ಜುಗಾರಿ ಕ್ರಾಸ್ : ದಿನೇಶ್ ಕುಮಾರ್ ಮತ್ತೆ ಬರೆಯುತ್ತಾರೆ

– ಎಸ್ ಸಿ ದಿನೇಶ್ ಕುಮಾರ್ ನಮ್ಮಲ್ಲಿ ಮಾಳವಿಕಾ ನಡೆಸುವ ಬದುಕು ಜಟಕಾಬಂಡಿಯಂಥ ಕಾರ್ಯಕ್ರಮ ಬಂದಿದೆ.  ಹೀಗಾಗಿ ಸತ್ಯಮೇವ ಜಯತೆ ಬೇಕಾಗಿಲ್ಲ: ಇದು ಗಂಗಾಧರ ಮೊದಲಿಯಾರ್ ಹೂಡಿರುವ ಹೊಸ ವಾದ. ಪ್ರಜಾವಾಣಿಯ ಇಂದಿನ ಸಂಚಿಕೆಯಲ್ಲಿ ಮೊದಲಿಯಾರ್ ಅಮೀರ್ ಖಾನ್ ಬುರುಡೆ ಪುರಾಣ ಎಂಬ ಲೇಖನ ಬರೆದಿದ್ದಾರೆ. ಅಮೀರ್ ಖಾನ್ ಬುರುಡೆ ಹೊಡೆಯುತ್ತಿದ್ದಾನೆ ಎನ್ನುವುದಕ್ಕೆ ಮೊದಲಿಯಾರ್ ಬಳಿ ಯಾವ ಸಾಕ್ಷ್ಯವೂ ಇಲ್ಲ. ಸತ್ಯಮೇವ ಜಯತೆ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ, ವರದಕ್ಷಿಣೆ ಪಿಡುಗಿನ ವಿರುದ್ಧ ಒಂದು ಹಂತದ ಜನಾಭಿಪ್ರಾಯ ರೂಪಿಸಲು, ಸರ್ಕಾರಗಳ ಮೇಲೆ ಒತ್ತಡ ಹೇರಲು ಯಶಸ್ವಿಯಾಗಿರುವುದಂತೂ ನಿಜ. ಅದಕ್ಕೆ ಸಾಕ್ಷಿಗಳೂ ಇವೆ. ಇದೆಲ್ಲವೂ ಮೊದಲಿಯಾರ್‌ಗೆ ಬುರುಡೆಯಾಗಿ ಕಾಣಬಹುದು. ಅದು ಹಾಗಿರಲಿ, ಗಂಡಹೆಂಡಿರ ಜಗಳವನ್ನು ಬೀದಿಗೆ ತಂದು, ಸ್ಟುಡಿಯೋದಲ್ಲಿ ಚಪ್ ಚಪ್ಪಲಿಯಲ್ಲಿ ಹೊಡೆದಾಡಿಸಿ, ಅದನ್ನು ಯಥಾವತ್ತಾಗಿ ಪ್ರಸಾರ ಮಾಡಿಸುವ ಜಟಕಾಬಂಡಿಯಂಥ ಕಾರ್ಯಕ್ರಮಕ್ಕೆ ಲೇಖಕರು ಭೇಷ್ ಅಂದಿರುವುದು ಸ್ವಾರಸ್ಯಕರ. ಯಾವುದಾದರೂ ಫ್ಯಾಮಿಲಿ ಗಲಾಟೆ ಇದ್ರೆ ಹೇಳ್ರೀ, ಇಬ್ಬರ ಕಡೆಯವರನ್ನೂ ಸ್ಟುಡಿಯೋಗೆ ಕರೆತಂದರೆ ಐದುಸಾವಿರ ಕೊಡ್ತೀವಿ ಎಂದು ಕಾರ್ಯಕ್ರಮ ನಿರ್ಮಾಪಕರು ಸಿಕ್ಕಸಿಕ್ಕವರಿಗೆ ಆಫರ್ ಕೊಡ್ತಾ ಇದ್ದಿದ್ದು ಬಹುಶಃ ಮೊದಲಿಯಾರ್ ಅವರ ಗಮನಕ್ಕೆ ಬಂದಿಲ್ಲವೇನೋ? ಡಬ್ಬಿಂಗ್ ವಿರೋಧಿಸಬೇಕೆಂದಿದ್ದರೆ ಮೊದಲಿಯಾರ್ ಅವರಿಗೆ ವಾದ ಮಾಡಲು ನೂರೆಂಟು ವಿಷಯಗಳಿದ್ದವು, ಅದಕ್ಕೆ ಸತ್ಯಮೇವ ಜಯತೆಯನ್ನು ಬುರುಡೆ ಪುರಾಣ ಎನ್ನುವ ಸಿನಿಕ, ಹತಾಶ ಸ್ಥಿತಿಗೆ ತಲುಪಬೇಕಾಗಿರಲಿಲ್ಲ. ಜಟಕಾಬಂಡಿಯಂಥ ವಿಕೃತ ಕಾರ್ಯಕ್ರಮವನ್ನು ಸಮರ್ಥಿಸಿಕೊಳ್ಳಬೇಕಾಗಿರಲಿಲ್ಲ. http://prajavani.net/include/​story.php?section=149&menuid=14]]>

‍ಲೇಖಕರು G

May 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

16 ಪ್ರತಿಕ್ರಿಯೆಗಳು

 1. Harsha Kugwe

  ಹಿರಿಯರಾದ ಗಂಗಾಧರ ಮೊದಲಿಯಾರ್ ಅವರು ಸತ್ಯಮೇವ ಜಯತೆ ಕುರಿತು ಹೀಗೆ ಬರೆದಿರುವುದು ಬೇಸರ ತಂದಿದೆ. ಮುಖ್ಯವಾಗಿ ಕನ್ನಡದ ಲಕ್ಷ್ಮಿ, ಮಾಳವಿಕ ಮತ್ತು ಶಿವರಾಜ್ ಕುಮಾರ್ ನಡೆಸಿದ ಕಾರ್ಯಕ್ರಮಗಳು ಸಮಾಜದ ವ್ಯಕ್ತಿಗಳ ಸಮಸ್ಯೆಗಳಲ್ಲಿ ಕೇವಲ ವ್ಯಕ್ತಿಗತ ನೆಲೆಯಲ್ಲಿ ನೋಡಿದ ಪರಿಣಾಮವಾಗಿ ಆ ಕಾರ್ಯಕ್ರಮಗಳು ಒಂದಷ್ಟು ಟಿ ಆರ್ ಪಿ ಹೆಚ್ಚಿಸಿದವೇ ವಿನಃ ಸಮಸ್ಯೆಗಳನ್ನು ಪರಿಹರಿಸಲು ಕೊಡುಗೆ ನೀಡಿದ್ದು ಕಡಿಮೆ. ಆದರೆ ಅಮೀರ್ ಖಾನ್ ಅವರ ಸತ್ಯಮೇವ ಜಯತೆ ವ್ಯಕ್ತಿಗಳನ್ನಿಟ್ಟುಕೊಂಡೇ ಆ ಸಮಸ್ಯೆಯ ಸಾಮಾಜಿಕ ಆಯಾಮಗಳನ್ನು ತಿಳಿಸಿಕೊಡಲು ಯತ್ನಿಸುತ್ತಿದೆ. ನಮಗೆಲ್ಲ ಗೊತ್ತಿರುವ ವಿಷಯಗಳನ್ನೇ ಮನಮುಟ್ಟುವಂತೆ ಹೇಳುತ್ತಿರುವುದು ಇಲ್ಲಿನ ವಿಶೇಷ. ಮಾತ್ರವಲ್ಲ ಈ ಕಾರ್ಯಕ್ರಮ ಸರ್ಕಾರದ ನೀತಿ ನಿರೂಪಣೆಯ ಮೇಲೂ ಪರಿಣಾಮ ಬೀರಿತ್ತಿದೆ ಎಂಬುದನ್ನು ಗಮನಿಸಬೇಕಿ. ಸತ್ಯ ಮೇವ ಜನತೆಯ ಎರಡನೆ ಕಾರ್ಯಕ್ರಮ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತಾಗಿತ್ತು. ಅಂದು ಈ ಬಗ್ಗೆ ನಮ್ಮ ದೇಶದಲ್ಲಿ ಒಂದೇ ಒಂದು ಕಾನೂನು ಇಲ್ಲದದ್ದರ ಬಗ್ಗೆ ವಿಶೇಷವಾಗಿ ಗಮನ ಸೆಳೆದಿದ್ದರಲ್ಲದೆ ಹಿಂದೂ ಪತ್ರಿಕೆಯ ಅವರ ಅಂಕಣದಲ್ಲಿ ಕೂಡಾ ಬರೆದರು. ಈಗ ನೋಡಿ ಮೊನ್ನೆ ಸಂಸತ್ತು ಈ ಕುರಿತು ಮಸೂದೆಯೊಂದನ್ನು ಪಾಸು ಮಾಡಿದೆ. ಮೊದಲಿಯಾರರಿಗೆ ಒಂದು ಮಾತು ಹೇಳಬೇಕಿದೆ. ನಮ್ಮ ದೇಶದಲ್ಲಿ ಅಮೀರ್ ಖಾನ್ ಅಂತವರು ಪ್ರಚಾರ ಪ್ರಿಯರಾದರೆ ಅದಕ್ಕಿಂತ ಸಂತೋಷದ ಸಂಗತಿ ಬೇರೊಂದಿಲ್ಲ. ಯಾಕೆಂದರೆ ಅದರಿಂದ ದೇಶಕ್ಕೆ ಒಳ್ಳೆಯದಾಗುತ್ತದೆ.

  ಪ್ರತಿಕ್ರಿಯೆ
 2. ಅರುಣ್ ಮಲ್ನಾಡ್

  ಡಬ್ಬಿಂಗ್ ವಿರೋಧಿಸಬೇಕೆಂದಿದ್ದರೆ ಮೊದಲಿಯಾರ್ ಅವರಿಗೆ ವಾದ ಮಾಡಲು ನೂರೆಂಟು ವಿಷಯಗಳಿದ್ದವು, ಅದಕ್ಕೆ ಸತ್ಯಮೇವ ಜಯತೆಯನ್ನು ಬುರುಡೆ ಪುರಾಣ ಎನ್ನುವ ಸಿನಿಕ, ಹತಾಶ ಸ್ಥಿತಿಗೆ ತಲುಪಬೇಕಾಗಿರಲಿಲ್ಲ. ಜಟಕಾಬಂಡಿಯಂಥ ವಿಕೃತ ಕಾರ್ಯಕ್ರಮವನ್ನು ಸಮರ್ಥಿಸಿಕೊಳ್ಳಬೇಕಾಗಿರಲಿಲ್ಲ…ನಿಮ್ಮ ಮಾತು ನೂರಕ್ಕೆ ನೂರು ನಿಜ ದಿನೇಶ್ ಸಾರ್ ಡಬ್ಬಿಂಗ್ ವಿರೋಧಿಗಳು ಪೂರ್ತಾ ಪೂರ್ತಿ ಹತಾಶರಾಗಿ ಹೋಗಿದ್ದಾರೆ. ಅವರಿಗೆ ತಮ್ಮನ್ನ ತಾವು ಸಮರ್ಥಿಸಿಕೊಳ್ಳಬಲ್ಲ ಯಾವ ಸಾರ್ಥಕ ಸಾಧನೆಯೂ ಎದುರಿಗಿಲ್ಲ ಅನ್ನೋದು ಮನದಟ್ಟಾಗಿದೆ. ಕೇವಲ ತಮ್ಮ ವ್ಯವಹಾರದ ಹಿತದೃಷ್ಟಿಯಿಂದ ಡಬ್ಬಿಂಗ್ ಬೇಡಾ ಅಂತ ಹುಯಿಲಿಡುತ್ತಿದ್ದಾರೆ. ಆದರೆ ಮೊದಲಿಯಾರ್ ರಿಗೆ ಕನ್ನಡಿಗರನ್ನು ಕತ್ತಲೆಯಲ್ಲಿಟ್ಟು ಏನು ಲಾಭವೋ…?

  ಪ್ರತಿಕ್ರಿಯೆ
 3. RAVEESH

  Satyamev Jayate by Aamir Khan has become a huge hit. People from all over the world are watching it but the question is; is the show true, is Aamir Khan doing this show with true motives?
  Satyamev Jayate, on its initial episode, was watched by more than 90 million people around the world. The show has been rated as the most watched TV Show ever. Satyamev Jayate started with the topic of female foeticide. The show got hit as more than 2.70 crore viewers watched it. If all the viewers from rural to urban areas are counted then the number of people who watched the show raises to 90 million.
  The second show of Satyamev Jayate was about child sexual abuse. Aamir Khan said that 53% of the children have suffered from sexual abuse. The show further went on with people discussing about the topic. Aamir Khan invited people who have faced sexual abuse in their life and asked them to tell people how it affected their afterlife.
  The theme or the pattern of Satyamev Jayate has not changed so far. People discuss about the topic, Aamir Khan provokes them to send SMS (the money of which will go the charity) and then writes a petition to the Government of India.
  All this sounds and seems good on TV. But is Satyamev Jayate all about social work? When we see a dance program in which a participantsays to SMS in favor of him what do we think of. We think about our money, how the particular channel program would earn through our SMS.
  Satyamev Jayate is earning through SMS. Aamir Khan provokes the audience to send an SMS, as this would be a good deed. Surely you won’t earn through your good deed but Satyamev Jayate‘s team and Aamir Khan would.
  Sridevi also came on Satyamev Jayate. Of course she came there to raise the ‘TRP’ of the program. It’s like the stars who come on KBC to play with Big B. I suggest you to also read this post. KBC Season 6
  Satyamev Jayate goes around Aamir Khan; it is all about what Aamir Khan does. There are many NGO’s who are working upon this topic since ages, so why there contribution is not shown. Satyamev Jayate is about faming a star who is contributing his part in the social world.
  I believe that if a TV channel is showing any thing, it’s surely because they are earning from it. Every show wants to earn, no TV show would ever run on the screen if it was to become a bad debt.

  ಪ್ರತಿಕ್ರಿಯೆ
  • har.sri.ga

   Thanks for telling something which no other kannadiga knew or could have found out !!
   I heard that most of Kannada actors dont charge money nor take any remuneration.
   Even the Kannada channels are run by NGO’s which wants to highlight astrology, atte-sose jagala, crime scene reporting and bootha deva episodes.
   Infact, they are increasing the social awareness on these topics by constantly producing such content!

   ಪ್ರತಿಕ್ರಿಯೆ
 4. Guruprasad

  ಸತ್ಯಮೇವ ಜಯತೆ ಕಾರ್ಯಕ್ರಮ ಭಾರತದ ಟೀವಿ ವಾಹಿನಿಗಳಲ್ಲಿ ಬಂದ ಒಂದು ವಿಶಿಷ್ಟವಾದ ಕಾರ್ಯಕ್ರಮ. ಆಮೀರ ಖಾನನ ಸಾಮಾಜಿಕ ಕಾಳಜಿಯ ಬಗ್ಗೆ ಕೆಲವು ಸಿನಿಕ ಅಭಿಪ್ರಾಯಗಳನ್ನು ಕೇಳಿದಾಗ ಗೊಂದಲವೆನಿಸುತ್ತದೆ . ಅದೂ ಸ್ವಸ್ಥವೆಂದುಕೊಂಡಿದ್ದ ಮನಸ್ಸುಗಳು ಹೀಗೆ ಯೋಚಿಸುವುದಾದರೂ ಏಕೆ? ಹೌದು ಇದರ ಫಾರ್ಮ್ಯಾಟ್ ಸಾಂಪ್ರದಾಯಿಕವಾದದ್ದು. ಈತ ಯಾರು ಹೇಳದ ವಿಷಯಗಳನ್ನೇನು ಹೇಳುತ್ತಿಲ್ಲ, ಸರಿ. ಆದರೆ ಈತ ಹೇಳುತ್ತಿರುವ ವಿಷಯಗಳು ಏಕೆ ಮತ್ತೆ ಮತ್ತೆ ನಮಗೆ ಸಂಗತವೆನಿಸುತ್ತವೆ? ಲೈಂಗಿಕ ಶೋಷಣೆಯನ್ನು ತಡೆಯುವುದು ಹೇಗೆ ಎಂಬ ವಿಷಯದ ಬಗ್ಗೆ ಈತ ಮಕ್ಕಳಿಗಾಗಿ ನಡೆಸಿಕೊಟ್ಟ ಸಣ್ಣ ವರ್ಕ್ಶಾಪ್ ಇಡೀ ದೇಶದ ಶಾಲೆಗಳಲ್ಲಿ ಕಲಿಸಿದರೂ ಮಾಡದ ಪರಿಣಾಮವನ್ನು ಯಾಕೆ ಮಾಡುತ್ತದೆ? ಸಂಸತ್ತು ಲೈಂಗಿಕ ದೌರ್ಜನ್ಯದ ವಿರುದ್ಧ ಮಸೂದೆಯನ್ನು ಪಾಸ್ ಮಾಡಿರುವುದು ಕಾಕತಾಳಿಯವೇ ಇರಬಹುದು. ಆದರೆ, ನಮಗೆ ಸತ್ಯಮೇವ ಜಯತೆ ಬೇಡ, ಬದುಕು ಜಟಕಾ ಬಂಡಿ ಬೇಕು ಎಂದು ಹೇಳುವ ಮಾತು ಎಷ್ಟು ಸಂಗತ.
  ಇದು ಕಮಾಡಿಟಿಯ ಜಗತ್ತು. ಇಲ್ಲಿ ಸತ್ಯವನ್ನು, ಸೂಕ್ಷ್ಮವಾದ ಸಂಗತಿಗಳನ್ನು ಮನಮುಟ್ಟಿ ಹೇಳಬೇಕಾದರು ಮಾರುಕಟ್ಟೆಯ ನೀತಿ, ಅನೀತಿಗಳ ಜತೆ ಸರ್ಕಸ್ ಮಾಡಿಕೊಂಡು ಹೇಳಬೇಕಾಗುತ್ತದೆ. ಕೆಲವೊಮ್ಮೆ ಸತ್ಯವನ್ನು ಮಾರಾಟ ಕೂಡ ಮಾಡಬೇಕಾಗುತ್ತದೆ. ಅದು ಆಮೀರ ಖಾನನಿಗೆ ಗೊತ್ತ್ತಿಲ್ಲವೆಂದಲ್ಲ. ಖಾನ್ ಮಾಡಿರುವುದು ಕೂಡ ಒಂದು ಕಮಾಡಿಟಿ. ಅದಕ್ಕೆ ಬೆಲೆಯಿದೆ, ಮಾರುಕಟ್ಟೆಯಿದೆ. ಹಾಗೆ ಮಾರಾಟವಾದ ಸರಕಿಗೆ ಜನಗಳ ಮನಸೆಳೆಯುವ ಗುಣವಿದೆ.
  ಅಲ್ಲಿ ಬಂದ ಕಣ್ಣೀರು ನಿಜವಾದ್ದೋ ಅಲ್ಲವೋ ಎಂದು ಅಲ್ಲಿರುವ ಜನಕ್ಕೆ ಮತ್ತು ಆಮಿರನಿಗೆ ಗೊತ್ತು. ಆದರೆ ಈ ಕಾರ್ಯಕ್ರಮವನ್ನು ನೋಡಿ ಬರೇ ಅಳು ಮಾತ್ರ ಬರುತ್ತದೆ ಎಂದರೆ ಈ ವಾದಕ್ಕೆ ಏನು ಹೇಳೋಣ.
  ನಾವು ಇಂತಹ ಕಾರ್ಯಕ್ರಮವನ್ನು ಮಾಡಿದ್ದೇವೆ, ಮಾಡಬಲ್ಲೆವು ಎನ್ನುವುದು ನರಿ ಮತ್ತು ದ್ರಾಕ್ಷಿಯ ಕಥೆಯಾಗುತ್ತದೆ. ಸತ್ಯ ಏನೆಂದರೆ ಇದನ್ನು ಬೇರೆ ಯಾರೂ ಮಾಡಿಲ್ಲ. ಆಮಿರ ಮಾಡಿದ್ದಾನೆ, ಜನ ನೋಡುತ್ತಾರೆ.
  ಕೊನೆಗೂ ನಾವು ನೆನಪಿಡಬೇಕಾಗುವುದು ಒಂದೇ. ಸತ್ಯಮೇವ ಜಯತೆ ಒಂದು ಟೀವಿ ಕಾರ್ಯಕ್ರಮ. ಕರೋಡ್ ಪತಿ, ಬದುಕು ಜಟಕಾ ಬಂಡಿಯ ರೀತಿ. ಯಾರು ಯಾವುದನ್ನು ನೋಡಬೇಕು ಎನ್ನುವುದು ಜನಕ್ಕೆ ಬಿಟ್ಟಿದ್ದು. ಹಾಗೆಯೇ ಯಾವುದರಿಂದ ಜನ ಪ್ರಭಾವಿತರಾಗುತ್ತಾರೆ ಅನ್ನುವುದು ಕೂಡ ಜನಕ್ಕೆ ಬಿಟ್ಟಿದ್ದು, ಅಲ್ಲವೇ?
  ಗುರುಪ್ರಸಾದ ಕಾಗಿನೆಲೆ
  Guru

  ಪ್ರತಿಕ್ರಿಯೆ
  • ವಸುಧೇಂದ್ರ

   ಗುರು,
   ನಿನ್ನ ಮಾತು ಒಪ್ಪುವೆ. ಅಮೀರ್ ಖಾನ್ ಮಾತನ್ನು ಕೋಟ್ಯಾಂತರ ಜನ ಕೇಳುತ್ತಾರೆಂದರೆ ಅವನು ಅಂತಹ ಒಂದು ಸ್ಥಾನವನ್ನು ತನ್ನ ಸ್ವಂತ ಪರಿಶ್ರಮ ಮತ್ತು ಸಾಮರ್ಥ್ಯಗಳಿಂದ ಗಳಿಸಿದ್ದಾನೆ ಎಂದು ಅರ್ಥ. ಅದೇನು ಕಡಿಮೆ ಸಾಧನೆಯೆ? ಕನ್ನಡಿಗರಾದ ನಮಗೆ ಈ ಹಿಂದೆ ಡಾ. ರಾಜ್ ಏನಾದರೂ ಹೇಳಿದರೆ ಅದನ್ನು ಸ್ವೀಕರಿಸುವ ಮನಸ್ಸು ಮತ್ತು ವಿಶ್ವಾಸವಿರಲಿಲ್ಲವೆ, ಹಾಗೆ. ಅವರು ಹೇಳಿದ್ದನ್ನೇ ಕಡಿಮೆ ದರ್ಜೆಯ ಯಾರೋ ನಟರು ಹೇಳಿದರೆ ಅದಕ್ಕೆ ಅಂತಹ ಶಕ್ತಿಯಿರುವದಿಲ್ಲ. ಕೊನೆಗೂ ಒಬ್ಬ ಪ್ರಸಿದ್ಧ ವ್ಯಕ್ತಿ ಏನೋ ಒಳ್ಳೆಯದನ್ನು ಹೇಳುತ್ತೀದ್ದಾನೆಂದರೆ ಅದನ್ನು ಗೌರವಿಸುವ, ಸ್ವೀಕರಿಸುವ ಗುಣ ನಾವು ಬೆಳಸಿಕೊಳ್ಳಬೇಕು. ಮೊಸರನ್ನದಲ್ಲಿ ಕಲ್ಲು ಹುಡುಕುವ ಸ್ವಭಾವ ಒಳಿತನ್ನು ಮಾಡುವದಿಲ್ಲ. ಯಾಕೋ ಗೊತ್ತಿಲ್ಲ, ಒಳ್ಳೆಯ ಕೆಲಸಗಳಲ್ಲೆಲ್ಲಾ ಕೊಂಕು ಹುಡುಕಿ ಅದನ್ನು ಬಲವಂತವಾಗಿ ವಿರೋಧಿಸುವ ಅಸಹನೆ ಇತ್ತೀಚೆಗೆ ಹೆಚ್ಚು ಹೆಚ್ಚು ಕಾಣುತ್ತಿದೆ. ಇದು ಬೇಸರದ ವಿಷಯವಾದರೂ, ಅಂತಹ ಅಸಹನೆಯ ನುಡಿಗಳು ಆ ಕಾರ್ಯಕ್ರಮದ ಯಶಸ್ಸಿನ ಸಂಕೇತವೂ ಹೌದು. ಬಹುಶಃ ಒಳಿತನ್ನು ಗುರುತಿಸುವ ಮತ್ತು ಗೌರವಿಸುವ ಸುಜನರು ಹೆಚ್ಚಾದಂತೆಲ್ಲಾ, ಈ ತರಹದ ಅಸಹನೆ ಮತ್ತು ಸಿನಿಕತನಗಳು ಕುಸಿದು ಬೀಳುತ್ತವೆ.
   ವಸುಧೇಂದ್ರ

   ಪ್ರತಿಕ್ರಿಯೆ
   • shama, nandibetta

    ವಸುಧೇಂದ್ರ ಸರ್,
    “ಪ್ರಸಿದ್ಧ ವ್ಯಕ್ತಿ ಏನೋ ಒಳ್ಳೆಯದನ್ನು ಹೇಳುತ್ತೀದ್ದಾನೆಂದರೆ ಅದನ್ನು ಗೌರವಿಸುವ, ಸ್ವೀಕರಿಸುವ ಗುಣ ನಾವು ಬೆಳಸಿಕೊಳ್ಳಬೇಕು. ಮೊಸರನ್ನದಲ್ಲಿ ಕಲ್ಲು ಹುಡುಕುವ ಸ್ವಭಾವ ಒಳಿತನ್ನು ಮಾಡುವದಿಲ್ಲ. ಒಳ್ಳೆಯ ಕೆಲಸಗಳಲ್ಲೆಲ್ಲಾ ಕೊಂಕು ಹುಡುಕಿ ಅದನ್ನು ಬಲವಂತವಾಗಿ ವಿರೋಧಿಸುವ ಅಸಹನೆ ಇತ್ತೀಚೆಗೆ ಹೆಚ್ಚು ಹೆಚ್ಚು ಕಾಣುತ್ತಿದೆ. ಇದು ಬೇಸರದ ವಿಷಯವಾದರೂ, ಅಂತಹ ಅಸಹನೆಯ ನುಡಿಗಳು ಆ ಕಾರ್ಯಕ್ರಮದ ಯಶಸ್ಸಿನ ಸಂಕೇತವೂ ಹೌದು. ಬಹುಶಃ ಒಳಿತನ್ನು ಗುರುತಿಸುವ ಮತ್ತು ಗೌರವಿಸುವ ಸುಜನರು ಹೆಚ್ಚಾದಂತೆಲ್ಲಾ, ಈ ತರಹದ ಅಸಹನೆ ಮತ್ತು ಸಿನಿಕತನಗಳು ಕುಸಿದು ಬೀಳುತ್ತವೆ.”
    ಈ ಸಾಲುಗಳು ಬಹಳ ಖುಷಿ ಕೊಟ್ಟವು.
    ನಾವು ಸ್ವಸ್ಥ ಎಂದುಕೊಂಡಿದ್ದವರೇ ಹೆಚ್ಚಾಗಿ ಈ ಸಿನಿಕತೆ ತೊರಿಸುವಾಗ ಮನಸಿಗೆ ನೊವಾಗುತ್ತೆ. ಆದರೆ ಎಷ್ಟೊ ಬಾರಿ ಹೇಳುವ ಪರಿ ಅರಿವಾಗಿರಲಿಲ್ಲ. ನಮ್ಮಂಥವರು ಅಂದುಕೊಂಡದ್ದನ್ನು ನವಿರಾಗಿ ಹೇಳುವ ನಿಮ್ಮ ಕಲೆಗೆ ಸಲಾಂ….

    ಪ್ರತಿಕ್ರಿಯೆ
 5. Raman

  I fully agree with Vasu, ಒಳ್ಳೆಯ ಕೆಲಸಗಳಲ್ಲೆಲ್ಲಾ ಕೊಂಕು ಹುಡುಕಿ ಅದನ್ನು ಬಲವಂತವಾಗಿ ವಿರೋಧಿಸುವ ಅಸಹನೆ ಇತ್ತೀಚೆಗೆ ಹೆಚ್ಚು ಹೆಚ್ಚು ಕಾಣುತ್ತಿದೆ. ಇದು ಬೇಸರದ ವಿಷಯವಾದರೂ, .. ಬಹುಶಃ ಒಳಿತನ್ನು ಗುರುತಿಸುವ ಮತ್ತು ಗೌರವಿಸುವ ಸುಜನರು ಹೆಚ್ಚಾದಂತೆಲ್ಲಾ, ಈ ತರಹದ ಅಸಹನೆ ಮತ್ತು ಸಿನಿಕತನಗಳು ಕುಸಿದು ಬೀಳುತ್ತವೆ.” , very sensible comment.

  ಪ್ರತಿಕ್ರಿಯೆ
 6. rajesh bhat

  ಯಾವುದು ಒಳ್ಳೆಯ ಕೆಲಸ, ಯಾವುದು ಕೊಂಕು ವಸುಧೇಂದ್ರ ಅವರೇ. ನಾನು ನಿಮ್ಮ ಓದುಗ. ನಿಮ್ಮ ಸ್ವಂತ ಬರಹ ಓದ್ತೀನಿ. ಹಾಗಂತ ಯಾವುದನ್ನೋ ಅನುಮಾದಿಸಿ ತಂದುಕೊಟ್ರೆ ಓದಲಾರೆ. ಇದೂ ಹಾಗೇ, ಇಲ್ಲಿ ಸಾವಿರಾರು ಮಂದಿಯ ಉದ್ಯೋಗದ ಪ್ರಶ್ನೆ ಇದೆ. ಅಮೀರ್ ಖಾನ್ ಥರದವರಿಗೆ ಸ್ಟಾರ್ ಟೀವಿಗೆ ಇಡೀ ಇಂಡಿಯಾವನ್ನು ಪಳಗಿಸುವ ಹುಚ್ಚು. ನಿಮ್ಮಂಥವರಿಗೆ ಇಡೀ ಇಂಡಿಯಾದ ಸುಖ ನಿಮ್ಮ ಭಾಷೆಯನ್ನು ಬಲಿಕೊಟ್ಟಾದರೂ ಬರಲಿ ಎಂಬ ದುರಾಸೆ. ಒಂದು ಮಾತು ನೆನಪಿಡಿ. ಇವತ್ತು ಅಮೀರ್ ಖಾನ್ ಒಂದು ಕಾರ್ಯಕ್ರಮಕ್ಕೆ ಪಡೆಯೋ ಸಂಭಾವನೆ ನಿವ್ವಳ 3.60 ಕೋಟಿ ಮೈನಸ್ ಟಿಡಿಸ್. ಆ ಕಾರ್ಯಕ್ರಮದ ಖರ್ಟು ಏಳು ಕೋಟಿ. ಅವರ ಆದಾಯ ಒಂದು ಎಪಿಸೋಡಿಗೆ 14 ಕೋಟಿ. ಇದನ್ನೇ ಸರಳವಾಗಿ ಹೇಳಬಹುದಲ್ಲ. ಯಾಕಾಗಲ್ಲ, ಅಮೀರ್ ಖಾನ್ ಉಚಿತವಾಗಿ ಕಾರ್ಯಕ್ರಮ ಮಾಡಿ ಕೊಡಲಿ ನೋಡೋಣ.

  ಪ್ರತಿಕ್ರಿಯೆ
 7. Radhika

  Nothing comes for free in life and when it does, there’s no value for it. Why do we see only the money involved and not the impact of the program? In today’s program the nation got to know about Karnataka’s own Yashaswini program and Rajasthan govt’s initiative to sell generic medicine at low costs. If other states follow the footsteps, isn’t that itself a great achievement? Why bring the language as a hurdle when the motive is good? It’s frustrating to see the dictatorship attitude of Kannada filmdom.

  ಪ್ರತಿಕ್ರಿಯೆ
 8. ದೊಡ್ಡಿಪಾಳ್ಯ ನರಸಿಂಹಮೂರ್ತಿ

  ಅಮೀರ್ ಖಾನ್ ಮತ್ತು ಸತ್ಯಮೇವ ಜಯತೆ ಕಾರ್ಯಕ್ರಮದ ಮಾರುಕಟ್ಟೆ ತಂತ್ರಗಳು, ಟಿ.ಆರ್.ಪಿ ಗಿಮಿಕ್ಕುಗಳ ಹೊರತಾಗಿಯೂ ಈ ಕಾರ್ಯಕ್ರಮ ಅದರ ಸಾಮಾಜಿಕ ಪರಿಣಾಮದ ದೃಷ್ಟಿಯಿಂದ ನಮಗೆ ಮುಖ್ಯವಾಗುತ್ತದೆ. ಏಕೆಂದರೆ ಟಿ.ಆರ್.ಪಿ.ಗಾಗಿ ಮಹಿಳೆಯನ್ನು ಅಗ್ಗದ ಸರಕಾಗಿಸಿರುವ ಚಾನೆಲ್ಲುಗಳು, ಕಾರ್ಯಕ್ರಮಗಳೇ ತುಂಬಿ ತುಳುಕುತ್ತಿರುವ ಸಂದರ್ಭ ನಮ್ಮದು. ಹೀಗಿರುವಾಗ ಅದರ ಬದಲು ಇಂದಿನ ಪ್ರಮುಖ ಸಾಮಾಜಿಕ ಪಿಡುಗುಗಳ ವಿರುದ್ಧ ಅಭಿಪ್ರಾಯ ಮೂಡಿಸುವ, ಆ ಅರ್ಥದಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಿ, ಅದನ್ನು ಬಹಳ ಯಶಸ್ವಿಯಾಗಿ, ಜನಪ್ರಿಯವಾಗಿ ನಿರೂಪಿಸಿದ್ದನ್ನು ನಾವು ಮೆಚ್ಚಲೇಬೇಕು.
  ಇನ್ನು ಇಂಥಾ ಕಾರ್ಯಕ್ರಮವನ್ನು ಕನ್ನಡಿಗರೇ ಮಾಡಿದಾಗ ಅದನ್ನು ಬೆಂಬಲಿಸುವುದು ಮಾತ್ರವಲ್ಲ, ಸಂಭ್ರಮಿಸಬೇಕಾದ ವಿಷಯ. ಕೆಲವರು ಸದಾ ನಮ್ಮವರನ್ನು ಜರೆಯುತ್ತಾ ಪರರನ್ನು ಅಪ್ಪಿಕೊಳ್ಳುವ ಮನೋಭಾವದವರು ಇದ್ದಾರೆ ಎಂಬುದು ವಿಷಾದದ ಸಂಗತಿ. ಆದರೆ ಪ್ರಜಾವಾಣಿಯಲ್ಲಿ ಪ್ರಸ್ತಾಪಿತವಾದ ಕಾರ್ಯಕ್ರಮವನ್ನು ಎಷ್ಟು ಮೆಚ್ಚಿಕೊಳ್ಳಬೇಕು ಎಂಬುದು ಅವರವರ ಅಭಿರುಚಿ ಮತ್ತು ಮಾನದಂಡಗಳಿಗೆ ಬಿಟ್ಟ ವಿಚಾರ.
  ಆದರೆ ಒಂದು ಒಳ್ಳೆಯ ಕೆಲಸ ನಡೆದಾಗ ನಾವು ಅನಗತ್ಯವಾಗಿ ಒಂದಕ್ಕೊಂದು ಪೈಪೋಟಿಯಾಗಿ ನಿಲ್ಲಿಸುವುದು ತಪ್ಪಾಗುತ್ತದೆ. ಇದರಿಂದ ಯಾರಿಗೂ ಪ್ರಯೋಜನವಿಲ್ಲ ಎಂಬುದನ್ನು ಹಿರಿಯ ಪತ್ರಕರ್ತರಾದ ಗಂಗಾಧರ್ ಮೊದಲಿಯಾರರು ಅರ್ಥ ಮಾಡಿಕೊಳ್ಳದಿರುವುದು ದುರ್ದೈವ.

  ಪ್ರತಿಕ್ರಿಯೆ
 9. Harsha Kugwe

  ಗುರುಪ್ರಸಾದ ಕಾಗಿನೆಲೆ ಮತ್ತು ವಸುದೇಂಧ್ರ ಅವರ ವಿವೇಕದ ಮಾತುಗಳಿಗೆ ಸಂಪೂರ್ಣ ಒಪ್ಪಿಗೆ ಇದೆ. ಅಮೀರ್ ಖಾನ್ ಗೂ ಮಿತಿಗಳಿಲ್ಲವೆಂದಲ್ಲ. ಆದರೆ ಆತನಿಗೆ ಲಾಭವೇ ಮುಖ್ಯವಾಗಿದ್ದರೆ ಇನ್ನೂ ಬಹಳಷ್ಟು ದಾರಿಗಳಿದ್ದವೆಂದು ಕಾಣುತ್ತದೆ. ಅದಕ್ಕಾಗಿ ದೇಶದ ಭಯಂಕರ ಸ್ಥಾಪಿತ ಹಿತಾಸಕ್ತಿಗಳನ್ನೆಲ್ಲಾ ಎದುದುಹಾಕಿಕೊಂಡು ಇಂತಹ ಒಂದು ಕಾರ್ಯಕ್ರಮ ಮಾಡುವ ಜರೂರೇನಿತ್ತು ಹೇಳಿ? ನೆನ್ನೆಯ ಕಾರ್ಯಕ್ರಮ ನೋಡಿದರೂ ತಿಳಿಯುತ್ತದೆ. ಹಣದ ಆಸೆಗಾಗಿ ಮಾನವೀಯತೆಯನ್ನೇ ಮರೆತಿರುವ ದೇಶದ ಅದೆಷ್ಟೋ ವೈದ್ಯರು ಮತ್ತು ವೈದ್ಯಕೀಯ ಸಂಬಂಧೀ ವೃತ್ತಿಯಲ್ಲಿ ತೊಡಗಿದವರ ದೃಷ್ಟಿಯಲ್ಲಿ ಈಗ ಅಮೀರ್ ರಾತ್ರೋ ರಾತ್ರಿ ವಿನಲ್ ಆಗಿಬಿಟ್ಟಿಲ್ಲವೇ? ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ಹೋದಂತೆ ಮತ್ತಷ್ಟು ಪ್ರಭಾವಿಗಳ ಅಧಿಕಾರಸ್ಥರ ವಿರೋಧವನ್ನು ಕಟ್ಟಿಕೊಳ್ಳಲೇಬೇಕಾಗುತ್ತದೆ. ಅಂತವರು ಮತ್ತೆ ಅಮೀರ್ ವಿರುದ್ಧ ಅಪಪ್ರಚಾರಾಂದೋಲನ ಮಾಡದೆ ಇರುವುದಿಲ್ಲ. ಸತ್ಯ ಮೇವ ಜಯತೆಯಲ್ಲಿ ತೋರಿಸುವ ತಾಂಡಾಗಳ ಜನರು, ಹಳ್ಳಿಗಳ ಬಡವರು ಅಮೀರ ಪರವಾಗಿ ಪ್ರಚಾರ ಮಾಡಲೂ ಅಸಮರ್ಥರು. ಆದರೆ ಇದುವರೆಗೆ ನಡೆದಿರುವ ಯಾವುದೇ ರಿಯಾಲಿಟಿ ಶೋಗಿಂತ ಸತ್ಯಮೇವ ಜಯತೆ ದೇಶದ ನಾಗರೀಕರ ಸಾಮಾಜಿಕ ಪ್ರಜ್ಞೆಯನ್ನು ವಿಸ್ತರಿಸುವಲ್ಲಿ ಹಾಗೂ ನೀತಿ ನಿರೂಪಕರ ಮೇಲೆ ಒತ್ತಡ ತರುವುದರಲ್ಲಿ ಸಂಶಯವಿಲ್ಲ. ಇಂತಹ ಸಂದರ್ಭದಲ್ಲಿ ಸಿನಿಕರಾಗಿ ಯೋಚಿಸುವವರ ಬಗ್ಗೆ ಈ ಹೊತ್ತಲ್ಲಿ ಮರುಕ ಪಡಲಷ್ಟೆ ಸಾಧ್ಯ

  ಪ್ರತಿಕ್ರಿಯೆ
 10. ಧನಂಜಯ ಹನುಮಯ್ಯ

  ಗಂಗಾಧರ ಮೊದಲಿಯಾರರ ಬರಹಗಳನ್ನು ಬಹಳ ವರ್ಷಗಳಿಂದ ಓದಿಕೊಂಡು ಬಂದಿದ್ದೇನೆ. ಅವರ ಬಹುತೇಕ ಬರಹಗಳು ಕನ್ನಡ ಚಿತ್ರೋಧ್ಯಮದ ಬಗೆಗಿನ ಪ್ರೀತಿಯಿಂದ ಬರೆದವುಗಳಾಗಿರುತ್ತವೆ. ಆದರೆ ಅದೇ ಅಕಾರಣ ಪ್ರೀತಿಯೆ ಇಂದು ಅವರನ್ನು ಸತ್ಯದೆಡೆಗೆ ಕುರುಡನಾಗಿರುವಂತೆ ಮಾಡಿದೆ. ಬದುಕು ಜಟಕಾ ಬಂಡಿ, ಕಥೆ ಅಲ್ಲ ಜೀವನ ಮತ್ತು ನಾನಿರುವುದೇ ನಿಮಗಾಗಿ ಎಂಬ ವ್ಯಕ್ತಿಗತವಾದ ಮತ್ತು ಕುಟುಂಬದ ವಿಶಯಗಳನ್ನು ಬಟಾಬಯಲು ಮಾಡಿ ಅಪಸವ್ಯಗಳನ್ನು ಹುಟ್ಟಿಸುತ್ತಿರುವ ಕಾರ್ಯಕ್ರಮಗಳನ್ನು ಹಿಂದೆ ತಾವೆ ಝಾಡಿಸಿದ್ದರು ಈಗ ಇವೇ ಕಾರ್ಯಕ್ರಮಗಳನ್ನು ತಾವೆ ಹೊಗಳುಬಟ್ಟರಾಗಿ ಸತ್ಯಮೇವ ಜಯತೆಯ ಮುಂದೆ ವೈಭವೀಕರಿಸುತಿರುವ ವಿರೋಧಾಭಾಸವನ್ನು ತೋರುತಿದ್ದಾರೆ. ಡಬ್ಬಿಂಗ್ ಅನ್ನು ವಿರೋಧಿಸಲು ಬಲವಾದ ಕಾರಣಗಳನ್ನು ನೀಡಲು ವಿಫಲರಾದ ಅವರು ಡಬ್ಬಿಂಗ್ ಪರವಾದವರ ಅಸ್ತ್ರವಾದ ಸತ್ಯಮೇವ ಜಯತೆ ಕಾರ್ಯಕ್ರಮವನ್ನು ಬುರುಡೆ ಪುರಾಣ ಎಂದು ಟೀಕಿಸುವ ಮಟ್ಟಕ್ಕೆ ಹೋಗುತ್ತಾರೆಂದು ನಾನಂತು ತಿಳಿದಿರಲಿಲ್ಲ. ಸತ್ಯಮೇವ ಜಯತೆ ಕಾರ್ಯಕ್ರಮವು ಒಂದೇ ಏಟಿಗೆ ಸಮಾಜವನ್ನು ಬದಲಾಯಿಸುತ್ತದೆ ಎಂದು ಅದರ ಸಮರ್ಥಕರ್ಯಾರು ಹೇಳುತ್ತಿಲ್ಲ ಆದರೆ ಆ ಕಾರ್ಯಕ್ರಮವು ಎಬ್ಬಿಸುತ್ತಿರುವ ಬೃಹತ್ ಬದಲಾವಣೆಯ ಅಲೆಗಳಿಗೆ ಸೂಕ್ತವಾಗಿ ಸ್ಪಂದಿಸಿದರೆ ಕ್ರಾಂತಿಯಾಗಿ ಸಮಾಜದಲ್ಲಿ ಬದಲಾವಣೆಯು ನಿಶ್ಚಿತ. ಇದನ್ನು ಮನಗಾಣದೆ ಸಮಾಜಕ್ಕೆ ಕೊಡುಗೆಯಾಗಬಹುದಾದ ಕಾರ್ಯಕ್ರಮವನ್ನು ಈ ರೀತಿಯಾಗಿ ಹಳಿಯುವುದು ಒಂದು ಸುಂದರ ಅವಕಾಶವನ್ನು ಕೈ ಚೆಲ್ಲಿದಂತೆಯೆ ಸರಿ. ಒಳ್ಳೆಯ ವಿಮರ್ಶಕರೊಬ್ಬರು ಹೀಗೆ ಪೂರ್ವಾಗ್ರಹಪೀಡಿತರಾಗಿ ಬರೆದಿರುವುದು ಸರಿಯಲ್ಲ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: