ಚೋಮ ನಾಟಕ ಮಾಡಬೇಕಾದರೆ ನನಗೆ ಕಲಾಕ್ಷೇತ್ರದಲ್ಲಿ ಮಾಡಕ್ಕಾಗಲ್ಲ..

ಸಿ ಬಸವಲಿಂಗಯ್ಯ ‘ಮಲೆಗಲ್ಲಿ ಮದುಮಗಳು’ ನಾಟಕವನ್ನೂ ರಂಗಕ್ಕೆ ತಂದು ಯಶಸ್ವಿಯಾಗಿದ್ದಾರೆ. ಯಾಕೆ ಇಂತಹ ಪ್ರಯೋಗ ಅವರಿಗೆ ಬೇಕಾಯಿತು? ನಮ್ಮ ಇನ್ನೊಬ್ಬ ಪ್ರಮುಖ ನಿರ್ದೇಶಕಿ ಎನ್ ಮಂಗಳ ಇಲ್ಲಿ ಬಸೂ ಜೊತೆ ಮಾತಿಗಿಳಿದಿದ್ದಾರೆ.
ಕರ್ನಾಟಕದ ರಂಗಾಯಣ  ರೆಪರ್ಟರಿ ಬಗ್ಗೆ ಹಲವಾರು ವಾದ ವಿವಾದಗಳಿರುವಂತಹ ಸಂದರ್ಭದಲ್ಲಿ, ರಂಗಾಯಣ ಸಂಕಷ್ಟದಲ್ಲಿರುವಾಗ, ರಂಗಾಸಕ್ತರೆಲ್ಲರೂ ತಮ್ಮ ಬಾಯಲ್ಲಿ ರಂಗಾಯಣವನ್ನು ಎಲೆ ಅಡಿಕೆಯಂತೆ ಜಗಿಯುತ್ತಿರುವಾಗ, ರಂಗಾಯಣದ ಮಾಜಿ ನಿರ್ದೇಶಕರಾಗಿದ್ದ
ಸಿ. ಬಸವಲಿಂಗಯ್ಯನವರು ‘ಮಲೆಗಳಲ್ಲಿ ಮದುಮಗಳು’ ಮೂಲಕ ರಂಗಾಯಣದ ಕಲಾವಿದರ ಜೊತೆ ದೊಡ್ಡ ಸಾಹಸಕ್ಕೆ ಕೈ ಹಾಕಿ, ಯಶಸ್ವಿಯಾಗಿ , ಆಡುವ ಬಾಯಿಗಳಿಗೆ ಕೆಲಸದ ಮೂಲಕ ಉತ್ತರ ಕೊಟ್ಟಿದ್ದಾರೆ.
ಅವರನ್ನು ಈ ಸಂದರ್ಭದಲ್ಲಿ ಭೇಟಿಯಾದಾಗ ಹಂಚಿಕೊಂಡ ಮಾತುಗಳು ಇವು...
ರಂಗಾಯಣಕ್ಕೀಗ 21 ರ ಹರೆಯ….
ನಾನು NSD  ಮುಗಿಸಿ ವಾಪಸ್ಸು ಬೆಂಗಳೂರಿಗೆ ಬಂದಾಗಲೇ ನಿರ್ಧರಿಸಿದ್ದೆ. ರಂಗಮಂದಿರಗಳು ಇಲ್ಲದ ಜಾಗದಲ್ಲಿ ಹೋಗಿ ಕೆಲಸ ಮಾಡಬೇಕು ಅಂತ. ಓದಿ
ಬೆಳೆದಿದ್ದೆಲ್ಲ ಬೆಂಗಳೂರೇ ಆದರೂ ಬೆಂಗಳೂರಿನ ಆಚೆ ಕೆಲಸ ಮಾಡಲು ಪ್ರಾರಂಭಿಸಿದೆ.  ರಂಗಭೂಮಿಯಲ್ಲಿ ರಂಗಮಂದಿರಗಳೇ ಎಲ್ಲ ಅಲ್ಲ. ನಾವು alternative ಆದ  theatre space ಹುಡುಕಬೇಕು ಅಂತ ಅನ್ನಿಸೋದು.
ಈ ಸಂಬಂಧಿಯಾಗಿ ಮೇಷ್ಟ್ರು ತುಂಬ ಪ್ರಯೋಗಗಳನ್ನು ಮಾಡಿದಾರೆ. ಭೂಪಾಲ್ ಆಗಬಹುದು, ರಂಗಾಯಣ ಆಗಬಹುದು. ಇಲ್ಲಿ ಮೈಸೂರಿನಲ್ಲಿ ಇಷ್ಟು ದೊಡ್ಡ ಕಲಾಮಂದಿರ ಇದ್ದರೂ ಕಾರಂತರು ಅದರ ಹಿತ್ತಿಲಲ್ಲಿ ರಂಗಾಯಣವನ್ನು ಪ್ರಾರಂಭಿಸಿದರು. ವನರಂಗ ಸೃಷ್ಟಿಯಾಯಿತು. proscenium theatre ಗಳಿಗೆ ಹಿತ್ತಿಲು ಇರೋದಿಲ್ಲ . ಆದರೆ ರಂಗಭೂಮಿಯ ಕೆಲಸಕ್ಕೆ ಹಿತ್ತಿಲು ಬೇಕು ಅಂತ ನನಗನ್ನಿಸಿತು. ನಾನೇನು proscenium ವಿರೋಧಿ ಅಲ್ಲ.  ಆದರೆ ಬೇರೆ ಬೇರೆ ರೀತಿಯ  ಆವರಣ ಹುಡುಕುವುದು ನನ್ನ text ನ ಜರೂರಿ ಕೂಡ ಅಂತ ನನಗನ್ನಿಸತ್ತೆ.. ಚೋಮ ನಾಟಕ ಮಾಡಬೇಕಾದರೆ ನನಗೆ ಕಲಾಕ್ಷೇತ್ರದಲ್ಲಿ ಮಾಡಕ್ಕಾಗಲ್ಲ. ಯಾಕಂದರೆ ನಮ್ಮ ಮನೆಗಳ ಹಿತ್ತಿಲಿಗೇ ಚೋಮನಂತಹವರನ್ನು ಬಿಟ್ಟುಕೊಳ್ಳದೆ ಇರುವವರು ನಾವು. ಇನ್ನು ಕಲಾಕ್ಷೇತ್ರದ ಮೆಟ್ಟಿಲು ಹೇಗೆ ಹತ್ತಿಸೋಕೆ ಸಾಧ್ಯ? ಅದು ನನಗೆ ಅಣಕ ಅಂತ ಅನ್ನಿಸತ್ತೆ. space ಅನ್ನುವುದು ಕೇವಲ ನನ್ನ ಆಯ್ಕೆ ಅಲ್ಲ. ಅದು ನನ್ನ intepretation ಕೂಡ.  ನಾನು ರಂಗಾಯಣದಲ್ಲಿ ಕುಸುಮಬಾಲೆ ಮಾಡಿದ ಮೇಲೆ ನನಗೆ ನನ್ನ ವಿಚಾರಗಳಲ್ಲಿ ಇನ್ನೂ  clarity ಸಿಗ್ತಾ ಹೋಯಿತು.
ಇನ್ನು  ರಂಗಾಯಣದ ವಿಷಯಕ್ಕೆ ಬರೋದಾದರೆ, ರಂಗಾಯಣ ನನಗೆ ಹೊಸದಲ್ಲ. ಇಲ್ಲೆ ಇದ್ದವನು, ದುಡಿದವನು ಮತ್ತು ನಿದರ್ೆಶಕನಾಗಿ 6 ವರ್ಷ ಕಾಲ ನಿಭಾಯಿಸಿದವನು. ನನಗೆ ಇಲ್ಲಿನ ಕಲಾವಿದರ body and mind ಎರಡರ ಪರಿಚಯ ಚೆನ್ನಾಗಿ ಗೊತ್ತು. ಅಲ್ಲದೆ ರಂಗಾಯಣ ಈ ಹಿಂದೆ ಬಹಳಷ್ಟು ಪ್ರಯೋಗಗಳಗೆ ಒಡ್ಡಿಕೊಂಡಿದೆ.  ಅತ್ಯಂತ ಕ್ಲಿಷ್ಟವೆನಿಸಿದ ಅಡಿಗರ ಭೂಮಿಗೀತ, ಕನ್ನಡಕ್ಕೆ ಅನುವಾದಿಸಿ ಅಂತ ಅನ್ನಿಸಿಕೊಂಡ ದೇವನೂರರ ಕುಸುಮಬಾಲೆ, ಕಿಂದರಿಜೋಗಿ, ಮೂಕನಮಕ್ಕಳು ಎಂಬ ನೀಳ್ಗವಿತೆ, ತಿರುಕನ ಕನಸು, ಬೇಳೆ ಕಾಳಿನ ಪ್ರಸಂಗ ಎಂಬ ಮುಖವಾಡ ಪ್ರದರ್ಶನ- ಹೀಗೆ ಎಷ್ಟೊಂದು. ಇವು ಯಾವುದೂ ನಾಟಕವಲ್ಲ.  ಆದರೆ ರಂಗಾಯಣ ಅದನ್ನು ನಾಟಕವಾಗಿ ಮಾಡಿತು. ಅಲ್ಲದೆ ರಂಗಾಯಣ ನಾಟಕಗಳನ್ನೂ ಮಾಡಿದೆ. ನಾಟಕ ಮಾಡೋದು ರಂಗಾಯಣದ ಧರ್ಮ. ಜೊತೆಗೆ ನಾಟಾಕೇತರ ಸಾಂಸ್ಕೃತಿಕ ವಿವರಗಳನ್ನು ವಿಸ್ತರಿಸುವುದು ಇದೆಯಲ್ಲ, ಅದು ಕೂಡ ನಮ್ಮೆಲ್ಲರ ಸಾಂಸ್ಕೃತಿಕ ಜವಾಬ್ಡಾರಿ. ರಂಗಭೂಮಿಯನ್ನು ಕಟ್ಟಬೇಕು. ನಾಟಕವನ್ನಲ್ಲ.  ಹೊಸದನ್ನು ಕಟ್ಟಬೇಕು ಮತ್ತು ಅದನ್ನು ಮುರಿಯಬೇಕು. ಇದು
ಮೇಷ್ಟೃ ನಮ್ಮೆಲ್ಲರಿಗೂ ಕಲಿಸಿದ ಪಾಠ.  ಈ ರೀತಿಯ ಹೊಸ ದರ್ಶನಕ್ಕೆ ಹಾತೊರೆಯುವುದು ಮತ್ತು ಅದಕ್ಕಾಗಿ ಕೆಲಸ ಮಾಡುವುದು ಇಲ್ಲಿನ ಕಲಾವಿದರಿಗೆ
ಸಾಧ್ಯ. ಆ ಕಾರಣಕ್ಕೆ ಇಂಥ ಸಾಹಸವನ್ನು ನಾನು ಇವರ ಜೊತೆ ಮಾಡುವುದಕ್ಕೆ ನಿರ್ಧರಿಸಿದೆ.
ಇನ್ನು ಕೃತಿಯ ಬಗ್ಗೆ ಹೇಳೋದಾದರೆ ಮಲೆಗಳಲ್ಲಿ ಮದುಮಗಳು ನಮ್ಮ ಕಾಲದ ಅದ್ಭುತ ಕೃತಿ.  ಈ ಕೃತಿಗೂ ಚೌಕಟ್ಟು ಅನ್ನೋದು ಇಲ್ಲ. ಇದರ ಗುರಿಯೇ ಪಯಣ. ಇದು ಎಲ್ಲೂ ಪ್ರಾರಂಭಗೊಳ್ಳುವುದಿಲ್ಲ, ಮೊದಲಿಲ್ಲ, ತುದಿಯಿಲ್ಲ, ಎಲ್ಲೂ ನಿಲ್ಲುವುದೂ ಇಲ್ಲ, ಕೊನೆ ಮುಟ್ಟುವುದೂ ಇಲ್ಲ. ನನಗೆ ಗೊತ್ತಿತ್ತು, ಇದು ತುಂಬಾ ಸಂಕೀರ್ಣವಾದ ಚೌಕಟ್ಟಿಗೆ ಸಿಲುಕದ ವಸ್ತು ಅಂತ. ತುಂಬಾ ಕಷ್ಟ ಅನ್ನುವುದರ ಅರಿವೂ ಇತ್ತು. ಆದರೂ 15 ಜನ ನಟ ನಟಿಯರಿರುವ ರಂಗಾಯಣದ ಕಲಾವಿದರು ಶ್ರೇಷ್ಟರೆಂಬ ಬಲವಾದ ನಂಬಿಕೆಯಿತ್ತು. 150 ಪಾತ್ರಗಳಿರುವ ಕೃತಿಗೆ 60 ಜನ ಹೊಸ ಹುಡುಗರನ್ನು ಆರಿಸಿಕೊಂಡೆ. ದ್ವಾರಕೀ ವಿನ್ಯಾಸದ ಕೆಲಸ ಮಾಡೋಕೆ ಶುರು ಮಾಡಿದರು. ಚೀನಿ ಅಂತೂ ದೆವ್ವ ಬಂದವರ ಹಾಗೆ ಕೆಲಸ ಮಾಡಿದ್ದಾರೆ. ನಾರಾಯಣಸ್ವಾಮಿ script ಮೇಲೆ ಕೆಲಸ ಮಾಡೋಕೆ ಪ್ರಾರಂಭಿಸಿದರು. ಹೊಸ 60 ಜನ ಹುಡುಗರಿಗೆ 15 ಜನ ಹಿರಿಯ ಕಲಾವಿದರು marshal trainers ತರಹ ನಿಂತರು.  ನಾನು ಈ ನಾಟಕಕ್ಕೆ blocking ಅಂತ ಏನೂ ಮಾಡಲಿಲ್ಲ.  script ಇತ್ತು.  space ಇತ್ತು. ಎಲ್ಲಿ ಬೇಕಾದರೂ ಓಡಾಡಿ ಅಂದೆ. ಗುಂಪುಗಳಲ್ಲಿ 62 ಅಧ್ಯಾಯಗಳನ್ನು  ಅಶುವಿಸ್ತರಣೆ ಮೂಲಕ ನಾಟಕವನ್ನು ಕಟ್ತಾ ಹೋದೆವು. ಹೊಸ ಹುಡುಗರಿಗೆ  theatre orientation ಬೇಕಿತ್ತು.  ಹಿರಿಯ ಕಲಾವಿದರ ಜೊತೆಗೆ
ಹೊಂದುಕೊಳ್ಳುವ ಹಾಗೆ ಅವರನ್ನು ತಯಾರು ಮಾಡಬೇಕಾಗಿತ್ತು. ಆ ಕೆಲಸವನ್ನು ನಾನು ಮಾಡಿದೆ.  ರಂಗಾಯಣದ ಕಲಾವಿದರಿಗೆ ನಿದರ್ೆಶನ ಮಾಡಬೇಕಾದ ಅಗತ್ಯವೇ ಇಲ್ಲ. ಅವರಿಗೆ ಗೊತ್ತು, ನನಗೆ ಏನು ಬೇಕು ಅಂತ. ಅವರು ಮಾಡ್ತಾರೆ. ಅದಕ್ಕೆ ನಾನು ಹೇಳ್ತಿರೋದು ರಂಗಾಯಣಕ್ಕೀಗ 21 ರ ಹರೆಯ ಅಂತ. ಎಲ್ಲರೂ
ರಂಗಾಯಣ ಕಲಾವಿದರ ದೇಹ ನೋಡ್ತಿದಾರೆಯೇ ಹೊರತು ಅವರ ಪ್ರತಿಭೆ, ಭೌದ್ಧಿಕತೆ,ಪ್ರೌಢಿಮೆಗಳ ಬಗ್ಗೆ ಯಾರಿಗೂ ಗಮನವೇ ಇಲ್ಲ. ನಾನಂತು ಅದನ್ನು
ಕಂಡುಕೊಂಡಿದ್ದೇನೆ. ಅದಕ್ಕಾಗಿಯೇ ಈ ದೊಡ್ಡ ಸಾಹಸವನ್ನು ಇವರ ಜೊತೆ ಮಾಡಿದೆ. ಅಲ್ಲದೆ ಕಾ.ತ.ಚಿಕ್ಕಣ್ಣ ಅವರಂತ ಒಳ್ಳೆ ಅಧಿಕಾರಿ ನಮ್ಮ ಜೊತೆ ಇದ್ದಿದ್ದಕ್ಕೆ
ಇದು ಸಾಧ್ಯವಾಯಿತು.
ನನ್ನ ಮುಖ್ಯ ಉದ್ದೇಶ ಒಟ್ಟು ರಂಗಭೂಮಿಯ ಸಿದ್ಧ ಚೌಕಟ್ಟನ್ನು ಎಲ್ಲ ಅರ್ಥಗಳಲ್ಲೂ ಒಡೆಯುವುದಾಗಿತ್ತು. space ಆಗಬಹುದು, ನಾಟಕ ಕೃತಿಯಾಗಬಹುದು, ಸಂಗೀತವಾಗಬಹುದು. frame ಅನ್ನು ಒಡೆಯೋಕೆ ಹೊರಟಿರುವ ನಾನು  pre condition ಆಗಿರುವ mindset ಅನ್ನು ಒಡೀತೀನಿ.  ತಯಾರಿಯ ಸಂಧರ್ಭದಲ್ಲಿ ಎಲ್ಲರೂ ತಮಾಷೆ ಮಾಡ್ತಿದ್ದರು. ನಗ್ತಾ ಇದ್ದರು. 9 ಗಂಟೆ ನಾಟಕ ಯಾರು ನೋಡ್ತಾರೆ? ಬಸು ಮತ್ತು lighting ನವರು ಮಾತ್ರವೇ ಕೊನೇಗೆ ಉಳಿದಿರ್ತಾರೆ ಅಂತ.  ಆದರೆ ಜನ ಎಲ್ಲವನ್ನು ಸುಳ್ಳು ಮಾಡಿಬಿಟ್ಟರು.ಈಗ ಎಲ್ಲರಿಗೂ ಗೊತ್ತು. ಜನ ಹೇಗೆ ನಾಟಕ ನೋಡ್ತಿದಾರೆ ಅಂತ.  ಈ ರೀತಿ ನಾಟಕ ನೋಡೋಕೆ  ಟಿಕೆಟ್ ಗಾಗಿ ಪರದಾಡಿದ್ದು ಎಲ್ಲೂ ಇಲ್ಲ. ಇದೊಂದು ನಿಜವಾಗಿಯೂ ಅಚ್ಚರಿಯ ಸಂಗತಿ. ನಾವೇನೂ ಇಲ್ಲಿ ದೊಡ್ಡ ಪವಾಡ ಮಾಡಿಲ್ಲ. ಆದರೆ ಇಡೀ ತಂಡ ಒಟ್ಟಿಗೇ ಕೆಲಸ ಮಾಡಿ ಒಂದು ಒಳ್ಳೆಯ ಕೃತಿಯನ್ನು ಕೊಟ್ಟರೆ ಜನ ನೋಡೇ ನೋಡ್ತಾರೆ ಅಷ್ಟೆ.
ಎನ್ನುತ್ತಾ ಬಸು ಮಾತಾಡುತ್ತಲೆ ಇದ್ದರು. ಅವರೊಳಗಿನ ಮಾತು ಇನ್ನೂ ಮುಗಿದಿರಲಿಲ್ಲ.

‍ಲೇಖಕರು avadhi

May 26, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

2 ಪ್ರತಿಕ್ರಿಯೆಗಳು

 1. MALATHESH HV

  Great madam,
  you have made Basu sir to speak on PRAYOGA.
  Even iam the one who demanded entry to watch play with friends and able to get in with Basu sir help.
  Only he can dream these type of projects and make it reality.
  Congrats for all who have contributed to the dream of MALEGALALLI MADUMAGALU to be on stage.
  Big Dream…
  Great

  ಪ್ರತಿಕ್ರಿಯೆ
 2. Jayalaxmi Patil

  ಏನ್ ಗೊತ್ತಾ ಮಂಗಳಾ, ಬಸು ಸರ್ ಜೊತೆ ವೈಯಕ್ತಿಕವಾಗಿ ಮಾತಾಡಿಯೂ, ಮತ್ತು ಅವರು ಮೊನ್ನೆ ‘ಸಮೂಹ’ದ ಸಂವಾದದಲ್ಲಿ ಪಾಲ್ಗೊಂಡು ಮಾತಾಡಿದ್ದನ್ನು ಕೇಳಿದಾಗಿಯೂ ಸಹ ನೀವು ಬರೆದ ಲೇಖನ ಓದಿದಾಗ ಅರೆ ಇನ್ನೂ ಎಷ್ಟೋಂದು ವಿಷಯ ಇವೆಯಲ್ಲ ತಿಳಿಯೋಕೆ ಅನಿಸಿ ಸೋಜಿಗಗೊಳ್ಳುತ್ತಿದ್ದೇನೆ!!! Thats Basu!!! 🙂 ಒಪ್ಪವಾಗಿ ಮೂಡಿ ಬಂದಿದೆ ಲೇಖನ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: