ಜಯಶ್ರೀ ಕಾಸರವಳ್ಳಿ ಕಂಡಂತೆ ಆರ್.ಎನ್.ಕೆ. ಪ್ರಸಾದ್

ಆರ್.ಎನ್.ಕೆ. ಪ್ರಸಾದ್ – ಒಂದು ನೆನಪು

ಜಯಶ್ರೀ ಕಾಸರವಳ್ಳಿ

ಸುಮಾರು ಇಪ್ಪತ್ತೆರಡು ವರುಷದ ಹಿಂದಿನ ಮಾತು, ನಾವು ಮದರಾಸಿಗೆ ಹೋದ ಹೊಸತು. ಆಗ ಮದರಾಸಿನಲ್ಲಿ ಪರಿಚಿತರೂಂತ ನಮಗಿದ್ದುದು ಕೇಫ ಒಬ್ಬರೆ. ಅವರೇ ಒಂದು ದಿನ ನಮ್ಮನ್ನು ಆರ್. ಎನ್. ಕೆ. ಮನೆಗೆ ಕರೆದುಕೊಂಡು ಹೋದರು. ನಾನು ‘ಬೆಳ್ಳಿಮೋಡ’ ನೋಡಿರಲಿಲ್ಲ. ಆದರೆ ಅದರ ಛಾಯಾಗ್ರಾಹಕರು ಇವರೆಂದು ಗೊತ್ತಿತ್ತು. ಆರ್. ನಾಗೇಂದ್ರರಾಯರ ಕಲಾತ್ಮಕ ಕುಟುಂಬದ ಬಗ್ಗೆ ಸಾಕಷ್ಷು ಕೇಳಿದ್ದೆವು. ಆರ್. ನಾಗೇಂದ್ರರಾಯರ ಅಭಿನಯವನ್ನ ಬಹಳಾ ಮೆಚ್ಚಿಕೊಂಡಿದ್ದೆ. ಆರ್. ಎನ್. ಜಯಗೋಪಾಲ್ ಅವರ ಹಲವು ಚಿತ್ರಗೀತೆಗಳನ್ನು ಅವರದ್ದು ಎಂದು ತಿಳಿಯದೇ ಹಾಡುವ ಎಷ್ಷೋ ಜನರಂತೆ ನಾನು ಗುನುಗುನಿಸುತ್ತಲೇ ಬಾಲ್ಯ ಕಳೆದು ಬಂದವಳು. ಆರ್. ಎನ್. ಸುದರ್ಶನ್, ಶೈಲಶ್ರಿ ಸಿನಿಮಾಗಳು ಒಂದೆರಡು ನೋಡಿ, ಎಲ್ಲರೆದುರು ಬಾಯಿಬಿಟ್ಟು ಹೇಳಲು ಹೆದರಿದರೂ, ಮನದೊಳಗೆ ಶೈಲಶ್ರಿಯ ದಿಟ್ಟ ಅಭಿನಯವನ್ನ ಮೆಚ್ಚಿ, ನನಗರಿವಿಲ್ಲದ ಹಾಗೇ ಎಷ್ಷೋ ಕಡೆ ಅವರಂತೆ ಅನುಸರಿಸಿದವಳು.

ಆದರೆ ಕೇಫ ಅವರ ಮನೆಗೆ ಕರೆದುಕೊಂಡು ಹೋದರೆ, ಆ ಮನೆಯ ಗೇಟಿನ ಬಳಿ ನಿಂತ ನಂಗೋ ನೂರು ತರಹದ ಮುಜುಗರ. ಬಾಲ್ಯದಿಂದಲೂ ಸಿನಿಮಾ ಅಂದರೆ ಮದರಾಸು ಎಂದು ಬೆಳೆದಿದ್ದ ನನಗೆ_ ಅಂಥವರ ಮನೆಗೆ ಹೋಗುವ ಅವಕಾಶ ನಿರಾಯಾಸವಾಗಿ ದೊರೆಯುತ್ತೆ ಎಂಬುದೇ ನಂಬಲಸಾಧ್ಯವೆಂಬಂತೆ…..ಹೋಗಿ ಮಾತಾಡಿಸದೇ ಇದ್ದರೇ ಮುಂದೇನು ತಿಳಿಯದ ಬೆಪ್ಪರಂತೆ ನಿಲ್ಲುವ ಪರಿಸ್ಫಿತಿ ಬಗ್ಗೆ…….ನನ್ನ ಯೋಚನೆಗಳು ಒಂದೇ ಎರಡೇ…….ನಾನು ತಿಳಿಯದ ಯಾವುದೋ ಜಗತ್ತಿಗೆ ಕೇಫ ನನ್ನನ್ನು ಬಲವಂತದಿಂದ ಕರೆದುಕೊಂಡು ಹೋಗುತ್ತಿದ್ದಾರೆಂದು ಅವರ ಮೇಲೂ ಸಿಟ್ಟು.

ಆದರೆ ಎಲ್ಲವೂ ಒಂದೇ ಕ್ಷಣ. ಆಗಷ್ಷೇ ತಿಂಡಿ ಮುಗಿಸಿ, ಹೊರಗೆ ಬಂದ ಆರ್. ಎನ್. ಕೆ ಪ್ರಸಾದ್ಅವರು, ನಮ್ಮನ್ನು ನೋಡಿದ್ದೇ, ‘ಓ ಬನ್ನಿ, ಬನ್ನಿ, ಬನ್ನಿ’ ಎಂದು ಬಾಯಿ ತುಂಬಾ ಕರೆದ ಆ ಆಪ್ತ ದ್ವನಿ ನನ್ನನ್ನು ಎಷ್ಷು ಮೋಡಿ ಮಾಡಿತ್ತೆಂದರೆ ನನ್ನ ಹಿಂಜರಿಕೆ, ಸಂಕೋಚ ಕ್ಷಣಾರ್ಧದಲ್ಲಿ ಮಾಯವಾಗಿತ್ತು. ಎಷ್ಷೋ ವರುಷದ ಪರಿಚಿತರು ನಾವು ಎಂಬಂತೆ ಅವರು ನಮ್ಮೊಡನೆ ಮಾತನಾಡಿದ ಪರಿಚಿತ ಧಾಟಿ, ಆತ್ಮೀಯತೆ, ಸರಳತೆಯನ್ನು ಹೇಗೆ ವಣರ್ಿಸಿದರೂ ಸಾಲದು. ದೋಸೆ ಮಾಡುತ್ತಿದ್ದ ಅವರ ಪತ್ನಿ ಉಷಾ ನೆರಿಗೆ ಎತ್ತಿ ಕಟ್ಟಿ ಕೈಯಲ್ಲಿ ಸಟಕ ಹಿಡಿದೇ ಹೊರಗೆ ಬಂದು ಮಾತಾಡಿಸಿದ ರೀತಿ _ ನಾ ಎಂದೂ ಮರೆಯದ ನನ್ನ ಮಲೆನಾಡಿನ ಚಿತ್ರಣವನ್ನ ಯಥಾವತ್ತಾಗಿ ನನ್ನ ಮುಂದೆ ನಿಲ್ಲಿಸಿತ್ತು. ಅಂದು ಹಾಗೆ ಅಕಸ್ಮಾತಾಗಿ ಪರಿಚಯವಾದ ಆರ್. ಎನ್. ಕೆ. ಮತ್ತು ಉಷಾ ನಂತರ ಬಹಳ ಆತ್ಮೀಯರಾದರು. ಪ್ರಸಾದ್ ಅವರದ್ದು ಎಂತವರನ್ನೂ ಸೆಳೆಯುವಂತಹ ವ್ಯಕ್ತಿತ್ವ. ಅಜಾನುಬಾಹು, ಗೌರವವರ್ಣ, ಆರ್. ಎನ್. ಮನೆತನದ ಅದೇ ಚೂಪು ಮೂಗು, ನುಣುಪಾಗಿ ಬಾಚಿದ ತಲೆಗೂದಲು, ಸೂಕ್ಷ್ಮ್ಮ ಕಣ್ಣುಗಳು, ಯಾವಾಗಲೂ ನೀಟಾಗಿ ಇಸ್ರಿ ಮಾಡಿದ ಗರಿಗರಿ ಬಟ್ಟೆ. ಹಸನ್ಮುಖಿ ಸದಾ ಹಸನ್ಮುಖಿ…… ಎಲ್ಲದರಲ್ಲೂ ಒಂದು ಕ್ರಮ, ಶಿಸ್ತು, ಅಚ್ಚುಕಟ್ಟು, ದ್ವನಿ ಏರದ ಮಾತು, ಹದ ಮೀರದ ಕೆಲಸ, ಅದು ಸ್ವಂತ ಕೆಲಸವಿರಬಹುದು ಕನ್ನಡಸಂಘದ ಕೆಲಸಕಾರ್ಯವಿರಬಹುದು_ಎಲ್ಲವೂ ಸಮಾನ ಆಸಕ್ತಿಯ ವಿಷಯ. ಪ್ರತಿಯೊಂದರಲ್ಲೂ ಅದೇ ಮಗುವಿನ ಮುಗ್ಧತೆ, ಅಷ್ಷೇ ತನ್ಮಯತೆ. ಮದಾರಾಸಿನ ಬೆಸೆಂಟನಗರದ ಕನ್ನಡ ಸಂಘ ಅವರ ಉಸಿರೇ ಆಗಿತ್ತು.ಅದಕ್ಕಾಗಿ ಪ್ರಸಾದ್ ಅವರು ತುಂಬಾ ಶ್ರಮಿಸಿದ್ದರು. ಕನರ್ಾಟಕದ ಜನತೆ ತಮ್ಮನ್ನು ಮರೆತಿದ್ದಾರೆಂಬ ನೋವು ಆಗಾಗ ಅವರ ಮಾತಲ್ಲಿ ವ್ಯಕ್ತವಾಗುತ್ತಿತ್ತು. ಕನ್ನಡ ಚಿತ್ರರಂಗ ಹೋದ ವರುಷ ಅವರಿಗೆ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ ಕೊಟ್ಟಾಗ ಮಗುವಿನಂತೆ ಬಹಳ ಸಂತೋಷ ಪಟ್ಟರು, ೆ ಮಗುವಿನಂತಹ ಅದೇ ನಿಷ್ಕಲ್ಮಷ ಮನಸ್ಸು, ಆ ಸರಳತೆ, ಆ ಸೌಜನ್ಯ, ಅವರ ನಯ_ವಿನಯ ಈಗಲೂ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಮದರಾಸಿನ ಉರಿ ಬಿಸಿಲನ್ನೂ ಲೆಕ್ಕಿಸದೇ ಸಾಯಂಕಾಲ ದಂಪತಿ ಕನ್ನಡಿಗರ ಮನೆಗಳನ್ನು ಹುಡುಕಿಕೊಂಡು ಹೋಗುತ್ತಿದ್ದುದ್ದನ್ನು, ಹಾಗೇ ಮೊದಲು ಬೆಸೆಂಟ್ ನಗರಕ್ಕೂ, ಆನಂತರ ಅಡ್ಯಾರ್ಗೆಂದೂ ನಮ್ಮ ಮನೆಗೆ ಬರುತ್ತಿದ್ದುದ್ದೂ ಮನದಲ್ಲಿ ಅಚ್ಚಳಿಯದೇ ಉಳಿವ ಅದೆಷ್ಷೂ ಭಾವಚಿತ್ರಗಳಂತೆ ಸ್ಥಿರವಾಗಿ ನಿಂತಿದೆ. ಅನೇಕ ವರುಷ ಹೊರನಾಡಿನಲ್ಲಿ ಅನಿವಾರ್ಯವಾಗಿ ನೆಲೆಸಿದವರಿಗೆ ಭಾಷೆ ಅನ್ನುವುದು ಹೇಗೆ ಒಂದು ಸೆಲೆಯಾಗಿ ಅದು ಯಾವ ಮಟ್ಟದ ಸೆಳೆತ, ವ್ಯಾಮೋಹ, ತವಕ, ತಲ್ಲಣಗಳಾಗಿ ನಮ್ಮಂತವರನ್ನ ಕಾಣುವುದಕ್ಕೆ, ಒಡನಾಡುವುದಕ್ಕೆ, ನಾಲ್ಕು ಮಾತಾಗಿಸುವುದಕ್ಕೆ ಹೇಗೆ ಮನಸ್ಸು ಹಾತೊರೆಯುತ್ತಿರುತ್ತದೆ, ಕಾಣದಿದ್ದಲ್ಲಿ ಯಾವ ರೀತಿಯಲ್ಲಿ ನಮ್ಮ ಭಾವನೆಗಳು ಸತಾಯಿಸಿ ನಮ್ಮನು ಪೀಡಿಸುತ್ತಿರುತ್ತವೆ ಎಂಬುದು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಪ್ರಸಾದ್ಗೆ ಶ್ರದ್ದಾಂಜಲಿ ಹೇಳುವಷ್ಷು ನಾನು ದೊಡ್ಡವಳಲ್ಲ, ಆದರೆ ಅವರೊಡನೆ ಒಡನಾಡಿದ ಪ್ರತಿಯೊಬ್ಬರ ಮನದಲ್ಲೂ ಅವರ ನೆನಪು ಶಾಶ್ವತವಾಗಿ ನಿಲ್ಲುವಂತಹದು…]]>

‍ಲೇಖಕರು G

February 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಗರದಾಚೆಯ ಸೂರು…

ಸಾಗರದಾಚೆಯ ಸೂರು…

ರಂಜನಾ ಹೆಚ್ ಬೆಚ್ಚಗಿನ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನರಿತು ನಡೆವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಈ...

‘ಬಂಟಿ’ ನೆನಪು

‘ಬಂಟಿ’ ನೆನಪು

ಉಷಾ ನರಸಿಂಹನ್ ಎಲ್ಲೋ ಏನೋ ಕಳೆದು ಹೋದ ಹಾಗೆ… ಬದುಕಿನ ಮುಖ್ಯ ತಂತುವೊಂದು ಕಳಚಿಕೊಂಡ ಹಾಗೆ. ನ್ಯಾಯವೆ; ಎಲ್ಲಾ ಸಾವುಗಳು ಹತ್ತಿರದವರನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This