‘ಜೋಗಿ’ಗೆ ಬುದ್ದಿ ಹೇಳಿ

untitled

ಜೋಗಿ ದಿಢೀರನೆ ಬ್ಲಾಗ್ ಲೋಕಕ್ಕೆ ವಿದಾಯ ಹೇಳಿದ್ದಾರೆ. ಬ್ಲಾಗ್ ಲೋಕದಲ್ಲಿ ಬೆರಳೆಣಿಕೆಯ ಮಂದಿಯಿಂದ ನಡೆಯುತ್ತಿರುವ ಕೆಸರೆರಚಾಟ ಅವರನ್ನು ಸಾಕಷ್ಟು ನೋಯಿಸಿದೆ. ಬ್ಲಾಗ್ ಲೋಕದ ಕೆಟ್ಟ ಬೆಳವಣಿಗೆಗಳು ಬರೆಯಲೂ ಉತ್ಸಾಹ ನೀಡುತ್ತಿಲ್ಲ, ಓದಲೂ ಹಚ್ಚುತ್ತಿಲ್ಲ . ಹಾಗಾಗಿ ಬ್ಲಾಗ್ ಲೋಕದಿಂದ ಹಿಂದೆ ಸರಿಯುತ್ತಿದ್ದೇನೆ ಎಂದಿದ್ದಾರೆ.

ಜೋಗಿ ಬ್ಲಾಗ್ ಲೋಕಕ್ಕೆ ಕೊಟ್ಟ ಕಾಣಿಕೆ ದೊಡ್ಡದು. ಜೋಗಿ ಅವರ ಅಪಾರ ಓದುಗರನ್ನು ಬ್ಲಾಗ್ ಲೋಕಕ್ಕೂ ಎಳೆದು ತಂದರು. ಅಷ್ಟೇ ಅಲ್ಲ ಅವರನ್ನು ಬ್ಲಾಗಿಗರನ್ನಾಗಿ ಮಾಡಿದರು. ಎಷ್ಟೋ ಬ್ಲಾಗಿಗರ ಬಗ್ಗೆ ಬರೆದು ಹುರಿದುಂಬಿಸಿದರು. ‘ಕನ್ನಡಪ್ರಭ’ ಸಾಪ್ತಾಹಿಕ ದಲ್ಲಿ ‘ಬ್ಲಾಗ್ ಬುಟ್ಟಿ’ ಅಂಕಣ ಆರಂಭಿಸಿ ಎಲೆಮರೆಯಲ್ಲಿದ್ದ ಎಷ್ಟೊಂದು ಬ್ಲಾಗಿಗರಿಗೆ ಬೆಳಕು ನೀಡಿದರು. ಆದರೆ ಅಂತಹ ಜೋಗಿಯೇ ಈಗ ಬ್ಲಾಗ್ ಲೋಕದಿಂದ ಎದ್ದು ನಡೆದಿದ್ದಾರೆ. ಆದರೆ ಅವರು ಎದ್ದು ನಡೆದಿರುವುದು ಅಪಾರ ಬೇಸರದಿಂದ. ನೀವೇ ಹೇಳಿ. ಜೋಗಿ ಹಾಗೆ ಬ್ಲಾಗ್ ಲೋಕದಿಂದ ಎದ್ದು ಹೋಗಲು ನಾವು ಬಿಡಬೇಕೇ?

ಜೋಗಿ ಬ್ಲಾಗ್ ಬರಹ ನಿಲ್ಲಿಸದಂತೆ ‘ಅವಧಿ’ ಬೆಂಬತ್ತಿದೆ. ನೀವೂ ಒಂದು ಮೇಲ್ ಕಳಿಸಿ

ಅವರ ದುಗುಡದ ಪತ್ರ ಇಲ್ಲಿದೆ

shutterstock_9564091-707382

ನಮಸ್ಕಾರ, ಮತ್ತೆ ಭೇಟಿಯಾಗೋಣ

ಹಂದಿಜ್ವರ ದೇಹಕ್ಕಷ್ಟೇ ಅಲ್ಲ, ಮನಸ್ಸಿಗೂ ಬಂದಂತಿದೆ. ಬಹುತೇಕ ಮಂದಿ ಮಾಸ್ಕ್ ಹಾಕಿಕೊಂಡೇ ಬರೆಯುತ್ತಿದ್ದಾರೆ.ಮುಖವಾಡ ಹಾಕಿಕೊಂಡೇ ಕಾಮೆಂಟೂ ಮಾಡುತ್ತಾರೆ. ಹಾಗೆ ಮಾಡುವುದರಿಂದ ಬರೆಯುವವನು ಸ್ಪೂರ್ತಿಕೆಡಬಾರದು. ಧೈರ್ಯವಾಗಿ ಬರೆಯುತ್ತಲೇ ಇರಬೇಕು ಎನ್ನುವವರೂ ಇದ್ದಾರೆ.

ಹಾಗಿರುವುದು ಕಷ್ಟ. ಸುಮ್ಮನೆ ಬ್ಲಾಗುಗಳನ್ನು ನೋಡುತ್ತಾ ಹೋದಾಗ, ಅಲ್ಲಿರುವ ಕಾಮೆಂಟುಗಳನ್ನು ಓದಿದಾಗ, ಬರೆಯುವ ಕೈ ನಿಂತುಹೋಗುತ್ತದೆ. ಯಾವ ಬ್ಲಾಗುಗಳೂ ಇಲ್ಲದಿದ್ದಾಗಲೂ, ಯಾರೂ ಪ್ರಕಟಿಸುವವರು ಇಲ್ಲದಾಗಲೂ ನಾನು ದಿನಕ್ಕೊಂದಷ್ಟು ಪುಟ ಬರೆಯುತ್ತಿದ್ದೆ. ಕುಂಟಿನಿಯೂ ಬರೆಯುತ್ತಿದ್ದ. ನಾನೂ ಮತ್ತು ಗೆಳೆಯ ಕುಂಟಿನಿ ಅದನ್ನು ಪರಸ್ಪರ ಬದಲಾಯಿಸಿಕೊಂಡು ಓದುತ್ತಿದ್ದೆವು.

ಅಂಥದ್ದೇ ಸಂತೋಷವನ್ನು ಬ್ಲಾಗು ಕೂಡ ಕೊಡುತ್ತದೆ ಅಂದುಕೊಂಡಿದ್ದೆ.

ನಮಸ್ಕಾರ.

ಜೋಗಿ

‍ಲೇಖಕರು avadhi

August 25, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

21 ಪ್ರತಿಕ್ರಿಯೆಗಳು

 1. Dr. BR. Satyanarayana

  ನಮ್ಮ ಹಳ್ಳಿಯ ಕಡೆ ಒಂದು ಗಾದೆಯಿದೆ. ‘ನಾಯಿ ಸೇರುಗಲ್ಲಿನ (ತೂಕದ ಕಲ್ಲು) ಮೇಲೆ ಉಚ್ಚೆ ಹುಯ್ದರೆ ಅದರ ತೂಕ ಕಡಿಮೆಯಾಗುತ್ತದೆಯೇ?’ ಎಂದು. ಹಾಗೇ ಇನ್ನೊಂದು ‘ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೇ’ ಎಂಬುದು. ಯಾರೋ ಮುಖಹೇಡಿಗಳು ಬೊಗಳುತ್ತಾರೆ ಎಂದು ಪಲಾಯನವಾದಿಯಾಗುವುದು ಸರಿಯಲ್ಲ; ಎಂದಷ್ಟೇ ಹೇಳಬಹುದು.

  ಪ್ರತಿಕ್ರಿಯೆ
 2. cautiousmind

  ಕರ್ಮಣ್ಯೆ ವಾಧಿಕಾರಸ್ತೆ ಮಾ ಫಲೆಷು ಕದಾಚನ…..

  ಪ್ರತಿಕ್ರಿಯೆ
 3. ಎಚ್ ಆನಂದರಾಮ ಶಾಸ್ತ್ರೀ

  ಪ್ರಿಯ ಅಕ್ಷರಮಿತ್ರ ಜೋಗಿ,
  ನಿಮ್ಮ ಸಂತೋಷಕ್ಕೆ ಬರೆಯಿರಿ; ಹಾಗೆ ಬರೆದದ್ದನ್ನು ನಮ್ಮ ಸಂತೋಷಕ್ಕಾಗಿ ಬ್ಲಾಗ್‌ನಲ್ಲಿ ಪ್ರಕಟಿಸಿಬಿಡಿ, ಪ್ಲೀಸ್.
  ಮುಖವಾಡದೊಳಗಿನ ನಾಯಿ ಕಮೆಂಟ್ ಬೊಗಳುವುದರಿಂದ ಸರಸ್ವತೀದೇವಿಯ ಲೋಕ ಹಾಳಾಗುವುದಿಲ್ಲ.
  ನಿಮಗೆ ಪ್ರತ್ಯೇಕ ಮಿಂಚಂಚೆ ಕೂಡ ಕಳಿಸುತ್ತಿದ್ದೇನೆ.

  ಪ್ರತಿಕ್ರಿಯೆ
 4. ಎಚ್ ಆನಂದರಾಮ ಶಾಸ್ತ್ರೀ

  ಪ್ರಿಯ ಅಕ್ಷರಮಿತ್ರ ಜೋಗಿ,
  ನಿಮ್ಮ ಸಂತೋಷಕ್ಕೆ ಬರೆಯಿರಿ; ಹಾಗೆ ಬರೆದದ್ದನ್ನು ನಮ್ಮ ಸಂತೋಷಕ್ಕಾಗಿ ಬ್ಲಾಗ್‌ನಲ್ಲಿ ಪ್ರಕಟಿಸಿಬಿಡಿ, ಪ್ಲೀಸ್.
  ಮುಖವಾಡದೊಳಗಿನ ನಾಯಿ ಕಮೆಂಟ್ ಬೊಗಳುವುದರಿಂದ ಸರಸ್ವತೀದೇವಿಯ ಲೋಕ ಹಾಳಾಗುವುದಿಲ್ಲ.
  ನಿಮಗೆ ಪ್ರತ್ಯೇಕ ಮಿಂಚಂಚೆ ಕೂಡ ಕಳಿಸುತ್ತಿದ್ದೇನೆ.

  ಪ್ರತಿಕ್ರಿಯೆ
 5. ಎಚ್ ಆನಂದರಾಮ ಶಾಸ್ತ್ರೀ

  ಪ್ರಿಯ ಅಕ್ಷರಮಿತ್ರ ಜೋಗಿ,
  ನಿಮ್ಮ ಸಂತೋಷಕ್ಕೆ ಬರೆಯಿರಿ; ಹಾಗೆ ಬರೆದದ್ದನ್ನು ನಮ್ಮ ಸಂತೋಷಕ್ಕಾಗಿ ಬ್ಲಾಗ್‌ನಲ್ಲಿ ಪ್ರಕಟಿಸಿಬಿಡಿ, ಪ್ಲೀಸ್.
  ಮುಖವಾಡದೊಳಗಿನ ನಾಯಿ ಕಮೆಂಟ್ ಬೊಗಳುವುದರಿಂದ ಸರಸ್ವತೀದೇವಿಯ ಲೋಕ ಹಾಳಾಗುವುದಿಲ್ಲ.
  ನಿಮಗೆ ಪ್ರತ್ಯೇಕ ಮಿಂಚಂಚೆ ಕೂಡ ಕಳಿಸುತ್ತಿದ್ದೇನೆ.

  ಪ್ರತಿಕ್ರಿಯೆ
 6. ಎಚ್ ಆನಂದರಾಮ ಶಾಸ್ತ್ರೀ

  ಪ್ರಿಯ ಅಕ್ಷರಮಿತ್ರ ಜೋಗಿ,
  ನಿಮ್ಮ ಸಂತೋಷಕ್ಕೆ ಬರೆಯಿರಿ; ಹಾಗೆ ಬರೆದದ್ದನ್ನು ನಮ್ಮ ಸಂತೋಷಕ್ಕಾಗಿ ಬ್ಲಾಗ್‌ನಲ್ಲಿ ಪ್ರಕಟಿಸಿಬಿಡಿ, ಪ್ಲೀಸ್.
  ಮುಖವಾಡದೊಳಗಿನ ನಾಯಿ ಕಮೆಂಟ್ ಬೊಗಳುವುದರಿಂದ ಸರಸ್ವತೀದೇವಿಯ ಲೋಕ ಹಾಳಾಗುವುದಿಲ್ಲ.
  ನಿಮಗೆ ಪ್ರತ್ಯೇಕ ಮಿಂಚಂಚೆ ಕೂಡ ಕಳಿಸುತ್ತಿದ್ದೇನೆ.

  ಪ್ರತಿಕ್ರಿಯೆ
 7. ಶ್ರೀವತ್ಸ ಜೋಶಿ

  ಬ್ಲಾಗ್‌ಲೋಕದ “ಹೂಳಿ”ನಿಂದ ಶುರುವಾದ ವಿಷಯ ಈಗ “ಹಂದಿ”ವರೆಗೂ ತಲುಪಿದೆಯೆಂದೆನಿಸುತ್ತದೆ. ಎನಾನಿಮಸ್ ಕಾಮೆಂಟ್‍ಗಳು ‘ಹಂದಿಜ್ವರ’ ಇದ್ದಂತೆ ಎಂದು ಜೋಗಿ ಹೇಳಿದ್ದಾರೆ; ‘ಹಂದಿಯ ಜೊತೆ ಕೊಚ್ಚೆಯಲ್ಲಿ ಹೋರಾಟಕ್ಕಿಳಿದರೆ ಸಂತೋಷವಾಗುವುದು ಹಂದಿಗೇ ಹೊರತು ನಮಗಲ್ಲವಲ್ಲ…..’ ಎಂದು ಇನ್ನೊಬ್ಬ ಮಿತ್ರ ಸುಘೋಷ್ ಅವರೆಂದಿದ್ದಾರೆ. ಇದೇ ಸಂದರ್ಭಕ್ಕೆ ಸರಿಯಾಗಿ ಇನ್ನೊಂದು ಹಂದಿ ಕೋಟು (i mean quote) ನೆನಪಾಗುತ್ತಿದೆ. ಮಾರ್ಕ್ ಟ್ವೈನ್ ಹೇಳಿದ್ದೆನ್ನಲಾದ ಅದು ಹೀಗಿದೆ- “Never try to teach a pig to sing. It wastes your time and annoys the pig.”
  🙂

  ಪ್ರತಿಕ್ರಿಯೆ
  • shashi

   ಹಲೋ ಸರ್ ,
   ನೀವು ಬ್ಲಾಗ್ ಲೋಕಕ್ಕೆ ವಿದಾಯ ಹೇಳಿದ್ದಿರಿ ಅಂತ ಮೋಹನ್ ಅವರ ‘ಮೀಡಿಯಾ ಮಿರ್ಚಿ’ ಓದಿದಾಗ ಅಚ್ಚರಿಯಾಯ್ತು .ನಿಮ್ಮ ನಿರ್ಧಾರ ಸರಿಯಲ್ಲ ಅನ್ನೋದು ನನ್ನ ಭಾವನೆ. . ಮುಖವಾಡ ಹಾಕಿ ಕಾಮೆಂಟ್ ಬರೆಯುವವರನ್ನು ಹುರಿದುಂಬಿಸಿದಂತಾಗುದಿಲ್ಲವೇ ? ನೀವು ಇಷ್ಟಕ್ಕೆಲ್ಲ ಹೆದರಿ ಓಡಿದರೆ ಅರ್ಥವಿದೆಯಾ ,ಜಾಣ ಕುರುಡನ ತರ ಇರುವುದು ಉತ್ತಮ ಅಂತ ನನ್ನ ಅಭಿಪ್ರಾಯ ಏನಂತೀರಿ?

   ಶಶಿ

   ಪ್ರತಿಕ್ರಿಯೆ
 8. vaasu

  ಹಾಗಾದ್ರೆ… ಅಂತಿಮ ವಿಜಯ ಕೆಟ್ಟದ್ದಕ್ಕೆ ಅಂತಾಯ್ತು!

  ಪ್ರತಿಕ್ರಿಯೆ
 9. ಹಾಲ್ದೊಡ್ಡೇರಿ ಸುಧೀಂದ್ರ

  ಜೋಗಿ,

  ನೀವು ದಿನಕ್ಕೊಂದು ಪುಟ ಬ್ಲಾಗು ಬರೆಯುತ್ತಿದ್ದಾಗ ಅದು ನಿಮಗಷ್ಟೇ ಸಂತೋಷ ಕೊಡುತ್ತಿರಲಿಲ್ಲ, ನಮ್ಮಂಥ ಓದುಗರಿಗೂ ಮುದ ನೀಡುತ್ತಿತ್ತು.

  ಸುಮ್ಮನೆ ಬ್ಲಾಗುಗಳನ್ನು ಓದಿ, ಕಮೆಂಟುಗಳ ಬಗ್ಗೆ ಜಾಣ-ಕುರುಡು ಪ್ರದರ್ಶಿಸಿ.

  ಪ್ರತಿಕ್ರಿಯೆ
 10. sritri

  ‘ಜೋಗಿಯನ್ನು ಬ್ಲಾಗ್ ಲೋಕದಿಂದ ಹೇಗೆ ಓಡಿಸಿದೆ ನೋಡು” ಎಂಬ (ವಿಕೃತ)ಖುಷಿಯನ್ನು ‘ಅವರಿಗೇಕೆ’ ಕೊಡುತ್ತೀರಿ?

  ಪ್ರತಿಕ್ರಿಯೆ
 11. sunil

  ಜೋಗಿ ಸರ್,
  ಎಷ್ಟೋ ವರ್ಷದಿಂದ ಬರ್ದಿದೀರಿ, ಹೊಗಳಿಗೆ ಟೀಕೆ ಎರಡನ್ನೂ ನೋಡಿರ್ತೀರಿ, ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವವರು, ಎಷ್ಟೋ ಜನರಿಗೆ ಹಾಗಲ್ಲ ಹೀಗೆ ಅಂತ ಹೇಳೋರು, ತಾವೇ ಇಂಥ ನಿರ್ಧಾರ ತಗೊಂಡ್ರೆ ಹೇಗೆ?
  ದಯವಿಟ್ಟು ಇನ್ನೊಮ್ಮೆ ಯೋಚಿಸಿ.
  ಸುನಿಲ್.

  ಪ್ರತಿಕ್ರಿಯೆ
 12. mahendra kumar H M

  Sir, just i read this blog. i shocked. Dont stop. contunee your writup. Blog became Majoer part for every writer of Karnataka. u gave new shape to blog.

  i hope you contunue to writing in bolg.

  mahendra kumar H M
  Bellary – 94490 68333

  ಪ್ರತಿಕ್ರಿಯೆ
 13. Agnihothri

  ಖಂಡಿತ ಜೋಗಿ ಅವರ ನಿರ್ಧಾರ ಸ್ವಾಗತಾರ್ಹವಲ್ಲ. ನಾನಂತೂ ಸ್ವಾಗತಿಸುವುದಿಲ್ಲ. ಅಕ್ಕಪಕ್ಕ ಎಲ್ಲರೂ ಕೆಟ್ಟವರೆಂದು ಊಟ ಬಿಡಲು ಸಾದ್ಯವೇ? ಒಳ್ಳೆಯವರೂ ಇದ್ದಾರೆ ಎನ್ನುವುದನ್ನು ಜೋಗಿ ಒಪ್ಪಿಕೊಳ್ಳುತ್ತಾರೆ ಎಂದಾದರೆ ಅವರು ಈ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ.
  ನಾನು ‘ಅಗ್ನಿಪ್ರಪಂಚ’ ಆರಂಭಿಸಿ ಮೂರು ವರ್ಷಕ್ಕೆ ಬಂತು. ಅಂದಿನಿಂದ ಬ್ಲಾಗ್ ಬರಹಗಳನ್ನು ಓದುತ್ತಿದ್ದೇನೆ. ಹಾಗೇ ಜೋಗಿ ಅವರ ಸಾಕಸ್ಟು ಬರಹಗಳನ್ನು ಓದಿದ್ದೇನೆ. ಅವರ ಬರಹಕ್ಕೆ ಅಂಟಿಕೊಂಡವರಲ್ಲಿ ನಾನೂ ಒಬ್ಬ. ಹಾಗಂತ ಎಂದೂ ಪ್ರತಿಕ್ರಿಯಿಸಿರಲಿಲ್ಲ. ಪ್ರತಿ ದಿನ ಕಣ್ಣೆದುರೇ ಕಂಡರೂ ನಾನು ನಿಮ್ಮ ಅಭಿಮಾನಿ ಎಂದು ಹೇಳಿಕೊಂಡಿದ್ದೂ ಇಲ್ಲ.
  ಆದರೆ ಈಗ ಬ್ಲಾಗಿಂಗ್ ನಿಲ್ಲಿಸುವ ನಿರ್ಧಾರಕ್ಕೆ ಬರುತ್ತಾರೆ ಎಂದಾದರೆ ಅವರಿಗೆ ನನ್ನದು ಒಂದಿಸ್ಟು ಪ್ರಶ್ನೆ.
  ೧. ನಿಮ್ಮ ಬರಹದ ಅಭಿಮಾನಿಗಳಿಗೆ ನಿಲ್ಲಿಸುವ ಕುರಿತು ನಿಮ್ಮ ಉತ್ತರ?
  ೨. ಕಾಮೆಂಟ್ ಮಾಡಿದವರಸ್ಟೇ ನಿಮ್ಮ ಬರಹದ ಓದುಗರು ಅಂದುಕೊಂಡಿರಾ?
  ೩. ಜೋಗಿಮನೆಯಲ್ಲಿ ಬಹಳ ದಿನಗಳಿಂದ ಬರೆಯುತ್ತಿರಲಿಲ್ಲ ಯಾಕೆ?
  ೩. ಕೆಲದಿನಗಳಿಂದ ‘ಅವಧಿ’ಯಸ್ಟೇ ನಿಮ್ಮ ಬರಹಕ್ಕೆ ವೇದಿಕೆಯಾಗಿತ್ತು… ಅದನ್ನೇ ಜೋಗಿಮನೆಯಲ್ಲಿ ಬರೆಯಬಹುದಿತ್ತಲ್ಲ…
  ೪. ನಮ್ಮಂತ ಓದುಗರಿಗಾದರೂ ಬರೆಯಬಹುದಲ್ಲವೇ…

  ಪ್ರತಿಕ್ರಿಯೆ
 14. rj

  ಜೋಗಿ ಗುರುಗಳೇ,

  ದಾಸರೇ ಹೇಳಿದ್ದಾರಲ್ಲ,
  ”ನಿಂದಕರಿರಬೇಕು..ಹಂದಿಯ ಹಾಗೆ!”

  ಸುಮ್ಮನೇ ಅತ್ಲಾಗೆ ಝಾಡಿಸಿ ಮಾರಾಯ್ರೆ..

  -ರಾಘವೇಂದ್ರ ಜೋಶಿ.

  ಪ್ರತಿಕ್ರಿಯೆ
 15. prakash hegde

  ಯಾರೋ ಮುಖವಿಲ್ಲದವರು ಬೊಗಳುತ್ತಾರೆಂದು …
  ಬ್ಲಾಗ್ ನಿಲ್ಲಿಸುವಷ್ಟು ಹೇಡಿಯಾ ನಮ್ಮ ಜೋಗಿ…?

  ಛೇ… ಹಾಗಿರಲಿಕ್ಕಿಲ್ಲ….

  ನೀವು ಬರೆದದುದ್ದನ್ನು ಅಭಿಮಾನದಿಂದ ಓದುವವರು ಬಹಳ ಜನರಿದ್ದಾರೆ…
  ಅವರಿಗೆ ನಿರಾಸೆ ಆಗುತ್ತದಲ್ಲ….

  ಪ್ರತಿಕ್ರಿಯೆ
 16. Sandhya

  Hi Girish,
  Please note that for every person who wants to
  criticise you, there are tens of us who wants to read you.
  So please dont stop. I love your writings and short poems too. Hope to see u soon.

  ಪ್ರತಿಕ್ರಿಯೆ
 17. Adarsh Humchadakatte

  eÉÆÃV ¸Ágï
  PÀ£À¹£À ¸ÁUÀgÀzÀ°è ¤ªÀÄä CPÀëgÀUÀ¼À zÉÆÃt PÀnÖPÉÆAqÀÄ «ºÀj¸ÀÄwÛzÀÝ £ÀªÀÄUÉ ¸ÁUÀgÀzÀ ªÀÄzÉå PÉÊ ©lÄÖ ªÀÄļÀÄV¸À¨ÉÃr ªÀiÁgÀAiÉÄæÃ…….. EzÉAxÁ ²PÉë

  ಪ್ರತಿಕ್ರಿಯೆ
 18. k.n.hebbar

  dear jogi,you are giving new hope to us all.please dont stop writing blog.-krishna murty hebbar

  ಪ್ರತಿಕ್ರಿಯೆ
 19. ಸುಪ್ತದೀಪ್ತಿ

  ಜೋಗಿ ಸರ್,
  ನೀವು ಬ್ಲಾಗ್ ಬರವಣಿಗೆ ನಿಲ್ಲಿಸೋದಕ್ಕೆ ಇಷ್ಟು ಕ್ಷುಲ್ಲಕ ಕಾರಣವನ್ನು ಎದುರುಮಾಡ್ತೀರಿ ಅಂದುಕೊಂಡಿರಲಿಲ್ಲ. ಮುಖವಾಡಗಳಿಗಿಂತಲೂ ನೀವು ಮತ್ತು ನಿಮ್ಮ ಓದುಗ ವರ್ಗ ಎಷ್ಟೋ ಎತ್ತರ, ಗಟ್ಟಿ. ನಿಮ್ಮ ಅಕ್ಷರಗಳಿಗೆ ಆ ಹಂದಿಗಳ ವೈರಸ್ ಹತ್ತಗೊಡಬೇಡಿ. ಬರೀರಿ, ಪ್ಲೀಸ್.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: