಂತಹವರನ್ನ ಕ್ಯಾಕರಿಸಿ ಉಗಿದೇನು (ಅಕ್ಷರಶಃ). ಹಾಗೆಂದು ಅನಿಷ್ಠಕ್ಕೆಲ್ಲ ಶನೀಶ್ವರ ಕಾರಣ ಎನ್ನುತ್ತ ಮಾತುಮಾತಿಗೂ ’ಹಿಂದುತ್ವ’ದತ್ತ ಬೊಟ್ಟು ಮಾಡುತ್ತ ’ಅವಾಸ್ತವ’ಸಂಗತಿ, ಸುಳ್ಳು ಮಾಹಿತಿಗಳನ್ನು ಸಾಂಕ್ರಾಮಿಕ ರೋಗದಂತೆ ಹಬ್ಬಿಸುತ್ತ ಹೋಗುವುದನ್ನು, ಹೋಗುವವರನ್ನು ಕಂಡೂ ಸುಮ್ಮನಿರಲು ಸಾಧ್ಯವೇ ಇಲ್ಲ ನನ್ನಿಂದ.
  ಅಭಿಪ್ರಾಯ ಸ್ವತಂತ್ರ್ಯ ಕಸಿದುಕೊಂಡಿರುವ ಬ್ಲಾಗಿಗರ ಮಧ್ಯೆ ಇರುವುದು ಬೇಡವೆಂದು, ಬ್ಲಾಗಿನಲ್ಲಿ ವಿಚಾರಕ್ಕೆ ಬದಲಾಗಿ ದೊರೆತ ವೈಯಕ್ತಿಕ ನಿಂದನೆಗಳಿಂದ ನೊಂದು, ಬ್ಲಾಗ್ ಸಹವಾಸದಿಂದ ದೂರವಾಗಿದ್ದೆ.
  ಏನು ಮಾಡಲಿ? ಇದು ಸರಿ ಅನಿಸದೆ ಹೋದಮೆಲೂ ಪ್ರತಿಕ್ರಿಯಿಸದೆ ಇರುವುದು ಸಾಧ್ಯವಾಗಲಿಲ್ಲ.
  ನೀವೂ ಒಡೆಯುವ ಕೆಲಸ ಮಾಡುತ್ತ ಹೋದರೆ ವ್ಯತ್ಯಾಸ ಉಳಿಯುವುದಿಲ್ಲ.
  ದಯವಿಟ್ಟು ಈ ಬಗ್ಗೆ ಯೋಚಿಸಿ (ಸಮಯವಿದ್ದರೆ).
  ಪ್ರೀತಿಯಿಂದ,
  ಚೇತನಾ ತೀರ್ಥಹಳ್ಳಿ

  ಪ್ರತಿಕ್ರಿಯೆ
 2. kaligananath Gudadur

  ಪಾಠ ಕಲಿಸುವ ಸಮಯ…
  ಜೋಗಿ ಸರ್, ಬಲು ಜೋರು ಬರೆದಿದ್ದೀರಿ. ಇನ್ನೂ ನಾವೆಲ್ಲಾ ಒಂದಾಗಿ ಈ ಸನಾತನಿ ಸುಡೋ ಹಿಂದೂವಾದಿಗಳಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಕಲಾವಿದ, ಸಾಹಿತಿ, ಹೋರಾಟಗಾರ, ಪತ್ರಕರ್ತರನ್ನು ಅಷ್ಟಾಗಿಯೂ ಜನಸಾಮಾನ್ಯರು ಅವನ ಜಾತಿಯಿಂದ ಗುರುತಿಸಲು ಇಷ್ಟಪಡಲಾರರು. ಅದರಲ್ಲೂ ಲೆಜೆಂಡ್ಗಳನ್ನು ಅದ್ಹೇಗೆ ಜಾತಿ, ಜನಾಂಗ, ಬಣ್ಣ, ಪ್ರದೇಶ, ಧರ್ಮ, ದೇಶ ಎಂದು ಗುರುತಿಸಲಾದೀತು. ಈ ಮೂರ್ಖರು ಕೇವಲ ದಕ್ಷಿಣ ಕನ್ನಡದಲ್ಲಷ್ಟೆ ಅಲ್ಲ; ಅಂಥವರನ್ನು ಪೋಷಿಸುವ ಪಕ್ಷ, ಸಕರ್ಾರಗಳೇ ಇರುವಾಗ ಇವರು ಇಲ್ಲದ ಜಾಗೆಯಿಲ್ಲ. ಕೆಲವೇ ದಿನಗಳಲ್ಲಿ ಮಹಾನ್ ರಾಷ್ಟ್ರ ನಾಯಕರ ಸಾಲಿನಲ್ಲಿ ಯಡಿಯೂರಪ್ಪ, ಅಡ್ವಾಣಿ, ವಾಜಪೇಯಿ, ಮೋದಿ, ಬಾಳಠಾಕ್ರೆ, ಮುತಾಲಿಕ್, ತೊಗಾಡಿಯಾ ಸೇರಿದಂತೆ ಸಂಘ ಪರಿವಾರದ ಮುಖಂಡರ ಫೋಟೊಗಳನ್ನು ಎಲ್ಲಾ ಸಕರ್ಾರಿ ಮತ್ತು ಸಾರ್ವಜನಿಕ ಕೇಂದ್ರ ಹಾಗೂ ಕಚೇರಿಗಳಲ್ಲಿ ಕಡ್ಡಾಯವಾಗಿ ಜೋತುಬೀಳಿಸಬೇಕು ಎಂಬ ಆರ್ಡರ್ ಬಂದರೂ ಅಚ್ಚರಿಪಡಬೇಕಿಲ್ಲ. ನಿಮ್ಮ ನೇರ, ಇರಿಯುವ ಬರೆಹದಿಂದ ನಮ್ಮೆಲ್ಲರಲ್ಲೂ ಚೈತನ್ಯ ತುಂಬಿದೆ. ಕೇವಲ ಬರೆಹದ ಮೂಲಕ ಸಾವಿರ ಪುಟಗಳಲ್ಲಿ ಬರೆದರೂ ಇಂಥಹ ಮೂಢರ ಮನಸ್ಸು ಬದಲಾದೀತು ಎಂದು ಬಯಸುವುದೂ ತಪ್ಪು. ಸಾಧ್ಯವಿದ್ದರೆ ನಾವೆಲ್ಲರೂ ಬೀದಿಗಿಳಿದು ಸನಾತನಿಗಳ ಕಿವಿಹಿಂಡುವ ಕಾಲ ಸನ್ನಿಹಿತವಾಗಿದೆ. ಇಲ್ಲದಿದ್ದರೆ ಕೇವಲ ಹೇಮಂತ ಹೆಗಡೆಗೆ ಕೇಳಿದ ಪ್ರಶ್ನೆ ನಮ್ಮ ಪ್ರತಿ ಮಾತಿಗೂ, ಅಕ್ಷರ, ಸೀನು, ಉಗುಳು ಏನೆಲ್ಲಾ ಕ್ರಿಯೆಗಳಿಗೂ ಅನ್ವಯಿಸಿದರೂ ಅಚ್ಚರಿಪಡಬೇಕಿಲ್ಲ. ನೋಡಿ, ಆಕ್ಟಿವಿಸ್ಟ್ ರೀತಿಯಲ್ಲಿ ಕೆಲಸ ಮಾಡಿದರೆ ಮಾತ್ರ ಏನಾದರೂ ಸಾಧ್ಯವಾದೀತು. ಇಲ್ಲವಾದರೆ ನಮ್ಮನ್ನೆಲ್ಲಾ ಏನೋ ಬರೆತಾವೆ… ಬೊಗಳ್ತಾವೆ… ನಮಗೇನೂ ಆಗಲ್ಲ ಎಂದು ಉಗುಳಿದರೂ ಮುಖ ಒರೆಸಿಕೊಳ್ಳುವ ಭಂಡರು ಭಾವಿಸುವುದರಲ್ಲಿ ಅನುಮಾನವಿಲ್ಲ.
  ಅನ್ನಿಸಿದ್ದನ್ನೆಲ್ಲಾ ಬರೆದುಬಿಟ್ಟೆ…
  -ಕಲಿಗಣನಾಥ ಗುಡದೂರು

  ಪ್ರತಿಕ್ರಿಯೆ
 3. Anikethana

  ಚೇತನಾಜಿ,
  ತಾವು ಜೋಗಿಯವರ ಮುಂದಿಟ್ಟ ಪ್ರೀತಿಯ ಕೊರಿಕೆಗೆಗಳಿಗೆ,ನನ್ನ ಸಂಪೂರ್ಣ ಸಹಮತವಿದೆ.
  ಜೋಗಿಯವರಂಥ ಜವಾಬ್ದಾರಿಯುತ, ಪ್ರತಿಭಾವಂತ ಬರಹಗಾರರು, ಪ್ರೀತಿಯನ್ನ ಎರಕ ಹೊಯ್ದು ಹೃದಯಗಳನ್ನ ಬೆಸೆಯುವ ಸಾಮರ್ಥ್ಯ ಇರುವವರು ಸ್ವಲ್ಪ ಭಿನ್ನವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕಿದೆ.
  ದಯವಿಟ್ಟು ಕಾಳಜಿ ವಹಿಸಿ ನಮ್ಮೆಲ್ಲರ ಮನಸ್ಸುಗಳ ಬಗ್ಗೆ.
  ಸುನಿಲ್.

  ಪ್ರತಿಕ್ರಿಯೆ
 4. suptadeepti

  ಪೂರ್ಣ ವಿಷಯ ತಿಳಿಯದೆ, ಅವಸರದಿಂದ ಪ್ರತಿಕ್ರಿಯಿಸಿ ಈಗ ನಾಲಿಗೆ ಕಚ್ಚಿಕೊಳ್ಳುತ್ತಿದ್ದೇನೆ. ‘ಅರೆತಿಳುವಳಿಕೆ ಅಪಾಯಕಾರಿ’ ಅನ್ನುವುದಕ್ಕೆ ಮತ್ತೊಂದು ಉದಾಹರಣೆ ಈ ಘಟನೆ ಮತ್ತು ಪ್ರತಿಕ್ರಿಯೆಗಳು.
  ಜೋಗಿ ಸರ್, ವಿಷಯವನ್ನು ಸರಿಯಾಗಿ, ಪೂರ್ತಿಯಾಗಿ ಬರೆಯುವ ಕರ್ತವ್ಯ ನಿಮ್ಮದೂ ಆಗಿತ್ತಲ್ಲ. ನೀವೊಬ್ಬ ಜವಾಬ್ದಾರಿಯುತ ಪತ್ರಕರ್ತರು ತಾನೇ. ಇನ್ನು ಹೀಗಾಗದಿರಲಿ, ಪ್ಲೀಸ್.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: