ಜೆ ಪಿ ಬಸವರಾಜು ಕಾಲ೦ : ಹೆಗ್ಗೋಡಿನಲ್ಲಿ ಚರಕ ಎಂಬ ರೂಪಕ

ಹೆಗ್ಗೋಡಿನಲ್ಲಿ ಚರಕ ಎಂಬ ರೂಪಕ

– ಜೆ ಪಿ ಬಸವರಾಜು

ಕೃಪೆ : ವಿಜಯ ಕರ್ನಾಟಕ ಲೋಹಿಯಾವಾದಿಯಾಗಿದ್ದ ಸುಬ್ಬಣ್ಣ ಅವರು ಹೆಗ್ಗೋಡು ಎನ್ನುವ ಪುಟ್ಟ ಊರಿಗೆ ಹೊಸ ಸಾಂಸ್ಕೃತಿಕ ಸ್ಪರ್ಶವನ್ನು ನೀಡಿದರು. ಇಲ್ಲಿ ನಾಟಕ, ಸಿನಿಮಾಗಳು ಹೊಸ ಅರ್ಥವನ್ನು ಪಡೆದುಕೊಂಡವು. ಕಾಯರ್ಾಗಾರಗಳು, ಚಚರ್ೆ, ಸಂವಾದಗಳು ಹೊಸ ಹುರುಪು, ಚೈತನ್ಯವನ್ನು ಪಡೆದುಕೊಂಡವು. ರಾಷ್ಟ್ರದ ಬೇರೆ ಬೇರೆ ಭಾಗಗಳಿಂದ ಸಾಹಿತ್ಯ ಮತ್ತು ಸಂಸ್ಕೃತಿಯ ಕುತೂಹಲಿಗಳು, ಆಸಕ್ತಿಯಿಂದ ಮಲೆನಾಡಿನ ಈ ಪುಟ್ಟ ಊರನ್ನು ಹುಡುಕಿಕೊಂಡು ಬರಲಾರಂಭಿಸಿದರು. ಹೆಗ್ಗೋಡು ಎಂಬುದು ಮಲೆನಾಡಿನ ಆಚೆಗೂ ಚಾಚಿ ಹೊಸ ಬೆಳಕಿನಲ್ಲಿ ಕಣ್ಣು ಕುಕ್ಕತೊಡಗಿತು. ಅವರು ಹುಟ್ಟು ಹಾಕಿದ ‘ಅಕ್ಷರ ಪ್ರಕಾಶನ’, ಕವಿ ಎಂ.ಗೋಪಾಲಕೃಷ್ಣ ಅಡಿಗ ಅವರ ಸಂಪಾದಕತ್ವದಲ್ಲಿ ಸುಬ್ಬಣ್ಣ ಸಮರ್ಥವಾಗಿ ನಡೆಸಿದ ‘ಸಾಕ್ಷಿ’ ಎನ್ನುವ ತ್ರೈಮಾಸಿಕ ಕನ್ನಡದಲ್ಲಿ ನವ್ಯಪ್ರಜ್ಞೆಯೊಂದು ಬಲಿಷ್ಠವಾಗಿ ಬೆಳೆಯಲು ಕಾರಣವಾಯಿತು. ಸುಬ್ಬಣ್ಣನವರ ನಿಧನಾನಂತರ ಅವರ ಮಗ ಕೆ.ವಿ.ಅಕ್ಷರ ಈ ಹೊಣೆಯನ್ನು ಹೊರಲು ಹೆಗಲು ಕೊಟ್ಟರು. ಬಹುದೊಡ್ಡ ಸಾಂಸ್ಕೃತಿಕ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಅಕ್ಷರ ತಮ್ಮ ಉತ್ಸಾಹ ಮತ್ತು ಸಾಮಥ್ರ್ಯಗಳನ್ನು ತೋರಿಸಿದರಾದರೂ, ಹೆಗ್ಗೋಡು ಮೊದಲಿನ ಕಳೆಯನ್ನು ಉಳಿಸಿಕೊಂಡಂತೆ ತೋರಲಿಲ್ಲ. ಇದಕ್ಕೆ ಕನ್ನಡ ಸಾಂಸ್ಕೃತಿಕ ಲೋಕದಲ್ಲಾದ ಪಲ್ಲಟಗಳು ಕಾರಣವಾಗಿರಬಹುದು. ಇಂಥ ಹೊರಳುವಿಕೆಯ ಕಾಲದಲ್ಲಿ ಹೆಗ್ಗೋಡನ್ನು ಅರಸಿ ಬಂದವರು ಮಾಕ್ಸರ್್ವಾದಿಯಾಗಿದ್ದ ಪ್ರಸನ್ನ. ರಂಗಭೂಮಿಯ ಸಮರ್ಥ ನಿದರ್ೇಶಕರಾಗಿ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿದ್ದ ಪ್ರಸನ್ನ, ದೆಹಲಿ, ಬೆಂಗಳೂರು, ಮೈಸೂರುಗಳಂಥ ನಗರಗಳಲ್ಲಿದ್ದು ರಂಗಭೂಮಿಗೆ ಉತ್ಸಾಹ ತಂದ್ದವರು. ಯಾವ ನಗರದಲ್ಲಿಯೂ ನೆಲೆ ನಿಲ್ಲಬಹುದಾಗಿದ್ದ ಪ್ರಸನ್ನ ಏಕಾಏಕಿ ಹೆಗ್ಗೋಡಿಗೆ ಕಾಲಿರಿಸಿದರು. ಇದು ಹಲವರಲ್ಲಿ ಸೋಜಿಗವನ್ನು ಹುಟ್ಟಿಸಿದ್ದ ನಿಜ. ಆದರೆ ಪ್ರಸನ್ನ ಬದಲಾಗತೊಡಗಿದ್ದರು. ಮಾಕ್ಸರ್್ವಾದ ಅವರಿಗೆ ತೃಪ್ತಿಯನ್ನು ತಂದುಕೊಟ್ಟಂತೆ ಕಾಣಿಸಲಿಲ್ಲ. ಗಾಂಧೀವಾದದತ್ತ ಪ್ರಸನ್ನ ನಿಧಾನಕ್ಕೆ ವಾಲುತ್ತಿರುವಂತೆಯೂ ಕಾಣುತ್ತಿತ್ತು. ಜಾಗತೀಕರಣದ ಅಬ್ಬರದಲ್ಲಿ ಭಾರತ ದಿಕ್ಕೆಟ್ಟು ತನ್ನ ನಡೆಯನ್ನು ರೂಪಿಸಿಕೊಳ್ಳುತ್ತಿದ್ದ ಹೊತ್ತಿನಲ್ಲಿ ಗಾಂಧೀಜಿಯವರ ಚಿಂತನೆಗಳು ಯಾರಿಗೂ ಬೇಕಾದಂತೆ ಕಾಣಲಿಲ್ಲ. ಯಾರಾದರೂ ಗಾಂಧೀತತ್ವಗಳ ಮಾತನಾಡಿದರೆ ಅಂಥವರು ಅಪ್ರಸ್ತುತ ಚಿಂತನೆಯೊಂದನ್ನು ಮುಂದಿಡುತ್ತಿದ್ದಾರೆ; ಎಂದೆನಿಸುವಂತಿತ್ತು. ಅಂಥ ಹೊತ್ತಿನಲ್ಲಿ ಪ್ರಸನ್ನ, ಗಾಂಧೀಚಿಂತನೆಗೆ ಮನಸೋತದ್ದು ಸೋಜಿಗದ ಬೆಳವಣಿಗೆಯೇ. ಬುದ್ಧ, ಮಾಕ್ಸರ್್, ಗಾಂಧೀ, ಲೋಹಿಯಾ, ಅಂಬೇಡ್ಕರ್ ಮೊದಲಾದ ಚಿಂತಕರನ್ನು ಅರೆದು ಕುಡಿದವರಂತೆ ಮಾತನಾಡುವ, ಅವರ ಸಿದ್ಧಾಂತಗಳನ್ನು ಸಮರ್ಥವಾಗಿ ಚಚರ್ಿಸುವ, ಚಿಂತಿಸುವ ಅಕೆಡಮಿಕ್ ವಲಯದ ಬುದ್ಧಿಜೀವಿಗಳು ನಮ್ಮಲ್ಲಿದ್ದಾರೆ. ಆದರೆ ಈ ತತ್ವಗಳ ಅನುಷ್ಠಾನದ ಪ್ರಶ್ನೆ ಬಂದಾಗ? ಪ್ರಸನ್ನ ಹೆಗ್ಗೋಡಿಗೆ ಬಂದದ್ದು ಇಂಥ ಚಿಂತನೆಗಳನ್ನು ಚಚರ್ಿಸುವುದಕ್ಕಲ್ಲ; ಗಾಂಧಿತತ್ವದ ಬೀಜಗಳನ್ನು ಈ ನೆಲದಲ್ಲಿ ಮತ್ತೆ ನೆಡುವುದಕ್ಕೆ. ಗಾಂಧೀ ಕನಸಿದ ಭಾರತ ಹಳ್ಳಿಗಳ ಭಾರತ; ಸ್ವಾವಲಂಬನೆಯ ಭಾರತ. ಗಾಂಧೀಜಿಯವರ ಚರಕ ಸ್ವಾವಲಂಬನೆಯ ಸಂಕೇತ; ಆತ್ಮವಿಶ್ವಾಸದ ರೂಪಕ. ಈ ಚರಕದ ಮೂಲಕವೇ ಸಾಮಾಜಿಕ, ಆಥರ್ಿಕ, ಸಾಂಸ್ಕೃತಿಕ ಬದಲಾವಣೆಗಳು ಸಾಧ್ಯ ಎಂದು ಗಾಂಧೀಜಿ ನಂಬಿದ್ದರು. ಇಂಥ ಗಾಂಧೀತತ್ವದಲ್ಲಿ ವಿಶ್ವಾಸ ಇಡುವುದು ಬೃಹತ್ ನಗರಗಳನ್ನು ಕಂಡುಬಂದಿದ್ದ ಪ್ರಸನ್ನ ಅವರಿಗೆ ಹೇಗೆ ಸಾಧ್ಯವಾಯಿತು? ಆ ಕಾಲ, ಆ ನಡೆ, ವೇಗ ಮುನ್ನಡೆಯ ಹಂಬಲದಲ್ಲಿ ಭಾರತ ಅಪ್ಪಿಕೊಂಡಿದ್ದ ಆಥರ್ಿಕ ನೀತಿ ನಿರೂಪಗಳು ಗಾಂಧೀಜಿಯನ್ನು ಮೂಲೆಗೆ ತಳ್ಳಿದ್ದವು. ಅಂಥ ಹೊತ್ತಿನಲ್ಲಿ ಪ್ರಸನ್ನ ಗಾಂಧೀತತ್ವಗಳನ್ನು ತುಂಬಿಕೊಂಡು ಹೆಗ್ಗೋಡಿಗೆ ಬಂದಿದ್ದರು. ಮೊದಲು ಅವರು ರೂಪಿಸಿದ ಕವಿ-ಕಾವ್ಯ ಟ್ರಸ್ಟ್, ಎಲ್ಲ ಸಾಂಸ್ಕೃತಿಕ ಸಂಘಟನೆಗಳಂತೆ ಸಾಹಿತ್ಯ, ಸಂಸ್ಕೃತಿ, ಸಿನಿಮಾ, ನಾಟಕ ಇತ್ಯಾದಿಗಳನ್ನು ಬೆನ್ನಟ್ಟಿ ಹೋಗುವ ಒಂದು ಸಂಸ್ಥೆಯೇನೋ ಎನ್ನುವ ಭಾವನೆಯನ್ನು ಹುಟ್ಟುಹಾಕಿತು. ಅದೇ ಹೊತ್ತಿನಲ್ಲಿ ಪ್ರಸನ್ನ, ಅನಂತಮೂತರ್ಿ ಅವರ ‘ರುಜುವಾತ’ನ್ನು ಬೆನ್ನಮೇಲೆ ಹೊತ್ತು ಓಡಾಡಿದರು. ಆದರೆ ಬಹುಬೇಗ ಪ್ರಸನ್ನ ಅವರಿಗೆ ಇದರ ಇತಿಮಿತಿಗಳು ಅರ್ಥವಾದವು. ಪ್ರಸನ್ನ ಕೂಡಲೇ ಚರಕವನ್ನು ಆರಂಭಿಸಿದರು. ಮುಂದೆ ‘ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ’ವನ್ನು ಆರಂಭಿಸಿದರು. ಇಲ್ಲಿಂದ ಮುಂದೆ ನಡೆದದ್ದೆಲ್ಲ ಗಾಂಧೀತತ್ವದಲ್ಲಿಯೇ. ಚರಕ ಇವತ್ತು ಎಲ್ಲಿಯೂ ನೋಡುವುದಕ್ಕೆ ಸಿಕ್ಕುವುದಿಲ್ಲ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಮತ್ತು ಸ್ವಾತಂತ್ರ್ಯಬಂದ ಆರಂಭದ ವರ್ಷಗಳಲ್ಲಿ ಚರಕ ಒಂದು ಪವಿತ್ರ ವಸ್ತು, ಒಂದು ಕ್ರಿಯಾಶಕ್ತಿ, ಒಂದು ತತ್ವ ಮತ್ತು ಒಂದು ನಂಬಿಕೆ. ಅದು ಸ್ವಾವಲಂಬನೆಯ ಮಾರ್ಗವೂ ಹೌದು. ಗ್ರಾಮೀಣ ಜನತೆಯ ಆತ್ಮವಿಶ್ವಾಸವೂ ಹೌದು. ಆದರೆ ಅದೆಲ್ಲವನ್ನು ಚರಕ ಬಹುಬೇಗ ಕಳೆದುಕೊಂಡು ಗಾಂಧಿ ದೂರವಾದಂಥ ಸನ್ನಿವೇಶವೊಂದು ಭಾರತದಲ್ಲಿ ನಿಮರ್ಾಣವಾಯಿತು. ಆದರೆ ಪ್ರಸನ್ನ ರೂಪಿಸಿದ ಚರಕ ಒಂದು ಹೊಸ ಭರವಸೆಯಾಗಿ ಕಾಣಿಸುತ್ತದೆ. ಎರಡು ಕೈಮಗ್ಗ ಮತ್ತು ಎರಡು ಹೊಲಿಗೆ ಯಂತ್ರದೊಂದಿಗೆ ಆರಂಭವಾದ ಚರಕ ಎನ್ನುವ ಗ್ರಾಮೋದ್ಯೋಗ ಘಟಕವು ಕೇವಲ ಹದಿನೈದು ವರ್ಷಗಳ ಅವಧಿಯಲ್ಲಿ ಎಷ್ಟು ದೊಡ್ಡದಾಗಿ ಬೆಳೆದಿದೆ ಎಂದರೆ, ಇವತ್ತು ಈ ಘಟಕದಲ್ಲಿ 300-400 ಮಂದಿ (ಬಹಪಾಲು ಮಹಿಳೆಯರು) ಉದ್ಯೋಗಿಗಳಾಗಿದ್ದಾರೆ. ಚರಕ ಅಷ್ಟು ಕುಟುಂಬಗಳ ಸ್ವಾವಲಂಬನೆಯ ಮಾರ್ಗವನ್ನು ತೆರೆದು ಹೊಸ ಬೆಳಕನ್ನು ಮೂಡಿಸಿದೆ. ನೂಲಿಗೆ ಬಣ್ಣಹಾಕುವುದು, ಬ್ಲಾಕ್ ಪ್ರಿಂಟಿಂಗ್, ಸ್ಕ್ರೀನ್ ಪ್ರಿಂಟಿಂಗ್, ಹೊಲಿಗೆ, ಕಸೂತಿ, ಮಗ್ಗ ತಯಾರಿಕೆ, ತರಬೇತಿ, ವಿನ್ಯಾಸ ಇವೆಲ್ಲ ತಂತ್ರಜ್ಞಾನವೂ ಚರಕದಲ್ಲಿದೆ. ಗಂಡಸರ, ಮಹಿಳೆಯರ ಉಡುಪುಗಳು, ಕೌದಿ, ಡಿಸೈನ್ ಫೈಲ್ ಮೊದಲಾದ 159ಕ್ಕೂ ಮಿಕ್ಕಿದ ವಿವಿಧ ಉತ್ಪನ್ನಗಳನ್ನು ಚರಕ ತಯಾರಿಸುತ್ತಿದೆ. ಚರಕದಲ್ಲಿ ಸಿದ್ಧವಾದ ಉಡುಪುಗಳನ್ನು, ವಸ್ತುಗಳನ್ನು ಮಾರಲು ಒಂದು ವ್ಯವಸ್ಥಿತವಾದ ಜಾಲವನ್ನು ರೂಪಿಸುವುದಕ್ಕಾಗಿ ಆರಂಭವಾದ ‘ದೇಸಿ’ ಟ್ರಸ್ಟ್ ರಾಜ್ಯದ ಅನೇಕ ಭಾಗಗಳಲ್ಲಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಿದೆ. ಹಲವಾರು ಗ್ರಾಮೀಣ ಕೈಗಾರಿಕೆಗಳ ಉತ್ಪನ್ನಗಳ ಮಾರಾಟಕ್ಕೂ ಇಲ್ಲಿ ಅವಕಾಶವಿದೆ. ಹೀಗಾಗಿ ಚರಕದಲ್ಲಿ ಸಿದ್ಧವಾದ ವಸ್ತುಗಳಿಗೆ ಮಾರಾಟದ ಸೌಕರ್ಯವನ್ನು ಒದಗಿಸಿರುವ ದೇಸಿ, ಗಾಂಧೀತತ್ವವನ್ನು ಬೆಂಬಲಿಸುವ ಎಲ್ಲರ ಕ್ರಿಯಾಕೇಂದ್ರವೂ ಆಗಿದೆ. ಈ ಮಾರಾಟ ವ್ಯವಸ್ಥೆಯ ಕಾರಣದಿಂದ ಚರಕದಲ್ಲಿ ದುಡಿಯುವ ಕುಟುಂಬಗಳಿಗೆ ಪ್ರಬಲ ಆತ್ಮವಿಶ್ವಾಸ ಮೂಡಿದೆ. ಇದು ಹಲವು ಕುಟುಂಬಗಳ ಆಥರ್ಿಕ ಬೆನ್ನೆಲುಬೂ ಹೌದು. ಇದೊಂದು ನಿರಂತರವಾದ, ಸಮರ್ಥವಾದ ವ್ಯವಸ್ಥೆಯಾಗಿರುವುದರಿಂದ ಚರಕ ಬೆಳೆಯುತ್ತ ಹೋಗುತ್ತಿದೆ. ಆ ಮೂಲಕ ದೇಸಿ ಚಳವಳಿಯೂ ಬೆಳೆಯುತ್ತಿದೆ. ಗಾಂಧಿಯೂ ಮತ್ತೆ ಈ ಮಣ್ಣಿನಲ್ಲಿ ಚಿಗುರುತ್ತಿರುವುದು ಕಾಣುತ್ತಿದೆ. ತರಬೇತಿ ಘಟಕ, ಚಿತ್ತಾರ ವಿಭಾಗ, ಬ್ಲಾಕ್ ಪ್ರಿಂಟಿಂಗ್, ನೈಸಗರ್ಿಕ ಬಣ್ಣಗಾರಿಕೆ ಇತ್ಯಾದಿಗಳಿಂದಾಗಿ ಚರಕ ಒಂದು ತಾತ್ಕಾಲಿಕ ಹುಮ್ಮಸ್ಸಾಗಿ ಉಳಿದಿಲ್ಲ. ಮಲೆನಾಡಿನ, ಅಸಹಾಯಕ ಮಹಿಳೆಯರ ಆತ್ಮವಿಶ್ವಾಸವಾಗಿ, ಅರ್ಥ ವ್ಯವಸ್ಥೆಯಾಗಿ, ಇಂಥ ಕುಟುಂಬಗಳ ಬೆನ್ನೆಲುಬಾಗಿ ಉಳಿದು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ, ಬೋನಸ್, ಭವಿಷ್ಯ ನಿಧಿ ಇವೇ ಮೊದಲಾದ ಸೌಲಭ್ಯ, ಊಟ ಉಪಚಾರ ಸೌಲಭ್ಯ, ಮಕ್ಕಳಿಗೆ ಕ್ರೆಷ್ ವ್ಯವಸ್ಥೆ ಎಲ್ಲವನ್ನೂ ಚರಕ ವ್ಯವಸ್ಥಿತವಾಗಿ, ಮಾನವೀಯ ನೆಲೆಯಲ್ಲಿ ರೂಪಿಸಿದೆ. ದುಡಿಯುವ ಗ್ರಾಮೀಣ ಜನತೆಯ, ವಿಶೇಷವಾಗಿ ಮಹಿಳೆಯರ ಆತ್ಮಗೌರವವನ್ನು ಕಾಪಾಡಿದೆ. ಗ್ರಾಮೀಣ ಜನರ ಸಾಂಸ್ಕೃತಿಕ ಅಭಿರುಚಿಗೆ ಇಂಬುಕೊಡುವ ಜನಪದ ಕಾವ್ಯಮಂಡಲ, ಚರಕ ಉತ್ಸವ, ದಾಸಿಮಯ್ಯ ಕೈಮಗ್ಗ ಪ್ರಶಸ್ತಿ ಚರಕಕ್ಕೆ ಇನ್ನೊಂದು ಆಯಾಮವನ್ನು ತಂದಿವೆ. ಪ್ರಸನ್ನ ಅವರ ಜೊತೆಗೆ, ಅವರು ಹೆಗ್ಗೋಡಿಗೆ ತಂದ ಗಾಂಧಿಯ ಜೊತೆಗೆ ಅನೇಕ ಯುವಕರು-ಎನ್.ಎಂ.ಕುಲಕಣರ್ಿ (ಬಿಜಾಪುರ), ಕೃತಿ, ಪದ್ಮಶ್ರೀ, ಪ್ರಭಾಕರ ಸಾಂಶಿ, ಸುಂದರ್ ಮೊದಲಾದವರು ಉತ್ಸಾಹದಿಂದ ಕೈಜೋಡಿಸಿರುವುದು ಚರಕದ ಶಕ್ತಿಯನ್ನು ಹೆಚ್ಚಿಸಿದೆ. ತನ್ನ ಪೂರ್ವ ಜನ್ಮದ ನೆನಪುಗಳ ಪಳೆಯುಳಿಕೆಯಂತೆ ಮಾಕ್ಸರ್್ವಾದಿ ಗಡ್ಡವನ್ನು ಮಾತ್ರ ಉಳಿಸಿಕೊಂಡಿರುವ ಪ್ರಸನ್ನ ಪೂತರ್ಿ ಪೂತರ್ಿ ‘ಗಾಂಧಿ’ಯೇ. ಗ್ರಾಮೀಣ ಯುವಜನ ಪ್ರಸನ್ನ ಅವರನ್ನು ಕುತೂಹಲದಿಂದ ನೋಡಬೇಕಾಗಿದೆ. —– ಜಿ.ಪಿ.ಬಸವರಾಜು 94800 57580    ]]>

‍ಲೇಖಕರು G

June 6, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

೧ ಪ್ರತಿಕ್ರಿಯೆ

  1. ಎಚ್. ಸುಂದರ ರಾವ್

    ಅಲ್ಲಿ ಜಮ್ ಅಂತ ಜಿಮ್ ನಡೆಯುತ್ತಿರುವಾಗ ಏನಿದು ನಿಮ್ಮ ಅಪಶ್ರುತಿ?! ಲಕ್ಷಗಟ್ಟಳೆ ಸಂಬಳ ನೀಡಲಿರುವ ಲಕ್ಷಗಟ್ಟಳೆ ಉದ್ಯೋಗಗಳು ಅಲ್ಲಿ ಸೃಷ್ಟಿಯಾಗಲಿರುವಾಗ ಎರಡು, ಮೂರು, ನಾಲ್ಕು ಸಾವಿರ ಸಂಬಳದ ಚರಕದ ಉದ್ಯೋಗ ಯಾವ ಲೆಕ್ಕ? ಅದೂ ಒಂದು ಉದ್ಯೋಗವೆ? ಯಬ್ಬೆ! ಗಾಂಧಿಯಂತೆ! ಪ್ರಸನ್ನ ಅಂತೆ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: