ಜುಗಾರಿ ಕ್ರಾಸ್: 'ಕುಸ್ಮ' ಎಂದರೆ ಕುಬುದ್ಧಿ, ಕುತ್ಸಿತ, ಕುಟಿಲ..

‘ಸಮುದ್ರಕ್ಕೆ ಕೊಳಚೆ ನೀರು ಬಂದು ಸೇರಿದರೆ ಇಡೀ ಸಮುದ್ರವೇ ಕೊಳಚೆಯಾಗುತ್ತದೆ. ನೀರು ಯಾವಾಗಲೂ ಶುದ್ಧವಿರಬೇಕು. ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಸಂಸ್ಕೃತಿ ವಿಭಿನ್ನ.  ಬಡಮಕ್ಕಳನ್ನು ಶಾಲೆಗೇ ಸೇರಿಸಿಕೊಂಡ ಮರುದಿನವೇ ಉಳಿದ ಪೋಷಕರು ಬಂದು ಮಕ್ಕಳ ವರ್ಗಾವಣೆ ಪತ್ರ ಕೇಳುವ ಅಪಾಯ ಇದೆ’

ee ಹೇಳಿಕೆಯನ್ನು ಖಂಡಿಸಿ ಬಂದ ಪ್ರತಿಕ್ರಿಯೆಗಳು ಇಲ್ಲಿವೆ –

ಪಂಡಿತಾರಾಧ್ಯ ಮೈಸೂರು

ಕುಸ್ಮ ಎಂದರೆ ಏನು ಅರ್ಥವೋ? ಆದರೆ ಈಗ ಅದು ಕುಬುದ್ಧಿ, ಕುತ್ಸಿತ, ಕುಟಿಲ. ಕುತಂತ್ರಿ, ಕುವಿಚಾರ,ಕುಹಕ,ಕುಖ್ಯಾತ, ಕುಮಾರ್ಗ, ಕುಪ್ರಸಿದ್ಧ… ಮೊದಲಾದ ಮನಃಸ್ಥಿತಿಗಳನ್ನು ವಿವರಿಸುವ ಪದವಾಗಿದೆ.

ದೀಪಕ್ ಸಿ ಎನ್ :

ಇದು ಅತ್ಯಂತ ಭಾಲಿಶ ಹೇಳಿಕೆ. ಆವರಿಗೆ ತಮ್ಮ ಪುರೋಹಿತಶಾಹಿ ಮತ್ತು ಬಂಡವಾಳಶಾಹಿತನವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ಅದಕ್ಕಾಗೆ ಇಂದಿಗೂ ಬೆಂಗಳೂರಿನ ಕೆಲವೊಂದು ಶಾಲೆಗಳಲ್ಲಿ ಮಕ್ಕಳನ್ನು ಮತ್ತು ಮಕ್ಕಳ ಪೋಷಕರನ್ನು ಸಂದರ್ಶಿಸಿ ಅವರಿಗೆ ಸೀಟು ಕೊಡುವುದು. ಇನ್ನು ಕೆಲವು ಶಾಲೆಗಳಲ್ಲಿ ಯಾರೆ ಆಗಲಿ ಹಣ ಕೊಟ್ಟರೆ ಅವರಿಗೆ ಪ್ರವೇಶ ನೀಡಲಾಗುತ್ತದೆ. ಇಂದಿನ ಖಾಸಗಿ ವಿಧ್ಯಾಸಂಸ್ಥೆಗಳು ಈ ಪುರೋಹಿತಶಾಹಿಗಳ ಮತ್ತು ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ಇದೆ. ಅವರಿಗೆ ವಿಧ್ಯೆ ನೀಡುವುದು ಉದ್ದೇಶವಲ್ಲ. ಕೆಳಸ್ಥರದ ಮಕ್ಕಳನ್ನು ತಮ್ಮ ಶಾಲೆಗೆ ಸೇರಿಸಿದರೆ ಎಲ್ಲಿ ತಮ್ಮ ಶಾಲೆಯ ಮಾರ್ಕೆಟ್ ವ್ಯಾಲ್ಯೂ ಕಡಿಮೆಯಾಗಿ ಹರಿದು ಬರುವ ಹಣದ ಹೊಳೆ ನಿಂತು ಹೋಗುತ್ತದೆಯೊ ಎಂಬ ಭಯ ಇವರನ್ನು ಕಾಡುತ್ತಿರುವುದು ಜಿ ಎಸ್ ಶರ್ಮಾ ಅವರ ಹೇಳಿಕೆಯಿಂದ ಗೊತ್ತಾಗುತ್ತದೆ.   vasanth: ನಮ್ಮ ಭೂಮಿ, ಅನುದಾನ, ಸಕಾ೵ರದ ಎಲ್ಲಾ ಅನುಕೂಲಗಳು ಈ ಜನಕ್ಕೆ ಬೇಕು. ಅದರೆ ಬಡ ಮಕ್ಕಳನ್ನು ತಮ್ಮ ಶಾಲೆಗೆ ಸೇರಿಸಿಕೊಳ್ಳಲು ಇಲ್ಲಸಲ್ಲದ ನೆಪಹೇಳುತ್ತಿದ್ದಾರೆ. ಮೊದಲು ಶಾಲೆಗಳನ್ನು ಬಂದ್ ಮಾಡಿದ್ದು ಸಂವಿಧಾನ ವಿರೋಧಿ ಕ್ರಮ. ಸಕಾ೵ರ ಿ ಜನಗಳ ಜೊತೆ ಯಾವುದೇ ಸಂಧಾನ ಮಾಡದೇ ಈ ಶಾಲೆಗಳ ಮಾನ್ಯತೆಯನ್ನು ರದ್ದು ಮಾಡಲಿ.  

Dr. kiran.m gajanur:

ಇ ರಾಜ್ಯದಲ್ಲಿ ಗಂಡಸರ ಸರ್ಕಾರ ಅಂತ ಒಂದು ಇದ್ದಿದ್ದರೆ ಇಸ್ಟೊತ್ತಿಗೆ ಜಿ.ಎಸ್.ಶರ್ಮಾ ಎಂಬ ಗಟಾರದ ಕೊಚ್ಚೆಯನ್ನು ಹೆಡೆಮುರಿ ಕಟ್ಟಿ ಎಸಿತಿದ್ದರು . . . . . . ಮಾತನಾಡೋ ಮಾತಿಗೂ ಒಂದು ಮಿತಿ ಇರಬೇಕು ……..  

ರವಿ ಮೂರ್ನಾಡು, ಕ್ಯಾಮರೂನ್ :

ಒಂದು ಮನವಿ…ಎಲ್ಲಾ ಕನ್ನಡಿಗರ ಪರವಾಗಿ. ಜಿ. ಎಸ್. ಶರ್ಮಾ ಅನ್ನುವ ಈ ವ್ಯಕ್ತಿಯನ್ನು ಇಲ್ಲಿ ಚರ್ಚೆಗೆ ಆಹ್ವಾನಿಸಲು ಕೋರಿಕೆ. ಕನ್ನಡಿಗರ ಪ್ರಶ್ನೆಗೆ ಉತ್ತರಿಸಲಿ. ” ಕುಸ್ಮಾ” ಅಂದರೇನು ಮತ್ತು ಅದರ ಉದ್ದೇಶ , ಗುರಿಗಳೇನು? ಹಾಗೂ ಮಕ್ಕಳ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧದ ಹೋರಾಟಕ್ಕೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅವಕಾಶವಿದೆಯೇ? ಇದು ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾದ ವಿವಾದವಲ್ಲ, ಇಡೀ ರಾಷ್ಟ್ರಕ್ಕೆ ಸಂಬ೦ಧಿಸಿದ್ದು, ವಿಶ್ವ ಸಂಸ್ಥೆ ಶೈಕ್ಷಣಿಕ ಸಮಿತಿಯಲ್ಲಿಯೂ ಇದನ್ನು ಮಂಡಿಸಬಹುದು. ಅಷ್ಟು ಗಂಭೀರವಾಗಿದೆ ಈ ಮಕ್ಕಳ ಅಕ್ಷರ ಜ್ಜಾನದ ವಿರುದ್ಧ ಜಿ. ಎಸ್. ಶರ್ಮಾ ಸಾರಿದ ಮಾತುಗಳು. ಸರಕಾರವನ್ನು ಪ್ರತಿನಿಧಿಸುತ್ತಿರುವ ಪದವಿಧರ ಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು ಏನು ಹೇಳುತ್ತಾರೆ ?.

GURURAJ:

Mr Sharma and his associates are real ‘kolache’people,if they are allowed to live in India,they spoil the indian unity in diversity.it is unfortunate that such people are still not arrested by this so called useless government,and it’s education minister,instead they are asking these anti social elements to come for dailogue.It is shame,that such mentally ill people are running education institutions.Enough is enough,either Mr Sharma must be thrown out of ‘kusma’ and India or ‘kusma’ must be banned for ever and the schools should be taken over by the government.  

ವೆಂಕಟೇಶ್:

ಸಂವಿಧಾನ,ರಾಜ್ಯ ದೇಶಕ್ಕೆ ಗೋಲಿ ಹೊಡೆಯುವಂತಿವೆ ಈತನ ಮಾತು. ಕುಸ್ಮಾ ಪ್ರತಿನಿಧಿಸುವ ಮೌಲ್ಯಗಳೇನು ಎಂಬುದನ್ನು ಈತ ಯಾವುದೇ ಸಂಶಯಕ್ಕೆಡೆ ಇಲ್ಲದಂತೆ ಹೇಳಿದ್ದಾನೆ. ಇದೊಂದು ವೈಯಕ್ತಿಕ ಹೇಳಿಕೆಯಾಗಿ ತೆಗೆದುಕೊಳ್ಳಬಾರದು. ಈತನ ಅಡಿಯಲ್ಲಿ ಬರುವ ಬಹುತೇಕ ಖಾಸಗಿ ಶಾಲೆ ಆಡಳಿತ ಮಂಡಳಿಗಳೂ ಕೂಡ ಇಂತಹ ಕೆಟ್ಟ ಆಲೋಚನೆಗಳು ತುಂಬಿಕೊಂಡಿವೆ. ಈ ಖಾಸಗಿ ಸಾಮ್ರಾಜ್ಯ ಬೆಳೆಯುವಂತೆ ಸರ್ಕಾರವೇ ಕುಮ್ಮಕ್ಕು ಕೊಟ್ಟಿತು. ಈಗ ಯಾರಿಗೂ ಡೋಂಟ್ ಕೇರ್ ಎನ್ನುವ ಉದ್ದಟತನದ ಮಟ್ಟಕ್ಕೆ ಅವರು ಬಂದಿದ್ದಾರೆ. ಈ ಶಾಲೆಗಳಿಗೆ ಸರ್ಕಾರ ಅನುದಾನ ಕೊಟ್ಟು ನಾವು ಹೇಳಿದಂತೆ ಕೇಳಿ ಎನ್ನಬೇಕು. ಸಂವಿಧಾನಕ್ಕೆ ಬೆಲೆ ಕೊಟ್ಟು ಇರಿ. ಇಲ್ಲಾಂದ್ರೆ ಬಡವರ ಸೋಂಕು ಇಲ್ಲದ ಯಾವುದಾದರೂ ಗ್ರಹಕ್ಕೆ ಗುಡಾರ ಎತ್ತಿಕೊಂಡು ಹೋಗಿ ಎನ್ನಬೇಕು.  

u s mahesh:

ಒಳಿತು-ಕೆಡುಕುಗಳ ಸರಿಯಾದ ಅರಿವು ಇಲ್ಲದ ಅರಾಜಕ ವ್ಯವಸ್ಥೆಯಲ್ಲಿ ಮಾತ್ರ ಇಂತಹ ಆಚಾರಹೀನ ಮಾತುಗಳನ್ನಾಡುವ ನಾಲಗೆ ಉದ್ದವಾಗುತ್ತದೆ. `ಪ್ರಜಾಪ್ರಭುತ್ವದ ಮುಕ್ತತೆ` ಎಂದರೆ, ಹೀಗೆ ಲಂಗುಲಗಾಮಿಲ್ಲದೆ ಏನಾದರೂ ಮಾತನಾಡುವುದು ಅಂತ ಅರ್ಥಾನ? ಇದೆಂಥಾ ಸಂಸ್ಕಾರಹೀನ ಹೇಳಿಕೆ? ಸುಮ್ಮನೆ ಸಮಾನತೆಯ ಬೊಗಳೆ ಬಿಡುವ ರಾಜಕೀಯ ನೇತಾರರನ್ನು ನಂಬದೆ, ಆತ್ಮಸಾಕ್ಷಿ ಇರುವ ಎಲ್ಲರೂ ಇದನ್ನು ಒಕ್ಕೊರಲಿನಿಂದ ಪ್ರತಿಭಟಿಸಬೇಕಾಗಿದೆ.  

ಎಂ.ಆರ್. ದತ್ತಾತ್ರಿ :

ಭಾರತದಲ್ಲಿ ಜರೂರಾಗಿ ಸಮಾನ ಶಿಕ್ಷಣ ವ್ಯವಸ್ಥೆ ಬರಬೇಕಿದೆ. ಸದ್ಯಕ್ಕಂತು ಇದು ಗೊಂದಲದ ಗೂಡು. ಸಿಬಿಎಸ್‍ಇ, ಐಸಿಎಸ್‍ಇ, ಸ್ಟೇಟ್, ಇಂಟರ್‌ನ್ಯಾಷನಲ್ ಹೀಗೆ ವಿಭಾಗವಾಗಿದ್ದು ಸಾಲದು ಎನ್ನುವಂತೆ ಪ್ರತಿ ಶಾಲೆಯೂ ತನ್ನದೇ ಶಿಕ್ಷಣ ನೀತಿ, ತನ್ನದೇ ಭಾಷಾನೀತಿ, ತನ್ನದೇ ಪುಸ್ತಕಗಳು, ಮನಸ್ಸಿಗೆ ಬಂದಷ್ಟು ಶುಲ್ಕ, ಯಾವ ಮಗುವನ್ನು ಯಾವ ಕ್ಷಣಕ್ಕಾದರೂ ಶಾಲೆಯಿಂದ ಓಡಿಸಬಹುದಾದ ಸ್ವೇಚ್ಛೆ … ಇವುಗಳ ಮಧ್ಯೆ ವಿಕಲಾಂಗ ಚೇತನ ಮಕ್ಕಳಿಗೆ ಎಲ್ಲಿಯೂ ಪ್ರವೇಶವಿಲ್ಲ. ಗ್ರಾಮೀಣ ಮಕ್ಕಳು ಈ ಕಡೆ ಇಂಗ್ಲಿಷ್ ವಿದ್ಯಾಭ್ಯಾಸವಿಲ್ಲದೆ ಆ ಕಡೆ ಸರಕಾರ ಕನ್ನಡ ಶಾಲೆಗಳನ್ನು ಮುಚ್ಚುವ ತರಾತುರಿಯ ನಡುವೆ ಸಂಪೂರ್ಣ ಅಸಹಾಯಕವಾಗಿವೆ. ನಮ್ಮ ಪ್ರಾಥಮಿಕ ಶಿಕ್ಷಣ ಬಹಳ ಶೋಚನೀಯ ಸ್ಥಿತಿಯಲ್ಲಿದೆ. ಐಐಟಿ ಮತ್ತು ಐಐಎಂಗಳನ್ನು ಕಟ್ಟುವಲ್ಲಿ ಹೆಮ್ಮೆ ಪಡುವ ನಾವು ಕುಸಿದ ಫ಼ೌಂಡೇಶನ್ನಿನ ಮೇಲೆ ಅವುಗಳನ್ನು ಕಟ್ಟುತ್ತಿದ್ದೇವೆ ಎನ್ನುವುದನ್ನು ಮರೆತಿದ್ದೇವೆ.  

ನಾ ದಿವಾಕರ :

Nationalise all private schools first then these filthy waters called kusma can be thrown into the dust bin of history. Does the government have guts to do it. Possibly not. That is capitalism, crony capitalism at it. Down with KUSMA.  

mahadev hadapad

ಅಮೇಧ್ಯದ ನಡುವೆ ಕುಳಿತ ನೊಣ ಉಣ್ಣುವ ತಟ್ಟೆಗೂ ಹಾರಿ ಬರುತ್ತದೆ.ಹಾಗೆ ಹಾರಾಡಿ ಡೊನೆಶನ್ ಹಾವಳಿಯ ಕೊಳಚೆ ಕೊಚ್ಚೆ ತಿಂದು ಬೆಳೆದ ಇವರ ನಾಲಗೆ ಜಪಿಸುವುದನ್ನು ಜಪಿಸಿದೆ. ಈ ದರಿದ್ರ ಜನಾನುರೋಗಿ ಸರಕಾರ ಇಂಥವರನ್ನು, ಇಂಥವರ ಪ್ರಶ್ನೆಗೆ ಸಮಾಜಾಯಿಸಿ ಉತ್ತರಕೊಟ್ಟು ಸುಮ್ಮನಿರಿಸಲು ಪ್ರಯತ್ನಿಸುತ್ತಿರುವುದು ಸರಿಯಲ್ಲ. 1) ಬರಗಾಲ ಒಂದು ಬಂದು ಅನ್ನಕ್ಕೂ ನೀರಿಗೂ ಒದ್ದಾಡುತ್ತಿರುವ ಬಡವನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಹಾಗಾಗಿ ನಿನ್ನ ಮಾತು ಸಹಿಸಿಕೊಳ್ಳುತ್ತಾರೆಂದು ಭಾವಿಸಬೇಡ ಶರ್ಮಾ ವಾಸಿಂಗ ಪೌಡರ ನಿರ್ಮಾ, ನಿನ್ನ ಹಾಲಿನಂತ ಬಿಳುಪಿಗೆ ಒಂದಸಲ ತುಪ್ಪಿದರೆ ಜೀವಮಾನವಿಡೀ ನಿನ್ನ ಸಮುದ್ರದ ಶುದ್ಧಾತಿ ಶುದ್ಧ ನೀರು ಖಾಲಿ ಆಗೋವರೆಗೂ ತೊಳಕೋಬೇಕಾದೀತು. 2) ಮರುದಿನವೇ ಉಳಿದ ಮಕ್ಕಳ ಪೋಷಕರು ವರ್ಗಾವಣೆ ಪತ್ರ ಕೇಳ್ತಾರೆ ಅನ್ನುವ ನಿಮ್ಮ ಭಯಕ್ಕೆ ಅಷ್ಟೊಂದು ಯಾಕೆ ಬೆಚ್ಚಿಬೀಳ್ತೀರಾ ಸ್ವಾಮಿ ನಿಲ್ಲಿಸಿಬಿಡಿ ನಿಮ್ಮ ಶಾಲೇನಾ… ನೀವುಗಳೇನು ಈ ದೇಶಕ್ಕ ಆಗೋ ಪ್ರಜೆಗಳನ್ನ ಸೃಷ್ಟಿಸೊಲ್ಲವಲ್ಲ. 3) ನಿಮ್ಮ ವಿಭಿನ್ನ ಸಂಸ್ಕೃತಿಯಲ್ಲಿ ಮಕ್ಕಳಿಗೆ ಮೂಲಾಧಾರದ ಕೆಳಗೆ ಊಟ ಮಾಡಿಸೋ ಸಂಸ್ಕೃತಿಯೇನಾದರೂ ಇದೆಯಾ…? 4) ಖಂಡಿತವಾಗಲೂ ಇವರು ಹೇಳುವ ಪೋಷಕರು, ಇವರ ಶಾಲೆಗಳ ಶುದ್ಧತೆ, ಇವರು ಕಲಿಸುವ ಸಂಸ್ಕೃತಿಯ ವಿಭಿನ್ನತೆ, ಆ ಶಾಲೆಯ ಆ ಶುದ್ಧ ಚಮಚೆಯನ್ನ ಬಾಯಲ್ಲಿಟ್ಟುಕೊಂಡು ಹುಟ್ಟಿರುವ ಮಕ್ಕಳು ಇವರನ್ನೆಲ್ಲ ನೋಡುತ್ತಿದ್ದರೆ ಈಗ ಅಸಮಾನತೆಯ ರೂಪ ಬೇರೆಯಾಗಿದೆ ಅಲ್ವಾ ? ಅದನ್ನು ಸರಿದೂಗಿಸುವ ಅಥವಾ ಅದನ್ನು ಅರ್ಥೈಸುವ ಕುರಿತಾದ ಚರ್ಚೆ ಆದರೆ ಒಳ್ಳೇದು  ]]>

‍ಲೇಖಕರು G

July 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

೧ ಪ್ರತಿಕ್ರಿಯೆ

 1. Kiran

  Agreed. This man Sharma has put his foot in his mouth; the comparison he gives is pretty filthy!
  Just being the devil’s advocate:
  Why are the schools run by religious minority kept out of the law? Most of these schools cater to rich and super-rich. Did you know Delhi Public School run by Mr Salman Khurseed is kept out of this law for the same reason?
  Most of the comments are given by people who are not a direct party to the implications. Has government done any pilot study to assure people of our country to prove that Mr Sharma is illogical and his logic is outrightly flawed? Many times only gut feeling and emotions speak. How many of the commentors allow their children to play with kids from slums? How many of us are comfortable with our kids sitting next to a child from slums in any social context?
  It is the era of consumerism. Everybody wants value for money. On the corollary, many think that by spending money, they are getting value. It is a bigger question to debate. How many of our young generation parents are comfortable with the concept of something given free to someone for which you pay heftily?
  Mr Sharma is no doubt a bad teacher; he gives filthy comparison in public. What sort of teaching he might be doing in classes which are unobserved? But the point is deeper. He means something else, something more noxious, something more harmful than mere money. It is for a better future that we sort these issues today itself; more scientifically than emotionally.

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ KiranCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: