ಜುಗಾರಿ ಕ್ರಾಸ್ : ಗವಾಕ್ಷಿಯಲ್ಲಿ ಬಿ ಟಿ ಬದನೆ

‘ಜುಗಾರಿ ಕ್ರಾಸ್’ ಚರ್ಚೆಗಾಗಿ ಇರುವ ಅಂಕಣ. ರಾಜ್ಯದ ಸಮಕಾಲೀನ ವಿಷಯಗಳ ಬಗ್ಗೆ ಇಲ್ಲಿ ಮುಕ್ತ ಚರ್ಚೆಗೆ ಅವಕಾಶವಿದೆ.

ಕುಲಾಂತರಿ ತಳಿಗಳಿ೦ದ ನಮ್ಮ ಕೃಷಿಯ ಮೇಲೆ, ಕೃಷಿಕರ ಮೇಲೆ, ಕೃಷಿ – ಆರ್ಥಿಕ ವ್ಯವಸ್ಥೆಯ ಮೇಲೆ ಆಗುವ ಪರಿಣಾಮಗಳು, ಅದರ ಪರ ಹಾಗು ವಿರೋಧ ಇರುವ ದನಿಗಳ ಬಗ್ಗೆ ಡಾ ಜಗದೀಶ್ ಕೊಪ್ಪ ಅವರ ಲೇಖನ ಜುಗಾರಿ ಕ್ರಾಸ್ ನಲ್ಲಿ. ಇದು ಒಂದು ಗಂಭೀರ ವಿಷಯವಾದ್ದರಿಂದ ಇದರ ಬಗ್ಗೆ ಚರ್ಚೆ ಅತಿ ಮುಖ್ಯ ಹಾಗಾಗಿ ನಿಮ್ಮ ಚರ್ಚೆಗೂ ಸ್ವಾಗತ.

ನೆನಪಿಡಿ ಆಕ್ರೋಶ, ದೊಡ್ಡ ದನಿಯ ಮಾತು ಚರ್ಚೆಯಲ್ಲ. ಚರ್ಚೆ ಚರ್ಚೆಯಂತಿರಲಿ. ಪಾಲ್ಗೊಳ್ಳಿ..

ಜೈವಿಕ ಭಯೋತ್ಪಾದನೆ

ಡಾ.ಎನ್.ಜಗದೀಶ್ ಕೊಪ್ಪ

  ಗ್ರಾಮೀಣ ಜಗತ್ತು ಮತ್ತು ಕೃಷಿ ಜಗತ್ತಿನ ಹೃದಯ ಮತ್ತು ಆತ್ಮದಂತಿರುವ ಭಾರತದಲ್ಲಿ ಈಗ ಅನ್ನದಾತರ ಜೀವನ್ಮರಣದ ಪ್ರಶ್ನೆಯಾಗಿ ಕುಲಾಂತರಿ ಬೆಳೆಗಳ ಬಗ್ಗೆ ವಿಜ್ಞಾನಿಗಳು ಮತ್ತು ಪರಿಸರ ಪ್ರೇಮಿಗಳ ನಡುವೆ ದೊಡ್ಡ ಚಚರ್ೆಯೇ ಏರ್ಪಟ್ಟಿದೆ. ಇದರ ಪರಿವಿಲ್ಲದ ಅಮಾಯಕ ರೈತ ಮಾತ್ರ ನೆಲ ಮುಗಿಲುಗಳ ನಡುವೆ ದೃಷ್ಟಿಯಿಟ್ಟು ಕೃಷಿ ಚಟುವಟಿಕೆಯಲ್ಲಿ ನಿರತನಾಗಿದ್ದಾನೆ. ಜೈವಿಕ ತಂತ್ರಜ್ಞಾನದ ಪ್ರಯೋಗ ಶಿಶುವಾದ ಕುಲಾಂತರಿ ತಳಿಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ವಾಗ್ವಾದ ನಡೆಯುತ್ತಿರುವಾಗಲೇ ಭಾರತದಲ್ಲೂ ಕೂಡ ಬಿ.ಟಿ. ಬದನೆ ಬಗ್ಗೆ ಗಂಭೀರವಾದ ಪರಿಶೀಲನೆ ಮತ್ತು ಪರೀಕ್ಷೆ ಆರಂಭವಾಗಿದೆ. ಇದು ಸುಲಭವಾಗಿ ಜನಸಾಮಾನ್ಯರ ಬೌದ್ಧಿಕ ಚಚರ್ೆಗೆ ಸಿಲುಕುವಂತಹದ್ದಲ್ಲ. ಹಾಗಾಗಿ ಈ ನೆಲದ ಅನೇಕ ಲೇಖಕರು, ವಿಜ್ಞಾನಿಗಳು, ಪತ್ರಕರ್ತರು, ಪರಿಸರ ತಜ್ಞರು ಭಾರತದ ಪಾರಂಪರಿಕ ಕೃಷಿ ಪದ್ಧತಿಗೆ ಧಕ್ಕೆಯಾಗಬಲ್ಲ ಎಲ್ಲಾ ರೀತಿಯ ಆಹಾರ ಬೆಳೆಗಳ ಕುಲಾಂತರಿ ಪ್ರಯೋಗಕ್ಕೆ ತಡೆಯೊಡ್ಡಿ ದೊಡ್ಡಮಟ್ಟದಲ್ಲಿ ಧ್ವನಿ ಎತ್ತಿದ್ದಾರೆ. ಇದು ನಿಜಕ್ಕೂ ಈ ನೆಲದ ಪುಣ್ಯ. ಜಾಗತಿಕ ಮಟ್ಟದಲ್ಲಿ ಕುಲಾಂತರಿ ತಳಿಗಳ ಸೃಷ್ಟಿಯಲ್ಲಿ ಕುಖ್ಯಾತಿ ಪಡೆದಿರುವ ಅಮೇರಿಕಾ ಮೂಲದ ಮಾನ್ಸೆಂಟೊ ಕಂಪನಿ, ಭಾರತದ ಮಹಾರಾಷ್ಟ್ರದ ಜಾಲ್ನ ಮೂಲದ ಪ್ರಸಿದ್ಧ ಬೀಜ ಕಂಪನಿ ಮಹಿಕೊ ಸಂಸ್ಥೆಯನ್ನು ತನ್ನ ವಶಕ್ಕೆ ತೆಗೆದುಕೊಂಡು ದಶಕದ ಹಿಂದೆ ಬಿ.ಟಿ. ಹತ್ತಿಯ ಮೂಲಕ ಕಾಲಿಟ್ಟು ಇದೀಗ ತನ್ನ ಕರಾಳ ಹಸ್ತವನ್ನು ದೇಶದೆಲ್ಲೆಡೆ ವಿಸ್ತರಿಸಿದೆ. ಕೃಷಿ ಮತ್ತು ಆಹಾರ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನವನ್ನು ಅಳವಡಿಸಿ, ಆಹಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಮೂಲಕ ಹಸಿವು ಮುಕ್ತ ಜಗತ್ತು ನಿಮರ್ಾಣವೇ ತನ್ನ ಗುರಿ ಎಂದು ಘೋಷಿಸಿಕೊಂಡಿರುವ ಮಾನ್ಸೆಂಟೊ ಕಂಪನಿಯ ಕರಾಳ ಇತಿಹಾಸ ಗಮನಿಸಿದರೆ, ಎಂತಹವರೂ ಬೆಚ್ಚಿಬಿಳಬೇಕು. ಅಂತಹ ಕಪ್ಪು ಇತಿಹಾಸ ಈ ದೈತ್ಯ ಕಂಪನಿಯ ಬೆನ್ನಿಗಿದೆ. ಕಳೆದ ಒಂದು ಶತಮಾನದಿಂದ ಅಪಾಯಕಾರಿ ರಸಾಯನಿಕ ವಸ್ತುಗಳನ್ನು ವಿಶೇಷವಾಗಿ ಕೀಟನಾಶಕ ಮತ್ತು ಕಳೆನಾಶಕ ವನ್ನು ತಯಾರಿಸುತ್ತಿರುವ ಈ ಸಂಸ್ಥೆ ಜೈವಿಕ ಪರಿಸರಕ್ಕೆ ಧಕ್ಕೆಯುಂಟು ಮಾಡಿದ ತಪ್ಪಿಗೆ ಅಮೇರಿಕಾ ಸಕರ್ಾರಕ್ಕೆ ಮುನ್ನೂರು ದಶಲಕ್ಷ ಡಾಲರ್ ಹಣವನ್ನು ದಂಡವಾಗಿ ಪಾವತಿಸಿದೆ. 1970 ರ ದಶಕದಲ್ಲಿ ಅಮೇರಿಕಾ ವಿಯಟ್ನಾಂ ದೇಶದ ಮೇಲೆ ಯುದ್ಧ ಸಾರಿದಾಗ, ವಿಯಟ್ನಾಂ ಯೋಧರು ಅರಣ್ಯದಲ್ಲಿ ಅಡಗಿ ಕುಳಿತು ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಅಮೇರಿಕಾ ಸೇನೆಯನ್ನು ಮಣಿಸುತಿದ್ದ ಸಂದರ್ಭದಲ್ಲಿ, ಅಮೇರಿಕಾ ಸೇನಾ ಪಡೆಗೆ ಅರಣ್ಯದ ಮರಗಳ ಎಲೆ ಉದುರಿ ಹೋಗುವಂತಹ ಏಜೆಂಟ್ ಆರೆಂಜ್ ಎಂಬ ರಸಾಯನಿಕವನ್ನು ತಯಾರು ಮಾಡಿಕೊಟ್ಟಿದ್ದು ಇದೇ ಕಂಪನಿ. ಅಮೇರಿಕಾದ ಸೇನೆ ಹೆಲಿಕಾಪ್ಟರ್ ಮೂಲಕ ಅಪಾಯಕಾರಿ ವಿಷಯುಕ್ತ ದ್ರಾವಣವನ್ನು ವಿಯಟ್ನಾಂ ಅರಣ್ಯ ಪ್ರದೇಶದ ಮೇಲೆ ಸಿಂಪಡಿಸಿತು. ಅದರ ಪರಿಣಾಮವನ್ನು ಅಲ್ಲಿನ ಜನತೆ 40 ವರ್ಷ ಕಳೆದರೂ ಇಂದಿಗೂ ಅನುಭವಿಸುತಿದ್ದಾರೆ. ಗಾಳಿ ಮತ್ತು ನೀರಿನ ಮೂಲಕ ಮನುಷ್ಯರ ದೇಹ ಪ್ರವೇಶಿಸಿದ ಈ ರಸಾಯನಿಕ ವಿಷದಿಂದಾಗಿ ಅಂಗವಿಕಲ ಮಕ್ಕಳು ಜನಿಸುತಿದ್ದಾರೆ. (ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೂಡು ಜಿಲ್ಲೆಯಲ್ಲಿ 1980 ರ ದಶಕದಲ್ಲಿ ಗೇರು ಬೀಜದ ಮರಗಳ ಮೇಲೆ ಸಿಂಪಡಿಸಿದ ಎಂಡೋಸಲ್ಫಾನ್ ಕೀಟನಾಶಕದಿಂದ ಇಂತಹದ್ದೇ ಅವಘಡ ಸಂಭವಿಸಿತು) ವಿಯಟ್ನಾಂ ಸಕರ್ಾರ ಮಾನ್ಸೆಂಟೊ ಕಂಪನಿಯ ವಿರುದ್ಧ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಪರಿಹಾರ ಇನ್ನೂ ನಿಧರ್ಾರವಾಗಿಲ್ಲ. ದುರಂತವೆಂದರೆ, ಏಜೆಂಟ್ ಆರೆಂಜ್ ಎಂಬ ರಸಾಯನಿಕ ಈಗ ರೌಂಡ್ ಅಪ್ ಹೆಸರಿನಲ್ಲಿ ಕಳೆನಾಶಕದ ರೂಪ ಪಡೆದು ಜಗತ್ತಿನೆಲ್ಲೆಡೆ ಮಾರಾಟವಾಗುತ್ತಿದೆ.ಭಾರತದ ರೈತರು ಭತ್ತದ ಬೆಳೆಯಲ್ಲಿ ಬರುವ ಕಳೆನಾಶಕ್ಕಾಗಿ ಇದನ್ನು ಅತಿ ಹೆಚ್ಚು ಉಪಯೋಗಿಸುತಿದ್ದಾರೆ. ತೃತೀಯ ಜಗತ್ತಿನ ಬಡತನ ಮತ್ತು ಅನಕ್ಷರತೆಯನ್ನು ಬಂಡವಾಳ ಮಾಡಿಕೊಂಡು, ಇಲ್ಲಿನ ಆಹಾರ ಭದ್ರತೆಯ ಕೀಲಿಯನ್ನು ತನ್ನದಾಗಿಸಿಕೊಳ್ಳುವ ನಿಟ್ಟಿನಲ್ಲಿ ಹೊರಟಿರುವ ಮಾನ್ಸಂಟೊ ಕಂಪನಿ ಮತ್ತು ಇದರ ಉತ್ಪಾದನೆಗಳ ಬಗ್ಗೆ ಡಂಗೂರ ಸಾರುತ್ತಿರುವ ವಿಜ್ಞಾನಿಗಳು ಮೊದಲು ಅರಿಯಬೇಕಾದ ಸತ್ಯವೊಂದಿದೆ. ಭಾರತವೂ ಸೇರಿದಂತೆ ಆಫ್ರಿಕಾದಂತಹ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ನಮ್ಮ ರೈತರು ತಮ್ಮ ಪಾರಂಪರಿಕ ಕೃಷಿ ಜ್ಞಾನವನ್ನು ಕಾಪಾಡಿಕೊಂಡು ಜೀವಜಾಲಕ್ಕೆ ಎರವಾಗದಂತೆ, ಹವಾಮಾನಕ್ಕೆ ತಕ್ಕಂತೆ ಆಹಾರ ಬೆಳೆಗಳನ್ನು ಬೆಳೆಯುತ್ತಾ ಆಹಾರ ಭದ್ರತೆಗೆ ದಾರಿ ಕಂಡುಕೊಂಡಿದ್ದಾರೆ. ಒಬ್ಬ ಕೃಷಿಕ ತನ್ನ ಭೂಮಿಯಲ್ಲಿ ಏನನ್ನು ಬಿತ್ತಬೇಕು, ಏನನ್ನು ಬೆಳೆಯಬೇಕು ಎಂಬುದರ ಬಗ್ಗೆ ನಿರ್ದರಿಸುವ ಸಾರ್ವಭೌಮ ಹಕ್ಕನ್ನು ಹೊಂದಿದ್ದಾನೆ ಇದನ್ನು ಕಸಿದುಕೊಳ್ಳು ಹಕ್ಕು ಈ ಭೂಮಿಯ ಮೇಲೆ ಯಾರಿಗೂ ಇಲ್ಲ. ಕುಲಾಂತರಿ ತಳಿಗಳ ಪ್ರಯೋಗದಿಂದ ಇಳುವರಿ ದ್ವಿಗುಣಗೊಂಡು, ಉತ್ಪಾದನಾ ವೆಚ್ಚ ಕಡಿಮೆಯಾಗಲಿದೆ ಎಂದು ಗಂಟಲು ಹರಿದುಕೊಳ್ಳುತ್ತಿರುವ ಜೈವಿಕ ತಂತ್ರಜ್ಞಾನ ವಿಜ್ಞಾನಿಗಳು, 1951 ರಲ್ಲಿ 52ಮಿಲಿಯನ್ ಟನ್ ಆಹಾರ ಧಾನ್ಯ ಬೆಳೆಯುತಿದ್ದ ಭಾರತದ ರೈತರು, ಈಗ ಕುಲಾಂತರಿ ತಳಿಗಳ ಹಂಗಿಲ್ಲದೆ, 257 ಮಿಲಿಯನ್ ಟನ್ ಆಹಾರ ಧಾನ್ಯ ಬೆಳೆದು ದೇಶದ ಆಹಾರ ಭದ್ರತೆಗೆ ಸುಭದ್ರ ಅಡಿಪಾಯ ಹಾಕಿದ್ದಾರೆ ಎಂಬುದನ್ನು ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ? ಈ ಅಂಕಿ ಅಂಶ ಅವರ ಕಣ್ಣಿಗೇಕೆ ಗೋಚರಿಸುತ್ತಿಲ್ಲ.? ಭಾರತ ಮತ್ತು ಆಫ್ರಿಕಾ ಸೇರಿದಂತೆ ಜಗತ್ತಿನ ತೃತೀಯ ರಾಷ್ಟಗಳಲ್ಲಿ ಚಾಲ್ತಿಯಲ್ಲಿರುವ ಆಹಾರ ಬೆಳೆಗಳ ಮತ್ತು ಹಣ್ಣು ಹಾಗೂ ತರಕಾರಿಗಳ ಬೀಜಗಳು ಯಾವನೋ ಒಬ್ಬ ವಿಜ್ಞಾನಿ ಅಥವಾ ಸಂಸ್ಥೆ ಶೋಧಿಸಿದ ಬೀಜಗಳಲ್ಲ ಇವು ನಮ್ಮ ನಿಸರ್ಗದಲ್ಲಿ ಇದ್ದ ಮೂಲ ತಳಿಗಳು. ನಮ್ಮ ಪೂವರ್ಿಕರು ಆಯಾ ಹವಾಮಾನಕ್ಕೆ ಹೊಂದಿಕೊಳ್ಳುವ ಭತ್ತ, ಗೋಧಿ, ಜೋಳ, ರಾಗಿ, ಬದನೆ, ಟಮೋಟೊ ಕುಂಬಳ ಸೋರೆ, ಹೀರೆಕಾಯಿ, ಬೆಂಡೆ, ಆಲೂಗೆಡ್ಡೆ ಇವುಗಳನ್ನು ಪತ್ತೆ ಹಚ್ಚಿ, ಸಂಸ್ಕರಿಸಿ ಪೋಷಿಸಿಕೊಂಡು ಬಂದ ಫಲವಾಗಿ ನಮ್ಮ ನಡುವೆ ಉಳಿದಿವೆ. ಪುನರ್ ಬಳಕೆಯಾಗುವ ಶಕ್ತಿಯನ್ನು ಈ ಆಹಾರ ಬೆಳೆ ಮತ್ತು ಹಣ್ಣು ತರಕಾರಿ ಬೀಜಗಳು ಹೊಂದಿದ್ದರಿಂದ ಇವೆಲ್ಲವೂ ನಮ್ಮ ಪೂವರ್ಿಕರ ಕೈಯಲ್ಲಿ ಸುರಕ್ಷಿತವಾಗಿದ್ದವು. ಜೊತೆಗೆ ರೈತರು ತಾವು ಬೆಳೆಯುವ ಬೆಳೆಗಳ ಜೊತೆಗೆ ವಿವಿಧ ಬೆಳೆಗಳನ್ನು ಒಟ್ಟಾಗಿ ಬೆಳೆಯುವುದರ ಮೂಲಕ ನಿಸರ್ಗದ ಕೀಟ ನಿಯಂತ್ರಣ ವ್ಯವೆಸ್ಥೆಗೆ ದಾರಿ ಕಂಡುಕೊಂಡಿದ್ದರು. ಬಹುತೇಕ ಈ ಬೆಳೆಗಳು ರೋಗ ನಿರೋಧಕ ಶಕ್ತಿಯ ಜೊತೆಗೆ ಕೀಟ ಬಾಧೆಯನ್ನು ತಡೆದುಕೊಳ್ಳುವ ಸಾಮಥ್ರ್ಯ ಹೊಂದಿದ್ದವು. ಜಗತ್ತಿನ ರೈತರ ಸಹಜ ಕೃಷಿಯನ್ನು ಪಲ್ಲಟಗೊಳಿಸಿ, ಅವರ ಬೀಜ ಸ್ವಾತಂತ್ರ್ಯವನ್ನು ಹರಣ ಮಾಡುವುದರ ಮೂಲಕ ಜಗತ್ತಿನ ಆಹಾರ ಭದ್ರತೆಯ ಸೂತ್ರಗಳನ್ನು ತನ್ನ ಕೈಗೆ ತೆಗೆದುಕೊಳ್ಳುವ ಹುನ್ನಾರ ಅಮೇರಿಕಾ ಮತ್ತು ಅದರ ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಯ ಹಿಂದೆ ಅಡಗಿದೆ. ಹದಿನೇಳು ವರ್ಷಗಳ ಹಿಂದೆ ಕಂಡು ಹಿಡಿದ ಬಿ.ಟಿ. ಹತ್ತಿಯ ಅವಾಂತರ ಭಾರತದಲ್ಲಿ ರೈತರ ದುರಂತ ಅಧ್ಯಾಯವನ್ನೇ ಸೃಷ್ಟಿಸಿದೆ. ಅಷ್ಟೇ ಏಕೆ ಅಮೇರಿಕಾದಲ್ಲಿ ಬಳಕೆಗೆ ಬಂದ ಸೋಯಾ ಅವರೆ ಮತ್ತು ಮೆಕ್ಕೆಜೋಳದ ಅವಾಂತರ ಇತ್ತೀಚೆಗೆ ಜಗತ್ತಿಗೆ ಅನಾವರಣಗೊಂಡಿದೆ. ಎಫ್. ವಿಲಿಯಮ್ ಎಂಗ್ದಲ್ ಎಂಬುವರು ಬರೆದಿರುವ ಸೀಡ್ಸ್ ಆಪ್ ಡಿಸ್ಟ್ರಕ್ಷನ್, ದ ಹಿಡನ್ ಅಜೆಂಡ ಆಪ್ ಜಿನೆಟಿಕ್ ಮಾನಿಪುಲೇಷನ್ ಎಂಬ ಕೃತಿ ಅಮೇರಿಕಾ ರೈತರು ಅನುಭವಿಸಿದ ಸಂಕಷ್ಟವನ್ನು ವಿವರಿಸುತ್ತದೆ. ಅಲ್ಲಿನ ರೈತರು ಕುಲಾಂತರಿ ತಳಿಗಳ ಬೀಜಗಳನ್ನು ಕೊಳ್ಳುವುದರ ಜೊತೆಗೆ ರೌಂಡ್ ಅಪ್ ಕಳೆನಾಶಕ ತೆಗೆದುಕೊಳ್ಳುವುದನ್ನು ಮಾನ್ಸಂಟೊ ಕಂಪನಿ ಕಡ್ಡಾಯ ಮಾಡಿದೆ. ಈಗ ಅಮೇರಿಕದ ರೈತರನ್ನು ಮತ್ತು ಅಲ್ಲಿನ ಸಕರ್ಾರದ ಕೃಷಿ ಇಲಾಖೆಯನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯೆಂದರೆ, ಗೋಧಿ ಮತ್ತು ಮೆಕ್ಕೆಜೋಳದ ಹೊಲಗಳಲ್ಲಿ ಆರು ಅಡಿ ಎತ್ತರ ಬೆಳೆದು ನಿಂತಿರುವ ದೈತ್ಯ ಕಳೆ. ಇದನ್ನು ಹೇಗೆ ನಿವಾರಿಸ ಬೇಕೆಂಬುದು ಗೊತ್ತಾಗಿಲ್ಲ. ಇನ್ನು ಈ ಕುಲಾಂತರಿ ತಳಿಗಳಾದ ಬದನೆ, ಸೋಯಾ ಅವರೆ, ಜೋಳ ಇವುಗಳನ್ನು ತೃತಿಯ ಜಗತ್ತಿ ರಾಷ್ಟ್ರಗಳಿಗೆ ಪರಿಚಯಿಸಿದರೆ, ನಮ್ಮ ರೈತರ ಕಥೆಯೇನು? 1970 ದಶಕದಲ್ಲಿ ಅಮೇರಿಕಾದ ಗೋಧಿ ಜೊತೆ ಬಂದ ಪಾಥರ್ೆನಿಯಂ ಕಳೆಗೆ ಭಾರತದಲ್ಲಿ ಪರಿಹಾರ ದೊರೆತಿಲ್ಲ. ನಮ್ಮ ಕೆರೆ ಕುಂಟೆ ಗಳನ್ನು ಆವರಿಸಿಕೊಂಡಿರುವ ಹಯಾಸಿಂಥ್ ಮತ್ತು ಪಿಸ್ಟಿಯಾ ಎಂಬ ನೀರಿನಲ್ಲಿ ತೇಲುತ್ತಾ ಬೆಳೆಯುವ ಕಳೆಗೆ ಕೂಡ ಇನ್ನೂ ಮುಕ್ತಿ ಸಿಕ್ಕಿಲ್ಲ. ಭಾರತದಲ್ಲಿ ಆಹಾರ ಬೆಳೆಯಾಗದ ಕಾರಣ ಬಿಟಿ. ಹತ್ತಿ ಬೆಳೆಗೆ ಅವಕಾಶ ನೀಡಲಾಗಿತ್ತು. ಮಣ್ಣಿನಲ್ಲಿದೊರೆಯುವ ಬ್ಯಾಕ್ಟಿರಿಯಾದಿಂದ ಬೇರ್ಪಡಿಸಿದ ಒಂದು ಗುಣಾಣು. ಇದನ್ನು ಬೀಜಗಳ ಕೋಶಕ್ಕೆ ಜೋಡಿಸಿ ಕೀಟ ಮತ್ತು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲಾಗಿದೆ ಎಂಬುದು ಬಿ.ಟಿ. ತಂತ್ರ ಜ್ಞಾನವನ್ನು ಪ್ರತಿಪಾದಿಸುವ ವಿಜ್ಞಾನಿಗಳ ವಾದ. ಆದರೆ, ಮೊದಲ ಎರಡು ವರ್ಷದಲ್ಲಿ ಶೇಕಡ 60ರಷ್ಟು ಇಂತಹ ಶಕ್ತಿ ಕುಲಾಂತರಿ ಬೆಳೆಗಳಿಗೆ ಇದ್ದು ಕ್ರಮೇಣ ಕ್ಷೀಣಿಸಿರುವುದು ಪ್ರಯೋಗದಿಂದ ಧೃಡಪಟ್ಟಿದೆ. ಕಾಂಡ ಕೊರೆಯುವ ಹುಳುಗಳು ಬಿ.ಟಿ. ಹತ್ತಿಯ ಕಾಯಿಯನ್ನು ತಿಂದು ಜೀಣರ್ಿಸಿಕೊಳ್ಳು ಶಕ್ತಿಯನ್ನು ವೃದ್ಧಿಸಿಕೊಂಡಿವೆ. ಇದರಿಂದ ರೈತರಿಗೆ ಆದ ಪ್ರಯೋಜನವೇನು? ವಿನಿಮಯದ ಮೂಲಕ ಪುಕ್ಕಟೆಯಾಗಿ ಬೀಜ ಪಡೆಯುತಿದ್ದ ರೈತ ಒಂದು ಕೆ.ಜಿ. ಹತ್ತಿ ಬೀಜಕ್ಕೆ ಮೂರು ಸಾವಿರ ರೂಪಾಯಿ ತೆರಬೇಕಾದ ಸುಳಿಗೆ ಸಿಲುಕಿದ್ದಾನೆ. ಜೊತೆಗೆ ದುಬಾರಿ ರಸಾಯನಿಕ ಗೊಬ್ಬರ ಕೀಟನಾಶಕ ಬಳಸುವ ಸ್ಥಿತಿ ತಲುಪಿದ್ದಾನೆ. ಕೇವಲ ಒಂದು ಹೆಕ್ಟೇರ್ ಹತ್ತಿ ಬೆಳೆಗೆ ಮೂರರಿಂದ ಏಳು ಸಾವಿರ ರೂಪಾಯಿ ಖಚರ್ು ಮಾಡುತಿದ್ದ ರೈತರು ಇಂದು ಎಪ್ಪತ್ತರಿಂದ ಒಂದು ಲಕ್ಷ ರೂಪಾಯಿ ಖಚರ್ು ಮಾಡುವ ಸ್ಥಿತಿ ಬಂದೊದಗಿದೆ. ಕಳೆದ 17 ವರ್ಷಗಳಲ್ಲಿ ದೇಶದಲ್ಲಿ ಎರಡು ಲಕ್ಷದ ತೊಂಬತ್ತು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಶೇಕಡ ಎಂಬತ್ತು ಭಾಗದಷ್ಟು ರೈತರು ಬಿ.ಟಿ. ಹತ್ತಿ ಬೆಳೆದು ಸಾಲದ ಸುಳಿಗೆ ಸಿಲುಕಿದವರು. ವಿಶೇಷವಾಗಿ ಮಹಾರಾಷ್ಟ್ರದ ವಿದರ್ಭ ಮತ್ತು ಆಂಧ್ರದ ತೆಲಂಗಾಣ ಪ್ರಾಂತ್ಯದ ರೈತರೇ ಹೆಚ್ಚಿನವರಾಗಿದ್ದಾರೆ. ಈ ಬಗ್ಗೆ ಅಮೇರಿಕಾದ ವಾಷಿಂಗ್ಟನ್ ವಿ.ವಿ. ಸಮಾಜ ವಿಜ್ಞಾನಿ ಸ್ಟ್ರಾಸ್ ಎಂಬುವರು 2002ರಿಂದ 2009ರವರೆಗೆ ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿ ಅಧ್ಯಯನ ನಡೆಸಿ, ರೈತರ ಸಾವಿನ ಬಗ್ಗೆ ವರದಿ ತಯಾರಿಸದ್ದಾರೆ. ಇದೊಂದು ಮನ್ಸಾಂಟೊ ಕಂಪನಿ ಸೃಷ್ಟಿಸಿದ ವಿಷ ವತರ್ುಲ ಎಂದು ತಮ್ಮ ವರದಿಯಲ್ಲಿ ಬಣ್ಣಿಸಿದ್ದಾರೆ 2008ರಲ್ಲಿ ಭಾರತಕ್ಕೆ ಬಂದಿದ್ದ ಅಮೇರಿಕಾದ ಹಿರಿಯ ವಿಜ್ಞಾನಿ ಮೈಕಲ್ ಕೆ.ಹ್ಯಾನ್ಸನ್ 1995ರಿಂದ 2008ರ ವರೆಗಿನ ಅಮೇರಿಕಾದ ಆಹಾರ ಉತ್ಪಾದನೆಯನ್ನು ಗಮನಿಸಿ ಬಿ.ಟಿ.ತಂತ್ರಜ್ಞಾನದಿಂದ ಇಳುವರಿ ಹೆಚ್ಚಾಗಿಲ್ಲ ಎಂಬುದನ್ನು ಧೃಡಪಡಿಸಿದ್ದಾರೆ. ಅಷ್ಟೇ ಏಕೆ? ನಮ್ಮ ನಡುವಿನ ಪ್ರಸಿದ್ಧ ಪತ್ರಕರ್ತ ಪಿ ಸಾಯಿನಾಥ್ ನಡೆಸಿರುವ ಅಧಯ್ಯನ ವರದಿಗಳು ಜಗತ್ತಿನ ಎಲ್ಲಾ ವಿಜ್ಞಾನಿಗಳ ಕಣ್ಣು ತೆರಸಬಲ್ಲವು. ಅತ್ಯಂತ ನೋವಿನ ಸಂಗತಿಯೆಂದರೆ, ನಮ್ಮ ಭಾರತ ಮೂಲದ ಅದರಲ್ಲೂ ಕನರ್ಾಟಕದ ಪ್ರೊ. ಶಂತನು ಶಾಂತರಾಮ್ ಎಂಬುವವರು ಬಿ.ಟಿ. ತಂತ್ರಜ್ಞಾನದ ಬಗ್ಗೆ ತಮಟೆ ಬಾರಿಸುವುದರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರಿಗೆ ನಮ್ಮ ನೆರೆಯ ಆಂಧ್ರದ ಕಾಮೇಶ್ವರ ರಾವ್ ಎಂಬುವರು ಕೈ ಜೋಡಿಸಿದ್ದಾರೆ. ಇವರಾಡುವ ಪ್ರತಿ ಮಾತಿಗೆ ಮತ್ತು ಬರೆಯುವ ಪ್ರತಿ ಅಕ್ಷರಕ್ಕೆ ಎಷ್ಟು ಡಾಲರ್ ಹಣ ಸಂದಾಯವಾಗುತ್ತದೆ ಎಂಬುದು ಜಗತ್ತಿಗೆ ರಹಸ್ಯವಾಗಿ ಉಳಿದಿಲ್ಲ. ಇವರ ದೃಷ್ಟಿಯಲ್ಲಿ ಬಿ.ಟಿ. ತಂತ್ರಜ್ಞಾನ ವಿರೋಧಿಸುವವರೆಲ್ಲಾ ಜಗತ್ತು ತಿರಸ್ಕರಿದ ವಿಜ್ಞಾನಿಗಳು ಮತ್ತು ಕುಲಾಂತರಿ ತಳಿಗಳ ಅಡ್ಡ ಪರಿಣಾಮದ ಬಗ್ಗೆ ಬಂದಿರುವ ವರದಿಗಳು ಕಸದ ಬುಟ್ಟಿಗೆ ಹೋಗುವ ಅರ್ಹತೆ ಪಡೆದಿರುವಂತಹವು. ಇವರು ಮಾನ್ಸಂಟೊ ಕಂಪನಿಯ ಕರಪತ್ರಗಳನ್ನು ಹೊರತು ಪಡಿಸಿ ಮತ್ತೇನನ್ನೂ ಓದಲಾರದ ಬೃಹಸ್ಪತಿಗಳು ಎಂಬುದನ್ನ ಇವರ ಹೇಳಿಕೆಗಳೇ ಸೃಷ್ಟಪಡಿಸುತ್ತವೆ. ಡಾ. ವಂದನಾ ಶಿವಂ ರವರ ಸ್ಟೋಲನ್ ಹಾವರ್ೆಸ್ಟ್ ( ಕದ್ದ ಫಸಲು) ಕೃತಿಯನ್ನು ಓದಿದವರಿಗೆ ಶಾಂತರಾಂ ಎಷ್ಟು ದೊಡ್ಡ ಮಟ್ಟದ ಸುಳ್ಳುಗಾರ ಎಂಬುದು ಮನದಟ್ಟಾಗುತ್ತದೆ. ದಿನಾಂಕ 24-6-2009ರ ವಿಜಯ ಕನರ್ಾಟಕದಲ್ಲಿ ಇವರು ಬಿ.ಟಿ. ಬದನೆ ಕುರಿತು ಲೇಖನ ಬರೆಯುತ್ತಾ, ಭಾರತದಲ್ಲಿ ದಿಲ್ಲಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಬಿ.ಟಿ.ಬದನೆ ಕುರಿತು ಪ್ರಯೋಗ ನಡೆಸಲಾಯಿತು ಎಂದಿದ್ದಾರೆ, ವಾಸ್ತವವಾಗಿ ಕಾನರ್ಾಟಕದ ಧಾರವಾಡದ ಕೃಷಿ ವಿ.ವಿ. ಮತ್ತು ತಮಿಳುನಾಡಿನ ಕೃಷಿ ವಿ.ವಿ. ಈ ಬಗ್ಗೆ ಪ್ರಯೋಗ ನಡೆಸಿ ಈಗ ವಿವಾದಕ್ಕೆ ಸಿಲುಕಿವೆ. ಇದೇ 2012 ರ ಜೂನ್ 20ರಂದು ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರದ ಸಭೆಯಲ್ಲಿ ಧಾರವಾಡದ ಕೃಷಿ ವಿ.ವಿ.ವಿರುದ್ಧ ಕಾನೂನು ಕ್ರಮ ಜರುಗಿಸಲು ಶಿಫಾರಸ್ಸು ಮಾಡಲಾಗಿದೆ. 2002 ರ ರಾಷ್ಟ್ರೀಯ ಜೀವ ವೈವಿಧ್ಯ ಕಾಯ್ದೆ ಹಾಗೂ 2006 ರ ಕನರ್ಾಟಕ ಜೀವ ವೈವಿಧ್ಯ ಕಾಯ್ದೆ ಅನ್ವಯ ಕ್ರಮ ಜರುಗಿಸಲು ಸೂಚಿಸಲಾಗಿದೆ. ಈ ಕಾಯ್ದೆಗಳ ಪ್ರಕಾರ ದೇಶದ ಯಾವುದೇ ಜೈವಿಕ ಸಂಪತ್ತನ್ನು ಪ್ರಯೋಗಕ್ಕೆ ಒಳಪಡಿಸುವ ಮುನ್ನ ಅನುಮತಿ ಪಡೆಯುವುದು ಕಡ್ಡಾಯ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾನ್ಸಂಟೊ ಕಂಪನಿಯ ಅಂಗ ಸಂಸ್ಥೆಯಾಗಿರುವ ಮಹಿಕೊ ಕಂಪನಿ ತಾನು ಕೇವಲ ತಂತ್ರಜ್ಞಾನದ ನೆರವನ್ನು ಮಾತ್ರ ನೀಡಿದ್ದೇವೆ. ಸಂಶೋಧನೆ ನಡೆಸಿದವರು ವಿಜ್ಞಾನಿಗಳು ಎಂದು ನೆಪ ಹೇಳಿ ಜವಬ್ದಾರಿಯಿಂದ ತಪ್ಪಿಸಿಕೊಂಡಿದೆ. ಬಿ.ಟಿ. ಬದನೆ ಜನಪಯೋಗಿಯಾಗಿದ್ದರೆ, ಕದ್ದು ಮುಚ್ಚಿ ಪ್ರಯೋಗ ನಡೆಸುವ ಅವಶ್ಯಕತೆ ಏನಿತ್ತು. ಅಮೇರಿಕಾದಲ್ಲಿ 300 ದಶಲಕ್ಷ ಜನ ಕುಲಾಂತರಿ ಬೆಳೆಗಳ ಆಹಾರ ಸೇವಿಸುತಿದ್ದಾರೆ ಎಂದು ತಿಳಿಸಿದ್ದಾರೆ. ಅಮೇರಿಕಾದ ಜನತೆ ಕುಲಾಂತರಿ ಬೆಳೆಗಳ ಆಹಾರದಿಂದ ಬೇಸತ್ತು ಸಾವಯ ಕೃಷಿ ಮೂಲಕ ಬೆಳದ ಆಹಾರಕ್ಕೆ ಮಾನ್ಯತೆ ನೀಡಿದ್ದಾರೆ. 1997ರಲ್ಲಿ ಶೇಕಡ 3.6 ಬಿಲಿಯನ್ ಡಾಲರ್ ವ್ಯವಹಾರ ಇದ್ದ ಸಾವಯವ ಕೃಷಿ ಮೂಲದ ಆಹಾರದ ವಹಿವಾಟು 2008ಕ್ಕೆ 21.1 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಅಮೇರಿಕಾದ ಕೃಷಿ ಇಲಾಖೆ ಮತ್ತು ಅಲ್ಲಿನ ಐಯೊವ ವಿ.ವಿ. ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಜಗತ್ತಿನಾದ್ಯಂತ ರೈತರು ಮತ್ತು 110 ದೇಶಗಳ ವಿಜ್ಞಾನಿಗಳು ಸಾವಯವ ಕೃಷಿಗೆ ಒಲವು ತೋರಿರುವುದು ಧೃಡಪಟ್ಟಿದೆ. ಕುಲಾಂತರಿ ತಳಿಗಳಿಂದ ಯಾವುದೇ ಅಪಾಯವಿಲ್ಲದಿದ್ದರೆ, ಮಾನ್ಸಂಟೊ ಕಂಪನಿ ಯಾಕೆ ರಹಸ್ಯವಾಗಿ ಪ್ರಯೋಗ ನಡೆಸುವ ಅವಶ್ಯಕತೆ ಏನಿತ್ತು? 2009ರಲ್ಲಿ ತಮಿಳುನಾಡಿನ ರಾಮನಾಥಪುರ ಜಿಲ್ಲೆಯಲ್ಲಿ ಮತ್ತು ಹರ್ಯಾಣದ ಕನರ್ಾಲ್ ಬಳಿ ಸ್ಥಳೀಯ ಸಂಸ್ಥೆಗಳ ಮತ್ತು ಸಕರ್ಾರದ ಅನುಮತಿ ಪಡೆಯದೇ, ರೈತರಿಂದ ಭೂಮಿಯನ್ನು ಬಾಡಿಗೆ ಪಡೆದು ಬಿ.ಟಿ. ಭತ್ತದ ಬೆಳೆ ಪ್ರಯೋಗಕ್ಕೆ ಮುಂದಾಗಿ ಛೀಮಾರಿ ಹಾಕಿಸಿಕೊಂಡ ನೆನಪು ಇನ್ನೂ ಹಸಿಯಾಗಿದೆ. ಪ್ರಾನ್ಸ್ ರೈತರು ಅಲ್ಲಿನ ಮಾನ್ಸಂಟೊ ಕಂಪನಿಯ ದ್ರಾಕ್ಷಿ ತೋಟ ಮತ್ತು ವೈನ್ ತಯಾರಿಕಾ ಘಟಕವನ್ನು ಧ್ವಂಸ ಮಾಡಿದ್ದು ಯಾಕೆ? ಕೆನಡ ರೈತರು ಗೋಲ್ಡನ್ ರೈಸ್ ಎಂಬ ಭತ್ತದ ಬೆಳೆ ವಿರುದ್ಧ ತಿರುಗಿ ಬಿದ್ದಾಗ ಅದರ ಬೀಜಗಳನ್ನು ಸ್ವಿಟ್ಜರ್ ಲ್ಯಾಂಡ್ ದೇಶದ ಬಾಂಬ್ ನಿರೋಧಕ ಬಂಕರ್ ( ನೆಲಮಾಳಿಗೆ) ನಲ್ಲಿ ಮುಚ್ಚಿಡುವ ಅವಶ್ಯಕತೆ ಏನಿತ್ತು? ಇವು ಮಾನ್ಸಂಟೊ ಕಂಪನಿಯ ಮುಖವಾಡವನ್ನು ಅನಾವರಣಗೊಳಿಸಿದ ಸಂಗತಿಗಳು. ನಮ್ಮ ಪ್ರೊ. ಶಾಂತರಾಮ್ ಏಕಿಷ್ಟು ಬಿ.ಟಿ. ಆಹಾರ ಬೆಳೆಗಳ ಬಗ್ಗೆ ವಾದ ಮಂಡಿಸುತ್ತಿದ್ದಾರೆ ಎಂಬುದರ ಬಗ್ಗೆ ಸಂಶಯಗೊಂಡು ವಿಷಯದ ಮೂಲ ಹುಡುಕುತ್ತಾ ಹೋದಾಗ  ತಿಳಿದು ಬಂದ ಸಂಗತಿಯೆಂದರೆ, ಅಮೇರಿಕಾದ ಪ್ರಿನ್ಸ್ ಟನ್ ವಿವಿಯಲ್ಲಿ ಅವರು ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಕುಲಾಂತರಿ ತಳಿಗಳನ್ನು ಜಾರಿಗೆ ತರುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಹಾಗಾಗಿ ಪಾಪ ಅವರು ನಮ್ಮ ವಿಜ್ಞಾನಿಗಳು ಮತ್ತು ಪರಿಸರ ತಜ್ಞರ ವಿರುದ್ಧ  ವಾದ ಮಾಡುತ್ತಲೇ ಇರಬೇಕು!! ಈ ಎಲ್ಲಾ ಇತಿಹಾಸವನ್ನು ತಿಳಿದ ಕೃಷಿ ಕುರಿತ ನಮ್ಮ ಸಂಸದೀಯ ಅಧ್ಯಯನ ಸಮಿತಿ; ಭಾರತದಲ್ಲಿ ಕುಲಾಂತರಿ ಬದನೆಯ ಬಳಕೆ ಮೇಲೆ ನಿಷೇಧ ಹೇರಲು ಸಕರ್ಾರಕ್ಕೆ ಶಿಫಾರಸ್ಸು ಮಾಡಿದೆ. ಅಷ್ಟೇ ಅಲ್ಲದೆ, ಬಿ.ಟಿ. ಬದನೆ ಬಗ್ಗೆ ಲಾಭಿ ನಡೆಸಿ ಒತ್ತಡ ತಂತ್ರ ಹೇರಿದ ಪ್ರಭಾವಿ ವಿಜ್ಞಾನಿಗಳು ಮತ್ತು ರಾಜಕಾರಣಿಗಳ ಮೇಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಲಹೆ ನೀಡಿದೆ.      ]]>

‍ಲೇಖಕರು G

September 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

2 ಪ್ರತಿಕ್ರಿಯೆಗಳು

 1. ಪ್ರಸನ್ನ ಆಡುವಳ್ಳಿ

  ಒಳ್ಳೇ ಲೇಖನ, ಆದರೆ ಒಂದೆರೆಡು ವಿಷಯಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.
  ” ದುರಂತವೆಂದರೆ, ಏಜೆಂಟ್ ಆರೆಂಜ್ ಎಂಬ ರಸಾಯನಿಕ ಈಗ ರೌಂಡ್ ಅಪ್ ಹೆಸರಿನಲ್ಲಿ ಕಳೆನಾಶಕದ ರೂಪ ಪಡೆದು ಜಗತ್ತಿನೆಲ್ಲೆಡೆ ಮಾರಾಟವಾಗುತ್ತಿದೆ”
  -ಏಜಂಟ್ ಆರೆಂಜ್ ಹಾಗೂ ರೌಂಡ್ ಅಪ್ ಎರೆಡೂ ಸಂಪೂರ್ಣವಾಗಿ ವಿಭಿನ್ನ ರಾಸಾಯನಿಕಗಳು. ಅವುಗಳು ಕಳೆನಾಶ ಮಾಡುವ ವಿಧಾನವೂ ಬೇರೆ-ಬೇರೆ. (ಎರೆಡೂ ವಿಷಗಳೇ!)
  “ಅಲ್ಲಿನ ರೈತರು ಕುಲಾಂತರಿ ತಳಿಗಳ ಬೀಜಗಳನ್ನು ಕೊಳ್ಳುವುದರ ಜೊತೆಗೆ ರೌಂಡ್ ಅಪ್ ಕಳೆನಾಶಕ ತೆಗೆದುಕೊಳ್ಳುವುದನ್ನು ಮಾನ್ಸಂಟೊ ಕಂಪನಿ ಕಡ್ಡಾಯ ಮಾಡಿದೆ”
  – ಮಾನ್ಸಂಟೋ ಹಾಗೆ ಯಾವುದನ್ನು (ಅಧಿಕೃತವಾಗಿ!) ಕಡ್ದಾಯ ಮಾಡಿಲ್ಲ.ಮಾಡುವಂತೆಯೂ ಇಲ್ಲ.ಅವರು ಅಭಿವೃದ್ದಿಪಡಿಸಿರುವ ಕಳೆನಾಷಕ ವಿರೋಧಿ (herbicide tolerant) ಕುಲಾಂತರಿ ಬೆಳೆಯುವಾಗ ರೌಂಡಪ್ ಸಿಂಪಡಿಸಬಹುದು.ಉಳಿದ ಕುಲಾಂತರಿಗಳಿಗೆ ಅಥವಾ ಸಾಂಪ್ರದಾಯಕ ಬೆಳೆಗಳಿಗೆ ಸಿಂಪಡಿಸುವುದು ರೈತರಿಗೆ ಬಿಟ್ಟಿದ್ದು.
  ಜೈವಿಕ ತಂತ್ರಜ್ನಾನದ ಸಾಧ್ಯತೆಗಳು ಹಲವು. ಅವುಗಳನ್ನು ಹೇಗೆ ಬಳಸುತ್ತೇವೆಂಬುದು ಮುಖ್ಯ. ಕುಲಾಂತರಿಗಳು ಜೈವಿಕ ತಂತ್ರಜ್ನಾನದ ಒಂದು ಸಾಧ್ಯತೆ ಅಷ್ಟೇ..
  ಇಷ್ಟಕ್ಕೂ ಶಾಂತಾರಾಮರು ಕೃಷಿ ಜೈವಿಕ ತಂತ್ರಜ್ಞಾನದ ದೈತ್ಯ ಕಂಪನಿ ‘ಸಿಂಜೆಂಟಾ’ದ ಉದ್ಯೋಗಿಯಾಗಿದ್ದವರು. ಕುಲಾಂತರಿಗಳನ್ನೆ ಉಸಿರಾಡುತ್ತಿರುವ ಹನ್ನೆರೆಡು ಜಾಗತಿಕ ಕಂಪನಿಗಳ ಮುಖವಾಣಿಯಾದ ABLE-AG(Association of Biotech LeadEnterprices-Agriculture Group)ನ ಮುಖ್ಯಸ್ತರಾಗಿರುವವರು. ‘ಬಯಾಲಜಿಕ್ಸ್ ಇಂಟೆನ್ರ್ಯಾಶನಲ್’ ಎಂಬ ತಮ್ಮದೇ ಆದ ಸಂಸ್ತೆಯೊಂದನ್ನು ಕಟ್ಟಿಕೊಂಡು ಜೈವಿಕ ತಂತ್ರಜ್ಞಾನ ಕಂಪನಿಗಳಿಗೆ ಸಲಹೆ ಕೊಡುತ್ತಿರುವವರು. ಅವರಿಗೆ ರೈತಪರ ಕಳಕಳಿಗಿಂತ ಕಾರ್ಪೋರೇಟ್ ಕಳಕಳಿಯೇ ಹೆಚ್ಚಾಗಿ ಇದ್ದಂತಿದೆ!
  ಈ ಬಗ್ಗೆ ಇನ್ನಷ್ಟು…
  http://aduvalli.blogspot.in/2012/03/blog-post_28.html
  -ಪ್ರಸನ್ನ ಆಡುವಳ್ಳಿ
  Institute of Agricultural Biotechnology
  University of agricultural sciences, Dharwad…(!)

  ಪ್ರತಿಕ್ರಿಯೆ
 2. prasad raxidi

  ಏಜೆಂಟ್ ಆರೆಂಜ್ ಎಂಬ ಹೆಸರಿನ ರೌಂಡಪ್ ಅನ್ನು ಬಯಲುಸೀಮೆಯಲ್ಲಿ ಮಾತ್ರವಲ್ಲ ಮಲೆನಾಡಿನಲ್ಲಿ ಈಗ ವ್ಯಾಪಕವಾಗಿ ಬಳಕೆಯಲ್ಲಿದೆ. ಈಗ ಕೃಷಿ ಕಾರ್ಮಿಕ ಅಭಾವ ತಲೆದೋರಿದ ನಂತರವಂತೂ ರೌಂಡಪ್ ಮತ್ತು ಗ್ಲೈಸೆಲ್ ಗಳನ್ನು ವರುಷದಲ್ಲಿ ಎರಡು ಮೂರುಭಾರಿ ಬಳಸುವುದು ಮಾಮೂಲಿನ ಸಂಗತಿಯಾಗಿದೆ. ಇವು ಅತ್ಯಂತ ನಿರಪಾಯಕಾರಿ ಕಳೆನಾಶಕಗಳೆಂದೂ, ಇದು ಕಳೆಗಿಡಗಳ ಬೇರಿನ ತನಕ ಇಳಿದು ಗಿಡಗಳು ನಾಶವಾಗುತ್ತವೆ. ನಂತರ ಈಗಿಡಗಳು ಅಮಿನೋ ಆಸಿಡ್ ಆಗಿ ಪರಿವರ್ತನೆಹೊಂದುವುದರಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ ಎಂದೂ ಪ್ರಚಾರ ನಡೆದಿದೆ..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: