ಚಾಪ್ಲಿನ್ ಗೊಂದು ಪತ್ರ

sjolander_chaplin_cover_portfolio_1973
ಪ್ರಿಯ ಚಾಪ್ಲಿನ್,
ಹೇಗಿದ್ದಿ ಮಾರಾಯ? ಮಳೆಯಲ್ಲಿ ಕಣ್ಣೀರಾದರೆ ಬೇರೆಯವರಿಗೆ ಕಾಣದೆಂದು ತಿಳಿದು ನಡೆದ ನೀನು ಸ್ವರ್ಗವನ್ನು ಕ್ಷಣಕ್ಕೂ ಇಷ್ಟಪಟ್ಟಿರಲಾರೆ ಬಿಡು. ನಾನು ಸಣ್ಣ ಹುಡುಗನಾಗಿದ್ದಾಗ ಈ ರಾಮಾಯಣ ಮಹಾಭಾರತಗಳನ್ನು ಅತಿ ರಂಜಕವಾಗಿ ಟಿವಿಗಳಲ್ಲಿ ತೋರಿಸುತ್ತಿದ್ದ ದಿನಗಳಲ್ಲೇ ನಿನ್ನನ್ನು ಮೊದಲು ಕಂಡದ್ದು.ಅವತ್ತು ನೋಡಿದ ರಾಮಾಯಣ ಮಹಾಭಾರತಗಳ ಪುಣ್ಯ ಪುರುಷರು ನನ್ನೊಳಗೆ ಎಷ್ಟು ಉಳಿದಿದ್ದಾರೋ ಗೊತ್ತಿಲ್ಲ? ಆದರೆ ಚಾಪ್ಲಿನ್ ಹೇಳಿ ಕೇಳಿ ಇದು ತಾಯಾಣೆ ದೇವ್ರುದಿಂಡ್ರಾಣೆ ಇಟ್ರೆ ಎಂಥ ಕೊಲೆಪಾತಕತನವು ಮಾಫಿಯಾಗುವಂಥ ದೇಶ.
ಎಲ್ಲೋ ನಮ್ಮ ನೆನಪುಗಳಲ್ಲಿ ತನ್ನಪಾಡಿಗೆ ತಾನಿದ್ದ ನಿನ್ನನ್ನು ಈಗ ಇಲ್ಲಿನವರು statue ಮಾಡಲು ಹೊರಟಿದ್ದಾರೆ, ಜೊತೆಗೊಂದು ಕಂಡೀಷನ್: ಗೋಲ್ಗುಂಬಜ್ ಎದುರು ನಟ ನರಸಿಂಹರಾಜುವನ್ನೋ , ದ್ವಾರಕೀಶರನ್ನೋ ಅಥವಾ ತೆನಾಲಿ ರಾಮಕ್ರಿಷ್ಣನನ್ನೋ ಅಡ್ಡಡ್ಡ ಉದ್ದುದ್ದಾ ಪ್ರತಿಷ್ಠಾಪಿಸಿದರೆ ನಿನ್ನನ್ನು ಎಲ್ಲಿಬೇಕಾದ್ರು ಎಷ್ಟುದ್ದ ಬೇಕಾದ್ರೂ ನಿಲ್ಲಿಸಬಹುದಂತೆ. ಖಂಡಿತ ನೀನಿದನ್ನು ಬಯಸಿರಲಾರೆ. ನಿನ್ನ ಪ್ರತಿಮೆ ರೂಪುಗೊಂಡ ತಕ್ಷಣ ಅದನ್ನು ವಿರೂಪಗೊಳಿಸುವ, ನಿನ್ನ ಹೆಸರನ್ನೇ ಬದಲಿಸಿ ಒಂದು ಹೊಸ ಬಗೆಯ ಅಫಿಡವಿಟ್ ತಯಾರುಮಾಡುವ ಕೆಲಸಗಳು ಇಲ್ಲಿ ಎಗ್ಗಿಲ್ಲದೆ ನಡೆಯುತ್ತವೆ.
ನಿನಗಿದೆಲ್ಲ ಬೇಕಾ ಚಾಪ್ಲಿನ್? ಹಿಟ್ಲರ್ ನನ್ನು  ಅಣಕಿಸಿ ಹಂಗಿಸಿ ಗೆದ್ದ ನಿನಗೆ ಇಲ್ಲಿನ ನಿಸ್ಸೀಮರನ್ನು ಅಷ್ಟು ಸುಲಭವಾಗಿ ಗೆಲ್ಲಲು ಸಾಧ್ಯವಿಲ್ಲ. ಮನುಷ್ಯರನ್ನು ವಂಚಿಸುವ, ಸುಟ್ಟು ಸುಲಿದು ತಿಂದುಹಾಕುವ ಹೊಸಬಗೆಯ ಕಲೆಗಳನ್ನು ಜಗತ್ತಿನ ಎಲ್ಲ ಮೂಲೆಯ ನೀಚರು ಇಲ್ಲಿಂದ ಈ ದೇಶದಿಂದ ಕಲಿಯುವುದು ಸಾಕಷ್ಟಿದೆ.
ಮಿತ್ರ ಚಾಪ್ಲಿನ್, ಧರ್ಮದ ಅಮೇಧ್ಯದಲ್ಲಿ ಹೂತುಹೋಗಿರುವ ಈ ದೇಶಕ್ಕೆ ನಿನ್ನನ್ನು ಮುಟ್ಟುವಷ್ಟು ಯೋಗ್ಯತೆ ಖಂಡಿತ ಇಲ್ಲ.
ನಮ್ಮ ನೆನಪುಗಳಲ್ಲಿ ಮಾತ್ರ ನೀನು evergreen…
-ಚಂದ್ರಶೇಖರ್ ಐಜೂರ್

‍ಲೇಖಕರು avadhi

March 17, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

22 ಪ್ರತಿಕ್ರಿಯೆಗಳು

 1. ಅಜಯ್

  ಪ್ರಿಯ ಐಜೂರ್, ಅಲ್ಲಿ ದ್ವಾರಕೀಶನ ಪ್ರತಿಮೆ ಅಡ್ಡಡ್ಡ ಉದ್ದುದ್ದಾ ಪ್ರತಿಷ್ಠಾಪಿಸಿದರೆ ಇಲ್ಲ್ಲಿ ಚಾಪ್ಲಿನ್ ಪ್ರತಿಮೆ ಮಾಡಬಹುದು ಅಂತ ಹೇಳಿದ್ದಲ್ಲ ಅದು. ಆ ರೀತಿ ಮಾಡಿದರೆ ಎಷ್ಟು ಅಸಂಬದ್ಧವಾಗುವುದೋ ಅದೇ ರೀತಿ ಇದೂ ಕೂಡ ಎಂಬ ಹೋಲಿಕೆ. ಸುಮ್ಮನೇ ಅರೆಬರೆ ತಿಳುವಳಿಕೆಯಿಂದ , ಪೂರ್ವಗ್ರಹದಿಂದ ಮಾತಾಡುವುದನ್ನು ಬಿಡಿ.

  ಪ್ರತಿಕ್ರಿಯೆ
 2. kumarsringeri

  daya vitu kshamisi, nanau compuntar hula halla,
  adaru respons maduthidene,
  charli chaplin na chaplige sama velada ayogyara, vichara galige computar blog na lekana uttara valla
  dandam dasagunam

  ಪ್ರತಿಕ್ರಿಯೆ
 3. Tejaswini

  ಚಂದ್ರಶೇಖರ್ ಅವರೆ,
  ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ಜನ್ಮಭೂಮಿಯ ಮುಂದೆ ದೊಡ್ಡವರು ಯಾರೂ ಅಲ್ಲ. ಅವರವರ ದೇಶ ಆ ದೇಶದ ನಿವಾಸಿಗಳಿಗೇ ದೊಡ್ಡದೇ ಆಗಿರುತ್ತದೆ. ಆಗಿರಬೇಕು. ವಿಶ್ವ ಮಾನವರಾಗುವ ಮೊದಲು ನಮ್ಮ ತಾಯ್ನಾಡನ್ನು ಗೌರವಿಸುವ, ಪ್ರೀತಿಸುವ ಮನೋಭಾವ ಇದ್ದಿರಬೇಕು. ಚಾಪ್ಲಿನ್ ನನಗೂ ಮೆಚ್ಚಿನ ವಿದೂಷಕನೇ. ಆದರೆ ಆತ ಭಾರತಕ್ಕಿಂತ ದೊಡ್ಡವನಲ್ಲ ನನಗೆ. ಆತನ್ನು ಕ್ರಿಶ್ಚಿಯನ್ ಎಂದೋ ಇಲ್ಲಾ ಇನ್ನಾವುದೋ ಕಾರಣಕ್ಕೆ ದೂಷೀಕರಿಸುವುದು ಖಂಡಿತ ತಪ್ಪು. ಒಪ್ಪುವೆ. ಆದರೆ ಈ ಆರೋಪದಲ್ಲಿ ಎಷ್ಟು ಹುರುಳಿದೆ ಎನ್ನುವುದೇ ಪ್ರಶ್ನೆ. ಕೆಲಸ ಆಗದವರು ಮೈಪರಚಿಕೊಳ್ಳುವಂತೆ ಈ ರೀತಿಯ ಊಹಾಪೂಹಗಳನ್ನು ಹಬ್ಬಿಸಿರಲೂ ಸಾಕು.
  ಶ್ರೀಮಾನ್ ಚಂದ್ರಶೇಖರ ಅವರೆ , “ಮನುಷ್ಯರನ್ನು ವಂಚಿಸುವ, ಸುಟ್ಟು ಸುಲಿದು ತಿಂದುಹಾಕುವ ಹೊಸಬಗೆಯ ಕಲೆಗಳನ್ನು ಜಗತ್ತಿನ ಎಲ್ಲ ಮೂಲೆಯ ನೀಚರು ಇಲ್ಲಿಂದ ಈ ದೇಶದಿಂದ ಕಲಿಯುವುದು ಸಾಕಷ್ಟಿದೆ.
  ಮಿತ್ರ ಚಾಪ್ಲಿನ್, ಧರ್ಮದ ಅಮೇಧ್ಯದಲ್ಲಿ ಹೂತುಹೋಗಿರುವ ಈ ದೇಶಕ್ಕೆ ನಿನ್ನನ್ನು ಮುಟ್ಟುವಷ್ಟು ಯೋಗ್ಯತೆ ಖಂಡಿತ ಇಲ್ಲ.” –
  ನಿಮ್ಮ ಈ ವೀರಾವೇಶದ ಮಾತುಗಳು ತುಂಬಾ ನಗು ತರಿಸಿದವು. ನೀವು ದೇಶವನ್ನು, ನಿಮ್ಮ ತಾಯ್ನೆಲವನ್ನು ಚಾಪ್ಲಿನ್‌ಗಿಂತ ಸಣ್ಣದೆಂದು, ಭಾರತಕ್ಕೇ ಯೋಗ್ಯತೆ ಇಲ್ಲವೆಂದು ಬರೆದುರುವುದನ್ನು ಓದಿ ನನಗೆ ತುಂಬಾ ಹಾಸ್ಯವೆನಿಸಿತು. ಸ್ವತಃ ಚಾಪ್ಲಿನ್ ಕೂಡಾ ಮರುಕಗೊಂಡು ನಕ್ಕಿರಬಹುದು ಈ ನಿಮ್ಮ ಬಾಲಿಶ ಬರಹದಿಂದ. ಬುಧ್ಧಿಜೀವಿಗಳ ಲಿಸ್ಟ್‌ನಲ್ಲಿ ತಾನೂ ಸೇರಿಕೊಳ್ಳಬೇಕು, ತನ್ನನ್ನೂ ಅಂತವರು ಗುರಿತಿಸಬೇಕೆಂಬ ಹೆಬ್ಬಾಶೆಯಲ್ಲಿ ಇಷ್ಟೊಂದು ಕೀಳಾಗಿ ಬರೆಯಬಾರದಿತ್ತು!! ಈ ದೇಶವೇ ಇಂದು ಇಲ್ಲಿದ್ದುಕೊಂಡೇ ತನ್ನ ಬಗ್ಗೆ ಇಷ್ಟೋಂದು ತುಚ್ಚವಾಗಿ ಮಾತಡುವ ಹಕ್ಕು, ಸ್ವಾತಂತ್ರ್ಯವನ್ನು ನಿಮಗೆ ಕೊಟ್ಟಿದೆ ಎಂಬುದನ್ನಾದರೂ ಮೊದಲು ತಿಳಿದುಕೊಳ್ಳಿ. ಆಮೇಲೆ ಈ ದೇಶದಿಂದ ನಾವೇನು ಕಲಿಯಬಹುದೆಂದು ಯೋಚಿಸಬಹುದು.

  ಪ್ರತಿಕ್ರಿಯೆ
 4. kallare

  ಚಂದ್ರಶೇಖರ್,
  ಬರೆಯುವ ಭರದಲ್ಲಿ ಏನು ಬರೆದಿದ್ದೀರಿ ಅಂತ ನೀವೇ ಒಮ್ಮೆ ನೋಡಿ. ’ಚಾಪ್ಲಿನ್’ನ ಹೊಗಳುವಾಗಿನ ನಿಮ್ಮ ಅಭಿಮಾನ ದೇಶವನ್ನು ತೆಗಳುವಾಗ ಎಲ್ಲಿ ಹೋಗಿತ್ತು ಸ್ವಾಮಿ? ನಿಮ್ಮನ್ನು ನೀವು ಸಮರ್ಥಿಸಿಕೊಳ್ಳಲು ಬೇಕಷ್ಟು ವಿಷಯ ಸಿಗಬಹುದು. ಆದರೆ ಅದಎಲ್ಲದರ ನಡುವೆ ನೀವೂ ಇದ್ದೀರಲ್ಲ? ಅದ್ಭುತವಾಗಿ ಬರೆದಿದ್ದೀರಿ ಸಾರ್….

  ಪ್ರತಿಕ್ರಿಯೆ
 5. paraanjape

  ಚ೦ದ್ರಶೇಖರರೇ,
  “ಧರ್ಮದ ಅಮೇಧ್ಯದಲ್ಲಿ ಹೂತುಹೋಗಿರುವ ಈ ದೇಶಕ್ಕೆ ನಿನ್ನನ್ನು ಮುಟ್ಟುವಷ್ಟು ಯೋಗ್ಯತೆ ಖಂಡಿತ ಇಲ್ಲ.” ಏನಿದರ ಅರ್ಥ. ಶುದ್ಧ ಅಸ೦ಬದ್ಧ . ಚಾಪ್ಲಿನ್ ಪ್ರತಿಮೆ ಸ್ಥಾಪನೆ ವಿಚಾರ ಒತ್ತಟ್ಟಿಗಿರಲಿ. ನಮ್ಮ ನಡುವಿನ ಕೆಲ ತಥಾಕಥಿತ ಬುದ್ಧಿಜೀವಿಗಳೆನಿಸಿರುವ ಅಥವಾ ಬುದ್ಧಿಜೀವಿಗಳೆ೦ದು ಹೇಳಿಕೊಳ್ಳ ಬಯಸುವ, ವಿಚಾರ ವಿಮರ್ಶೆ ಮಾಡುವ ವ್ಯವಧಾನ ಇಲ್ಲದವರು ಮಾತ್ರ ಇ೦ಥಹ ಯೋಚನೆ ಮಾಡಲು ಸಾಧ್ಯ. ಪ್ರತಿಯೊ೦ದನ್ನೂ ಜಾತಿಯ, ಧರ್ಮದ ಚೌಕಟ್ಟಿನಿ೦ದ ನೋಡುವ, ಪ್ರತಿಯೊ೦ದಕ್ಕೂ ಧರ್ಮದ ಲೇಬಲ್ ಹಚ್ಚುವ ಕೆಲಸವನ್ನು ನೀವು ಮತ್ತು ನಿಮ್ಮ ಸಮಾನಮನಸ್ಕರು ಹಿ೦ದೂ ಮತಾ೦ಧರಿಗಿ೦ತ ಹೆಚ್ಚಿಗೆ ಮಾಡುತ್ತಿದ್ದೀರಿ. ಸತ್ಯಾಸತ್ಯತೆಯ ಪರಿವೆ ಇಲ್ಲದೆ ಮಾಧ್ಯಮದ ಮೂಲಕ ಜನಸಾಮಾನ್ಯರನ್ನು ತಪ್ಪು ದಾರಿಗೆಳೆಯುವ ಯತ್ನ ಬಿಡಿ. ಸುಮ್ಮನೆ ಎಲ್ಲದಕ್ಕು ಜಾತಿ-ಧರ್ಮದ ಬಣ್ಣ ಬಲಿಯುವುದನ್ನು ನಿಲ್ಲಿಸಿ.

  ಪ್ರತಿಕ್ರಿಯೆ
 6. ಸಂದೀಪ್ ಕಾಮತ್

  ಧರ್ಮದ ಅಮೇಧ್ಯದಲ್ಲಿ ಹೂತುಹೋಗಿರುವ ದೇಶವನ್ನು ಬಿಟ್ಟು –
  ಜಗತ್ತಿನಲ್ಲಿಯೇ ಸುಂದರವಾದ ,ಭ್ರಷ್ಟಾಚಾರವಿಲ್ಲದ, ಕೋಮು ಗಲಬೆಗಳಿಲ್ಲದ ,ರೇಸಿಸಂ ಇಲ್ಲದ,ಭಯೋತ್ಪಾದನೆಯಿಲ್ಲದ,
  ಕೇವಲ ಪಾಸ್ ಪೋರ್ಟ್ನಲ್ಲಿ ಮುಸ್ಲಿಂ ಹೆಸರಿದೆ ಅನ್ನೋ ಕಾರಣಕ್ಕೆ ದೇಶದೊಳಗೆ ಪ್ರವೇಶ ನೀಡದಿರುವಂಥ ತಪ್ಪು ಮಾಡದ,ಸಿಖ್ ಜನರಿಗೆ ಟರ್ಬನ್ ಧರಿಸಲು ತೊಂದರೆ ಕೊಡದ
  ದೇಶಕ್ಕ ಹೋಗಿ ನೆಲೆಸಿ ಸ್ವಾಮಿ ಚಂದ್ರಶೇಖರರೇ.

  ಪ್ರತಿಕ್ರಿಯೆ
 7. chandrashekhar aijoor

  ಈ ದೇಶದ ಯೋಗ್ಯತೆಯ ಬಗ್ಗೆ ಈಗ ನಾನು ಸರ್ಟಿಫಿಕೇಟ್ ಕೊಡಬೇಕಿಲ್ಲ. ಅದನ್ನಾಗಲೇ ಕೊಡಬೇಕಾದವರು, ಕೊಡಬಲ್ಲವರು ಕಳೆದ ಎರಡೂವರೆ ಸಾವಿರ ವರ್ಷಗಳ ಹಿಂದಿನಿಂದಲೂ ಕೊಡುತ್ತಾ ಬಂದಿದ್ದಾರೆ. ಅದು ನಾಳೆಯೂ ಮುಂದುವರೆಯುತ್ತದೆ. ದೇಶಕ್ಕಿಂತ ಮನುಷ್ಯ ದೊಡ್ಡವನು; ಅವನ ವ್ಯಕ್ತಿತ್ವ ದೊಡ್ಡದು ಎಂದು ತಿಳಿದಿದ್ದರಿಂದಲೇ ನನಗೆ ಈ ದೇಶದ ಜುಜುಬಿ ಧರ್ಮಗಳಿಗಿಂತ ಯಾವತ್ತೋ ತೀರಿಕೊಂಡಿರುವ ಪುಡಿ ದೇವರುಗಳಿಗಿಂತ ಚಾಪ್ಲಿನ್ ದೊಡ್ಡವನಾಗಿ ಕಾಣುತ್ತಾನೆ. ಚಾಪ್ಲಿನ್ ಕ್ರಿಶ್ಚಿಯನ್ನೋ ಮತ್ತಂದೋ ಅನ್ನುವ ಕಾರಣಕ್ಕೆ ಅವನ ಪ್ರತಿಮೆಯನ್ನು ಇಲ್ಲಿ ನಿಲ್ಲಿಸುವುದು ಬೇಡ ಎಂದು ಹೊರಟವರು ವಾಸಿಯಾಗದ ಕಾಯಿಲೆಗೆ ಸಿಕ್ಕಿ ನರಳುತ್ತಿರುವಂತೆ ನನಗೆ ಕಾಣುತ್ತದೆ.
  ಇವತ್ತು ಚಾಪ್ಲಿನ್ ನಾಳೆ ಮಹಮ್ಮದ್ ಅಲಿ, ಮೈಕೆಲ್ ಜಾಕ್ಸನ್ ಎಂಬ ನಿಮ್ಮ ನಡುಕವೋ, ಆತ್ಮವಂಚನೆಯೋ ನನ್ನಲ್ಲಿ ನಗೆ ತರಿಸುತ್ತದೆ. ನನಗ್ಗೊತ್ತು, ನನ್ನ ಮನಸ್ಥಿತಿಯ ಜನ ಈ ಬ್ಲಾಗು, ವೆಬ್ ಜಗತ್ತಿನಲ್ಲಿ ತೀರಾ ಸಣ್ಣ ಸಂಖ್ಯೆಯಲ್ಲಿದ್ದಾರೆ. ಚಾಪ್ಲಿನ್ ಪ್ರತಿಮೆ ಬೇಕೋ ಬೇಡವೋ ಎಂದು ಬ್ಲಾಗ್ಗಳಲ್ಲಿ ಒಪಿನಿಯನ್ ಪೋಲ್ ತಯಾರು ಮಾಡಲು ಬಿಟ್ಟರೆ ಗೆಲ್ಲುವುದೇ ನೀವು. ಈ ಸಂಗತಿ ಅವಧಿಯ ಸೃಷ್ಟಿಕರ್ತರಿಗಷ್ಟೇ ಅಲ್ಲ, ಇಂಡಿಯಾದ ಎಲ್ಲ ಬ್ಲಾಗುಗಳ ಮಾಲೀಕರಿಗೂ ಗೊತ್ತು.
  ನೀವು ಶಿಲಾಯುಗಕ್ಕೆ ಹಿಂತಿರುಗುವುದಾದರೆ ಸಂತೋಷ. ಇಲ್ಲಿನ ಕೊಳೆತು ನಾರುತ್ತಿರುವ ಧರ್ಮ, ದೇವರು, ಜಾತಿ ಉತ್ಪಾದನಾ ಕೇಂದ್ರಗಳಂತಿರುವ ಮಠಗಳು ಮತ್ತು ಅಲ್ಲಿನ ಹೆಗ್ಗಣಗಳನ್ನು ಹಾಗೂ ಸಾಧ್ಯವಾದರೆ ಸ್ವರ್ಗ ಮತ್ತು ದೇವರ ಸಾನಿಧ್ಯಕ್ಕೆ ಕರೆದೊಯ್ಯುವ VISA, PASSPORTಗಳನ್ನು ತಮ್ಮೊಂದಿಗೆ ಜತನದಿಂದ ಇಟ್ಟುಕೊಂಡಿರುವ ಸನಾತನ ಬಚ್ಚಲಿನ ಪುರೋಹಿತರನ್ನು ನಿಮ್ಮೊಂದಿಗೆ ಕರೆದೋಯ್ದು ಪುಣ್ಯ ಕಟ್ಟಿಕೊಳ್ಳಿ. ಬಹುಶ: ಆಗ ನಮ್ಮಂಥವರಿಗೆ ಚಾಪ್ಲಿನ್ ಪ್ರತಿಮೆ ನಿಲ್ಲಿಸಲು ಅಂತ ತಕರಾರುಗಳು ಎದುರಾಗುವುದಿಲ್ಲ.
  ಇನ್ನು ಸಾಯುತ್ತಿರುವ ಸನಾತನ ಧರ್ಮದ ಉಳಿವಿಗಾಗಿ ಆಜೀವ ಹೋರಾಟ ನಡೆಸುತ್ತಿರುವ ಚೇತನಾ ತೀರ್ಥಹಳ್ಳಿಯವರ ಸಮಸ್ಯೆಗೆ ಬರುತ್ತೇನೆ. ಇಪ್ಪತ್ತೊಂದನೇ ಶತಮಾನದ ಅತಿದೊಡ್ಡ ಮ್ಯಾಜಿಕ್ ಯಾವುದೆಂದರೆ ಈ ದೇಶದಲ್ಲಿ ಧರ್ಮದ ಗುತ್ತಿಗೆ ತೆಗೆದುಕೊಂಡವರು ಎಂಥ ಭೀಕರ ಹತ್ಯಾಕಾಂಡಗಳಲ್ಲಿ ಭಾಗಿಯಾದರೂ ಅವರಿಗೆ ಶಿಕ್ಷೆಯ ಭಯವಿಲ್ಲ. ಇದಕ್ಕೆ ಈಚಿನ ಮಂಗಳೂರು ಪಬ್ ಘಟನೆಗಿಂತ ಬೇರೆ ಉದಾಹರಣೆ ಬೇಕೇ? ಹೆಣ್ಣು ಮಕ್ಕಳ ಮೇಲೆ ಹಾಡಹಗಲೇ ಅಮಾನವೀಯವಾಗಿ ಹಲ್ಲೆ ನಡೆಸಿ ಯಾವುದೇ ಕಾನೂನು ಕಾಯ್ದೆಗಳ ಮುಷ್ಟಿಗೆ ಸಿಕ್ಕದೆ ಬಚಾವಾಗಿ ಸಲೀಸಾಗಿ ಓಡಾಡಿಕೊಂಡಿರುವ ಶ್ರೀರಾಮನ ಬಾಡಿ ಗಾರ್ಡ್ ಗಳನ್ನು ಚೇತನಾ ಒಬ್ಬ ಹೆಣ್ಣಾಗಿ ನೋಡುತ್ತಾರೋ ಅಥವಾ ಸನಾತನಿಯಾಗಿ ನೋಡುತ್ತಾರೋ ಗೊತ್ತಿಲ್ಲ. ಸನಾತನಿಗಳು ನಡೆಸಿರುವ ಎಲ್ಲ ಬಗೆಯ ಜೀವ ವಿರೋಧಿ ಕ್ರೌರ್ಯದ ಪ್ರಯೋಗಗಳಿಗೆ ಈ ದೇಶ ಬೃಹತ್ ಮೈದಾನದಂತಿರುವುದು ಅವರ ಅರಿವಿಗೆ ಇನ್ನು ಬಂದಿಲ್ಲವೆಂದು ಕಾಣುತ್ತದೆ.
  -ಎಡಿಟ್ ಮಾಡಲಾಗಿದೆ-

  ಒಳಗಣ್ಣು ಕಳೆದುಕೊಂಡವರಿಗೆ ಮಾತ್ರ ಚಾಪ್ಲಿನ್ ಪರದೇಶಿಯಂತೆಯೂ , ಇಲ್ಲಿನ ಗಂಗಾನದಿಯ ಗಲೀಜು ಪವಿತ್ರ ತೀರ್ಥದಂತೆಯೂ , ಜಾತಿಯ ಬಿಲಗಳಂತಿರುವ ದೇವಸ್ಥಾನಗಳು ಪುಣ್ಯ ಕ್ಷೇತ್ರಗಳಂತೆಯೂ , ಮಠಗಳ ಗರ್ಭಗುಡಿಯಲ್ಲಿ ಅವಿತುಕೊಂಡಿರುವ ಕ್ರಿಮಿಕೀಟಗಳು ಕಾಲಜ್ಞಾನಿಗಳಂತೆಯೂ ಕಾಣಿಸಿಕೊಳ್ಳುತ್ತವೆ. ಈ ಘನತೆವೆತ್ತ ದೇಶದ ನರಸತ್ತ ದೇವರು ಧರ್ಮಗಳ ಪೋಸ್ಟ್ ಮಾರ್ಟಂ ರಿಪೋರ್ಟ್ ಯಾವತ್ತೋ ಬಂದಾಗಿದೆ. ಪಾಪ, ಒಳಗಣ್ಣು ಕಳೆದುಕೊಂಡ ಕುರುಡರಿಗೆ ಅದು ಕಾಣಬೇಕಲ್ಲ.
  ‘ಮಿತ್ರ ಚಾಪ್ಲಿನ್, ಧರ್ಮದ ಅಮೇಧ್ಯದಲ್ಲಿ ಹೂತುಹೋಗಿರುವ ಈ ದೇಶಕ್ಕೆ ನಿನ್ನನ್ನು ಮುಟ್ಟುವಷ್ಟು ಯೋಗ್ಯತೆ ಖಂಡಿತ ಇಲ್ಲ’ ಎಂಬ ನನ್ನ ಮಾತಿಗೆ ನಾನೀಗಲೂ ಬದ್ಧ. ನನ್ನ ಬರಹಕ್ಕೆ ವಿಷ ಉತ್ಪಾದಿಸಿ ವಿಷ ಹಂಚುವ ಶಕ್ತಿ ಇಲ್ಲ, ಅದು ಮುಟ್ಟಿಸಿಕೊಳ್ಳಲು ಈಗಲೂ ಹೆಣಗುತ್ತಿರುವ ಮನಸುಗಳಿಗೆ ಮುಟ್ಟಿದರೆ ಸಾಕು.

  ಪ್ರತಿಕ್ರಿಯೆ
 8. ಅಜಯ್

  ನನಗ್ಗೊತ್ತು, ನನ್ನ ಮನಸ್ಥಿತಿಯ ಜನ ಈ ಬ್ಲಾಗು, ವೆಬ್ ಜಗತ್ತಿನಲ್ಲಿ ತೀರಾ ಸಣ್ಣ ಸಂಖ್ಯೆಯಲ್ಲಿದ್ದಾರೆ.
  ನಿಜ ಚಂದ್ರಶೇಖರ ಐಜೂರ, ನೀವೇ ಹೇಳಿಕೊಂಡಂತೆ ನಿಮ್ಮಂತಹ ರೋಗಗ್ರಸ್ಥ ಮನಸ್ಥಿತಿಯ ಜನ ಈ ದೇಶದಲ್ಲಿ ತೀರಾ ಕಡಿಮೆ. ಆದರೆ ನಿಮ್ಮಂತವರೇ ಈ ದೇಶದ ದುರಂತ ಕೂಡಾ! ನಿಮಗೆ ದೇಶಕ್ಕಿಂತ ದೊಡ್ಡದಾದ ಆ ಚಾಪ್ಲಿನ್ ನೋಡಿಯಾದರೂ ಒಳ್ಳೆ ಬುದ್ಧಿ ಬರಲಿ. ದೇಶದ್ರೋಹಿಯಂತೆ ಮಾತುಗಳನ್ನಾಡುವ ನಿಮಗೆ ಇನ್ನೊಬ್ಬರ ಬಗ್ಗೆ ಟೀಕೆ ಮಾಡುವ ಯಾವ ಹಕ್ಕೂ ಇಲ್ಲ ಮತ್ತು ಅದು ನಿಮ್ಮ (…ಎಡಿಟ್ ಮಾಡಲಾಗಿದೆ…) ತೋರಿಸುತ್ತದೆ. ಈ ದೇಶದ ಬಗ್ಗೆ ಅಷ್ಟೆಲ್ಲಾ ನಿಕೃಷ್ಟ ಭಾವನೆ ಇದ್ದರೆ VISA ,Passport ಮಾಡಿಸಿಕೊಂಡು (ಎಡಿಟ್ ಮಾಡಲಾಗಿದೆ) ಅದಕ್ಕೆ ಯಾವ ದೇವರೂ ಬೇಕಿಲ್ಲ.

  ಪ್ರತಿಕ್ರಿಯೆ
 9. neelanjala

  -ಎಡಿಟ್ ಮಾಡಲಾಗಿದೆ
  ———
  ಅಬ್ಬಬ್ಬಬ್ಬಾ, ದೇಶದ ಯೋಗ್ಯತೆಯ ಬಗ್ಗೆ ಮಾತಾಡ್ತಾ ಇದ್ದಿರಾ!! ನಾನು ಹಿಂದೂ ಧರ್ಮ ( ಕ್ಷಮಿಸಿ, “ಮನು”!! ಧರ್ಮ) ೫೦೦೦ ಸಾವಿರ ವರ್ಷಗಳಷ್ಟು ಹಿಂದಿನದ್ದು ಅಂದು ಕೊಂಡಿದ್ದೆ. ತಪ್ಪು ತಿಳಿದಿದ್ದೆ ಅಂತ ಕಾಣುತ್ತೆ. ಬರೀ ೨,೫೦೦ ಸಾವಿರ ವರ್ಷಗಳಾಗಿದೆಯಾ ಅಥವಾ ನೀವು ಯಾವುದೋ ಐತಿಹಾಸಿಕ ಘಟನೆ ಬಗ್ಗೆ ಮಾತಾಡ್ತಾ ಇದ್ದರೆ ನಂಗೆ ಗೊತ್ತಿಲ್ಲ ಬಿಡಿ.
  ನೀವು ಧರ್ಮ, ದೇವರಿಗೆ ಬಯ್ಯೊದು ನೋಡಿ ನಿಜವಾಗಿಯೂ ನಿಮಗೆ ಧರ್ಮದ ಮತ್ತು ದೇವರ ಅರ್ಥ ಗೊತ್ತಿದೆಯೇ ಅಂತ ಯೋಚಿಸ್ತಾ ಇದ್ದೇನೆ. ಅಥವಾ ಯಾವುದೋ ಮೇಲು ವರ್ಗ ಎಂದು ಹೇಳಿಕೊಳ್ಳುವವರ ಕೈಯಲ್ಲಿ ಜಾತಿಯ ಕಾರಣದಿಂದ ತುಳಿತಕ್ಕೆ ಒಳಗಾಗಿದ್ದೀರಾ? ದಂಗೆ ಎದ್ದ ಹಾಗಿದೆ. ಎಲ್ಲರಿಗೂ ಸೇರಿ ಬಯ್ತಾ ಇದ್ದಿರಾ.
  ನಿಮ್ಮಂತವರು ಇರಬೇಕು ಕಣ್ರಿ. ಗಂಗಾ ನದಿ ಗಲೀಜಾಗದಂತೆ, ದೇವಸ್ಥಾನಗಳು ಜಾತಿಯ ಬಿಲಗಳಾಗದಂತೆ, ಮಠಗಳಲ್ಲಿ ಕ್ರಿಮಿ ಕೀಟಗಳು ಹುಟ್ಟದಂತೆ ಎಚ್ಚರ ವಹಿಸಲು ನನ್ನಂತವರು ಶ್ರಮ ಪಟ್ತಾರೆ. ಇಲ್ಲದಿದ್ರೆ ನಾವು ಮಾಡಿದ್ದೇ ಸತ್ಯ ಎಂಬ ಭ್ರಮೆಗೆ ಸಿಲುಕೊ ಎಲ್ಲಾ ಚಾನ್ಸ್ ಇದೆ.
  ಲಾಸ್ಟ್ ಗೆ ಒಂದು ಮಾತು. ನಿಮ್ಮ ಹತ್ರ ಚಾರ್ಲಿ ಚಾಪ್ಲಿನ್ ಫಿಲ್ಮ್ ಕಲೆಕ್ಷನ್ ಏನಾದ್ರೂ ಇದೆಯಾ? ಅವರ ಯಾವ ಸಿನೆಮಾ ನಿಮಗೆ ಇಷ್ಟ? ( ಉಲ್ಟಾ /ತಪ್ಪು ತಿಳಿಬೇಡಿ, ನನ್ಗೆ ಸಿನೆಮಾ ಕಲೆಕ್ಟ್ ಮಾಡೊ ಹೊಬಿ ಇದೆ)
  “ಸನಾತನ ಬಚ್ಚಲಿನ ಪುರೋಹಿತರನ್ನು” ನಿಮ್ಮೊಂದಿಗೆ ಕರೆದೋಯ್ದು ಪುಣ್ಯ ಕಟ್ಟಿಕೊಳ್ಳಿ. ಬಹುಶ: ಆಗ “ನಮ್ಮಂಥವರಿಗೆ” ಚಾಪ್ಲಿನ್ ಪ್ರತಿಮೆ ನಿಲ್ಲಿಸಲು ಅಂತ ತಕರಾರುಗಳು ಎದುರಾಗುವುದಿಲ್ಲ.
  -ಹೇಮಂತ ಹೆಗಡೆ ಹುಟ್ಟಿನಿಂದ ಹವ್ಯಕ ಬ್ರಾಹ್ಮಣರಲ್ವಾ!!

  ಪ್ರತಿಕ್ರಿಯೆ
 10. Avinash

  “ಒಳಗಣ್ಣು ಕಳೆದುಕೊಂಡವರಿಗೆ ಮಾತ್ರ ಚಾಪ್ಲಿನ್ ಪರದೇಶಿಯಂತೆಯೂ , ಇಲ್ಲಿನ ಗಂಗಾನದಿಯ ಗಲೀಜು ಪವಿತ್ರ ತೀರ್ಥದಂತೆಯೂ , ಜಾತಿಯ ಬಿಲಗಳಂತಿರುವ ದೇವಸ್ಥಾನಗಳು ಪುಣ್ಯ ಕ್ಷೇತ್ರಗಳಂತೆಯೂ , ಮಠಗಳ ಗರ್ಭಗುಡಿಯಲ್ಲಿ ಅವಿತುಕೊಂಡಿರುವ ಕ್ರಿಮಿಕೀಟಗಳು ಕಾಲಜ್ಞಾನಿಗಳಂತೆಯೂ ಕಾಣಿಸಿಕೊಳ್ಳುತ್ತವೆ. ಈ ಘನತೆವೆತ್ತ ದೇಶದ ನರಸತ್ತ ದೇವರು ಧರ್ಮಗಳ ಪೋಸ್ಟ್ ಮಾರ್ಟಂ ರಿಪೋರ್ಟ್ ಯಾವತ್ತೋ ಬಂದಾಗಿದೆ. ಪಾಪ, ಒಳಗಣ್ಣು ಕಳೆದುಕೊಂಡ ಕುರುಡರಿಗೆ ಅದು ಕಾಣಬೇಕಲ್ಲ.”
  ಹೌದು ಒಳಗಣ್ಣು ಕಳೆದುಕೊಂಡವರು ಮಾತ್ರವೇ ಪ್ರತಿ ವಿಷಯದಲ್ಲಿಯೂ ಕೋಮು ವಿಷವನ್ನು ತಂದೊಡ್ಡಬಲ್ಲರು. ಗಂಗಾಜಲ, ದೇವಸ್ಥಾನ, ಮಠದ ಗರ್ಭಗುಡಿ… ಈ ಎಲ್ಲ ಪದಗಳ ಬದಲು ಚರ್ಚು, ಮಸೀದಿ ಹೆಸರುಗಳನ್ನು ಬಳಸುವುದಕ್ಕೆ ಜನ ಹೆದರುತ್ತಾರೇಕೆ? ಹಾಗೆಲ್ಲಾದರೂ ಬಳಸಿದರೆ “ಕೋಮುವಾದಿ” ಆಗುತ್ತಾನೆ. ಅದೇ ದೇವಸ್ಥಾನ, ಮಠ ಮಂದಿರ ಎಂಬೆಲ್ಲ ಶಬ್ದಗಳನ್ನು ಎಗ್ಗಿಲ್ಲದೆ ಬಳಸಬಹುದು ಎಂಬ ಭಾವನೆ ಯಾಕಾಗಿ ಸೃಷ್ಟಿಯಾಗಿದೆ ಇಂದು? ಧರ್ಮ ಎಂಬುದು ಅವರವರ ನಂಬಿಕೆಗೆ ಮತ್ತು ಆತ್ಮಸಾಕ್ಷಿಗೆ ಬಿಟ್ಟ ವಿಷಯ. ಮತ್ತು ಇಂದು ಧಾರ್ಮಿಕ ಕೇಂದ್ರಗಳು ಕೂಡ ಅವ್ಯವಹಾರ, ಅನಾಚಾರಗಳಿಂದ ಹೊರತಾಗಿಲ್ಲ, ಇದಕ್ಕೆ ಯಾವುದೇ ಧರ್ಮ ಭೇದವೂ ಇಲ್ಲ.
  ಇಲ್ಲಿ, ಚಾಪ್ಲಿನ್ ಪ್ರತಿಮೆಯನ್ನು ದೇವಸ್ಥಾನದೆದುರು ಸ್ಥಾಪಿಸಲು ಬಿಡಲಿಲ್ಲ ಎಂಬ ಸಂಗತಿಯೊಂದು ಒಂದು ಧರ್ಮದ ಅವಹೇಳನೆಗೆ, ಮತ್ತೊಂದು ಧರ್ಮದ ಜೊತೆ ತಿಕ್ಕಾಟಕ್ಕೆ ಮತ್ತು “ನನ್ನ ದೇಶ ಸರಿ ಇಲ್ಲ, ಇದು ಧರ್ಮದ ಅಮೇಧ್ಯದಲ್ಲಿ ಹೂತುಹೋಗಿದೆ” ಎಂದು ಸಾರಾಸಗಟಾಗಿ ಹೇಳಲು, ಮತ್ತು ಧ್ವನಿಯೆತ್ತಿದವರ ವೈಯಕ್ತಿಕ ನಿಂದನೆಗೆ ಕಾರಣವಾಗುತ್ತದೆ ಎಂದರೆ ಒಳಗಣ್ಣು ಕಳೆದುಕೊಂಡವರು ಯಾರು ಎಂಬುದು ವೇದ್ಯವಾಗುತ್ತದೆ.

  ಪ್ರತಿಕ್ರಿಯೆ
 11. ಸಂದೀಪ್ ಕಾಮತ್

  ಚಾರ್ಲಿ ಚಾಪ್ಲಿನ್ ಬಗ್ಗೆ ನನಗೆ ಅಪಾರವಾದ ಗೌರವವಿರದೇ ಇದ್ದರೂ ಪ್ರೀತಿಯಂತೂ ಇದ್ದೇ ಇದೆ,ಆದರೆ ಅವನ ಹಿರಿಮೆಯನ್ನು ಸಾರಲು ನೀವು ನನ್ನ ದೇಶದ ಬಗ್ಗೆ ಕೀಳು ಬರೆಯೋದನ್ನು ಸಹಿಸಲಾರೆ ಚಂದ್ರಶೇಖರರೇ .
  ನೀವೆಲ್ಲ ಮಾತಾಡೋದು ನೋಡಿದ್ರೆ ಬರೀ ಭಾರತವಷ್ಟೆ ಈ ಧರ್ಮದ ಸಮಸ್ಯೆಯಿಂದ ನರಳೋದು ನಾನೇನಾದ್ರೂ ಬೇರೆ ದೇಶದಲ್ಲಿ ಹುಟ್ಟೀದ್ರೆ ಚೆನ್ನಾಗಿರ್ತಾ ಇತ್ತು ಅನ್ನೋ ರೀತಿಯಲ್ಲಿ ಬರೆದಿದ್ದೀರ.
  ಮೊನ್ನೆ ನಡೆದ ಅಮೆರಿಕಾ ರಾಷ್ಟ್ರಾಧ್ಯಕ್ಷರ ಪ್ರಮಾಣ ವಚನ ಸಂದರ್ಭದಲ್ಲಿ ಅವರೂ ಬೈಬಲ್ ಸಾಕ್ಷಿಯಾಗಿ ತಾನೇ ಪ್ರಮಾಣ ಸ್ವೀಕರಿಸಿದ್ದು?
  ಇರೋ ಅನಿಷ್ಟವೆಲ್ಲ ಬರೀ ಭಾರತದಲ್ಲೇ ಇದೆ ಅನ್ನೋದು ನಿಮ್ಮ ಮೂರ್ಖತನ.
  ನೀವು ಯಾರ ಮೂರ್ತಿ ಬೇಕಾದ್ರೂ ಸ್ಥಾಪಿಸಿ ಆದ್ರೆ ನಿಮ್ಮ ಹೇಳಿಕೆಗಳನ್ನು ಸಮರ್ಥಿಸಲು ಭಾರತದ ಬಗ್ಗೆ ಕೀಳಾಗಿ ಬರೆಯಬೇಡಿ.
  ನೀವು ಧರ್ಮವನ್ನು ಧಿಕ್ಕರಿಸಿ ಅದು ನಿಮ್ಮಿಷ್ಟ ಆದ್ರೆ ನಿಮಗೆ ಇಷ್ಟ ಆಗಿಲ್ಲ ಅನ್ನೋ ಕಾರಣಕ್ಕೆ ಯಾಕೆ ಧರ್ಮವನ್ನೇ ದೂಷಿಸ್ತೀರಾ?
  ದೇಶಕ್ಕಿಂತ ಮನುಷ್ಯ ದೊಡ್ಡವನು ಅಂತ ನಿಮಗನಿಸಿರಬಹುದು .ಅದೇನಾದ್ರೂ ನಿಜವಾಗಿದ್ರೆ ದೇಶಕ್ಕಾಗಿ ಪ್ರಾಣ ಕೊಡಲು ಸೈನಿಕರ್ಯಾಕೆ ಬೇಕು .ಅವರು ಮನುಷ್ಯರು ಹಾಗಾಗಿ ಅವರೇ ಪ್ರಮುಖರಲ್ವ?
  ಪಾಕಿಸ್ತಾನ ಅಂತ ಹೆಸರು ಕೇಳಿದ ತಕ್ಷಣ ಜನರ್ಯಾಕೆ ಮೂಗು ಮುರೀತಾರೆ? ಪಾಕಿಸ್ತಾನಲ್ಲಿ ದೇಶಕ್ಕಿಂತ ಜನ ಯಾಕೆ ಮುಖ್ಯ ಅನ್ನಿಸಲ್ಲ? ಅಲ್ಲಿ ಒಳ್ಳೆಯರಿಲ್ವ?
  ಅಮೆರಿಕಾ ಅಂದ ತಕ್ಷಣ ನಮಗ್ಯಾಕೆ ಅದೊಂದು ಶ್ರೀಮಂತ ದೇಶ ಅನ್ನೋ ಭಾವನೆ ಬರುತ್ತೆ .ಅಲ್ಲಿ ಬಡವರಿಲ್ವ?
  ನೀವು ಈ ದೇಶ ಬಿಟ್ಟು ಹೊರ ಹೋದ್ರೆ ನಿಮ್ಮನ್ನು ಮೊದಲು ಕಾಪಾಡೋದು ಈ ದೇಶದ ಐಡೆಂಟಿ .
  ಅಮೇಧ್ಯ ಎಲ್ಲಾ ಕಡೆ ಇರುತ್ತೆ ಸ್ವಾಮಿ .ರಾತ್ರಿ ಪೊಗದಸ್ತಾಗಿ ಚಿಕನ್ ಬಿರಿಯಾನಿ ತಿಂದರೂ ಬೆಳಿಗ್ಗೆ ಹೊತ್ತಿಗೆ ಅದು ಅಮೇಧ್ಯವೇ ಆಗೋದು ,ಚಿಕನ್ ಬಿರಿಯಾನಿ ಆಗಿ ಬರಲ್ಲ.

  ಪ್ರತಿಕ್ರಿಯೆ
 12. Tejaswini

  ಚಂದ್ರಶೇಖರ್ ಅವರೆ,
  ನಿಮ್ಮಂತಹವರೊಂದಿಗೆ ಖಂಡಿತ ವಾದ ಸಲ್ಲ ಎಂದು ಹೆಚ್ಚು ಹೇಳಲು ಹೋಗುತ್ತಿಲ್ಲ. ನಾನು ಹೇಳಬೇಕಾದ್ದನ್ನೆಲ್ಲಾ ಹೇಳಿಯಾಗಿದೆ. ಮೊಲಕ್ಕೆ ಮೂರೇ ಕಾಲು ಎಂದು ನಂಬಿ, ಇದೇ ಸರಿ ಎಂದು ವಾದಿಸುವವರ ಜೊತೆ ನಾನು ವಾದ ಮಾಡೊಲ್ಲ. ಇನ್ನು ಮುಂದೆ ನಿಮಗೆ ಪ್ರತಿಕ್ರಿಯಿಸುವುದೂ ಇಲ್ಲ. ಆದರೆ ನಿಮ್ಮ ವಾದ ಎಲ್ಲಾ ಪಂಥ(ಎಡ, ಬಲ ನೇರ)ವನ್ನೂ ಮೀರಿದ ಇನ್ನೊಂದು ಪಂಥದ ವಾದವಾದ ನಕ್ಸಲೈಟ್ ವಾದವನ್ನು ಹೆಚ್ಚು ಪ್ರತಿಬಿಂಬಿಸುವಂತಿದೆ ಎಂದು ಮಾತ್ರ ಹೇಳುವೆ. ಭಾರತದೇಶದೊಳಗಿನ ಕುರೂತಿಯನ್ನೇ ನೊಡುತ್ತಾ, ಅದನ್ನೇ ಬೊಬ್ಬಿರಿಯುತ್ತಾ ಮೊಲಕ್ಕಿರುವ ಮೂರೇ ಕಾಲನ್ನೆಣಿಸುತ್ತಾ ಜ್ಞಾನಿಗಳೆಂದು ಕರೆಸಿಕೊಳ್ಳುತ್ತಿರುವ ನೀವು ದೊಡ್ಡವರೇ ಸರಿ. ಈ ಬಡ ಭಾರತವೇ ಮಾನಸಿಕ ಶ್ರೀಮಂತಿಕೆಯನ್ನು ಕೊಟ್ಟಿದೆ ಎಂದು ನಂಬಿ, ಮೊಲಕ್ಕಿರುವುದು ೪ ಕಾಲೆಂದು ಒಪ್ಪಿಕೊಂಡು, ವ್ಯಕ್ತಿಗಿಂತ ದೇಶದೊಡ್ಡದೆಂದು ನಂಬಿರುವ ಅಲ್ಪಳು ನಾನು.

  ಪ್ರತಿಕ್ರಿಯೆ
 13. kallare

  ಅಹಾ… ಮುತ್ತುಗಳು ಸರ್. ಅದೆಲ್ಲಿದ್ರಿ ಇಷ್ಟು ದಿನ. ಎಲ್ಲೂ ಕಾಣಿಸ್ಲೆ ಇಲ್ಲಾ? ನಿಮ್ಮಂತವರು ಇನ್ನಷ್ಟು ಜನ ಬೇಕು ಗುರುಗಳೆ. ನೀವು ದೇಶ ಭಾಷೆ ಮೀರಿದವರಾದರೂ ನಮ್ಮಂತವರಿಗೆ ಈ ದೇಶಕ್ಕೆ ನಿಮ್ಮ ಅವಶ್ಯಕತೆ ಇದೆ. ನಿಮ್ಮಿಂದಲೆ ಉದ್ಧಾರವಾಗಬೇಕು. ಅದೇನು ಮಾಡ್ತೀರಿ ಹೇಳಿ ಒಂದಷ್ಟು ಜನ ನಿಮ್ಮನ್ನು ಸೇರಿಕೊಳ್ತೀವಿ…. ನೀವು ಈ ದೇಶದಲ್ಲಷ್ಟೇ ಅಲ್ಲ, ಚಾಪ್ಲಿನ್ ದೇಶಕ್ಕೆ ಹೋದರೂ ಹೀಗೆ ಇರಿ ಸಾರ್. ಅಲ್ಲೂ ಬರ್ತೀವಿ ನಿಮ್ಮ ಜೊತೆ…
  ಎಡಿಟ್ ಮಾಡಲಾಗಿದೆ

  ಪ್ರತಿಕ್ರಿಯೆ
 14. uma vijay

  ಡಿಯರ್ ಐಜೂರ್
  ಮುಟ್ಟಿಸಿಕೊಳ್ಳದವರಿಗೆ ಮುಟ್ಟಿನೋಡಿಕೊಳ್ಳುವ ಭಾಷೆಯಿಂದಲೇ ಮುಟ್ಟಿಸಿದ್ದೀರಿ…
  ಅಷ್ಟು ಸಾಕು.

  ಪ್ರತಿಕ್ರಿಯೆ
 15. ಪ್ರದೀಪ್

  ಏನ್ರೀ ಚಂದ್ರಶೇಖರರೇ, ಬೇಕೆಂದಲೇ ವಿವಾದವೇಕೆ ಸೃಷ್ಟಿಸುತ್ತಿದ್ದೀರಿ, ಹೀಗೆಲ್ಲ ಬರೆದು. ವಿವಾದವೆಂದರೆ ಅಷ್ಟು ಇಷ್ಟಾನಾ ನಿಮಗೆ? ಅತೀ ಭಾವೋದ್ವೇಗ ಒಳ್ಳೆಯದಲ್ಲ ಸ್ವಾಮಿ. ಎಲ್ಲೋ ಮಾಧ್ಯಮದವರು ಬಿಂಬಿಸುವಂತೆ ಧರ್ಮದ ಅಮೇಧ್ಯದಲ್ಲಿ ಮುಳುಗಿದವರು ಕೆಲವರಿದ್ದಾರೆಂದು ಇಡೀ ದೇಶಕ್ಕೆ ನಿನ್ನನ್ನು ಮುಟ್ಟುವಷ್ಟು ಯೋಗ್ಯತೆ ಖಂಡಿತ ಇಲ್ಲವೆಂದೆಲ್ಲ ಹೇಳುವ ಅಮೇಧ್ಯ ತುಂಬಿದ ಯೋಚನೆಯಿದ್ದರೆ, ಇಲ್ಲಿರಬೇಡಿ.

  ಪ್ರತಿಕ್ರಿಯೆ
 16. kallare

  ಎಡಿಟ್ ಮಾಡುವ ಬದಲು ಕಮೆಂಟ್ ಅಳಿಸಿಬಿಡಬಹುದಿತ್ತು ಸರ್. ದಯವಿಟ್ಟು ಅದನ್ನೇ ಮಾಡಿ…
  ಅರ್ಥ ಬದಲಾಗುವ ಹಾಗೆ ಆಗಿಬಿಡುತ್ತದಲ್ಲ? ಹಾಗೇ ಉಳಿದುಕೊಂಡರೆ… ತೆಗೆದುಬಿಡಿ.
  ಮಹೇಶ್.

  ಪ್ರತಿಕ್ರಿಯೆ
 17. sriraju

  ‘ಮಿತ್ರ ಚಾಪ್ಲಿನ್, ಧರ್ಮದ ಅಮೇಧ್ಯದಲ್ಲಿ ಹೂತುಹೋಗಿರುವ ಈ ದೇಶಕ್ಕೆ ನಿನ್ನನ್ನು ಮುಟ್ಟುವಷ್ಟು ಯೋಗ್ಯತೆ ಖಂಡಿತ ಇಲ್ಲ, ಇಲ್ಲ, ಇಲ್ಲ, ಇಲ್ಲ, ಇಲ್ಲ…… ಇಲ್ಲ.’

  ಪ್ರತಿಕ್ರಿಯೆ
 18. manjunath

  ಚಾಪ್ಲಿನ್ ಬಿಡಿ, ಮೊನ್ನೆ ಚಿತ್ರದುರ್ಗದಲ್ಲಿ ಸಿಡಿದ ಎಲ್.ಬಸವರಾಜು ಅವರ ಮಾತುಗಳನ್ನು ಅರಗಿಸಿಕೊಳ್ಳೋಕೆ ಈ ಜನಕ್ಕೆ ಅನೇಕ ಶತಮಾನಗಳೇ ಬೇಕಾಗಬಹುದು.

  ಪ್ರತಿಕ್ರಿಯೆ
 19. syed nayaz

  ಅಬೇ ಸಾಲೆ ಐಜೂರ್,
  ಎಲ್ಲೆಲ್ಲಿ ನಿಂಗೆ ಹುಡ್ಕದು ಮಾರಾಯ, ನೀನು ಇಲ್ಲಿದ್ದಿ. ಇದು ಅವರ್ದು ದುನಿಯಾ ಅವರ್ದು ಮಾಫಿಯಾ ನಿಂಗೆ ಯಾಕೆ ಬೇಕು. ಅವರ್ದು ಗಲ್ಲಿಗೆ ಹೋಗಿ ಅವರ್ಗೆ ಬಯ್ಯೋದು ತಪ್ಪಲ್ಲ. ಅವರ್ದು ಶಾಪ ನಿಂಗೆ ಸುಮ್ನೆ ಬಿಡಲ್ಲ. ಚಾಪ್ಲಿನ್ ಏನು ನಿಂದು ಮಾವ ಇಲ್ಲ ನಿಂದು ಚಿಕ್ಕಪ್ಪ. ಪಾಪ ಅವರ್ದು ಧರ್ಮ ಅವರ್ದು ದೇವರು ಎಷ್ಟು ಕಷ್ಟನಲ್ಲಿ ಐತೆ ಗೊತ್ತಾ? ಮೆರಾ ಬೇಟ ತುಜೆ ಕ್ಯಾ ಮಾಲುಂ, ತೂ ತೋ ಖುದಾ ಕೆ ಸಾಥ್ ಲಡ್ನೆ ಜಾರೈ. ಅಬೇ ಸಾಲೆ ಯೇ ಸಬ್ ಚೋಡ್ಕೆ ಆಜಾ, ಇಲ್ಲ ಅಂದ್ರೆ ನಿಂಗೆ ನಕ್ಸಲೈಟ್ ಅಂತ yedyurappa ಪೊಲೀಸ್ ಒಳ್ಗೆ ಹಾಕ್ತಾರೆ ( ನಿನ್ ಹೆಸ್ರು terrorist ಲೇಬಲ್ ಇಂದ ಮಾತ್ರ ಬಚಾವ್ ಮಾಡುತ್ತೆ ). ಸಾಲೆ ಆಜಾ ರಫಿ ಕೆ ದರ್ದ್ ಭರೇ ಗಾನ ಸುನ್ಲೆಕ್ ಯೇ ಸಬ್ ಬಾತೇ ಹಮಾರೆ ಇಸ್ಕೂಲ್ಕೆ ಗ್ರವಂಡ್ ಮೇ ಕರೇಂಗೇ.
  ಖುದಾ ಹಾಫಿಜ್ ಮೇರೆ ದೋಸ್ತ್!
  ತೇರೇ ಇಂತೆಜಾರ್ ಮೇ…
  ಸಯ್ಯದ್ ನಯಾಜ್

  ಪ್ರತಿಕ್ರಿಯೆ
 20. minchulli

  “ಧರ್ಮದ ಅಮೇಧ್ಯದಲ್ಲಿ ಹೂತುಹೋಗಿರುವ ಈ ದೇಶಕ್ಕೆ ನಿನ್ನನ್ನು ಮುಟ್ಟುವಷ್ಟು ಯೋಗ್ಯತೆ ಖಂಡಿತ ಇಲ್ಲ.” ಏನಿದರ ಅರ್ಥ.ದೇಶದ ಯೋಗ್ಯತೆಯ ಬಗ್ಗೆ ಮಾತಾಡ್ತಾ ಇದ್ದಿರಾ ಶುದ್ಧ ಅಸ೦ಬದ್ಧ .

  ಪ್ರತಿಕ್ರಿಯೆ
 21. prakash hegde

  ನಿನ್ನನ್ನು ಮುಟ್ಟುವ ಯೋಗ್ಯತೆ ಈ ದೇಶಕ್ಕಿಲ್ಲ..”
  ಇದು ಖಂಡಿತ ಅಸಂಬದ್ಧ ಮಾತು…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: