ಜಡೆಹರಡಿದ ಬೆನ್ನ ಸವರಿದಂತಿದೆ..

ನಂದಿನಿ ಎನ್

 

ನಾ ಅದೆಂದೋ ರೂಪಿಸಿದ್ದ ಅಂತರವಿಂದು

ರೂಪಾಂತರಗೊಂಡಿದೆ

ವಸಂತನ ತೆರೆಯಂಚಿನಾಕರ್ಷಣೆ

ಜಡೆಹರಡಿದ ಬೆನ್ನ ಸವರಿದಂತಿದೆ

Click-2ನೀನು ಸುರಿಸಿದಷ್ಟನ್ನೂ ಹೀರಿ ಸವಿದು

ಅತೃಪ್ತಳಾಗೆ ಉಳಿಯುವಾಸೆ

ಆದರೆ

ಕೊಂಚ ಮುಗ್ಧವೆನಿಸುವಷ್ಟು ಸಲುಗೆ

ಸೋಕಿದೊಡನೆ ಗರಿಗೆದರುವಾಸೆ ನೀಲಾಗಾಧದಂತಿದೆ..

ಕತ್ತಲೆದೆಯ ಬಯಲಿನಲ್ಲಿ ನೊರೆಹಾಲು ಬಿಳಿಯ

ಮಂದಹಾಸದಾಮಂಜು ನೀನು ಮಳೆ ಮಾನವ

ಮುದ್ದೆ ಮೋಡದ ಹಿಂದೆ ಅವಿತಿರುವ ಧೀರನೆ

ಧರೆಗಿಳಿದು ‘ಧೋ’ ಕರಿಯುವುದಕೇಕೋ ಮುಜುಗರದಾಟ!

ಚಂದದಲ್ಲಿ ಸ್ಥಿರನು ನೀನು

ಸ್ಥಿರತೆಯಲ್ಲಿ ನಿನ್ನ ಮೀರಿಸಬಲ್ಲೆ ನಾನು

ತೆರೆದಿಟ್ಟ ನನ್ನೆಲ್ಲ ಸಾವಿರೆದೆಯ ಕಣ್ಣಿಗೆ,ನಿನ್ನ ಸೃಷ್ಟಿಯ

ತಂಪು ವಾತಾವರಣದ ಹಿತವಿದ್ದರಷ್ಟೇ ಸಾಕು..

ಬರುವಿಕೆಯನ್ನೇ ಬಾಯ ಬಿಟ್ಟು ಕಾಯುವ ಹೂವಲ್ಲ ನಾನು

ನಿರೀಕ್ಷೆಯಲ್ಲಿ ಬಿರುಕುಬಿಟ್ಟ ಒಡಲ ಭೂವನಿತೆಯಲ್ಲಾ ನಾನು

ಇದ್ದರಾ ಗುಡ್ಡದೆತ್ತರದ ನಿರಾಸಕ್ತಿಯು

ಬಂದಾಗೆಲ್ಲಾ ಥಳಥಳಿಸಿ ನಗಲುಬಲ್ಲ ನಗೆನವಿಲು ನಾನು

ಕಾಲಕುಂಚ ನದಿಹಾಳೆಗೆ ಗೀಚಿದ

ವಿಧಿಯಗೆಲ್ಲಿಯ ನಾವು ಬಯಸುವಾ ತುದಿ

ಈ ಮಿಂಚಿನಾಟಕಂಜಿ ದಿಗ್ಗನೆ ಪಂಚೇಂದ್ರಿಯ

ಕೆದರಿ ನಾ ಓಡುವೆ ಆ ಹೆಪ್ಪು ಬಯಲಿನಲಿ..

ಅದ್ಯಾಕೊ ಮಳೆ ಧರೆಗಿಳಿಯುವ ಮೊದಲೇ ಘನ

ಭಾವ ಬಿಂದು ಇಂಗುವ  ಭಯ ಭಾವ ಮುಡಿಗೇರಿದೆ
ಏನೇ ಇರಲಿ ,
ಅದೆಂದೋ ರೂಪಿಸಿದ್ದ ಅಂತರವಿಂದು

ಪೂರ್ಣಪ್ರಮಾಣದಲ್ಲಿ ರೂಪಾಂತರಗೊಂಡಿದೆ

ವಸಂತನ ತೆರೆಯಂಚಿನಾಕರ್ಷಣೆ

ಜಡೆಹರಡಿದ ಬೆನ್ನ ಸವರಿದಂತಿದೆ …

‍ಲೇಖಕರು Admin

September 2, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಂತೋ ಬಂತೋ ಇನ್ನೊಂದು ಫೋಟೋ..

ಇನ್ನೊಂದು ‘ಕ್ಲಿಕ್ ಆಯ್ತು ಕವಿತೆ’ ಬನ್ನಿ, ಕವಿತೆ ಬರೆಯಿರಿ.. ಕ್ಲಿಕ್ ಆಯ್ತು ಕವಿತೆಯ ಏಳನೆಯ ಫೋಟೋ ಇದು ಈಗ ಇನ್ನೊಂದು ಕ್ಲಿಕ್ ನಿಮ್ಮ ಮುಂದೆ...

ವಾಹ್! ಇನ್ನೊಂದು 'ಕ್ಲಿಕ್ ಆಯ್ತು ಕವಿತೆ'

ಬನ್ನಿ, ಕವಿತೆ ಬರೆಯಿರಿ.. ಕ್ಲಿಕ್ ಆಯ್ತು ಕವಿತೆಯ ಆರನೆಯ ಫೋಟೋ ಇದು ಕಳೆದ ಐದು  ಕವಿತೆ ಸರಣಿಯಲ್ಲಿ ಮೊದಲನೆಯ ಫಲಿತಾಂಶ ಮಾತ್ರ ಪ್ರಕಟವಾಗಿದೆ....

ಅಯ್ಯೋ..

ಅಯ್ಯೋ.. ಹಾಗಂತ ಉದ್ಘಾರ ತೆಗೆದವರು ನಂ ಪಾರ್ವತಿ ಕ್ಲಿಕ್ ಆಯ್ತು ಕವಿತೆ ಎರಡನೇ ಆವೃತ್ತಿಯ ಕವಿತೆಗಳಲ್ಲಿ ಬೆಸ್ಟ್ ಒಂದನ್ನು 'ಕಾಕಾ' ಗೋಪಾಲ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: