ಚಿನುವಾ ಪೈಲೂರು ಬರೆದ 'ಕೆಂಪು ಬಣ್ಣದ ಪಚ್ಚ ಶಾಲೆ'

ಕೆಂಪು ಬಣ್ಣದ ಪಚ್ಚ ಶಾಲೆ

– ಚಿನುವಾ ಪೈಲೂರು

ಪಚ್ಚ ಶಾಲೆ ಎಂದರೆ ಹಸಿರು ಶಾಲೆ. ಆದರೆ ಅದರ ಕಟ್ಟಡ ಕೆಂಪು ಬಣ್ಣ. ಅದು ಸಿಮೆಂಟ್ ಕಟ್ಟಡವಲ್ಲ. ಮಣ್ಣಿಂದ ಮಾಡಿದ ಕಟ್ಟಡವಾಗಿತ್ತು. ಅಲ್ಲಿ ನಮ್ಮ ಶಾಲೆಯ ಹಾಗೆ ದಿನಾಲು ಪ್ರೇಯರ್ ಮಾಡುವುದಿಲ್ಲ. ಅಲ್ಲಿ ಸೋಮವಾರ ರಿಪೋರ್ಟ್ ಹೇಳ್ತಾರೆ. ಮಂಗಳವಾರ ಆಟ ಆಡ್ತಾರೆ. ಬುಧವಾರ ಹಾಡು ಹೇಳ್ತಾರೆ. ಗುರುವಾರ ವಿಶೇಷ ವಿಷಯ ಹೇಳ್ತಾರೆ. ಶುಕ್ರವಾರ ಕಥೆ ಹೇಳ್ತಾರೆ. ಶನಿವಾರ ವಾರ್ತೆ ಹೇಳ್ತಾರೆ. ಪಚ್ಚ ಶಾಲೆ ಮಕ್ಕಳನ್ನು ಅಮ್ಮಂದಿರು ಕಳಿಸುವುದಿಲ್ಲ. ಅವರು ತಮ್ಮ ಹೊಲಗಳಲ್ಲಿ ಮಕ್ಕಳನ್ನು ವ್ಯವಸಾಯ ಮಾಡಿಸುತ್ತಿದ್ದರು. ಈಗ ಡಿಡಿಎಸ್ ಇಪ್ಪತ್ತು ವರ್ಷಗಳಿಂದ ಬೇರೆ ಬೇರೆ ಹಳ್ಳಿಗಳಿಗೆ ಹೋಗಿ ಮಕ್ಕಳನ್ನು ಕರೆದುಕೊಂಡು ಬಂದು ಶಾಲೆಗೆ ಕಳುಹಿಸುತ್ತಾರೆ. ಅವರು ಪ್ರತಿದಿನ ಮನೆಗೆ ಹೋಗುವುದಿಲ್ಲ. ಹಾಸ್ಟೆಲ್ನಲ್ಲಿ ಇರುತ್ತಾರೆ. ಶಾಲೆಯಲ್ಲಿ ಅವರಿಗೆ ಇಷ್ಟ ಇದ್ದದ್ದನ್ನೇ ಕಲಿಸುತ್ತಾರೆ. ಉದಾ: ಕುಂಬಾರಿಕೆ, ಕರಕುಶಲತೆ, ಇಂಗ್ಲಿಶ್, ತೆಲುಗು, ವ್ಯವಸಾಯ. ಈ ಶಾಲೆ ಮಾಚನೂರಿನಲ್ಲಿದೆ. ಮಾಚನೂರು ಒಂದು ಹಳ್ಳಿ. ಅದು ಆಂಧ್ರಪ್ರದೇಶದ ಝಹೀರಾಬಾದ್ ತಾಲೂಕಿನಲ್ಲಿದೆ. ಈ ಶಾಲೆ ಮೊಟ್ಟೆಯಾಕಾರದಲ್ಲಿದೆ. ಇಲ್ಲಿ ಒಂದರಿಂದ ಹತ್ತರವರೆಗೆ ತರಗತಿಗಳಿವೆ. ಇಲ್ಲಿ ನೇರವಾಗಿ ಒಂಭತ್ತನೇ ಕ್ಲಾಸ್ಗೆ ಹೋಗಬಹುದು. ಅವರ ಪ್ರಾಯ ಹಾಗೂ ಸಾಮರ್ಥ್ಯವನ್ನು ನೋಡಿ ಅವರು ಯಾವ ತರಗತಿಗೆ ಹೋಗಬೇಕು ಎಂದು ನಿಶ್ಚಯಿಸುತ್ತಾರೆ. ಈ ಶಾಲೆಯ ತರಗತಿಗಳಿಗೆ ಹಕ್ಕಿಗಳ ಹೆಸರುಗಳಿವೆ. ಒಂದನೇ ತರಗತಿಗೆ ಚಿಲುಕಾ (ಗಿಳಿ), ಎರಡನೇ ತರಗತಿಗೆ ಪಿಚುಕಾ (ಗುಬ್ಬಿ) ಇತ್ಯಾದಿ. ಇಲ್ಲಿ 130 ಮಕ್ಕಳು ಮತ್ತು 8 ಮೌಶಿಗಳೂ ಇದ್ದಾರೆ. ಅಲ್ಲಿ ನನಗೆ ಒಂಭತ್ತನೇ ತರಗತಿಯಲ್ಲಿ ಓದುವ ಪ್ರತಿಭಾ ಅಕ್ಕ ಸಿಕ್ಕಿದಳು. ಅವಳು ಶಾಲೆಯ ವಿಷಯ ಹಂಚಿಕೊಂಡಳು. ನನಗೆ ವಿಷಯ ಸಂಗ್ರಹಣೆ ಮಾಡುವಾಗ ತೆಲುಗು ಭಾಷೆ ಗೊತ್ತಿಲ್ಲದ ಕಾರಣ ಕಷ್ಟವಾಯಿತು. ಅಲ್ಲಿ ಇರುವ ಎಲ್ಲರಿಗೂ ತೆಲುಗು ಬರುತ್ತದೆ. ಆದರೆ ನನಗೆ ಆ ಭಾಷೆ ಬರುವುದಿಲ್ಲ. ಹಾಗೆ ಕಟ್ಟೆ ಮೇಲೆ ಕುಳಿತು ಕಷ್ಟಪಡುತ್ತಿದ್ದಾಗ ಒಬ್ಬಳು ಬಂದು ‘ನನ್ನ ಹೆಸರು ಪೂಜಾ, ನಿನ್ನ ಹೆಸರೇನು?’ ಎಂದು ಕೇಳಿದಳು. ಅವಳಿಗೆ ಕನ್ನಡ ಬರುತ್ತದೆಂದು ನನಗೆ ಖುಷಿಯಾಗಿ ಅವಳ ಹತ್ತಿರ ವಿಷಯ ಹಂಚಿಕೊಳ್ಳಲು ಕೇಳಿದೆ. ಆದರೆ ಅವಳು ಸುಮ್ಮನಿದ್ದಳು. ಅವಳು ಮೌಶಿಯ ಹತ್ತಿರ ಹೇಳಿದಳು. ಅವರು ಪ್ರತಿಭಾ ಅಕ್ಕನನ್ನು ಕರೆಯಲು ಹೇಳಿದಳು. ಪ್ರತಿಭಾ ಅಕ್ಕನಿಗೆ ಕನ್ನಡ ಬರುತ್ತಿತ್ತು. ಅವಳ ಹತ್ತಿರ ಪಚ್ಚ ಶಾಲೆಯ ವಿಷಯ ಹಂಚಿಕೊಳ್ಳಲು ಕೇಳಿದೆ. ಅವಳು ಒಪ್ಪಿಕೊಂಡಳು.         ಅವಳು ನನಗೆ ಶಾಲೆಯ ವಿಷಯಗಳನ್ನು ಹೇಳಿದಳು. ಪಚ್ಚಶಾಲೆಯಲ್ಲಿ ಒಂದು ವಸ್ತು ಸಂಗ್ರಹಾಲಯವಿದೆ. ಅದರಲ್ಲಿ ತಾವೇ ಮಾಡಿದ ಕಟ್ಟಿಗೆ ಗೊಂಬೆ, ಪುಸ್ತಕ, ಹಾಗೂ ಮಣ್ಣಿನ ವಸ್ತುಗಳಿವೆ. ಇವರು ಪುಸ್ತಕಗಳನ್ನು ಖರೀದಿ ಮಾಡುವುದಿಲ್ಲ. ಅವರು ಎರಡು ರಟ್ಟು ತೆಗೆದುಕೊಂಡು, ಸರ್ ಕೊಟ್ಟ ಒಂದಷ್ಟು ಪೇಪರ್ ತೆಗೆದುಕೊಂಡು ಹೊಲೆದು ತಾವೇ ಪುಸ್ತಕ ತಯಾರಿಸುತ್ತಾರೆ. ಶಾಲೆಯಲ್ಲಿ ಅವರು ಕೃಷಿಯ ಬಗ್ಗೆಯೂ ಕಲಿಯುತ್ತಾರೆ. ಕೃಷಿಯ ಮೂಲಕವೇ ಗಣಿತ, ಸಮಾಜ, ಪರಿಸರ, ವಿಜ್ಞಾನ ಕಲಿಯಲು ಶುರು ಮಾಡುತ್ತಾರಂತೆ. ಶಾಲೆಯಲ್ಲಿ ಬೀಜ ಸಂಗ್ರಹಾಲಯವೂ ಇದೆಯಂತೆ. ಅಲ್ಲಿ ಓದಿದವರು ಕೆಲವರೇ ಕಾಲೇಜಿಗೆ ಹೋಗುತ್ತಾರೆ. ಉಳಿದವರು ಅವರಿಗೆ ಆಸಕ್ತಿ ಇರುವ ವಿಷಯದಲ್ಲಿ ಹೆಚ್ಚಿನ ತರಬೇತಿ ಪಡೆಯುತ್ತಾರೆ. ನಂತರ ಸ್ವತಃ ಕೆಲಸ ಮಾಡುತ್ತಾರೆ.   ನನ್ನ ಅನುಭವ: ಇದು ಒಂದು ಚಂದದ ಶಾಲೆ ಎನ್ನಬಹುದು. ನಾನು ಅಮ್ಮನ ಜೊತೆ ಮೀಟಿಂಗ್ಗೆ ಹೋಗಿದ್ದೆ ಹಾಗೂ ಜೀವವೈವಿಧ್ಯ ಜಾತ್ರೆಗೆ ಹೋಗಿದ್ದೆ. ಅಲ್ಲಿ ನನಗೆ ಪಚ್ಚ ಶಾಲೆ ಸಿಕ್ಕಿತು. ಪಚ್ಚ ಶಾಲೆ ಬಗ್ಗೆ ನನಗೆ ಮೊದಲೇ ಸ್ವಲ್ಪ ಗೊತ್ತಿತ್ತು. ಅಲ್ಲಿಯವರಿಗೆ ಕನ್ನಡ ಏಕೆ ಬರುತ್ತದೆಂದರೆ, ಆ ಊರು ಕನರ್ಾಟಕದ ಸಮೀಪವೇ ಇದೆ. ಡಿಡಿಎಸ್ ಎಂದರೆ – ಡಿಡಿಎಸ್ – ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿ. ರೈತರ ಒಟ್ಟಿಗೆ ಕೆಲಸ ಮಾಡುತ್ತಿದೆ. ಅದು ಶಾಲೆಗೆ ಹೋಗದ ರೈತರ ಮಕ್ಕಳಿಗಾಗಿ ಈ ಶಾಲೆ ಸ್ಥಾಪಿಸಿದೆ. ಶಾಲೆಯ ಹತ್ತಿರವೇ ಡಿಡಿಎಸ್ನ ಸಮುದಾಯ ಬಾನುಲಿ ಕೇಂದ್ರ ಇದೆ. ಅಲ್ಲಿ ಅವರು ಕಲಿತ ಹಾಡು, ಕಥೆ, ವಿಷಯಗಳನ್ನು ಹೇಳುತ್ತಾರೆ.  ]]>

‍ಲೇಖಕರು G

March 12, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This