ಜಾನಕಿ ನಾನಲ್ಲ ಅಂತಾರೆ ಜೋಗಿ


ನಾನು ಆಗಷ್ಟೇ ಕನ್ನಡಪ್ರಭ ಸೇರಿಕೊಂಡಿದ್ದೆ. ಹಾಗಾಗಿ ‘ಹಾಯ್ ಬೆಂಗಳೂರ್’ ಪತ್ರಿಕೆಗೆ ಬರೆಯುತ್ತಿದ್ದ ‘ರವಿ ಕಾಣದ್ದು’ ಅಂಕಣ ನಿಲ್ಲಿಸಲೇಬೇಕಾಗಿತ್ತು. ಪತ್ರಿಕೆಗೆ ಬರೆಯದೇ ಕೂರುವುದೂ ನನ್ನಿಂದ ಸಾಧ್ಯವಿರಲಿಲ್ಲ.
ಅಂಥ ಸಂದಿಗ್ಧದಲ್ಲಿರುವಾಗ ರವಿ ಬೆಳಗೆರೆ ಬೇರೆ ಹೆಸರಲ್ಲಿ ಬರೆಯಲು ಶುರುಮಾಡಿ ಅಂದರು. ಏನಾಗುತ್ತೋ ಆಗಲಿ ಅಂದುಕೊಂಡು ನಾನೂ ಬರೆಯಲಾರಂಭಿಸಿದೆ. ಆರಂಭದ ಮೂರೋ ನಾಲ್ಕೋ ಬರಹಗಳು ಹೆಸರಿಲ್ಲದೇ ಪ್ರಕಟವಾದವು. ಆಮೇಲೆ ಅನಾಮಿಕೆಗೊಂದು ಹೆಸರು ಬೇಕು ಅನ್ನಿಸಿತು. ಆಗ ಹುಟ್ಟಿಕೊಂಡವಳು ಜಾನಕಿ.
ಜಾನಕಿ ಅಮ್ಮನಾ, ಮಗಳಾ, ಹಳೆಯ ಗೆಳತಿಯಾ, ಚಿಂತಾಮಣಿಯಲ್ಲಿ ಕಂಡ ಮುಖವಾ, ನಿಮ್ಮೊಳಗಿನ ಕನಸಾ ಎಂಬ ಪ್ರಶ್ನೆಗೆ ನನ್ನಲ್ಲಿ ಇವತ್ತಿಗೂ ಉತ್ತರ ಇಲ್ಲ. ಜಾನಕಿ ನನ್ನ ಪಾಲಿಗೆ ಒಂದು ಚೆಂದದ ಹೆಸರು. ಅಪ್ಪನ ಮಗಳು ಎಂಬ ಹೆಮ್ಮೆ ಮತ್ತು ಬಿಂಕವುಳ್ಳ ಹುಡುಗಿ. ಅಷ್ಟೇನೂ ಸುಂದರಿಯಲ್ಲದ, ಆದರೆ ತುಂಬ ಪ್ರೀತಿಸುವ, ಕಂದಾ ಎಂದು ಕರೆಯುವ, ಮುದ್ದಾಡಿ ರಮಿಸುವ, ಜಗಳವಾಡುವ, ಕಣ್ಣೀರಾಗುವ, ಕಂಬನಿ ತರಿಸುವ, ನೀವು ಮಾಡಿದ್ದನ್ನೆಲ್ಲ ಮೆಚ್ಚಿಕೊಳ್ಳುವ, ಮೆಚ್ಚಿಕೊಳ್ಳುತ್ತಾಳೆ ಎನ್ನುವ ಹೊತ್ತಿಗೆ ಚೆನ್ನಾಗಿಲ್ಲ ಅಂತ ನಿರಾಕರಿಸುವ, ಕಾಯುವ, ಮುನಿಸಿಕೊಳ್ಳುವ, ಇಲ್ಲಿ ಸಿಕ್ಕಾಪಟ್ಟೆ ಮಳೆ ಕಣೋ ಅಂತ ಫೋನ್ ಮಾಡಿ ಹೇಳಿ ಸಂಭ್ರಮ ಹೆಚ್ಚಿಸುವ ಗೆಳತಿಯೊಬ್ಬಳು ನಿಮಗಿದ್ದರೆ ಅವಳಿಗೆ ಜಾನಕಿ ಅಂತ ಹೆಸರಿಡಿ.
ಜಾನಕಿಯನ್ನು ಆಂಟಿ ಎಂದು ಕರೆದು ಸಂಭ್ರಮಿಸಿದ್ದಾರೆ. ಮುತ್ತೈದೆ ಎಂದು ಹರಸಿದ್ದಾರೆ. ಮಹಿಳಾದಿನದ ಕಾರ್ಯಕ್ರಮಗಳಿಗೆ ಆಹ್ವಾನಿಸಿ ನಿರಾಶರಾಗಿದ್ದಾರೆ. ‘ನೀವಾ’ ಅಂತ ಮೂತಿ ಓರೆಮಾಡಿಕೊಂಡು ಹೇಳಿದ್ದಾರೆ. ನೀವಾ ಅಂತ ಬೆರಗಾಗಿದ್ದಾರೆ.
ಜಾನಕಿ ನಾನಲ್ಲ

ನಾನು.

‍ಲೇಖಕರು avadhi

December 25, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

5 ಪ್ರತಿಕ್ರಿಯೆಗಳು

 1. bharath

  ‘ಹಾಯ್! ಬೆಂಗಳೂರ್’ ಪತ್ರಿಕೆಯಲ್ಲಿ ‘ಜಾನಕೀ ಕಾಲಂ’ ಇಲ್ಲ ಅಂದ್ರೆ ಊಟಕ್ಕೆ ಉಪ್ಪು ಇಲ್ಲದ ಹಾಗೆ. ಒಂದು crime tabloid ನಲ್ಲಿ ರವಿಯವರು ಸಾಹಿತ್ಯಕ್ಕೂ ಅದೆಷ್ಟು ಆದ್ಯತೆ ಕೊಡುತ್ತಿದ್ದಾರೆ . ‘ಇದು ಪ್ರತಿವಾರದ ಅಚ್ಚರಿ’ ಎಂದು ಬರುತ್ತಿರುವ ಈ ಪತ್ರಿಕೆಯ ನಿಜವಾದ ಪ್ರತಿವಾರದ ಅಚ್ಚರಿಯೆಂದರೆ ‘ಜಾನಕಿ ಕಾಲಂ’. ಪತ್ರಿಕೆಯ ‘ಖಾಸ್ ಬಾತ್’, ‘ಲವ್ ಲವಿಕೆ’ಯಷ್ಟೇ ಜನಪ್ರಿಯ ಈ ‘ಜಾನಕಿ’. ರವಿ ‘ಲವ್ ಲವಿಕೆ’ ಬರೆಯುವುದನ್ನು ತಪ್ಪಿಸಿದರು ಪರವಾಗಿಲ್ಲ ಆದರೆ ಆ ವಾರ ‘ಜಾನಕಿ ಕಾಲಂ’ ಬಂದಿಲ್ಲವೆಂದರೆ ಪತ್ರಿಕೆ ನೀರಸ ಅನಿಸತೊಡಗುತ್ತದೆ. ನಾವೆಲ್ಲಾ ಗೆಳೆಯರು ಪ್ರೀತಿ, ಗೌರವದಿಂದ ‘ಜಾನಕಿ ಮೇಡಂ’ ಅಂತ ಕರೆಯುತ್ತಿದ್ದೆವು. ಆದರೆ ನಮಗೆಲ್ಲ ಈ ‘ಜಾನಕಿ’ ಹುಡುಗಿ ಅಲ್ಲ ಅಂತ ಶುರುವಿನಿಂದಲೇ ಅನುಮಾನವಿತ್ತು. ಜಾನಕಿ-ಜೋಗಿ ಒಂದೇ ಅಂತ ಗೊತ್ತಾಗಲು ತುಂಬ ದಿನ ಹಿಡಿಯಲಿಲ್ಲ ಬಿಡಿ………

  ಪ್ರತಿಕ್ರಿಯೆ
 2. prakash hegde

  ಜೋಗಿ…
  ನಿಮ್ಮನ್ನು ಇಷ್ಟಪಡುವದು ನಿಮ್ಮ “ಜಾನಕಿ ಕಾಲಮ್” ಗಾಗಿ…
  ತುಂಬಾ ಸೊಗಸಾಗಿರುತ್ತದೆ.

  ಪ್ರತಿಕ್ರಿಯೆ
 3. ರಾಘವೇಂದ್ರ ಮಹಾಬಲೇಶ್ವರ

  ನಾನೂ ಜಾನಕಿ ಕಾಲಂ ಅಭಿಮಾನಿ.. ಕನ್ನಡ ಸಾಹಿತ್ಯದ ಕುರಿತು ದೊಡ್ಡ ದೊಡ್ಡ ಪುಸ್ತಕಗಳನ್ನು ಓದಲಾಗದಿದ್ದ ಸಮಯದಲ್ಲಿ ಜಾನಕಿ ಕಾಲಂ ಚಿಕ್ಕ ಬರಹದಲ್ಲಿಯೇ ಅನೇಕ ಸಂಗತಿಗಳನ್ನು ಹೇಳಿಬಿಡುತ್ತಿತ್ತು. ಹಾಯ್ ಬೆಂಗಳೂರಿನ ಒಟ್ಟಾರೆ ಬರಹದ ಶೈಲಿಗಿಂತ ಜಾನಕಿ ಕಾಲಂ ಶೈಲಿ ಭಿನ್ನವಾಗಿರುತ್ತಿತ್ತು, ಅದು ತರುವ ಭಾವವೇ ಭಿನ್ನವಾಗಿರುತ್ತಿತ್ತು, ಮಧುರವಾಗಿರುತ್ತಿತ್ತು..

  ಪ್ರತಿಕ್ರಿಯೆ
 4. NATRAJ.S

  It was with wonderment that I always read JANAK’s column in HI BANGALORE. My eagerness to know who JANAKI is had remained a dream till she herself sorry, himself disclosed this on AVADHI. Your write-ups are simply superb. kudos to JOGI and AVADHI.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: