ಜಿ ಪಿ ಬಸವರಾಜು ಕಾಲ೦ : ಪೆರಿಯಾರ್ ನಾಡಿನಲ್ಲಿ

ಪೆರಿಯಾರ್ ನಾಡಿನಲ್ಲಿ

ಜಿ.ಪಿ.ಬಸವರಾಜು

ವಿಶಾಲವಾದ ಮತ್ತು ಬೃಹತ್ತಾದ ದೇವಾಲಯಗಳನ್ನು ನೋಡಬೇಕೆಂದರೆ ತಮಿಳುನಾಡಿಗೇ ಹೋಗಬೇಕು. ಮದುರೆಯ ಮೀನಾಕ್ಷಿ ದೇವಾಲಯವನ್ನು ಹೊಕ್ಕರೆ ಹೊರಬರುವುದಕ್ಕೆ ದಾರಿಯೇ ತಿಳಿಯುವುದಿಲ್ಲ. ಹೊರಬರಲು ಅನೇಕ ದಾರಿಗಳು, ಹೆಬ್ಬಾಗಿಲುಗಳಿದ್ದರೂ ಒಳ ಹೊಕ್ಕವರು ಗಲಿಬಿಲಿಗೊಳ್ಳಬೇಕು; ಅಷ್ಟು ವಿಸ್ತಾರಕ್ಕೆ ಚಾಚಿಕೊಂಡಿರುವ ಈ ದೇವಾಲಯವನ್ನು ಸಂಪೂರ್ಣವಾಗಿ ಸುತ್ತಿಬರಲು ಕಾಲುಗಳು ಗಟ್ಟಿಯಾಗಿರಬೇಕಾಗುತ್ತದೆ. ತಂಜಾವೂರಿನ ಬೃಹದ್ದೇಶ್ವರ ದೇವಾಲಯವೂ ಇದೇ ಮಾದರಿಯದು. ಇಲ್ಲಿನ ನಂದಿ, ಈಶ್ವರಲಿಂಗಗಳ ಆಕಾರ ಬಹಳ ದೊಡ್ಡದೇ. ಕಾವೇರಿ ನದಿ ದಂಡೆಯಲ್ಲಿರುವ ಶ್ರೀರಂಗಂನ ದೇವಾಲಯವಂತೂ ನಡೆದಂತೆಲ್ಲ ಬೆಳೆಯುತ್ತಲೇ ಹೋಗುತ್ತದೆ. ಒಂದೊಂದು ಹೆಬ್ಬಾಗಿಲನ್ನು ದಾಟಿದಾಗಲೂ ಮತ್ತೊಂದು ಹೆಬ್ಬಾಗಿಲು ಎದುರಾಗುತ್ತಲೇ ಇರುತ್ತದೆ. ಇಲ್ಲಿನ ಗರುಡನ ಆಕಾರವಂತೂ ಬೃಹದಾಕರವೇ. ಇಂಥ ಬೃಹತ್ ದೇವಾಲಯಗಳನ್ನು ಈ ತಮಿಳರು ಹೇಗೆ ಕಟ್ಟಿದರು? ಈ ಮಹಾನ್ ಬಂಡೆಗಳನ್ನು ಸೀಳಿ, ಅವುಗಳಲ್ಲಿ ಕಲಾಕೃತಿಗಳನ್ನು ಮೂಡಿಸಿ, ಈ ಭಾರದ ಶಿಲೆಗಳನ್ನು ಹೇಗೆ ಎತ್ತಿನಿಲ್ಲಿಸಿದರು? ತಮಿಳರ ಪರಾಕ್ರಮವನ್ನು ನೆನೆದರೆ ಸೋಜಿಗವಾಗುತ್ತದೆ. ಕಪ್ಪಾದ, ಗಟ್ಟಿಮುಟ್ಟಾದ, ಪೈಲ್ವಾನರ ಮೈಕಟ್ಟನ್ನು ಪಡೆದ ತಮಿಳರು ಇತಿಹಾಸದಲ್ಲಿ ಮಾತ್ರವಲ್ಲ, ವರ್ತಮಾನದಲ್ಲಿಯೂ ಪರಾಕ್ರಮಿಗಳೇ. ಇವತ್ತಿಗೂ ಮೈಬಗ್ಗಿಸಿ ದುಡಿಯುವ, ಎಂಥ ಕಷ್ಟದ ಕೆಲಸಕ್ಕೂ ಹಿಂಜರಿಯದ ಈ ತಮಿಳರ ಪರಿಶ್ರಮ ಕೇವಲ ಬೃಹತ್ ದೇವಾಲಯಗಳಿಗೆ, ಮಹಾನ್ ಶಿಲೆಗಳಿಗೆ ಸೀಮಿತವಾಗಿಲ್ಲ; ವಿಸ್ತಾರಕ್ಕೆ ಚಾಚಿಕೊಂಡಿರುವ, ದಟ್ಟ ಜನ ಸಂದಣಿಯ ತಮಿಳುನಾಡಿನ ಘನತೆಯನ್ನು, ಗೌರವವನ್ನು ಎತ್ತಿ ಹಿಡಿಯುವುದಕ್ಕೂ ವಿನಿಯೋಗವಾಗಿದೆ. ಎಂಥ ಕೆಲಸವಾದರೂ ಸರಿ, ಅತ್ಯಂತ ಶ್ರದ್ಧೆಯಿಂದ, ಪರಿಶ್ರಮದಿಂದ ಹಗಲು ರಾತ್ರಿಗಳನ್ನು ಮರೆತು ಮಾಡಬಲ್ಲ ಈ ತಮಿಳರು ಅಖಂಡ ಆತ್ಮವಿಶ್ವಾಸಕ್ಕೆ ರೂಪಕವಾಗಿ ನಿಲ್ಲುವಂಥವರು. ತಮಿಳರು ಇಡೀ ತಮಿಳುನಾಡನ್ನೇ ತಮ್ಮ ಪರಿಶ್ರಮದಿಂದ, ಬೆವರಿನಿಂದ ಕಟ್ಟಿ ನಿಲ್ಲಿಸಿದ್ದಾರೆ. ಇವತ್ತು ತಮಿಳುನಾಡಿನಲ್ಲಿ ಆತ್ಮವಿಶ್ವಾಸ ತಲೆ ಎತ್ತಿ ನಿಂತಿದ್ದರೆ ಅದರ ಹಿಂದೆ ತಮಿಳರ ಎಂಥ ಶ್ರಮಕ್ಕೂ ಜಗ್ಗದ ಛಲ, ದುಡಿಮೆ, ಪರಾಕ್ರಮಗಳು ಇವೆ. ರಾಜ್ಯದ ಉದ್ದಗಲಕ್ಕೂ ಬಹುಪಾಲು ಒಳಚರಂಡಿ ವ್ಯವಸ್ಥೆಯನ್ನೇ ಕಾಣದ ತಮಿಳುನಾಡು ನಮ್ಮ ಕನರ್ಾಟಕಕ್ಕೆ ಹೋಲಿಸಿದರೆ ಅಷ್ಟೊಂದು ನಿರ್ಮಲ ರಾಜ್ಯವಲ್ಲ. ಎಲ್ಲೆಲ್ಲೂ ಕೊಳೆ, ಗಲೀಜುಗಳದೆ ಪಾರುಪತ್ಯ. ಆದರೆ ತಮಿಳರು ಈ ನೈರ್ಮಲ್ಯಕ್ಕೆ ಅಷ್ಟೊಂದು ಗಮನಕೊಡುವುದಿಲ್ಲ. ಅದನ್ನವರು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಆದರೆ ಇವರ ಜಮೀನುಗಳನ್ನು ನೋಡಿದರೆ ಅವು ಸ್ವಚ್ಛವಾಗಿ, ಅಚ್ಚುಕಟ್ಟಾಗಿ ಹಸಿರ ಸಿರಿಯಿಂದ ನಳನಳಿಸುತ್ತವೆ; ಚೈತನ್ಯವನ್ನು ಚಿಮ್ಮಿಸುತ್ತವೆ. ತಮಿಳರ ದುಡಿಮೆಯ ಶ್ರದ್ಧೆ ಮತ್ತು ನಿಷ್ಕಲ್ಮಷತೆ ಅಲ್ಲಿ ಕಾಣುತವೆ. ಭೂಮಿ ಮತ್ತು ನೀರಿನ ಮೇಲೆ ತಮಿಳರಿಗಿರುವ ಅಪಾರ ಪ್ರೀತಿಯನ್ನು ನೋಡಬೇಕೆಂದರೆ ಕಾವೇರಿ ಮೈತುಂಬಿ ಹರಿಯುವ ತಂಜಾವೂರು ಮತ್ತು ತಿರುಚಿನಾಪಳ್ಳಿ ಜಿಲ್ಲೆಗಳನ್ನು ನೋಡಬೇಕು. ಇಲ್ಲಿ ಹಸಿರ ಗದ್ದೆಗಳು ಗರಿಬಿಚ್ಚಿ ನತರ್ಿಸುತ್ತವೆ. ನೀರು, ಭೂಮಿ, ದಣಿವರಿಯದ ದುಡಿಮೆ ಒಂದರೊಳಗೊಂದು ಬೆರೆತು ಪಯಿರು ಇಲ್ಲಿ ಝಗಮಗಿಸುತ್ತದೆ. ಕಾವೇರಿಯ ಬಗ್ಗೆ ನಾವು ಉತ್ಸಾಹದಿಂದ ಮಾತನಾಡಿದರೂ, ಕಾವೇರಿ ನೀರಿನ ಪೂರ್ಣ ಬಳಕೆಯನ್ನು ಮಾಡಿಕೊಳ್ಳದ ಹೊಣೆಗೇಡಿತನ ನಮ್ಮಲ್ಲಿ ಕಾಣಿಸುತ್ತದೆ. ಆದರೆ ತಮಿಳರು ಇದೇ ನೀರನ್ನು ಎಷ್ಟೊಂದು ಅರ್ಥಪೂರ್ಣವಾಗಿ ಬಳಸಿಕೊಂಡಿದ್ದಾರೆ. ಕಣ್ಣು ಹಾಯ್ದಷ್ಟೂ ಹಸಿರು ಚಿಮ್ಮಿಸುವ ಭತ್ತದ ಗದ್ದೆಗಳೇ. ಕನರ್ಾಟಕದಿಂದ ಹೋದವರಿಗೆ ತಮಿಳುನಾಡಿನ ಬಸ್ಸುಗಳಲ್ಲಿ ಪಯಣಿಸುವುದು ಅಂಥ ಸಂತೋಷದ ಸಂಗತಿಯಲ್ಲ. ನಮ್ಮ ಬಸ್ಸುಗಳಿಗೆ ಹೋಲಿಸಿದರೆ ಅಲ್ಲಿನ ಬಸ್ಸುಗಳು ಕಳಪೆಯೇ. ಆದರೆ ಪ್ರಯಾಣ ದರ ಎಲ್ಲರ ಕೈಗೂ ನಿಲುಕುತ್ತದೆ. ಶ್ರೀ ಸಾಮಾನ್ಯ ಇಲ್ಲಿ ಸುಖವಾಗಿಯೇ ಪ್ರಯಾಣಿಸುತ್ತಾನೆ. ಈ ರಾಜ್ಯದ ರಸ್ತೆಗಳೂ ಉತ್ತಮ ಸ್ಥಿತಿಯಲ್ಲಿಯೇ ಇವೆ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ತಮಿಳರಿಗೆ ಬೇರೆಯಲ್ಲ. ಆದರೂ ಅವರ ಪ್ರಯಾಣ ದರಗಳೇಕೆ ಅಗ್ಗ? ಇದನ್ನು ನಮ್ಮ ರಾಜ್ಯ ಸಕರ್ಾರ ಕೇಳಿಕೊಳ್ಳಬೇಕು. ಸಾಮಾನ್ಯ ಮನುಷ್ಯ ನೆಮ್ಮದಿಯಿಂದ ಬದುಕುವುದಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳೂ ತಮಿಳುನಾಡಿನಲ್ಲಿ ಇವೆ. ಹೊಟೆಲುಗಳ ಊಟ, ತಿನಿಸು ಮತ್ತು ದರಗಳೂ ಅಷ್ಟೆ. ಭತ್ತವನ್ನು ಸಮೃದ್ಧವಾಗಿ ಬೆಳೆಯುವ ಈ ರಾಜ್ಯದಲ್ಲಿ ಊಟ ಪುಷ್ಕಳವಾಗಿರುತ್ತದೆ; ರುಚಿರುಚಿಯಾಗಿರುತ್ತದೆ. ಈ ರುಚಿಯ ದೇಸೀ ಸಂಸ್ಕೃತಿಯನ್ನು ತಮಿಳುನಾಡು ಇನ್ನೂ ಉಳಿಸಿಕೊಂಡಿದೆ. ಇಡ್ಲಿ, ವಡೆ, ಸಾಂಬಾರು, ಎರಡು ಮೂರು ಬಗೆಯ ಚಟ್ನಿಗಳು, ಊಟವಾದರೆ ಹಪ್ಪಳ, ಉಪ್ಪಿನಕಾಯಿ, ಸಾಂಬಾರು, ರಸಂ, ಮೂರ್ನಾಲ್ಕು ಬಗೆಯ ಪಲ್ಯಗಳು, ಬಾಳೆ ಎಲೆಯಲ್ಲಿ ಬಡಿಸುವ ಪದ್ಧತಿ, ಚಪಾತಿ ಅಥವಾ ಪೂರಿಯನ್ನು ಕೊಡುವುದಿಲ್ಲ ಎಂಬುದನ್ನು ಬಿಟ್ಟರೆ ಎಂಥ ದೊಡ್ಡಾಳೂ ಸಂತೃಪ್ತಿಯಿಂದ ಉಂಡು ಸುಖಿಸುವ ಪ್ರಮಾಣದಲ್ಲಿ ಅನ್ನವನ್ನು ಬಡಿಸುವ ಪದ್ಧತಿ. ಇನ್ನೊಂದು ವಿಶೇಷವೆಂದರೆ ತಮಿಳುನಾಡಿನಲ್ಲಿ ಚಮಚವನ್ನು ಕೊಡುವ ಪದ್ಧತಿ ಇಲ್ಲ. ಚಮಚದ ಕೃತಕತೆಗಿಂತ ಕೈಯ ಸಹಜತೆಯಲ್ಲಿಯೇ ಅವರಿಗೆ ವಿಶ್ವಾಸ. ತಮಿಳರಲ್ಲಿ ಆತ್ಮಗೌರವವನ್ನು ಮೂಡಿಸಿದ ಪೆರಿಯಾರ್ ತೀರಿಹೋಗಿ ನಾಲ್ಕು ದಶಕಗಳು ಕಳೆದುಹೋಗಿವೆ. ಆದರೆ ಪೆರಿಯಾರ್ ಸತ್ವ ಇಲ್ಲಿನ್ನೂ ತೀರಿಲ್ಲ; ಅದು ವೃದ್ಧಿಸುತ್ತಲೇ ಇದೆ. ಪ್ರಾದೇಶಿಕ ಪಕ್ಷಗಳು ಮಾತ್ರ ಇಲ್ಲಿ ವಿಜೃಂಭಿಸುತ್ತ, ರಾಷ್ಟ್ರೀಯ ಪಕ್ಷಗಳು ಕಳಾಹೀನವಾಗಿರುವ ರಾಜಕೀಯ ರಂಗವನ್ನು ನೋಡಿದರೆ ಇದು ತಿಳಿಯುತ್ತದೆ. ಈ ಪಕ್ಷಗಳು ಮೆರೆಯುತ್ತಿರುವ ರೀತಿ ಜನಹಿತಕ್ಕೆ ಪೂರಕವಾಗಿವೆಯೇ ಎಂಬ ಪ್ರಶ್ನೆ ಬೇರೆ. ಆದರೆ ತಮಿಳರು ಪ್ರಾದೇಶಿಕ ಪಕ್ಷಗಳನ್ನೇ ಮಾನ್ಯ ಮಾಡುತ್ತಿದ್ದಾರೆಂಬುದು ಗಮನಾರ್ಹ ಸಂಗತಿ. ತಮಿಳರ ಈ ಆತ್ಮಗೌರವ ಭಾಷೆ, ಸಾಹಿತ್ಯ, ಸಂಸ್ಕೃತಿಗಳಲ್ಲೂ ಕಾಣಿಸಿಕೊಳ್ಳುತ್ತದೆ. ಪ್ರತಿಯೊಂದು ಬಸ್ಸಿನಲ್ಲಿಯೂ ತಿರುವಳ್ಳುವರ್ ಅವರ ಚಿತ್ರವಿರುತ್ತದೆ; ತಿರುಕ್ಕುರುಳ್ನ ಒಂದೆರಡು ಸಾಲುಗಳಿರುತ್ತವೆ. ಭಾಷೆಯ ವಿಚಾರದಲ್ಲಿಯೂ ಹಾಗೆಯೇ. ತಮಿಳನ್ನು ಬಿಟ್ಟು ಅವರು ಇನ್ನೊಂದು ಭಾಷೆಯನ್ನು ತಮ್ಮ ರಾಜ್ಯದಲ್ಲಿ ಸಹಿಸಲಿಲ್ಲ. ಈ ಕಾರಣಕ್ಕಾಗಿಯೇ ಇವತ್ತು ಅನ್ಯ ರಾಜ್ಯದವರು ತಮಿಳುನಾಡಿನಲ್ಲಿ ಸಂಚರಿಸುವುದು ಸುಲಭದ ಮಾತಲ್ಲ. ಹಿಂದಿ, ಉದರ್ು, ಇಂಗ್ಲಿಷ್, ತೆಲುಗು, ಕನ್ನಡ ಹೀಗೆ ಅನ್ಯ ಭಾಷಿಗರು ಇಲ್ಲಿ ವ್ಯವಹರಿಸುವುದು ಕಷ್ಟ. ತಮಿಳರಿಗೆ ಈ ಯಾವ ಭಾಷೆಗಳೂ ಬರುವುದಿಲ್ಲ. ಸಂಪರ್ಕಕ್ಕಾಗಿಯೂ ಇವರು ಯಾವ ಭಾಷೆಯನ್ನೂ ಇಟ್ಟುಕೊಂಡಿಲ್ಲ. ಕನರ್ಾಟಕದಲ್ಲಾದರೆ ವ್ಯವಹಾರಕ್ಕೆ ಅನೇಕ ಭಾಷೆಗಳಿವೆ. ಕೊಂಕಣಿ, ತುಳು, ಮರಾಠಿ, ತೆಲುಗು, ತಮಿಳು, ಮಲಯಾಳ, ಹಿಂದಿ, ಉದರ್ು, ಇಂಗ್ಲಿಷ್ ಹೀಗೆ ಯಾವ ಭಾಷೆಯಲ್ಲಿಯೂ ನಮ್ಮ ರಾಜ್ಯದಲ್ಲಿ ವ್ಯವಹಾರ ಸಾಧ್ಯ. ಆದರೆ ನಾವು ಕನ್ನಡವನ್ನೇ ಉಳಿಸಿಕೊಳ್ಳುತ್ತಿಲ್ಲ ಎಂಬ ಕೊರಗು ಇದ್ದೇ ಇದೆ. ನಮ್ಮ ಭಾಷಾಭಿಮಾನ ಪ್ರಶ್ನಾರ್ಹವಾಗಿಯೇ ಇದೆ. ಆದರೆ ತಮಿಳರ ಭಾಷಾಭಿಮಾನವನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಆ ಭಾಷೆಯನ್ನೂ ಅವರು ಮುಕ್ಕಾಗದಂತೆ ಇಟ್ಟುಕೊಂಡಿದ್ದಾರೆ. ಆ ಭಾಷೆಯ ಬನಿ, ಸೊಗಸು, ಲಯ ವಿನ್ಯಾಸ, ಅಚ್ಚ ತಮಿಳು ಪದಸಂಪತ್ತು ಎಲ್ಲವೂ ಉಳಿದುಕೊಂಡಿವೆ. ಅದು ಅವರ ಹೆಮ್ಮೆ. ಸಂಸ್ಕೃತಿಯ ವಿಚಾರದಲ್ಲಿಯೂ ಅವರ ಹೆಮ್ಮೆ ಕುಗ್ಗಿಲ್ಲ. ಪೆರಿಯಾರರು ಮತ್ತು ಅವರ ಹೋರಾಟದ ಫಲವಾಗಿ ಇವತ್ತು ತಮಿಳುನಾಡಿನಲ್ಲಿ ಕೀಳರಿಮೆಯೇ ಇಲ್ಲ. ಕೆಳ ಅಂತಸ್ತಿನ ಮತ್ತು ಕೆಳ ಜಾತಿ ಸ್ತರದ ಮನುಷ್ಯನೂ ಆತ್ಮಗೌರವವನ್ನು ಬಿಟ್ಟುಕೊಡದೆ ತಲೆಎತ್ತಿ ನಡೆಯುವ ಧೀರತೆಯನ್ನು ತೋರುತ್ತಾನೆ. ಆದರೆ ಪೆರಿಯಾರರ ವೈಚಾರಿಕತೆ ಮಾತ್ರ ಈ ನಾಡಿನಲ್ಲಿ ಇನ್ನೂ ಬೇರೂರಬೇಕಾಗಿದೆ. ದೇವಾಲಯಗಳು, ಪೂಜೆಗಳು, ಯಜ್ಞಯಾಗಾದಿಗಳು, ಮಡಿ-ಮೈಲಿಗೆಗಳು, ತಾಯಿತ-ಜನಿವಾರಗಳು, ಧಾಮರ್ಿಕ ಆಚರಣೆಗಳು, ಜನರಿಂದ ದೂರವಾಗದ ಮೌಢ್ಯ ಈ ಎಲ್ಲ ವಿಚಾರಗಳಲ್ಲಿ ತಮಿಳುನಾಡು ಭಿನ್ನವಾಗಿ ನಿಲ್ಲುವುದಿಲ್ಲ. ಅದು ಭಾರತದ ಅನೇಕ ರಾಜ್ಯಗಳಂತೆ ಒಂದು ರಾಜ್ಯ.  ]]>

‍ಲೇಖಕರು G

June 13, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

4 ಪ್ರತಿಕ್ರಿಯೆಗಳು

 1. ರಾವ್

  ತಮಿಳರನ್ನು ಹಾಡಿ ಹೊಗಳುವ ಭರದಲ್ಲಿ, ರಾಮಸ್ವಾಮಿ ನಾಯಕರ್ (ನಿಮ್ಮ ಪೆರಿಯಾರ್), ಅಪ್ಪಟ ಕನ್ನಡಿಗರು ಎಂದು ಹೇಳೋದನ್ನೆ ಮರೆತು ಬಿಟ್ಟಿರಲ್ಲಾ ಸ್ವಾಮಿ. ಅವರು ತಮಿಳು ಒಂದು ಅನಾಗರೀಕ ಭಾಷೆ ಮತ್ತು ತಮಿಳರು ಅನಾಗರೀಕರು ಎಂದೂ ಕೂಡ ಹೇಳಿದ್ದರು.
  http://en.wikipedia.org/wiki/Periyar_E._V._Ramasamy_and_Tamil_grammar
  -ರಾವ್

  ಪ್ರತಿಕ್ರಿಯೆ
 2. GURURAJ

  GOOD AND VERY RARE ARTICLE FROM G P SIR,BUT TODAY’S PEOPLE OF TAMILNADU,ESPECIALLY ABOUT YOUNGER GENERATION,NEEDS MORE INSIGHT IN THE ARTICLE. PLEASE TRY TO CONTINUE ON THE SAME SUBJECT IN THE FUTURE POSTS. HOPE YOU WILL DO.

  ಪ್ರತಿಕ್ರಿಯೆ
 3. D.RAVI VARMA

  sir namaskaara, ii naadu kanda obba appata chintaka, maha manavataavaadi periyaar. durantavendare avara chintane, avara ola nota vannu naavu arthisikolladiddu. iiga nadeyuttiruva ella dharmika jagalagalu,anaitika vyavaharagalu, ella prasnegaligu avara vaadadalli uttaravittu .
  D.RAVI VARMA HOSAPETE

  ಪ್ರತಿಕ್ರಿಯೆ
 4. ಎಚ್. ಸುಂದರ ರಾವ್

  ನಾನೊಮ್ಮೆ ಶಿವಕಾಶಿಗೆ ಹೋಗಿದ್ದೆ. ರಾತ್ರಿ ಒಂದು ಹೋಟೆಲಿನಲ್ಲಿ ತಂಗಿ, ಮಾರನೆಯ ಬೆಳಗ್ಗೆ ತಿಂಡಿಗೆಂದು ಒಂದು ಹೋಟೆಲಿಗೆ ಹೋದೆ. ಬಾಳೆ ಎಲೆ ಕೊಟ್ಟು ಅದರ ಮೇಲೆ ಇಡ್ಲಿ ಸಾಂಬಾರು ಬಡಿಸಿದರು. ಸುಮ್ಮನೆ ಗಮನಿಸುತ್ತಿದ್ದೆ. ತಿಂಡಿ ತಿಂದು ಮುಗಿಸಿದವರು ತಮ್ಮ ಎಲೆಯನ್ನು ತಾವೇ ಎತ್ತಿ ಅದಕ್ಕಾಗಿ ಇಟ್ಟ ಜಾಗದಲ್ಲಿ ಹಾಕುತ್ತಿದ್ದರು. ನಾನೂ ಹಾಗೆಯೇ ಮಾಡಬೇಕಾಯಿತು, ಮಾಡಿದೆ. ಈ ಪದ್ಧತಿ ನನಗೆ ನಿಜವಾಗಿ ಖುಷಿಯಾಯಿತು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: