ಜಿ ಎಸ್ ಬಿ ಅಗ್ನಿಹೋತ್ರಿ ಕೇಳ್ತಾರೆ…

voteearth
ಭೂಮಿಯ ಕಾವು ವಿಪರೀತ ಜಾಸ್ತಿಯಾಗುತ್ತಿದೆ. ಇದು ಭೌಗೋಳಿಕವಾಗಿ ಸಾಕಷ್ಟು ಸಮಸ್ಯೆಗಳನ್ನೂ ಹುಟ್ಟಿಹಾಕುತ್ತಿದೆ. ಪ್ರಕ್ರತಿಯ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ.
ಜಾಗ್ರತಿಗಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈಗ ಡಬ್ಲುಡಬ್ಲುಎಫ್ ಹೊಸದೊಂದು ಪ್ರಯತ್ನಕ್ಕೆ ಕೈಹಾಕಿದೆ. ನಾವೂ ಕೈಜೋಡಿಸೋಣ. ವಿಶ್ವದಾದ್ಯಂತ ನಡೆಯುತ್ತಿರುವ ಈ ಕಾರ್ಯಕ್ರಮ ವಿಶೇಷವಾಗಿದೆ.
ಏಕಕಾಲಕ್ಕೆ ವಿಶ್ವದೆಲ್ಲೆಡೆ ಬೆಳಕಿಗೆ ಒಂದು ಗಂಟೆ ಬ್ರೇಕ್ ನೀಡಿದರೆ ಹೇಗಿರತ್ತೆ?
ಅದೇ ಪ್ರಯತ್ನ ಇಲ್ಲಾಗುತ್ತಿದೆ. ಮಾರ್ಚ್ 28 ರಂದು ಸಂಜೆ 8:30ರಿಂದ ಒಂದು ಗಂಟೆ ಕಾಲ ವಿಶ್ವದೆಲ್ಲೆಡೆ ಲೈಟ್ ಸ್ವಿಚ್ ಆಫ್ ಮಾಡಲು ಸಾದ್ಯವೇ…?

‍ಲೇಖಕರು avadhi

March 4, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

4 ಪ್ರತಿಕ್ರಿಯೆಗಳು

 1. ಅಜಯ್

  ಪಾಪ, ಭಾರತದಲ್ಲಿ ಇಂತದ್ದೆಲ್ಲಾ ವರ್ಕೌಟ್ ಆಗಲ್ಲ ಅಂತ WWFಗು ಗೊತ್ತಿಲ್ಲ, ಅಗ್ನಿಹೋತ್ರಿಯವರಿಗೂ ಗೊತ್ತಿಲ್ಲ ಅನ್ನಿಸುತ್ತೆ. 🙂

  ಪ್ರತಿಕ್ರಿಯೆ
 2. neelanjala

  ನಮ್ಮನೆಲಿ ಅವತ್ತು ಕರೆಂಟ್ ಇದ್ರೆ ಖಂಡಿತ ಲೈಟ್ ಸ್ವಿಚ್ ಆಫ್ ಮಾಡುತ್ತೇನೆ. ಇದು ಇಂಡಿಯನ್ ಟೈಮ್ ಪ್ರಕಾರ 8.30 ಅಲ್ವಾ?

  ಪ್ರತಿಕ್ರಿಯೆ
 3. Ganadhalu srikanta

  ಇದು ಜೋಕ್ ಮಾಡುವ ಸಮಯವಲ್ಲ. ಹೀಗೆ ರೈತರು ಕೃಷಿಯನ್ನು ಹಗುರವಾಗಿ ತೆಗೆಉಕೊಂಡಿದ್ದಕ್ಕೆ ಇವತ್ತು ಅಕ್ಕಿ ಬೆಲೆ 35 ರೂಪಾಯಿ ದಾಟುತ್ತಿದೆ. ಐಷಾರಾಮಿ ಬದುಕಿಗಾಗಿ, ಅಭಿವೃದ್ಧಿಯ ಹೆಸರಲ್ಲಿ ಸಕಾ೵ರಿ ಇಲಾಖೆಗಳು ಮರಗಳನ್ನು ಧರೆಗುಳಿಸಿದ್ದೇ ಇವತ್ತು ಹವಾಮಾನ ಏರುಪೇರಿಗೆ ಕಾರಣವಾಗಿದೆ. ಇವತ್ತು ನಾವು ಯೋಚಿಸದೇ, ಇಂಥ ಪುಟ್ಟ ಪುಟ್ಟ ಕಾರ್ಯಗಳಿಗೆ ಕೈಜೋಡಿಸುವ ಪ್ರಯತ್ನ ಮಾಡದಿದ್ದರೆ ಮುಂದಿನ ದಿನಗಳು ನಿರೀಕ್ಷಿಸಲಾರದಷ್ಟು ಅಪಾಯತಂದೊಡ್ಡುತ್ತವೆ ಎಚ್ಚರ..!
  ಶ್ರೀಕಂಠ

  ಪ್ರತಿಕ್ರಿಯೆ
 4. jinke subbanna

  ಅದೇನ್ಮಹಾ, ನಮ್ಮ ಮೆಸ್ಕಾ೦, ಹಿ೦ದಿನ ಅವತಾರದಲ್ಲಿ ಕೆಇಬಿ (ಕರೆ೦ಟ್ ಇಲ್ಲ ಬಿಡಿ), ಗ್ರಾಮೀಣ ಪ್ರದೇಶಗಳಲ್ಲಿ ಬಹು ಕಾಳಜಿಯಿ೦ದ, ಒ೦ದು
  ಗ೦ಟೆ ಯಾಕೆ, ೩ ಗ೦ಟೆ ಬೇಕಿದ್ರೂ ಆಫ್ ಮಾಡ್ತಾರೆ!!. ಇದು ಯಾಕೋ ಆರಾಮ ಕುರ್ಚಿ ಪರಿಸರ ಪ್ರೇಮಿಗಳ ಮನವಿಯ೦ತೆ ತೋರುತ್ತಿದೆ,
  ಸ೦ಜೆ ೮-೩೦ ಒ೦ದೊ೦ದು ರಾಷ್ಟ್ರ, ಪ್ರದೇಶಗಳಲ್ಲಿ ಒ೦ದೊ೦ದು ಇರುವಾಗ ಇದು ವಿಶ್ವದೆಲ್ಲೆಡೆ ಏಕಕಾಲಕ್ಕೆ ಹೇಗಾಗುತ್ತದೆ ?
  ಇವೆಲ್ಲಾ ಪ್ರಚಾರಕ್ಕಷ್ಟೇ ಸೀಮಿತ ಅನ್ನುವ ಸಿನಿಕತನ ಕಾಡುತ್ತಿದೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: