ಜೀವ ಮಿಡಿತದ ಮತ್ತೊಂದು ಸದ್ದು

proof

-ಪರಶುರಾಮ ಬೋನೇರ


ನಿಜ. ಇನ್ನು  ಕೆಲವೇ ದಿನಗಳಲ್ಲಿ ಜೀವ ಮಿಡಿತದ ಮತ್ತೊಂದು ಸದ್ದು ಸಾಹಿತ್ಯ ವಲಯದಲ್ಲಿ ಕೇಳಿಬರಲಿದೆ.
ವಿಭಾ ತಿರಕಪಡಿ ಸಾಹಿತ್ಯ ಲೋಕದಲ್ಲಿ ತಮ್ಮ ಕವಿತೆ , ಗಜಲ್ಗಳ ಮೂಲಕ ಒಂದು ಉಜ್ವಲ  ಸಣ್ಣ ಕವಿತೆಯಂತೆ ಬದುಕಿದ್ದ ವಿಭಾ ತನ್ನ ಮಗುವಿಗೆ ಜನ್ಮ ಕೊಡುತ್ತಲೇ ಕಣ್ಣು ಮುಚ್ಚಿದಳು. ಕನ್ನಡದ ಕಾವ್ಯ ಲೋಕದಲ್ಲಿ ಇನ್ನಷ್ಟು ಉತ್ಕೃಷ್ಟವಾಗಿ ಮಿನುಗಬೇಕಿದ ಕವಯತ್ರಿ ವಿಭಾ ತಿರಕಪಡಿ ನಿಧನ ಹೊಂದಿದ ಎರಡು ವಷೃದ ನಂತರ ಅವರ ಕವಿತೆಗಳು ಸಂಕಲನವಾಗಿ ಹೊರಬಂದಿತ್ತು. ಹೆಸರೇ ಎಷ್ಟೊಂದು ಆಪ್ತವಾಗಿದೆ. ‘ಜೀವ ಮಿಡಿತದ ಸದ್ದು’
ಜಯಂತ ಕಾಯ್ಕಿಣಿ ವಿಭಾ ಕುರಿತು ಬರೆಯುತ್ತಾ ‘ಎರಡು ಕಣ್ಣು ಕಳೆದುಕೊಂಡ ಲೋಕ ಸಣ್ಣದಾಯಿತು’ ಎಂಬ ಸು.ರಂ. ಎಕ್ಕುಂಡಿಯವರ ಕವಿತೆ ಉದಾಹರಿಸುತ್ತಾ, ‘ಅವಳು ಬರೆಯದೇ ಉಳಿದ ಕವಿತೆಗಳು ಈ ಕೂಸಿನ ವಿಕಾಸವನ್ನು ವಿಶ್ವವನ್ನು ಪೊರೆಯಲೆಂದು ಪ್ರಾರ್ಥಿಸುತ್ತೇನೆ ‘ ಎಂಬ ಸಾಲುಗಳು ಎಷ್ಟೊಂದು ಆಪ್ತ. ಈಗ ನಾವು ನೀವೆಲ್ಲರೂ  ಸೇರಿ ಮತ್ತೊಮ್ಮೆ ಈ ವಿಭಾರ ಕವಿತೆ ಓದುವ ಅವಕಾಶವನ್ನು ಪಡೆದಿದ್ದೇವೆ.
ಕೈಫಿ ಅಜ್ಮಿ ಅವಳು ಬಹುವಾಗಿ ಪ್ರೀತಿಸುವ ಕವಿ. ಅಜ್ಮಿಯ ಕವಿತೆಗಳನ್ನು ಎಂದೋ ಅನುವಾದಿಸಿ ಇಟ್ಟಿದ್ದರು. ಅವುಗಳಿಗ ಪುಸ್ತಕ ರೂಪ ಕಾಣುತ್ತಿವೆ. ಆಕಾಶದಲ್ಲಿ ಮಿನುಗು ತಾರೆಯಂತೆ ಹೊಳೆಯುವ ಅವಳು ಕಣ್ಣುಗಳು ಈ ಸುದ್ದಿ ಕೇಳಿ ಎರಡು ಹನಿ ಕಣ್ಣಿರಾಗಿರಲಿಕ್ಕೂ ಸಾಕು. 
 
 

‍ಲೇಖಕರು avadhi

April 1, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಜೀವನದ ಹೊಟ್ಟೆ ತುಂಬಿ

ಜೀವನದ ಹೊಟ್ಟೆ ತುಂಬಿ

ಮಾಲಾ.ಮ.ಅಕ್ಕಿಶೆಟ್ಟಿ ವಿಧ ವಿಧ ಭಕ್ಷ್ಯಗಳು ಸಿಹಿ ಖಾರ ಹುಳಿ ಒಗರು ಈರುಳ್ಳಿ ಬೆಳ್ಳುಳ್ಳಿ ಹುಣಸೆ ಬೆಲ್ಲ  ಎಣ್ಣೆ ಹೆಚ್ಚೋ ಕಡಿಮೆಯೋ ರುಚಿ ಪಾಪಿ...

ಮೋಹ ಇದಿರುಗೊಳ್ಳದ ದಿನ

ಮೋಹ ಇದಿರುಗೊಳ್ಳದ ದಿನ

ಕೆ ಜೆ ಕೊಟ್ರಗೌಡ ತೂಲಹಳ್ಳಿ ಪೋಲಿಯಾಗಿ ಬಿಡಬೇಕುಯಾವ ಶಿಲಾಬಾಲೆಯೂಎದುರುಗೊಳ್ಳದ ಕಾರಣ ಅತೀ ಆಸೆಯ ಹೊಂದಿಯೂಅಮಾಯಕತೆಯಪ್ರದರ್ಶನಕೆಯಾವ...

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

2 ಪ್ರತಿಕ್ರಿಯೆಗಳು

 1. ಶ್ರೀದೇವಿ ಕಳಸದ

  ಕವಿತೆಗಳನ್ನು ಓದುವ ಕುತೂಹಲವೆಷ್ಟಿದೆಯೋ ಅಷ್ಟೇ ದುಃಖವೂ… ವಿಭಾ ಇರಬೇಕಿತ್ತು.

  ಪ್ರತಿಕ್ರಿಯೆ
 2. Basavaraja halli

  ಅಕ್ಕ ವಿಭಾ ಅವರ ಕೆಲವು ಕವಿತೆಗಳನ್ನು ಮಯೂರದಲ್ಲಿ ಓದಿದ್ದೆ. ಕೈಫಿ ಅಜ್ಮಿಯವರ ಹಲವು ಕವನಗಳನ್ನು ಅನುವಾದಿಸಿದ್ದನ್ನು ಹತ್ತಾರು ಬಾರಿ ಓದಿ ಕಾವ್ಯದ ಹುಚ್ಚು ಹಿಡಿಸಿಕೊಂಡಿದ್ದೆ. ಕೆಲ ಕವಿತೆಗಳನ್ನು ಓದಿದ್ದು ಅತ್ತದ್ದೂ ಇದೆ.ಅವರ ಅಭಿಮಾನಿಯಾಗಿದ್ದೆ, ಒಂದು ದಿನ ಪ್ರಜಾವಾಣಿಯಲ್ಲಿ ಅಕ್ಕ ತೀರಿಕೊಂಡ ಸುದ್ದಿ ಓದಿ ದಿಗ್ಬ್ರಮೆಗೊಂಡೆ.
  ಕವಿತೆಯೊಂದೊಡನೆ ಅಕ್ಕ ನೆನಪಾಗುತ್ತಾಳೆ – ಬಸವರಾಜ ಹಳ್ಳಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: