ಜುಗಾರಿ ಕ್ರಾಸ್: ಮಾಯಾವತಿಯ ಸೋಲು..

– ಡಾ.ಕಿರಣ್.ಎಂ ಗಾಜನೂರು

ಮಾಯವತಿಯ ಸೋಲು ದಲಿತ ಚಳುವಳಿಗೆ ಪಾಠವಾಗಬಲ್ಲದೇ. . . . . .?

ಅದು 2007ರ ಮೇ 11 ಶುಕ್ರವಾರದ ದಿನ. ಅಂದು ಪ್ರಕಟವಾದ ಉತ್ತರ ಪ್ರದೇಶದ ಚುನಾವಣಾ ಪಲಿತಾಂಶ ಇಡೀ ಭಾರತದ ದಲಿತ ಸಮುದಾಯದ ಮನಸ್ಸಿನಲ್ಲಿ ವಿದ್ಯುತ್ ಸಂಚಾರ ಉಂಟುಮಾಡಿತ್ತು.  ಭಾರತದ ಸ್ವಾತಂತ್ರ್ಯ ನಂತರ ಮೊಟ್ಟ ಮೊದಲ ಬಾರಿಗೆ ಒಬ್ಬ ದಲಿತ ಮಹಿಳೆ ಸಂಪೂರ್ಣ ಬಹುಮತದೊಂದಿಗೆ (403 ಸೀಟುಗಳಲ್ಲಿ 206ರಲ್ಲಿ ಬಿ.ಎಸ್.ಪಿ ವಿಜಯಿಯಾಗಿತ್ತು) ಉತ್ತರ ಪ್ರದೇಶದಂತಹ ಬೃಹತ್ ರಾಜ್ಯದ ಗದ್ದುಗೆ ಏರಿದ್ದಳು. ಆ ಪಲಿತಾಂಶ ನೋಡಿದ ಪ್ರತಿಯೊಬ್ಬ ದಲಿತನೂ  ತನ್ನನ್ನು ಹುಟ್ಟಿನಿಂದಲೇ ಅವಮಾನಕ್ಕೆ ಈಡುಮಾಡಿದ ಈ ನೆಲದ ಶೋಷಿತ ಇತಿಹಾಸವನ್ನು  ಓರೆಗಣ್ಣಿನಿಂದ ನೋಡಿ ನಿನ್ನನ್ನು ಇನ್ನು ಬದಲಿಸುತೇನೆ ನೋಡುತ್ತಿರು ಎಂಬಂತೆ ಆತ್ಮವಿಶ್ವಾಸದಿಂದ ಎದೆಯುಬ್ಬಿಸಿ ಮಾತನಾಡಿದ್ದ ಅಲ್ಲದೆ ಶತಮಾನಗಳ ನೋವನ್ನು, ಪೂನಾ ಒಪ್ಪಂದದ ನಯವಂಚನೆಯನ್ನು ಮರೆತು ಮಯಾವತಿಯ ವಿಜಯವನ್ನು ತನ್ನ ಸಮುದಾಯದ ವಿಜಯವೆಂಬಂತೆ ಭಾವಿಸಿ ಸಮಾಧಾನದ ನಿಟ್ಟಿಸಿರು ಬಿಟ್ಟಿದ್ದ. ದಲಿತ ಚಿಂತಕರು ಅದು ಮಯಾವತಿಯ ವಿಜಯವಲ್ಲ ಬದಲಾಗಿ ಭಾರತದಲ್ಲಿ ದಲಿತ ಪರಂಪರೆಗೆ ದೊರೆತ ವಿಜಯ ಎಂಬಂತೆ ಮಾತನಾಡಿದ್ದರು ಇನ್ನು ಈ ನೆಲದಲ್ಲಿ ದಲಿತ ಪರ್ವ ಪ್ರಾರಂಭವಾಗಿದೆ ಎಂಬಂತೆ ಬಿಂಬಿಸಿದ್ದರು ಯಾವ ಕಠಟಣಛಿಚಿಟ ಕಠತಿಜಡಿ ಅನ್ನು ಅಂಬೆಡ್ಕರ್ ದಲಿತ ವಿಮೋಚನೆಯ ಒಚಿಣಜಡಿ ಞಜಥಿ ಎಂದಿದ್ದರೂ ಅಂತಹ ಮಾಸ್ಟರ್ಕೀಯನ್ನು ಮಾಯಾವತಿ ತಮ್ಮ ಕೈಗೆ ತೆಗೆದುಕೊಂಡು ಬಿಟ್ಟಿದ್ದರು ಆ ಮೂಲಕ ಶತಮಾನಗಳ ಕಾಲ ಹೋರಾಟ ನಡೆಸಿಕೊಂಡು ಬಂದ ದಲಿತ ಚಳುವಳಿಯನ್ನು ಅಂತಿಮವಾಗಿ ಒಂದು ತಾಕರ್ಿಕ ಅಂತ್ಯಕ್ಕೆ ತಲುಪಿಸಿದ್ದೇನೆ ಎಂದು ಸ್ವತ ಮಾಯವತಿಯವರೇ ಮಾತನಾಡಿದ್ದರು, ಅದು ಅಲ್ಲದೆ ಆ ಚುನಾವಣಾ ಪಲಿತಾಂಶ ಭಾರತವನ್ನು ಜಾತಿ ಮುಕ್ತ ದೇಶವನ್ನಾಗಿಸುವ ಬಹಳ ದೊಡ್ಡ ಆಶಯವನ್ನು ಸಮಾಜದಲ್ಲಿ ಭಿತ್ತಿತ್ತು. ಆದರೆ ಈ ಎಲ್ಲಕ್ಕಿಂತ ಮುಖ್ಯವಾಗಿ ಅಂಬೆಡ್ಕರ್ ಕಾಲದಿಂದಲೂ ತಮ್ಮ ಪಾಲಿನ ನ್ಯಾಯಯುತ ರಾಜಕೀಯ ಹಕ್ಕಿಗಾಗಿ ಹೋರಾಡುತ್ತಾ ಬಂದಿದ್ದ ದಲಿತ ಹೋರಾಟಕ್ಕೆ ಕೇವಲ ಭರವಸೆಯ ಮಾತುಗಳನ್ನಾಡುತ್ತಾ, ಸಂವಿಧಾನಿಕ ಮಿತಿಗಳನ್ನು, ನ್ಯಾಯಲಯದ ತಿಪರ್ುಗಳನ್ನು ತೋರಿಸಿ ಸಮಾಧಾನ ಪಡಿಸುತ್ತಿದ್ದ ಮೇಲ್ವರ್ಗದ ರಾಜಕೀಯ ತಂತ್ರಗಾರಿಕೆಗೆ ಸರಿಯಾದ ಮಮರ್ಾಘಾತವನ್ನು ಅಂದಿನ ಪಲಿತಾಂಶ ನೀಡಿತ್ತು ಅದಕ್ಕೆ ಸರಿಯಾಗಿ ಇಂದು ದಲಿತ ಪ್ರಜ್ಙಾವಂತನಾಗಿದ್ದಾನೆ, ತನ್ನ ಅಗತ್ಯತೆಗಳನ್ನು, ಹಕ್ಕುಗಳನ್ನು ಸಾಂವಿಧಾನಿಕ ಮಾರ್ಗದಲ್ಲಿಯೇ ಪಡೆಯುವ ಶಕ್ತಿ ದಲಿತ ಸಮುದಾಯಕ್ಕೆ ಬಂದಿದೆ ಇನ್ನು ಮುಂದೆ ನಮ್ಮ ನ್ಯಾಯಯುತ ಹಕ್ಕಿಗಾಗಿ ನಿಮ್ಮ ಮುಂದೆ ನಿಲ್ಲುವ ಅಗತ್ಯ ನಮಗಿಲ್ಲ ಎಂಬಂತೆ ದಲಿತ ಸಮುದಾಯ ಮಾತನಾಡಿತ್ತು. ಒಟ್ಟಾರೆ ಅಂದಿನ ಮಾಯವತಿಯ ರಾಜಕೀಯ ವಿಜಯ ಕೇವಲ ಉತ್ತರ ಪ್ರದೇಶಕ್ಕೆ ಸೀಮಿತವಾಗಿರದೆ ಇಡಿ ಭಾರತದ ವಿಜಯವಾಗಿ ನಿಮ್ನ ವರ್ಗ ಭಾವಿಸಿದ್ದಿತು. . . ಆದರೆ ಇಲ್ಲಿ ಗಮನಿಸಬೇಕಾದ ಬಹಳ ಪ್ರಮುಖವಾದ ಅಂಶವೆಂದರೆ ಅಂದಿನ ಉತ್ತರ ಪ್ರದೇಶದ ಪಲಿತಾಂಶ ದೇಶದಲ್ಲಿ ಸೂರಗಿದಂತಿದ್ದ ದಲಿತ ಹೋರಾಟಕ್ಕೆ ನವ ಚೈತನ್ಯವನ್ನು ತಂದು ಕೊಟ್ಟಿತ್ತು ಅಂದರೆ ಅಂಬೆಡ್ಕರ್ ಅದಿಯಾಗಿ ಎಲ್ಲರೂ ಭಾವಿಸಿದಂತೆ ರಾಜಕೀಯ ಅಧಿಕಾರ ದಲಿತ ಹೋರಾಟದ ತಾಕರ್ಿಕ ಅಂತ್ಯ ಎಂಬ ನಿಲುವುವನ್ನು ಮಾಯವತಿಯ ವಿಜಯ ಬೆಂಬಲಿಸಿತ್ತು ಅದಕ್ಕೆ ಪೂರವೆಂಬಂತೆ ಹಲವಾರು ರಾಜ್ಯಗಳಲ್ಲಿ ಬಹುಜನ ಸಮಾಜವಾದಿ ಪಾಟರ್ಿ ತನ್ನ ಕಾರ್ಯಚರಣೆಯನ್ನು ವಿಸ್ತರಿಸಿತು ಇದಕ್ಕೆ ಕನರ್ಾಟಕದ ದಲಿತ ಸಂಘಟನೆಯು ಹೊರತಾಗಿರಲಿಲ್ಲ ಆದರೆ ಇಲ್ಲಿ ರೈತ ಸಂಘದ ಎರಡೂ ಬಣಗಳು ಒಡಗೂಡಿ, ದಲಿತ ಸಂಘರ್ಷ ಸಮಿತಿಗಳ ಸಹಕಾರದೊಂದಿಗೆ ಸವರ್ೂದಯ ಕನರ್ಾಟಕ ಪಕ್ಷಕ್ಕೆ ಮರು ಹುಟ್ಟು ನೀಡುವ ಪ್ರಯತ್ನಗಳು ನಡೆದವು ಆದರೆ ಅದು ಯಶಸ್ವಿಯಾಗಲಿಲ್ಲ ಎಂಬುದು ಬೇರೆ ಮಾತು ಆದರೆ ಒಟ್ಟಾರೆ ನೋಡುವುದಾದರೆ 2007ರ ಮಾಯವತಿಯ ಗೆಲುವು ದೇಶದ ದಲಿತ ಹೋರಾಟಕ್ಕೆ ಹೊಸ ಕಸುವು, ಚಟುವಟಿಕೆ ತಂದಿತ್ತು. ಆದರೆ ದೇಶದ ದಲಿತ ಸಮಾಜ ಕಂಡ ಕನಸು ಕನವರಿಕೆಗಳು 2012ರ ಉತ್ತರ ಪದೇಶ ಚುನಾವಣಿಯಲ್ಲಿ ಬಿ.ಎಸ್.ಪಿ ಯ ಹಿನಾಯ ಸೋಲಿನೊಂದಿಗೆ ಕಮರಿ ಹೋದವು ಅಯ್ಯೊ ಶತಮಾನಗಳ ಕಾಲ ಹೋರಾಡಿ ಪಡೆದ ರಾಜಕೀಯ ಗದ್ದುಗೆ ಈ ಪರಿ ಕೆವಲ ಐದು ವರ್ಷಗಳಲ್ಲಿ ಕುಸಿದು ಬಿಳುತ್ತದೆ ಎಂದು ಯಾರು ಯೋಚಿಸಿರಲಿಲ್ಲ! ಯಾರು ಯಾಕೆ? ಸ್ವತಹ ಮಾಯಾವತಿಯವರೇ ಊಹಿಸಿರಲಿಕ್ಕಿಲ್ಲ ಆದರೆ ಘಟನೆ ನಡೆದೇ ಹೋಗಿದೆ ಈಗ ರಾಜಕೀಯ ವಿಶ್ಲೇಷಕರು ಮಾಯಾವತಿಯ ಸೋಲಿಗೆ ಬಿ.ಎಸ್.ಪಿ ಅವಧಿಯಲ್ಲಿ ಬೆಳೆದ ಅತಿಯಾದ ಭ್ರಷ್ಟಚಾರ, ದಲಿತರಲ್ಲೇ ಜಾಟ್ ಜನಾಂಗದ ಕಡೆ ಮಾಯವತಿ ಹೊಂದಿದ್ದ ಹೆಚ್ಚಿನ ಒಲವು, ಅಲ್ಪಸಂಖ್ಯಾತರನ್ನು ಒಲಿಸಿಕೊಳ್ಳುವಲ್ಲಿ ಮಾಡಿದ ತಪ್ಪು, ಮುಖ್ಯವಾಗಿ ದಲಿತ ಉದ್ದಾರಕ್ಕಾಗಿ ಸಮಾಜಿಕ ವಲಯಗಳಿಗೆ ನೀಡಿದ ಪ್ರಾಶಸ್ತ್ಯವನ್ನು ರೈತ ಸಮುದಾಯಕ್ಕೆ ನೀಡದೇ ಇದ್ದದು ಇತ್ಯದಿ ಕಾರಣಗಳನ್ನು ನೀಡುತ್ತಿದ್ದಾರೆ, ಆದರೆ ಈ ದೇಶದ ತಳಸಮುದಾಯದ ಭದ್ರ ರಾಜಕೀಯ ನೆಲೆ ಭಗ್ನಗೊಂಡ ಕುರಿತು ಯಾರು ಮಾತನಾಡುತ್ತಿಲ್ಲ, ಉತ್ತರ ಪ್ರದೇಶವನ್ನು ಕೆಂದ್ರವಾಗಿಟ್ಟುಕೊಂಡು ಪ್ರಾರಂಭವಾಗಿದ್ದ ದಲಿತರ ರಾಜಕೀಯ ಪ್ರಾತಿನಿಧಿಕರಣದ ಹೋರಾಟದ ದಾರಿ ಈಗ ಮುಚ್ಚಿದಂತಾಗಿರುವುದು ಯಾರನ್ನು ಅಷ್ಟಾಗಿ ಬಾಧಿಸುತ್ತಿಲ್ಲ ಇದು ನಿಜವಾದ ದುರಂತ 2005ರ ಮಾಯವತಿಯ ವಿಜಯವನ್ನು ದಲಿತ ಪಂಪರೆಯ ಜಯ ಎಂದು ಒಪ್ಪಿಕೊಂಡ ನಾವು 2012ರ ಸೋಲನ್ನು ರಾಷ್ಟ್ರಮಟ್ಟದಲ್ಲಿ ದಲಿತ ಚಳುವಳಿಗೆ ಆದ ಸೋಲು ಅಂತಲೇ ಸ್ವಿಕರಿಸಿ ಪಯರ್ಾಯಗಳ ಕುರಿತು ಚಿಂತಿಸಬೇಕಾಗುತ್ತದೆ, ಅಷ್ಟೆ ಅಲ್ಲದೆ ನನ್ನ ಪ್ರಕಾರ ಈ ಚುನಾವಣಾ ಪಲಿತಾಂಶ ದಲಿತ ಹೋರಾಟ/ಚಿಂತನೆಯ ಆತ್ಮವಿಮಶರ್ೆಗೆ ಕಾರಣವಾಗಬೇಕಿದೆ ಇದುವರೆಗೂ ರಾಜಕಿಯ ಅಧಿಕಾರ ಅಥವ ಪ್ರಾತಿನಿಧಿಕರಣವು ದಲಿತ ಹೋರಾಟದ ತಾಕರ್ಿಕ ಅಂತ್ಯ ಎಂದು ಭಾವಿಸಿದ್ದ ದಲಿತ ಮುಖಂಡರಿಗೆ ಉತ್ತರ ಪ್ರದೇಶದ ಎರಡು ಚುನಾವಣಿಗಳ ಪಲಿತಾಂಶ ಕಣ್ಣು ತೆರೆಸಬೇಕಿದೆ ಸಾಮಾಜಿಕವಾಗಿ ಸಂಘಟಿತವಾಗದೇ ಯಾವುದೇ ವರ್ಗ ಪಡೆಯುವ ರಾಜಕೀಯ ಅಧಿಕಾರ ಎಂಬುದು ಕೇವಲ ಇಂದಿನ ಬಹು ಪ್ರಚಲಿತ ಶಕ್ತಿ ರಾಜಕಾರಣದ ಭಾಗ ಮಾತ್ರ ಎನ್ನುವ ಸತ್ಯ ದಲಿತರಿಗೆ ಅರ್ಥವಾಗಬೇಕಿದೆ, ಮಾಯವತಿಯ ರಾಜಕೀಯ ತಂತ್ರಗಾರಿಕೆಯನ್ನೆ ದಲಿತರ ಸಬಲಿಕರಣ ಎಂಬಂತೆ ಬಿಂಬಿಸಿದ ದಲಿತ ಚಿಂತಕರು ಇನ್ನಾದರೂ ಆ ಭ್ರಮೆಯಿಂದ ಹೊರ ಬರಬೇಕಿದೆ, ಮುಖ್ಯವಾಗಿ ಇತ್ತಿಚೆಗೆ ಬೆಳೆದ ಮತ್ತು ಮಯಾವತಿಯಿಂದ ಹೆಚ್ಚು ಪ್ರಚಲಿತಕ್ಕೆ ಬಂದ ಬಹುಜನ ಎಂಬ ಪರಿಕಲ್ಪನೆ ಚುನಾವಣಾ ರಾಜಕಾರಣವನ್ನು ಗೆಲ್ಲಲು ಉತ್ತರ ಪ್ರದೇಶದಲ್ಲಿ ದಲಿತರ ಮುಂದಾಳತ್ವದಲ್ಲಿ ರಚಿತವಾದ ಒಂದು ತಂತ್ರ/ಐಡೆಂಟಿಟಿ ಮಾತ್ರವಾಗಿದ್ದು ಇದು ಶರದ್ ಪವಾರ್ ಮಹಾರಾಷ್ಟ್ರದಲ್ಲಿ ಯಶಸ್ವಿಯಾಗಿ ರೂಪಿಸಿದ ಮರಾಠ ಐಡೆಂಟಿಟಿ ಮತ್ತು ಮುಲಾಯಂಸಿಂಗ್ ಯಾದವ್ ಯಾದವ ಜನಾಂಗಕ್ಕೆ ರೂಪಿಸಿದ ಯಾದವ ಐಡೆಂಟಿಟಿ ಅಥವಾ ಕನರ್ಾಟಕದಲ್ಲಿ ಯಡಿಯೂರಪ್ಪ ಇಂದು ರೂಪಿಸಲು ಪ್ರಯತ್ನಿಸುತ್ತಿರುವ ಲಿಂಗಾಯತ ಐಡೆಂಟಿಟಿ ಮತ್ತು ರಾಮುಲುವಿನ ಕನಸಾದ ನಾಯಕ ಜನಾಂಗದ ಐಡೆಂಟಿಟಿಗಿಂತ ಹೆಚ್ಚೆನು ಭಿನ್ನವಾದುದಲ್ಲ ಎಂಬುದನ್ನು ದಲಿತ ಚಳುವಳಿ ಗ್ರಹಿಸಬೇಕಿದೆ. ಮುಂದುವರಿದು ಶತಮಾನಗಳಿಂದ ಆಚರಣೆ, ಸಂಸ್ಕ್ರುತಿ ಇತ್ಯಾದಿಗಳ ಹೆಸರಿನಲ್ಲಿ ನಡೆಯುತ್ತಾ ಬಂದು ಸ್ವಾತಂತ್ರ್ಯ ನಂತರ ಒಂದು ರಾಜಕೀಯ ಮೌಲ್ಯ/ವ್ಯವಸ್ಥೆಯಾಗಿ ರೂಪುಗೊಂಡ ಮೇಲ್ವರ್ಗದ ರಾಜಕೀಯ ಸಂಸ್ಥೆಗಳಲ್ಲಿ ನಾವು ನಮ್ಮ ರಾಜಕಿಯ ಅಗತ್ಯತೆಗಳನ್ನು ಪೂರೈಸಿಕೊಳ್ಳುತ್ತೇವೆ ಎಂಬುದು ಸಾಧ್ಯವಿಲ್ಲ ಎಂಬುದನ್ನು ಇತಿಹಾಸ ನಿರೂಪಿಸಿದೆ, ವಿವರವಾಗಿ ನೋಡುವುದಾದರೆ ಸಮಾನ್ಯವಾಗಿ ಭಾರತದ ದಲಿತ ಚಿಂತನೆ ನಮ್ಮದೇ ಜನ ಶತಮಾನಗಳ ಕಾಲ ಶೋಷಿಸುತ್ತಾ ಬಂದ ವ್ಯವಸ್ಥೆಯ ಭಾಗವಾಗಿ ಬಿಟ್ಟರೆ ವ್ಯವಸ್ಥೆಯ ಗುಣವನ್ನು ಬದಲಾಯಿಸಿ ಬಿಡಬಹುದು ಎಂದು ನಂಬುತ್ತದೆ ಆ ಕಾರಣದಿಂದಲೇ ವಿಸಲಾತಿಯಿಂದ ಶಿಕ್ಷಣ, ಶಿಕ್ಷಣದಿಂದ ಆಡಳಿತಾಂಗದಲ್ಲಿ ಪ್ರಾತಿನಿಧ್ಯ, ರಾಜಕೀಯ ಅವಕಾಶ ಕೊನೆಯದಾಗಿ ದಲಿತರೇ ರಾಜಕೀಯವನ್ನು ನಿಯಂತ್ರಿಸುವ ಬಗೆಗಳ ಕುರಿತು ದಲಿತ ಹೋರಾಟದ ಇತಿಹಾಸದಲ್ಲಿ ಪುಟಗಟ್ಟಲೆ ಬರವಣಿಗೆ ಸಿಗುತ್ತವೆ ಆದರೆ ಒಂದು ಸ್ಥಾಪಿತ ಸಂಸ್ಥೆಯ ಸ್ವಭಾವವು ಅದರ ಭಾಗವಾಗಿರುವ ಜನರ ಒಟ್ಟು ಮೊತ್ತವೇನೂ ಆಗಿರುವುದಿಲ್ಲ ಎಂಬ ಅಂಶ ದಲಿತ ಸಂಘಟನೆಗಳು ಗಮನಿಸಿದಂತೆ ಕಾಣುವುದಿಲ್ಲ ಇದಕ್ಕೆ ಭಾರತದ ಪ್ರಜಾಸತ್ತಾತ್ಮಕ ರಾಜಕೀಯ ಸಂಸ್ಥೆಗಳ ಕಾರ್ಯ ವೈಕರಿಯನ್ನು ಉದಾಹರಿಸಬಹು, ಸಂಸ್ಥೆಗಳಿಗೆ ಅವು ಸ್ಥಾಪನೆಯಾಗುವ ಹಂತದಲ್ಲಿಯೇ ಕೆಲವು ನಿದರ್ಿಷ್ಟ ಮೌಲ್ಯಗಳು ಇರುತ್ತವೆ ಮತ್ತು ಅವು ಅನಂತವಾಗಿರುತ್ತವೆ ಆದರೆ ಅದರಲ್ಲಿ ಭಾಗವಹಿಸುವ ವ್ಯಕ್ತಿಗೆ ಒಂದು ಕಾಲಮಿತಿಯಿರುತ್ತದೆ ಅಲ್ಲದೆ ಆತ ಅಲ್ಲಿ ಆ ಸಂಸ್ಥೆಯ ಮೌಲ್ಯಗಳಿಗೆ ಪೂರಕವಾಗಿ ಕೆಲಸ ಮಾಡಬೇಕಾಗುತ್ತದೆ ಅದ್ದರಿಂದ ಕಾಲಾನಂತರ ಆತನು ಆ ವ್ಯವಸ್ಥೆಯ ಭಾಗವಾಗಿ ಬಿಡುತ್ತಾನೆ ಇಲ್ಲವಾದರೆ ಅನಗತ್ಯ ಒತ್ತಡ ಎದುರಿಸಬೇಕಾಗುತ್ತದೆ ಇದನ್ನು ನಾವು ಭಾರತದ ಬಹುಪಾಲು ದಲಿತ ನೌಕರ ಮತ್ತು ವಿದ್ಯಾವಂತರ ವರ್ತನೆಯಲ್ಲಿ ಬಹಳ ಸ್ಪಷ್ಟವಾಗಿ ಗುರುತಿಸಬಹುದು ಸುಶಿಕ್ಷೀತ ದಲಿತರು ನನ್ನನ್ನು ವಂಚಿಸಿದರು ಎಂಬ ಅಂಬೆಡ್ಕರ್ ಅವರ ಹೇಳಿಕೆ ಇದನ್ನು ಪುಷ್ಠೀಕರಿಸುತ್ತದೆ ಹಾಗೆ ನೋಡುವುದಾದರೆ ಉತ್ತರ ಪ್ರದೇಶದ ಕಳೆದ ಎರಡು ಚುನಾವಣಾ ಫಲಿತಾಂಶ ಮಿಸಲಾತಿಯ ಮೂಲಕ ರಾಜಕೀಯ ಮತ್ತು ಆಡಳಿತ ವಲಯಗಳಲ್ಲಿ ಹೆಚ್ಚು ಹೆಚ್ಚು ದಲಿತರು ಸೇರಿಸಿದರೆ ಇಡೀ ವ್ಯವಸ್ಥೆಯನ್ನು ದಲಿತರಿಗೆ ಪೂರಕವಾಗಿ ಅಥವಾ ತಳಸಮುದಾಯದ ಆಶೋತ್ತರಗಲಿಗೆ ಪೂರಕವಾಗಿ ಹಿಗ್ಗಿಸಬಹುದು ಎಂಬ ದೇಶದ ದಲಿತ ರಾಜಕಾರಣದ ಬಹಳ ಪ್ರಮುಖವಾದ ಒಂದು ಮಿಥ್ಯೆಯನ್ನು ಒಡೆದು ಹಾಕಿದೆ ಎನ್ನಬಹುದು ಹೀಗೆ ಅಂದುಕೊಂಡರೆ ನಮಗೆ ಎದುರಾಗುವ ಮತ್ತೊಂದು ಪ್ರಮುಖವಾದ ಪ್ರಶ್ನೆ ಹಾಗಾದರೆ ಮುಂದಿನ ದಲಿತ ಹೋರಾಟದ ಮಾದರಿ ಹೇಗಿರಬೇಕೆಂಬುದು? ಅದಕ್ಕೆ ಕೆಳಗಿನ ಕೆಲವು ಬದಲಾವಣಿಗಳನ್ನು ದಲಿತ ಹೋರಾಟ ತನ್ನ ಮುಂದಿನ ಚಿಂತನೆ ಮತ್ತು ಹೋರಾಟದ ಮಾದರಿಗಳಲ್ಲಿ ಅಳವಡಿಸಿಕೊಳ್ಳಬೇಕಿದೆ. 1. ಚುನಾವಣಾ ರಾಜಕಾರಣದ ಭಾಗವಾಗಿ ದಲಿತರನ್ನು ರಾಜಕೀಯ ನೆಲೆಯಿಂದ ಗುಂಪುಗೂಡಿಸುವ ಅದಕ್ಕೆ ಪೂರಕವಾಗಿ ಕೆಲವು ಸಮಾಜಿಕ ಯೋಜನೆಗಳನ್ನು ಹಾಕಿಕೊಳ್ಳುವ ನಯವಂಚಕ ರಾಜಕೀಯ ಪಕ್ಷಗಳ ವಿರುದ್ಧವಾಗಿ ದಲಿತ ಚಳುವಳಿ ಧ್ವನಿಯೆತ್ತಬೇಕು 2. ರಾಜಕಿಯ ಅಧಿಕಾರಕ್ಕೆ ಬದಲಾಗಿ ದಲಿತರ ವಾಸ್ತವ ಬದುಕನ್ನು ಪ್ರತಿನಿಧಿಸುವ ಸಾಮಾಜಿಕ ಸಂಚಲನದ ಕಡೆ ಹೆಚ್ಚು ಹೆಚ್ಚು ಗಮನ ಹರಿಸಬೇಕು 3. ಈ ದೇಶದ ತಳಸಮುದಾಯವನ್ನು ಅವರ ಬದುಕಿನ ನೆಲೆಯಲ್ಲಿಯೇ ಗುರುತಿಸುವ ಅದಕ್ಕೆ ಪೂರಕವಾದ ಸಮಾಜಿಕ ಮತ್ತು ರಾಜಕೀಯ ಸಂಸ್ಥೆಗಳನ್ನು ಕಟ್ಟುವ ಕುರಿತ ಸಂಶೋಧನೆಗಳನ್ನು ಹೆಚ್ಚು ಹೆಚ್ಚು ಪ್ರೂತ್ಸಾಹಿಸಬೇಕು 4. ಒಟ್ಟಾರೆ ಪ್ರಚಲಿತ ರಾಜಕೀಯ ಮತ್ತು ಸಮಾಜಿಕ ಸಂಸ್ಥೆಗಳ ನೆಲೆಯಲ್ಲಿ ದಲಿತರನ್ನು ಸೇರಿಸುವ/ವಿವರಿಸುವ ಕುರಿತು ಮಾತನಾಡದೇ ನಿಜವಾದ ದಲಿತರ ಸಮಾಜಿಕ ಬದುಕನ್ನು ಪ್ರತಿನಿಧಿಸುವ ರಾಜಕೀಯ ಸಂಸ್ಥೆಗಳನ್ನು ಹುಟ್ಟುಹಾಕಬೇಕು ಮತ್ತು ಸಮಾಜಿಕ ನೀತಿಗಳನ್ನು ರೂಪಿಸಬೇಕು. 5. ಕೋನೆಯದಾಗಿ ಉತ್ತರ ಪ್ರದೇಶದ ಕಳೆದ 2 ಚುನಾವಣಾ ಪಲಿತಾಂಶವನ್ನು ಮಾದರಿಯಾಟ್ಟುಕೊಂಡು ದಲಿತ ಚಳುವಳಿಯನ್ನು ರಾಜಕೀಯ ಪ್ರಾತಿನಿಧಿಕರಣವನ್ನು ಹೊರಗಿಟ್ಟು ಸಮಾಜಿಕ ನೆಲೆಯಿಂದ ಮರು ನೀರೂಪಿಸುವ ಕೆಲಸಕ್ಕೆ ದಲಿತ ಪರ ಚಿಂತನಾ ವರ್ಗ ಪ್ರಯತ್ನಿಸಬೇಕು.  ]]>

‍ಲೇಖಕರು G

April 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This