ಜುಗಾರಿ ಕ್ರಾಸ್ : ಆಮೀರ್ ಖಾನ್ ಪತ್ರ ಹಾಗೂ ಮು೦ದುವರೆದ ಚರ್ಚೆ

ಹೇಳಿಕೇಳಿ ‘ಜುಗಾರಿ ಕ್ರಾಸ್’ ಚರ್ಚೆ, ವಾದ, ವಿವಾದಕ್ಕಾಗಿಯೇ ಇರುವ ವೇದಿಕೆ. ಎಸ್ ಸಿ ದಿನೇಶ್ ಕುಮಾರ್ ’ಡಬ್ಬಿಂಗ್ ನಿಷೇಧ ಎಂಬ ಹುಚ್ಚಾಟದ ಸುತ್ತ….’ ಲೇಖನ ಬರೆದು ಡಬ್ಬಿಂಗ್ ಆಗಬೇಕಾದರ ಔಚಿತ್ಯದ ಬಗ್ಗೆ ಗಮನ ಸೆಳೆದಿದ್ದರು.  ಅಮೀರ್ ಖಾನ್ ಅವರ ‘ಸತ್ಯಮೇವ ಜಯತೆ’ ಕನ್ನಡಕ್ಕೆ ಡಬ್ ಆಗಬಾರದು ಎಂದು ದನಿ ಎತ್ತಿರುವ ಸಂದರ್ಭದಲ್ಲಿ ದಿನೇಶ್ ತಮ್ಮ ನೋಟವನ್ನು ಹಂಚಿಕೊಂಡಿದ್ದಾರೆ. ಚರ್ಚೆಯ ಮು೦ದುವರೆದ ಭಾಗವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮ೦ಡಳಿಗೆ ಆಮೀರ್ ಖಾನ್ ಬರೆದ ಪತ್ರದ ಪ್ರತಿಯನ್ನು ದಿನೇಶ್ ಕುಮಾರ್ ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಾರೆ. ಆ ಬಗ್ಗೆ ಅಶೋಕ್ ಶೆಟ್ಟರ್,  ಸುರೇಶ್ ಸೇರಿದ೦ತೆ ಹಲವರು ಗೆಳೆಯರ ಅಭಿಪ್ರಾಯ ಇಲ್ಲಿದೆ. ಚರ್ಚೆಗೆ ಸ್ವಾಗತ. ನೀವೂ ಭಾಗವಹಿಸಿ. Mahesh Rudragoudar ಅಮೀರಖಾನಗೆ ತಮ್ಮ ದಾರಾವಾಹಿಯನ್ನು ನಮಗೆ ಕನ್ನಡದಲ್ಲಿ ತೋರಿಸುವಾಸೆ. ನಮ್ಮ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅದನ್ನು ನಮಗೆ ಕನ್ನಡೇತರ ಬಾಶೆಯಲ್ಲಿ ತೋರಿಸುವಾಸೆ. ಯಾವುದು ಮತ್ತು ಯಾರು ಕನ್ನಡಪರ.? Shivu Kalaiah ಶನಿವಾರ.”dil chaahta hai” ಸಿನಿಮವನ್ನು ಈ ಮೊದಲು ನೋಡಿರಲಿಲ್ಲ. ಇವತ್ತು ಮನೆಯಲ್ಲಿ ನಾನು, ನನ್ನ ಶ್ರೀಮತಿ ಇದೇ ಸಿನಿಮಾವನ್ನು ಕನ್ನಡ subtitle ನಲ್ಲಿ ನೋಡಿದೆವು.. ನಿಜಕ್ಕೂ ಅದ್ಬುತವೆನಿಸಿತು. ಪ್ರತಿಯೊಂದು ದೃಶ್ಯಗಳು, ಸಂಭಾಷಣೆಗಳು ಚೆನ್ನಾಗಿ ಅರ್ಥವಾಗಿ ಕನ್ನಡ ಸಿನಿಮವನ್ನು ನೋಡಿದಷ್ಟೇ ಖುಷಿಯಾಯ್ತು. ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಎಲ್ಲವನ್ನು ನಿರ್ವಹಿಸಿರುವ ಫಾರ್ಹಾನ್ ಆಕ್ತರ್ ನ ಅಭಿಮಾನಿಯಾಗಿಬಿಟ್ಟೆ. ಇದು ನಿಜಕ್ಕೂ ಅದ್ಬುತ ಸಿನಿಮವೆನಿಸಿತು. ನನ್ನ ಶ್ರೀಮತಿಯಂತೂ ಕನ್ನಡ ಸಿನಿಮವನ್ನು ನೋಡಿದಷ್ಟೇ ಖುಷಿಪಟ್ಟಳು. ಕೇವಲ subtitle ನಲ್ಲಿಯೇ ಬೇರೆ ಭಾಷೆಯ ಸಿನಿಮಾದ ಸಂಭಾ…ಷಣೆ ಚೆನ್ನಾಗಿ ಅರ್ಥವಾಗಿ ಪೂರ್ತಿ ಸಿನಿಮವನ್ನು enjoy ಮಾಡಬೇಕಾದರೆ ಇನ್ನೂ ಇದು ಕನ್ನಡ ಭಾಷೆಗೆ ಡಬ್ಬಿಂಗ್ ಆಗಿ ಪ್ರತಿಯೊಂದು ದೃಶ್ಯವನ್ನು ಕನ್ನಡ ಭಾಷೆಯಲ್ಲಿಯೇ ಕೇಳುವಂತಾದರೆ….ಎಷ್ಟು ಚೆನ್ನ ಅಲ್ವಾ…ಅಂದಳು ನನ್ನ ಶ್ರೀಮತಿ. ಆಂಗ್ಲ ಭಾಷೆಯ ಅವತಾರ್, children of Heavan, Ameli, Life is beautiful, No man’s land, Forrest gump, Cast away, Titanic,Baran, Notebook, Roman holiday, sound of music, The Mirror, colour of paradise,………………..ಒಂದೇ ಎರಡೇ ಇವೆಲ್ಲವನ್ನು ನನ್ನ ಕನ್ನಡ ಭಾಷೆಯಲ್ಲಿಯೇ ನೋಡುವಂತಾದರೆ……ನನಗಂತೂ ಡಬ್ಬಿಂಗ್ ಬೇಕು ಎನ್ನಿಸಿತು… Ashok Shettar I feel a little pained. Why should Amir khan become HE and Kannadigas become WE? This for me is quite insensitive , to say the least. If an intelligent, socially concerned and sensible movie maker like him, who has proved his worth by a series of movies which have created sort of histories of their own in Indian filmdom, can be kept away from being dubbed into Kannada for a trivial, paranoid, parochial reaso, it speaks lowly not of him but of us.. Beesu Suresha ಅಣ್ಣಾ ಸಾವಿರ ಸಲ ಒಂದು ಸುಳ್ಳು ಹೇಳಿದರೆ ಅದನ್ನು ನಂಬಿಬಿಡುತ್ತಾರೆ ಅನ್ನುವುದಕ್ಕೆ ನೀವೂ ಉದಾಹರಣೆಯಾದಿರಲ್ಲ… ಡಬ್ಬಿಂಗ್ ಅನ್ನುವುದು ಭಾಷೆಯನ್ನೇ ನುಂಗುವ ಕ್ಯಾನ್ಸರ್. ಅದನ್ನು ತಪ್ಪಿಸಲು ತಮಿಳುನಾಡಿನಲ್ಲಿ ಹೋರಾಟ ಆರಂಭ ಆಗಿರುವಾಗ ಕನ್ನಡದ ಕೆಲವರು ಅದೇ ಕ್ಯಾನ್ಸರ್‌ ಅನ್ನು ಹಿತ್ತಲ ಬಾಗಿಲಿಂದ ತರುವುದನ್ನು ನೋಡಿ, ಈ ವಿಪರ್ಯಾಸಕ್ಕೆ ನಗಬೇಕೋ ಬೇಡವೋ ತಿಳಿಯದ ಹಾಗೆ ಆಗಿದ್ದೇನೆ Ashok Shettar ಸುರೇಶ್ ಅವರೇ, ನನ್ನ ಮಟ್ಟಿಗೆ ಸತ್ಯಮೇವ ಜಯತೇ ಎಂಬುದರ ಕನ್ನಡ ಡಬ್ಡ್ ಆವೃತ್ತಿಯನ್ನ್ನು ಕನ್ನಡದ ಯಾವುದೋ ವಾಹಿನಿ ಪ್ರಸಾರ ಮಾಡುವದು ಸರಳವಾಗಿ ನನಗೆ ಗೊತ್ತಿಲ್ಲದ ಭಾಷೆಯ ಸುಂದರ ಸಾಹಿತ್ಯ ಕೃತಿಯೊಂದನ್ನು ನನ್ನ ಭಾಷೆಯಲ್ಲಿ ಯಾರಾದರೂ ಅನುವಾದಿಸಿ ಕೊಡುವಷ್ಟೇ ಸಹಜ. ಅದರ ವ್ಯಾಪಾರದ ಆಯಾಮಗಳು ಎಲ್ಲರಿಗೂ ಮುಖ್ಯವಾಗಬೇಕು ಎಂದು ಬಯಸುವದು ತಪ್ಪು. ನೀವು ಉತ್ಪ್ರೇಕ್ಷಿಸುತ್ತಿದ್ದೀರಿ ಎನ್ನಿಸುತ್ತಿದೆ. ಕನ್ನಡ ಸಿನಿಮಾ-ಟಿವಿ ಮಾಧ್ಯಮ ಅಷ್ಟೊಂದು ದುರ್ಬಲ ಎಂದು ನೀವೆ ಭಾವಿಸಿದ್ದೀರಿ ಎಂಬುದೇ ಇದೊಂಥರ ಪ್ಯಾರನೊಯ್ಯ ಎನ್ನಿಸಲು ಕಾರಣ. ಯಾಕೆ ನೀವೆಲ್ಲ ಕನ್ನಡದ ಚಿಂತನಶೀಲ ಮನಸುಗಳಿಂದ ಅಲಿಯನೇಟ್ ಆಗಲೆತ್ನಿಸುತ್ತೀದ್ದೀರಿ? ಬೇರೆ ಯಾರಾದರೂ ಆಗಲಿ. Why you.. Ashok Shettar ೧) “(ಡಬ್ಬಿಂಗ್) ಅನುವಾದವಲ್ಲ. ಅದು ಯಾರದೋ ತುಟಿ ಚಲನೆಗೆ ಹೊಂದುವಂತೆ ಕನ್ನಡವನ್ನು ಕೂಡಿಸುವ ಸರ್ಕಸ್ಸು. ಅದು ಕೇವಲ ತಂತ್ರಜ್ಞಾನದ ಕೆಲಸ….ಅದರಿಂದ ಕನ್ನಡ ಭಾಷೆಯ ಮೂಲ ಜಾಯಮಾನಕ್ಕೆ ಧಕ್ಕೆ ಆಗುತ್ತದೆ ಎಂಬುದಷ್ಟೇ ನನ್ನ ಕಾಳಜಿ.” ೨)”ರಾಷ್ಟ್ರಪ್ರಜ್ಞೆಯನ್ನುರೂಢಿಸುವ ವಿಷಯ ಎಂದು ಎಲ್ಲರ ಮನಸೆಳೆಯುತ್ತಾ , ಕನ್ನಡದವರು ಅದನ್ನು ನೋಡಲೇ ಬೇಕು ಎಂಬರ್ಥ ಹುಟ್ಟಿಸುವ ಮಾತುಗಳನ್ನಾಡುತ್ತಾ ಇರುವುದರ ಹಿಂದೆ ಇರುವ ಹುನ್ನಾರ ನಿಮಗೆ ತಿಳಿಯುತ್ತಾ ಇಲ್ಲವೇ? ಯೋಚಿಸಿ ಗುರುಗಳೇ… ಈ ಲಾಭಬಡುಕರ ಬುದ್ಧಿವಂತಿಕೆಯ ಹಿಂದೆ ಇರುವುದು ಅದೇ ನುಂಗುವ ಗುಣ”. Suresha ಅವ್ರೇ ಸಮ್ ಹೌ ನಿಮ್ಮ ನಿಲುವು ನನಗೆ ಸಮಾಧಾನಕರ ಅನ್ನಿಸಿಲ್ಲ. ಒಬ್ಬ ವ್ಯಕ್ತಿಗೆ ಯಾವುದೋ ಪ್ರಾಣಿಪ್ರಪಂಚದ, ವ್ಯೋಮಕಾಯಗಳ, ಸಾಗರದಾಳದ, ಸಸ್ಯಪ್ರಪಂಚದ ಕುರಿತು ಅಪಾರ ಕುತೂಹಲ ಇದೆ. ನ್ಯಾಶನಲ್ ಜಿಯೋಗ್ರಾಫಿಕ್ ಅಥವ ಅನಿಮಲ್ ಪ್ಲಾನೆಟ್ ಅಥವ ಡಿಸ್ಕವರಿ ಅದರ ವಿವರಗಳನ್ನು ಕನ್ನಡಕ್ಕೆ ಡಬ್ ಮಾಡಿ ಕೊಡುತ್ತದೆ. ನಾಲ್ಕಾರು ಶಾಟ್ಸ್ ನೋಡುವ ಹೊತ್ತಿಗೆ ನೋಡುಗನಿಗೆ ತುಟಿ ಚಲನೆಗೂ ಕನ್ನಡವೋ ಹಿಂದಿಯೋ ಇಂಥ ಬೇರಾವುದೋ ಭಾಷೆಗೂ ತಾಳ-ಮೇಳ ಇಲ್ಲ ಅಂತ ಗೊತ್ತಾಗುತ್ತದೆ. ಕನ್ನಡದ ಮೂಲ ಜಾಯಮಾನಕ್ಕೆ ಧಕ್ಕೆ, ಕನ್ನಡದ ಸರ್ವನಾಶ ಎಂಬುದೇನೂ ಅವನ ಸಮಸ್ಯೆಯಲ್ಲ. ಅವನಿಗೆ ಬೇಕಾದ ವಿಷಯ ಅವನಿಗೆ ಸಿಗುತ್ತಿದೆ.]]>

