ಜುಗಾರಿ ಕ್ರಾಸ್ : 'ವಿನಮ್ರವಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ..'

– ವಿಜಯಕುಮಾರ ನರಗುಂದ ಒಂದು ಚರ್ಚೆಯನ್ನು ಯಾವುದೇ ತಾರ್ಕಿಕ ಅಂತ್ಯ ಕಾಣೀಸದೆ ಎಷ್ಟು ಶತಮಾನಗಳವರೆಗೆಯಾದರು ಎಳೆದುಕೊಂಡು ಹೋಗಬಹುದು. ಏಕೆಂದರೆ ಚರ್ಚೆ ದಿನಕಳೆದಂತೆ ವಾದಕ್ಕೆ ತಿರುಗುತ್ತೆ. ಅದರ ಜೊತೆಗೆ ಒಣ ಅಹಂಗಳು ಜನ್ಮ ತಾಳುತ್ತವೆ. ಇದಮಿತ್ಥಂ ಎಂದು ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತವನನ್ನು ಜಪ್ಪಯ್ಯ ಅಂದರು ಮನವೊಲಿಸಲು ಸಾಧ್ಯವಿಲ್ಲ. ಹೀಗಾಗಿಯೇ ಇಂದು ನಮ್ಮಲ್ಲಿ ಹಲವು ಮಹತ್ವದ ನಿಲುವುಗಳು ಯಾವ ಪರಿಹಾರ ಕಾಣದೆ ಪ್ರಶ್ನಾರ್ಥಕವಾಗಿ ಉಳಿದು ಹೋಗಿವೆ. ಅವುಗಳ ನಡುವೆ ಡಬ್ಬಿಂಗ್ ವಾದ ಕೂಡಾ ಒಂದು. ಮೊದಲೆ ತಿಳಿಸಿ ಬಿಡುತ್ತೇನೆ ಈ ನೆಲದ ಸಂಸ್ಕೃತಿ ಮತ್ತು ಭಾಷೆಗೆ ಹಾನಿಯಾಗದಂತೆ ಡಬ್ಬಿಂಗ್ ಮಾಡುವುದು ಯಾವುದೇ ಅಪರಾಧವಲ್ಲ ಎಂಬುದು ನನ್ನ ವೈಯಕ್ತಿಕ ಅಭಿಮತ. ಈ ನಿಟ್ಟಿನಲ್ಲಿ ನಾನು ಕೂಡಾ ಡಬ್ಬಿಂಗ್ ಪರವಾಗಿಯೇ ಇದ್ದೇನೆ. ಅದಕ್ಕೆ ಯಾರದೋ ಏಜೆಂಟ್ ಎಂಬ ಹಣೆಪಟ್ಟಿ ಹಚ್ಚಿದರು ಚಿಂತೆಯಿಲ್ಲ. ಇನ್ನು ಅವಧಿಯಲ್ಲಿ ಸತತವಾಗಿ ಈ ಚರ್ಚೆಯನ್ನು ಗಮನಿಸುತ್ತಾ ಬಂದಿದ್ದೇನೆ. ದಿನೇಶ್ ಮತ್ತು ಹರ್ಷ ಅವರು ಮುಂದಿಟ್ಟ ವಾದದಲ್ಲಿ ನಿಚ್ಚಳವಾಗಿ ಯಾವುದು ಪೂರ್ವಾಗ್ರಹಗಳಿರಲಿಲ್ಲ ಮತ್ತು ವಿತ್ತಂಡವಾದದ ಘಮಲು ಕಾಣಿಸುವುದಿಲ್ಲ. ಹೀಗಿರುವಾಗ ಸುರೇಶ್ ಸರ್ ಅವರು ವಾದವನ್ನು ಆ ನಿಟ್ಟಿನಲ್ಲಿ ಸಮರ್ಥಿಸಿ ಕೊಳ್ಳದೆ ತಮ್ಮದೆ ನೆಲೆಗಟ್ಟಿನಲ್ಲಿ ಮಂಥಿಸಿದ್ದು ಏಕ ಪಕ್ಷೀಯವೆಂದೆನಿಸುವದರಲ್ಲಿ ಯಾವ ಸಂಶಯವಿಲ್ಲ. ಇನ್ನೂ ಚರ್ಚೆಯೊಳಗೆ ನುಸುಳೆನು ಎನ್ನುತ್ತಾ ನುಸುಳಿದ ಸೀತಾರಾಂ ಸರ್ ಕೂಡಾ ಹೇಳಿದರು ಹೇಳದಂತೆ ಇರುವ ಹಾಗೆ ಕೊನೆಗೆ ಅಮೀರ್ ನಡೆಸಿ ಕೊಡುವ ಸತ್ಯ ಮೇವ ಜಯತೆಯ ಬಡ್ಜೆಟ್ ಕುರಿತು ಪ್ರಸ್ತಾಪಿಸಿದ್ದಾರೆ. ಒಂದು ವಿಷಯ ಇಲ್ಲಿ ಗಮನಿಸ ಬೇಕು ಈ ಇಬ್ಬರು ಒಂದೊಂದು ವಾಹಿನಿಯಲ್ಲಿ ಧಾರಾವಾಹಿಗಳನ್ನು ಪ್ರಸಾರ ಮಾಡುವ ಅತೀ ಪ್ರಭಾವಿ ನಿರ್ದೇಶಕರುಗಳು (ನಿರ್ಮಾಪಕರು ಕೂಡಾ ಇವರೇ). ಈ ಧಾರಾವಾಹಿ ಪ್ರಪಂಚದಲ್ಲಿ ಸುಮಾರು ಆರು ವರ್ಷ ಮಿಂದೆದ್ದು ಬಂದ ನನಗೆ ಇದರ ಆಳ ಅಗಲದ ಸಂಪೂರ್ಣ ಅರಿವು ಇದೆ. ಹೀಗಾಗಿ ನಾನು ಈ ವಿಷಯದಲ್ಲಿ ಕೂದಲು ಬಿಡಿಸುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಆದರೆ ಸೀತಾರಾಂ ಸರ್ ಮತ್ತು ಸುರೇಶ್ ಸರ್, ಅಮೀರ್ ನ SJM ಬಗ್ಗೆ ಎತ್ತಿದ ಅಪಸ್ವರ ನಿಜಕ್ಕು ನನ್ನಲ್ಲಿ ಅನೇಕ ಅಚ್ಚರಿಗಳನ್ನು ಉಂಟು ಮಾಡಿದೆ. ಮೊದಲು ಸುರೇಶ್ ಸರ್ ಪತ್ರಿಕೆಗೆ ಬರೆದ ಲೇಖನ ಓದಿದ ದಿನ ನನಗೆ ನಿಜಕ್ಕು ಶಾಕ್ ಆಗಿದ್ದು, ಸುರೇಶ್ ಸರ್ ಏಕೆ ಈ ರೀತಿ ವ್ಯರ್ಥ ಪ್ರಲಾಪಕ್ಕೆ ಕೈ ಹಾಕಿದ್ದಾರೆ ಎಂಬುದು. ಯಾಕೆಂದರೆ ಇದೇ ಟೆಲಿವಿಷನ್ ಜಗತ್ತಿನಲ್ಲಿ ಅಪಾರ ಅನುಭವವುಳ್ಳ ಅವರಿಗೆ ಒಂದು ಕಾರ್ಯಕ್ರಮದ ಹಿಂದಿನ ವ್ಯಾಪಾರಿ ಮನೋಭಾವದ ವಿವಿಧ ಸ್ಥರಗಳ ಸಂಪೂರ್ಣ ಅರಿವು ಇಲ್ಲದಿಲ್ಲ. ಹೀಗಾಗಿ ಮೊದಲು ಈ “ಸೋಗಲಾಡಿ” ಎಂಬ ಪದ ಬಳಕೆಯ ಅನಿವಾರ್ಯತೆ ಬೇಕಿತ್ತೆ ಎಂಬುದು. ಅವರೇ ನಿರ್ಮಿಸಿ, ನಿರ್ದೇಶಿಸಿದ ತಕಧಿಮಿತಾ ಮತ್ತು ನಾಕುತಂತಿ ಧಾರಾವಾಹಿಗಳ ಅನೇಕ ಸಂಚಿಕೆಗಳನ್ನು ನಾನು ವೀಕ್ಷಿಸಿದ್ದೇನೆ. ಅವುಗಳ ಮೂಲಕ ಹಲವು ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸುವ ಸಾಧ್ಯತೆಯನ್ನು ಅವರು ನಿರೂಪಿಸಿದ್ದಾರೆ. ಹೀಗಿರುವಾಗ ಅಮೀರ್ ಮಾಡಿದ್ದು ಸೋಗಲಾಡಿತನ ಎಂದು ಬಣ್ಣಿಸುವುದಾರೆ, ನಿಮ್ಮ ಕಾಳಜಿಯಲ್ಲು ಅದೇ ಅನುಮಾನ ಕಾಡಬಹುದಲ್ಲವೇ? ಸರ್ ನಿಮ್ಮಿಬ್ಬರ ಸಾಮಾಜಿಕ ಕಾಳಜಿ ಮತ್ತು ಈ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ನಿಮಗಿರುವ ಅಪಾರ ಅಧ್ಯಯನದ ಕುರಿತು ಮಾತಾನಾಡುವ ದಾಷ್ಟ್ಯ ಖಂಡಿತ ನನಗಿಲ್ಲ. ಏಕೆಂದರೆ ನಿಮ್ಮ ಧಾರಾವಾಹಿಗಳ ಮೂಲಕವೇ ನಾನು ನನ್ನ ಜ್ಞಾನ ಸಂಪತ್ತನ್ನು ವೃದ್ಧಿಸಿ ಕೊಂಡಿದ್ದು. ಹೀಗಾಗಿ ವಿನಮ್ರವಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ. ಪ್ರಸ್ತುತ ಎಲ್ಲಾ ವಾಹಿನಿಗಳ ಏಕಮೇವ ಗುರಿ ಏನಾದರು ಮಾಡಿ ಟಿಆರ್ ಪಿ ತರುವ ಕಾರ್ಯಕ್ರಮ ರೂಪಿಸಿ ಎಂಬುದು. ಸುರೇಶ್ ಸರ್ ಗೆ ಇದರ ಪ್ರಾಮುಖ್ಯತೆ ನಾನು ವಿವರಿಸ ಬೇಕಿಲ್ಲ. ಏಕೆಂದರೆ 3.30 ಮತ್ತು 4.00 ಗಂಟೆಯಂತಹ very low viewership ಇರುವಂತಹ Time Band ನಲ್ಲಿ ಅವರು ಸುಮಾರು 8 ಹಾಗೂ 9ಕ್ಕಿಂತ ಹೆಚ್ಚು (Total Market 4+) ಟಿಆರ್ ಪಿ ಸಾಧಿಸಿದ್ದಾರೆ. ಕೇವಲ 3, 4 ಬಂದರೆ ಹೆಚ್ಚೆನ್ನುವ ಇಂತಹ ಸಮಯದಲ್ಲಿ ಅದರ ಮೂರ್ನಾಕು ಪಟ್ಟು ಅಧಿಕ ಸಂಖ್ಯೆಗಳನ್ನು(Weekdays) ಸಾಧಿಸಿದ್ದು ಅದು ಕೇವಲ ಸುರೇಶ್ ಸರ್ ಮಾತ್ರ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಅಂತಹವರಿಗೆ ಒಂದು ಕಾರ್ಯಕ್ರಮವನ್ನು ಹೇಗೆ ಮಾರ್ಕೆಟ್ ಮಾಡಬೇಕಾಗುತ್ತದೆ ಎಂಬುದನ್ನು ವಿವರಿಸುವುದು ಮೂರ್ಖತನದ ಕೆಲಸ. ಹೀಗಿರುವಾಗ ಅಮೀರ್ ಮಾಡಿದ್ದು ಕೂಡಾ ಅದನ್ನೆ ಅಲ್ಲವೇ! ಆದರೆ ಈ ನೆಲದ ಜ್ವಲಂತ ಸಮಸ್ಯೆಗಳ ಗಂಭೀರತೆಯನ್ನು ಪರಿಚಯಿಸುವ ಧೈರ್ಯವನ್ನು ಎಲ್ಲಿಯೂ ಕೃತಕವಾಗದಂತೆ ರೂಪಿಸಿದ ಹೆಗ್ಗಳಿಕೆಯನ್ನು ನಿಮ್ಮಂತಹ ಸಹೃದಯಿಗಳು ಸ್ವಾಗತಿಸದೆ, ಅದನ್ನು ಕನ್ನಡದಲ್ಲಿ ಬಂದ ಬೀದಿ ಜಗಳವನ್ನು ಮೀರಿಸುವ ಕಾರ್ಯಕ್ರಮದ ಜೊತೆ ಹೋಲಿಸುವ ಅನಿವಾರ್ಯತೆ ನಿಜಕ್ಕೂ ನನಗೆ ಅರ್ಥವಾಗಲಿಲ್ಲ. ಒಂದು ಹೆಂಗಸು ತನಗೆ ಗಂಡ ನಾಲ್ಕೈದು ಬಾರಿ ಗರ್ಭಪಾತ ಮಾಡಿಸಿದ್ದಾನೆ ಎಂದರೆ ನಮ್ಮ, ನಿಮ್ಮಂತಹವರ ಕಣ್ಣು ತೇವವಾಗುವುದು ಸಹಜವಲ್ಲವೇ. ನೀವು ಅದನ್ನು ನಾಟಕೀಯವೆನ್ನುವುದಾದರೆ ನಾವೆಲ್ಲ ಸಹಜ ಸ್ಪಂದನೆಯನ್ನೆ ಕಳೆದು ಕೊಂಡಿದ್ದೇವೆ ಎಂದೆನಿಸುವುದಲ್ಲವೇ? ಇನ್ನು ನೀವು ಬ್ರ್ಯಾಂಡರ್ ಬಗ್ಗೆ ಮಾತನಾಡಿದ್ದೀರಿ, ಅಮೀರ್ ನ ಕೊಕೊಕೋಲಾ, ಟೈಟಾನ್ ವಾಚ್ ಜಾಹೀರಾತಿಗೂ ಈ ಕಾರ್ಯಕ್ರಮಕ್ಕು ಥಳಕೂ ಹಾಕಿದ್ದೀರಿ, ಕ್ಷಮೆ ಇರಲಿ ನಿಮ್ಮ “ಪುಟ್ಟಕ್ಕನ ಹೈವೇ” ಬಿಡುಗಡೆಗೊಂಡಿದ್ದು, ಈ ದೇಶಕ್ಕೆ ಮಾಲ್ ಸಂಸ್ಕೃತಿಯ ಪರಿಚಯದೊಂದಿಗೆ ಉದಯಿಸಿದ ಪಿವಿಆರ್ ಮತ್ತು ಐನಾಕ್ಸನಂತಹ ಸಿನಿಮಾ ಮಂದಿರಗಳಲ್ಲಿ ಅಲ್ಲವೇ! ನೀವು ಕೂಡಾ ಅಪಾರ ಕಾಳಜಿಯೊಂದಿಗೆ ನಿರ್ಮಿಸಿದ ಚಿತ್ರವನ್ನು ಸಮಾಜಕ್ಕೆ ಮುಟ್ಟಿಸಲು ಆಯ್ದುಕೊಂಡ ಮಾರ್ಗ ಇದು ಅಷ್ಟೇ! ಅದರಲ್ಲಿ ಸಿನಿಕತನ ಹುಡುಕುವುದು ನ್ಯಾಯಸಮ್ಮತವಲ್ಲ ಅಲ್ಲವೇ? ಹಾಗೆಯೇ ನೀವು ನಿರ್ಮಿಸುವ, ನಿರ್ದೇಶಿಸುವ ಟಿವಿ ಕಾರ್ಯಕ್ರಮಗಳಿಗೆ ಜಾಹೀರಾತನ್ನು ನಿಗದಿ ಪಡಿಸುವುದು ಚಾನೆಲ್ ಗೆ ಬಿಟ್ಟ ವಿಷಯ ಅದು ಅದರ ವ್ಯಾಪಾರಿ ತಂತ್ರವನ್ನು ಅವಲಂಭಿಸಿರುತ್ತದೆ. ಅದಕ್ಕೆ ಅಮೀರ್ ಹೇಗೆ ಜವಾಬ್ದಾರಿಯುತನಾಗುತ್ತಾನೆ. ಇನ್ನು ಅವನು ಸತ್ಯಸಂಧನಂತೆ ಎಲ್ಲು ಫೋಸು ಕೊಟ್ಟಿಲ್ಲ. ಹೊಟ್ಟೆ ಪಾಡಿಗೆ ಮಾಡುವ ಅನೇಕ ನ್ಯಾಯ ಸಮ್ಮತ ಹಾದಿಯಲ್ಲಿಯೇ ಜಾಹೀರಾತು ಆಯ್ದುಕೊಂಡಿದ್ದಾನೆ. ಇದರಲ್ಲಿ ಅದ್ಯಾವ ಅಪರಾಧ ಅಡಗಿದೆ. ಅಮೀರ್ ತನ್ನ ಇತ್ತೀಚಿನ ಹಲವು ಚಿತ್ರಗಳ ಮೂಲಕ ಸಾಮಾಜಿಕ ಸ್ಪಂದನೆ ಹಾಗೂ ಜವಾಬ್ದಾರಿ ತನಗೂ ಇದೆ ಎಂಬುದನ್ನು ಸ್ಪಷ್ಟವಾಗಿ ತೆರೆದಿಟ್ಟ ಏಕೈಕ ನಟ. ಹೀಗಿರುವಾಗ ಅಮೀರ್ ನ ನೈತಿಕತೆಯನ್ನು ಅದ್ಯಾಕಾಗಿ ಪ್ರಶ್ನಿಸುವುದು ಅರ್ಥವಾಗುತ್ತಿಲ್ಲ. ಸೀತಾರಾಂ ಸರ್ ಬಡ್ಜೆಟ್ ವಿಷಯಕ್ಕೆ ಈಗಾಗಲೇ ಒಬ್ಬರು ಕಾಮೆಂಟ್ ಬರೆದಿದ್ದ ನೆನಪು.ಅದಕ್ಕೆ ಅದರ ಚರ್ಚೆ ಅಗತ್ಯವೆನಿಸುವದಿಲ್ಲ. ಕೊನೆಯ ಮಾತು ನನ್ನ ಅಲ್ಪ ಬುದ್ಧಿಗೆ ಹೊಳೆದಂತೆ ಸುರೇಶ್ ಸರ್ ಡಬ್ಬಿಂಗ್ ವಿರೋಧಿಸುವ ಧಾವಂತದಲ್ಲಿ ಅಮೀರ್ ನ SJM ನಲ್ಲಿ ಕೂದಲು ಬಿಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದೆನಿಸುತ್ತದೆ. ಏಕೆಂದರೆ ಡಬ್ಬಿಂಗ್ ಟೆಲಿವಿಷನ್ ಗೆ ಕಾಲಿಟ್ಟರೆ ಇಲ್ಲಿನ ಹಲವು ಪ್ರತಿಭಾವಂತ ನಿರ್ದೇಶಕರು ಅಸ್ತಿತ್ವದ ಬಗ್ಗೆ ಯೋಚಿಸ ಬೇಕಾಗುತ್ತದೆ. ಏಕೆಂದರೆ ಚಲನಚತ್ರ ನಿರ್ಮಿಸಲು ಯಾರ ಮುಲಾಜಿಗು ಕಾಯಬೇಕಿಲ್ಲ, ಆದರೆ ಧಾರಾವಾಹಿಗಳನ್ನು ನಿರ್ಮಿಸಬೇಕೆಂದರೆ ಅದಕ್ಕೆ ಚಾನೆಲ್ ನವರ ಮರ್ಜಿ ಕಾಯಲೇ ಬೇಕು. ಏಕೆಂದರೆ ಈಗ ಕನ್ನಡದ ಎಲ್ಲಾ ಚಾನೆಲ್ (ಕಸ್ತೂರಿ ಹೊರತು ಪಡಿಸಿ)ಪರ ಭಾಷೆಯವರ ಸ್ವತ್ತು ಎಂಬುದು ಇಲ್ಲಿ ಗಮನಾರ್ಹ.  ]]>

‍ಲೇಖಕರು G

June 3, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This