ಛ೦ದ ಪುಸ್ತಕ ಪ್ರಶಸ್ತಿ ಘೋಷಣೆಯಾಗಿದೆ!!

ಛಂದ ಪುಸ್ತಕ ಫಲಿತಾಂಶ

  ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಶ್ರೀ ಬಸವಣ್ಣೆಪ್ಪಾ ಕಂಬಾರರವರು ತಮ್ಮ ಕಥಾಸಂಕಲನದ ಹಸ್ತಪ್ರತಿಗೆ ಪಡೆದುಕೊಂಡಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕ ಸಹಮೇಲ್ವಿಚಾರಕರಾಗಿ ಕೆಲಸ ಮಾಡುವ ಇವರು ಬೆಳಗಾವಿ ಜಿಲ್ಲೆಯ ಘೋಡಗೆರೆಯವರು. ಈ ಸಾಲಿನ ಬಹುಮಾನದ ನಿರ್ಣಯವನ್ನು ನಾಡಿನ ಹಿರಿಯ ಸಾಹಿತಿಗಳಾದ ಶ್ರೀ ಕುಂ. ವೀರಭದ್ರಪ್ಪನವರು ಮಾಡಿದ್ದಾರೆ. ನಾಡಿನ ಯುವಕತೆಗಾರರನ್ನು ಗುರುತಿಸುವ ಈ ಸ್ಪಧರ್ೆಗೆ ಸುಮಾರು 61 ಹಸ್ತಪ್ರತಿಗಳು ಪ್ರವೇಶ ಕೋರಿ ಬಂದಿದ್ದವು. ಎಲ್ಲರಿಗೂ ಛಂದಪುಸ್ತಕವು ಧನ್ಯವಾದಗಳನ್ನು ಅರ್ಪಿಸುತ್ತಿದೆ. ‘ಛಂದ ಪುಸ್ತಕ’ವು ಈ ಪುಸ್ತಕವನ್ನು ಪ್ರಕಟಿಸಿ, ಕತೆಗಾರರಿಗೆ ಹತ್ತು ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುತ್ತದೆ. ಮಾರ್ಚ್ ಎರಡನೆಯ ವಾರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ.]]>

‍ಲೇಖಕರು G

February 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಂಗಭೂಮಿಯ ಹಿರಿಮೆ ಪಿ ಶಾಡ್ರಾಕ್‌

ರಂಗಭೂಮಿಯ ಹಿರಿಮೆ ಪಿ ಶಾಡ್ರಾಕ್‌

ಶಿವಾನಂದ ತಗಡೂರು ಮೈಕಿಲ್ಲದೆ ಎದೆ ತುಂಬಿ ಹಾಡುತ್ತಿದ್ದಾರೆ, ಅಲ್ಲೊಂದು ಹೋರಾಟದ ಕಿಚ್ಚು ಹತ್ತಿಸುತ್ತಿದ್ದಾರೆ, ಅಕ್ಷರ ಜಾಗೃತಿ...

8 ಪ್ರತಿಕ್ರಿಯೆಗಳು

 1. D.RAVI VARMA

  ಅಭಿನಂದನೆಗಳು ಗೆಳೆಯರೇ.ಕೆಲೋವೊಮ್ಮೆ ಈ ಪ್ರಶಸ್ತಿಗಳು ಸೊಕ್ಕನ್ನು,ಇಲ್ಲದ ಪ್ರತಿಸ್ತೆಯನ್ನು ತರುತ್ತವೆ,ಹಾಗೆಯೇ ಇನ್ನು ಹಲವೊಮ್ಮೆ ಇದು ಮುಂದಿನ ಜವಾಬ್ದಾರಿಯನ್ನು ಹೊತ್ತು ತರುತ್ತವೆ..ಕನ್ನಡದ ಕ್ಯಾತ ನಿರ್ದೇಶಕ ಪ್ರಸನ್ನ ಒಮ್ಮೆ ನನ್ನೊಂದಿಗೆ ಹೇಳಿದ್ದರು ಕನ್ನಡದ ಯಾವೊದೋ ಪತ್ರಿಕೆಯಲ್ಲಿ ಒಂದು ಕವನವೋ ,ಕಥೆಯೋ ಪ್ರಕಟವಾದರೆ ನಮ್ಮ ಕವಿಗಳು ಭೂಮಿ ಬಿಟ್ಟು ಇಂದು ಅಡಿ ಮೇಲೆ ನಡೆದದುತ್ತಾರೆ ಎಂದು ,ಅದು ಸತ್ಯ ಕೂಡ. ಲಕ್ಷ್ಯ ಗಟ್ಟಲೆ ಹಾಡು ಬರೆದ ಹಾಡಿದ ಜನಪದಸಹಿತಿಗಳ ಮುಂದೆ ಈ ಜನರ ಹಾರಾಟ ನಿಜಕ್ಕೂ ಅಸಹ್ಯ ತರಿಸುತ್ತದೆ ಅಲ್ಲವೇ ,ನಿ ಮಗೆ ಅಭಿನಂದನೆಗಳು
  ರವಿವರ್ಮ ಹೊಸಪೇಟೆ

  ಪ್ರತಿಕ್ರಿಯೆ
 2. lalitha siddabasavaiah

  ಬಸವಣ್ಣಪ್ಪ ಕಂಬಾರರಿಗೆ ಅಭಿನಂದನೆಗಳು. ವಸುಧೇಂದ್ರ ರ ಛಂದ ಪ್ರಕಾಶನಕ್ಕೆ ಧನ್ಯವಾದಗಳು.ಸದ್ದಿಲ್ಲದೆ ಕನ್ನಡಕ್ಕೆ ಒಳ್ಳೊಳ್ಳೆಯ ಪುಸ್ತಕ ಕೊಡುತ್ತೀರಿ. ಕನ್ನಡ ಪುಸ್ತಕ ಪ್ರಕಾಶನವು ಲಾಭಪ್ರದವೆಂದು ಏಕವ್ಯಕ್ತಿ ಸಾಹಸದಲ್ಲಿ ತೋರಿಸಿದಿರಿ .ವಸುಧೇಂದ್ರ ನಿಮ್ಮ ಹೊಸ ಪುಸ್ತಕ ಯಾವಾಗ?

  ಪ್ರತಿಕ್ರಿಯೆ
  • vasudhendra

   ಲಲಿತಾರವರೆ, ನಿಮ್ಮಷ್ಟೇ ಕುತೂಹಲದಿಂದ ನಾನೂ ನನ್ನ ಹೊಸ ಪುಸ್ತಕಕ್ಕಾಗಿ ಕಾಯುತ್ತಿರುವೆ! ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಆದರೆ ಒಂದು ಸಿನಿಮಾದ ಕತೆ-ಚಿತ್ರಕತೆ-ಸಂಭಾಷಣೆ ಬರೆದಿದ್ದೇನೆ. ಈ ವರ್ಷ ನೀವು ಆ ಸಿನಿಮಾವನ್ನು ನೋಡಬಹುದು!

   ಪ್ರತಿಕ್ರಿಯೆ
 3. savitri

  ಕಂಬಾರ ಅವರಿಗೆ ಅಭಿನಂದನೆಗಳು. ಛಂದ ಪುಸ್ತಕದ ಚೆಂದನೆಯ ಪುಸ್ತಕಕ್ಕೆ ಹೃತ್ಪೂರ್ವಕ ಸ್ವಾಗತ!:-)

  ಪ್ರತಿಕ್ರಿಯೆ
 4. ಸುಧಾ ಚಿದಾನಂದಗೌಡ.

  ಅಭಿನಂದನೆಗಳು-ಕಂಬಾರರಿಗೆ ಮತ್ತು ಛಂದಪುಸ್ತಕದ ವಸುಧೇಂದ್ರರವರಿಗೆ.
  -ಸುಧಾ ಚಿದಾನಂದಗೌಡ.

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ armanikanthCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: