ಜಾಗತೀಕರಣ: ಪ್ರತಿರೋಧದ ಎರಡು ಮಾದರಿಗಳು

ಹೀಗೊಂದು ಚಿಂತನೆ

ಕು.ಸ.ಮಧುಸೂದನ್

ಇವತ್ತು ನಾವೇನಾದರೂ ಪ್ರತಿರೋಧ ತೋರಲೇ ಬೇಕೆಂದಿದ್ದರೆ ಅದು ಜಾಗತೀಕರಣದ ವಿರುದ್ದ! ಇದೀಗ ಜಾಗತೀಕರಣ ತನ್ನೆಲ್ಲ ಕಬಂದ ಬಾಹುಗಳನ್ನು ಚಾಚಿ ನಮ್ಮೆಲ್ಲರ ಬದುಕನ್ನು ನಾಶ ಮಾಡಲು ಹೊರಟಿದೆ. ಪಶ್ಚಿಮ ನಮ್ಮ ಮೇಲೆ ಹೇರಿರುವ ಮುಕ್ತ ಆಥರ್ಿಕ ವ್ಯವಸ್ಥೆ ಎರಡು ಸ್ತರಗಳಲ್ಲಿ ನಮ್ಮನ್ನು ಬೇಟೆಯಾಡುತ್ತಿದೆ. ಮೊದಲನೆಯದು: ಅದು ತನಗೆ ಸಹಜವಾದ ಬಂಡವಾಳಶಾಹಿ ನೀತಿಯನ್ನು ನಮ್ಮ ಮೇಲೆ ಹೇರುವ ಬರದಲ್ಲಿ ಇಲ್ಲಿನ ಸ್ಥಳೀಯ ಸಂಪನ್ಮೂಲಗಳನ್ನು ಲೂಟಿ ಹೊಡೆಯುತ್ತಿದೆ.ಗ್ರಾಹಕ ಕೇಂದ್ರಿತ ಉಪಬೋಗ ಸಂಸ್ಕೃತಿಯನ್ನು ಹುಟ್ಟು ಹಾಕುತ್ತಿದೆ. ಎರಡನೆಯದು:ತನ್ನ ಯಜಮಾನ ಸಂಸ್ಕೃತಿಯನ್ನು ನಮ್ಮ ಮೇಲೆ ಹೇರಲು ನಮ್ಮ ನೆಲದ ಉಳಿದೆಲ್ಲ ಸಂಸ್ಕೃತಿ ಉಪಸಂಸ್ಕೃತಿಗಳನ್ನು ನಾಶ ಮಾಡುತ್ತಿದೆ. ಸ್ಥಳಿಯ ಸಂಸ್ಕೃತಿಗಳನ್ನು ಇಲ್ಲವಾಗಿಸಿಆಸೆಯನ್ನಾಧರಿಸಿದ ಉಪಬೋಗ ಸಂಸ್ಕೃತಿಯನ್ನು ಹುಟ್ಟು ಹಾಕಲು ಹೊರಟಿದೆ. ಪ್ರಸ್ತುತ ಭಾರತದಲ್ಲಿಜಾಗತೀಕರಣವನ್ನು ಎರಡು ಮಾದರಿಯಲ್ಲಿ ಪ್ರತಿರೋಧಿಸ ಬಹುದಾಗಿದೆ.ಮೊದಲಮಾದರಿ,ಸಾಂಪ್ರದಾಯಿಕಸ್ವಧೇಶಿ ಮಾದರಿ.ಎರಡನೇ ಮಾದರಿ,ಜಾಗತೀಕರಣದಿಂದ ತಮ್ಮ ಭೂಮಿಯನ್ನು, ಕಸುಬನ್ನು,ಸ್ವಾಭಿಮಾನದಿಂದ ಬದುಕುವ ಅವಕಾಶಗಳನ್ನು ಕಳೆದುಕೊಂಡ ಸಮುದಾಯಗಳು ಒಡ್ಡ ಬಹುದಾದ ಪ್ರತಿರೊಧದ ಮಾದರಿ. ಈಗ ನಾವು ಮೊದಲ ಮಾದರಿಯನ್ನು ನೋಡೋಣ:ಈ ಸಾಂಪ್ರದಾಯಿಕ ಸ್ವಧೇಶ ಮಾದರಿ ,ಬ್ರಿಟೀಷರ ವಿರುದ್ದ ಗಾಂದಿ ನಡೆಸಿದ ಸ್ವಧೇಶಿ ಚಳುವಳಿಯನ್ನು ಕೆಲಮಟ್ಟಿಗೆ ನೆನಪಿಸುವುದು ನಿಜವಾದರೂ ಇವತ್ತು ಎಡಪಂಥೀಯರಾಗಲಿ-ಪ್ರಗತಿಪರರಾಗಲಿ ಇದನ್ನು ಒಪ್ಪಲು ಸಾದ್ಯವಿಲ್ಲ. ಏಕೆಂದರೆ, ಈ ಸ್ವಧೇಶಿವಾದವನ್ನು ಬಲಪಂಥೀಯ ಸಂಘಪರಿವಾರವು ಹೈಜಾಕ್ ಮಾಡಿದೆ. ಸ್ಚಧೇಶಿವಾದದ ಮೂಲಕ ಸಂಘಪರಿವಾರವು ಜಾಗತೀಕರಣವನ್ನು ವಿರೋಧಿಸುವಂತೆ ಕಂಡು ಬಂದರೂ ಆಳದಲ್ಲಿ ಅದರ ಉದ್ದೇಶ ಬೇರೆಯೇ ಇದೆ.ಮೂಲಭೂತವಾಗಿ ಸಂಘಪರಿವಾರಕ್ಕೆ ಮುಕ್ತ ಆಥರ್ಿಕ ನೀತಿಯ ಬಗ್ಗೆಯಾಗಲಿ ಅದು ಪ್ರತಿಪಾದಿಸುವ ಉಪಬೋಗಸಂಸ್ಕೃತಿಯ ಬಗ್ಗೆಯಾಗಲಿ ಅಂತಹ ಬಿನ್ನಮತವೇನಿಲ್ಲ.ಮೇಲ್ನೋಟಕ್ಕೆೆ ಅದು ಜಾಗತೀಕರಣವನ್ನು ವಿರೋದಿಸುವಂತೆ ಕಂಡರೂ, ಗುಪ್ತವಾಗಿ ಜಾಗತೀಕರಣದ ಲಾಭದಲ್ಲಿ ತಾನೂ ಸಹ ಪಾಲು ಪಡೆಯಲು ಇಚ್ಚಿಸುತ್ತದೆ.ಎಲ್ಲ ಸ್ಥಳೀಯ ಸಂಸ್ಕೃತಿಗಳನ್ನು, ಜೀವನಶೈಲಿಗಳನ್ನು ನಾಶಮಾಡಿತಾನು ಪ್ರತಿನಿಧಿಸುವಯಜಮಾನ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪ್ರತಿಷ್ಟಾಪಿಸುವುದು ಜಾಗತೀಕರಣದ ಉದ್ದೇಶವಾಗಿದೆ.ಮಾತೆತ್ತಿದರೆ ರಾಷ್ಟ್ರೀಯತೆಯ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುವ ಸಂಘಪರಿವಾರಕ್ಕೆ ಸ್ಥಳೀಯ ಸಂಸ್ಕೃತಿಯನ್ನಾಗಲಿ,ಜೀವನಕ್ರಮವನ್ನಾಗಲಿ ರಕ್ಷಿಸುವ ಯಾವ ಉದ್ದೇಶವು ಇಲ್ಲ. ಬದಲಿಗೆ ಜಾಗತೀಕರಣದ ಲಾಭವನ್ನು ಹೊರಗಿನ ಬಂಡವಾಳಶಾಹಿಗಳಿಗೆ ದೊರೆಯದಂತೆ ನೋಡಿಕೊಂಡು,ತನ್ನ ಹಿತಾಸಕ್ತಿಗಳನ್ನು ಕಾಪಾಡುವ ಶಕ್ತಿಗಳಿಗೆ ಆ ಲಾಭವನ್ನು ದೊರಕಿಸಿಕೊಡುವುದೇ ಪರಿವಾರದ ಉದ್ದೇಶವಾಗಿದೆ.ಹೀಗಾಗಿಮೇಲ್ಪದರದಲ್ಲಿ ಜಾಗತೀಕರಣವನ್ನು ವಿರೋದಿಸುವ ಸಂಘಪರಿವಾರವು ಆಳದಲ್ಲಿ ವಿಧೇಶಿ ಬಂಡವಾಳಶಾಹಿಯ ಬದಲಿಗೆ ಸ್ಥಳಿಯ ಬಂಡವಾಳಶಾಹಿಗಳನ್ನು ಉತ್ತೇಜಿಸಲು ಬಯಸುತ್ತದೆ. ಹೀಗಾಗಿ ಈ ಮಾದರಿಯಲ್ಲಿ ಜಾಗತೀಕರಣವನ್ನು ವಿರೋದಿಸಬಹುದೆಂದು ನನಗನ್ನಿಸುತ್ತಿಲ್ಲ. ಇನ್ನುಎರಡನೆಮಾದರಿ:ಜಾಗತೀಕರಣದಿಂದಾಗಿತಮ್ಮಭೂಮಿಯನ್ನು,ಕಸುಬಿನಾಧಾರದ ಮೇಲೆ ಸ್ವಾಭಿಮಾನದಿಂದ ಬದುಕುವ ಅವಕಾಶದಿಂದ ವಂಚಿತವಾದ ಸಮುದಾಯಗಳ ನೇರ ರಾಜಕೀಯ ಹೋರಾಟದ ಮಾದರಿಯಾಗಿದೆ. ಜಾಗತೀಕರಣವು ಮದ್ಯಮವರ್ಗಕ್ಕೆ ಕೇವಲ ಸಾಂಸ್ಕೃತಿಕ ಆಕ್ರಮಣವಾಗಿ ಕಂಡುಬಂದರೆ ಈನೆಲದ ರೈತರಿಗೆ,ದಲಿತರಿಗೆ,ಹಳ್ಳಿಗಳ ಹಿಂದುಳಿದ ವರ್ಗಗಳ ಪಾರಂಪರಿಕ ಕಸುಬುದಾರರಿಗೆ ಜಾಗತೀಕರಣವು ಸ್ಥಳೀಯ ಸಂಪನ್ಮೂಲಗಳನ್ನು ಲೂಟಿ ಹೊಡೆಯುವ ಪಶ್ಚಿಮದ ಹುನ್ನಾರವಾಗಿ ಕಂಡು ಬರುತ್ತದೆ. ಈಮಣ್ಣಿನ ರೈತರಿಗೆ ಜಾಗತೀಕರಣ ನೀಡಿದ ಹೊಡೆತ ಎಂತಹದು ನೋಡಿ ಕೃಷಿಕ್ಷೇತ್ರಕ್ಕೆ ಕಾಲಿಟ್ಟ ಜಾಗತೀಕರಣವುರೈತರ ಸಾಂಪ್ರದಾಯಿಕ ಕೃಷಿ ಪದ್ದತಿಯನ್ನು,ಹೈನುಗಾರಿಕೆಯನ್ನು ನಾಶ ಮಾಡಿದೆ.ರೈತ ಬಳಸುವ ಬೀಜ,ಗೊಬ್ಬರರಾಸಾಯನಿಕಗಳ ಉತ್ಪಾದನೆಗಳನ್ನು ತನ್ನ ಹಿಡಿತಕ್ಕೆ ತಂದುಕೊಂಡಿದೆ.ಇದೀಗ ಬಹುರಾಷ್ಟ್ರೀಯ ಕಂಪನಿಗಳು ಕೃಷಿ ಮಾರುಕಟ್ಟೆಯ ಕ್ಷೇತ್ರಕ್ಕೆ ಕಾಲಿಟ್ಟು ರೈತರ ಸಂಕಷ್ಟವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿವೆ. ತೊಂಭತ್ತರ ದಶಕದಲ್ಲಿ ಜಾಗತೀಕರಣ ಕಾಲಿಟ್ಟ ನಂತರದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತ ಬರುತ್ತಿವೆ. ಇನ್ನು ಬಹುತೇಕ ದಲಿತ ವರ್ಗ ಕೃಷಿ ಕಾಮರ್ಿಕರಾಗಿದ್ದುಉದಾರಿಕರಣ ನೀತಿಯಿಂದಾಗಿ ಪರಿಚಯಿಸಲ್ಪಟ್ಟ ಬೃಹತ್ ಯಂತ್ರಗಳಿಂದಾಗಿ ಕೆಲಸ ಕಳೆದು ಕೊಂಡಿದೆ.ಕೃಷಿಕ್ಷೇತ್ರದ ಹಿನ್ನಡೆಯಿಂದಾಗಿ ಈ ವರ್ಗ ನಗರಗಳಿಗೆ ವಲಸೆ ಹೋಗಿ ಮೂರನೆ ದಜರ್ೆ ನಾಗರೀಕರಂತೆ ಬದುಕುತ್ತಿದ್ದಾರೆ.ಇನ್ನು ಅಲ್ಪಸ್ವಲ್ಪ ಓದಿದ ದಲಿತ ಯುವ ಜನತೆಗೆ ಖಾಸಗಿ ಕ್ಷೇತ್ರದ ನೌಕರಿ ಗಗನಕುಸುಮವಾಗಿದೆ, ಮೀಸಲಾತಿಯಿಲ್ಲದೆ! ಗ್ರಾಮೀಣ ಬಾರತದ ಪಾರಂಪರಿಕಕಾಯಕಗಳನ್ನು ಮಾಡುತ್ತ ಬಂದಿರುವ ಕುಶಲ ಕಮರ್ಿಗಳು-ಕುಂಬಾರರು,ಕಮ್ಮಾರರು,ನೇಕಾರರು ಇತ್ಯಾದಿ-ಮುಕ್ತ ಆಥರ್ಿಕ ನೀತಿಯಿಂದಾಗಿತಮ್ಮ ಉದ್ಯೋಗಗಳನ್ನು ಕಳೆದು ಕೊಂಡು ನಿರ್ಗತಿಕರಾಗಿ ಜೀವಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಹೀಗೆಜಾಗತೀಕರಣದಿಂದಾಗಿ ತನ್ನ ನೆಲವನ್ನು ಕಳೆದುಕೊಂಡ ರೈತ ಸಮುದಾಯ,ಸಾರ್ವಜನಿಕ ಬದುಕಿನಲ್ಲಿನ ಅವಕಾಶಗಳನ್ನು ಕಳೆದುಕೊಂಡ ದಲಿತ ಸಮುದಾಯ, ತಮ್ಮ ವೃತ್ತಿಗಳನ್ನು ಕಳೆದುಕೊಂಡ ಇತರೇ ಹಿಂದುಳಿದ ವರ್ಗಗಳು ಇವತ್ತು ಹಸಿವು -ಅಸಹಾಯಕತೆ-ಹತಾಶೆಗಳನ್ನು ಅನುಭವಿಸುತ್ತಿವೆ. ಈ ಸಮುದಾಯಗಳು ಒಂದಾಗಿ ನಡೆಸಬಹುದಾದ ನೇರ ರಾಜಕೀಯ ಹೋರಾಟ ಮಾತ್ರ ನಮ್ಮನ್ನು ಜಾಗತೀಕರಣದ ಅಪಾಯಗಳಿಂದ ರಕ್ಷಿಸಬಹುದಾಗಿದೆ. ಇಂತಹ ಹೋರಾಟದ ರೂಪುರೇಷೆಗಳು ಹೇಗಿರಬೇಕು ಮತ್ತು ಯಾವ ಹಾದಿಯಲ್ಲಿ ಆ ಹೋರಾಟ ಸಾಗಬೇಕೆಂಬುದನ್ನು ಸಂಬಂದಿಸಿದ ವರ್ಗಗಳೇ ನಿರ್ದರಿಸಬೇಕಾಗಿದೆ.]]>

‍ಲೇಖಕರು G

September 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This