‍ಲೇಖಕರು G

May 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

15 ಪ್ರತಿಕ್ರಿಯೆಗಳು

 1. ರಾಘವೇಂದ್ರ ತೆಕ್ಕಾರ್

  ಇದೊಂದು ಖಾಸಗಿ ಪತ್ರ. ಈ ಪತ್ರವನ್ನು ಇಲ್ಲಿ ಹಾಕಿರುವವರು ಮತ್ತು ಇದಕ್ಕೆ ಪ್ರಚಾರ ಕೊಡುತ್ತಾ ಇರುವವರು ನೇರವಾಗಿ ಅಮೀರ್‌ಖಾನ್‌ ಅವರ ಏಜೆಂಟ್‌ಗಳೇ ಆಗಿರಬೇಕು. ಖಾಸಗಿ ಪತ್ರವೊಂದನ್ನ ಹೀಗೆ ಸಾರ್ವಜನಿಕಗೊಳಿಸುವ ಜನರ ಹುನ್ನಾರ ನೇರವಾಗಿ ಕಣ್ಣಿಗೆ ಕಾಣುತ್ತಿದೆ. ಇಂತಹ ಏಜೆಂಟರುಗಳು ಯಾವತ್ತಿಗೂ ಯಾವುದೇ ಸಂಸ್ಕೃತಿಗೆ ಅಪಾಯಕಾರಿಗಳು. ಇಂತಹವರಿಗೆ ಈಚೆಗೆ ಬಂಗಾರು ಲಕ್ಷ್ಮಣ್ ಅವರಿಗೆ ದೊರೆತ ಶಿಕ್ಷೆಯೇ ಆಗಬೇಕು.
  ಚರ್ಚೆ ನಡೆಯುವ ಬಗ್ಗೆ ನನ್ನ ಭಿನ್ನಾಭಿಪ್ರಾಯ ಇಲ್ಲ. ಆದರೆ ಅಮೀರ್‌ಖಾನ್ ಎಂಬ ನಿರ್ಮಾಪಕ ತಾನು ಸದಸ್ಯನಾಗಿರುವ ಸಂಘಟನೆಗೆ ಬರೆದ ಪತ್ರ ಒಂದು ಸಾಮಾಜಿಕ ತಾಣಕ್ಕೆ scan ಆಗಿ ಬರುತ್ತದೆ ಎನ್ನುವುದು ಅಪಾಯಕಾರಿ ಸ್ಥಿತಿ. ಈ ಪತ್ರವನ್ನು ಇಲ್ಲಿಗೆ ಲಿಂಕ್ ಆಗಿ ಹಾಕಲು ಕಳಿಸಿರುವವರು ಸ್ಟಾರ್‌ ವಾಹಿನಿಯವರೇ ಆಗಿರುತ್ತಾರೆ. ಅವರಿಗೆ ಅಮೀರ್‌ಖಾನ್‌ಗೆ ಕೊಟ್ಟಿರುವ ಹಣವನ್ನು ವಾಪಸ್ ಪಡೆಯುವುದು ಮಾತ್ರ ಮುಖ್ಯ ಆಗಿರುತ್ತದೆ. ಹಾಗಾಗಿ ಅವರೇ ನಿಮ್ಮಂತಹ ಅಮಾಯಕರ ಕೈಗೆ ಈ ಪತ್ರ ಸಿಗುವಂತೆ ಮಾಡಿ, ಬಾಲಕ್ಕೆ ಬೆಂಕಿ ಹಚ್ಚಿರುತ್ತಾರೆ. ಎಲ್ಲ ಸುಟ್ಟ ಮೇಲೇ ಆಗಿರುವ ತಪ್ಪಿನ ಪರಿಣಾಮ ನಮ್ಮ ಸೋ ಕಾಲ್ಡ್ ಕನ್ನಡಿಗರಿಗೆ ಆಗಬಹುದು…..”
  ದಿನೇಶ್ ಕುಮಾರ್ ಅವರು ಅಮೀರ್ ಖಾನ್ ಪತ್ರವನ್ನು ತಮ್ಮ ಫೇಸ್ ಬುಕ್ ನಲ್ಲಿ ಬಹಿರಂಗಪಡಿಸಿದಾಗ ಕನ್ನಡ ಚಲನಚಿತ್ರರಂಗದ ಸೂಕ್ಷ್ಮ ಸಂವೇದಿ ನಿರ್ದೇಶಕರಲ್ಲಿ ಒಬ್ಬರಾಗಿರುವ ಬಿ.ಸುರೇಶ ಅವರು ಪ್ರತಿಕ್ರಿಯಿಸಿದ ರೀತಿ ಇದು. ಡಬ್ಬಿಂಗ್ ಬೇಡ ಎನ್ನುವ ವಾದಕ್ಕೆ ಜಾಗತೀಕರಣ, ಸಂಸ್ಕೃತಿ, ಕನ್ನಡ ಭಾಷೆ, ಹೊಟ್ಟೆಪಾಡು, ಉದ್ಯಮ ಇತ್ಯಾದಿ ಎಲ್ಲವನ್ನೂ ಬಳಕೆ ಮಾಡಿ ಎಲ್ಲವೂ ವ್ಯರ್ಥವಾದ ನಂತರ ಈಗ ಡಬ್ಬಿಂಗ್ ವಿಷಯ ಮಾತಾಡೋದೇ ತಪ್ಪು ಅನ್ನೋ ಅಪ್ರಜಾಸತ್ತಾತ್ಮಕ ನಿಲುವಿಗೆ ಸಿನಿಮಾ ಮಂದಿ ತಲುಪಿರುವುದು ದುರಂತ. ಬೀಸು ಅಂಥವರಿಂದ ಇಂಥ ವಿವೇಚನಾರಹಿತ ಬೀಸುಮಾತನ್ನು ನಿರೀಕ್ಷಿಸಿರಲಿಲ್ಲ.

  ಪ್ರತಿಕ್ರಿಯೆ
 2. sunil

  Hi B Suresh ,
  I don’t know what made you to talk like this.
  English,French,Chinese,Tamil,Hindi,Telugu etc like most of the langauges allowed dubbing, still they have great market because of their quality work and you people are forcing us to watch the same,shameless.

  ಪ್ರತಿಕ್ರಿಯೆ
 3. ರೋಹಿತ್

  ತೆಕ್ಕಾರ್, ಬಿ.ಸುರೇಶ್ ನೀಡಿದ ಪ್ರತಿಕ್ರಿಯೆಯನ್ನು ಓದಿದಾಗ ನನಗೂ ಹಾಗೆ ಅನಿಸುವುದು. ಏಜೆಂಟ್್ಗಳಲ್ಲದೇ ಆ ಪತ್ರವನ್ನು ಬಹಿರಂಗಗೊಳಿಸಿದ್ದು ಯಾರು? ಮತ್ತೂ ಹೇಗೆ? ಜಾಗತೀಕರಣ, ಸಂಸ್ಕೃತಿ, ಕನ್ನಡ ಭಾಷೆ, ಹೊಟ್ಟೆಪಾಡು, ಉದ್ಯಮ ಇವೆಲ್ಲವೂ ನಿಮಗೆ ವ್ಯರ್ಥ ಉತ್ತರಗಳಾಗಿ `ಸೂಕ್ಷ್ಮ ಸಂವೇದಿ ನಿರ್ದೇಶಕ’ರಲ್ಲಿ ಕಂಡಿರುವಂತೆ ಎಲ್ಲ ಕಲಾವಿದ, ತಂತ್ರಜ್ಞರಲ್ಲೂ ಕಾಣಬಹುದು. ಕಾಣುತ್ತೀರ ನೀವುಗಳು. ಕೂತಲ್ಲಿಯೇ ಕೂಳು ಬೀಳುವುವುದರಿಂದ ಮೈಯ ಕೊಬ್ಬು ಹೆಚ್ಚಿ ಆಪರೇಷನ್ ಮಾಡಿಸಿಕೊಂಡನಂತೆ ಸಿರಿವಂತನೊಬ್ಬ. ಆ ಸಿರಿವಂತನ ದಾರಿಯಲ್ಲಿ ನಿಮ್ಮಂತವರು ಕಾಣಸಿಗುತ್ತಾರೆ. ಕೊಬ್ಬು ಹೆಚ್ಚಾಗಿದರಿಂದ ಚೇಷ್ಠೆ ಮಾಡುವುದನ್ನು ನೀವು ನಿಮ್ಮ ಪೋಷಕರ ವೃಂದ ಬಿಟ್ಟಿಲ್ಲ. ಮೊದಲು ಬಿಡಿ. ಡಬ್ಬಿಂಗ್ ಅಂದ್ರೆ ಏನು? ಅದನ್ನು ಯಾಕೆ ವಿರೋಧಿಸಬೇಕು? ಯಾಕೆ ಸ್ವಾಗತಿಸಬೇಕು? ಎಂದು ಎಷ್ಟೋ ಮಂದಿಗೆ ತಿಳಿದಿಲ್ಲ. ಅದನ್ನು ಮೊದಲು ಮಾಡಿ. ಸಮೀಕ್ಷೆಯನ್ನು ನಡಿಸಿ. ಕೊಬ್ಬಿದ ಮೂರುಮುಕ್ಕಾಲು ಜನ ಕೂತು ಮೂನ್ನೂರೈವತ್ತು ಕೋಟಿ ವ್ಯವಹಾರ ಕುರಿತು ಮಾತನಾಡುತ್ತ ಕಾಲಹರಣ ಮಾಡಬೇಡಿ. ಕೋಟಿಯನ್ನು ಹೇಗೆ ಗಳಿಸಬೇಕೆಂದು ಸರ್ವತಾ ಮೈಬಗ್ಗಿಸಿ ದುಡಿಯುವುದನ್ನು ಕಲಿಯಿರಿ…
  let us come to the point once again again…. ಬನ್ನಿ ಸಮೀಕ್ಷೆ ನಡಿಸಿ… ಡಬ್ಬಿಂಗ್ ಬೇಕೆ? ಬೇಡವೇ ಎಂದು?

  ವಾದ-ವಿವಾದಕ್ಕೆಂದೇ ಇರುವ `ಜುಗಾರಿ ಕ್ರಾಸ್’ ವೇದಿಕೆಯಲ್ಲಿ ಬರೀ ವಿವಾದ ಪೂರಿತ ಚರ್ಚೆಗಳೇ ಸಾಗುತ್ತಿರುವುದು ಯಾಕೆ? ಡಬ್ಬಿಂಗ್ ಬೇಕೆನ್ನುವುದು ನಿಮ್ಮ ನಿಲುವುದಾದರೆ ಚರ್ಚೆ ಮಾಡುವುದಾದರು ಯಾಕೆ? ಪ್ರತಿ ಬರಿಯೂ ನೀವು ಡಬ್ಬಿಂಗ್ ಪರರ ಕುರಿತೇ ಲೇಖನಗಳನ್ನು ಪ್ರಕಟಿಸಿದೀರಿ.
  ಡಬ್ಬಿಂಗ್ ಬೇಕಾದರೆ ಒಂದು ಒಕ್ಕೂಟವನ್ನು ಮಾಡಿಕೊಂಡು ಚರ್ಚಿಸಲಿ… ಒಂದು ದನಿ, ಕಾವ್ಯ, ವಿಚಾರಮಂಥನ – ಹೀಗೆ ಹಲವು ಕನಸುಗಳತ್ತಾ ಬೆನ್ನತ್ತಿ ಹೋಗುವ ಅವಧಿ ಮೇಲಿರುವ ಅಭಿಮಾನ ಕುಸಿಯುವಂತೆ ಮಾಡಬೇಡಿ.
  – ರೋಹಿತ್

  ಪ್ರತಿಕ್ರಿಯೆ
  • G

   @rohith
   ಡಬ್ಬಿಂಗ್ ಪರ ಇರುವ ಲೇಖನ ಇತ್ಯಾದಿಗಳನ್ನು ಗಮನಕ್ಕೆ ತಂದರೆ ಖಂಡಿತಾ ಪ್ರಕಟಿಸುತ್ತೇವೆ

   ಪ್ರತಿಕ್ರಿಯೆ
 4. jnanendra kumar

  ರೋಹಿತ್, ನಿಮ್ಮ ಮಾತುಗಳನ್ನು ಓದಿದಾಗ ನಮ್ ಮಲೆನಾಡು ಕಡೆಯ ಒಂದು ಗಾದೆ ನೆನಪಿಗೆ ಬಂತು. ಹಡೀಲಾಗದವಳು ಹಡೆದರೆ ಮನೆ ತುಂಬಾ ಗಲೀಜಂತೆ. ನಿಮ್ಮ ಪ್ರತಿಕ್ರಿಯೆಯ ಧಾಟಿಯೇ ಸರಿಯಿಲ್ಲ. ಪತ್ರ ಬಹಿರಂಗವಾಗೋದಕ್ಕೆ ಏಜೆಂಟರುಗಳೇ ಬೇಕಾಗಿಲ್ಲ. ಈ ವಿವಾದದ ಕುರಿತು ಕುತೂಹಲ ಇರುವ ಯಾರು ಬೇಕಾದರೂ ತಮಗೆ ಸಿಕ್ಕಿದ ಮಾಹಿತಿಯನ್ನು ಬಹಿರಂಗಪಡಿಸಬಹುದು. ಓಬಿರಾಯನ ಕಾಲದಲ್ಲಿ ನಾವಿಲ್ಲ, ಇದು ಮಾಹಿತಿಯುಗ. ಪತ್ರ ಹೇಗೆ ಬಹಿರಂಗ ಆಯ್ತು ಅನ್ನೋದಕ್ಕಿಂತ ಅದರ Text ಬಗ್ಗೆ ಬಿ.ಸುರೇಶರಂಥ ಹಿರಿಯರು ಮಾತಾಡಬೇಕಿತ್ತು, ಮಾತಾಡಲಿಲ್ಲ. ಬದಲಾಗಿ ಅವರಿಗೆ ಪತ್ರ ಬಹಿರಂಗಗೊಳಿಸಿದವರು ಬಂಗಾರು ಲಕ್ಷ್ನಣ್ ಅವರಿಗೆ ಸಮಾನವಾಗಿ ಕಂಡರು. ಇದು ವೈಚಿತ್ರ್ಯ.
  ಇನ್ನು ಡಬ್ಬಿಂಗ್ ಬೇಕು ಅನ್ನುತ್ತಿರುವವರು ಮೂರೂ ಮುಕ್ಕಾಲು ಮಂದಿ, ಅವರೆಲ್ಲರೂ ಕೊಬ್ಬಿದವರು, ಚೇಷ್ಠೆ ಮಾಡುವವರು, ಸಿರಿವಂತರು ಅನ್ನುವ ನಿಮ್ಮ ಘೋಷಣೆಯೇ ಹಾಸ್ಯಾಸ್ಪದ. ನಾವುಗಳೆಲ್ಲ ನಮ್ಮ ಹೊಟ್ಟೆಪಾಡಿಗಾಗಿ ಹಗಲಿರುಳು ದುಡಿಯುವವರು. ನಾವೀಗ ಪ್ರಶ್ನೆ ಎಸೆಯುತ್ತಿರುವುದು ವರ್ಷಕ್ಕೆ ಹತ್ತಾರು ಕೋಟಿ ಇನ್ ಕಮ್ ಟ್ಯಾಕ್ಸ್ ಕಟ್ಟುತ್ತಿರುವ ಗಾಜಿನಮನೆಯಲ್ಲಿ ಕೂತವರಿಗೆ. ಇದು ನಿಮಗೆ ಅರಕೆಯಾಗದಿದ್ದರೆ ನಮ್ಮನ್ನೇ ಸಿರಿವಂತರೆಂದು ಹಳಿಯಿರಿ ಪರವಾಗಿಲ್ಲ, ನಾವು ಹಣಕ್ಕಲ್ಲವಾದರೂ ವಿಚಾರಕ್ಕೆ ಸಿರಿವಂತರು. ಸ್ಪರ್ಧೆಗೆ ಒಡ್ಡಿಕೊಳ್ಳಲು ಹೆದರಿ ರಕ್ಷಣೆಗಾಗಿ ನ್ಯಾಯಬಾಹಿರ, ಅಪ್ರಜಾಸತ್ತಾತ್ಮಕ, ಅಸಂವಿಧಾನಿಕ ಮಾರ್ಗ ತುಳಿಯುತ್ತಿರುವ ಬೌದ್ಧಿಕ ದಾರಿದ್ರ್ಯವಂತರೇನೂ ಅಲ್ಲ.
  ಅವಧಿಯಲ್ಲಿ, ಇತರೆಡೆಗಳಲ್ಲಿ ಯಾಕೆ ಡಬ್ಬಿಂಗ್ ಪರವಾದ ನಿಲುವುಗಳೇ ಹೆಚ್ಚು ಪ್ರಕಟವಾಗುತ್ತಿದೆ ಎಂದರೆ ಅದಕ್ಕೆ ಕಾರಣ ಬಹುಜನರು ಡಬ್ಬಿಂಗ್ ಬಯಸುತ್ತಿದ್ದಾರೆ ಎಂಬುದನ್ನೇ ಸೂಚಿಸುತ್ತದೆ. ಇದು ಕಾಮನ್ ಸೆನ್ಸ್. ಡಬ್ಬಿಂಗ್ ಬೇಡ ಎಂದು ಬಾಯಿಹರಿದುಕೊಂಡವರಿಗೆ ಈಗ ವಾದಕ್ಕೆ ಏನೂ ಸಿಗದೆ ನಿಮ್ಮಂತೆ, ಸುರೇಶರಂತೆ ವೈಯಕ್ತಿಕ ನಿಂದನೆಗೆ ತೊಡಗಿದ್ದೀರಿ. ಡಬ್ಬಿಂಗ್ ಬೇಕು ಎಂದು ಒಬ್ಬ ಗ್ರಾಹಕನಾಗಿ ಕೇಳುವವನಿಗೂ ಅಮೆರಿಕನ್ ಏಜೆಂಟು, ಅಮೀರ್ ಖಾನ್ ಏಜೆಂಟು, ಪುರೋಹಿತಶಾಹಿ ಇತ್ಯಾದಿ ತಿಕ್ಕಲು ಹಣೆಪಟ್ಟಿಗಳನ್ನು ಅಂಟಿಸಿ ವಿಕೃತ ಆನಂದ ಪಡೆಯುತ್ತಿದ್ದೀರಿ.
  ಕಡೆಯದಾಗಿ ಕೋಟಿ ಗಳಿಸುವ ಗೀಳು ರಾಘವೇಂದ್ರರಿಗಾಗಲೀ, ನಮಗ್ಯಾರಿಗಾಗಲೂ ಇಲ್ಲ. ಕೋಟಿ ಗಳಿಸಿ ಕೊಬ್ಬಿರುವವರ ಬುಡ ಅಲುಗಾಡುತ್ತಿರುವುದರಿಂದ ಈ ಥರ ಆರೋಪಗಳು ಕೇಳಿಬರುತ್ತಿದೆ, ಅಷ್ಟೆ. ಮುಂದೆ ಸಾರ್ವಜನಿಕ ವೇದಿಕೆಗಳಲ್ಲಿ ಪ್ರತಿಕ್ರಿಯಿಸುವಾಗ ವೈಯಕ್ತಿಕ ನಿಂದನೆ, ವಿಕೃತ ಹೋಲಿಕೆ-ರೂಪಕಗಳನ್ನು ಬಿಟ್ಟುಬಿಡಿ. ಇಲ್ಲವಾದಲ್ಲಿ ನಾನು ಕೊಟ್ಟ ರೀತಿಯ ಉತ್ತರಗಳೇ ನಿಮಗೆ ದೊರಕುತ್ತವೆ. ನ್ಯೂಟನ್ನನ್ನ ಮೂರನೇ ನಿಯಮ ಇರಬೇಕು, ಅಲ್ವಾ?

  ಪ್ರತಿಕ್ರಿಯೆ
 5. ರೋಹಿತ್

  ಜ್ಞಾನೇಂದ್ರ ಕುಮಾರ್, ನೀವು ವಿಚಾರವಂತರು. ಹಗಲಿರುಳು ಫೇಸ್‌ಬುಕ್‌ನಲ್ಲಿ ದುಡಿಯುವವರು. ಹಣ್ಣಕ್ಕಲ್ಲದಿದ್ದರೂ ವಿಚಾರಶೀಲತೆಯನ್ನು ಹರಡುತ್ತಿರುವವರು.
  ನಿಮಗೆ ಸಾಷ್ಟಾಂಗ ನಮಸ್ಕಾರಗಳು.
  ಕೊಬ್ಬು, ವಿಕೃತಿ, ಚೇಷ್ಠೆಗಳನ್ನು ನಿಮ್ಮ ಲೇಖನದಲ್ಲಿ ಸರಾಗವಾಗಿ ಪ್ರಸ್ತುತ ಪಡಿಸಿದ್ದೀರಿ. ಮೂರನೇ ನಿಮಯವು ನಿಮಗೂ ಒಳಪಡುತ್ತದೆ (For every action there is an equal and opposite reaction) ಎಂಬುದನ್ನು ಮರೆಯಬೇಡಿ. ಸೆನ್ಸ್ ಇಲ್ಲದ ನಿಮ್ಮ ಪ್ರತಿಕ್ರಿಯೆಯಲ್ಲಿ ಕಾಮನ್ ಎಂಬುದು ಎಗ್ಗಿಲ್ಲದೆ ಉಳಿದುಬಿಟ್ಟಿದೆ.
  ಬೌದ್ಧಿಕ ದಾರಿದ್ರ್ಯವಂತರಲ್ಲದ ತಾವು ಒಂದು ಸಿನಿಮಾಕ್ಕೆ ರೂಪಕೊಡುವಷ್ಟು ಸಹಜ ತಾಳ್ಮೆ ನಿಮಗಿದೆಯೇ?
  ಡಬ್ಬಿಂಗ್ ಬೇಕೆನ್ನುವ ನಿಮ್ಮ ವಿತಂಡವಾದವನ್ನು ಏನೆನ್ನಬೇಕೋ ನಾಕಣೆ.
  Words are only painted fire; a look is the fire itself.
  ಈ ಮೇಲಿನ ವಾಕ್ಯವನ್ನೊಮ್ಮೆ ಓದಿ… ಆತ್ಮಾವಲೋಕನ ಮಾಡಿಕೊಳ್ಳಿ..

  ಪ್ರತಿಕ್ರಿಯೆ
 6. Dinesh Kumar S.C.

  ಪ್ರಿಯ ರೋಹಿತ್, ರಾಘವೇಂದ್ರ ತೆಕ್ಕಾರ್ (ತೆಕ್ಕಾರ್ ಅವರು ಟೆಲಿಕಾಂ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ) ಅವರ ಪ್ರತಿಕ್ರಿಯೆಗೆ ನೀವು ಕೊಟ್ಟ ಉತ್ತರ ಹಾಗು ಜ್ಞಾನೇಂದ್ರ ಕುಮಾರ್ (ಜ್ಞಾನೇಂದ್ರ ಪತ್ರಕರ್ತರು) ಅವರು ನಿಮಗೆ ಕೊಟ್ಟ ಉತ್ತರಗಳನ್ನು ಗಮನಿಸಿದೆ. (ನೀವು ಯಾವ ಕ್ಷೇತ್ರದಲ್ಲಿದ್ದೀರಿ ಎಂಬುದು ನನಗೆ ಗೊತ್ತಿಲ್ಲ ಕ್ಷಮಿಸಿ.) ಎಲ್ಲ ಗಮನಿಸಿದ ಮೇಲೆ ನಿಮ್ಮ ಕುರಿತು ಮರುಕ ಹುಟ್ಟುತ್ತಿದೆ. ರಾಘು ಅವರಿಗಾಗಲಿ, ಜ್ಞಾನೇಂದ್ರ ಅವರಿಗಾಗಲೀ ಉತ್ತರ ಕೊಡುವ ಗೋಜಿಗೆ ಹೋಗದೆ ಬೀದಿನಲ್ಲಿಯ ಬಳಿಯ ಜಗಳಗಂಟಿಯರು ಬೈದಾಡುವಂತೆ ಮಾತಾಡುವುದಕ್ಕೆ ನಿಮ್ಮ ಪ್ರತಿಭೆ ಸೀಮಿತವಾಗಿದೆ. ಡಬ್ಬಿಂಗ್ ಕುರಿತ ಚರ್ಚೆ. ಡಬ್ಬಿಂಗ್ ಬೇಕೋ ಬೇಡವೋ ಎಂಬ ಮೂಲಪ್ರಶ್ನೆಗೂ ನಿಮ್ಮಲ್ಲಿ ಉತ್ತರವಿಲ್ಲ. ಯಾಕೆಂದರೆ ನೀವು ಚರ್ಚೆಯನ್ನು ದಾರಿತಪ್ಪಿಸಲು ವೈಯಕ್ತಿಕ ನಿಂದನೆಯ ದಾರಿ ಹಿಡಿದವರು. ನಿಮ್ಮಂಥ ವಿತಂಡವಾದಿಗಳಿಂದ ಚರ್ಚೆಯೂ ಅಸಾಧ್ಯ. ಪ್ರಜಾಪ್ರಭುತ್ವದಲ್ಲಿ ಚರ್ಚೆಗಳಿಂದ ಎಲ್ಲ ಸಮಸ್ಯೆಗಳೂ ಬಗೆಹರಿಯಬಹುದು ಎಂಬುದು ನನ್ನಂಥವರ ಆಶಾವಾದಿ ನಿಲುವು. ಆದರೆ ಚರ್ಚೆಯನ್ನು ಜಗಳದ ಮೂಲಕ ಕೊನೆಗೊಳಿಸಲೆಂದೇ ನಿಮ್ಮಂಥವರು ಕಾಯುತ್ತಿರುತ್ತಾರೆ, ಇದು ಅನಪೇಕ್ಷಣೀಯ.
  Words are only painted fire; a look is the fire itself ಎನ್ನುವಂಥ ಮಾತನ್ನು ಚರ್ಚೆಗೆ ಇಡುವ ಮೊದಲು ಚೇಷ್ಠೆ, ಕೊಬ್ಬು, ಕೂಳು, ಆಪರೇಷನ್ನು ಮಣ್ಣು-ಮಸಿ ಮಾತಾಡಿ ಪೊಗರು ತೋರುವ ಬದಲು ಸೆನ್ಸಿಬಲ್ ಆಗಿ ನಿಮ್ಮ ಅಭಿಪ್ರಾಯ ಹೇಳಬಹುದಿತ್ತು. ಬಹುಶಃ ನಿಮಗೆ (ನಿಮ್ಮ ಭಾಷೆಯಲ್ಲೇ ಹೇಳುವುದಾದರೆ) ಕೂತಲ್ಲಿಯೇ ಕೂಳು, ಮತ್ತೊಂದು ಉದುರುತ್ತಿರುವುದರಿಂದ ನಿಮಗೆ ಇಂಥ ಆರೋಗ್ಯಕರ ಚರ್ಚೆಯೂ ಬೇಕಾಗಿಲ್ಲವೆನಿಸುತ್ತದೆ. ನಿಮಗೆ ನಿಮ್ಮ ಅಭಿಪ್ರಾಯವನ್ನು ಎಲ್ಲರೂ ಒಪ್ಪಿಕೊಳ್ಳುವುದಷ್ಟೇ ಬೇಕು, ಬೇರೆಯವರ ಅಭಿಪ್ರಾಯಗಳನ್ನು ಕನಿಷ್ಠ ಪಕ್ಷ ಕೇಳುವ ಮನಸ್ಥಿತಿಯೂ ಇಲ್ಲ. ಇಂಥವರನ್ನೇ ನಾವು ಫ್ಯಾಸಿಸ್ಟರೆಂದು ಕರೆಯುವುದು. ಮುಂದೆ ಈ ಪೋಸ್ಟ್ ಗೆ ಕಮೆಂಟು ಹಾಕುವಾಗಲಾದರೂ ಇಲ್ಲಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡಲು ಪ್ರಯತ್ನಿಸಿ. ನಿಮಗೆ ನಮ್ಮನ್ನು ಬರೀ ದೂಷಿಸುವುದಷ್ಟೇ ಉದ್ದೇಶವಾದರೆ ನಮ್ಮ ವಿಳಾಸ, ದೂರವಾಣಿ ಸಂಖ್ಯೆ ಇತ್ಯಾದಿ ಎಲ್ಲ ಮಾಹಿತಿಗಳನ್ನು ಕೊಡುತ್ತೇವೆ, ನೇರವಾಗಿ ಮುಖತಃ ಅದೆಲ್ಲವನ್ನೂ ಮಾಡಬಹುದು. ನಮ್ಮ ಕಡೆಯಿಂದ ಸದಾ ಸುಸ್ವಾಗತ. ಇಂಥ ಸಾರ್ವಜನಿಕ ವೇದಿಕೆಗಳಲ್ಲಿ ಹೀಗೆ ಪರಸ್ಪರ ಕೆಸರು ಎರಚಾಡುವುದು ಬೇಡ. ಇದು ನನ್ನ ಕಳಕಳಿಯ ಮನವಿ.

  ಪ್ರತಿಕ್ರಿಯೆ
 7. ರಾಘವೇಂದ್ರ ತೆಕ್ಕಾರ್

  MR.ROHITH.ನಿಮ್ಮ ನಿಜವಾದ ಹೆಸರಿನಲ್ಲಿ ನೀವು ಕಾಮೆಂಟು ಮಾಡುತ್ತಿರುವದು ಅನ್ನುವದನ್ನು ನಾ ನಂಬಲಾರೆ. ಯಾರೋ ಕಲಾತ್ಮಕ ನಿರ್ದೇಶಕರೇ ತಮ್ಮಲ್ಲಿ ಪರಕಾಯ ಪ್ರವೇಶ ಮಾಡಿರಬಹುದು ಎಂಬುದು ನನ್ನ ಗುಮಾನಿ. ನನ್ನ ಹೆಸರು ವಿಳಾಸ ಬೇಕಾದಲ್ಲಿ ಬೇಕಾದ ಕಡೆ ನಾ ಕೊಡಬಲ್ಲೆ. ಇರಲಿ, ಒಂದು ವಿಷಯ ಗೊತ್ತಾ ಬಿ.ಸುರೇಶರು ಬರಿಯ ಚಾಟಿ ಏಟು ಬೀಸಲು ಹತ್ತಿದ್ದಾರೆ. ಕಿರುತೆರೆ ಸಂಘಟನೆಗಳ ಪಟಾಲಂ ಝಾನ್ಸಿರಾಣಿ ಸೀರಿಯಲ್ ಡಬ್ಬಿಂಗ್ ವಿಷಯದಲ್ಲಿ ಜೀ ಟಿ ಕಚೇರಿಯಲ್ಲಿ ಗೂಂಡಾಗಿರಿ ನಡೆಸಿದ್ದು ತಮಗೆ ಮರೆತೇ ಹೋಯ್ತೇನೋ? ವಿಚಾರವಂತರಾದ ತಾವು ಇದನ್ನು ಇಂಗ್ಲಿಷ್ ಪದಪುಂಜಗಳಿಂದ, ತಮ್ಮ ಅಂತರ್ ದೃಷ್ಟಿಯಿಂದ ಹೇಗೆ ವರ್ಣಿಸುವಿರೋ ಎಂಬುದು ನನ್ನಂಥವನ ಅಮಾಯಕ ಕುತೂಹಲ. ಇರಲಿ ಆ ವಿಷಯ, ನಾನು ಆಭಿಪ್ರಾಯಭೇದ ವ್ಯಕ್ತಪಡಿಸುತಿದ್ದೇನೆ ಅದನ್ನ ಕೇಳೋ ಸೌಜನ್ಯವೂ ಇಲ್ಲಾ ಅಂದ್ರೆ ಹೇಗೆ? ರೋಹಿತ್…..!!!!! ನೀವು ನನ್ನನ್ನು ಸಿರಿವಂತನೆಂದು ಕೊಬ್ಬಿದವನೆಂದು ಕರೆದಿರಿ, ನೀವೇನು ನನ್ನ ಬಾವಮೈದುನನೇ? ನನ್ನ ಬಗ್ಗೆ, ನನ್ನ ದೇಹದ ಕೊಬ್ಬಿನ ಬಗ್ಗೆ, ನನ್ನ ಪೋಷಕರ ಬಗ್ಗೆ ಅಷ್ಟು ನಿಖರವಾಗಿ ಮಾತನಾಡಲು? ಸೆನ್ಸ್ ಅನ್ನೋದರ ಪದದ ಅರ್ಥ ತಿಳಿಯದ ತಮಗೆ ಒಂದು ಕಾಮನ್ ಪ್ರಶ್ನೆ. ಡಬ್ಬಿಂಗ್ ಬೇಡ ಅಂದ್ರೆ ಯಾಕ್ ಬೇಡ ಅನ್ನೋದನ್ನ ಹಿರಿಯರು, ಎಲ್ಲರೂ ಒಪ್ಪುವಂತೆ ಮಾತಾಡಿ. ಸುಮ್ಮನೆ ಕೊಬ್ಬಿನ ಮಾತುಗಳನ್ನು ಆಡಿ ಬತ್ತಳಿಕೆಯಲ್ಲಿ ಇನ್ನೇನೂ ಇಲ್ಲ ಎಂಬುದನ್ನು ತೋರಿಸಿಕೊಳ್ಳಬೇಡಿ. ಹಾಗೆಯೇ ಒಂದು ಮಾತು ತಮಗೆ ಹೇಳಲೇಬೇಕು. ತಮ್ಮ ಮಾತುಗಳೆಲ್ಲವೂ ಆಜ್ಞೆ ಮಾಡುವ, ಆದೇಶ ನೀಡುವ ಹಾಗಿದೆ. (ಹಾಗೆ ಮಾಡಿ, ಹೀಗೆ ಮಾಡಿ, ಆತ್ಮಾವಲೋಕನ ಮಾಡಿಕೊಳ್ಳಿ… ಇತ್ಯಾದಿ) ಈ ಅಹಂ ನಿಮಗೆ ಬಂದಿದ್ದು ಎಲ್ಲಿಂದ. ನೀವು ಉಲ್ಲೇಖಿಸಿರುವ ಕೊಲೆಸ್ಟ್ರಾಲ್ ಇದಕ್ಕೆ ಕಾರಣವಿರಬಹುದೇ. ಒಬ್ಬ ಫಿಜಿಷಿಯನ್ ರನ್ನು ದಯವಿಟ್ಟು ತುರ್ತಾಗಿ ಸಂಪರ್ಕಿಸಿ, ಇದು ನನ್ನ ಆದೇಶವೂ ಅಲ್ಲ, ಸೂಚನೆಯೂ ಅಲ್ಲ, ಒಂದು ಕಾಳಜಿಯುಕ್ತ ಮನವಿಯಷ್ಟೆ. ನಮಸ್ಕಾರ.

  ಪ್ರತಿಕ್ರಿಯೆ
 8. ಕನ್ನಡದ ಕಂದ ಸ್ವಾಭಿಮಾನಿ ಕನ್ನಡಿಗ

  ಡಬ್ಬಿಂಗ್ ಬೇಡ ಅನ್ನುವವರಿಗೆ ಬಹಿರಂಗ ಪತ್ರ !!
  ಕನ್ನಡಿಗ ಮತ್ತು ಕನ್ನಡ ಇರುವುದರಿಂದನೇ ಕನ್ನಡ ಚಿತ್ರ ರಂಗ ನೆನಪಿಟ್ಟುಕೊಳ್ಳಿ !ಅದಕ್ಕೆ ಅಣ್ಣಾವ್ರು ಅಭಿಮಾನಿಗಳನ್ನ ದೇವರುಗಳು ಅಂತ ಕರೆಯೋದು.
  ೧.ಡಿಸ್ಕವರಿ,ಪೋಗೋ,ಕಾರ್ಟೂನ್ ನೆಟ್ವರ್ಕ್,ಹಿಸ್ಟರಿ,ಅನಿಮಲ್ ಪ್ಲಾನೆಟ್,.ಎಚ್ ಬೀ ಓ .ಇನ್ನಿತರ ಜ್ಞಾನವನ್ನು ಬಿತ್ತರಿಸುವ ಚಾನೆಲ್ಗಳು,ಕಾರ್ಯಕ್ರಮಗಳು ಕನ್ನಡದಲ್ಲಿ ನೋಡಿದರೆ ತಪ್ಪಾ?ಈಗಾಗಲೇ ತಮಿಳು ತೆಲುಗು ,ಹಲವು ಭಾಷೆಗಳಲ್ಲಿ ಹಲವು ಮನೋರಂಜನಾ ಕಾರ್ಯಕ್ರಮಗಳು ಮತ್ತು ಚಾನೆಲ್ಗಳು ಬಿತ್ತರ ಗೊಂಡಿದೆ ಹಾಗಾದರೆ ಆ ತೆಲುಗು ತಮಿಳು ಚಿತ್ರರಂಗ ,ಕಿರುತೆರೆ ,ಸಾಯೋಲ್ವಾ?!
  ಯಾರು ತಮಿಳು,ತೆಲುಗು,ಹಿಂದಿ ಸಿನೆಮಾನ ಕನ್ನಡಕ್ಕೆ ಡಬ್ ಮಾಡಿ ಅಂತೇನು ಹೇಳ್ತಾ ಇಲ್ಲ !!! .ಬೇಕಾಗಿರುವುದು ಜ್ಞಾನವುಳ್ಳ ಕಾರ್ಯಕ್ರಮಗಳು ಕನ್ನಡಕ್ಕೆ ಬರಬೇಕು.ಇಡೀ ಕರ್ನಾಟಕವೇ ಡಬ್ಬಿಂಗ್ ಬೇಕು ಅಂತ ಹೇಳ್ತಾ ಇದೆ .ಪ್ರೇಕ್ಷಕನ ಹಕ್ಕನೂ ಕೊಲೆ ಮಾಡೋಕ್ಕೆ ಈ ನನ್ಮಕ್ಳು ಯಾರು !??
  ೨.ಕನ್ನಡದಲ್ಲಿ ಸ್ವಮೇಕ್ ಮತ್ತು ಅವಿಷ್ಕಾರಯುತ ಕನ್ನಡ ಸಿನೆಮಾ ಮಾಡಿದ್ರೆ ಯಾರು ನೋಡೋಲ್ಲ ಹೇಳಿ ?ಬರೀ ರಿಮೇಕ್ ಮಾಡೋದೇ ಆಗೋಯ್ತು ?
  ೩.ಈ ತರಹ ಜ್ಞಾನ ಬಿತ್ತರಿಸುವ ಕಾರ್ಯಕ್ರಮಗಳು ,ಚಾನೆಲ್ಗಳು ಡಬ್ ಆದ್ರೆ ಕನ್ನಡದ ಭಾಷೆ ಬೆಳೆಯುತ್ತೆ ಇದು ೧೦೦೦೦೦೦%%%% ಸತ್ಯ ಮತ್ತು ತಮ್ಮದೇ ಭಾಷೆಯಲ್ಲಿ ಜ್ಞಾನ ಪಡಕೊಬಹುದು….ಅದನ್ನ ವಿರೋಧಿಸುವುದಕ್ಕೆ ಈ ಡಬ್ಬ ನನ್ಮಕ್ಳು ಯಾರು ???
  ೪.ಕನ್ನಡ ಚಿತ್ರ ರಂಗದಿಂದ,ಕಿರುತೆರೆಇಂದ , ಏನು ಕನ್ನಡ ,ಕನ್ನಡಿಗರು ಹುಟ್ಟಿಲ್ಲ !.ಡಬ್ಬಿಂಗ್ ಬೇಡ ಅನ್ನುವವರಿಗೆ ಎಷ್ಟು ಕನ್ನಡ,ಕನ್ನಡಿಗರ ಕಾಳಜಿ ಇದೆ ಹೇಳಿ ?ಎಲ್ಲಾ ಹಣಕ್ಕೋಸ್ಕರ !!ಬರೀ ಸ್ವಾರ್ಥಿಗಳು !!
  ೫.ಇಂತಹ ಮಹಾ ಕುರುಡು ಜನರಿಂದಲೇ ಈ ಕನ್ನಡ ಭಾಷೆ ಸೊರಗಿ ಸಾಯುತ್ತಿದೆ.
  ೬.ಇಂತಹ ಕುರುಡು ಮೂರ್ಖ ಜನರಿಂದಲೇ ಕನ್ನಡ ಮನೋರಂಜನಾ ಕ್ಷೇತ್ರಾ ಅಸ್ಥಿಪಂಜರವಾಗುತ್ತಿದೆ …
  ೭.ಒಳ್ಳೊಳ್ಳೆ ಕಾರ್ಯಕ್ರಮಗಳನ್ನ,ಸಿನೆಮಾಗಳನ್ನ ಸ್ವಂತವಾಗಿ ಕನ್ನಡದಲ್ಲಿ ,ಕ್ರೀಯಾತ್ಮಕವಾಗಿ ಮಾಡಿದ್ರೆ ಎಲ್ಲರು ನೋಡ್ತಾರೆ.ಅವಾಗ ಯಾವ ಕಲಾವಿದನು ಬೀದಿಗೆ ಬೀಳೋಲ್ಲ !.
  ೮.ನಿಮ್ಮ ನಿಮ್ಮ ಸ್ವಾರ್ಥಗಲಿಗೊಸ್ಕರ ಕನ್ನಡ ಮತ್ತು ಕನ್ನಡ ಮನೋರಂಜನ ಕ್ಷೇತ್ರವನ್ನು ಕೊಲ್ಲಬೇಡಿ,,

  ಪ್ರತಿಕ್ರಿಯೆ
 9. Harsha

  ಸನ್ಮಾನ್ಯ ರೋಹಿತ್ ಅವರೇ, ಅವರೇ, ಯಾರೋ ದೊಡ್ಡ ಮನುಷ್ಯರ ಅಂತ ಕಾಣುತ್ತೆ ನೀವು. ದಯವಿಟ್ಟು ಬಹಿರಂಗವಾಗಿ ಚರ್ಚೆ ನಡೆಸಿ. ಈ ತರ ಮುಸುಕಿನಲ್ಲಿ ಗುದ್ದಾಟ ನಡೆಸುವುದು ನಿಮಗೆ ಈಗಾಗಲೇ ಇರಬಹುದಾದ ಘನತೆಯನ್ನು ಕುಂದಿಸಬಹುದು. ಡಬ್ಬಿಂಗ್ ಬೇಕೋ ಬೇಡವೋ, ಅದರಿಂದ ನಾಡಿಗೆ, ಭಾಷೆಗೆ ಒಳ್ಳೇದಾಗುತ್ತೋ ಕೆಟ್ಟದಾಗುತ್ತೋ ಬೇರೆ ವಿಷಯ. ಈ ಕುರಿತು ಎಲ್ಲರಿಗೂ ತಮ್ಮ ಅಭಿಪ್ರಾಯ ಹಂಚಿಕೊಳ್ಳೋಕೆ ಅವಕಾಶ ಇದೆ. ಅದಕ್ಕೆ ಎಲ್ಲಿಲ್ಲಿ ಸಾಧ್ಯವೋ ಅಲ್ಲಲ್ಲಿ ವ್ಯಕ್ತಪಸಿಸುತ್ತಿದ್ದಾರೆ. ಫೇಸ್ ಬುಕ್ಕಿನಲ್ಲೇ ಆಗಲೀ ಬೇರೆಲ್ಲೇ ಆಗಲಿ, ಒಂದು ವಿಷಯದ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಂಡು ಅಭಿಪ್ರಾಯ ರೂಪುಗೊಳ್ಳುತ್ತದೆ ಎಂದರೆ ಅದನ್ನು ಕೆಲಸ ಇಲ್ಲದೇ ಕೊಬ್ಬು ಜಾಸ್ತಿಯಾಗಿರುವವರು ಮಾಡುತ್ತಿರುವ ಚೇಷ್ಟೆ ಎಂದು ತೀರಾ ಸರಳೀಕರಿಸಿ ನೋಡುವುದಿದೆಯಲ್ಲ ಇದು ನಿಮ್ಮ ಮನಸ್ಸಿನಲ್ಲಿರಬಹುದಾದ ವಿಕೃತಿಯನ್ನು ಮಾತ್ರ ಸೂಚಿಸುತ್ತದೆ. ಅಷ್ಟಕ್ಕೂ ಡಬ್ಬಿಂಗ್ ಪರವಾಗಿ ಎದ್ದಿರುವ ವಾದಗಳಿಗೆ ಸಮರ್ಥವಾಗಿ ನಿಮ್ಮ ವಿಚಾರಗಳನ್ನು ಮುಂದಿಟ್ಟು ಒಳ್ಳೇ ಚರ್ಚೆಗೆ ನೀವು ಸಹಕರಿಸಬಹುದಿತ್ತು. ಆದರೆ ತೀರಾ ಅಸಹ್ಯವಾಗಿ ಈ ಕುರಿತು ಚರ್ಚೆಗೆ ಇಳಿದಿರುವವರ ವೈಯುಕ್ತಿಕ ನಿಂದನೆಗೆ ಇಳಿದುಬಿಟ್ಟಿದ್ದೀರಲ್ಲ ಇದು ಸರಿಯಾ ಎಂದು ಒಮ್ಮೆ ನೀವೇ ಕೇಳಿಕೊಳ್ಳಿ. Infact, ಇಲ್ಲಿ ಡಬ್ಬಿಂಗ್ ಪರವಾಗಲೀ ವಿರೋಧವಾಗಲೀ ಒಂದು ನಿಲುವನ್ನು ತಳೆಯದೇ ಎರಡೂ ರೀತಿಯಲ್ಲಿ ಯೋಚಿಸುತ್ತಾ ಇಡೀ ಚರ್ಚೆಯನ್ನು ಗಮನಿಸುತ್ತಿರುವ ನನ್ನಂತವರೂ ಇದ್ದಾರೆ. ನಿಮ್ಮಂತಹವರ ಬೇಜವಾಬ್ದಾರಿ ಮತ್ತು ಉಡಾಫೆ ಹಾಗೂ ದಿನೇಶ್ ಹೇಳಿದಂತೆ ಫ್ಯಾಸಿಸ್ಟ್ ಮನೋಭಾವದವರ ಇಂತಹ ತಲೆಯಲ್ಲಿ ವಿಪರೀತ ಕೊಬ್ಬು ತುಂಬಿದ ಮಾತುಗಳು ಈ ಚರ್ಚೆಗೆ ಯಾವುದೇ ರೀತಿ ಉಪಯೋಗಕ್ಕೆ ಬರುವುದಿಲ್ಲ ಎಂದಷ್ಟೇ ಹೇಳಬಯಸುವೆ. ಮತ್ತೆ ಕಮೆಂಟು ಹಾಕುವಾಗ ನೀವು ಮೈಮುರಿದು ಹೇಗೆ ಎಲ್ಲಿ ದುಡಿದು ಕೋಟಿ ಸಂಪಾದಿಸುತ್ತಿದ್ದೀರಿ ಎಂಬ ಒಂದು ಕಿರು ಮಾಹಿತಿಯನ್ನೂ ನೀಡಬೇಕಾಗಿ ಮನವಿ

  ಪ್ರತಿಕ್ರಿಯೆ
 10. ಆಶೋಕ ಶೆಟ್ಟರ್

  ಫೇಸ್ಬುಕ್ ನಲ್ಲಿ ನಾನು ಪ್ರಾರಂಭಿಸಿದ ಥ್ರೆಡ್ ಒಂದರಲ್ಲಿ ಅವಿನಾಶ್ ಕಾಮತ್ ಅವರು ಹಾಕಿದ ಕಾಮೆಂಟ್ ಈ ಒಟ್ಟು ಸಮಸ್ಯೆಯನ್ನು ಒಂದು ಸಮಂಜಸ ಚೌಕಟ್ಟಿನಲ್ಲಿಟ್ಟು ಗ್ರಹಿಸಿದೆ ಎಂದು ನನಗನಿಸಿದ್ದರಿಂದ ಅದನ್ನು ಇಲ್ಲಿ ಕಾಣಿಸುತ್ತಿದ್ದೇನೆ.
  Avinash Kamath
  ಗೆಳೆಯರೇ ನಾನೊಬ್ಬ ಡಬ್ಬಿಂಗ್ ಕಲಾವಿದ. ನಾನು ಎರಡು ಹೊತ್ತಿನ ಊಟ ಮಾಡೋದು ನನ್ನ ಡಬ್ಬಿಂಗ್ ಕೆಲಸದಿಂದ.. ಕನ್ನಡದಲ್ಲಿ ಡಬ್ಬಿಂಗ್ ಶುರುವಾದರೆ, ನನ್ನ ತಮಿಳು-ತೆಲುಗು-ಮಲಯಾಳಿ ಸಹೋದ್ಯೋಗಿಗಳಂತೆ ನಾನು ಇನ್ನಷ್ಟು ಆರ್ಥಿಕ ಉನ್ನತಿಯನ್ನು ಹೊಂದಬಹುದು.. ಇಷ್ಟಾಗಿಯೂ ಕನ್ನಡದಲ್ಲಿ ’ಡಬ್ಬಿಂಗ್’ ಬೇಕೆ ಎನ್ನುವುದರ ಬಗ್ಗೆ ನನ್ನಲ್ಲೇ ದ್ವಂದ್ವಗಳಿವೆ..
  ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಿನೆಮಾಗೃಹಗಳ ಸಂಖ್ಯೆ ತುಂಬ ಕಡಿಮೆ. ಕರ್ನಾಟಕದಲ್ಲಿ ಎಲ್ಲ ಸೇರಿ ಆರು ನೂರಕ್ಕೂ ಹೆಚ್ಚಿನ ಥಿಯೇಟರ್‌ಗಳಿಲ್ಲ.. ಆಂಧ್ರ ಹಾಗೂ ತಮಿಳುನಾಡಲ್ಲಿ ಕ್ರಮವಾಗಿ 1500 ಹಾಗೂ 1700 ಥಿಯೇಟರ್‌ಗಳಿವೆ. ಹೀಗಾಗಿ ಕನ್ನಡದ ಚಿತ್ರ ನಿರ್ಮಾಪಕರಿಗೇ ಚಿತ್ರ ಬಿಡುಗಡೆ ಮಾಡಲು ಸಿನೆಮಾಗೃಹ ಸಿಗುವುದು ಕಷ್ಟ. ಇನ್ನು ಡಬ್ಡ್ ಸಿನೆಮಾಗಳು-ಪರಭಾಷಾ ಸಿನೆಮಾಗಳು ಬಂದರೆ, ಕನ್ನಡ ಸಿನೆಮಾ ತಯಾರಕರು ಹೋಗುವುದೆಲ್ಲಿ? ಇತ್ತೀಚೆಗೆ ಸಿನೆಮಾಗೃಹದ ಸಮಸ್ಯೆಯಿಂದಾಗಿ ಕನ್ನಡದ ನಟರೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿದ್ದು ನಿಮಗೆ ಗೊತ್ತೇ ಇದೆ. ಈ ಸಿನೆಮಾಗೃಹಗಳ ಕೊರತೆಯೇ ಬಹುದೊಡ್ಡ ಸಮಸ್ಯೆ. ಹೀಗಾಗಿ ಕರ್ನಾಟಕದಲ್ಲಿ ಪ್ರಸ್ತುತವಾಗಿ ಡಬ್ಡ್ ಸಿನೆಮಾಗಳ ಅಗತ್ಯವಿಲ್ಲ ಎಂದೇ ಅನಿಸುತ್ತದೆ.
  ಆದರೆ ಹಲವು ನಿರ್ಮಾಪಕರು ಮಾತ್ರ ’ಕನ್ನಡ’ವನ್ನು ’ಉಳಿಸುವುದಕ್ಕಾಗಿ’ ಡಬ್ಬಿಂಗ್ ಬೇಡ ಎನ್ನುತ್ತಾರಲ್ಲ, ಆಗ ಮೈ ಉರಿಯುತ್ತದೆ. It’s just a hogwash..Emotional drama.. ಶುದ್ಧ ಸುಳ್ಳು ಅದು. ಬಹುತೇಕ ನಿರ್ಮಾಪಕರಿಗೆ ಕನ್ನಡದ ಕಿಂಚಿತ್ ಪ್ರೀತಿಯೂ ಇಲ್ಲ… ಅಲ್ರೀ, ಇವರಿಗೆ ತಾಂತ್ರಿಕ ವರ್ಗದಲ್ಲಿ ಚೆನ್ನೈ ಜನರು ಬೇಕು, (ಕರ್ನಾಟಕದಲ್ಲಿ ಸಮರ್ಥರಿಲ್ಲವೇ?) ಸಂಗೀತ ಕೊಡೋಕೆ ರೆಹಮಾನ್ ಬೇಕು (ಅಪ್ಪಟ ಕನ್ನಡ ಪ್ರತಿಭೆಗಳಿಲ್ಲವೇ?), ಹಾಡೋಕೆ ಸೋನು ನಿಗಮ್-ಶ್ರೇಯಾ- ಕುಣಾಲ್ ಗಾಂಜಾವಾಲಾ ಬೇಕು (ರಾಜೇಶ್ ಕೃಷ್ಣನ್, ನಂದಿತಾ, ಪಲ್ಲವಿ ಅರುಣ್ ಮುಂತಾದ ಪ್ರತಿಭೆಗಳು ಯಾರಿಗೆ ಕಮ್ಮಿ?) .. ವಕ್ರಮುಖದ ಹೀರೋಗಳ ಜೊತೆ ಕುಣಿಯಲು, ನಗ್ನರಾಗಲು ಸನ್ನದ್ಧರಾದ ಮುಂಬಯಿ ಬೆಡಗಿಯರು ಬೇಕು (ನಮ್ಮಲ್ಲಿ ಸುಂದರವಾದ ಅಚ್ಚ ಕನ್ನಡತಿಯರಿಲ್ಲವೇ?).. ಮತ್ಯಾಕೆ ಕನ್ನಡ-ಕನ್ನಡ ಅನ್ನೋ ಬರಿ ಬೊಗಳೇ ಮಾತು?.. ಅಷ್ಟಾಗಿಯೂ ಇತ್ತೀಚಿನ ಕನ್ನಡ ಚಲನಚಿತ್ರಗಳಲ್ಲಿನ ಕನ್ನಡವನ್ನು ಕೇಳಿದರೆ ಪರಮಪಾವನ ಪುಲ್ಲು ಅಂತ ಬರೆದವರ ಆತ್ಮಕ್ಕೆ ಶಾಂತಿ ಸಿಗದು! (ಗೋವಿಂದಾಯ ನಮಃ ಸಿನೆಮಾ ನೋಡಿ ಬಂದೆ ಮೊನ್ನೆ).. ಕನ್ನಡ ನ್ಯೂಸ್ ಚಾನೆಲ್ ಗಳನ್ನು ನೋಡಿ.. ಭಾವನೆಗೆ ಬಾವನೆ ಅನ್ತಾರೆ.. ಭಾವ- ಬಾವ ಆಗ್ತಾನೆ.. ಪ್ರತಿ ವಾಕ್ಯದಲ್ಲಿ ಎರಡು ತಪ್ಪುಗಳು ನುಸುಳಿರುತ್ತವೆ.. ಇವರ ಕನ್ನಡಪ್ರೇಮ ಅನ್ನೋದು ಕೇವಲ ಇವರು ಕಟ್ಟೋ ಕಣ್ಕಾಪು ಮಾತ್ರ!!
  ನಾವು ಜಾಣ್ಮೆಯಿಂದ ವರ್ತಿಸಿ ಒಂದು middle path ಹುಡುಕಿದರೆ ಈ ಅನವಶ್ಯಕ ಸಂಘರ್ಷಕ್ಕೆ ವಿರಾಮ ಹಾಕಬಹುದು. ಸಿನೆಮಾ ಡಬ್ ಮಾಡೋದು ಬೇಡ, ಬಿಡಿ.. At least, trial basis ನಲ್ಲಿ ಆಮೀರ್ ಖಾನರ ಈ ಧಾರಾವಾಹಿಗಾದರೂ ಅವಕಾಶ ಕೊಡಬಹುದಿತ್ತು.. ಕನ್ನಡದ ಯಾವುದೇ ನಿರ್ಮಾಪಕರಿಗೆ ಅದರಿಂದ ಹಾನಿಯಾಗುತ್ತಿರಲಿಲ್ಲ.. ಆ ಧಾರಾವಾಹಿ ಕೆಟ್ಟದಾಗಿದ್ದರೆ, ನಮ್ಮ ಜನ ಖಂಡಿತ ಅದನ್ನು ತಿರಸ್ಕರಿಸಿ ಮತ್ತೆ ’ಮುಕ್ತ ಮುಕ್ತ’ ಅನ್ನುತ್ತಿದ್ದರು.. ಆದರೆ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ ಕೆಲವು ಜನ.. ಇದನ್ನು ನಾನು ಕನ್ನಡಪ್ರೇಮವಲ್ಲ, Insecurity ಅನ್ನುತ್ತೇನಷ್ಟೇ!! ಶುಭಂ..

  ಪ್ರತಿಕ್ರಿಯೆ
 11. ಪ್ರವೀಣ್ ಸೂಡ

  ರೋಹಿತ್ ಸಾರ್.. ನೀವು ಹೇಗೆ ರಾಘವೇಂದ್ರ ತೆಕ್ಕಾರ್, ಜ್ಞಾನೆಂದ್ರ ಕುಮಾರ್ ಹಗು ದಿನೇಶ್ ಅವರ ಬಗ್ಗೆ “”ಕೂತಲ್ಲಿಯೇ ಕೂಳು ಬೀಳುವುವುದರಿಂದ ಮೈಯ ಕೊಬ್ಬು ಹೆಚ್ಚಿ ಆಪರೇಷನ್ ಮಾಡಿಸಿಕೊಂಡನಂತೆ ಸಿರಿವಂತನೊಬ್ಬ. ಆ ಸಿರಿವಂತನ ದಾರಿಯಲ್ಲಿ ನಿಮ್ಮಂತವರು ಕಾಣಸಿಗುತ್ತಾರೆ. “”” ಹೀಗೆಲ್ಲಾ ಮಾತಾನಾಡಿದಿರೊ ನಾನರಿಯೆ, ಇಲ್ಲಿ ವಿಷಯ ಡಬ್ಬಿಂಗ್ ಬೇಕೆ ಬೇಡವೆ ಎಂದಷ್ಟೆ, ನನಗೆ ಡಬ್ಬಿಂಗ್ ಬೇಡ ಅದಕ್ಕೆ ಇಲ್ಲಿ ಬೇಕಾದ ವಿಷಯಗಳ ಬಗ್ಗೆ ಮಾತಾಡೋನ. ನೀವು ಹೆಸರೆತ್ತಿ ಹೇಳಿದ ಕೋಟ್ಯಾಧಿಶರ ಜೀವನ ಶೈಲಿ ನಿಮಗೆ ಗೊತ್ತೆ? ರಾಘವೇಂದ್ರ ತೆಕ್ಕಾರ್ ಹಗಲಿರು ಶ್ರಮಿಸಿ ಜೀವನ ಕಟ್ಟಿದೋರು. ನಿಮ್ಮ ಹಾಗೆ ಭೌಧಿಕ ದಿವಾಳಿಯಂತೆ ಅಡ್ಡದಾರಿಯಿಂದ ವಿಷಯಾಂತರ ಮಾಡಿ ಕಳ್ಳ ಗೆಲುವು ಸಾಧಿಸಲು ಬಂದ ಹಾಗಲ್ಲ ಅವರ ಆರ್ಥಿಕ ಸ್ಥಿತಿ, ಸಣ್ಣಂದಿನಿಂದ ಶ್ರಮಿಸಿ ಈಗ 30 ಜನಕ್ಕೆ ಸಂಬಳ ಕೊಡೊ ಮಟ್ಟಕ್ಕೆ ಬೆಳದೆ ಪರಿ ನೊಡಿದರೆ, ಅಂತ ಗೆಳೆಯರನ್ನು ಪಡೆದ ಹೆಮ್ಮೆ ನನಗೆ. ಇನ್ನು ಜ್ಞಾನೆಂದ್ರ ಕುಮಾರ್ ಹಾಗು ದಿನೇಶ್ ಸಾರ್ ಬಗ್ಗೆ ಹಗುರವಾಗಿ ಮಾತಾನಾಡಿದಿರಿ, ಒಮ್ಮೆ ಪ್ರಾಮಾಣಿಕವಾಗಿ ಇವರ ಜೀವನ ಶೈಲಿ ನೋಡಿ. ಇಲ್ಲಿ ಬಂದು ಅವರ ಕ್ಷಮೆ ಯಾಚಿಸಿ ಇಲ್ಲಿಂದ ಕಾಲು ಕೀಳುವಿರಿ. ನಿಮ್ಮಂತಹವರ ನಡುವೆ ನಾನು ಡಬ್ಬಿಂಗ್ ಬೇಡವೆಂದರೆ ನನಗೆ ಅವಮಾನ..

  ಪ್ರತಿಕ್ರಿಯೆ
 12. Harsha

  ಇವತ್ತಿನ ಕನ್ನಡಪ್ರಭದಲ್ಲಿ ಹರಿಯವರು ಬರೆದ ಇಲ್ಲೋಗಿಕಾಲ್ ಆದ ಡಬ್ಬಿಂಗ್ ವಿರೋಧಿ ಲೇಖನವೊಂದನ್ನ ಓದಿದೆ. Discovery ಚಾನೆಲ್-ನಲ್ಲಿ visual content ಮಾತ್ರ ಮುಖ್ಯವಂತೆ, ಮಾತು ಮುಖ್ಯವಲ್ಲವಂತೆ! ಹೀಗೆಲ್ಲ ವಿಚಿತ್ರ ವಾದ ಮಾಡುವವರಿಗೆ ಏನು ಹೇಳೋದು ಸ್ವಾಮಿ? Discovery ಚಾನೆಲ್-ನ ಆಡಿಯೋ ಕನ್ನಡ ಬಿಟ್ಟು ಉಳಿದೆಲ್ಲ ಭಾಷೆಗಳಲ್ಲಿ ಇರುವುದರಿಂದಲೇ ಅದು ಅರ್ಥವಾಗದೆ ಯಾರೂ ಕೇಳುವುದಿಲ್ಲ ಎನ್ನುವ ಕಾಮನ್ ಸೆನ್ಸ್-ನ ಸಾಯಿಸಿಯೇಬಿಟ್ಟಿದ್ದಾರಲ್ಲ! ನನ್ನ ಮಕ್ಕಳು ನಾಳೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಕಾರ್ಟೂನ್, ವಿಜ್ಞಾನಕ್ಕೆ ಸಂಭಂದಪಟ್ಟ ಕಾರ್ಯಕ್ರಮಗಳನ್ನ ನೋಡಬೇಕು ಎಂದು ಹೇಳಿದರೆ, ಅದನ್ನ ತಡೆಯಲು ಯಾರಿಗೆ ಹಕ್ಕಿದೆ ಎಂದಷ್ಟೇ ನನ್ನ ಪ್ರಶ್ನೆ. ದಯವಿಟ್ಟು ಮಕ್ಕಳಿಗೆ ಕನ್ನಡ ಸಿನೆಮಗಳನ್ನೇ ತೋರಿಸಿ ಎಂದು ಬಿಟ್ಟಿ ಉಪದೇಶ ಕೊಡಬೇಡಿ. ಲಾಂಗ್ ಹಿಡಿದು ಓಡುವುದನ್ನೇ ಮಕ್ಕಳಿಗೆ ಕಲಿಸುವ ಯಾವುದೇ ಚಟವೂ ನನಗಿಲ್ಲ.

  ಪ್ರತಿಕ್ರಿಯೆ
 13. Harish

  Regardless of all the contradicting talks on each side, I an INDIAN first feel that all INDIANS have the right to translate their own shows to regional languages so as to bring to light the social concerns plaguing the country and issues that need to be brought in to the light.
  Aamir is one such individual who strives for quality (lets take into consideration the films which are critically acclaimed). There is a need for such individuals. By saying no to dub and telecast his shows in Kannada, you are denying the right of all INDIANS, the right to learn and question. Please take into consideration that this will not only allow others to question themselves but it also encourages a person to think.
  THIS IS A HUMBLE REQUEST TO ALLOW HIM TO DUB THE PROGRAM INTO KANNADA.
  PLEASE DO NOT RESTRICT A THOUGHT, A BRILLIANT IDEA.

  ಪ್ರತಿಕ್ರಿಯೆ
 14. K.V. Tirumalesh

  ಭಾಷೆ ಯಾವುದೇ ಇರಲಿ, ಅಮೀರ್ ಖಾನ್ ಚರ್ಚೆಗೆ ತಂದ ವಿಷಯ ನಮಗೆ ಮುಖ್ಯವಾಗಬೇಕು. ನಮ್ಮಲ್ಲಿ ಹಲವರಿಗೆ ಕನ್ನಡದ ಜತೆ ಇಂಗ್ಲಿಷ್, ಹಿಂದಿ ಮುಂತಾದ ಭಾಷೆಗಳು ಬರ್ತವೆ; ಆದ್ದರಿಂದ ಅಮೀರ್ ಖಾನನ ಪ್ರೋಗ್ರಾಮನ್ನ ಅಥವಾ ಡಿಸ್ಕವರಿ ಚಾನಲಿನ ಪ್ರೋಗ್ರಾಮನ್ನ ಆಯಾ ಭಾಷೆಗಳಲ್ಲಿ ಕೇಳಿ ಅರ್ಥಮಾಡಿಕೊಳ್ಳುವುದು ಸಾಧ್ಯ. ಆದರೆ ಕರ್ನಾಟಕದಲ್ಲಿ ಕನ್ನಡ ಮಾತ್ರವೇ ಗೊತ್ತಿರುವ ಬಹುಸಂಖ್ಯೆಯ ಜನರಿದ್ದಾರೆ. ಅವರಿಗೆ ಈ ಪ್ರೋಗ್ರಾಮುಗಳು ಕನ್ನಡದಲ್ಲಿ ಸಿಗಬೇಕು. ಸದ್ಯ ಅದಕ್ಕಿರುವ ಮಾರ್ಗ ಡಬ್ಬಿಂಗ್ ಒಂದೇ. ಅದಲ್ಲ ಎಂದಾದರೆ ಇದನ್ನು ವಿರೋಧಿಸುವ ಜನರು ಮೂಲಕನ್ನಡದಲ್ಲೇ ಇಂಥ ಪ್ರೋಗ್ರಾಮುಗಳನ್ನು ಕೊಡಬೇಕು. ಹಾಗೆ ಕೊಡುವುದು ಸಾಧ್ಯವಿಲ್ಲ ಎಂದಾದರೆ ತೆಪ್ಪಗಿರಬೇಕು.
  ಯಾವುದಾದರೊಂದು ಚಾನೆಲ್ ನಲ್ಲಿ ಅಮೀರ್ ಖಾನನ ಅಥವಾ ಡಿಸ್ಕವರಿ ಚಾನೆಲಿನ ಪ್ರೋಗ್ರಾಮುಗಳು ಡಬ್ಬಿಂಗ್ ಆಗಿ ಬಂದರೆ ಕನ್ನಡ ಚಿತ್ರ ನಿರ್ಮಾಪಕರಿಗೆ ಭಯ ಯಾಕೆ? ಅವುಗಳ ಜತೆ ಸ್ಪರ್ಧಿಸಬಲ್ಲ ಪ್ರೋಗ್ರಾಮುಗಳನ್ನು ನೀಡಿರಿ. Or else you will be a dog in the manger!
  ಅಮೀರ್ ಖಾನ್ ಗೆ ಕೆಲವೊಂದು ಟಾಪಿಕ್ಸ್ ನೀಡಲು ಈ ಮೂಲಕ ಇಚ್ಛಿಸುತ್ತೇನೆ:
  ೧. ಪರೀಕ್ಷೆಗಳಲ್ಲಿ ಫೇಲ್ ಆಗುವ ವಿದ್ಯಾರ್ಥಿಗಳ ಬಗ್ಗೆ ಸಮಾಜ ಅನ್ಯಾಯ ಮಾಡುತ್ತಿದೆಯೇ?
  ೨. ಸ್ತ್ರೀಯರ ಮೇಅಣ ಅತ್ಯಾಚಾರ ತದೆಗಟ್ಟುವುದು ಹೇಗೆ?
  ೩. ಅಣು ಇಂಧನದ ವಿನಾ ಲೋಕ ತನ್ನ ಭವಿಷ್ಯವನ್ನು ಕಲ್ಪಿಸುವುದು ಸಾಧ್ಯವೇ?
  ೪. ಕಾನೂನು ಇದ್ದರೂ ಬಾಲ ಕಾರ್ಮಿಕ ಪದ್ಧತಿ ಯಾಕೆ ನಿಂತಿಲ್ಲ?
  ೫. ಪ್ರತಿಭೆ ಎನ್ನುವ ವಸ್ತುವೊಂದು ಇದೆಯೇ? ಅಥವಾ ಅವಕಾಶದ ಉಪಯೋಗವೇ ಇದರ ಹಿಂದೆ ಇರುವಂಥದೇ?
  ೬. ಜಾತೀಯತೆಯನ್ನು ತೊಡೆದು ಹಾಕುವುದು ಸಾಧ್ಯವೇ? ಹೇಗೆ?
  ೭. ಸಂಸ್ಕೃತಿ ಎಂದರೆ ನಿಜಕ್ಕೂ ಏನು?
  ೮. ಅಮೇರಿಕ, ಇಂಗ್ಲೆಂಡ್, ಯುರೊಪ್ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳನ್ನು ತೆಗಳುತ್ತಲೇ ಜನ ಯಾಕೆ ಅಲ್ಲಿಗೆ
  ಹೋಗಲು, ಅಲ್ಲೇ ನೆಲಸಲು ಬಯಸುತ್ತಾರೆ?
  ೯. ಮರಣದಂಡನೆಯನ್ನು ಕಿತ್ತುಹಾಕಬೇಕೇ? ರೇಪ್ ಮಾಡಿ ಶಿರ ತುಂಡರಿಸುವ, ಆಸಿಡ್ ಎರಚಿ ಹೆಂಗಸರ ಭವಿಷ್ಯವನ್ನೇ
  ನಾಶಮಾಡುವ ಕ್ರಿಮಿನಲುಗಳಿಗೂ ಮರಣದಂಡನೆ ಬೇಡವೇ?
  ೧೦. ನಮ್ಮ ಸಿನೆಮಾಗಳು ಯುವಜನ್ತೆಯನ್ನು ದಾರಿ ತಪ್ಪಿಸುತ್ತಿವೆಯೇ? ಉದಾಹರಣೆಗೆ, ಪ್ರೀತಿ ಮಾಡಲು ಒತ್ತಾಯಿಸುವುದು,
  ಸ್ತ್ರೀಯರ ಹಿಂದೆ ಬೀಳುವುದು, ಗುರಿ ಸಾಧಿಸಲು ಏನು ಮಾಡಲೂ ಸಿದ್ಧರಾಗುವುದು.
  ೧೧. ನಮ್ಮ ಕೃಷಿ ಉದ್ಯಮೀಕರಣಕ್ಕೆ ಒಳಗಾಗಬೇಕೇ? (ದೊಡ್ಡ ಹಿಡುವಳಿಗಳು)
  ೧೨. ನೀರಿನ ಸಮಸ್ಯೆಯನ್ನು ನೀಗಿಸುವುದು ಹೇಗೆ?
  ೧೩. ಅಂಗದುರ್ಬಲರನ್ನು ಸಮಾಜ ಹೇಗೆ ನೋಡುತ್ತದೆ?
  ೧೪. ಸೆಕ್ಸ್ ವರ್ಕರ್ಸ್ ಎಂದು ವೇಶ್ಯೆಯರನ್ನು ನಾಮಕರಣ ಮಾಡುವುದರಿಂದ ವೇಶ್ಯಾಪದ್ಧತಿಯನ್ನು ತಡೆಗಟ್ಟುವುದು ಸಾಧ್ಯವೇ? ಅಥವಾ ತಡೆಗಟ್ಟುವುದೇ ಬೇಡವೇ?!
  ೧೫. ಪ್ರಜಾಪ್ರಭುತ್ವ ಮತ್ತು ವೋಟ್ ಬ್ಯಾಂಕ್- ಈ ವಿರೋಧಾಭಾಸಕ್ಕೆ ಯಾವ ಪರಿಹಾರ?
  ಇಂಥ ಹಲವಾರು ಸಮಸ್ಯೆಗಳು ನಮ್ಮ ಮುಂದಿವೆ. ಇವನ್ನು ನೀವೂ ಸೂಚಿಸಬಹುದು, ಯೋಚಿಸಬಹುದು, ಇವುಗಳ ಕುರಿತು ಬರೆಯಬಹುದು. ಅಮೀರ್ ಖಾನಿಗೂ ತಿಳಿಸಬಹುದು.
  ಡಬ್ಬಿಂಗ್ ನಿಂದ ಕನ್ನಡವೇನೂ ಹಾಳಾಗುವುದಿಲ್ಲ. ಲೋಕದ ಅನೇಕ ಭಾಷೆಗಳಲ್ಲಿ ಅನುವಾದಗಳು, ಡಬ್ಬಿಂಗ್, ಸಬ್-ಟೈಟಲಿಂಗ್ ನಡೀತಿವೆ. ಅವು ಯಾವುದಕ್ಕೂ ಇಲ್ಲದ ಭಯ ಕನ್ನಡಕ್ಕೆ ಯಾಕೆ? ಅದೂ ಅಲ್ಲದೆ ರಕ್ಷಣಾತಂತ್ರದಿಂದ, ದಿಗ್ಭಂಧನದಿಂದ ಯಾವ ಭಾಷೆಯೂ ಯಾವ ಕಲೆ-ವಿಜ್ಞಾನವೂ ಬೆಳೆಯವು. ಕನ್ನಡ ಮೊಲೆಹಾಲಿನಲ್ಲಿ ಎಷ್ಟು ಕಾಲ ಇರಬೇಕು?
  ಕೆ.ವಿ.ತಿರುಮಲೇಶ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: