
ಸಾವಿತ್ರಿ ಹಟ್ಟಿ
ಶಾಲೆ ಮುಗಿಸಿ ಮನೆಗೆ ಬಂದೆ!
ದರುಶನಾರ್ಥಿಗಳು ಕಾಯ್ದು ಸಾಲಾಗಿ ನಿಂತಿದ್ರು!
ಕೆಲವರು ಕಿಟಕಿ ಸರಳುಗಳ ಮೇಲೆ!
ಕೆಲವರು ಅಡುಗೆಮನೆಯ ಒಲೆಗಟ್ಟೆಯ ಮೇಲೆ!
ಮತ್ತೆ ಕೆಲವರು ನನ್ನ ಓದಿನ ಮೇಜಿನ ಮೇಲೆ!
ಇನ್ನು ಕೆಲವರು ಅಡುಗೆ ಮನೆಯ ಕಾಲೊರೆಸುವ ಚಾಪೆಯ ಮೇಲೆ!
ನನ್ನ ದರುಶನವಾಗುತ್ತಲೇ ‘ಬನ್ರೊ, ಏಳ್ರೊ ಕರಿಮಾಯಿ ಬಂದಳು..’ ಅಂತ ಎದ್ದೇ ಬಿಟ್ರು!
‘ದರುಶನವಾಯಿತಲ್ಲ ಹೋಗಿ ಬನ್ರಿ* ಅಂತ ಎಲ್ಲಾ ಕಿಟಕಿ ಬಾಗಿಲುಗಳನ್ನು ತೆರೆದೆ!
ಎಲ್ಲರೂ ಓಡೋಡಿ ಹಾರಾಡಿ ಹೊರ ಹೋದರು ಹೂವು ಕಂಡೆಡೆಗೆ!
ಅಡುಗೆ ಮನೆಯ ಒಳಹೊರಟೆ!

ಹೋಗುವಷ್ಟರಷ್ಟರಲ್ಲಿ ಮಹಾಭಕ್ತರೊಬ್ಬರು ಕಾಲು ಮುಗಿ(ರಿ)ದರು!
ತಮ್ಮ ಚೂಪಾದ ಚಾಪಿನಿಂದ ಹಗುರಾಗಿ ನಮಿಸಿ ಮುತ್ತಿಕ್ಕಿದರು!
‘ಎಲಾ ಒಳ್ಳೆಯದಾಗಲಿ… ಹೋಗಿ ಬಾ… !’ ಅಂತ ಹಗುರಾಗಿ ಮೇಲೆಬ್ಬಿಸಿ ಬೀಳ್ಕೊಟ್ಟೆ!
ಉ(ಮು)ರಿದ ಪಾದ ಮರುಗುತ್ತಿದೆ ದೇವರು ನನಗೂ ಕಣ್ಣು ಕೊಡಲಿಲ್ಲೆಂದು!!
0 ಪ್ರತಿಕ್ರಿಯೆಗಳು