ಜಿ ಪಿ ಬಸವರಾಜು ಕಾಲ೦ : ಧರ್ಮದ ಹೆಸರಿನಲ್ಲಿ ನಿತ್ಯಾನಂದದ ನರಕಗಳು

ಧರ್ಮದ ಹೆಸರಿನಲ್ಲಿ ನಿತ್ಯಾನಂದದ ನರಕಗಳು – ಜಿ.ಪಿ.ಬಸವರಾಜು ಬಿಡದಿಗೆ ಸಮೀಪದ ನಿತ್ಯಾನಂದ ಆಶ್ರಮದ ಬಗ್ಗೆ ಜನ ಸಿಟ್ಟಿಗೆದ್ದಿದ್ದಾರೆ. ಕೆಲವು ಸಂಘಟನೆಗಳೂ, ಒಬ್ಬಿಬ್ಬ ಮಠಾಧೀಶರೂ ಈ ಸಾರ್ವತ್ರಿಕ ಆಕ್ರೋಶದಲ್ಲಿ ಪಾಲ್ಗೊಂಡಿರುವುದು ವರದಿಯಾಗಿದೆ. ಸಾರ್ವಜನಿಕ ಪ್ರತಿಭಟನೆಯೇ ಸಾಂಕೇತಿಕ ರೂಪವನ್ನು ಪಡೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಹೀಗೆ ದೊಡ್ಡ ಪ್ರತಿಭಟನೆಯೊಂದು ವ್ಯಕ್ತವಾಗುತ್ತಿರುವುದು ಸಾರ್ವಜನಿಕಹಿತದ ದೃಷ್ಟಿಯಿಂದ ಒಳ್ಳೆಯದೇ. ಈ ಪ್ರತಿಭಟನೆಯ ಹಿಂದೆ ಕೇವಲ ಕೋಪವಿದೆಯೇ, ಅಥವಾ ವೈಚಾರಿಕ ತಿಳುವಳಿಕೆಯೂ ಸೇರಿದೆಯೇ? ನಿತ್ಯಾನಂದ ಆಶ್ರಮದಲ್ಲಿ ‘ಅಕ್ರಮ ಚಟುವಟಿಕೆ’ಗಳು ನಡೆಯುತ್ತಿರುವುದು ಕೋಪಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಧಾಮರ್ಿಕ ಕೇಂದ್ರದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುವುದು ಅಧರ್ಮ ಎಂಬುದು ಸಾಮಾನ್ಯ ತಿಳುವಳಿಕೆ. ಆದರೆ ನಮ್ಮ ರಾಷ್ಟ್ರದಲ್ಲಿರುವ ಬಹುಪಾಲು ಧಾಮರ್ಿಕ ಕೇಂದ್ರಗಳನ್ನು ಪರಿಶೀಲಿಸಿದರೆ ಅಲ್ಲೆಲ್ಲ ಇಂಥ ‘ಅಕ್ರಮ’ಗಳು ಸಾಮಾನ್ಯ. ಅಲ್ಲಿ ಧರ್ಮ ಎನ್ನುವುದು ಶುದ್ಧ ಧರ್ಮವಾಗಿ ಉಳಿದುಕೊಂಡಿಲ್ಲ. ರಾಜಕಾರಣ ಅದರೊಳಗೆ ಬೆರೆತಿದೆ. ಹಲವು ಭ್ರಷ್ಟ ಸಂಗತಿಗಳು ಧಾಮರ್ಿಕ ಕೇಂದ್ರಗಳನ್ನು ವಿರೂಪಗೊಳಿಸಿವೆ. ಇತ್ತೀಚಿನ ವರ್ಷಗಳಲ್ಲಂತೂ ಧಾಮರ್ಿಕ ಕ್ಷೇತ್ರಗಳು ಪಡೆದುಕೊಳ್ಳುತ್ತಿರುವ ಕುರೂಪಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೇ ಗಂಡಾಂತರಕಾರಿಯಾಗಿವೆ. ಕನರ್ಾಟಕವನ್ನೇ ಉದಾಹರಣೆಗೆ ತೆಗೆದುಕೊಂಡರೂ ಈ ಅಂಶ ಸ್ಪಷ್ಟವಾಗಿ ಕಾಣಿಸುತ್ತಿದೆ. ಅಪಾರವಾದ ಸಂಪತ್ತನ್ನು, ಇನ್ನೂ ನಿಖರವಾಗಿ ಹೇಳಬೇಕೆಂದರೆ ಭಾರೀ ಪ್ರಮಾಣದ ಕಪ್ಪು ಹಣವನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿರುವ ಆಶ್ರಮಗಳು ನಮ್ಮಲ್ಲಿ ಸಾಕಷ್ಟಿವೆ. ಮೇಲ್ನೋಟಕ್ಕೆ ಇಲ್ಲಿ ಜಪ, ತಪ, ಪೂಜೆ, ಯಾಗ, ಧ್ಯಾನ, ಯೋಗ, ಸಂಗೀತ ಇತ್ಯಾದಿ ಧಾಮರ್ಿಕ ಚಟುವಟಿಕೆಗಳು ನಡೆಯುತ್ತಿರುವಂತೆ ಕಾಣುತ್ತದೆ. ಆದರೆ ತೆರೆಯ ಹಿಂದೆ ಇಲ್ಲಿ ಎಲ್ಲ ರೀತಿಯ ಮುಕ್ತ ವ್ಯವಹಾರಗಳು ನಡೆಯುತ್ತವೆ; ಕಪ್ಪುಹಣ ನಿರಾತಂಕವಾಗಿ ಓಡಾಡುತ್ತದೆ. ಕಪ್ಪು ಹಣದ ಬಹುದೊಡ್ಡ ಟ್ರಜರಿಗಳೂ ಈ ಕೇಂದ್ರಗಳೇ. ರಾಜಕಾರಣಿಗಳೂ ಈ ವ್ಯವಹಾರಗಳಲ್ಲಿ ಭಾಗಿಯಾಗಿರುವುದರಿಂದ ಸಕರ್ಾರದಿಂದಲೂ ಇಂಥ ಕೇಂದ್ರಗಳಿಗೆ ಅಪಾಯವಿಲ್ಲ ಎಂಬ ನಂಬಿಕೆಯೂ ಬೆಳೆದಿದೆ. ಆಶ್ರಮಗಳಂತೆ ನಮ್ಮಲ್ಲಿರುವ ಬಹುಪಾಲು ಮಠಗಳು, ಧರ್ಮಸ್ಥಾನಗಳು ಬಗೆಬಗೆಯ ಗುಪ್ತ ಚಟುವಟಿಕೆಗಳ ಕೇಂದ್ರಗಳೇ ಆಗಿರುವುದು ಮತ್ತು ರಾಜಕೀಯದ ಜೊತೆ ಗುಪ್ತ ಸಖ್ಯವನ್ನು ಇರಿಸಿಕೊಂಡಿರುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ವಿದ್ಯಮಾನವೇ. ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾದ ಕೆಲಸಗಳನ್ನೇ ಕೈಗೆತ್ತಿಕೊಂಡು, ರಾಷ್ಟ್ರದ ಪ್ರಗತಿಗಾಗಿ ದುಡಿಯುತ್ತಿರುವಂತೆ ತೋರಿಸಿಕೊಳ್ಳುವುದು ಇಂಥ ಕೇಂದ್ರಗಳ ಮುಖವಾಡ ಮಾತ್ರ. ಇವೇ ಕೇಂದ್ರಗಳು ಶಿಕ್ಷಣ, ಆಸ್ಪತ್ರೆ, ಅಬಲಾಶ್ರಮ, ವೃದ್ಧಾಶ್ರಮ ಮುಂತಾದ ಸಾರ್ವಜನಿಕ ಸೇವೆಯ ಕಾರ್ಯಗಳನ್ನು ಕೈಗೆತ್ತಿಕೊಂಡು ‘ಯಶಸ್ವಿ’ಯಾಗಿ ನಡೆಸುತ್ತಿರುವಂತೆ ಕಂಡರೂ, ಇಲ್ಲಿ ವಿದ್ಯೆ, ಆರೋಗ್ಯ ಎಲ್ಲವೂ ವ್ಯಾಪಾರವಾಗಿರುವುದು ಬಹುದೊಡ್ಡ ವ್ಯಂಗ್ಯ. ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳ ಅವಧಿಯಲ್ಲಿ ವಿದ್ಯೆಯನ್ನು ಜನರಿಗೆ ಮುಟ್ಟಿಸುವ ಮಹತ್ವದ ಕಾರ್ಯದಲ್ಲಿ ಅನೇಕ ಧಾಮರ್ಿಕ ಕೇಂದ್ರಗಳು ಪಾತ್ರವಹಿಸಿದ್ದು ನಿಜ. ಆದರೆ ನಂತರದ ವರ್ಷಗಳಲ್ಲಿ ವಿದ್ಯೆ ಎನ್ನುವುದೊಂದು ವ್ಯಾಪಾರವಾದದ್ದು, ಈ ವ್ಯಾಪಾರದಲ್ಲಿಯೇ ಬಹುಪಾಲು ಮಠಗಳು, ಧರ್ಮಸ್ಥಾನಗಳು ಮುಳುಗಿ ಹೋಗಿರುವುದು ಕಟುವಾಸ್ತವ. ವ್ಯಾಪಾರವೆಂದ ಕೂಡಲೇ ಕಪ್ಪು ಹಣದ ಓಡಾಟ, ಹಲ ಬಗೆಯ ಗುಪ್ತ ಚಟುವಟಿಕೆಗಳು, ರಾಜಕೀಯ, ಅಧಿಕಾರ, ಹಲವು ಹುನ್ನಾರಗಳು ಸೇರಿ ಧರ್ಮ ಅಲ್ಲಿಂದ ಪಲಾಯನ ಮಾಡಿರುತ್ತದೆ. ಇತ್ತೀಚಿನ ವರ್ಷಗಳಲ್ಲಂತೂ ರಾಜಕಾರಣಿಗಳ ಮತ್ತು ಧರ್ಮಕೇಂದ್ರಗಳ ಸಖ್ಯ ಇನ್ನೂ ನಿಕಟವಾಗಿದೆ. ರಾಜಕಾರಣಿಗಳಿಗೆ ಆಸರೆ ನೀಡಿ ತಮ್ಮ ಪ್ರಭಾವವನ್ನು ್ನ ಹೆಚ್ಚಿಸಿಕೊಳ್ಳಲು ಧರ್ಮಕೇಂದ್ರಗಳ ನಡುವೆ ಪೈಪೋಟಿಯೇ ನಡೆದಿದೆ. ತಮ್ಮ ಕಪ್ಪು ಹಣವನ್ನು ಇಡುವುದಕ್ಕೆ ಮಾತ್ರವಲ್ಲ, ಜಾತಿಗಳನ್ನು ಸಂಘಟಿಸುವುದಕ್ಕೆ, ಆ ಮೂಲಕ ಜಾತಿ ಜನರ ಬೆಂಬಲ ಪಡೆಯುವುದಕ್ಕೂ ಇಂಥ ಮಠಗಳ, ಧರ್ಮಸ್ಥಾನಗಳ, ಆಶ್ರಮಗಳ ಅಗತ್ಯ ರಾಜಕಾರಣಿಗಳಿಗೆ ಅನಿವಾರ್ಯವೆನಿಸುವ ಸನ್ನಿವೇಶ ಉಂಟಾಗಿದೆ. ಅನೇಕ ಮಠಗಳು ನೇರವಾಗಿ ರಾಜಕಾರಣಿಗಳನ್ನು, ಆ ಮೂಲಕ ಸಕರ್ಾರಗಳನ್ನು ನಿಯಂತ್ರಿಸುವಷ್ಟು ಪ್ರಭಾವವನ್ನೂ ಬೆಳೆಸಿಕೊಂಡಿವೆ. ಸಕರ್ಾರಗಳನ್ನು ನಿಯಂತ್ರಿಸುವುದೆಂದರೆ ಪರೋಕ್ಷವಾಗಿ ಅಧಿಕಾರ ನಡೆಸುವುದು ಅಥವಾ ಅಧಿಕಾರದಲ್ಲಿ ಪಾಲು ಪಡೆಯುವುದು. ‘ಕಾವಿ’ಗಿರುವ ಈ ಶಕ್ತಿಯ ಅರಿವಾಗುತ್ತಿದ್ದಂತೆಯೇ ಎಲ್ಲ ಜಾತಿಗಳೂ ತಮ್ಮದೇ ಆದ ಮಠಗಳನ್ನು, ಮಠಕ್ಕೊಬ್ಬ ಸ್ವಾಮಿಯನ್ನು ಸೃಷ್ಟಿಸಿಕೊಳ್ಳುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ. ಮಠಗಳೆಂದರೆ ಅಕ್ರಮ ಆಸ್ತಿಗಳು, ಭೂ ಮಾಫಿಯಾಗಳು, ರಿಯಲ್ ಎಸ್ಟೇಟ್ ಧಂದೆಗಳು, ಲೈಂಗಿಕ ಚಟುವಟಿಕೆಗಳು. ಇದಕ್ಕೆ ಅಪವಾದವೆನ್ನುವ ಮಠಗಳನ್ನು, ಧರ್ಮಸಂಸ್ಥೆಗಳನ್ನು ಜನರೂ ಮಾನ್ಯಮಾಡುವುದಿಲ್ಲ. ಅಪರಾಧಗಳ, ಭ್ರಷ್ಟಾಚಾರಗಳ ಆರೋಪಗಳನ್ನು ಹೊತ್ತು ಪ್ರಮುಖ ರಾಜಕಾರಣಿಯೊಬ್ಬ ಜೈಲು ಸೇರಿದರೆ ಕೆಲವು ಮಠಾಧೀಶರು ಅಂಥವರಿಗೆ ಸಾಂತ್ವನ ಹೇಳಲು ಜೈಲುಗಳಿಗೂ ಹೋಗಿ ಬರುವ ದೃಶ್ಯಗಳನ್ನು ನಾವಿಂದು ನೋಡುತ್ತಿದ್ದೇವೆ. ಇದು ಯಾವ ಧಾಮರ್ಿಕ ಕಾರ್ಯವೋ! ಜನ ಈ ಬಗ್ಗೆ ಚಕಾರ ಎತ್ತುವುದಿಲ್ಲ. ರಾಜಕಾರಣಿಯೊಬ್ಬ ತನ್ನ ಜಾತಿಯನ್ನು, ಹಣವನ್ನು, ಪ್ರಭಾವವನ್ನು, ಅಧಿಕಾರವನ್ನು ಬಳಸಿ ಇಂಥ ಮಠಗಳನ್ನು ಪೋಷಿಸುವುದು, ಈ ಮಠಗಳು ರಾಜಕಾರಣಿಗಳಿಗೆ ಬೆಂಬಲವಾಗಿ ನಿಲ್ಲುವುದು ಸಹಜಕ್ರಿಯೆಯಾಗಿದೆ. ಜ್ಞಾನದ ಮಾತಿರಲಿ, ಜನರ ಅಜ್ಞಾನವನ್ನು, ಮೌಢ್ಯವನ್ನು ಹೆಚ್ಚಿಸುವಲ್ಲಿಯೂ ಈ ಧಾಮರ್ಿಕ ಕೇಂದ್ರಗಳ ಕೊಡುಗೆ ಅಪಾರ. ಮೌಢ್ಯಗಳನ್ನು ತೀವ್ರವಾಗಿ ಖಂಡಿಸಿದ ಮತ್ತು ಪುರೋಹಿತಶಾಹಿಯ ಒಳಸಂಚುಗಳನ್ನು ಸ್ಪಷ್ಟವಾಗಿ ಜನರಿಗೆ ತಿಳಿಸಿದ ಮಹಾಕವಿ ಕುವೆಂಪು ಅವರನ್ನೇ ನುಂಗಿಹಾಕಲು ನೋಡುವ ಮಠಗಳೂ ನಮ್ಮಲ್ಲಿರುವುದು ದೊಡ್ಡ ದುರಂತವೇ. ಇವತ್ತಿಗೂ ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ನಡೆಯುತ್ತಿರುವ ಬಹುಪಾಲು ಚಟುವಟಿಕಗಳು, ಪೂಜೆ, ಯಜ್ಞ, ಯಾಗಗಳು, ಜನರ ಮೌಢ್ಯವನ್ನು ಹೆಚ್ಚಿಸುವುದಕ್ಕೆ ಪುರೋಹಿತಶಾಹಿ ರೂಪಿಸಿದ ಕುತಂತ್ರಗಳಂತೆಯೇ ಕಾಣುತ್ತವೆ. ವಸ್ತುಸ್ಥಿತಿ ಹೀಗಿರುವಾಗ ನಮ್ಮ ಸಂವಿಧಾನ ಹೇಳಿರುವ ವೈಜ್ಞಾನಿಕ ಮತ್ತು ವೈಚಾರಿಕ ನೋಟಗಳನ್ನು ಸಮಾಜದಲ್ಲಿ ರೂಪಿಸುವುದು ಹೇಗೆ? ಯಾರಿಗಾಗಿ? ಮೌಢ್ಯಗಳು ಮನೆಮಾಡಿರುವಾಗ ಜನರನ್ನು ಹಲವು ರೀತಿಯಲ್ಲಿ ಶೋಷಿಸುವುದು ಸಾಧ್ಯ. ಅದು ಲೈಂಗಿಕ ಶೋಷಣೆಯಾಗಿರಲಿ, ಮಾನಸಿಕ ಶೋಷಣೆಯಾಗಿರಲಿ, ಸಂಪತ್ತಿನ ಶೋಷಣೆಯಾಗಿರಲಿ ಸುಲಭವಾಗಿ ನಡೆದುಹೋಗುತ್ತದೆ. ನಮ್ಮ ಜನ ನಿಜಕ್ಕೂ ಇದೆಲ್ಲವನ್ನು ಗ್ರಹಿಸಲು ಸಾಧ್ಯವಾಗುವ ವೈಚಾರಿಕ ಚಿಂತನೆಯನ್ನು ಬೆಳೆಸಿಕೊಂಡರೆ ಅವರ ಕೋಪ ಭುಗಿಲೇಳುತ್ತದೆ. ಆಗ ಕನರ್ಾಟಕದಲ್ಲಿರು ಬಹುಪಾಲು ಮಠಗಳ, ಧರ್ಮಸ್ಥಾನಗಳ ಮುಂದೆ ನಿತ್ಯವೂ ಪ್ರತಿಭಟನೆ ನಡೆಯುತ್ತದೆ. ಸದ್ಯಕ್ಕಂತೂ ಇದು ಕನಸಿನ ಮಾತೇ. ಯಾವುದಾದರೂ ಮಠದಲ್ಲಿ ಆಗೊಮ್ಮೆ ಈಗೊಮ್ಮೆ ಧಾಂದಲೆಯಾದರೆ ಅದು ಒಳಗಿನವರಿಂದಲೇ ಆಗಿರುತ್ತದೆ. ಅಲ್ಲಿನ ಸಂಪತ್ತು ಮತ್ತು ರಹಸ್ಯಗಳ ರಕ್ಷಣೆಗಾಗಿ; ಇಲ್ಲವೇ ಅಧಿಕಾರದ ಹಂಚಿಕೆಗಾಗಿ. ಇಲ್ಲವಾದರೆ ಎಲವ್ಲೂ ಶಾಂತಿ, ಶಾಂತಿಃ. ಜನ ಕೂಡಾ ಭಕ್ತಿಯ ಹೆಸರಿನಲ್ಲಿ ತಮ್ಮ ಮೌಢ್ಯವನ್ನು ಮೆರೆಸುತ್ತ, ಅಕ್ರಮ ಚಟುವಟಿಕೆಗಳನ್ನು ಸಹಿಸುತ್ತ, ಬೆಂಬಲಿಸುತ್ತ ‘ಸುಖ’ವಾಗಿರುತ್ತಾರೆ. ನಮ್ಮ ಕಾನೂನುಗಳು ಎಲ್ಲರಿಗೂ ಸಮಾನವಾಗಿವೆ ಎಂಬುದು ಕೇವಲ ತತ್ವ. ಇಂಥ ಅಕ್ರಮಗಳನ್ನು ತಡೆಯುವ ಧೈರ್ಯವನ್ನು ಯಾವ ಸಕರ್ಾರಗಳೂ ತೋರುವುದಿಲ್ಲ. ಅಂಥ ಧೈರ್ಯಕ್ಕೆ ಮುಂದಾಗುವ ಸಕರ್ಾರಗಳು ಬಹುಬೇಗ ಬಿದ್ದುಹೋಗುತ್ತವೆ. ನಮ್ಮ ಸಂವಿಧಾನ ಹೇಳುವ ಮತಧರ್ಮ ನಿರಪೇಕ್ಷತೆಯಾಗಲಿ, ವೈಚಾರಿಕ, ವೈಜ್ಞಾನಿಕ ನೋಟಗಳಾಗಲೀ ಎಲ್ಲಿವೆ? ಈ ಮೌಲ್ಯಗಳನ್ನು ಜನರಲ್ಲಿ ಬಿತ್ತುವುದು ಹೇಗೆ? ಬೆಳೆಸುವುದು ಹೇಗೆ? ಶಿಕ್ಷಣ ಎನ್ನುವುದು ನಮಗೆ ಅಕ್ಷರಗಳನ್ನು ಕಲಿಸುತ್ತದೆ; ಆ ಮೂಲಕ ವಿವಿಧ ಹುದ್ದೆಗಳಿಗೆ ನಮ್ಮನ್ನು ತಯಾರು ಮಾಡುತ್ತದೆ; ಜ್ಞಾನದ ನಿಜವಾದ ಬಾಗಿಲನ್ನು ಎಷ್ಟು ತೆರೆಯುತ್ತದೆ? ಇಂಥ ಹೊತ್ತಿನಲ್ಲಿ ಜನ ಯಾವುದೋ ಒಂದು ಆಶ್ರಮದ ವಿರುದ್ಧ ಧ್ವನಿ ಎತ್ತುವುದರ ಹಿಂದೆ ಏನಿರಬಹುದು?  ]]>

‍ಲೇಖಕರು G

June 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

೧ ಪ್ರತಿಕ್ರಿಯೆ

  1. nempedevaraj

    nityanandana ragale vipariita mattakke karnatakada suddimadhyamagalalli noodidaga vicharada korate eddu kanuttittu. adre basavarajuravaru nithyanandana muulaka dharmada hosa hosa avantaragalannuu, dharmada deseyinda deesha anubhavisuttiruva bowddika daridryavnnuu marmikavagi bidisiddare.nithyananandanante baari baari svamiglu hanada hinde biddu dharmavannu adharmagolisuva kriyeyee tamma aa jnma sidda hakku ennuttiruvara virudda janaandoolanavagabekide. namma snghatanegalu haguu madhyama mitraruglu nithyanandanannu bayaligeleda ummassinalli bangarada kopparigeyalli dharma bhoodhane maduva matadiisharannu summane bittare aneeka anumanaglige dari madikoduvudu khandita.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: