ಜೋಗಿಗೆ ಸಿಕ್ಕ..

jogi

ಜೋಗಿ 

ಕುಡುಕರೆಂದರೆ
ನನಗೆ ಮೆಚ್ಚುಗೆ, ಅಕ್ಕರೆ.

ಕುಡಿಯುತ್ತಾರೆ ಅನ್ನುವ ಕಾರಣಕ್ಕಲ್ಲ
ಕುಡಿದಂತಿರುತ್ತಾರಲ್ಲ, ಅದಕ್ಕೆ.
ದುಡಿಯುತ್ತಲೇ ಇರುವವರು
ಕುಡಿಯದೇ ಸಾಯುತ್ತಾರಲ್ಲ,
ಅವರ ಬಗ್ಗೆ ಅನುಕಂಪ, ಹತಾಶೆ.

drunk2ಕುಡುಕರು ಉದಾರಿಗಳಾಗಿರುತ್ತಾರೆ
ಅನ್ನುವುದಕ್ಕಲ್ಲ.
ಮಿಕ್ಕವರಂತೆ ಅವರು ದಾರಿಯ
ಚಿಂತೆ ಮಾಡುವುದಿಲ್ಲ.
ಸವೆದ ದಾರಿಯೆಂದರೆ ಅವರಿಗೆ
ಅಲರ್ಜಿ.

ಕುಡುಕರು ಕವಿತೆ
ಬರೆಯುವುದಿಲ್ಲ.
ಮತ್ತು ಅದನ್ನು ಗಟ್ಟಿಯಾಗಿ ಓದುವುದಿಲ್ಲ.
ಅವರೊಳಗೆ ಗದ್ಯವೂ ಇರುವುದಿಲ್ಲ
ಪದ್ಯವೂ ಇರುವುದಿಲ್ಲ
ಬರೀ ಮದ್ಯವಿರುತ್ತದೆ. ಮದ್ಯಕ್ಕೆ ಜಾತಿಯಿಲ್ಲ.

ಕುಡುಕರು ಸಮಾನತೆ, ಬದ್ಧತೆ,
ಮೋದಿ, ಗಾಂಧಿ,
ತಾತ್ವಿಕತೆ ಎಂದೆಲ್ಲ ಕ್ಯಾತೆ ತೆಗೆಯುವುದಿಲ್ಲ.
ರಮ್ಮು ಬಾಟಲಿನ ಮುಚ್ಚಳ
ತೆಗೆಯಲಾಗದೇ ಇದ್ದದ್ದಕ್ಕೆ
ಜಾತಿಪದ್ಧತಿಯೇ ಕಾರಣ ಎಂದು ದೂರುವುದಿಲ್ಲ.
ಕುಡುಕರು
ಭಾಷಣ ಮಾಡುವುದಿಲ್ಲ ಮತ್ತು
ಅಪ್ಪಣೆ ಕೊಡಿಸುವುದಿಲ್ಲ.

drunk1ಕುಡುಕರು
ಹುಲುಮಾನವರಂತೆ.
ಎಡವುತ್ತಾರೆ, ಬೀಳುತ್ತಾರೆ, ಸ್ವಂತ ಶಕ್ತಿಯಿಂದ
ಏಳುತ್ತಾರೆ.
ಎದ್ದು ಹಲ್ಲುಜ್ಜಿಕೊಂಡು ಕನ್ನಡಿ ನೋಡಿಕೊಳ್ಳುತ್ತಾರೆ.
ಮುಸ್ಸಂಜೆಯ ತನಕ
ಕರುಳು ಹಿಂಡುವಂತೆ ದುಡಿಯುತ್ತಾರೆ.
ಅವರು
ಪ್ರೀತಿಸಿದ್ದಕ್ಕೆ ಪಾಲು ಕೇಳುವುದಿಲ್ಲ.
ಪತ್ರಿಕೆ ಓದುವುದಿಲ್ಲ
ಟೀವಿ ನೋಡುವುದಿಲ್ಲ
ಮತ್ತು ಥಟ್ಟನೆ ಎದುರಾದರೆ ನಿಮ್ಮನ್ನು
ಮತ್ತೊಬ್ಬ ಕುಡುಕನಂತೆಯೇ ನೋಡುತ್ತಾರೆ.
ನೀವು ನಕ್ಕರೆ ಸಾಕು
ಚಿಯರ್ಸ್ ಅನ್ನುತ್ತಾರೆ.

‍ಲೇಖಕರು Admin

September 12, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾತು ಮುಗಿದೇ ಇಲ್ಲ ಇನ್ನು

ಮಾತು ಮುಗಿದೇ ಇಲ್ಲ ಇನ್ನು

ಡೋ‌ರ ಮಾತು ಮುಗಿದೇ ಇಲ್ಲ ಇನ್ನುಮರೆತು ಎದ್ದು ಹೋದೆಯಾ...?ಹರಸಿ ನಡೆದೆ ಬಿಟ್ಟೆಯಾಕಾಣದೂರಿನ ದಾರಿ ಹಿಡಿದುನನ್ನ ಹೀಗೆ ಯಾಕೊ ತೊರೆದುಹುಡಕಲೇಗೆ...

ನೆಲದ ಕರುಳು

ನೆಲದ ಕರುಳು

ಪಿ ಆರ್ ವೆಂಕಟೇಶ್ ದುಃಖದ ಕುಲುಮೆಯಲಿಹಾಡಲಾರದು ಹಕ್ಕಿಬೇಲಿಯಾಚೆಯ ಮಾತು ಮೌನ ಬೆಂಕಿ ಬಂಧನದ ಭಾವಬಿತ್ತಿತಾದರು ಏನು?ಪುಟಿದ ಕನಸುಗಳೆಲ್ಲಕಸದ...

ಸತ್ಯವು ಸುಡುತಿರುವಾಗ…

ಸತ್ಯವು ಸುಡುತಿರುವಾಗ…

ಇಮ್ತಿಯಾಜ್ ಶಿರಸಂಗಿ ರಾತ್ರೋರಾತ್ರಿ ಚಿತೆಗಳೂರಿದುಸತ್ಯವು ಸುಡುತಿರುವಾಗ... ಸತ್ತವರ ನೋವನ್ನುಪ್ರಜೆಗಳು ನೆನಪಿಟ್ಟುಕೊಳ್ಳಬೇಕು…...

3 ಪ್ರತಿಕ್ರಿಯೆಗಳು

 1. Dr. Prabhakar M. Nimbargi

  ನಿಜವಾಗ್ಲೂ ಬಾಟಮ್‍ ಅಪ್‍ ಮಾಡಲೇಬೇಕೆನಿಸುವ ಕವಿತೆ ಇದು. ಇಡೀ ಜಗತ್ತಿನ ಫಿಲಾಸಫಿಯೇ ಒಂದು ವಿಸ್ಕಿ ಬಾಟಲಲ್ಲಿದೆಯೆಂದು ಓದಿದ ನೆನಪು. ಸತ್ಯ ಅದು. ಆದರೆ ಜೋಗಿಯವರೇ, ಕುಡುಕರಲ್ಲೂ ಮತಿಗೆಟ್ದು ದುಡುಕುವವರಿರುತ್ತಾರೆ, ನಮ್ಮ ಬಹು ಪಾಲು ರಾಜಕಾರಣಿಗಳಂತೆ.

  ಪ್ರತಿಕ್ರಿಯೆ
 2. Sathyakama Sharma Kasaragodu

  ದನಕರುಗಳಂತಿರುತ್ತಾರೆ
  ಕುಡುಕರು
  ಹಾಕುತ್ತಿರುತ್ತಾರೆ ಏನನ್ನೋ
  ಮೆಲುಕು
  ಉದರ ತುಂಬುವ ವರೆಗೆ
  ಅವರ ನೆಚ್ಚಿನ ಸರಕು

  ಪ್ರತಿಕ್ರಿಯೆ
 3. Mallappa

  ಕುಡುಕರು ದನಬಡಿದಂತೆ
  ಬಡಿಯುತ್ತಾರೆ
  ಹೆಂಡತಿ ಮಕ್ಕಳನ್ನ
  ಬಿದ್ದು ಚರಂಡಿ ಯಲ್ಲಿ
  ಸ್ನಾನ ಮಾಡುತ್ತಾರೆ
  ರಸ್ತೆ ಬದಿಯಲ್ಲಿ
  ಮಲಗುತ್ತಾರೆ
  ಚಡ್ಡಿಲಿ ಉಚ್ಚೆ ಹೊಯ್ಕೊಂಡು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: