ಜಗದ ಜಾಲಾಡಿಗರಿಗೆ ರುಚಿ ಹತ್ತಿಸಿದ “ಚುರುಮುರಿ”

“ಚುರುಮುರಿ”
ಸ್ವಲ್ಪ ಸಿಹಿ, ಸ್ವಲ್ಪ ಸ್ಪೈಸಿ.

ಹಾಯ್ ಬೆಂಗಳೂರ್ ಹೇಗೆ ಬೆಂಗಳೂರು ಆಚೆಗೂ ಭರ್ಜರಿಯಾಗಿ ಬೆಳೆದಿದೆಯೋ ಹಾಗೇನೇ ಈ ಚುರುಮುರಿ ಕಥೆ ಕೂಡ. ಹಾಯ್ ಮೈಸೂರ್ ಅಂತಲೇ ಆರಂಭವಾದ ಈ ಬ್ಲಾಗಿಗೆ ಮೈಸೂರು ಬಿಡಿ, ಕರ್ನಾಟಕ ಬಿಡಿ, ಇಂಡಿಯಾ ಬಿಡಿ, ಈ ಜಗತ್ತಿನಲ್ಲೇ ಸಿಕ್ಕಾಪಟ್ಟೆ ಓದುಗರಿದ್ದಾರೆ.

ಮೈಸೂರಿನವರಿಗೆ ಕಡ್ಲೆಬೀಜ, ಕ್ಯಾರೆಟ್ಟು, ಕಡ್ಲೆಪುರಿ ಸೇರಿಸಿದ ಚುರುಮುರಿ ರುಚಿ ಹೇಗೆ ಹತ್ತಿದೆಯೋ ಜಾಲಾಡಿಗರಿಗೆ ಈ ಚುರುಮುರಿ ಬ್ಲಾಗ್ ರುಚಿ ಹತ್ತಿದೆ. ಬ್ಲಾಗಿನ ಸಿಕ್ಕಾಪಟ್ಟೆ ಸಾಧ್ಯತೆಗಳನ್ನು ಹಿಡಿದಿಟ್ಟ ಸಕ್ಸಸ್ ಚುರುಮುರಿಯದ್ದು. ಕರ್ನಾಟಕದಲ್ಲಿ ಅದು ಇಂಗ್ಲಿಷ್ ಇರಲಿ, ಕನ್ನಡ ಇರಲಿ ಒಂದಿಷ್ಟು ರೀಡಬಲ್ ಬ್ಲಾಗ್ ಗಳು ಹುಟ್ಟಿದ್ದರೆ ಅದರಲ್ಲಿ ಚುರುಮುರಿ ಕೈಯೂ ಇದೆ.

ಮೈಸೂರು ಬಗ್ಗೆ, ಮೈಸೂರಿಗರ ಬಗ್ಗೆ ಮೆಲುದನಿಯಲ್ಲಿ ಮಾತಾಡೋಕ್ಕೆ ಅಂತಾ ಶುರುವಾದ ಈ ಬ್ಲಾಗ್ ಈಗ “ನಾಟ್ ಜಸ್ಟ್ ಮೈಸೂರ್” ಅನ್ನೋ ನಿಲುವಿಗೆ ಬಂದುಬಿಟ್ಟಿದೆ. ಅಷ್ಟು ಫೇಮಸ್ ಆಗಿಹೋಗಿದೆ.

ವಿಜಯ ಕರ್ನಾಟಕ ಬೇರೆಯವರಿಗೆ ಸೇಲ್ ಆದಾಗ ಚುರುಮುರಿ ಹುಟ್ಟುಹಾಕಿದ ಚರ್ಚೆ ಅಬ್ಬಾ ಅಂತ ಮೂಗಿನ ಮೇಲೆ ಬೆರಳಿಡೋ ಹಾಗೆ ಮಾಡ್ತು. ಅದಾದ ಮೇಲಂತೂ ಹೊಸ ನ್ಯೂಸ್ ಬೇಕು ಅಂದ್ರೆ ಚುರುಮುರಿ ತೆಗೀಬೇಕು ಅನ್ನೋ ಹಾಗಾಗಿದೆ. ಇಷ್ಟೇ ಅಲ್ಲ, ಚುರುಮುರಿಯೊಳಗೆ ಕಡ್ಲೆಬೀಜ ಇರೋ ಹಾಗೆ ಫೊಟೋಗೋಸ್ಕರ ಫ್ಲಿಕ್ ಆರ್, ವೀಡಿಯೋಗೋಸ್ಕರ ಯೂಟ್ಯೂಬ್, ಹಾಡು ಕೇಳೋಕೆ ಜೂಕ್ ಬಾಕ್ಸ್… ಹೀಗೆ ಚುರುಮುರಿಯಲ್ಲಿ ಸಿಕ್ಕಾಪಟ್ಟೆ ಗರಮಾಗರಂ ಕೂಡ ಇದೆ. ಚುರುಮುರಿಗೆ ಈಗ ಅಣ್ಣತಮ್ಮಂದಿರೂ ಹುಟ್ಟಿಕೊಂಡಿದ್ದಾರೆ. “ಸ್ಯಾನ್ ಸೆರಿಫ್” ಮಾಧ್ಯಮ ಲೋಕದ ಬಗ್ಗೆ ಮಾತಾಡಿದರೆ, “ಕೋಸಂಬರಿ” ಹೊಟ್ಟೆ ಹಸಿವು ಕೆರಳಿಸುತ್ತೆ.

ಕರುಳು ಚುರ್ ಅನ್ನೋ ಸುದ್ದಿಯೂ ಇರುತ್ತೆ, ಬೇಕಾದೋರ್ಗೆ ಚುರುಕು ಮುಟ್ಟಿಸೋ ಸುದ್ದಿನೂ ಇರುತ್ತೆ. ಆರ್ ಕೆ churumuri.jpgನಾರಾಯಣರನ್ನು ನೆನಪಿಸಿಕೊಳ್ಳೋ ಹಾಗೆ ಮಾಡೋಕ್ಕೆ ರಾಜಭವನದ ಮೆಟ್ಟಿಲೂ ಹತ್ತುತ್ತೆ. ಕಿರಣ್ ಮುಜುಂದಾರ್ ಗುರ್ ಗುರ್ ಅನ್ನೋ ಹಾಗೂ ಮಾಡುತ್ತೆ. ಇನ್ಫೋಸಿಸ್ ನಂದನ್ ನಿಲೇಕಣಿಗೆ ಡಾಕ್ಯುಮೆಂಟ್ಸ್ ಬೇಕಾದ್ರೂ ಬಿಚ್ಚಿಡುತ್ತೆ. ಚಾ ಕುಡೀತಾ ಚುರುಮುರಿ ಬಾಯಿಗೆ ಹಾಕ್ಕೊಂಡ್ರೆ ಬೆಸ್ಟ್ ಇರುತ್ತೆ. ಸ್ವಲ್ಪ ಸಿಹಿನೂ ಸಿಗುತ್ತೆ, ಸ್ಪೈಸಿಯಾಗೂ ಇರುತ್ತೆ. ಪಕ್ಕದಲ್ಲಿರೋ ಲಿಂಕ್ಸ್ ಗೆ ಹೋದ್ರೆ ಡೈರೆಕ್ಟಾಗಿ ಮೈಸೂರಿನ ಚುರುಮುರಿಗೆ ಟಿಕೆಟ್ ಸಿಗುತ್ತೆ.                                                       

‍ಲೇಖಕರು avadhi

June 23, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This