ಜುಗಾರಿ ಕ್ರಾಸ್ : ’ಬಿ ಸುರೇಶ್ ಅವರು ಬರೆದಿರುವ….’

ಕ್ಲಿಕ್ಕಿಸಿ) ಅದಕ್ಕೆ ಬ೦ದ ಎರಡು ಪ್ರತಿಕ್ರಿಯೆಗಳು ಇಲ್ಲಿವೆ : ಆನಂದ್ ಬಿ ಸುರೇಶ್ ಅವರು ಬರೆದಿರುವ ಒಂದು ಬರಹ ಪ್ರಕಟವಾಗಿದೆ. ಇದನ್ನು ನೋಡಿದರೆ ಇಡೀ ಬರಹದ ಕಾಳಜಿಯ ಬಗ್ಗೆ ಅನುಮಾನ ಉಂಟಾಗುವಂತಿದೆ. ಶ್ರೀ ಸುರೇಶ್ ಅವರ ಬರಹದ ಮೊನಚಿನ ಗುರಿ ಸತ್ಯಮೇವ ಜಯತೇ ಸರಣಿ ಮತ್ತು ಅದರಂತಹ ಇನ್ನೂ ಅನೇಕ ಜನಪ್ರಿಯನಟರು ನಡೆಸಿಕೊಡುತ್ತಿರುವ “ಪರಭಾಷಾ” ಕಾರ್ಯಕ್ರಮಗಳು. ಇಡೀ ಬರಹವು ಕೇವಲ ಮನರಂಜನೆಗೆ ಸೀಮಿತವಾಗಿಲ್ಲದೆ “ಅರ್ಥಶಾಸ್ತ್ರ”ದ ಬಗ್ಗೆ ಮಾತಾಡುತ್ತಿದೆ. ಸಿನಿಮಾ, ಟಿವಿ, ನಾಟಕಗಳು… ಇವೆಲ್ಲಾ ಕಲೆಯ ಆರಾಧನೆ ಮಾತ್ರವೇ ಆಗಿದ್ದು ಲಾಭದ ಸೋಂಕಿಲ್ಲದೆ ಇರಬೇಕಾದ್ದು ಎನ್ನುವ ಅಭಿಪ್ರಾಯಕ್ಕೆ ಒತ್ತುಕೊಡುವಂತಿದೆ. ಮನರಂಜನೆ ಮತ್ತು ವ್ಯವಹಾರ! ವಾಸ್ತವವೇನೆಂದರೆ ಯಾವುದೇ ತೆರನಾದ ಮನರಂಜನೆಯೆನ್ನುವುದೂ ಕೂಡಾ ಇಂದು ಒಂದು ವಾಣಿಜ್ಯ ವಹಿವಾಟೇ ಆಗಿದೆ, ಹಿಂದೆ ರಾಜರ ಕಾಲದಲ್ಲಿ ನೃತ್ಯ ನಾಟಕ ಮಾಡುತ್ತಿದ್ದಾಗ ಅತ್ಯಂತ ಶಾಸ್ತ್ರೀಯವೂ ಸಾಂಪ್ರದಾಯಿಕವಾದದ್ದೂ ಆಗಿದ್ದ ಆ ಕಲೆಗಳ ಪ್ರದರ್ಶನವನ್ನು ರಾಜರು ಆಸ್ಥಾನದಲ್ಲಿ, ಜನರಿಗಾಗಿ, ಅತಿಥಿಗಳಿಗಾಗಿ ಏರ್ಪಡಿಸುತ್ತಿದ್ದ ಕಾಲದಲ್ಲಿ ಜನರು ಹಣ ತೆತ್ತು ಅವನ್ನು ನೋಡುತ್ತಿರಲಿಲ್ಲವಾದರೂ ರಾಜರ ಮೆಚ್ಚುಗೆಯ, ಉಡುಗೊರೆಗಳನ್ನು ನೀಡುವ ವ್ಯವಸ್ಥೆ ಇತ್ತು. ಜನಪದ ಹಾಡುಗಳು, ಯಕ್ಷಗಾನ ಮೊದಲಾದ ಕಲೆಗಳು ಜನರಲ್ಲಿನ ಕಲಾಭಿವ್ಯಕ್ತಿಯನ್ನು ತೋರಿಸುವ ಉದ್ದೇಶದಿಂದಲೇ ಇದ್ದಿರಬಹುದಾದರೂ ಕಳೆದ ಶತಮಾನದಿಂದೀಚೆಗೆ ಉದ್ಯಮವೆಂದು ಆರಂಭವಾಗಿದ್ದನ್ನು ತಳ್ಳಿಹಾಕಲಾಗದು. ಇನ್ನು ಕೆಲವು ಹವ್ಯಾಸಿ ನಾಟಕಗಳು ಮತ್ತು ಬೀದಿನಾಟಕಗಂತಹವುಗಳನ್ನು ನಾವು ಕಲೆಗಾಗಿ ನಡೆಸುತ್ತಿರುವುದು ಎಂದು ಒಪ್ಪಬಹುದೇನೋ. (ಅವಕ್ಕೂ ಸಾಧಿಸಬೇಕಾದ ಒಂದು ಉದ್ದೇಶವಿರುವುದು ಇಂದು ಸಾಮಾನ್ಯ). ಯಾವಾಗ ಜನರನ್ನು ಹಣ ಕೊಟ್ಟು ನಾಟಕ ನೋಡಿ, ಸಿನಿಮಾ ನೋಡಿ ಎನ್ನುವುದು ಶುರುವಾಯಿತೋ ಅಲ್ಲಿಗೆ ಚಿತ್ರೋದ್ಯಮ ಪಕ್ಕಾ ವಹಿವಾಟೇ ಆಯಿತು. ಅಂದರೆ ಮೂಲತಃ ಇದೂ ಒಂದು ಸೋಪಿನಂಗಡಿಯಂತಹ ಬಿಸಿನೆಸ್ಸೇ, ಆದರೆ ಇಲ್ಲಿನ ಸರಕು ಮಾತ್ರಾ ಕಲೆಯೆನ್ನುವುದು ಆಗಿದೆ ಎಂದರೆ ಕೆಲವರಿಗೆ ನೋವಾಗಬಹುದು. ಆದರೆ ಇದೇ ವಾಸ್ತವ. ಯಾವ ಸಿನಿಮಾ ನಿರ್ಮಾಪಕನೂ ಹಾಕಿದ ಬಂಡವಾಳದ ಮೇಲೆ ಎಷ್ಟು ಬರುತ್ತೆನ್ನುವ ಲೆಕ್ಕ ಇಡದೆ ಸಿನಿಮಾ ಮಾಡಲ್ಲ. ಯಾವ ನಟರೂ ಕಲೆಗಾಗಿ ಪುಗಸಟ್ಟೆ ಅಭಿನಯಿಸಲ್ಲ. ಡಾ. ಬಾಲಮುರಳಿಕೃಷ್ಣರೂ ಕೂಡಾ ಹಣ ಪಡೆಯದೇ ಸಂಗೀತ ಕಛೇರಿ ಕೊಡಲು ಬರುವುದಿಲ್ಲ! ಇಷ್ಟಕ್ಕೂ ಸಿನಿಮಾ ನೋಡುಗನನ್ನು ಗ್ರಾಹಕ ಅಲ್ಲಾ ಎನ್ನೋ ಜನರು ತಮ್ಮ ಸಿನಿಮಾನ ಪುಗಸಟ್ಟೆ ತೋರಿಸಲಿ, ಚಿತ್ರಮಂದಿರದ ಹೊರಗೆ ಕಾಣಿಕೆ ಡಬ್ಬ ಇಟ್ಟು ಮೆಚ್ಚುಗೆಯಾದವರು ಹುಂಡೀಗೆ ದುಡ್ಡು ಹಾಕಲಿ ಎನ್ನಲಿ ನೋಡೋಣ. ಇವರಿಗೂ “ನಾನು ನನ್ನ ಕನಸು” ಎನ್ನುವ ಸಿನಿಮಾ ದುಡ್ಡು ಮಾಡದಿದ್ದರೆ ನೋವೇ ಆಗೋದು… ಕಲಾವಿದ ಮತ್ತು ಪಾತ್ರ! ಯಾವುದೇ ಚಿತ್ರವಿರಲಿ, ಧಾರಾವಾಹಿಯಾಗಿರಲಿ ಅದರಲ್ಲಿ ಪಾತ್ರವಹಿಸುವವರು ಪಾತ್ರದಂತೆಯೇ ಇರಬೇಕೆನ್ನುವ ಮನಸ್ಥಿತಿ ಎಷ್ಟು ಸರಿ? ಅವರೂ ಸಾಮಾನ್ಯ ಮನುಷ್ಯರೇ, ಎಲ್ಲಾ ಮನುಷ್ಯರಿಗೆ ಇರುವ/ ಇರಬಹುದಾದ ಸಹಜವಾದ ದೌರ್ಬಲ್ಯಗಳಿಂದ ಅವರೇನೂ ಹೊರತಲ್ಲ. ಹೀಗಿದ್ದಾಗ ಅಮೀರ್ ಖಾನನ ಮನೆಯಲ್ಲಿ ಹೀಗಾಯ್ತು ಹಾಗಾಗಿ ಅವನಿಗೆ ಸತ್ಯಮೇವ ಜನ್ಯೆತೇ ಮಾಡೋ ಹಕ್ಕಿಲ್ಲ ಎನ್ನುವಂಥಾ ಅನಿಸಿಕೆ ಇಟ್ಟುಕೊಳ್ಳೋದು ಸರಿಯೇ? ಇಲ್ಲಿ ಅಮೀರ್‌ಖಾನ್ ನಡೆಸುತ್ತಿರುವ ಕಾರ್ಯಕ್ರಮ ನಡೆಸಲು ಅಮೀರ್‌ಖಾನ್‌ಗೆ ಎಷ್ಟು ಅರ್ಹತೆ ಇದೆ? ಅವನ ವೈಯುಕ್ತಿಕ ನೈತಿಕತೆ ಎಷ್ಟಿದೆ? ಎನ್ನುವುದನ್ನೆಲ್ಲಾ ಅಳೆಯಬೇಕೆ? ಹೀಗೆ ಅಳೆದರೂ ಪರ್ವಾಗಿಲ್ಲಾ. ಸತ್ಯಮೇವ ಜಯತೇಯನ್ನು ಹಣಿಯುವ ಭರದಲ್ಲಿ ನಮ್ಮಕ್ಕ ಮಾಳವಿಕಾ ಮಾಡಿರೋದು ಇಲ್ವಾ? ಶಿವಣ್ಣಾ ಮಾಡಿರೋದು ಇಲ್ವಾ? ಕನ್ನಡದಲ್ಲೇ ಇದನ್ನೆಲ್ಲಾ ಮಾಡಿಲ್ವಾ? ಎನ್ನೋ ಮಾತು ಸರಿಯೇ? ಇವನ್ನೆಲ್ಲಾ ಜನರ ಮುಂದೆ ಇಟ್ಟಾಗಿದೆಯಲ್ವಾ? ಜನ ಇವುಗಳನ್ನು ಒಪ್ಪಿದ್ದೋ ದೂರತಳ್ಳಿದ್ದೋ ಕೂಡಾ ಆಗಿದೆಯಲ್ವಾ? ಇನ್ನೂ ಹತ್ತು ಇಂಥಾ ಕಾರ್ಯಕ್ರಮಾ ತೆಗೀರಿ. ಯಾರು ಬೇಡಾ ಅಂದ್ರು? ಕನ್ನಡದಲ್ಲಿ ಇವರು ಮಾಡಿದ್ದ ಕಾರಣಕ್ಕೆ ಸತ್ಯಮೇವಜಯತೇ ನೋಡಬಾರದಾ? ಅಮೀರ್‌ಖಾ‍ನ್‌ನ ಮೆಚ್ಚಬಾರದಾ? ಕಲಾವಿದ ಪಾತ್ರವಾಗಿರುವಾಗಲೇ ಬೇರೆ, ನಿಜ ಜೀವನದಲ್ಲೇ ಬೇರೆ ಎನ್ನುವ ಸರಳ ಸತ್ಯ ಅರಿಯದಿದ್ದರೆ ಹೇಗೇ? ಪರಭಾಷೆಯದು ಮಾತ್ರಾ ಸೋಗಿನದ್ದೇ? ನಿಜವಾಗ್ಲೂ ಸುರೇಶರ ಮಾತುಗಳ ನಿಜಾಯಿತಿಯನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಜನಪ್ರಿಯತೆ ಹೊಂದಿರುವವರಿಗೆ ಸಾಮಾಜಿಕ ಕಳಕಳಿ ಇರುವುದಿಲ್ಲ ಎನ್ನುವ ದನಿ ಒಂದೆಡೆ ಇದ್ದರೆ ಮತ್ತೊಂದೆಡೆ ಶಿವರಾಜ್ ಕುಮಾರ್ ಮತ್ತು ಮಾಳವಿಕ ಅವರ ಕಾರ್ಯಕ್ರಮಗಳನ್ನು ಸಾಮಾಜಿಕ ಕಳಕಳಿಯ ಒಳ್ಳೆಯ ಕಾರ್ಯಕ್ರಮ ಎನ್ನುವಂತೆ ಬಿಂಬಿಸಲಾಗಿದೆ. ನಾನೇನು ನಮ್ಮವರ ಕಾರ್ಯಕ್ರಮಕ್ಕೆ ಸಾಮಾಜಿಕ ಕಳಕಳಿ ಇರಲಿಲ್ಲ ಎನ್ನುತ್ತಿಲ್ಲ. ನಮ್ಮವರಲ್ಲದವರಿಗೆ ಅಂತಹ ಕಳಕಳಿ ಇಲ್ಲಾ ಎನ್ನುವ ಆರೋಪ ಯಾಕೆ ಎನ್ನಿಸುತ್ತಿದೆ..ಅಷ್ಟೇ. ಒಂದೆಡೆ ಸುರೇಶರು ಹೀಗೆ ಬರೆದಿದ್ದಾರೆ “’ಕೌನ್ ಬನೇಗಾ ಕರೊಡ್‌ಪತಿ’ಯಲ್ಲಿ ಕಣ್ಣೀರು ಹಾಕುವ ದೃಶ್ಯಗಳು ಸೇರಿಕೊಳ್ಳುವುದು ಇಂಥ ಸಂದರ್ಭಗಳಲ್ಲಿ. ‘ಅರೆ! ಕ್ವಿಜ್‌ನಲ್ಲಿ ಕಣ್ಣೀರೇಕೆ?’ ಎಂದರೆ ‘ಕೇವಲ ಪ್ರಶ್ನೋತ್ತರದ ಏಕತಾನತೆಯನ್ನು ತಪ್ಪಿಸಲು ದೃಶ್ಯಗಳನ್ನು ನಾಟಕೀಯಗೊಳಿಸಲಾಯಿತು’ ಎಂಬ ರೆಡಿಮೇಡ್ ಉತ್ತರವಿರುತ್ತದೆ. ‘ಬದುಕು ಜಟಕಾ ಬಂಡಿ’, ‘ಇದು ಕತೆಯಲ್ಲ ಜೀವನ’ದಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡವರು ನೋಡುಗರೇ ಗಾಬರಿಯಾಗುವಂತೆ ಜಗಳ ಆಡಿಕೊಳ್ಳಲು ಆರಂಭಿಸಿದ್ದೂ ರೇಟಿಂಗ್ ಪಡೆವ ಕಸರತ್ತೇ!” ಎಂದು. ಇವರು ಬಳಸಿರುವ ಭಾಷೆಯನ್ನು ಗಮನಿಸಿ ನೋಡಿ. ಪರಭಾಷಿಕರದ್ದಾದರೆ “ನಾಟಕೀಯಗೊಳಿಸಲಾಯಿತು” ಎನ್ನುತ್ತಾರೆ, ಆದರೆ ಇಲ್ಲಿ ಚಪ್‍ಚಪ್ಪಲಿಯಲ್ಲಿ ಹೊಡೆದಾಡಿಸಲಾಯಿತು ಅನ್ನಲ್ಲಾ…ಅವರೇ ಹೊಡೆದಾಡಿಕೊಂಡರು ಎನ್ನುವ ಅರ್ಥ ಬರುವಂತೆ “ಜಗಳ ಆಡಿಕೊಳ್ಳಲು ಆರಂಭಿಸಿದ್ದು” ಎಂದು ಬರೀತಾರೆ!! “ಅಮೀರ್‌ಖಾನ್ ಎಂಬಾತ ತಾನು ಪಡೆಯುವ ಹಣಕ್ಕಾಗಿ ‘ಕೋಕಾಕೋಲ ಕೊಳ್ಳಿ’, ‘ಆ ಗಡಿಯಾರ ಕೊಳ್ಳಿ’, ‘ಈ ಬಟ್ಟೆ ಹಾಕಿಕೊಳ್ಳಿ’ ಎಂದು ಹೇಳುತ್ತಲೇ ಸಮಾಜಮುಖಿ ಮಾತುಗಳನ್ನು ಸಹ ಹೇಳುತ್ತಾ ಸಾಮಾನ್ಯ ಜನರಲ್ಲಿ ಗೊಂದಲಗಳನ್ನು ಮಾತ್ರ ಸೃಷ್ಟಿಸುತ್ತಾನೆ. ಈ ಸೋಗಲಾಡಿತನಗಳನ್ನು ನಮ್ಮ ನಾಡಿನ ಜನಸಾಮಾನ್ಯರು ಎಚ್ಚರಿಕೆಯಿಂದ ಸ್ವೀಕರಿಸಬೇಕಷ್ಟೆ.” ಹೀಗೆನ್ನುವ ಸುರೇಶರು ಯಾರ ಕಾರ್ಯಕ್ರಮಗಳನ್ನು ಪ್ರಾಮಾಣಿಕ ಪ್ರಯತ್ನ ಎನ್ನುತ್ತಿದ್ದಾರೋ ಅವರುಗಳು ನಿಜ ಜೀವನದಲ್ಲಿ ಹೇಗಿದ್ದಾರೆ? ಸಮಾಜಕ್ಕೆ ಎಂತಹ ಸಂದೇಶಗಳನ್ನು ತಮ್ಮ ಪಾತ್ರಗಳ ಮೂಲಕ ನೀಡಿದ್ದಾರೆ? ಎಂತೆಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ? ಯಾವ ರೀತಿಯಲ್ಲಿ ಕಂಡವರ ಮನೆಯ ನೋವನ್ನು/ ಜಗಳವನ್ನು ನೇರ ಕಾರ್ಯಕ್ರಮದಂತೆ ಮಾಡಿ ಮಾನ ಹರಾಜು ಹಾಕಿದ್ದಾರೆ ಮತ್ತು ಆ ಮೂಲಕ ಯಾವ ಅನಾರೋಗ್ಯಕರ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದಾರೆ ಎಂದೆಲ್ಲಾ ಮಾತನ್ನಾಡಬೇಕಿತ್ತು. ಇಡೀ ಲೇಖನದ ಸಾರ ಅನಿಷ್ಟಕ್ಕೆಲ್ಲಾ ಶನೀಶ್ವರನನ್ನು ಹೊಣೆ ಮಾಡುವ ಪ್ರಯತ್ನದಂತೆ ಕಂಡರೆ ಅಚ್ಚರಿಯಿಲ್ಲ! ಆದರೂ ಆಳದಲ್ಲಿ ಅನ್ನಿಸಿದ್ದು ಇವರಿಗೆ ಸತ್ಯಮೇವ ಜಯತೇ ಕಾರ್ಯಕ್ರಮದ ಜನಪ್ರಿಯತೆಯನ್ನು ಹಣಿಯುವುದು ಬೇಕಾಗಿದೆಯೇನೋ ಎನ್ನಿಸುತ್ತದೆ,. ಇಲ್ಲದಿದ್ದರೆ ಬರಹದ ಸಂದರ್ಭ ಮತ್ತು ಸಾರಗಳು ಬೇರೆಯೇ ಆಗಿರುತ್ತಿದ್ದವು. ಹರ್ಷಕುಮಾರ್ ಕುಗ್ವೆ ‘ಸತ್ಯ ಮೇವ ಜಯತೆ’ ರಾಜ್ಯದಲ್ಲಿ ಡಬ್ಬಿಂಗ್ ಕುರಿತ ಚರ್ಚೆಗೆ ಹೊಸ ಆಯಮವನ್ನು ನೀಡಿದ ಕಾರಣ ಬಿ. ಸುರೇಶ್ ರಂತಹ ಹಿರಿಯರು ಹೀಗೆ ಬೇರೊಂದು ತರದಲ್ಲಿ ಅದನ್ನು ಹೊರಹಾಕುತ್ತಿರುವುದು ವಿಷಾದನೀಯ. ಸುರೇಶ್ ಅವರು ಹೇಳಿದ್ದು ನಿಜವೇ ಇದ್ದರೂ ಇಲ್ಲಿ ಅವರು ತಿಳಿಸಿದ ಎಲ್ಲಾ ರಿಯಾಲಿಟಿ ಶೋಗಳಿಂದಲೂ ಸತ್ಯ ಮೇವ ಜಯತೆ ಮತ್ತು ಅಮೀರ್ ಖಾನ್ ಭಿನ್ನವಾಗಿ ನಿಲ್ಲತ್ತೆ. ತಾರೇ ಜಮೀನ್ ಪರ್, ಥ್ರೀ ಇಡಿಯಟ್ಸ್, ಮಂಗಲ್ ಪಾಂಡೆ, ಪೀಪ್ಲಿ ಲೈವ್ ನಂತಹ ಸಮಾಜಮುಖಿ ಸಿನಿಮಾಗಳನ್ನು ನೀಡಿರುವ ಅಮೀರ್ ಸಾಮಾಜಿಕ ಬದ್ಧತೆಬಗ್ಗೆ ನಾವು ಹೆಮ್ಮೆ ಪಡಲೇಬೇಕು. ಇಲ್ಲಿ ಅಮೀರ್ ಖಾನ್ ಏನು ಎನ್ನುವುದಕ್ಕಿಂತ ಎಲ್ಲರಿಗೂ ತಿಳಿದ ಸುದೀರ್ಘ ಕಾಲದ ಸಮಸ್ಯೆಗಳನ್ನು ಅಮೀರ್ ವಿಭಿನ್ನವಾಗಿ ಮನಮುಟ್ಟುವಂತೆ ನಿರೂಪಿಸುತ್ತಿರುವುದು ಮುಖ್ಯವಾಗಬೇಕು. ಪ್ರಕಾಶಿಸುತ್ತಿರುವ ಭಾರತದ ಮತ್ತೊಂದು ಮುಖವನ್ನು ಇಷ್ಟು ಚೆನ್ನಾಗಿ ಬಿಚ್ಚಿಡುತ್ತಿರುವ ಅಮೀರ್ ಖಾನ್ ಪ್ರಯತ್ನಗಳಿಗೆ ಸಾಧ್ಯವಾದರೆ ‘ಸೈ’ ಎನ್ನೋಣ. ಹೀಗೆ ಎಲ್ಲದಕ್ಕೂ ಸಿನಿಕರಾಗುತ್ತಾ ಹೋದರೆ ನಾಳೆ ಬಿ. ಸುರೇಶ್ ಅವರ ಉತ್ತಮ ಅಭಿರುಚಿಯ ಸಿನಿಮಾಗಳ ಬಗ್ಗೆ ಇಷ್ಟೇ ಸಿನಿಕತನದ ಕೊಂಕು ನುಡಿಗಳು ವ್ಯಕ್ತವಾಗುತ್ತವೆ ಎಂಬ ಬಗ್ಗೆ ಅರಿವಿರಲಿ.  ]]>

‍ಲೇಖಕರು G

May 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

7 ಪ್ರತಿಕ್ರಿಯೆಗಳು

 1. Samvartha 'Sahil'

  Suresh has undoubtedly raised some important questions which cannot be ignored whether one agrees or disagrees with his arguments. The visible and invisible connection between art and commerce where the undoubtedly commerce holds the strings of art, is a question that one just cannot ignore. When the strings of art is in the hands of commerce, whichever art it may be, how much ever concerned it is and has its heart in the right (rather left) place finally its concern and artivism will be playing within the framework of commerce (read capitalism) and all its concern will be, in one or the other way, benifiting the larger capitalist structure. Else why would the capitalist structure even bother to hold the strings of art in the name of artivism. So what happens in the end is that the larger structure (capitalism and other power structures) which is the real villain becoming visible in forms of villains (individual, institutuional and social) that Amir Khan showcases in his shows (and many which he does not touch upon)remains unchanged and the only the smaller villains or rather some faces of villain is just being showed as villain without any attempt being made to demolish that larger structure which, remains slightly invisible and shows its presence in some form which appears to us as THE villain.
  The question of who represents whom and who takes up the issue has always had strong arguments from opposite sides. Amir Khan does have his right to speak of all that is his concern. But how can we let the questions about his personal life escape our thoughts when he is taking up a moral higher position to preach the entire nation? He too stands as one among us and what he tells the nation also applies to him and that is common sense. So in the final analysis he has to put himself in the hot seat and answer.
  My problem with Satyameva Jayate (SJ here after) and also the column by Amir Khan in The Hindu, sounds so much like a moral science class. Bring up issues and discussing them and thus opening the eyes of the people to the issues and also awwakening them is fine. But what makes me, a born cynic, skeptical about it is the moral high position that he seem to assume for himself. I personally wouldnt be so skeptical about it if his research team was to come and narrate these stories to us, like we really feel ashamed when people like Sainath, Kaplana Sharma, Harsh Mander speak of reality as it really is. But Amir Khan doesnt sound like he has smelt the soil. It may be my individual feeling but yeah that is what i feel because I, (reminder: a born cynic) am skeptical about every work where an individial’s aura eclipses the work. So SJ becomes an Amir Khan show and not a programme which speak of reality as it really is. That is not a good thing, my instinct says. In the narratives narrated by Sainath, Kalpana Sharma or Harsh Mander (for example) we do not see their indivdual personality casting its shadow on the issues they are raising. It can be argued that Amir Khan has an aura because he is a film star and what is wrong if he uses it to draw the attention of the nation. My problem here lies in the fact that there is something seriously wrong with us- including myself- if we require some ‘aura’ to wake us up to the reality of our times and awaken our consciousness. This moral illness of our times is something which is to be cured too. This moral illness is extremely satisfied listening to Amir Khan and watching the programme it hosts for being ‘sensitive’ enough to shead tears when the issues come with an aura. It is, sorry to be so harsh with language, is a kind of moral mastrubation it appears to me. It is no different from the recent Idea and Samsung advertisements which showed that ‘like’ buttons on facebook can change the world, bring a revolution, awaken a generation. It may be speaking about how facebook can help in raising questions and bring about an awareness. But the bottom line is “buy idea 3G” and “buy samsung”. Worse it takes activism and artvism from the real to the virtual space. SJ is not very different from this because it again is playing within the framework of an oppressive system.
  To think that though within the framework of a capitalist system it is raising questions and trying to bring in a difference from within is to just have imaginations and not an imaginary. We need to invent newer ways to change the entire systemt through newer ways of activism and artivism. Being satisfied with these kind of programmes and art is to assume that activism, social concern are all just a moral obligation and unknowingly strengthen the existing larger system the parent of all the other faces of oppression. Being satified with these small, but need not be trivial, gestures of sheading tears, raising questions etc is a reflection of our moral illness, poverty of sensitivity and also povert of imagination for we have not been able to imagine the imaginary and bring in a new form of activism and artivism which can bring about a change fundamentally.
  In that sense SJ and similar activism/artvism may be good but not enough.

  ಪ್ರತಿಕ್ರಿಯೆ
 2. Harsha Kugwe

  ಪ್ರಿಯ ಸಾಹಿಲ್, ನಿಮ್ಮ Instincts ಹೇಳುತ್ತಿರುವುದರಲ್ಲಿ ತಪ್ಪಿಲ್ಲ. ಖಂಡಿತ ಇಂತಹ ಒಂದು ಸೂಕ್ಷ್ಮ ನೋಟ ಎಲ್ಲರಿಗೂ ಎಲ್ಲಾ ಸಂದರ್ಭದಲ್ಲೂ ಸಾಧ್ಯವಾಗಬೇಕು ಎಂಬುದು ನನ್ನ ‘ಅಮೀರನ ಕನಸು’. ಬಿ. ಸುರೇಶ್ ಮನರಂಜನೆ ಮತ್ತು ವಾಣಿಜ್ಯದ ನಡುವಿನ ಸಂಬಂಧದ ಕುರಿತು ಹಾಗೂ ‘ಕೋಕೋ ಕೋಲಾ ಜಾಹೀರಾತು ನೀಡುವ ಅಮೀರ್ ಕುರಿತು ಪ್ರಶ್ನೆ ಎತ್ತಿದ್ದರಲ್ಲಿಯೂ ತಪ್ಪಿರಲಿಲ್ಲ. ಆದರೆ, ನಮ್ಮ ದೇಶದ ಅಥವಾ ಇಂದಿನ ಜಾಗತಿಕ ಸನ್ನಿವೇಶದಲ್ಲಿ ನಾವು ನಮ್ಮ ದೃಷ್ಟಿಯನ್ನು ತೀರಾ Politically Correct ದೃಷ್ಟಿಕೋನದಿಂದ ಕೊಂಚ flexibility ಜೊತೆ ವ್ಯವಹರಿಸುವ ಅಗತ್ಯತೆ ಇದೆ ಎಂದು ನನ್ನ ವೈಯುಕ್ತಿಕ ಅನಿಸಿಕೆ. ಆಜನ್ಮ ಸಿನಿಕರಾಗಿರುವ (ನೀವೇ ಹೇಳಿಕೊಂಡಂತೆ) ನೀವು ನನ್ನ ಅಭಿಪ್ರಾಯವನ್ನು ಇದೇ ಸಿನಿಕತೆಯಿಂದಲೇ ನೋಡಬಹುದು. ಆದರೆ, ಇವತ್ತಿನ ಜಗತ್ತು ಸಿಕ್ಕಾಪಟ್ಟೆ ಸೆಕ್ಸಿ ಆಗಿಬಿಟ್ಟಿದೆ. ಇಲ್ಲಿ ನಿಮ್ಮ ‘ಕ್ರಾಂತಿಕಾರಿ’ ಮಾತುಗಳೇ ಆದರೂ ಅದು ನೀವು ಯಾರಿಗೆ ತಲುಪಬೇಕೆಂದು ಬಯಸುತ್ತೀರೋ ಅವರಿಗೆ ತಲುಪಬೇಕಾದರೂ ಅವೂ ‘ಸೆಕ್ಸಿ’ಯಾಗೇ ಇರಬೇಕಾಗುತ್ತದೆ. ನಮ್ಮ ಜನಮಾನಸ ಇಂದು ನಿಮ್ಮ ಒಣ ವೇದಾಂತಗಳಿಗಾಗಲೀ ಸಿದ್ದಾಂತಗಳನ್ನಾಗಲಿ ಸ್ಪೂರ್ತಿಯಿಂದ ಸ್ವಿಕರಿಸುವಷ್ಟು ಆರೋಗ್ಯಕರವಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಆದರ್ಶ ಸಿದ್ದಾಂದಗಳನ್ನಿಟ್ಟುಕೊಂಡವರು ಏನು ಮಾಡಲು ಸಾಧ್ಯ? ಯಾವ ಆಕ್ಟಿವಿಸಂ ಇಲ್ಲಿ ಸಾಧ್ಯ? ಯಾರಿಗೆ ಹಸಿವಿದೆಯೋ ಅವರಿಗೆ ಹಸಿವು ಇಂದು ಪ್ರಿಯಾರಿಟಿ ಅಲ್ಲದೇ ಇರುವಂತ ಸ್ಥಿತಿ ಇದೆ. ಸಾಯಿನಾಥ್ ಈ ದೇಶದ ಅದ್ವಿತೀಯ ಪತ್ರಕರ್ತ.ಸರಿ. ಆದರೆ ಆಕ್ಟಿವಿಸಂ ಅವರಿಂದ ಎಷ್ಟು ಪಡೆದುಕೊಂಡಿದೆ? ಆರುಂಧತಿ ರಾಯ್ ಅದ್ವಿತೀಯ ಬರಹಗಾರ್ತಿ, ಸಂವೇದನಾಶೀಲೆ, ಸತ್ಯವಂತೆ. ಆದರೆ ಅವರಾಡುವ ಸತ್ಯವನ್ನು ಅರಗಿಸಿಕೊಳ್ಳಲು ಬಹುತೇಕ ಜನರಿಗೆ ಭಾರತದಲ್ಲಿ ಸಾಧ್ಯವಾಗುತ್ತಿಲ್ಲವೆಂದಾದರೆ ಅದಕ್ಕೆ ಅವರು ಸತ್ಯ ಹೇಳುವ ರೀತಿಯೂ ಕಾರಣ ಅಲ್ಲವೇ? ಇಂತಹ ಸನ್ನಿವೇಶದಲ್ಲೇ ನನಗೆ ಅಮೀರ್ ಖಾನ್ ಮತ್ತವನ ತಂಡದ ಸತ್ಯ ಮೇವ ಜಯತೆ ಮುಖ್ಯವಾಗುತ್ತದೆ. ಅಮೀರ್ ಖಾನ್ ಗೆ ಸಾಕಷ್ಟು ಮಿತಿಗಳಿವೆ. ‘ಬಂಡವಾಳ’ಶಾಹಿ ವ್ಯವಸ್ಥೇಯಲ್ಲಿ ಬದುಕು ನಡೆಸುವಾಗ ಆತ ಎಷ್ಟೇ ಸಂವೇದನಾಶೀಲ, ಪ್ರಾಮಾಣಿಕವಾಗಿದ್ದರೂ ಮಿತಿಗಳಿದ್ದೇ ಇರುತ್ತದೆ. ಬಡತನ, ಸಮಾಜವಾದದ ಬಗ್ಗೆ ಉದ್ದುದ್ದ ಮಾತನಾಡಬಹುದಾದ ನಮಗೂ ಮಿತಿಗಳಿವೆಯಲ್ಲವೇ? ಮಿತಿಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ನಮ್ಮದಾಗಿರಬೇಕಷ್ಟೆ. ಇಂತಹ ಹಲವಾರು ಮಿತಿಗಳ ನಡುವೆಯೂ ಯಾಕೆ ಸತ್ಯ ಮೇವ ಜಯತೆ ಮುಖ್ಯವಾಗುತ್ತೆ ಎಂದರೆ, ಬಡತನವನ್ನು ಕಡಿಮೆ ಮಾಡುವ ಬದಲಾಗಿ ಬಡತನ ರೇಖೆಯ ಮಾನದಂಡವನ್ನೇ ದಿನಕ್ಕೆ 28 ರೂಪಾಯಿ ಮಾಡಿ ಬಡತನ ನಮ್ಮ ದೇಶದಲ್ಲಿ ಕಡಿಮೆಯಾಗಿದೆ ಎಂದು ಸಾಧಿಸ ಹೊರಟಿರುವ ಸರ್ಕಾರಗಳಿರುವ ಹೊತ್ತಿನಲ್ಲಿ, ಇಡೀ ದೇಶದ ಮಧ್ಯಮ ವರ್ಗ ಮತ್ಯಾವುದೋ ಭ್ರಮೆಗಳಲ್ಲಿ ತೇಲುತ್ತಿರುವ ಹೊತ್ತಿನಲ್ಲಿ ವಾಪಾಸು ‘ಸಮಸ್ಯೆ’ಗಳತ್ತ ನಮ್ಮನ್ನು ಮುಖ ಮಾಡಿಸಿದೆ. ಜನರ ಸಮಸ್ಯೆಗಳನ್ನು ಇಶ್ಯೂಗಳೇ ಅಲ್ಲವೆಂಬಂತೆ ಪರಿಗಣಿಸಿ ಆರುಷಿ ತಲವಾರ್ ಹತ್ಯೆಯಂತ ಕ್ಷುಲ್ಲಕ ವಿಷಯಗಳನ್ನು ರಾಷ್ಟ್ರೀಯ ಹಿತಾಸಕ್ತಿಯ ಇಶ್ಯೂಗಳೆಂಬಂತೆ ಬಿಂಭಿಸುತ್ತಿರುವ ಹೊತ್ತಲ್ಲಿ ‘ಸತ್ಯ ಮೇವ ಜಯತೆ ಎಲ್ಲರೂ ಮರೆತು ಮಲಗಿರುವ ;ಹಣ್ಣೂ ಭ್ರೂಣ ಹತ್ಯೆಯನ್ನು, ಪಬ್ಲಿಕ್ ಹೆಲ್ತ್ ಇಶ್ಯೂ ವನ್ನು ಮುನ್ನೆಲೆಗೆ ತಂದಿದೆ. ನಾವು ಸಕಾರಾತ್ಮಕವಾಗಿ ನೋಡಲು ಸಾಧ್ಯವಾದರೆ ಆಕ್ಟಿವಿಸಂ ನಿಂದ ಬದಲಾವಣೆ ಸಾಧ್ಯ ಎಂದು ನಂಬುವ ಪ್ರತಿಯೊಬ್ಬರೂ ಮಾತನಾಡಬೇಕಾದ ಇಶ್ಯೂಗಳೇ ಇವು. ನಮ್ಮಲ್ಲಿ ಅತಿ ದೊಡ್ಡ ದುರಂತವೊಂದಿದೆ. ಮೊಬೈಲು, ಅಂತರ್ಜಾಲ, ಇತ್ಯಾದಿಯೆಲ್ಲಾ ಬಂದು ಮಾಹಿತಿ ಕ್ರಾಂತಿಯೇ ನಡೆದಿದೆ ಎಂದು ಬಹಳ ಮಂದಿ ಭ್ರಮಿಸುತ್ತಿರುವ ಸಂದರ್ಭದಲ್ಲಿ ‘ಒಂದು ಜನೆರಿಕ್ ಔಷಧಿ 2 ರೂಪಾಯಿಗೆ ದೊರೆತರೆ ಅದೇ ಔಷಧಿ ಬ್ರಾಂಡ್ ಹೆಸರಿನಲ್ಲಿ 200 ರೂಪಾಯಿಗೆ ಮಾರಲಾಗುತ್ತದೆ ಎಂಬ ‘ಮಾಹಿತಿ’ ಲಕ್ಷಾಂತರ ಜನರಿಗೆ ತಿಳಿದಿದ್ದೇ ಮೊನ್ನೆ ‘ಸತ್ಯ ಮೇವ ಜಯತೆ’ ನೋಡಿದ ಮೇಲೆ. (ದ ಹಿಂದೂ ನಲ್ಲಿ ಅಮೀರ್ ಅಂಕಣಕ್ಕೆ ಬಂದಿರುವ ಪ್ರತಿಕ್ರಿಯೆ ಗಮನಿಸಿ). ಅಮೀರ್ ನಂತ ಸ್ಟಾರ್ ನಟ ಇದೇ ವಿಷಯವನ್ನು ಹೇಳಿದಾಗ ಹೆಚ್ಚಿನ ಜನರಿಗೆ ತಲುಪುತ್ತದೆ. ಇದು ಆಕ್ಟಿವಿಸಂ ದೃಷ್ಟಿಯಿಂದಲೂ ಒಳ್ಳೇದು ಮಾಡುತ್ತದೆ ಎಂದು ನನ್ನ ಅನಿಸಿಕೆ. ಜನರಿಗೆ ಕನಿಷ್ಟ ತಮ್ಮ ಬೇಡಿಕೆ ಏನು ಎನ್ನುವುದಾದರೂ ಅರಿಯುತ್ತದಲ್ಲ.
  ಎಡಪಂಥೀಯತೆ ಜನಪರ, ಬಲಪಂಥೀಯತೆ ಜನವಿರೋಧಿ ಎಂದು ನಾವೆಂದುಕೊಳ್ಳುತ್ತೇವೆ. ನಾನು ಪಕ್ಕಾ ಎಡಪಂಥೀಯ ಎಂದುಕೊಂಡು ಮಾರ್ಕ್ಸವಾದ, ಲೆನಿನ್ ವಾದ, ಅಸ್ತಿತ್ವವಾದ, ಸಬಾಲ್ಟರ್ನ್ ವಾದ ಅಂಬೇಡ್ಕರ್ ವಾದ ಇತ್ಯಾದಿಗಳಲ್ಲಿ ಮುಳುಗಿರುತ್ತೇವೆ. ಆದರೆ ಸಮಾಜದ ಬಹುದೊಡ್ಡ ಭಾಗಕ್ಕೆ ಈ ವಾದಗಳ ಆಳ ಅರಿವೂ ಇರುವುದಿಲ್ಲ. ಎಷ್ಟೋ ಸಲ ಅವರಿಗದು ಬೇಕಿರುವುದಿಲ್ಲ. ಆದರೆ ಸಮಾಜದಲ್ಲಿ ಒಳ್ಳೆಯತನಗಳಿರಬೇಕು, ಸೌಹಾರ್ದತೆಯಿರಬೇಕು, ಎಲ್ಲರ ಬದುಕೂ ಸಮೃದ್ಧವಾಗಿರಬೇಕು, ಶಾಂತಿ ನೆಲೆಸಿರಬೇಕು ಎಂಬ ಬಯಕೆ ಅವರಲ್ಲಿರುತ್ತದೆ. ಅವರಿಗೆ ತಿಳಿದೋ ತಿಳಿಯದೆಯೋ ಇದೇ ವ್ಯವಸ್ಥೇಯ ಬೇರುಗಳಲ್ಲೇ ಸಿಕ್ಕಿಕೊಂಡಿರುತ್ತಾರೆ. ಹಾಗೆಂದ ಮಾತ್ರಕ್ಕೆ ಅವರ ಕಳಕಳಿ, ಕಷ್ಟ ಪಡುವವರನ್ನು ನೋಡಿದಾಗ ಬರುವ ಅವರ ಕಣ್ಣೀರು ಸುಳ್ಳೇಂದೋ, ಅದು ನಾಟಕವೆಂದೋ, ಸೋಗಲಾಡಿತನವೆಂದೋ ಎಂದುಕೊಳ್ಳಲಾಗುವುದಿಲ್ಲ. ನೀವು ಹೇಳುವ ಆಕ್ಟಿವಿಸಂ ಈ ದೇಶದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದಿದ್ದರೆ ಅಂತಹ ಅಸಂಖ್ಯ ಜನರು ಅದೇ ಆಕ್ಟಿವಿಸಂನ ಭಾಗವಾಗಿರುತ್ತಿದ್ದರೋ ಏನೋ. ಅಮೀರ್ ಖಾನ್ ಕೂಡಾ ಅಂತಹ ಒಬ್ಬ ‘ಅಮಾಯಕ’ನೆಂದು ನೋಡಿದಾಗ ಮನಸ್ಸು ತಿಳಿಗೊಳ್ಳಬಹುದು.
  ಸಾಹಿಲ್, ಈ ದೇಶದ ಸಧ್ಯದ ದುಸ್ಥಿತಿ ಏನೆಂದರೆ ಇಲ್ಲಿ ಆಕ್ಟಿವಿಸಂ ಬಗ್ಗೆ ಮಾತನಾಡುವ ಎಡಪಂಥೀಯರಲ್ಲೇ ಸಾವಿರಾರು ಗುಂಪುಗಳಿವೆ. ಒಬ್ಬನ ಗುಂಪಿನವರು ಮತ್ತೊಬ್ಬನನ್ನು ‘ಬಂಡವಾಳಶಾಹಿ’ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡಿರುವಾತ ಎಂದು ಉದ್ದುದ್ದ ಡಾಕ್ಯುಮೆಂಟ್ ಗಳನ್ನು ಬರೆದು ತನ್ನ ಗುಂಪನ್ನು ಅದರ ವಿರುದ್ಧ ಸಜ್ಜುಗೊಳಿಸುತ್ತಿರುತ್ತಾನೆ. ಸಿಪಿಐ ವಿರುದ್ಧ ಸಿಪಿಎಂ, ಇವೆರಡರ ವಿರುದ್ಧ ಸಿಪಿಐ ಎಂ ಎಲ್, ಮತ್ತು ಇದರಲ್ಲಿ ನೂರಾರು ವಿಭಾಗಗಳು, ನಾವು ಮಾತ್ರ ಕಮ್ಯುನಿಷ್ಟರೆನ್ನುವ ಎಸ್ ಯು ಸಿ ಐ, ರೈತ ಸಂಘದ ಬಣಗಳು, ಡಿ ಎಸ್ ಎಸ್ ನ ನೂರಾರು ಬಣಗಳು, ಹೀಗೆ ಆಕ್ಟಿವಿಸಂ ಎನ್ನುವುದೇ ಛಿದ್ರಕೊಂಡು ಎಂತವರನ್ನೂ ಸಿನಿಕರನ್ನಾಗಿ ಮಾಡಿಬಿಡುವಂತಹ ಹೊತ್ತಲ್ಲಿ ನಿಜವಾದ ಆಕ್ಟಿವಿಸಂ (not necessarily Marxist, rather we can say humanist activism) ನ ಅಗತ್ಯತೆಯನ್ನಾದರೂ ಮನಗಾಣಿಸಲು ಒಂದಷ್ಟು ಕೊಡುಗೆ ನೀಡುತ್ತಿರುವ ‘ಬಂಡವಾಳಶಾಹಿಯೊಳಗಿನ ಉದಾರಿ ಅಮೀರ್ ಖಾನ್ ಗೆ ಸಧ್ಯ ಜೈ ಎನ್ನೋಣ.

  ಪ್ರತಿಕ್ರಿಯೆ
 3. T.N.Seetharam

  Preetiya Saahil,
  nimma maatugaLannu naanu poorti oppade hodaru-BEEkaadashtu bhaaga opputtene-
  nimma brilliant mind mattu sensitive anyalisys ge buddhi poorvaka namaskaara..
  ee patra odi svalpa nimma abhimaani kooda aagobitte
  preetiya Harsha avare
  nimma maatugalu tumbaa proudavaagive mattu nimma buddhishakti kooda apaara anisutte..AMIR KHAN ENU ANNUVUDAKKINTA AVARU PREKSHAKARA BUDDHIYA SOOKSMA STHAANAKKE ENU TALUPISIDDARE ENNUVUDU MUKHYA endu neevu heluvudu khanditha sathya
  Neevu HeLuvudu ivattina practical sathya mattu avaru heLuttiruvudu saaravakaalika saiddhaantika sathya..
  EE ERADARA MADHYE NANAGE SAIDDHAANTIKA SATHYAVE KONCHA HECHHU PRIYA.

  ಪ್ರತಿಕ್ರಿಯೆ
 4. D.RAVI VARMA

  ಹರ್ಷ ಕುಗ್ವೆ ಸರ್,ನಿಮ್ಮ ಪ್ರತಿಕ್ರಿಯೆ ತುಂಬಾ ಸಮಯೋಚಿತವಾಗಿದೆ. ಈ ಸಮಸ್ಯೆ ನನ್ನನ್ನು ಬಹಳಷ್ಟು ಸಾರಿ ಕಾಡಿದ್ದುಂಟು ಯಾವ ವಾದಕ್ಕೂ ಜೋತುಬೀಳದ ಅಮಿರ್ಖಾನ್ ತನಗೆ ಸರಿ ಎನಿಸಿದ ದಿಕ್ಕಿನಲ್ಲಿ, ಈ ಸಮಾಜದ ನೋವು ,ನಲಿವುಗಳಿಗೆ ಸ್ಪಂದಿಸುತ್ತಾ ಬಂದಿದ್ದಾನೆ ಅಂತಾ ನನಗನಿಸುತ್ತದೆ. ನನಗೆ ಇತ್ತೀಚಿಗೆ ಒಂದು ಮೆಸೇಜ್ ಬಂದಿತ್ತು ,abhishekbatchan ಒಂದು ದೊಡ್ಡ ಮೊತ್ತದ ಜೀವವಿಮಾ ಪೋಲಿಸಿ ಜೀವನ ಆನಂದ್ ಪೋಲಿಸಿ ಯನ್ನು ಭಾರತೀಯ ಜೀವ ವಿಮ ನಿಗಮ ಈ ದೇಶದ ಬಹುದೊಡ್ಡ ವಿಮಾ ಸಂಸ್ಥೆ ಇಂದ ತಗೆದುಕೊಂಡು ದೇಶ ಪ್ರೇಮ ಮೆರೆಯುತ್ತಾನೆ ,ದುರಂತವೆಂದರೆ ಅವರ ತಂದೆ ಶ್ರೀ ಅಮಿತಬತ್ಚನ್ ಐಸಿಐಸಿಐ prudential ಕೊಂದು ಬಹು ರಸ್ತ್ರೀಯ ಕಂಪನಿ ಯಾ ಜಾಹೀರಾತು ಇದೆ ವಿಷಯದ ಬಗ್ಗೆ ಜಾಹೀರಾತು ನೀಡುತ್ತಾನೆ. ಇದು ಅವರಿಗೆ ಅನಿವಾರ್ಯವೇ ಇರಬಹುದು. ಆದರೆ ಅವರು ಯೋಚಿಸುವ ದಿಕ್ಕು, ಆ ನಿಟ್ಟಿನಲ್ಲಿ ಅವರು ಮಾಡುವ ಕೆಲಸ ಮುಕ್ಯವಗಬೇಕೆ ವಿನಃ ಮತ್ತೊಂದಲ್ಲ. ನನಗಂತೂ ಅಮಿರ್ಖಾನ್ ಕೆಲಸ ನಿಜಕ್ಕೂ ತುಂಬಾ ಇಸ್ತವಾಯ್ತು. ಹಾಗೆ ನೋಡಿದ್ರೆ ಅವರ ಸಂದೇಶ ಕೂಡ ಈ ಸಮಾಜದ ಕೊನೆಸ್ತರದಲ್ಲಿರುವ ಜನರಿಗೆ ತಲುಪಲಾರದೇನೋ, ಆದರು ಒಂದು ಜನಾಂಗಕ್ಕೆ ಅವರ ಸಂದೆಶವಂತು ತಲುಪುತ್ತಿದೆ ಎನ್ನುವುದು ಈಗ ಅದರ ಬಗ್ಗೆ ಚರ್ಚೆ ಆಗುವುದು ನೋಡಿದ್ರೆ ತಿಳಿಯುತ್ತದೆ ನಾನು ಹತ್ತಾರು ಬರಿ ಅವರ ಸಂದೇಶವನ್ನು ವಿಶೇಷವಾಗಿ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದಬ್ಬಾಳಿಕೆ ನೋಡಿ ಅವಕ್ಕಾಗಿದ್ದೇನೆ ಇದು ನಮ್ಮ ನಿಮ್ಮೆಲ್ಲರಿಗೂ ತಿಳಿದ ಸತ್ಯ ಆದರೆ ನಾವೆಲ್ಲಾ ಅದರ ಬಗ್ಗೆ ಯೋಚಿಸಿರಬಹುದೇ ಹೊರತು ಏನೂ ಮಾಡಲಾಗಿಲ್ಲ, ಬಿಡಿ ನಮಗೆ ಆದ ನಮ್ಮ ಮಿತಿಗಳು ಇವೆ ಆದರೆ ಅಮೀರ್ ಈ ಸಮಯದಲ್ಲಿ ಈಸಮಾಜದ ಒಂದು burning ವಿಷಯದ ಬಗ್ಗೆ ಮಾತನಾಡುವ ಅದರ ಬಗ್ಗೆ ಎಚ್ಹ್ಹೆತುಕೊಲ್ಲವ ಕರೆ ನೀಡುತ್ತಾನೆ. ಆ ಮಟ್ಟಿಗೆ ನಾವು ಅವರನ್ನು ಅಭಿನಂದಿಸಲೇಬೇಕು ಅವರ ಈ ವರಿಗಿನ ಎಲ್ಲ ಸಿನಿಮಾಗಳನ್ನು ನೋಡಿದ್ರೆ ಅವರಿಗಿರುವ ಸಾಮಾಜಿಕ ಕಳಕಳಿ, ಬದ್ದತೆ, ಜೀವನ ಪ್ರೀತಿ ಎದ್ದು ಕಾಣುತ್ತದೆ ಅದು ಅವರ ಮಾನವತಾ ವಾದ ನೆವೆ ಹೇಳಿದ ಹಾಗೆ ಇಲ್ಲಿ ಅತ್ಯಂತ ಬುದ್ಧಿಜೀವಿಗಳು, ಅನೇಕ ಇಸಂ ಗೆ ಬದ್ದರದವರು ಇದ್ದಾರೆ, ಅವರವರ ನಿಟ್ಟಿನಲ್ಲಿ ಬದ್ದರಾಗಿ ಕೆಲಸ ಮಾಡುತಿದ್ದಾರೆ. ಆದರೆ ಸಮಾಜದ ಜೊತೆ ಸಂಪರ್ಕ ಬೆಳೆಸುವಲ್ಲಿ ಎಲ್ಲೋ ಒಂದು ಗ್ಯಾಪ್ ಸೃಷ್ಟಿಯಾಗಿದೆ. ಇಂತಹ ಪ್ರಕ್ಷುಬ್ದ ಸಮಯದಲ್ಲಿ ಅಮೀರ್ ನಮಗೆ ಒಬ್ಬ ನಿಜ ನಾಯಕ ನಾಗುತ್ತಾನೆ ಅದು ಅವರ ಮಿತಿಗಳನ್ನು ಬದಿಗಿಟ್ಟು ನಾವು ಅವರನ್ನು, ಅವರ ದ್ವನಿಯನ್ನು, ಕಳಕಳಿಯನ್ನು ಅರ್ಥಿಸಿಕೊಂಡು ಅವರ ಕೂಗಿಗೆ ಪ್ರತಿ ಸ್ಪಂದಿಸಬೇಕಾಗಿದೆ ಅಲ್ಲವೇ
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 5. Samvartha 'Sahil'

  @ T.N. Seetharaam: Gurugaley, bhinnabhipraaya iddaaga maatra ellaru beleyalu saadhya. Haagaagi neevu nanna maatugalanna sampoornavaagi oppikolladiddare adey namagellarigoo olledu 🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: