ಜನಪರ ಲೇಖನಗಳ ಸಂಕಲನ 'ದೇವಕಾರು'

ಈ ಭಾನುವಾರ ಅಂಕಿತ ಪ್ರಕಾಶನದಿಂದ ಬಿಡುಗಡೆ ಸುಮಾರು ಎರಡು ದಶಕಗಳಿಂದ ಪತ್ರಕರ್ತನಾಗಿರುವ ಸತೀಶ್ ಚಪ್ಪರಿಕೆ ಅವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಜನಸಾಮಾನ್ಯರ ಬಗ್ಗೆ ಬರೆದ ಜನಪರ ಲೇಖನಗಳ ಸಂಕಲನ ದೇವಕಾರು. ಭಾರತದ ಗ್ರಾಮೀಣ ಪ್ರದೇಶಗಳಲ್ಲಿನ ಹಲವು ಮುಖಗಳನ್ನು ಪರಿಚಯ ಮಾಡಿಕೊಡುಂವತಹ ಒಟ್ಟು ಒಂಬತ್ತು ಲೇಖನಗಳು ಈ ಕೃತಿಯಲ್ಲಿವೆ. ದೇವಕಾರಿನ ಮಹಾ ಬಲ ಬಬನಿ ನಾಯಕ, ವಿದರ್ಭದ ಕಲಾವತಿ, ಬಂಡ್ಲಪಲ್ಲಿಯ ರಾಜಾ ರೆಡ್ಡಿ, ಸಿದ್ದಾಪುರದ ಮೈಲಮ್ಮ, ವಾರಣಾಸಿಯ ಬಾಬಾ ನಾಗನಾಥ ಯೋಗೀಶ್ವರ, ದಾವಣಗೆರೆಯ ತಾಹೀರ್ ಅಲಿ, ಪುಲಕುಂಟದ ನಾರಾಯಣಮ್ಮ, ಉದಕಮಂಡಲದ ಮುದ್ಸಿನ್ ಮತ್ತು ಚೋಂಡಿಮುಖೇಡ್‌ನ ಶ್ರೀಪತಿರಾವ್ ಮಹದೇವರಾವ್ ಪಾಟೀಲ್ ಅವರಂತಹ ಜನಸಾಮಾನ್ಯರ ಮೂಲಕ ಇಲ್ಲಿನ ಪ್ರತಿಯೊಂದು ಲೇಖನಗಳೂ ಆವರಣಗೊಳ್ಳುತ್ತಾ ಸಾಗುತ್ತವೆ ಸಂತ್ರಸ್ತರ ಪಾಡು, ರೈತರ ಆತ್ಮಹತ್ಯೆ, ಎನ್‌ಆರ್‌ಜಿಎ- ಭಾರತ್ ನಿರ್ಮಾಣ್ ಯೋಜನೆಗಳ ವೈಫಲ್ಯ, ಗಣಿಕಾರ್ಮಿಕರ ದುಸ್ಥಿತಿ, ಗಂಗಾ ನದಿಯ ದಾರುಣ ಮುಖ, ಅನಂತಪುರದಲ್ಲಿನ ಮಾನವ ಕಳ್ಳಸಾಗಣೆ… ಹೀಗೆ ಹಲವು ವಿಷಯಗಳನ್ನು ಒಳಗೊಂಡಿರುವ ಇಲ್ಲಿನ ಪ್ರತಿಯೊಂದು ಲೇಖನವೂ ನೇರವಾಗಿ ಒಡಲಾಳದಿಂದ ಬಂದಿದೆ. ಉನ್ನತ ಮಟ್ಟದ ಗ್ರಾಮೀಣ ವರದಿಗಾರಿಕೆಯ ಫಲವಾಗಿ ನಮ್ಮೆಲ್ಲರ ಕೈಸೇರುತ್ತಿದೆ ದೇವಕಾರು ಎಂಬ ಈ ಕೃತಿ. ಮುಖ್ಯವಾಗಿ ಪತ್ರಕರ್ತರು ಮತ್ತು ಪತ್ರಿಕೋದ್ಯಮದ ಕಡೆ ಮುಖ ಮಾಡಿ ನಿಂತಿರುವ ಯುವಕರು ಓದಲೇ ಬೇಕಾಗಿರುವುದು ದೇವಕಾರು ಕೃತಿಯ ಪತ್ರಕರ್ತರು ಮತ್ತು ಪತ್ರಿಕೋದ್ಯಮ ಯಾರಿಗಾಗಿ? ಎಂಬ ಮುನ್ನುಡಿಯನ್ನು. ಹೆಚ್ಹಿನ ಓದಿಗಾಗಿ ಓದು ಬಜಾರು ]]>

‍ಲೇಖಕರು avadhi

August 10, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ. ಶಶಿಧರ ನರೇಂದ್ರ ʼನಿಮಗೆ ಮೊಮ್ಮಗ ಜನಿಸಿದ' ಎಂಬುದನ್ನು ಕೇಳಿ ಸಂತೋಷಗೊಂಡ ರಸೂಲ್ ಖಾನ್ ರು ಆಕಾಶದತ್ತ ಮುಖ ಮಾಡಿ ದೇವರಿಗೆ ಕೃತಜ್ಞತೆ...

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಜಿ.ಎನ್.ರಂಗನಾಥರಾವ್ ಪ್ರಿಯ ಎಚ್ಚೆಸ್ವಿ,ನಿಮ್ಮ 'ಬುದ್ಧಚರಣ'ಮಹಾಕಾವ್ಯವನ್ನುಸಾವಧಾನದಿಂದ ಓದಿ ಸುಖಿಸುತ್ತಾ ಹೋದಂತೆ, "ಹುತ್ತಗಟ್ಟದೆ ಚಿತ್ತ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This