ಚರ್ಚೆ ಶುರುವಾಗಿರೋದು ಬಲೇ ಒಳ್ಳೇದು…

ಬ್ಲಾಗ್ ಲೋಕದ ಬೇಜವಾಬ್ದಾರಿ ಕಾಮೆಂಟ್ ಗಳ ಬಗ್ಗೆ ಪ್ರಕಟಿಸಿದ ಆತಂಕಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಗಂಭೀರ ಬ್ಲಾಗಿಗರು ಈ ವಿಷಯವನ್ನು ಮತ್ತಷ್ಟು ಮುಂದುವರೆಸಿದ್ದಾರೆ.

ಬನ್ನಿ ಚರ್ಚೆಯಲ್ಲಿ ಪಾಲ್ಗೊಳ್ಳಿ. ಬ್ಲಾಗ್ ಲೋಕದಲ್ಲಿ ಒಂದಿಷ್ಟು ತಂಗಾಳಿ ಹರಡಲಿ

i_hate_this-i_hate_that

ಟೀನಾ

ಶಶಿಧರ ಭಟ್ಟರು ಪ್ರತಿಕ್ರಿಯಿಸಿರೋದು ಒಂದು ರೀತಿಯಲ್ಲಿ ಸರಿ ಅನ್ನಿಸಿದ್ರೂನು

ನಮ್ಮೆದ್ರಿಗೇ ನಮ್ಮನೇಗೆ ಬಂದು ಅಸಹ್ಯವಾಗಾಡುವವರ ವಿರುದ್ಧ ನಾವು ಸುಮ್ಮನಿರಲಿಕ್ಕಾಗುತ್ತದೆಯೆ ಅಂತ ಯೋಚನೆ ಬಂತು.

ನನ್ನ ಬ್ಲಾಗಿನಲ್ಲಿ ಕೆಲಕಾಲದ ಹಿಂದೆ ಇಂತಹ ಪರಿಸ್ಟಿತಿ ಬಂದಿತ್ತು. ನನ್ನ ಹೆಚ್ಚಿನ ಸ್ನೇಹಿತರು ಇಂತಹ ಕಮೆಂಟುಗಳನ್ನು ಇಗ್ನೋರ್ ಮಾಡುವದನ್ನ ಅರಿತಿದ್ದ ನಾನು ಮೊದಲ ಬಾರಿಗೆ ಪ್ರತಿಭಟಿಸುವ ಸಾಹಸ ಮಾಡಿದೆ. ನನ್ನ ಅನೇಕ ಬ್ಲಾಗರ್ ಗೆಳೆಯ ಗೆಳತಿಯರು ಜತೆ ಕೊಟ್ಟರು.ವಿಪರ್ಯಾಸ ಅಂದರೆ ಈ ಹೊತ್ತಿಗೇ ಮಾಧ್ಯಮದಲ್ಲೆ ಇರುವ ಹಿರಿಯ ಬ್ಲಾಗರ್ ಸ್ನೇಹಿತರೊಬ್ಬರು ’ನಿಮ್ಮ ಬ್ಲಾಗಿಗೊಂದು ಲುಕ್ ಇದೆ, ಇಂತಹದ್ದನ್ನೆಲ್ಲ ಮಾಡಿ ಅದನ್ನ ಕೆಡಿಸ್ಕೋಬೇಡಿ!’ ಎಂಬ ಸಲಹೆ ನೀಡಿದರು. ಕೆಲವರಿಂದ ಇಂತಹದ್ದನ್ನ ಮಾಡಿ ಕೆಸರು ಸಿಡಿಸಿಕೊಳ್ಳುವದು ಏಕೆ ಅನ್ನುವಂತಹ ಅರ್ಥದ ಮಾತೂ ಬಂತು. ಬ್ಲಾಗ್ ಟ್ರಾಫಿಕ್ ಜಾಸ್ತಿ ಮಾಡಿಕೊಳ್ಳುವದೇ ಉದ್ದೇಶವಾದರೆ ಇನ್ನೂ ಸ್ಲೀಜೀ ವಿಷಯಗಳ ಬಗ್ಗೆ ಬರೆದುಕೊಳ್ಳಬಹುದು. ನನ್ನ ಉದ್ದೇಶ ಪ್ರತಿಭಟನೆಯಷ್ಟೇ ಆಗಿದ್ದಿತ್ತು.

ಆದರೆ ಅಂದಿನ ಪ್ರತಿಭಟನೆಯ ನಂತರ ನನಗೆ ಒಂದು ಅಶ್ಲೀಲ,ಅಬ್ಯೂಸಿವ್ ಕಮೆಂಟು ಬರಲಿಲ್ಲ ಅನ್ನುವದು ನನಗೆ ಸಮಾಧಾನ ಕೊಟ್ಟ ವಿಷಯ. ಎದುರಿಸದೆ ನಾವು ತೊಂದರೆಯನ್ನು ಪರಿಹರಿಸಿಕೊಳ್ಳುತ್ತೇವೆ ಅನ್ನುವದು ಆಗದ ಹೋಗದ ವಿಷಯ. ನೀತಿ ಸಂಹಿತೆಗಳು ಯಾವುದೇ ಜಾಗದಲ್ಲಿ ಲಾಗೂ ಆಗುವಾಗಲೇನೋ ಚೆನ್ನಾಗಿರುತ್ತವೆ. ಆದರೆ ತಿರುಚುವ ಕಲೆಯನ್ನು ಚೆನ್ನಾಗಿ ಬಲ್ಲ ಜಾಣರು ಅದರ ಆಶಯವನ್ನೆ ಉಲ್ಟಾ ಮಾಡಿಬಿಡುವ ಸಾಧ್ಯತೆಗಳು ಇವೆ!!

ಎಲ್ಲಕಿಂತ ಮೊದಲು ನಾವು ಸುಮ್ಮನಿರದೆ ಇದರ ಬಗ್ಗೆ ದನಿಯೆತ್ತುವಾಗ ಬ್ಲಾಗ್ ಲೋಕದ ಗ್ರೂಪಿಸಮ್ಮು, ಭಿನ್ನಾಭಿಪ್ರಾಯಗಳನ್ನ ಮರೆತು ಎಲ್ಲರೂ ಒಬ್ಬರಿಗೊಬ್ಬರು ಜತೆ ಕೊಡುವದು ಒಳ್ಳೆಯದು. ಯಾವುದೆ ನೀತಿಸಂಹಿತೆ ಇಲ್ಲದೇನೆ 95% ಬ್ಲಾಗರುಗಳು ಇಲ್ಲಿಯತನಕ ಬರೆಯುತ್ತ ಬಂದಿದಾರೆ, ಒಳ್ಳೆಯ ಬರಹಗಳು ಹೊರಹೊಮ್ಮಿವೆ. ರೆಸ್ಪಾನ್ಸಿಬಲ್ ಕಮೆಂಟಿಂಗಿನ ಬಗ್ಗೆ ನಮ್ಮಲ್ಲಿ ಚರ್ಚೆ ಶುರುವಾಗಿರೋದು ಬಲೇ ಒಳ್ಳೇದು

‍ಲೇಖಕರು avadhi

August 20, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

2 ಪ್ರತಿಕ್ರಿಯೆಗಳು

 1. ಶ್ರೀವತ್ಸ ಜೋಶಿ

  ಮೋಹನ್, ನಮಸ್ಕಾರ.

  “ಬ್ಲಾಗ್ ಲೋಕದ ಹೂಳೆತ್ತುವಿಕೆ”ಗೆ ಸಂಬಂಧಪಟ್ಟಂತೆ ನಿಮ್ಮ ಮೂಲ ಲೇಖನ
  ಮತ್ತು ಅದಕ್ಕೆ ಬಂದಿರುವ ಎಲ್ಲ ಪ್ರತಿಕ್ರಿಯೆಗಳನ್ನೂ ಒಂದೇ ಕಡೆ consolidate
  ಮಾಡಿ ಪ್ರಕಟಿಸುವುದು ಸಾಧ್ಯವೇ? ಈಗ ಇಲ್ಲಿ ಎಲ್ಲ ಚಲ್ಲಾಪಿಲ್ಲಿಯಾಗಿ ಇವೆ,
  ಕೆಲವು ರಿಪೀಟ್ ಆಗಿವೆ. ಗೊಂದಲದ ಗೂಡಾಗಿದೆ. ಸ್ವಲ್ಪ attentionಇಸುತ್ತೀರಾ?

  ಪ್ರತಿಕ್ರಿಯೆ
 2. ಶ್ರೀನಿವಾಸಗೌಡ

  ಈ ಅನಾನಿಮಸ್ ಅನ್ನೊದು ಒಂದಷ್ಠು ಸ್ವಾತಂತ್ರವನ್ನ ಕಲ್ಪಿಸಿಕೊಡುತ್ತದೆ ಅನ್ನೊದನ್ನ ಎಲ್ಲಾರು ಒಪ್ಪುವಂತದೇ, ಆದರೆ ಅನಾನಿಮಸ್ ಹೆಸರಲ್ಲಿ ಒಳ್ಳೇ ಚರ್ಚೆ ಹುಟ್ಟುಹಾಕಲಿ, ಅದು ಬಿಟ್ಟ ಮತ್ತೋಬ್ಬರ ಮೇಲೆ ವಿಪರೀತ ಟೀಕೆ , ಬೈಗುಳ ಮಾಡೋದು ಸರಿ ಅಲ್ಲ ಅಲ್ಲವಾ. ಬ್ಲಾಗ್ ನಲ್ಲಿ ಬರೆದದ್ದೂ ಅಲ್ಲದೆ ಯಾರ್ಯಾರೋ ಅನಾನಿ ಗಳು ಕಳಿಸಿದ ಕಾಮೆಂಟ್ ಗಳನ್ನು ಪ್ರಕಟಿಸಿ ವಿಕೃತ ಸಂತೋಷ ಪಡೆಯೋದು ತಪ್ಪು ಅನಿಸುತ್ತೆ, ಕನ್ನಡದಲ್ಲಿ ಈಗ ತಾನೆ ಹೆಚ್ಚುತ್ತಿರುವ ಬ್ಲಾಗ್ ಲೋಕದಲ್ಲಿ ಬೇಗ ಒಳ್ಳೆ ಚರ್ಚೆ ಆರಂಭವಾಗಿದೆ. ಎಲ್ಲರೂ ಸೇರಿದರೆ ಏನಾದರೊಂದು ಮಾರ್ಗ ಇದ್ದೆ ಇರತ್ತೆ.

  ಅನಾನಿಮಸ್ ಬ್ಲಾಗ್ ಬಗ್ಗೆ ಹೆಂಗಪ್ಪಾ ತಿಳಿದುಕೊಳ್ಳೋದು ಅಂತ ಗೂಗ್ಲ್ ಮಾಡಿದಾಗ ಸಿಕ್ಕ ಸುದ್ದಿ ತುಣುಕು ಇದು. ಗೂಗಲ್ ಕೂಡ ಈಗ ಅನಾನಿಮಸ್ ಬ್ಲಾಗ್ ಮಾಡಿದವರ ಐಡಿ ಕೊಡಬೇಕು ಅಂತ ಅಮೆರಿಕದ ಸುಪ್ರಿಂ ಕೋರ್ಟ್ ಹೇಳಿದೆ. ನಮ್ಮಲ್ಲೂ ಯಾರಾದರೂ ರೊಚ್ಚಿಗೆದ್ದು ಕಾನೂನಿನ ಮೊರೆ ಹೋದರೆ ಹಾವಳಿ ತಡೆಯಲು ಸಾದ್ಯವೇನೋ.
  ಸುದ್ದಿಯ ಲಿಂಕ್ ಇಲ್ಲಿದೆ.
  http://www.nationalpost.com/news/story.html?id=1910409

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: