ಜೀವನ ಅಂದ್ರ ಕೆಂಪು ಪೋಸ್ಟ್ ಡಬ್ಬಿ ಇದ್ದಾಂಗ..

ಡೋರ್ ನಂ 142
ಬಹುರೂಪಿ
ಹೀಗೇ ಪೇಪರ್ ತಿರುವಿ ಹಾಕುತ್ತಾ ಕೂತಿದ್ದೆ. ಯಾವುದೋ ಜಾಹೀರಾತು ಕೊನೆಯಲ್ಲಿ ಒಕ್ಕಣೆ. ನಿಮ್ಮ ಅಜರ್ಿಗಳನ್ನು ‘ಸ್ನೇಲ್ ಮೇಲ್ನಲ್ಲಿ ಬೇಡ, ಈ ಮೇಲ್ನಲ್ಲಿ ಕಳಿಸಿ’. ಅರ್ಥ ಇಷ್ಟೆ, ಬಸವನಹುಳು ವೇಗದಲ್ಲಿ ಬರುವ ಪೋಸ್ಟ್ ಮೂಲಕ ಬೇಡ. ಮಿಂಚಿನಂತೆ ಬಳಿ ಬರುವ ಈ ಮೇಲ್ ಬಳಸಿ.
ಒಂದು ಕ್ಷಣ ಮಾತೇ ಹೊರಡಲಿಲ್ಲ. ಯಾಕಂದ್ರೆ ಪೋಸ್ಟ್ ಇಲ್ಲದ ಕಾಲವನ್ನು ಊಹಿಸಿಕೊಳ್ಳಲೂ ನನ್ನ ಮನಸ್ಸು ನಿರಾಕರಿಸುತ್ತಿತ್ತು. ನಾನೂ ಬದಲಾದ ಕಾಲದಲ್ಲಿ ಈ-ಮೇಲ್ ಬಳಸುತ್ತಿರುವವನೇ. ಲೆಕ್ಕ ಹಾಕಿದರೆ ಬೇರೆಯವರಿಗಿಂತ ಒಂದು ಕೈ ಜೋರಾಗಿಯೇ ಈ-ಮೇಲ್ಗೆ ಒಗ್ಗಿಹೋಗಿದ್ದೇನೆ. ಆದರೆ… ಆದರೆ.. ಆ ಅಂಚೆಯಣ್ಣನ ಕೈಯಿಂದ ನೇರವಾಗಿ ಬರುವ ಪೋಸ್ಟ್ನ ಥ್ರಿಲ್ ನನ್ನಿಂದ ದೂರವಾಗಿಲ್ಲ.
ಪೋಸ್ಟ್ ಅನ್ನೋದು ಯಾಕೆ ನನ್ನ ಎದೆಯೊಳಕ್ಕೆ ಇಳಿದುಹೋಗಿದೆಯೋ ಅದು ಮುಂದೆ ಬದುಕುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ನನಗೆ ಮಾತ್ರ ಪೋಸ್ಟ್ ಎಂಬುದು ನನ್ನ ಸಮೃದ್ಧ ಬಾಲ್ಯ ಹಾಗೂ ಮಿಂಚುಂಡೆಗಳ ಯೌವನ.
ಎರಡನೇ ಕ್ಲಾಸಿರಬಹುದೇನೋ, ಸ್ಕೂಲ್ನಲ್ಲಿ ಎಲ್ಲಾರೂ ಮನೆಯಿಂದ ನಾಕಾಣೆ ತನ್ನಿ, ಫಿಲಂಗೆ ಕರಕೊಂಡು ಹೋಗ್ತೀವಿ ಅಂದ್ರು. ನಾನೂ ಕಾಡಿಬೇಡಿ, ಸ್ಟ್ರೈಕ್ ಕೂತು ನಮ್ಮಪ್ಪನಿಂದ ನಾಕಾಣೆ ಸಂಪಾದಿಸಿದೆ. ಫಿಲಂ ಯಾವುದು ಏನೂ ಗೊತ್ತಿರಲಿಲ್ಲ. ಸಾಲಾಗಿ ನಡಕೊಂಡು ಥಿಯೇಟರ್ ಮುಟ್ಟಿದ್ವಿ. ಸಿನಿಮಾ ಹೆಸರು ‘ಮೀನಾಳ ಕಾಗದ’. ಇಬ್ರು ತುಂಬಾ ಫ್ರೆಂಡ್ಸ್ ಇರ್ತಾರೆ. ಆಮೇಲೆ ಅಪ್ಪ ಅಮ್ಮನಿಗೆ ಟ್ರಾನ್ಸ್ಫರ್ ಆಗುತ್ತೆ, ದೂರದೂರಿಗೆ ಹೋಗ್ತಾರೆ. ಪುಟ್ಟ ಹುಡುಗರಿಗೆ ಗೆಳೆತನ ದೂರಾ ಆಗುತ್ತಲ್ಲ ಅಂತ ಕಣ್ಣೀರು. ಒಂದು ದಿನ ಪೋಸ್ಟ್ಮ್ಯಾನ್ ಸೈಕಲ್ ತುಳಿದುಕೊಂಡು ಬಂದು ಆ ಹುಡುಗನ ಕೈಗೆ ಒಂದು ಕಾಗದ ಕೊಡ್ತಾನೆ. ಅರೆ ಅದು ‘ಮೀನಾಳ ಕಾಗದ’. ಆ ಹುಡುಗನಿಗೆ ಆಕಾಶವೇ ಸಿಕ್ತೇನೋ ಅನ್ನೋಷ್ಟು ಖುಷಿ ಆಗುತ್ತೆ. ಕಾಗದ ಕೈಲಿ ಹಿಡಕೊಂಡು ಆತ ಇದೇ ಜಗತ್ತು ತನ್ನ ತೆಕ್ಕಗೆ ಸಿಕ್ತೇನೋ ಅಂತ ಸಂಭ್ರಮಿಸೋ ರೀತಿ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ.
ಬಹುಶಃ ಇದಕ್ಕೇ ಇರ್ಬೇಕು, ಆ ವಯಸ್ಸಲ್ಲೇ ಪೋಸ್ಟ್ ಅನ್ನೋದು ಸಂಭ್ರಮದ ವಿಷಯ ಅನಿಸ್ಬಿಟ್ಟಿತ್ತು. ಪೋಸ್ಟ್ನವರು ಬರ್ತಾರೆ, ಕಾಗದ ಕೊಡ್ತಾರೆ ಎಷ್ಟು ಚೆನ್ನಾಗಿರುತ್ತೆ ಅಲ್ವ.

‘ಜೀವನ ಅಂದ್ರ ಕೆಂಪು ಪೋಸ್ಟ್ ಡಬ್ಬಿ ಇದ್ದಾಂಗ, ಅದರಾಗ ಸುಖ ದುಃಖ ಎರಡೂ ತುಂಬೇತಿ’ ಅಂದಿದ್ದು ಆ ಧಾರವಾಡದ ಹೆಣ್ಣುಮಗಳು. ಕಾಳೇಜು, ಕೆಂಪು ಮಣ್ಣು, ಅಮ್ಮ ಅಂತ ಬರೀತಾ ಯಾಕೋ ಗೊತ್ತಿಲ್ಲ ಈ ಮಾತನ್ನು ಬರ್ದಿದ್ದು. ಅರೆ! ಹೌದಲ್ಲ ಅನಿಸ್ತು. ಕೆಂಪು ಪೋಸ್ಟ ಡಬ್ಬಿಯಲ್ಲಿ ಲಗ್ನಪತ್ರಿಕೇನೂ ಇರುತ್ತೆ, ತಿಥಿ ಕಾಡರ್ೂ ಇರುತ್ತೆ. ಆ ಪೋಸ್ಟ್ ಡಬ್ಬೀನಲ್ಲಿ ಅಣ್ಣ ಊರಿಗೆ ಬರೋ ವಿಷಯಾನೂ ಇರುತ್ತೆ, ಮನೆ ಪಾಲಾಗಿ ಹೋದ ಕಥೇನೂ ಇರುತ್ತೆ. ಗಂಡ-ಹೆಂಡತಿ ಡೈವೋಸರ್್ ಆದದ್ದನ್ನು ಹೊತ್ತುಕೊಂಡಿರೋ ಡಬ್ಬಿ 25ವರ್ಷದ ಸುಖದಾಂಪತ್ಯದ ಸಿಹಿ ಸುದ್ದಿ, ಪಾಸಾಗಿರೋ ಸುದ್ದಿ, ಫೇಲಾಗಿರೋ ಪತ್ರ ಎರಡೂ ಅಕ್ಕಪಕ್ಕ ಕೂತಿರುತ್ತೆ. ಆ ಹುಡುಗಿಗೆ ಪ್ರೊಪೋಸ್ ಮಾಡಿ ಬರೆದ ಪತ್ರ, ಇನ್ನೊಂದು ಎರಡು ವರ್ಷ ಸುತ್ತಾಡಿ ಇನ್ನೇನು ಮದುವೆ ಆಗ್ಬೇಕು ಅನ್ನೋವಾಗ ಸಂಬಂಧಾನೇ ಕಿತ್ತುಹೋದ ದುಗುಡ ಎರಡೂ ಇರುತ್ತೆ ಅಕ್ಕಪಕ್ಕದಲ್ಲೇ.
ಜೀವನ ಅನ್ನೋದು ಒಂದು ಥರಾ ಯುಗಾದಿ ಇದ್ದಂಗೆ ಅಲ್ವಾ. ಅಲ್ಲಿ ಸಿಹಿ ಇದೆ, ಬೆಲ್ಲದ ಸಿಹೀನೂ ಇದೆ. ಅದೇ ಥರಾನೇ ಪೋಸ್ಟ್ ಡಬ್ಬಿಯಲ್ಲಿ ಕಹೀನೂ ಇದೆ, ಚಪ್ಪರಿಸಬಹುದಾದ ಸಿಹೀನೂ ಇದೆ. ಒಂದು ಥರದಲ್ಲಿ ಪೋಸ್ಟ್ಡಬ್ಬಿ ಅನ್ನೋದು ಬದುಕಿನ ದಾರ್ಶನಿಕ.
ನನಗೆ ಈ ಪೋಸ್ಟ್ ಗೀಳು ಎಷ್ಟು ಅಂಟಿಕೊಳ್ತು ಅಂದ್ರೆ ಏನಾದ್ರೂ ಪೋಸ್ಟ್ ಬರ್ಲೇಬೇಕು ಅನ್ನೋ ಹುಚ್ಚು ಹಿಡೀತು.. ಅಣ್ಣನಿಗೆ ಬರುತ್ತೆ, ಅಪ್ಪನಿಗೆ ಬರುತ್ತೆ, ನನಗ್ಯಾಕೆ ಬರಲ್ಲ ಅಂತ. ಏಳನೇ ಕ್ಲಾಸ್ ಪಬ್ಲಿಕ್ ಪರೀಕ್ಷೆ ಅಂತ ಗೊತ್ತಾದಾಗ ನಾನು ಫಸ್ಟ್ ಕೇಳಿದ್ದೇ ಅದು ಹಾಲ್ಟಿಕೇಟ್ ಪೋಸ್ಟ್ನಲ್ಲಿ ಕಳಿಸ್ತಾರ ಅಂತ. ಅಷ್ಟು ಹುಚ್ಚಿತ್ತು. ಹೈಸ್ಕೂಲ್ಗೆ ದಾಟಿಕೊಂಡೇ ಪೋಸ್ಟ್ ಹುಚ್ಚು ಇನ್ನೂ ಜಾಸ್ತಿ ಆಯ್ತು. ಒಂದಿನಾ ಪೇಪರ್ ತಿರುವಿ ಹಾಕ್ತಿದ್ದಾಗ ‘ಸುವಾತರ್ೆಗಳು, ಯೇಸು ನಿಮಗಾಗಿ ಇದ್ದಾನೆ ತಿಳಿಯಬೇಕಾದರೆ ಪೋಸ್ಟ್ ಬಾಕ್ಸ್ ನಂ….ಗೆ ಅಂಚೆ ಹಾಕಿ’ ಅಂತಿತ್ತು. ದೂರಾಲೋಚನೆ ಮಾಡ್ದೆ. ನಾನೂ ಒಂದು ಪೋಸ್ಟ್ ಕಾಡರ್್ ಹಾಕಿದರೆ ಅವರು ಉತ್ತರ ಬರೀತಾರೆ ಅಲ್ವ ಅಂತ. ಪೋಸ್ಟ್ಕಾಡರ್್ಗೆ ದುಡ್ಡೆಲ್ಲಿಂದ ತರೋದು. ಎರಡು ಇಡ್ಲಿಗೆ ಇಷ್ಟು, ಬಸ್ಗೆ ಇಷ್ಟು ಅಂತ ಕರೆಕ್ಟಾಗಿ ಲೆಕ್ಕಹಾಕಿ ದುಡ್ಡು ಕೊಡ್ತಿದ್ರು. ಅಂತಾದ್ರಲ್ಲಿ ಪೋಸ್ಟ್ಕಾಡರ್್ಗೆ ಎಲ್ಲಿ ಉಳಿಸೋದು. ಅವಾಗ್ಲೇ ಅಪ್ಪನ ಜೋಬಿಗೆ ಕೈಹಾಕೋ ವಿದ್ಯೆ ಗೊತ್ತಾಗಿತ್ತು. 5ಪೈಸಾ ಕಾಡರ್್ಗಾಗಿ ನಾಲ್ಕುದಿನ ನಿದ್ದೆ ಮಾಡಿಲ್ಲ.
ಓಹ್! ಅಂತೂ ಬಂತಲ್ಲ ಯೇಸುವಿನ ಸುವಾತರ್ೆ. ನಾನೀಗ ಯೇಸು ವಿದ್ಯೆ ಕಲಿಯುವ ಕರೆಸ್ಪಾಂಡೆಂಟ್ ಸ್ಟೂಡೆಂಟ್. ಅವರು ಪಾಠ ಕಳಿಸ್ತಾರೆ. ಕ್ವಶ್ಚನ್ ಪೇಪರ್ ಕಳಿಸ್ತಾರೆ. ಪಾಸಾದ್ರೆ ಸಟರ್ಿಫಿಕೇಟ್. ನಾನೂ ಯಾವ ಸುವಾತರ್ೆ ಕಲಿತ್ನೋ ನನಗಂತೂ ಗೊತ್ತಿಲ್ಲ. ನನ್ನ ದೋಸ್ತ್ಗಳಿಗೂ ಸಹಾ ನಾನು ಸುವಾತರ್ೆ ಕಲಿತಿದ್ದೀನಿ ಅನ್ನೋ ಗಂಧಾಗಾಳಿ ಸಿಕ್ಕಿಲ್ಲ. ಅದೂ ಯೇಸೂ ಆದ್ರೂ ಯಾರಾದ್ರೂ ನನಗೆ ಪೋಸ್ಟ್ನಲ್ಲಿ ಬರುತ್ತೆ ಅನ್ನೋದಷ್ಟೆ ಮುಖ್ಯ ಆಗಿದ್ದದ್ದು.
ಚಡ್ಡಿ ಏರಿಸ್ಕಂಡು ನೆಲದ ಮೇಲೆ ಗೊಣ್ಣೆ ಸುರಿಸ್ಕೊಂಡು ಕೂತುಕೊಳ್ತಾ ಇರೋವಾಗ ಮೇಷ್ಟ್ರು ಬೆತ್ತ ಕೈಯಲ್ಲಿ ಹಿಡಿದು ‘ಅಂಚೆಯಣ್ಣ ಬಂದಿಹನಣ್ಣ ಅಂಚೆಯ ಹಂಚಲು ಮನೆ ಮನೆಗೆ…’ ಅಂತ ಪದ್ಯ ಹೇಳಿಕೊಡ್ತಾ ಇದ್ರಲ್ಲಾ ಅವಾಗ ಈ ಪೋಸ್ಟ್ಮ್ಯಾನ್ ನನ್ನ ಒಳಗಡೆ ಇಳಿದುಬಿಟ್ಟ.
ಹೈಸ್ಕೂಲ್ನಲ್ಲಿ ನನಗೆ ಸುವಾತರ್ೆ ಕೇಳಿ ಕೇಳಿ ಸುಸ್ತಾಗೋ ಕಾಲ ಬಂತಲ್ಲಾ, ಅವಾಗ ನನ್ನ ಫ್ರೆಂಡ್ಸ್ ಇನ್ನೊಂದು ದಾರಿ ತೋರಿಸ್ಕೊಟ್ರು. ಬೇರೆ ದೇಶದ ಎಂಬಸೀಗೆ ಪತ್ರ ಬರೆಯೋದು. ‘ಐ ವಾಂಟ್ ಟು ನೋ ಮೋರ್ ಎಬೌಟ್ ಯುವರ್ ಕಂಟ್ರಿ’ ಅಂತ. ವಾಹ್! ಎಷ್ಟು ಚನ್ನಾಗಿರೋ ಪೋಸ್ಟ್ ಬರೋದು ಗೊತ್ತಾ. ಕಲರ್ ಕಲರ್ ಬ್ರೋಷರ್ಗಳು, ನಮ್ಮ ಅಡ್ರೆಸ್ ಕೂಡಾ ನೀಟಾಗಿ ಟೈಪ್ ಮಾಡಿರೋರು. ಅದು ಬರ್ತಾ ಇದ್ದ ಹಾಗೆ ನಮ್ಮನೇಲಿ ನನ್ನ ಸ್ಟ್ಯಾಂಡರ್ಡೂ ಜಾಸ್ತಿ ಆಗ್ತಾಹೋಯ್ತು. ಇರೋಬರೋ ದೇಶದ ರಾಯಭಾರಿ ಕಛೇರಿಗೆಲ್ಲಾ ಬರ್ದೆ. ಐ ವಾಂಟ್ ಟು ನೋ, ಐ ವಾಂಟು ನೋ…ಅಂತ.
ಒಂದಿನಾ ಹೀಗೆ ಒಂದು ಪೋಸ್ಟ್ ಆಫೀಸ್ ಮುಂದೆ ಹೋಗ್ತಾ ಇದ್ದೆ, ಶಾಕ್ ಆಗೋಯ್ತು, ಅದು ದೊಡ್ಡ ಪೋಸ್ಟ್ ಆಫೀಸು, ಎದುರುಗಡೆ ಕೆಂಪು ಡಬ್ಬ ಮಾತ್ರ ಅಲ್ಲ, ಹಳದಿ, ಹಸಿರು ಬಣ್ಣದ ಡಬ್ಬಾನೂ ಇತ್ತು. ಯಾಕಪ್ಪಾ ಅಂತ ಹತ್ತಿರ ಹೋಗಿ ನೋಡಿದ್ರೆ ನಿಮ್ಮ ಊರಿಗೆ ಆದ್ರೆ ಈ ಡಬ್ಬದಲ್ಲಿ ಹಾಕಿ, ಡೆಲ್ಲಿಗಾದ್ರೆ ಈ ಡಬ್ಬದಲ್ಲಿ, ಮುಂಬೈಗಾದ್ರೆ ಇಲ್ಲಾಕಿ ಅಂತ ಬರ್ತಿತ್ತು. ತುಂಬಾ ಬೇಜಾರಾಗಿ ಹೋಯ್ತು. ನನಗೆ ಪೋಸ್ಟ್ ಬಾಕ್ಸ್ ಅಂದ್ರೆ ಅದು ಕೆಂಪು ಪೋಸ್ಟ್ ಬಾಕ್ಸೇ, ಜೀವನ ಅಂದ್ರೆ ಹಳದಿ ಪೋಸ್ಟ್ ಬಾಕ್ಸ್ ಇದ್ದಹಾಗೆ, ಜೀವನ ಅಂದ್ರೆ ಹಸಿರು ಪೋಸ್ಟ್ ಬಾಕ್ಸ್ ಇದ್ದಹಾಗೆ ಅಂತ ಬರಿಯೋಕೆ ಆಗುತ್ತಾ. ಅದ್ರಲ್ಲೂ ಪೋಸ್ಟ್ ಬಾಕ್ಸ್ ಅಂದ್ರೆ ಬರೀ ಸುಖಾ ದುಃಖಾ ಅಲ್ಲ. ಅದು ಎಲ್ಲಾ ಊರುಗಳನ್ನೂ ಹೊಟ್ಟೆಲಿಟ್ಟುಕೊಂಡು ಕೂತಿರಬೇಕು. ಡೆಲ್ಲಿ ಬೇರೆ ನೀವು ಬೇರೆ ಅಂತ ಹೇಗೆ ಹೇಳೋಕೆ ಸಾಧ್ಯ.

ಒಂದು ಟೈಮ್ ಬಂತು. ಒಂದೇ ಒಂದು ಪೋಸ್ಟ್ಕಾಡರ್್ಗಾಗಿ ಹಗಲೂ ರಾತ್ರಿ ನಿದ್ದೆ ಕಳೆದುಕೊಂಡಿದ್ದ ನನಗೆ ಈಗ ಕಂತೆಗಟ್ಲೆ ಪೋಸ್ಟ್ ಬರೋ ಕಾಲ ಬಂತು. ನಾನೂ ಒಂದು ಪೋಸ್ಟ್ಬಾಕ್ಸ್ ಬಾಡಿಗೆಗೆ ತಗೊಂಡೆ. ಪೋಸ್ಟ್ ಆಫೀಸ್ನೋರು ಒಂದು ಕೀ ಕೊಡ್ತಾರೆ. ನಾವೇ ಹೋಗಿ ನಮ್ಮ ನಂಬರ್ ಡಬ್ಬಿ ತೆಗೆದ್ರೆ ಎಲ್ಲಾ ಪೋಸ್ಟ್ ಅಲ್ಲಿರೋದು. ಒಳ್ಳೆ ಐಡಿಯಾ ಅಂದ್ಕೊಂಡು ಅದನ್ನ ತಗೊಂಡೆ. ಆದ್ರೆ ಎರಡೇ ದಿನಕ್ಕೆ ನನಗೆ ಗೊತ್ತಾಗಿ ಹೋಯಿತು. ಅಮ್ಮ ಮಾಡಿದ ಅಡಿಗೇನಲ್ಲಿ ಅಮ್ಮನ ಟಚ್ ಇರುತ್ತಲ್ಲ, ಹಾಗೇ ಪೋಸ್ಟ್ ಅಂದ್ರೆ ಬರೀ ಪೋಸ್ಟ್ ಅಲ್ಲ ಅದ್ರಲ್ಲಿ ಪೋಸ್ಟ್ಮ್ಯಾನ್ ಟಚ್ ಕೂಡಾ ಇರುತ್ತೆ ಅಂತ. ಬೀದಿ ಕೊನೇನಲ್ಲಿ ಪೋಸ್ಟ್ಮ್ಯಾನ್ ಕಾಣಿಸ್ಕೊಳ್ಳಬೇಕು. ನಿಧಾನವಾಗಿ ಮನೆ ಮನೇ ಬಾಗಿಲು ಬಡೀತಾ ಬರ್ಬೇಕು. ನಮ್ಮನೇ ಚಿಲಕಾನೂ ಕಿಲಕಿಲ ಅನ್ಬೇಕು, ಅವಾಗ್ಲೇ ಅದಕ್ಕೆ ಪೋಸ್ಟ್ ಅನ್ನೋದು ಅಂತ ಗೊತ್ತಾಗೋಯ್ತು.
ಪತ್ರ ಬರೆಯೋರಿಲ್ಲ ಅಕ್ಷರದ ಆಟ ಗೊತ್ತಾಗಲ್ಲ, ಓಂ ಶ್ರೀ ಕಾಣೋದಿಲ್ಲ, ಶುಭಾಶೀವರ್ಾದ, ಹಾರೈಕೆ ಇರೋದಿಲ.್ಲ ಚಿರಂಜೀವಿಗೆ ಅನ್ನೋ ಒಕ್ಕಣೆ ಇಲ್ವೇ ಇಲ್ಲ ಅಂತ ನೊಂದ್ಕೊಳ್ತಾರೆ. ಆದ್ರೆ ನನಗೆ ಇದೆಲ್ಲಾ ಹೋಯ್ತಲ್ಲಾ ಅನಿಸಲ್ಲ. ಅದಕ್ಕಿಂತಲೂ ನನ್ನ ಹಳೆಯ ಬದುಕಿಗೆ ಹೋಗೋದಿಕ್ಕೆ ಇದ್ದ ಒಂದೇ ಒಂದು ದೋಣೀನೂ ಕಾಣೆ ಆಗೋಯ್ತಲ್ಲಾ ಅನಿಸುತ್ತೆ.
‘ಪ್ರೀತಿಸ್ತೀನಿ ಅನ್ತಾ ಇರೋ ಹುಡುಗನ್ನ ಒಪ್ಪಿಕೊಳ್ಬೇಕಾ ಬೇಡ್ವಾ’ ಅಂತ ತಾಕಲಾಡ್ತಿದ್ದೆ ಹುಡುಗಿಗೆ ‘ನಿನ್ನ ಕಣ್ಣುಗಳಲ್ಲಿ ಮಿಣಿ ಮಿಣಿ ದೀಪಗಳು, ಯಾಕೆ ವಾಲುತ್ತಾವೆ ತೊಯ್ದ ಗಾಳಿಯಲ್ಲಿ’ ಅಂತ ಬರೆದು ಕಳಿಸಿದೆನಲ್ಲಾ ಅವಾಗ ತಾನೆ ಯಕ್ಷಿಣಿ ಸಂಭವಿಸಿದ್ದು. ಒಂದು ಪತ್ರ, ಒಂದೇ ಒಂದು ಪತ್ರ ಎರಡೂ ಜೀವಗಳ ಜೀವನದ ದಿಕ್ಕನ್ನು ಬದಲಿಸಿಬಿಡ್ತು. ಊಂ ಅಂತೀಯಾ ಉಹುಂ ಅಂತೀಯಾ ಅಂತಾ ಕೇಳೋಕೆ ನಾವೇನು ಫಿಲಂ ಸ್ಟಾರ್ಸಾ. ಒಂದು ಕವಿತೆ ಒಂದು ಇನ್ಲ್ಯಾಂಡ್ ಲೆಟರ್ನಲ್ಲಿ ಅಡಗಿಕೊಂಡು ದೂರದೂರ ಹಾರಿ ನನ್ನ ಹುಡುಗೀನ ಗೆದ್ಕೊಂಡು ಬಂದು ನನ್ನ ಕೈಗಿಡ್ತಲ್ಲಾ ಅದಕ್ಕಿಂತ ಬೇಕಾ?
ಒಂದಿನಾ ನಾನು ನನ್ನ ಹುಡುಗಿ ಇಬ್ಬರೂ ರಸ್ತೆ ಅಳೀತಾ ಎಳೀತಾ ಹೋಗ್ತಿದ್ವಿ. ಅವರ ಮನೆಯಲ್ಲಿ ಮದುವೆಗೆ ಬಿಲ್ಕುಲ್ ಒಪ್ಪಿರಲಿಲ್ಲ. ಅವಾಗ ತಲೇನಲ್ಲಿ ಒಂದು ಮಿಂಚು ಹೊಳೀತು. ಏ ನಿಮ್ಮಪ್ಪ ಅಮ್ಮ ಒಪ್ಲಿಲ್ಲ ಅಂದ್ರೆ ಒಂದು ಕೆಲಸ ಮಾಡ್ತೀನಿ, ನಿನ್ನ ಮೇಲೆ ನಮ್ಮನೆ ಅಡ್ರೆಸ್ ಬರೆದು ಈ ಪೋಸ್ಟ್ ಬಾಕ್ಸ್ಗೆಗೆ ಹಾಕ್ಬಿಡ್ತೀನಿ. ಅವಾಗ ನೋಡು ಬಂದೇ ಬರ್ತೀಯ ನಮ್ಮನೆಗೆ ಅಂದೆ. ನನಗೆ ಪ್ರಾಣವಾಗಿ ಹೋಗಿದ್ದ ಸಂಗಾತಿಯನ್ನ ನಮ್ಮ ಮನೆ ತುಂಬಿಸಿಕೊಂಡಿದ್ದು ಹೀಗೆ. ಅಲ್ಲ ಈ-ಮೇಲ್ನಲ್ಲಿ ನನ್ನ ಹುಡುಗೀನ ಕೂಡಿಸಿ ‘ಸೆಂಡ್’ ಬಟನ್ ಒತ್ತೋಕಾಗುತ್ತಾ?
 

‍ಲೇಖಕರು avadhi

June 4, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

ನೋಟ್ ಬುಕ್ಕಿನೊಳಗೂ ಬಂತು ಎಲೆಕ್ಷನ್

"ಡೋರ್ ನಂ 142" ಬಹುರೂಪಿ ಅವತ್ತು ಪೇಪರ್, ಪೇಪರ್ ಥರಾ ಇರ್ಲಿಲ್ಲ. ದಪ್ಪ ದಪ್ಪ ಅಕ್ಷರ ಇತ್ತು. ಯಾವತ್ತೂ ಆ ಥರಾ ದಪ್ಪ ಅಕ್ಷರದಲ್ಲಿ ಬಂದಿರೋ...

6 ಪ್ರತಿಕ್ರಿಯೆಗಳು

 1. shari

  ನಮ್ಮನೆ ಹಿಂದೆಯೇ ಆ ಅಂಚೆಯಣ್ಣನ ಮನೆಯಿತ್ತು.ಆತ ಎಲ್ಲಾ ಪತ್ರಗಳನ್ನು ಹಂಚಿ ಮನೆಗೆ ಬರುವಾಗ
  ಮಧ್ಯಾಹ್ನ ಸುಮಾರು 2 ಘಂಟೆ ಆಗುತ್ತಿತ್ತು.ನನಗೇನಾದರೂ ಪತ್ರ ಇದ್ದರೆ ಆಗಲೇ ಆತ ನನಗೆ
  ಕೊಡುತ್ತಿದ್ದುದು.ಡಿಗ್ರಿ ಮುಗಿಸಿ ಮನೆಯಲ್ಲಿದ್ದ ಕಾಲವದು. ನನ್ನ ಗೆಳೆಯ-ಗೆಳತಿಯರು ಆಗಾಗ
  ಬರೆಯುವ ಪತ್ರಗಳೇ ಜೀವಾಳವಾಗಿರುತ್ತಿದ್ದವು.ಆ ಕಾಯುವಿಕೆಯಲ್ಲಿ ಅದೆಂಥ ಖುಷಿ ಇರೋದು.ಆ
  ದಿನಗಳೆಲ್ಲ ನೆನಪಾದವು.ಇ-ಮೇಲ್ ಜಗತ್ತಿನಲ್ಲಿ ಕಾಯೋದು ಹಾಳಾಗ್ಲಿ.ಓದೋಕು ಪುರುಸೊತ್ತಿಲ್ಲವಾಗಿದೆ.
  ಗೆಳೆಯ-ಗೆಳತಿಯರ ಬಳಗ ಕೂಡ ಅಷ್ಟೇ ಫಾಸ್ಟಾಗಿ ಬದಲಾಗ್ತಾ ಇರುತ್ತಲ್ಲ.
  ಲೇಖನ ಚೆನ್ನಾಗಿತ್ತು.ತುಂಬಾ ದಿನದಿಂದ ನೋಡುತ್ತಿದ್ದೇನೆ.ಈ ಬಹುರೂಪಿ ಯಾರು

  ಪ್ರತಿಕ್ರಿಯೆ
 2. D.RAVIVARMA

  lekhana tumba arthapoornavaste alla tumba social relevent agide,nanu gulbargadalli m,com maduvaga prativara patrakkagi kayuthhidde,aa kayuvikeyallu ondu thrill iruthittu,gelathi bareda patra,appa arogyada bagge,odalu heluva patra,geleyaru nanilladaga party madiddanu baredu hotte urisuva patra,patrikegalige naanu bareyuttidda patra vibhagada patra,udyoga sandarshanakke banda kushi mattu bhayada patra heege,heege, egalu nanu patra bareyuvuvadaralle kushi hagu thrill padeyuttene horatu email,aamail nalli alla. abhinandanegalu naavu ello kaleduhoguttiddeveno anisuttide adaru postman nodidaga obba athmiya nodida kushi agtade. d.ravi varma hospet

  ಪ್ರತಿಕ್ರಿಯೆ
 3. arpita

  “ನನಗೆ ಪೋಸ್ಟ್ ಬಾಕ್ಸ್ ಅಂದ್ರೆ ಅದು ಕೆಂಪು ಪೋಸ್ಟ್ ಬಾಕ್ಸೇ, ಜೀವನ ಅಂದ್ರೆ ಹಳದಿ ಪೋಸ್ಟ್ ಬಾಕ್ಸ್ ಇದ್ದಹಾಗೆ, ಜೀವನ ಅಂದ್ರೆ ಹಸಿರು ಪೋಸ್ಟ್ ಬಾಕ್ಸ್ ಇದ್ದಹಾಗೆ ಅಂತ ಬರಿಯೋಕೆ ಆಗುತ್ತಾ”. ಸೂಪರ್
  ತುಂಬಾ ಮಜವಾಗಿದೆ ಲೇಖನ.ಸಣ್ಣ ಸಣ್ಣ ಮುತ್ತಿನಂತೆ ಜೊಡಿಸಿತ್ತ ಸನ್ನಿವೆಶಗಳು,ನುಡುವಿನ ಹಾಸ್ಯದ ಎಳೆಗಳೂ ಸೊಗಸಾಗಿ ಮೂಡಿದೆ.

  ಪ್ರತಿಕ್ರಿಯೆ
 4. shivu morigeri

  ನಮ್ಮೂರಿನ ಪೋಸ್ಟ್ ಶರಣಪ್ಪನ ನೆನಪಾಯಿತು.ನನ್ನ ಗ್ರಾಮದ 5000 ಮನೆಗಳ ಸಂಪೂರ್ಣ ವಿಳಾಸ ಗೊತ್ತಿದ್ದವನ ಗತ್ತು ಗೋಚರಿಸಿತು.ತುಂಬಿದ ತರಗತಿಯ ಬಾಗಿಲಲ್ಲಿ ಶರಣಪ್ಪ ನಿಂತು ಪೋಸ್ಟ್ ಎಂದು ಕೂಗಿ ಪತ್ರ ಕೈಗಿಡೋದೊಂದು ಹೆಮ್ಮೆ ಅಂತ ನನ್ನ ಸ್ನೇಹಿತರು ಅವರವರಲ್ಲೇ ಅವನ ಹೆಸರಲ್ಲಿ ಇವನು ಇವನ ಹೆಸರಲ್ಲಿ ಅವನು ಪತ್ರ ಹಾಕ್ಕೋಂಡು ಪಾಟೀ ಚೀಲದಲ್ಲಿ ಪತ್ರ ಮುಚ್ಚಿಡುತ್ತಾ ನಿನಿಗ್ಯ ಯಾರೂ ಪತ್ರ ಬರ್ದಿಲ್ಲೇನಲೇ ಅಂತ ಕಿಚಾಯಿಸುತ್ತಿದ್ದ ಸ್ನೇಹಿತರ ನೆನಪಾಯಿತು.ಈಗಲೂ ಪೋಸ್ಟ್ ಶರಣಪ್ಪಂಗೆ ನಾನು ಕೇಳಿದ್ದ ಪ್ರಶ್ನೆ ಯಣಾ ನಿಮ್ಮನಿಗೆ ಪತ್ರ ಬಂದ್ರ ಅಡ್ರಸ್ ಏನಿರುತ್ತೆ ಅಂತ ಕೇಳಿದ ನೆನಪಾಯಿತು. ಹಾಗೆಯೇ ಈಗ ಕೇವಲ ವಿಧವೆಯರ,ವೃದ್ದಾಪ್ಯದ,ಅಂಗವಿಕಲರ ವೇತನ,ಸರ್ಕಾರಿ ಪತ್ರಗಳ ವಿಲೇವಾರಿ ಮಟ್ಟಿಗೆ ಪೋಸ್ಟ್ ಗೆ ಕ್ಷಯ ಬಂದದ್ದರ ನೆನಪನ್ನೂ ಮರುಕಳಿಸಿದ್ದಕ್ಕೆ ಧನ್ಯವಾದಗಳು ತಮಗೆ.

  ಪ್ರತಿಕ್ರಿಯೆ
 5. Sharath

  ಅಂಚೆಯಣ್ಣನ ಕೈಯಿಂದ ಪತ್ರವನ್ನು ಪಡೆದುಕೊಳ್ಳಲು ಎಷ್ಟು ಸಂತೋಷವೋ, ಅಷ್ಟೇ ದುಖಃ ಅಂಚೆಯಣ್ಣರನ್ನು ಕಂಡಾಗ ಆಗುತ್ತೆ. ಇತ್ತೀಚೆಗೆ 50 ಪೈಸೆಯ ಪೋಸ್ಟ್ ಕಾರ್ಡ್ ಸೂಕ್ತ ವಿಳಾಸದ ಅಲಭ್ಯತೆಯಿಂದ ತಿರಸ್ಕೃತಗೊಂಡು ನನ್ನ ವಿಳಾಸಕ್ಕೆ ವಾಪಾಸ್ಸಾಗಿತ್ತು. ಆದರೆ ಕೂಲಂಕುಷವಾಗಿ ಚಿಂತಿಸಿದಾಗ ಕೇವಲ 50 ಪೈಸೆಗೆ ಎಷ್ಟರ ಮಟ್ಟಿನ ಗೌರವ ಮತ್ತು ಬೆಲೆಯನ್ನು ಅಂಚೆಯಣ್ಣ ನೀಡುತ್ತಾರಲ್ಲಾ ಎಂದಾಗ ಅವರ ಬಗ್ಗೆ ತುಂಬು ಗೌರವ ಮತ್ತು ಪತ್ರವನ್ನು ತಲುಪಿಸಲು ಮತ್ತು ವಾಪಾಸ್ಸು ಹಿಂತಿರುಗಿಸಲು ತೆಗೆದುಕೊಂಡ ಪರಿಶ್ರಮಕ್ಕೆ ತುಂಬಾ ದುಖಃವಾಯಿತು. ಪೋಸ್ಟ್ ಕಾರ್ಡ್ ನ ಮುಖಬೆಲೆಗಿಂತ ಹೆಚ್ಚಿನ ಪರಿಶ್ರಮ!

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ D.RAVIVARMACancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: