ಛಂದ ಪುಸ್ತಕ ಬಿಡುಗಡೋಪಖ್ಯಾನ ಮಾಲತಿ ishtyle

– ಮಾಲತಿ ಶೆಣೈ

ಬೋಳುವಾರ ಮಾಮನ ಪುಸ್ತಕ ’ಸ್ವಾತಂತ್ಯ್ರದ ಓಟ’ ಪುಸ್ತಕದ ಬಿಡುಗಡೆ ದಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಸುಧೇಂದ್ರ ಸಿಕ್ಕಿದರು. ಇನ್ವಿಟೇಶನ್ ಕೊಡುತ್ತ ’different ‘ ಆಗಿರತ್ತೆ ಮಾಲ್ತೀ ಬನ್ನಿ ಅಂದ್ರು. ನಾನು ಹೂಂ ಅಂದೆ. ಪುನ: ಯುಗಾದಿ ದಿನ ನಮ್ಮ ಮನೆಗೆ ಊಟಕ್ಕೆ ಕರೆದಿದ್ದಾಗ ಮತ್ತೊಮ್ಮೆ ನೆನಪಿಸಿದರು. ವಸುಧೇಂದ್ರ ಅವರ ಪರಿಚಯ ಹೇಗಾಯ್ತು ಅಂತ ಹೇಳೊಕ್ಕೆ ಸ್ವಲ್ಪ flash back mode (ಆಹಾ ಆಜಾದ್ ಭೈಯಾ ಅವರ ’ಪದಾರ್ಥ ಚಿಂತಾಮಣಿ’ ಗೆ flash back ಪದ ಕಳುಹಿಸಬೇಕು) ಹೋಗಬೇಕಾಗುತ್ತದೆ. ವಿಜಯಕರ್ನಾಟಕದ ಸಾಪ್ತಾಹಿಕ ಪುರವಣಿಯಲ್ಲಿ ವಸುಧೇಂದ್ರರ ಒಂದು ಸಣ್ಣ ಕತೆ ಬಂದಿತ್ತಂತೆ. ಶ್ರೀಕಾಂತ ಅದನ್ನು ಓದಿ ಮಾಲ್ತಿ ನಿನಗಿಷ್ಟ ಆಗಬಹುದು ಎಂದು ನನಗೋಸ್ಕರ ಆ ಪತ್ರಿಕೆಯನ್ನು ಬದಿಗೆ ಇಟ್ಟಿದ್ದರು. ಮೂರು ನಾಲ್ಕು ಸಲ ಓದಿದ್ಯಾ ಅಂತ ಕೇಳಿದರು ಸಹಾ..ನಾನು ಇಲ್ಲ ಇಲ್ಲ ಅಂತ, ಆಮೇಲೆ ಮನೆಗೆ ಅಮ್ಮ ತಮ್ಮ ಎಲ್ಲ ಬಂದು ಕೊನೆಗೆ ಕಣ್ತಪ್ಪಿನಿಂದ ಆ ಪತ್ರಿಕೆ ರದ್ದಿಯಲ್ಲಿ ಹೋಗಿ ಬಿಡ್ತು. ಶ್ರೀಕಾಂತ ಗೆ ಆ ಕತೆ ಎಷ್ಟು ಇಷ್ಟ ಆಗಿತ್ತೆಂದರೆ ಅವರು ಸಪ್ನಾ ಗೆ ಹೋಗಿ ಅವರು ಬರೆದಿದ್ದ ನಮ್ಮಮ್ಮ ಅಂದ್ರೆ ನಂಗಿಷ್ಟ ’ಪುಸ್ತಕ ತೆಗೆದುಕೊಂಡು ಬಂದ್ರು. ಅಲ್ಲೆ ಕಂಪ್ಯೂಟರ್ ಪಕ್ಕನೆ ಇಟ್ಟು ಬಿಟ್ಟಿದ್ದರು.ಒಂದು ದಿನ ಕೂಡ ನಾನು ಅದನ್ನು ಮುಟ್ಟಲಿಕ್ಕೆ ಹೋಗಿರಲಿಲ್ಲ. ಒಂದು ದಿನ ಆಫಿಸ್ ಕೆಲಸ ಮಾಡಿ ಬೋರ್ ಆಗಿ, ತಂಗಿ ಜತೆ ಚ್ಯಾಟ್ ಮಾಡ್ತಾ ಇದ್ದೆ. ಅವಳಿಗೆ ಫೋನ್ ಬಂದಿದ್ದರಿಂದ ನಮ್ಮ ಚ್ಯಾಟ್ ಗೆ ಸ್ವಲ್ಪ ವಿರಾಮ ಸಿಕ್ಕಿತು, ಕೈಗೆ ಹತ್ತಿದ ಪುಸ್ತಕವನ್ನು ಎತ್ತಿ ಕೊಂಡೆ. ಸುಮ್ಮನೆ ನಾಲ್ಕು ಲೈನ್ ಓದ್ತಾ ಇದ್ದವಳಿಗೆ ಆ ಕತೆ ಯಾವಾಗ ಮುಗಿದು ಯಾವಾಗ ಅಳಲಿಕ್ಕೆ ಶುರು ಮಾಡಿದೆ ಅಂತ ಗೊತ್ತಿಲ್ಲ. ಶ್ರೀಕಾಂತ, ನಿಹಾ ಬಳಿ ಬಂದು, ’ಮಾಲತೀ ಕಸ್ಸಲ್ ಜಾಲ್ಲೆ..ಮತ್ತು ನಿಹಾ ಅಮ್ಮಾ ಅಂತ ತಬ್ಬಿಕೊಂಡಾಗ ಗೊತ್ತಾಯಿತು ನಾನು ಕೀ ಬೋರ್ಡ್ ಮೇಲೆ ತಲೆ ಇಟ್ಟು ಭೋರ್ ಅಂತ ಅಳ್ತಾ ಇದ್ದಿದ್ದು.”ಈಗ ಸರಿಯಾಗೆ ಇದ್ದೆ, ಇದ್ದಕ್ಕಿದ್ದ ಹಾಗೆ ಏನಾಯಿತು” ಅಂತ ಇಬ್ಬರೂ ಗಾಬರಿ ಪಟ್ಟರು..ಯಾಕೆ ಅಂದ್ರೆ ನಾನು ಅಳುವ/emotional ಆಗುವ ಪ್ರಾಣಿಯಲ್ಲ. ನನಗೆ ಮಾತು ಬರದೆ ಪುಸ್ತಕದ ಕಡೆ ಬೆರಳು ಮಾಡಿದೆ..ಶ್ರೀಕಾಂತ ’ಹುಚ್ಚು ಹುಡುಗಿ’ ಅಂದ್ರು..ನಿಹಾ ’ಓಹ್ mommy’ ಅಂದು ನಗಲು ಶುರು ಮಾಡಿದ್ರು. ಇದರಕ್ಕಿಂತ ಮುಂಚೆ ನಾನತ್ತಿದ್ದು ಒಂದೇ ಸಲ ನೋ ನೋ ಮದುವೆಯಾಗಿ ಅಮ್ಮನ ಬಿಟ್ಟು ಬರುವಾಗ ಖಂಡಿತ ಅಳಲಿಲ್ಲ..:-). ಆದರೆ ಕೊಪ್ಪದಲ್ಲಿ ನಾವು ಬಾಡಿಗೆ ಮನೆಗೆ ಬಂದ ಮೊದಲ ಭಾನುವಾರ ನಾನು, ಶ್ರೀಕಾಂತ ಶಟಲ್ ಆಡಲು ಹೋಗುವಾಗ, ’ಇವತ್ತು ಮಸಾಲೆ ದೋಸೆ’ ಅಂತ style ಆಗಿ ಹೇಳಿದ್ದೆ. ನನ್ನ ಜೀವನದ ಮೊದಲನೇ ಸಲ ಮಾಡಿದಂತಹ ಮಸಾಲೆ ದೋಸೆ. ಶ್ರೀಕಾಂತ ರಾಯರು ಅವರು ಮೂರು ನಾಲ್ಕು ಗೆಳೆಯರನ್ನು ಕರೆದುಕೊಂಡು ಬರುವುದೇ?? ನನಗೆ ಅಡಿಗೆಯ ’ಅ’ ಅಕ್ಷರ ನೂ ಸರಿ ಗೊತ್ತಿರಲಿಲ್ಲ. ಅಮ್ಮನ ಬಳಿ ಹೇಳಿಸಿಕೊಂಡು ಒಂದು ಹಳೆಯ ಕ್ಯಾನರಾ ಬ್ಯಾಂಕ್ ಡೈರಿಯಲ್ಲಿ for 1 glass udad daal add three glasses of rice and 1/4 cup of poha…ಅಂತ ಬರೆದುಕೊಂಡಿದ್ದನ್ನು ಚಾಚೂ ತಪ್ಪದೆ, ಪ್ರೀತಿಯಿಂದ ದೊಡ್ಡ ಭೈಯಾ ಖರೀಧಿಸಿ ಕೊಟ್ಟ ರುಬ್ಬುವ ಕಲ್ಲಲ್ಲಿ ರುಬ್ಬಿ ಹಿಟ್ಟೇನೋ ರೆಡಿ ಮಾಡಿಟ್ಟೆ. ಮರುದಿನ ಶ್ರೀಕಾಂತ ಆಡಲು ಹೋದ ತಕ್ಷಣ , ಅಮ್ಮ ಮಾಡುವ ಆಲು ಭಾಜಿಯನ್ನು ನೆನಪಿಸಿಕೊಂಡು ಅಂದಾಜಿನಲ್ಲೇ ಆಲೂಗಡ್ಡೆ ಪಲ್ಯ, ಮತ್ತು ಕೆಂಪು ಚಟ್ನಿ ರೆಡಿ ಮಾಡಿಟ್ಟೆ…ಶ್ರೀಕಾಂತ ಅವರ ಸ್ನೇಹಿತರನ್ನೆಲ್ಲ ಪರಿಚಯಮಾಡಿಸಿದರು. ಒಬ್ಬರಂತೂ ಬಾಂಬೆಯಲ್ಲಿ ಮಸಾಲೆ ಚಾ ಮಾಡ್ತಾರಂತಲ್ಲವಾ?? ನಮಗೆ ಮಸಾಲಾ ಚಾ ನೆ ಮಾಡಿ ಅಂದ್ರು. ಚಾ ಅಂತೂ ನನಗೆ ಮಾಡಿ ರೂಢಿಯಿತ್ತು. ಸರಿ ಭೈಯಾ ನೆ ಕೊಡಿಸಿದ ಹೊಸ ಮಿರಿ ಮಿರಿ ಮಿಂಚುವ ಕಾವಲಿ ಗ್ಯಾಸ್ ಮೇಲಿಟ್ಟೆ, ತುಂಬ confidence ನಲ್ಲಿ ದೋಸೆ ಹುಯ್ದೆ…correct ಉರುಟಾಗಲಿಲ್ಲ, but it was ok-ish. ಚೆಂದದ ಕೆಂಪಾಗಿ ಬಿಡ್ತು ದೊಸೆ. ಸುಟ್ಟುಗದಿಂದ ತೆಗಿಲಿಕ್ಕೆ ನೋಡಿದ್ರೆ ಜಪ್ಪಯ್ಯ ಅಂದ್ರು ದೋಸೆ ಕಾವಲಿ ಮೇಲಿಂದ ಮೇಲೆ ಬಂದ್ರೆ ಹೇಳಿ…ನನಗೋ ’ಛೆ! ಶ್ರೀಕಾಂತ ಎಷ್ಟು ಪ್ರಿತಿಯಿಂದ ಅವರ ಮಿತ್ರರನ್ನೆಲ್ಲ ಕರೆದುಕೊಂಡು ಬಂದಿದ್ದಾರೆ, ಅವರ shape-out ಆಗುತ್ತಲ್ಲವಾ ಅಂತ ಅಂದುಕೊಂಡು ಅಲ್ಲಿ ಅಳ್ತಾ ನಿಂತೆ. 5 ನಿಮಿಷ ಆಯ್ತು, 10 ನಿಮಿಷ ಆಯ್ತು . ಮಸಾಲ ಬಿಡಿ, ಸಾದಾ ದೋಸೆದೂ ಸದ್ದಿಲ್ಲದ್ದೆ ಹೋದಾಗ ಶ್ರೀಕಾಂತ ನಿಧಾನಕ್ಕೆ ಅಡಿಗೆ ಮನೆಗೆ ಬಂದ್ರು. ನಾನು ಅವರನ್ನು ತಬ್ಬಿಕೊಂಡು ಅಳಲಿಕ್ಕೆ ಶುರು ಮಾಡಿದೆ. ಅವರು ಏನಾಯ್ತು ಅಂದ್ರು, ನಾನು , ದೋಸೆ ಏಳ್ತಾ ಇಲ್ಲ ಅಂದೆ’ ಅವರು ಅಷ್ಟೇನಾ?? ಅಂತ ಹೇಳಿ ಹಾಲ್ ನಲ್ಲಿರುವ ಸ್ನೇಹಿತರನ್ನೆಲ್ಲ ಅಡಿಗೆ ಮನೆಗೆ ತಾಗಿರುವಂತೆ ಇರುವ ಡೈನಿಂಗ್ ಟೇಬಲ್ ಗೆ ಕರೆದು, ಮಾತಾಡ್ತಾ, ನನ್ನ ಕಾವಲಿ ಸುಟ್ಟುಗದಿಂದ ಕೇರಿ ಕೇರಿ ಕ್ಲೀನ್ ಮಾಡಿದರು. ಆ ಮೇಲೆ ಕಾವಲಿ ಮೇಲೆ ಒಳ್ಳೆ professional cook ತರಹ ಚೋಂಯ್ಯ ಅಂತ ನೀರು ಸಿಂಪಡಿಸಿ ಆಮೇಲೆ ದೋಸೆ ಹೋಯ್ದರು. ಅಹಾ ಎಷ್ಟು ಸಲೀಸಾಗಿ ದೋಸೆ ಮಾಡಿದರು. ಎರಡು ದೋಸೆ ಮಾಡಿದ ಮೇಲೆ ಉಳಿದಿದ್ದ ದೋಸೆ ನಾನೆ ಹುಯ್ದು ಮಸಾಲೆ ಟೀ ಮಾಡಿ ಅವರ ಸ್ನೇಹಿತರ ಕಡೆ ಭೇಶ್ ಅನ್ನಿಸಿಕೊಂಡೆ…ಅ ಮೇಲೆ ನಾನು ಅತ್ತಿದ್ದು ವಸುಧೇಂದ್ರರ ಕತೆ ಓದಿ… ಅವರಿಗೊಂದು ಮೈಲ್ ಕಳುಹಿಸಿದೆ, ಅವರು ಪ್ರತಿಕ್ರಯಿಸಿ, ಅವರ ಪುಸ್ತಕದ ಲಿಸ್ಟ್ ನ್ನೆ ಕಳುಹಿಸಿದರು. ಮಿತ್ರ ಅಪಾರರ ಬ್ಲಾಗ್ ನಲ್ಲಿ ವಸುಧೇಂದ್ರರ ಇನ್ನೊಂದು ಕತೆ ಹಾಕಿದ್ದರು. ಅದನ್ನು ಓದುತ್ತಾ ಎಷ್ಟು ತನ್ಮಯಳಾದೆ ಅಂದರೆ background ನಲ್ಲಿ ಹಾಲು ಸುಟ್ಟ ವಾಸನೆ ಮೂಗಿಗೆ ಬಡೀತಿದ್ರೆ, “ಛೆ ಯಾರೊ ಹಾಲು ಗ್ಯಾಸ್ ಮೇಲಿಟ್ಟು ಮರೆತಿದ್ದಾರೆ, ತಲೆಇಲ್ಲದವರು’ ಅಂದುಕೊಳ್ಳತ್ತಾ , ಕತೆ ಓದಿ ಮುಗಿದ ಮೇಲೆ ನನಗೆ ಹಾಲು ಸುಟ್ಟ ವಾಸನೆ ನಮ್ಮ ಮನೇದೆ ಅಂತ ಗೊತ್ತಾಗಿದ್ದು..ಪಾತ್ರೆ ಸರಿ ಪಡಿಸೋ ಸ್ಥಿತಿಯಲ್ಲಿ ಇರಲಿಲ್ಲ. ವಸುಧೇಂದ್ರ ಅವರಿಗೆ blame ಮಾಡಿ ಇನ್ನೊಂದು ಉದ್ದ ಮೈಲ್ ಹಾಕ್ದೆ..ಆ ಮೇಲೆ ಸಪ್ನಾ ಗೆ ಹೋಗಿ ಅವರು ಬರೆದ ಎಲ್ಲ ಪುಸ್ತಕಗಳನ್ನು ತಂದು ಇನ್ನೆರಡು ಟೀ ಪಾತ್ರೆಗಳನ್ನು ಸುಟ್ಟು ನಾನು ಅವರ ಬರಹದ ಕಂಡಾಪಟ್ಟೆ ಫ್ಯಾನ್ ಆಗಿ, ಅವರ ಒಂದೆರಡು ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ attendance ಹಾಕಿ, (ಹೋ ವಸುಧೇಂದ್ರರ ಎಲ್ಲ ಕಾರ್ಯಕ್ರಮಕ್ಕೆ ನಿಮಗೆ ಹೋಗಕ್ಕೆ ಆಗುತ್ತೆ, ನಮ್ಮ ಒಂದೂ ಕಾರ್ಯಕ್ರಮಕ್ಕೆ ನೀವು ಬರುವುದಿಲ್ಲ ಅಂತ ’ಅವಿರತ ಸತೀಶ ’ ಅವರ ಕೋಪವನ್ನು ಸಹಿಸಿಕೊಂಡು) ಎಲ್ಲರಿಗೂ ಅವರು ನನ್ನ ಫ್ರೆಂಡ್ ಅಂತ ಹೇಳ್ತಾ ಇದ್ದೆ. ಮತ್ತೆ ಯಾರಾದರೂ ’ಮಾಲತಿ ನಿಮ್ಮ ಫ್ರೆಂಡಾ, ಅಂತ ಕೇಳಿದವರಿಗೆ ಸುಮ್ಮನೆ ಹೂಂ ಅನ್ನಿ’ ಅನ್ನುವ ಬೆದರಿಕೆ ಕೂಡ ಅವರಿಗೆ ಕೊಟ್ಟಿದ್ದೇನೆ ಹಲವು ಬಾರಿ ಎಸ್ ಎಮ್ ಎಸ್ ಮೂಲಕ. ಅವರು ನನ್ನನ್ನು ಫ್ರೆಂಡ್ ಅಂತ consider ಮಾಡ್ತಾರಾ, ನಿಜಕ್ಕೂ ಗೊತ್ತಿಲ್ಲ. end of flash back..)   e-ಮೈಲ್ ನಲ್ಲಿ ಅವರು ಕಳುಹಿಸಿದ ಆಮಂತ್ರಣ ಪತ್ರ ಬಂದ ಮೇಲೆ…ಶ್ರೀಕಾಂತ ಬಳಿ ಜೇನಿಗಿಂತ ಸಿಹಿಯಾಗಿ ’ಶ್ರೀsssಕಾಂssss ತ್ ಗುಡ್ ಫ್ರೈಡೆ ದಿನ ಏನು ಪ್ರೋಗ್ರಾಮ್ ಅಂದಾಗ ಅವರೋ ಮಹಾ ಚಾಲಾಕಿನ ಆಸಾಮಿ i am busy on that day ಅಂದು ,ಏನಿದೆ ಆವತ್ತು ಅಂತ ಕೇಳಿದ್ರು. ವಸುಧೇಂದ್ರರ ಪುಸ್ತಕ ಬಿಡುಗಡೆ ಅಂದೆ. ನಿನಗೊಬ್ಬಳಿಗೆ ಹೋಗಲಿಕ್ಕೆ ಏನಾಗುತ್ತೆ ಅಂತ ಸೇರಿಸಿದರು. ರಾತ್ರಿ ಅಕ್ಕ ಬಂದ ಮೇಲೆ ’ಅಕ್ಕಾssss ಈ ವಾರ ಗುಡ್ ಫ್ರೈಡೆ ದಿನ ರಜೆ ಹಾಕೆ..ನನ್ನ ಜತೆ ವಸುಧೇಂದ್ರ ಮಾಮನ book release ಗೆ ಬಾ ಅಂದೆ…ಅವಳು ನಕ್ಕು i love you mommy, but i cannot take leave…my christian colleagues are on leave on that day ಅಂದ್ಲು. ನಿಹಾ ಗೆ ಕೇಳೋ ಹಾಗೆ ಇರಲಿಲ್ಲ. ಯಾಕಂದ್ರೆ ಪುಸ್ತಕ ಬಿಡುಗಡೆ ಮರುದಿನ ಅವಳಿಗೆ ಪರೀಕ್ಷೆ ಇದೆ ಅಂತ ಗೊತ್ತಿತ್ತು.   ನನ್ನ ಸ್ನೇಹಿತೆಯರಾದ ವೇದಾ ಹಾಗೂ ಜ್ಯೋತಿ ಗೆ ಬರುತ್ತೀರಾ, ಒಂದು ದಿನ ಇಡಿ ಒಟ್ಟಿಗೆ ಟೈಮ್ ಸ್ಪೆಂಡ್ ಮಾಡುವಾ, ಹೇಗೂ ಆಮೇಲೆರಡು ದಿನ ನಿಮಗೆ ರಜೆ ಇರುತ್ತೆ ಅಂದಾಗ ಜ್ಯೋತಿ ಅವರ ಹೈದರಾಬಾದ ಟ್ರಿಪ್ ಬಗ್ಗೆ ಹೇಳಿದ್ರು. ವೇದ, ’ಕಾರ್ಯಕ್ರಮದ ಹಿಂದಿನ ದಿನ ಹೇಳ್ತೇನೆ ಮಾಲ್ತಿ’ ಅಂದ್ರು.   ಕಾರ್ಯಕ್ರಮದ ಹಿಂದಿನ ದಿನ ನಾನು ವೇದಾ ಅವರಿಗೆ ಬರುತ್ತೀರಾ ಅಂತ ಕೇಳಲಿಲ್ಲ…’ನಾಳೆ ನೀವು ಬರುತ್ತೀರಿ’ ಅಂತ ಎಸ್ ಎಮ್ ಎಸ್ ಮಾಡಿ..ನಿಮಗೋಸ್ಕರ ಶಶಿ ದೇಶಪಾಂಡೆ ಹಾಗೂ ಇನ್ನಿತರ ಬುಕ್ಸ್ ತರುತ್ತೇನೆ ಎನ್ನುವ ಆಮೀಶ ತೋರಿಸಿದೆ. ಅವರು ಕೂಡಲೇ ಮರು ಎಸ್ ಎಮ್ ಎಸ್ ಮಾಡಿ..’I am coming ‘ ಅಂದದ್ದಲ್ಲದ್ದೆ.. ಅವರು ಆಫಿಸ್ ನಿಂದ ಸಂಜೆ ಮನೆಗೆ ಹೋಗುವಾಗ ಫೋನ್ ನಲ್ಲೂ ಮರುದಿನ ಭೇಟಿ ಯಾಗುವ ಬಗ್ಗೆ ಹೇಳಿದರು.ರಾತ್ರಿ ನಾನು ನನ್ನ ಕಾಟನ್ ಸೀರೆಗೆ ಇಸ್ತ್ರೀ ಹಾಕ್ತಾ ಇದ್ದ್ದಾಗ ನಿಹಾ ನಗ್ತಾ, ’ಅಮ್ಮ ನಾಡಿದ್ದು ನನಗೆ ಪರೀಕ್ಷೆ ಇಲ್ಲ..ಸೀದಾ ಮಂಡೆ (monday) ನೆ. time table ಈಗ ನೋಡ್ದೆ. ನಾನು ಬರುತ್ತೇನೆ ನಿನ್ನ ಜತೆ ಅಂದಾಗ ನಾನು ಕುಣಿಯೊದೊಂದೇ ಬಾಕಿ.the more the merrier ಅಂತ.   ಸರಿ ಬೆಳಿಗ್ಗೆ ಬೇಗ ಎದ್ದು, ಟಿಫನ್, ಶ್ರೀಕಾಂತ ರಾಯರಿಗೆ ಅಡಿಗೆ ಎಲ್ಲ ಮಾಡಿಟ್ಟು ಮೊದಲನೇ ಸಲ ಸರಿಯಾದ ಟೈಮ್(ಎಲ್ಲ ಫಂಕ್ಷನ್ ಗಳಿಗೂ ನಮ್ಮದು ಲೇಟ್ ಎಂಟ್ರಿ) ನಾವು ಎ.ಡಿ.ಎ ರಂಗಮಂದಿರ ತಲುಪಿದೆವು. ಮೆಟ್ಟಿಲ ಮೇಲೇರ ಬೇಕಾದ್ರೆ ಆ ದಿನ ಬೆಳಿಗ್ಗೆ ಬೆಳಿಗ್ಗೆ ಫೇಸ್ ಬುಕ್ ಪ್ರೆಂಡ್ ರಿಕ್ವೆಶ್ಟ್ ಕಳುಹಿಸಿದ ಮತ್ತು ನಾನು accept ಮಾಡಿದ.. ಉಮೇಶ ದೇಸಾಯಿ (ಅವರ ಬ್ಲಾಗ್ ಓದಿದ್ದೇನೆ, ಅವರು ಕೆಲವೊಮ್ಮೆ ನನ್ನ ಬ್ಲಾಗ್ ಗೆ ಬರುತ್ತಾರೆ ಹಾಗಾಗಿ ಅವರು ಗೊತ್ತು) ಯವರನ್ನು ಕಂಡೆ…but ಅವರು ಸೆಲ್ ಫೋನ್ ನಲ್ಲಿ ಮಾತಾನಾಡುವುದರಲ್ಲಿ ಎಂಗೇಜಡ್ ಆಗಿದ್ದರು. ಮತ್ತು ಅವರೇ ಇವರಾ ಅನ್ನುವ ಸಣ್ಣ doubt ಕೂಡ ಇತ್ತು.

ಒಳಗಡೆ ಎಂಟರ್ ಆದ ಕೂಡಲೇ ಫ್ಲೆಕ್ಸ್ ನಲ್ಲಿ ಮೂಡಿದ ಮಕ್ಕಳ ಬ್ಲ್ಯಾಕ್ & ವ್ಹೈಟ್ ಚಿತ್ರ ಹಾಗೂ ಆಕರ್ಷಕ ರಂಗೋಲಿ ನಮ್ಮನ್ನು ಎದುರುಗೊಂಡವು..ಸೈಡ್ ನಿಂದ ವಸುಧೇಂದ್ರ ಫಾಸ್ಟ್ ಆಗಿ ನಡೀತಾ ಇದ್ರು..ನಾನು ಕೈ ಎತ್ತಿ ಗ್ರೀಟ್ ಮಾಡಿ Rangoli is nice ಅಂದೆ, ಅವರು ಬನ್ನಿ ಬನ್ನಿ, ಚೆನ್ನಾಗಿದೆಯಲ್ಲವಾ?? ಬೇಗ ಬೇಗ ಕಾಫಿ ಕುಡೀರಿ, ಕಾರ್ಯಕ್ರಮ ಶುರು ಮಾಡುವ ಅಂದ್ರು. ರಂಗೋಲಿಯನ್ನು ಸ್ವಲ್ಪ ಹೊತ್ತು admire ಮಾಡಿ, ಮುಂದಕ್ಕೆ ಹೋದಾಗ ರಘು ಅಪಾರ ಕಾಣಿಸಿದ್ರು..ಅವರ ಬಳಿ ಹೋಗಿ ,’ನೀಹಾ ನಿಮಗೇನೋ ಕೇಳಬೇಕಂತೆ’ ಅಂತಂದೆ…ನೀಹಾ ನನಗೆ ’ಅಮ್ಮ direct ಹಾಗಾ ಹೇಳೋದು, ಒಂದು ಹಾಯ್ ಹೆಲ್ಲೋ ಹೇಳ್ದೆ’ ಅನ್ನುವಷ್ಟರಲಿ ರಘು ನಮ್ಮ ಬಳಿ ಬಂದಾಯಿತು. ಅವರು ಮಾತಾಡ್ತಿರ ಬೇಕಾದ್ರೆ ನನಗೆ ಬೋಳುವಾರ ಮಾಮ ಕಂಡ್ರು…ನಾನು ಅವರ ಬಳಿ ಹೋದೆ “ನಮಸ್ಕಾರ, ನಾನು ಮಾಲತಿ, ಶ್ರೀಕಾಂತ ಶಣೈ ಹೆಂಡತಿ. ನಿಮ್ಮ ಬಳಿ ನಾನು complaint ಮಾಡ ಬೇಕಿದೆ.” ಬೋಳುವಾರ ಮಾಮ ಸ್ವಲ್ಪ tense ಆದ ಹಾಗೆ ಕಂಡಿತು. ನಾನು ಮುಂದುವರೆಸಿದೆ, “ಮೊದಲೆ ಕೆಲಸದ ಒತ್ತಡ ಅಂತ ನನ್ನ ಬಳಿ ಸರಿ ಮಾತು ಕತೆ ಆಡುತ್ತಿಲ್ಲ’ ಈಗ ಸಿಕ್ಕಿದಷ್ಟು ಸಮಯದಲ್ಲಿ ನಿಮ್ಮ ’ಸ್ವಾತಂತ್ರ್ಯದ ಓಟ’ ಓದುತ್ತಾ ಕೂರ್ತಾರೆ. ಈಗ ಫಂಕ್ಷನ್ ಬರುವ ಮುಂಚೆ ಐದು ಸಲ ’ಬೈ’ ಹೇಳಿ ಆರನೇ ಸಲ ಬೈಯೋ ಧಾಟಿಯಲ್ಲಿ ಬೈ ಹೇಳಿದ ಮೇಲೆ ಒಂದು ಸಣ್ಣಕ್ಕೆ ಬೈ ಹೇಳಿ ಕಳುಹಿಸಿದಾರೆ. ಬಾಗಿಲಿಗೆ ಚಿಲ್ಕ ಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಪುಸ್ತಕದ ಕೊನೆ ನಾಲ್ಕು ಪುಟಗಳು ಮಾತ್ರ ಉಳಿದಿತ್ತು ನಾವು ಹೊರಡುವಾಗ ಅಂದೆ’ . ಬೋಳುವಾರ ಮಾಮ ’ನಿಜಕ್ಕೂ ಅಷ್ಟೊಂದು ಕುತೂಹಲದಿಂದ ಓದುತ್ತಿದ್ದಾರಾ ಅಂತ ಕೇಳಿದ್ರು..ನಾನು ಅಷ್ಟು ದೊಡ್ಡ dialogue ಹೋಡೆದು ಸುಸ್ತಾಗಿದ್ದೆ, ಸುಮ್ಮನೆ ಗೋಣು ಅಲ್ಲಾಡಿಸಿದೆ. (ಹಾಗೇನೆ , ಬೋಳುವಾರ ಮಾಮ ಏನಾದರೂ ಸಿಕ್ಕರೆ ನಿಮ್ಮ ಬಗ್ಗೆ complain ಮಾಡ್ತೀನಿ ಅಂತ ಕೂಡ ಸೇರಿಸಿದ್ದೆ ಬೆಳಿಗ್ಗೆ ಹೊರಡುವ ಮುನ್ನ) (ಇದರ ಮಧ್ಯೆ ಒಂದು ಗಮ್ಮತ್ತಿನ ಸಂಗತಿ ನಡೆದಿದೆ. ನಾವು ಮನೆಯಿಂದ ಹೊರಟು ಹತ್ತು ನಿಮಿಷ ಆದ ಮೇಲೆ ಶ್ರೀಕಾಂತ ಫೋನ್ ’ನಿಹಾರಿಕಾ ಎಲ್ಲಿ?? ಮನೆಯಲ್ಲಿ ಕಾಣ್ತಾ ಇಲ್ಲ’ ಅಂತ ನಾನು ಹೋ ಸರಿಯಾಯ್ತು..ಬೆಳಿಗ್ಗೆ ತಿಂಡಿ ತಿನ್ನುವಾಗ ನಿಹಾ ನನ್ನ ಜತೆ ಬರುತ್ತಾಳೆ, ಅಡಿಗೆ ಏನೇನು ಮಾಡಿದ್ದೇನೆ, ಯಾವುದನ್ನು ಬಿಸಿ ಮಾಡಬೇಕು ಅನ್ನುವ ನನ್ನ instructions ಗೆಲ್ಲ..ಎಲ್ಲಕ್ಕೂ ಹೂಂ ಹೂಂ’ ಅಂದಿದ್ರು..ಸ್ವಲ್ಪ ಕೀಟಲೆ ಮಾಡುವ ಅಂದುಕೊಂಡೆ, ಬೇಡ ಪಾಪ ಅಂತ ಸುಮ್ಮನಾಗಿದ್ದೆ) “ನೀವು ಓದಿದ್ರಾ”- ಬೋಳುವಾರ ಮಾಮ “not yet..ನನ್ನ ಓದು ಸ್ವಲ್ಪ ಸ್ಲೋ’..ನಾನು ನಿಧಾನಕ್ಕೆ ಓದ್ತೀನಿ ಅಂದು…ಅವರಿಗೆ ಬೈ ಹೇಳಿ…ವೇದಾಗೆ ಕಾಯ್ತಾ entrance ಬಳಿ ನಿಂತೆ. ಅಷ್ಟರಲ್ಲಿ ನನ್ನ ಬ್ಲಾಗ್ ತಮ್ಮ/ಮಿತ್ರ ಸುಶ್ರುತ ದೊಡ್ಡೇರಿ ಬಂದ್ರು. ’ಎನ್ರೀ, ಒಬ್ರೆ ಬಂದಿದ್ದೀರಾ, ಎಲ್ಲಿ ದಿವ್ಯಾ ಅಂತ ಕೇಳಿದ್ರೆ ಮಹಾ ಸ್ಟೈಲ್ ಅಲ್ಲಿ ನನಗೆ ಇವತ್ತು ರಜೆ, ಅವಳಿಗೆ ರಜೆ ಇಲ್ಲ..ಅಂತ ಅವರು ಬರೆಯುವ ಕವನದ ಧಾಟಿಯಲ್ಲೇ ಹೇಳಿದ್ರು, ನಾನು ಅವರಿಗೆ ಬೇಗ ಬೇಗ ಕಾಫಿ ಕುಡಿದು ಒಳಗೆ ಹೋಗಿ ಅಂದೆ, ಮಹಾ ನನ್ನ ಕಾರ್ಯಕ್ರಮದ ತರಹ. (ದಿವ್ಯಾ ಹೆಗ್ಡೆ ಮತ್ತು ಸುಶ್ರುತ ದೊಡ್ಡೇರಿ ಇಬ್ಬರೂ ನನ್ನ ಆತ್ಮೀಯರು..ಅವರಿಬ್ಬರೂ ಮದುವೆ ಆಗುತ್ತಿದ್ದಾರೆ ಅಂದಾಗ ನಾನೆಷ್ಟು ಸಂಭ್ರಮ ಪಟ್ಟೇ ಅಂತ ನಮ್ಮ ಮನೆಗೆ ಬಂದು ನೀವು ಕೇಳಬೇಕು):-) ವೇದಾ ಬಂದ್ರು…ಸೆಟ್ ಡಿಸೈನ್ ಮಾಡಿದ ಪ್ರದೀಪ್ ಕಂಬತ್ತಳ್ಳಿ ಯವರನ್ನು ಪರಿಚಯಿಸಿದರು. ನಾವು ಒಳಗೆ ಹೋಗುವಾಗ ಸ್ಟೇಜ್ ಮೇಲೆ ಗಿರೀಶ ಕಾಸರವಳ್ಳಿ , ರಹಮತ್ ತೆರಿಕೇರೆ ಯವರು ಆಗಲೇ ಕೂತಿದ್ದರು. ಗಿರೀಶ ಕಾಸರವಳ್ಳಿಯವರ ಫೋಟೊಗಳನ್ನು ನೋಡಿದ್ದೆ, ಅವರ ’ಗುಲಾಬಿ ಟಾಕಿಸ್ ’ ಇತ್ತೀಚಿಗೆ ನೋಡಿದ್ದು ಬಿಟ್ಟರೆ ಅವರ ಬಗ್ಗೆ ಹೆಚ್ಚಿಗೇನೂ ತಿಳಿದಿಲ್ಲ. ಸುಮಾರು ವರ್ಷಗಳ ಹಿಂದೆ ನಾನು ತೀರ್ಥಹಳ್ಳಿಯಿಂದ ಉಡುಪಿಗೆ ಹೋಗುವಾಗ ಇಬ್ಬರು ಮಹಿಳೆಯರು ನನ್ನನ್ನೆ ಸ್ವಲ್ಪ ಹೊತ್ತು ಕುತೂಹಲದಿಂದ ನೋಡ್ತಾ, ನಾನು ನನಗಿದ್ದ ಉದ್ದಕೂದಲನ್ನು ನೆನೆಸಿಕೊಂಡು, ಈಗ step cut ಗಾಗಿ ಗಿಡ್ಡ ಆಗಿರುವ ನನ್ನ ಕೂದಲಿನ ಬಗ್ಗೆ ಕಸಿವಿಸಿಗೊಳ್ಳುತ್ತಿರಬೇಕಾದ್ರೆ ’ನೀವು ಕಾಸರವಳ್ಳಿ ಫ್ಯಾಮಿಲಿಯವರಾ ಅಂತ ಅವರು ನನಗೆ ಕೇಳಿ, ನನ್ನ ಒಟ್ಟಿಗೆ ಇದ್ದ ನನ್ನ ಅಕ್ಕ .’ಅಲ್ಲ’ ಅಂತ ಹೇಳಿದ ಮೇಲೆ, ಅವರಿಬ್ಬರೂ ಅವರಲ್ಲೇ ನಾನು ಯಾರನ್ನೋ ಹೂ ಬ ಹೂ ಹೋಲುತ್ತೇನೆ ಅಂತ ಮಾತನಾಡಿಕೊಳ್ಳುತ್ತಿದ್ದರಂತೆ.ಇದನ್ನೂ ಅಕ್ಕ ಹೇಳಿದರು. ಆ ಮೇಲೆ ಎರಡು ಮೂರು ಸಲ ಹೀಗೆ ಕಾಸರವಳ್ಳಿ ಕುಟುಂಬದವರಾ ಅಂತ ಕೇಳಿದವರು ಇದ್ದರು. ಅದಕ್ಕೆ ಸ್ವಲ್ಪ ಕುತೂಹಲದಿಂದ ಅವರ ಕಡೆ ನೋಡಿದೆ. ರಹಮತ್ ತರೀಕೆರೆಯವರ ಬರಹಗಳನ್ನು ನಾನು ಪ್ರಜಾವಾಣಿ ಸಾಪ್ತಾಹಿಕದಲ್ಲಿ ಓದ್ದಿದ್ದೇನೆ. ಗಾರ್ಗಿ ಪಂಚಾಂಗಂ ತುಂಬ ಸುಶ್ರ್ಯಾವ್ಯವಾಗಿ ಕಗ್ಗವನ್ನು ಹಾಡಿದರು. ಶ್ರೀಕಾಂತ ಮೂಡ್ ಬಂದಾಗ ಕಗ್ಗದಲ್ಲಿನ ಸಾಲುಗಳನ್ನು ಉರುಳಿಸ್ತಾ ಇರ್ತಾರೆ. ಆದರೆ ಇಂಪಾಗಿ ಇದನ್ನು ಹಾಡಬಹುದು ಅಂತ ತಿಳಿದಿದ್ದು ಇದೇ ಮೊದಲು. ಖುಶಿಯಾಯ್ತು.

ಸುಧನ್ವಾ ದೇರಾಜೆ ಅವರ ನಿರೂಪಣೆ. ಆಮೇಲೆ ಸ್ಕ್ರೀನ್ ಮೇಲೆ ಕನ್ನಡ ಹಿರಿಯ ಕಿರಿಯ ಸಾಹಿತಿಗಳಿಂದ ಸ್ಟೇಜ್ ಮೇಲಿದ್ದವರ, ಪುಸ್ತಕ ಪ್ರಕಟವಾಗುತ್ತಿದವರ ಬಗ್ಗೆ ನಾಲ್ಕು ಒಳ್ಳೆ ಮಾತುಗಳನ್ನು ಆಡಿದರು.(:-)) ನನಗೇ ಈ style ತುಂಬ ಹಿಡಿಸಿತು. ಆ ಮೇಲೆ ಪುಸ್ತ್ಕಕ ಬಿಡುಗಡೆ. ಬಸವಣ್ಣೆಪ್ಪಾ ಕಂಬಾರರು, ನಾಗರಾಜ ವಸ್ತಾರೆಯವರು ಹಾಗೂ ಪ್ರಶಾಂತ ಆಡೂರ ಅವರು ನಾಲ್ಕೇ ನಾಲ್ಕು ಮಾತಾಡಿದರು. ಪ್ರಶಾಂತ ಆಡೂರ ರವರು ನಗಿಸಬಹುದು ಎಂದು ನಾನು ನಗಲೂ ಸಜಾಗಿದ್ದೆ. ಅವರು disappoint ಮಾಡಿದರು. ಎಲ್ಲರು ಚುಟುಕಾಗಿ ಮಾತನಾಡಿದರು. ಆ ಮೇಲೆ ಕಾಸರವಳ್ಳಿಯವರ ಹಾಗೂ ತರೀಕೆರೆಯವರ ಜುಗಲ್ ಬಂದಿ ಶುರು ಆಯ್ತು. ಸ್ವಲ್ಪ ಹೊತ್ತು ಕೇಳಿದೆ, ಆ ಮೇಲೆ ನನ್ನ ಮನಸ್ಸು drift ಆಗಲಿಕ್ಕೆ ಶುರು ಆಯ್ತು.

this photo from HP Nadig Face book album ಎದುರಿಗೆ ಕೂತುಕೊಂಡಿದ್ದ ಸುಶ್ರುತ ದೊಡ್ಡೇರಿ ಯನ್ನು ನೋಡಿ ದಿವ್ಯಾ ಹೆಗ್ಡೆ ಗೆ ಒಂದು ಕೀಟಲೇ ಮೆಸೆಜ್ ಕಳಿಸಿದೆ. ನಿಹಾ ಕುತೂಹಲದಿಂದ ಜುಗಲಬಂದಿಯನ್ನು ಆಲಿಸ್ತಾ ಇದ್ದಳು. ವೇದಾ ಕಡೆ ಬಗ್ಗಿ ಇಂಟರೆಸ್ಟಿಂಗ್ ಇದೆಯಾ? ಅವರಿಬ್ಬರೂ ವೈರಿಯಾದರೆ ’ಜಗಳಬಂದಿ’ ಬಾಯಿಂದ ತುಂಬ ಉಗುಳು ಬರ್ತಾ ಇದ್ರೆ.’ಉಗುಳಬಂದಿ’ ಅಂತೆಲ್ಲ ಪನ್ನ್ ಮಾಡಿ ನಕ್ಕು ಎದುರಿಗೆ ಕೂತವರು ನಮ್ಮನ್ನು ಗುರಾಯಿಸಿಕೊಂಡು ನೋಡಿದರೆ , ನೀಹಾ ’ಮೋಮಿ’ ಅಂತ warning look ಒಂದನ್ನು ಎಸೆದಳು. ಪುನ: ಸ್ವಲ್ಪ ಹೊತ್ತು ಗಮನವಿಟ್ಟು ಕೇಳ್ದೆ. the bicycle thief ನ ಒಂದು ಸೀನ್ ಎಷ್ಟು ಚೆನ್ನಾಗಿ explain ಮಾಡಿದ್ರು ಅಂದ್ರೆ, ಹೌದಲ್ಲವೇ ನನಗಿದು ಹೋಳಿಲೇ ಇಲ್ಲ ಅಂತ ಅನ್ನಿಸ್ತು. ಅಷ್ಟರಲ್ಲಿ ಕನ್ನಡದ ಒಳ್ಳೆ ಕತೆಗಾರರು ಅಂತ ಅಮರೇಶ ನುಗಡೋಣಿ, ವೈದೇಹಿ ಮುಂತಾದ ಇನ್ನೂ ಕೆಲವು ಹೆಸರನ್ನು ಹೇಳುತ್ತಿರಬೇಕಾದ್ರೆ, ನಾನು ವೇದ ಕಡೆ ಬಗ್ಗೆ ಛೆ! ‘ಮಾಲತಿ ಶೆಣೈ’ ಹೆಸರೆ ಹೇಳಲಿಲ್ಲ ಅಂದಾಗ, ವೇದ ಒಂದು ಕ್ಷಣ ದಕ್ಕಾಗಿ, ಅವರು why not malathi’ ಅಂದಾಗ ನಕ್ಕು ನಾವಿಬ್ಬರೂ ಪುನ: ಕೆಂಗಣ್ಣಿಗೆ ಗುರಿ + ನಿಹಾರಿಕಾಳ..’mommy’ part-2 ಗೆ ಈಡಾಗಬೇಕಾಯ್ತು…ಇನ್ನೊಮ್ಮೆ ಸದ್ದು ಗಿದ್ದು ಮಾಡಿದ್ರೆ ಅವಳು ನಮ್ಮ ಬಳಿಯಿಂದ ಎದ್ದು ಬೇರೆ ಕಡೆಗೆ ಹೋಗಿ ಕೂರುತ್ತಾಳೆಂದು ಸ್ವಲ್ಪ ಡೀಸೆಂಟ್ ಆಗಿ ಕೂತುಕೊಂಡ ಮೇಲೆ ಒಂದು ಪುಟ್ಟ ಬ್ರೇಕ್ ಕೊಟ್ಟರು.

photo from Prashanth Addoor Face book album ಈ ಸಲದ ಛಂದ ಬಹುಮಾನ ವಿಜೇತರಾದ ಬಸವಣ್ಣೆಪ್ಪಾ ಕಂಬಾರ..ಎರಡು ಮಾತುಗಳನ್ನಾಡುತ್ತಿರುವುದು ಆಮೇಲೂ 20 ನಿಮಿಷ ಜುಗಲ್ ಬಂದಿ ಇದೆಯೆಂದಾಗ ನಿಧಾನವಾಗಿ disappearing act ಮಾಡುವ ಅಂದುಕೊಂಡ್ವಿ, ನಾನು ವೇದಾ. ಆದರೆ ನಿಹಾ ನನಗೆ ಕೇಳಬೇಕು, ನೀವಿಬ್ಬರೂ ಬೇಕಾದ್ರೆ ಹೋಗಿ ಅಂದಳು. ಆದರೆ ವೇದ, ’ಪಾಪ ಹುಡುಗಿ ಕುತೂಹಲದಿಂದ ಕೇಳ್ತಾ ಇದ್ದಾಳೆ, ನಾವು ಕೂರುವಾ’ ಅಂದ್ರು. ನಾನು ನನ್ನ ಫೇಸ್ ಬುಕ್ ಮಿತ್ರರನ್ನು ಗುರುತಿಸ್ತಾ ಇದ್ದೆ. ನಿಹಾರಿಕ ಜುಗಲ್ ಬಂದಿ ಎಲ್ಲ ಕೇಳಿಸಿಕೊಂಡು ನಾನೂ ಒಂದು ದಿನ ಚಂದದ ಫಿಲ್ಮ್ ಮಾಡ್ತೀನಿ ಅಂದಳು. ಕಾರ್ಯಕ್ರಮ ಮುಗಿದ ಮೇಲೆ ಲಘು ಊಟದ ಮುಂಚೆ ನನ್ನ-ವೇದಾಳ ಫೋಟೊ ಸೆಶನ್ ಆಯ್ತು ಕೇರ್ ಆಫ್ ನಿಹಾರಿಕಾ…ಅ ಮೇಲೆ ರಂಗೋಲಿಯನ್ನು ಇನ್ನಷ್ಟು ಡೀಟೈಲ್ ಆಗಿ ನೋಡಿದೆವು. ಸುಶ್ರುತ ನಮ್ಮ ಬಳಿಗೆ ಬಂದು, ಮಾಲತಿಯಕ್ಕ ಸ್ವಲ್ಪ ಕಾರ್ನರ್ ನಲ್ಲಿ ನಿಲ್ಲಿ, ಅಂತ ಹೇಳಿ ನನಗೆ ಅವರ ಮದುವೆ ಆಮಂತ್ರಣ ಪತ್ರಿಕೆ ಕೊಟ್ಟರು. ಮುಂದಿನ ತಿಂಗಳು ಮದುವೆ, ಎರಡು ದಿನ ನೀವಿರಬೇಕು..ಅಂತ…Invitation card ತುಂಬ ಚೆಂದ ಇದೆ, ಒಳಗಿನ ಒಕ್ಕಣೆ ಕೂಡ…after all poet ಮಂದಿ.. ಫಕ್ಕನೆ ನನ್ನ ಕಣ್ಣು ಒಬ್ಬರನ್ನು ಸಂಧಿಸಿತು, ಅರೇ ಶ್ರೀನಿಧಿ ಡಿ.ಎಸ್ ಅಂದುಕೊಳ್ಳಬೇಕಾದ್ರೆ ಅವರು ಕೈ ಎತ್ತಿದರು, ನಾನು reflex ನಲ್ಲಿ ಕೈ ಎತ್ತಿ, ನಾಚಿಕೊಂಡು ನನ್ನ ಹಿಂದೆಗಡೆ ನಿಂತವರಿಗೆ ಅವರು ಕೈ ಮಾಡಿದ್ದಿರಬೇಕೆಂದು ಹಿಂದೆ ನೋಡ್ತಿರಬೇಕಾದ್ರೆ, ಅವರು ಅಲ್ಲಿಂದಲೇ’ನಿಮಗೆ’ ಅಂತ ಹೇಳಿ ಹತ್ತಿರ ಬಂದಾಗ ನಾನೇ ಶ್ರೀನಿಧಿ ಡಿ.ಏಸ್. ಅಂದೆ…ಮತ್ತೇನು ವಿಶೇಷ ಅಂದಾಗ ವಿಶೇಷ ಸುಶ್ರುತ ಅವರದ್ದು ಮದುವೆ ಅಂದೆ, ನೀವು ಅವರ ಕಸಿನ್ ಆ ಅಂತಲೂ ಕೇಳಿದೆ..ಅದಕ್ಕೆ ಇಲ್ಲ ಒಂದೆ ಊರು, (ಸ್ಕೂಲು, ರೂಮ್ ಮೇಟ್ .ಅಂತೆಲ್ಲ ಕೇಳಿಸ್ತು..) ಬಟ್ ಅವರು ಒಂದೇ ಊರವರು ಮಾತ್ರ , ಸಾಹಿತ್ಯಿಕ ಫ್ರೆಂಡ್ ಅಂತೆ ಸುಶ್ರುತ post ಓದಿದ ಮೇಲೆ ಹೇಳಿದರು).ಅಷ್ಟರಲ್ಲಿ ನಿಹಾ, ಅಮ್ಮ, ನಿನ್ನನ್ನು ಮನು ಸರ್ ಗೆ ಪರಿಚಯ ಮಾಡಿಕೊಡ್ತೇನೆ ಅಂದ್ಲು. ನನಗೂ ಕುತೂಹಲ. ಮನೆಯಲ್ಲಿ ಅವಳು ’ನಮ್ಮ ಮನು ಸರ್ ಹಾಗೆ, ನಮ್ಮ ಮನು ಸರ್ ಹೀಗೆ ಎಂದಾಗಲೆಲ್ಲ ನನಗೆ ಹೊಟ್ಟೆಕಿಚ್ಚಾಗ್ತಿತ್ತು. ಯಾಕಂದ್ರೆ ಅವಳು ಯಾರ ಬಗ್ಗೇನು ಅಷ್ಟು ಪ್ರೀತಿಯಿಂದ ಆತ್ಮೀಯತೆಯಿಂದ ಮಾತಾಡಲ್ಲ. ನಮ್ಮದು ಹಲ್ಲೋ ನಮಸ್ಕಾರಗಳ ವಿನಿಮಯ ಆಯ್ತು. ಆ ಮೇಲೆ ಪುಸ್ತ್ತಕ ಕೊಳ್ಳಲು ಹೋದೆವು. ಪುಸ್ತಕಕ್ಕಿಂತ ಪೇಪರ್ ಬ್ಯಾಗ್ ಮೇಲಿನ ಬ್ಲರ್ಬ್ ತುಂಬ ಇಷ್ಟ ಆಗಿ ನಾನು ವೇದಾ ಓದಿ ನಗ್ತಾ ಇದ್ವಿ.

(ಬ್ರಾಕೆಟ್ ಒಳಗಿದ್ದನ್ನು ಓದಿ) ಆ ಮೇಲೆ ಊಟ, ವಸುಧೇಂದ್ರ ಅವರಿಗೆ ಬೈ ಹೇಳಿ, ಲಾಸ್ಟ್ ನಲ್ಲಿ ಮಾಲವಿಕ ಹೆಸರೂ ಅವರ ಸ್ಕ್ರಾಲ್ ನಲ್ಲಿ ಸೇರಿಸಿದಕ್ಕೆ ಥ್ಯಾಂಕ್ಸ್ ಹೇಳಿ…it was a nice gesture on his part…ರಾತ್ರಿ ಮಾಲವಿಕ ಮನೆಗೆ ಬಂದ ಮೇಲೆ ಅವಳಿಗೆ ಹೇಳಿದೆ…’ಅಮ್ಮ ನಾನು ಕ್ರಿಸ್ಟಲ್ ನ ಅಂಗಡಿಯ ಎಡ್ರಸ್/ಫೋನ್ ನಂ ಎಸ್ ಎಮ್ ಎಸ್ ಮಾಡಿದ್ದು ಬಿಟ್ರೆ ಏನೂ ಮಾಡಿಲ್ಲ, how sweet of him ಅಂದಳು. ಎದುರಿಗೆ ಸಿಕ್ಕ ಪ್ರಶಾಂತ ಆಡೂರ ರವರ ಹಸ್ತಾಕ್ಷರವನ್ನು ವೇದಾ ಅವರ ಪುಸ್ತ್ಕಕದ ಮೇಲೆ ಹಾಕಿಸಿ, ನಾನು ’ಮಾಲತಿ ಶೆಣೈ, ನಿಮ್ಮ ಫೇಸ್ ಬುಕ್ ಫ್ರೆಂಡ್ ’ ಅಂತ ನನ್ನನ್ನು ನಾನೆ ಪರಿಚಯಿಸಿಕೊಂಡೆ. ಅಪಾರ ರಘು ಗೆ ಬೈ ಹೇಳಿ ನಾವು ಮೂರು ಜನ ಕಬ್ಬನ್ ಪಾರ್ಕ್ ನಲ್ಲಿ ಸ್ವಲ್ಪ ಗಂಟೆಗಳನ್ನು ಸ್ಪೆಂಡ್ ಮಾಡಿ, ವೇದ ಕೊಡಿಸಿದ ಐಸ್ ಕ್ರೀಮ್ ತಿಂದು, ತುಂಬ ತುಂಬ ಮಾತಾಡಿ (ಮಾತಾಡಿದ್ದು ನಾನೆ ಜಾಸ್ತಿ :-(…) ಕಬ್ಬನ ಪಾರ್ಕ್ ಹೋಗ್ತಾ ಸಿಗ್ನಲ್ ನಲ್ಲಿ ಎಂಜಾಯ ಮಾಡಿದೆ ನಿನ್ನೆ ದಿನ. ಮನೆಗೆ ಬಂದು ಕುಟ್ಟವಲಕ್ಕಿ ಹಿಡಿದು ಕೂತೆ.ನನ್ನ ಅಕ್ಕ ಒಂದು ಸಲ ಕುಟ್ಟವಲಕ್ಕಿ ಮಾಡಿದ್ರು. ಅದನ್ನು ತಿನ್ನುವುದು ಹೇಗೆ ಅಂತ ಗೊತ್ತಿಲ್ಲದೆ, ಅದನ್ನು ಒಂದೆ ಸಲಕ್ಕ ಬಾಯಲ್ಲಿ ಮುಕ್ಕಿ, ಕೆಮ್ಮಿ, ಸೀನಿ, ಕಣ್ಣು ಮೂಗುಗಳಿಂದ ನೀರು ಸುರಿಸಿದ್ದು, ಶ್ರೀಕಾಂತ ಅದನ್ನು ಹೇಗೆ ತಿನ್ನುವುದು ಅಂತ ಹೇಳಿಕೊಟ್ಟಿದ್ದು ಎಲ್ಲ ನೆನಪಾಯಿತು. ಕುಟ್ಟ್ವವಲಕ್ಕಿಯನ್ನು (ಇದು ನಗಿಸಿ ನಗಿಸಿ ಕಣ್ಣಿಂದ ಮೂಗಿಂದ ನೀರು ಬರೆಸುತ್ತದೆ) ಮುಗಿಸಿ , ಆ ಮೇಲೆ ಆಫಿಸಿನ ಕೆಲವು ತುರ್ತು ಕೆಲಸಗಳನ್ನು ಮುಗಿಸಿ, ಆಮೇಲೆ ಫೇಸ್ ಬುಕ್ ಮೇಲೆ ಕಣ್ಣು ಹಾಯಿಸಿ…..ಆಮೇಲೆ…. ಹಾಂ, ನಾವು ಮನೆ ತಲುಪಿದ ಕೂಡಲೆ ಶ್ರೀಕಾಂತ ಕೇಳಿದ ಮೊದಲ ಪ್ರಶ್ನೆ…ಹೇಗಿತ್ತು ಫಂಕ್ಷನ್? ಬೋಳುವಾರ ಮಾಮ ಸಿಕ್ಕಿದ್ದರಾ? ನಾನು programme was nice, ಹೌದು ಸಿಕ್ಕಿದ್ದರು. ನಿಮ್ಮ ಬಗ್ಗೆ ಕಂಪ್ಲೈನ್ ಮಾಡ್ದೆ..ಅಂದಾಗ ಹಾಹಾಹಾ ಹೊ ಹೊ ಹೊ..ನೀನು?? ಹೋಗಿ ಮಾತಾಡ್ಸೋದಾ?? ಸಾಧ್ಯಾನೆ ಇಲ್ಲ ಅಂದ್ರು…ಹತ್ತೆ ನಿಮಿಷ..ಬೋಳುವಾರ ಮಾಮ ಖುದ್ದು ಫೋನ್ ಮಾಡಿದ್ರು :-)))))))))))))))))))))))))))))))))))) ತಾರೀಕೂ 06.04.2012 ರಂದು ಛಂದ ಪ್ರಕಾಶನದಿಂದ ಬಿಡುಗಡೆಯಾದ ಪುಸ್ತಕಗಳು 1. ಕುಟ್ಟವಲಕ್ಕಿ – ಪ್ರಶಾಂತ ಆಡೂರ 2. ಆಟಿಕೆ – ಬಸವಣ್ಣೆಪ್ಪ ಕಂಬಾರ 3. ನಿರವಯವ – ನಾಗಾರಾಜ ವಸ್ತಾರೆ
]]>

‍ಲೇಖಕರು G

April 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

5 ಪ್ರತಿಕ್ರಿಯೆಗಳು

 1. Dr. Azad Ismail Saheb

  ಸ್ವಾರಸ್ಯಪೂರ್ಣ ವೀಕ್ಷಕವಿವರಣೆ ಕೇಳಿ ಅದನ್ನು ಖುದ್ದು ನೋಡಿದ ಹಾಗಾಯ್ತು ಮಾಲತಿಯವರ ಬ್ಲಾಗ್ ಲೇಖನ ಓದಿ… ಇದನ್ನು ಅವಧಿ ಮೂಲಕ ಇನ್ನೂ ಹೆಚ್ಚು ವ್ಯಾಪಕ ಉಣವು ನೀಡಿರುವುದು ನಮಗೆಲ್ಲಾ ಇನ್ನೂ ಹೆಚ್ಚಿನ ಖುಷಿ…
  ಈ ಲೇಖನ ಓದಿ ನನಗೆ ಮುದ್ದಣ ಮನೋರಮೆಯರ ಸಲ್ಲಾಪದ “ಕರಿಮಣಿ ಸರದಲ್ಲಿ ಕೆಂಪು ಹವಳವ ಕೋದಂತೆ” ಎನ್ನುವ ನನ್ನ ಶಾಲಾ ದಿನಗಳ ಪಾಠದ ಸಾಲುಗಳು ನೆನಪಿಗೆ ಬಂದವು, ವಿಷಯ ಪ್ರಸ್ತಾವನೆ ಮತ್ತು ಸ್ವಾನುಭವ ಸಾರದ ಅಪೂರ್ವ ಸಮ್ಮಿಲನ ಈ ಲೇಖನ.

  ಪ್ರತಿಕ್ರಿಯೆ
 2. manasu

  ಸಕ್ಕತ್ತಾಗಿದೆ ನಿಮ್ಮ ವಿವರಣೆ…. ತಮಾಷೆ ಚೆನ್ನಾಗಿಯೇ ಮಾಡುತ್ತೀರಿ ಈ ಸರಿ ಬಂದಾಗ ನಿಮ್ಮ ಜೊತೆ ಸಮಯ ಕಳೆಯಬೇಕು ಎನಿಸಿತು… ಪುಸ್ತಕ ಬಿಡುಗಡೆಯಲ್ಲಿ ನಿಮ್ಮ ಗಡಿಗಡಿ ಮಾತು ಮಸ್ತ್ ಮಜ ಕೊಡ್ತು ಹಹಹ…

  ಪ್ರತಿಕ್ರಿಯೆ
 3. D.RAVI VARMA

  tumbaa tumbaa chennagide,madam,i missed this wonderful programme nimma barahadalli ondu visistavaada haagu tumbaa kushikoduva jalak ide. vandanegalu

  ಪ್ರತಿಕ್ರಿಯೆ
 4. malathi S

  Avadhi, Azad Bhaiyya, Suguna, Dileep mattu Dr Ravi Varma…ellarigoo saprema vandanegaLu….
  🙂
  malathi S

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: