ಜಿ ಪಿ ಬಸವರಾಜು ಕಾಲ೦ : ಧರ್ಮನಿರಪೇಕ್ಷ ಎಂಬ ಮರೀಚಿಕೆ

ಧರ್ಮನಿರಪೇಕ್ಷ ಎಂಬ ಮರೀಚಿಕೆ

-ಜಿ.ಪಿ.ಬಸವರಾಜು

ನಮ್ಮ ಸಂವಿಧಾನದ ಬಹುಮುಖ್ಯ ತತ್ವಗಳಲ್ಲಿ ಧರ್ಮನಿರಪೇಕ್ಷತೆ ಪ್ರಧಾನವಾದದ್ದು. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಆ ಪಕ್ಷದ ತತ್ವ ಮತ್ತು ಪ್ರಣಾಳಿಕೆಗಳು ಏನೇ ಇದ್ದರೂ ಅದು ಅಧಿಕಾರವನ್ನು ನಡೆಸಬೇಕಾಗಿರುವುದು ಸಂವಿಧಾನದ ಬಹುಮುಖ್ಯ ತತ್ವಗಳ ನಿದರ್ೇಶನದ ಅನ್ವಯವೇ. ನಮಗೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದುಹೋಗಿದ್ದರೂ, ವಿವಿಧ ರಾಜಕೀಯ ಪಕ್ಷಗಳು ಅಧಿಕಾರವನ್ನು ನಡೆಸಿದ್ದರೂ, ಸಂವಿಧಾನದ ಚೌಕಟ್ಟು ಎನ್ನುವುದು ಇನ್ನೂ ಮಸುಕು ಮಸುಕಾಗಿರುವಂತೆಯೇ ಕಾಣುತ್ತದೆ. ಧರ್ಮನಿರಪೇಕ್ಷತೆ ಎನ್ನುವ ತತ್ವವಂತೂ ತೀರ ಅವಗಣನೆಗೆ ಗುರಿಯಾಗಿದೆ. ಧರ್ಮನಿರಪೇಕ್ಷತೆ ಅಥವಾ ಜಾತ್ಯತೀತತೆ ಎನ್ನುವ ತತ್ವ ನಮ್ಮ ಸಂವಿಧಾನದ ಬಹುಮುಖ್ಯ ತತ್ವವಾಗಲು ಕಾರಣ ನಮ್ಮ ಸಮಾಜದ ಬಹುಮುಖಿ ಸಂಸ್ಕೃತಿಯೇ ಕಾರಣ. ಇಲ್ಲಿ ಅನೇಕ ಧರ್ಮಗಳು, ಜಾತಿ, ಉಪಜಾತಿಗಳು, ನಂಬಿಕೆ ಆಚರಣೆಗಳು ಇರುವುದು ಹಾಗೆಯೇ ಬಹುಭಾಷೆ, ಸಂಸ್ಕೃತಿ ಉಪಸಂಸ್ಕೃತಿಗಳು ಇರುವುದರಿಂದಲೇ ನಮ್ಮಲ್ಲಿ ಯಾವುದೇ ಒಂದು ಧರ್ಮವನ್ನು ಓಲೈಸುವುದು, ಮಾನ್ಯಮಾಡುವುದು ಅಸಾಧ್ಯದ ಮಾತು. ಎಲ್ಲರೂ ಎಲ್ಲ ಧರ್ಮಗಳೂ ಇಲ್ಲಿ ಸಮಾನ. ಎಲ್ಲ ಜಾತಿಗಳೂ, ಎಲ್ಲ ವ್ಯಕ್ತಿಗಳೂ ಸಮಾನ. ಯಾವುದೇ ಪಕ್ಷದ ಸಕರ್ಾರ ಅಧಿಕಾರವನ್ನು ನಡೆಸಿದರೂ, ಇದನ್ನು ಗೌರವಿಸಬೇಕು. ಇದು ತಾತ್ವಿಕ ವಿಚಾರ. ಆದರೆ ವಾಸ್ತವದ ಕಠೋರತೆ ಹೇಗಿದೆ? ಮೊನ್ನೆ ಭಾರತೀಯ ಜನತಾ ಪಕ್ಷ ಕನರ್ಾಟಕದಲ್ಲಿ ಹೊಸ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿತು. ಮೇಲು ನೋಟಕ್ಕೆ ಇದು ಗುಪ್ತಮತದಾನ ಪದ್ಧತಿಯ ಮೂಲಕ ನಡೆಯಿತು. ಆದರೆ ಒಳಗಿನ ವಿಚಾರಗಳೇ ಬೇರೆ ಇದ್ದವು. ಸದಾನಂದ ಗೌಡರ ಹಿಂದೆ ಬಿ.ಎಸ್.ಯಡ್ಯೂರಪ್ಪನವರಿದ್ದರು. ಯಡ್ಯೂರಪ್ಪನವರ ಹಿಂದೆ ಜಾತಿಗಳ ಲೆಕ್ಕಾಚಾರವಿತ್ತು; ಹಣದ ಪ್ರಭಾವವಿತ್ತು. ಆ ಪಕ್ಷದ ವರಿಷ್ಠ ಮಂಡಳಿಗೂ ಇದು ತಿಳಿಯದ ಸಂಗತಿಯೇನೂ ಆಗಿರಲಿಲ್ಲ. ಆದರೆ ಅದನ್ನೆಲ್ಲ ಧಿಕ್ಕರಿಸುವ ಶಕ್ತಿ ವರಿಷ್ಠ ಮಂಡಳಿಗೂ ಇದ್ದಂತಿರಲಿಲ್ಲ. ನಾಯಕನ ಆಯ್ಕೆಗೆ ಮುನ್ನ ಯಡ್ಯೂರಪ್ಪನವರು ಭೇಟಿನೀಡಿದ್ದು ತುಮಕೂರಿನ ಸಿದ್ಧಗಂಗಾ ಮಠಕ್ಕೆ. ಈ ಮಠಕ್ಕೇ ಯಡ್ಯೂರಪ್ಪನವರು ಯಾಕೆ ಭೇಟಿ ನೀಡಿದರು. ಅವರ ಭೇಟಿಯ ನಂತರ ಇದೇ ಮಠಕ್ಕೆ ಭೇಟಿನೀಡಿದವರು, ಇನ್ನೊಂದು ಬಣದ ನೇತಾರ, ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿದ್ದ ಅಭ್ಯಥರ್ಿ ಜಗದೀಶ ಶೆಟ್ಟರ. ಮಠಧೀಶರ ಆಶೀವರ್ಾದ ಎಂದರೆ ಅದು ಜಾತಿಯ ಬೆಂಬಲ. ಹೀಗೆ ಜಾತಿಯೇ ಪ್ರಮುಖ ಅಸ್ತ್ರವಾಗಿ ಉಳಿದೆಲ್ಲ ಸಂಗತಿಗಳು ಗೌಣವಾದದ್ದು ಪ್ರಜಾಪ್ರಭುತ್ವದ ಅಣಕದಂತೆ ಕಾಣಿಸಿದವು. ಇದು ಕನರ್ಾಟಕದ ಮಟ್ಟಿಗೆ ಮಾತ್ರ ನಿಜವೇ? ಅಥವಾ ಭಾರತೀಯ ಜನತಾ ಪಕ್ಷಕ್ಕೆ ಮಾತ್ರ ಅನ್ವಯಿಸುವ ಮಾತುಗಳೇ? ಇಡೀ ಭಾರತದಲ್ಲಿ ಎಲ್ಲ ಪಕ್ಷಗಳೂ ಈ ಜಾತಿಯ ಏಣಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಹತ್ತುತ್ತ ಅಧಿಕಾರ ಸೂತ್ರವನ್ನು ಹಿಡಿಯಲು ನೋಡುತ್ತಿರುವುದು ಸತ್ಯ. ಚುನಾವಣೆಯಲ್ಲಿ ಜಾತಿಯ ಲೆಕ್ಕಾಚಾರಗಳು, ಅಭ್ಯಥರ್ಿಯ ಆಯ್ಕೆಯಲ್ಲಿ ಜಾತಿಯ ಪರಿಗಣನೆ, ಅದೂ ಸಾಲದೆಂಬಂತೆ ಶಾಸಕಾಂಗ ಪಕ್ಷದ ನಾಯಕ, ಪಕ್ಷದ ಪದಾಧಿಕಾರಿಗಳ ಆಯ್ಕೆ, ಸಚಿವ ಪದವಿಗಳ ಹಂಚಿಕೆ, ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ, ಸಕರ್ಾರದ ಕೃಪೆಯಲ್ಲಿ ದಕ್ಕುವ ಅನೇಕ ಅಧಿಕಾರಗಳು, ಪದವಿಗಳು, ಲಾಭದಾಯಕ ಹುದ್ದೆಗಳು ಹೀಗೆ ಎಲ್ಲದರಲ್ಲೂ ಜಾತಿಯ ಭೂತಕುಣಿತವೇ ಪ್ರಮುಖ ಪಾತ್ರವಹಿಸುತ್ತದೆ. ಜಾತಿಗಳು, ಜಾತಿಕೇಂದ್ರಗಳು ಬಲವಾದಂತೆಲ್ಲ ಸಾಮಾಜಿಕ ನ್ಯಾಯ ಎಂಬುದು ಕನಸಿನ ಕುದುರೆಯಾಗುತ್ತದೆ. ಹಿಂದುಳಿದವರು, ಅಲ್ಪಸಂಖ್ಯಾತರು, ಅವಕಾಶ ವಂಚಿತರು ಹೆಸರಿಗಷ್ಟೆ ಉಳಿದು ಪ್ರಜಾಪ್ರಭುತ್ವ ಎನ್ನುವುದು ಅರ್ಥ ಕಳೆದುಕೊಳ್ಳುತ್ತದೆ. ಜಾತಿ ಪ್ರಧಾನವಾಗಿ ಉಳಿದೆಲ್ಲ ಅರ್ಹತೆಗಳು ಗೌಣವಾದಾಗ ಏನಾಗುತ್ತದೆ ಎಂಬುದನ್ನು ತಿಳಿಯಲು ನಾವು ಮತ್ತೆ ಕನರ್ಾಟಕಕ್ಕೇ ಹೊರಳಬೇಕು. ಯಡ್ಯೂರಪ್ಪನವರ ಮೂರು ವರ್ಷದ ಅಧಿಕಾರಾವಧಿಯಲ್ಲಿ ಈ ಜಾತಿ ಯಾವ ಪಾತ್ರವನ್ನು ವಹಿಸಿತು? ಒಂದು ಜಾತಿಯ ಕೆಲವು ಮಠಾಧೀಶರು ಮುಖ್ಯಮಂತ್ರಿಗಳಿಗೆ ನಿದರ್ೇಶನ ಕೊಡುವಂಥ, ಅಧಿಕಾರವನ್ನು ನಿಯಂತ್ರಿಸುವಂಥ ರೀತಿಯಲ್ಲಿ ವತರ್ಿಸಿದರು. ಅನೇಕ ಮುಖ್ಯ ಸ್ಥಾನಗಳ ನೇಮಕಾತಿಯಲ್ಲಿಯೂ, ಪ್ರಮುಖ ಅಧಿಕಾರಿಗಳ ವಗರ್ಾವಣೆಯಲ್ಲಿಯೂ ಈ ಮಠಾಧೀಶರ ಪಾತ್ರವಿತ್ತೆಂಬುದು ಸತ್ಯ. ಜಾತಿಯ ಶಾಸಕರನ್ನು ನಿಯಂತ್ರಿಸುವ ಕೆಲಸವನ್ನೂ ಧರ್ಮದ ಹೆಸರಿನ ಜಾತಿ ಕೇಂದ್ರಗಳು ಮಾಡಿದವೆಂಬುದನ್ನು ಈ ಆಡಳಿತಾವಧಿಯ ಇತಿಹಾಸ ಹೇಳುತ್ತದೆ. ಇದರ ಇನ್ನೊಂದು ಮುಖವಾಗಿ ಮುಖ್ಯಮಂತ್ರಿಯಾಗಿದ್ದ ಯಡ್ಯೂರಪ್ಪನವರು ಮನಬಂದಂತೆ ಸಾರ್ವಜನಿಕ ಹಣವನ್ನು ಮಠಗಳಿಗೆ, ಜಾತಿ ಕೇಂದ್ರಗಳಿಗೆ ಬೇಕಾಬಿಟ್ಟಿಯಾಗಿ, ಕೋಟಿ ಕೋಟಿಗಳಲ್ಲಿ ಹಂಚಿದ್ದು ಯಾವುದರ ಸಂಕೇತ? ಜಾತ್ಯತೀತ ತತ್ವವನ್ನು ಒಪ್ಪಿಕೊಂಡ ಪ್ರಜಾಪ್ರಭುತ್ವದಲ್ಲಿ ಜಾತಿಗಳು ಕಳೆಗುಂದುತ್ತಾ ಹೋಗಿ ಎಲ್ಲರಿಗೂ ಸಮಾನ ಅವಕಾಶಗಳು ಸಿಕ್ಕುವಂತಾಗಬೇಕು. ಆದರೆ ಭಾರತದ ಸಂದರ್ಭದಲ್ಲಿ ಇದು ವ್ಯತಿರಿಕ್ತ ಬೆಳವಣಿಗೆಯಾಗಿರುವುದು ಆತಂಕಕಾರಿಯಾಗಿದೆ. ಇದು ಹೀಗೆಯೇ ಮುಂದುವರಿದರೆ ನಮ್ಮ ಪ್ರಜಾಪ್ರಭುತ್ವದ ಕನಸುಗಳೆಲ್ಲ ನುಚ್ಚುನೂರಾಗಲು ಬಹಳ ಕಾಲ ಬೇಕಾಗಿಲ್ಲ. ಒಂದು ನಿದರ್ಿಷ್ಟ ಧರ್ಮಕ್ಕೆ ಅಥವಾ ನಿದರ್ಿಷ್ಟ ಜಾತಿಗಳಿಗೆ ರಾಜಕೀಯ ಪಕ್ಷವೊಂದು ಅಂಟಿಕೊಂಡು ಅದನ್ನೇ ನಂಬಿ ಸಕರ್ಾರವನ್ನು ನಡೆಸುವ ಪರಿಸ್ಥಿತಿ ನಿಮರ್ಾಣವಾದರೆ ಅನಾಹುತಗಳೇನಾಗಬಹುದು ಎಂಬುದನ್ನು ಬಿಜೆಪಿ ಸಕರ್ಾರವಿರುವ ಕನರ್ಾಟಕವೇ ತೋರಿಸಿಕೊಡುತ್ತಿದೆ. ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸಬೇಕೆಂಬ ಗುಪ್ತ ಕಾರ್ಯಸೂಚಿ ನಿಧಾನಕ್ಕೆ ಪ್ರಕಟವಾದದ್ದು, ಸ್ವಾಯತ್ತ ಅಕಾಡೆಮಿಯಾದ ಉದರ್ು ಅಕಾಡೆಮಿಯನ್ನು ಅಲ್ಪಸಂಖ್ಯಾತರ ಇಲಾಖೆಗೆ ಸೇರಿಸುವ ಪ್ರಸ್ತಾಪವನ್ನು ಮಾಡಿರುವುದು, ರೈತರ ವಿರೋಧದ ನಡುವೆಯೂ, 200 ಕೋಟಿ ರೂಪಾಯಿಯ ಸಾವಯವ ಕೃಷಿ ಆಯೋಗ ರಚನೆಯಾದದ್ದು ಇತ್ಯಾದಿ ಅನೇಕ ಕಾರ್ಯಕ್ರಮಗಳು ಯಾವ ಹಿನ್ನೆಲೆಯಲ್ಲಿ? ಯಾವ ಜಾತ್ಯತೀತ ತತ್ವದ ಆಧಾರದಲ್ಲಿ? ಇದು ಇಲ್ಲಿಗೇ ಕೊನೆಯಾಗುವುದಿಲ್ಲ. ಇನ್ನೆಲ್ಲಿಗೆ ವಿಸ್ತರಿಸುತ್ತದೆ ಎಂಬುದನ್ನು ಈಗಲೇ ಹೇಳುವಂತಿಲ್ಲ. ಜಾತಿ, ಧರ್ಮಕ್ಕೆ ಅಂಟಿಕೊಂಡ ಶಕ್ತಿಗಳ ಕಬಂಧ ಬಾಹುಗಳ ಉದ್ದ ಇಷ್ಟೇ ಎಂದು ಹೇಳುವುದು ಕಷ್ಟ. ಯಡ್ಯೂರಪ್ಪನವರ ಆಡಳಿತಾವಧಿಯಲ್ಲಿ ಇನ್ನೊಂದು ದುಷ್ಟ ಬೆಳವಣಿಗೆಯೂ ಕಣ್ಣುಕುಕ್ಕುತ್ತದೆ. ಜನತೆಯ ಸಂಕಷ್ಟಗಳ ಪರಿಶೀಲನೆಗೆ ರಾಜ್ಯಾದ್ಯಂತ ಪ್ರವಾಸಗಳನ್ನು ಮಾಡಬೇಕಾಗಿದ್ದ ಮುಖ್ಯಮಂತ್ರಿ ಎಲ್ಲೆಲ್ಲಿ ಸುತ್ತಿದರು? ಅವರ ಸುತ್ತಾಟದ ಪೂರ್ಣ ಚಿತ್ರವನ್ನು ಒಮ್ಮೆ ಪರಿಶೀಲಿಸಿದರೆ ಅವರು ಮಠಗಳಿಗೆ, ದೇವಾಲಯಗಳಿಗೆ, ಧಾಮರ್ಿಕ ಕೇಂದ್ರಗಳಿಗೆ ನಡೆಸಿದ ಸುತ್ತಾಟವೇ ಹೆಚ್ಚು. ಜ್ಯೋತಿಷ್ಯವನ್ನು ಈ ಮುಖ್ಯಮಂತ್ರಿ ಎಷ್ಟು ಗಾಢವಾಗಿ ನಂಬಿಕೊಂಡಿದ್ದರೆಂದರೆ ತಮ್ಮ ಹೆಸರನ್ನೇ ಬದಲಿಸಿಕೊಳ್ಳುವ ಮಟ್ಟಕ್ಕೂ ಈ ನಂಬಿಕೆ ವಿಸ್ತರಿಸಿತ್ತು. ರಾಜೀನಾಮೆ ಕೊಡುವುದಕ್ಕೂ ಆಷಾಢ ಮಾಸ, ರಾಹುಕಾಲಗಳನ್ನೂ ಈ ಮುಖ್ಯಮಂತ್ರಿ ನೋಡುತ್ತಿದ್ದರು ಎಂದರೆ ನಮ್ಮ ಪ್ರಜಾಪ್ರಭುತ್ವ ಯಾವ ದಿಕ್ಕಿನತ್ತ ಚಲಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ. ಭೂಕಬಳಿಕೆ, ಅಕ್ರಮ ಗಣಿಗಾರಿಕೆ, ಮೇರೆ ಇಲ್ಲದ ಭ್ರಷ್ಟಾಚಾರ ಇವು ಯಾವುವನ್ನೂ ಪ್ರಸ್ತಾಪಿಸದೆ ಕೇವಲ ಜಾತಿ ಮತ್ತು ಧರ್ಮಗಳನ್ನು ಮಾತ್ರ ಮಾನದಂಡವಾಗಿ ಮಾಡಿಕೊಂಡು ನಮ್ಮ ಪ್ರಜಾಪ್ರಭುತ್ವದ ವಿಶ್ಲೇಷಣೆ ಮಾಡಿದರೆ ಅಪರಾಧಿ ಸ್ಥಾನದಲ್ಲಿ ನಿಲ್ಲುವ ಅರ್ಹತೆಯನ್ನು ನಮ್ಮ ಬಹುಪಾಲು ರಾಜಕೀಯ ಪಕ್ಷಗಳು ಪಡೆದುಕೊಂಡಿರುವುದು ಎಂಥ ದೊಡ್ಡ ದುರಂತ! ಆದರೆ ಈ ಬಗೆಗಿನ ಎಚ್ಚರ ನಮ್ಮಲ್ಲಿ ಎಷ್ಟು ಜನ ಮತದಾರರಿಗಿದೆ?  ]]>

‍ಲೇಖಕರು G

July 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This