ಜೋಗಿ ಕಂಡ ಹಂಸಲೇಖಾ

ಹಂಸಲೇಖಾ; ಹಾಡು ಹಗಲಲಿ ಮೂಡಿದ ಬಣ್ಣದ ಬಿಲ್ಲುಜೋಗಿ ಒಂದು ವಾರೆ ಮುಗುಳು, ಸಣ್ಣದೊಂದು ವ್ಯಂಗ್ಯ, ಛೇಡಿಸುವ ಕಣ್ಣೋಟ, ಸುಮ್ಮನೆ ಸರಿದುಹೋದರೆ ನಿನ್ನ ಆರೋಗ್ಯಕ್ಕೇ ಒಳ್ಳೆಯದು ಎಂದು ಸಾರಿಹೇಳುತ್ತಿರುವ ಮೂಗು, ಅಪ್ರತಿಮ ಪ್ರತ್ಯುತ್ಪನ್ನಮತಿ, ಆಗಾಗ ಅತಿರೇಕ, ಮತ್ತೊಮ್ಮೆ ವ್ಯತಿರೇಕ, ತಾನಂದದ್ದೇ ನಡೆಯಬೇಕು ಎನ್ನುವ ಆರೋಗ್ಯವಂತ ಹಠ, ನೀನಂದದ್ದೇ ನಡೆಯಲಿ ಎಂಬ ಅವಿವೇಕದ ಎದುರಿನ ಔದಾರ್ಯ, ಕೈಯಲ್ಲಿ ಒಂದಷ್ಟು ಚೆಂಡು ಹಿಡಕೊಂಡು ಅದನ್ನು ಒಂದರ ಹಿಂದೊಂದರಂತೆ ಮೇಲೆಕ್ಕೆಸೆದು ಕೆಳಗೆ ಬೀಳದಂತೆ ಹಿಡಿದು ತೋರುವ ಕಸರತ್ತಿನ ಹಾಗೆ ಪದಗಳನ್ನು ಎಸೆದೆಸೆದು ತೋರಬಲ್ಲ ಜಾಣ್ಮೆ, ಅಗತ್ಯಕ್ಕಿಂತ ಒಂಚೂರು ಹೆಚ್ಚು ಅನ್ನಿಸುವ ಸಿಟ್ಟು, ಎದುರಿಗೆ ನಿಂತವನ ಯೋಗ್ಯತೆಗೆ ತಕ್ಕ ಪದಸಂಪದ, ಪ್ರೀತಿಯಿಂದ ಹೋದರೆ ಅಗೋ ಕನ್ನಡ, ಅಹಂಕಾರದಿಂದ ಹೋದವರ ಪಾಲಿಗೆ ಜ್ಜ್ಟ ಕನ್ನಡ. ಹಳೆಯ ಹೆಸರು ಅವರಿಗೂ ಮರೆತುಹೋಗಿರಬೇಕು. ಈಗವರು ಹಂಸಲೇಖಾ. ಹಂಸಲೇಖಾ ಚಿತ್ರರಂಗದ ಬೇಂದ್ರೆ ಎಂದು ಹಿಂದೊಮ್ಮೆ ನಾನು ಬರೆದಾಗ ಕನ್ನಡದ ಹಿರಿಯ ಕವಿಯೊಬ್ಬರು ಸಿಟ್ಟಾಗಿದ್ದರು. ಸಿನಿಮಾ ಹಾಡು ಬರೆಯುವನನ್ನು ಬೇಂದ್ರೆಗೆ ಹೋಲಿಸಬೇಡಿ ಎಂದು ಗುಡುಗಿದ್ದರು. ಅದು ಹಂಸಲೇಖಾ ಕಿವಿಗೂ ಬಿದ್ದಿತ್ತೋ ಏನೋ? ಅದಾದ ಕೆಲವೇ ದಿನಕ್ಕೆ ಸಮಾರಂಭವೊಂದರಲ್ಲಿ ಹಂಸಲೇಖಾ ಮಾತಾಡಿದ್ದಿಷ್ಟು: ಕೆಲವರು ವರಕವಿಗಳು, ನಾನು ನರಕವಿ. ವರಕವಿಯ ಮುಂದೆ ನರಕವಿ ಹೇಗಿರಬೇಕೋ ಹಾಗಿರಬೇಕು. ಹಂಸಲೇಖಾ ಕೂಡ ಬೆಂದು ಕವಿಯಾದವರು. ಒಂದು ಸನ್ನಿವೇಶ ಹೇಳಿದ ತಕ್ಷಣ ಅದಕ್ಕೆ ತಕ್ಕ ಹಾಡು ಹೊಸೆಯುತ್ತಲೇ ಸಂಗೀತ ಸಂಯೋಜಿಸುತ್ತಿದ್ದವರು ಹಂಸಲೇಖ. ಬಹುಶಃ ಭಾರತೀಯ ಚಿತ್ರರಂಗದಲ್ಲೇ ಅಷ್ಟೊಂದು ಹಾಡುಗಳಿಗೆ ಸಂಗೀತ ಮತ್ತು ಸಾಹಿತ್ಯ ಎರಡನ್ನೂ ನೀಡಿದವರು ಮತ್ತೊಬ್ಬರು ಸಿಗಲಿಕ್ಕಿಲ್ಲ. ಹಂಸಲೇಖ ಒಳ್ಳೆಯ ಲಹರಿಯಲ್ಲಿದ್ದರೆ ಒಂದು ಒಳ್ಳೆಯ ಕವಿತೆ ಹುಟ್ಟಿತೆಂದೇ ಅರ್ಥ. ಆಗ ಬರೆದದ್ದೆಲ್ಲ ಅಪರಂಜಿ ಚಿನ್ನ: ಅಪರಂಜಿ ಚಿನ್ನವೋ ನನ್ನ ಮನೆಯ ದೇವರು ಗುಲಗಂಜಿ ದೋಷವೂ ಇರದ ಸುಗುಣಶೀಲರು ಎಂದು ಶುರುಮಾಡಿದರೆ ಕೊನೆಯಾಗುವುದು ಮತ್ತೆ ಬಡತನದ ಪ್ರಸ್ತಾಪದಿಂದಲೇ: ಕೋಪಕ್ಕೆ ತಾಪಕ್ಕೆ ಎಣ್ಣೆ ಎರೆಯೋಲ್ಲ ಇಬ್ಬರೂ ಬಡತನವೇ ಸುಖವೆಂದು ಒಬ್ಬರ ಪರವಾಗಿ ಒಬ್ಬರು. ಹೀಗೆ ಹಾಡು ಕಟ್ಟುತ್ತಾ ಕಟ್ಟುತ್ತಾ ಹಂಸಲೇಖ ಸಡಗರದಿಂದ ತೊಡಗಿಕೊಂಡದ್ದನ್ನು ನೋಡುತ್ತಾ ಬಂದರೆ ಆ ಹಾದಿಯೇ ಬೆರಗುಗೊಳಿಸುತ್ತದೆ. ಹಂಸಲೇಖರ ಪ್ರತಿಭೆ ಒಂದು ಕಡೆಯಾದರೆ, ಅವರ ಪದಗಳನ್ನು, ಲಾಲಿತ್ಯವನ್ನು ಮತ್ತು ಅವರ ಕವಿತೆಗಳು ಹಿಡಿದಿಡುವ ಅರ್ಥವನ್ನು ಗ್ರಹಿಸಲಾರದ ಅಪ್ರತಿಭ ಪಡೆ ಮತ್ತೊಂದು ಕಡೆ. ಅಷ್ಟೊಂದು ವರ್ಷ ಅವರು ಕನ್ನಡ ಚಿತ್ರರಂಗದಲ್ಲಿ ಹೇಗೆ ತಮ್ಮನ್ನು ತಾವು ಕಾಪಾಡಿಕೊಂಡರು ಎಂಬ ಪ್ರಶ್ನೆಗೆ ನನ್ನಲ್ಲಂತೂ ಉತ್ತರ ಇಲ್ಲ. ಹಂಸಲೇಖ ಸಾಹಿತ್ಯ ಮತ್ತು ಸಂಗೀತವನ್ನು ಮೆಚ್ಚಿಕೊಂಡಾಡುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಹಾಗಂತ ಅವರು ಸಿನಿಮಾ ನೋಡುವವರಲ್ಲ. ಹಂಸಲೇಖ ಸಂಗೀತ ನೀಡಿದ ಸಿನಿಮಾಗಳನ್ನು ಮೆಚ್ಚುವವರೂ ಅಲ್ಲ. ಅವರ ಪಾಲಿಗೆ ಹಂಸಲೇಖ ಸಾಹಿತ್ಯ ಮಾತ್ರ ಸಾಕು. ಹಿಮದಲಿ ಮಸುಕಲಿ ಅಮೃತಶಿಲೆ ಇದು ತುಟಿ ತುಟಿ, ಶಿಲೆಯನು ಕಡೆಯಲು ಕಣ್ಣು ನೋಡುತಿದೆ ಪಿಟಿ ಪಿಟಿ’ ಎಂದರೆ ಅದು ಹಂಸಲೇಖ ಪ್ರೇಮಗೀತೆ. ಎಲ್ಲೂ ಅಶ್ಲೀಲದ ಸೋಂಕಿಲ್ಲ, ಶೃಂಗಾರಕ್ಕೆ ಕೊರತೆಯಿಲ್ಲ. ಅರ್ಥ ಮಾಡಿಕೊಂಡರೆ ರೋಮಾಂಚನ, ಉಳಿದವರಿಗೆ ಮೋಹಕ ಪದಸಿಂಚನ. ಯಾರೀ ಅನಸೂಯೆ, ಈ ಜಲಸೀ ಲೋಕದಲ್ಲಿ’ ಎಂದು ಕರಿಮಣಿಸರದೊಳ್ ಹವಳವಂ ಕೋದಂತೆ ನುಡಿದರೆ ಕೆಲವರ ಪಾಲಿಗದು ನೀರಿಳಿಯದ ಗಂಟಲೊಳ್ ತುರುಕಿದು ಕಡುಬು. ಅದು ಕಡುಬಲ್ಲ, ಕರುಬು! +++ ಹಂಸಲೇಖ ಕುರಿತು ನೂರೆಂಟು ದಂತಕತೆ. ಅವುಗಳಲ್ಲಿ ನಿಜವೆಷ್ಟು ಸುಳ್ಳೆಷ್ಟು ಅನ್ನುವುದು ಅವರಿಗೂ ಗೊತ್ತಿರಲಿಕ್ಕಿಲ್ಲ. ಒಮ್ಮೆ ನಟನೊಬ್ಬ ತನ್ನ ಹೊಸ ಕಾರು ತಂದು ಹಂಸಲೇಖಾಗೆ ತೋರಿಸುತ್ತಾ, ಇದು ಭಾರತದಲ್ಲೇ ಅತ್ಯಂತ ದುಬಾರಿ ಕಾರು ಎಂದು ಜಂಬ ಕೊಚ್ಚಿಕೊಂಡ. ಹಂಸಲೇಖ ಕಾರಿನ ಬೆಲೆ ಎಷ್ಟು ಕೇಳಿದರು. ಆತ ಮೂವತ್ತು ಲಕ್ಷ ಎಂದು ಹೆಮ್ಮೆಯಿಂದ ಹೇಳಿಕೊಂಡ. ಅದಕ್ಕಿಂತ ದುಬಾರಿ ಕಾರ್ ನಮ್ಮನೇಲಿದೆ ಅಂದರು. ಆತ ಬೆರಗಾಗಿ ನೋಡುತ್ತಿದ್ದಂತೆ ಮನೆಯೊಳಗೆ ಕರೆದುಕೊಂಡು ಹೋಗಿ ಮಗನನ್ನು ಕರೆದು ತೋರಿಸಿದರು. ್ಚನೋಡಿ, ಅಲಂಕಾರ್. ಬೆಲೆ ಒಂದು ಕೋಟಿ’ ಎಂದು ಗಹಗಹಿಸಿದರು. ಮಗ ಅಲಂಕಾರ್ಗೋಸ್ಕರ ಆಗಷ್ಟೇ ಹಂಸಲೇಖ ಒಂದು ಕೋಟಿ ಖರ್ಚು ಮಾಡಿ ‘ಸುಗ್ಗಿ’ ಚಿತ್ರ ನಿರ್ಮಿಸಿದ್ದರು. ಆ ಸಿನಿಮಾ ಬಿಡುಗಡೆಯಾಗಲೇ ಇಲ್ಲ. ಒಮ್ಮೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಬೆಂಗಳೂರಿಗೆ ಬಂದಿದ್ದರು. ಚೆನ್ನೈಯ ಉರಿಬಿಸಿಲಿಗೆ ಅವರಿಗೆ ಸನ್ಸ್ಟ್ರೋಕ್ ಆಗಿತ್ತು. ಹಂಸಲೇಖ ಕೂಡ ಕೊಂಚ ಮುದುಡಿಕೊಂಡಂತಿದ್ದರು. ನನಗೇನೋ ಸನ್ಸ್ಟ್ರೋಕ್, ನಿಮಗೇನಾಗಿದೆ ಅಂತ ಎಸ್ಪೀಬಿ ಕೇಳಿದ್ದಕ್ಕೆ ಹಂಸಲೇಖಾ ಹೇಳಿದರಂತೆ; ನನಗೂ ಸನ್ ಸ್ಟ್ರೋಕ್. ಎಸ್ಪೀಬಿ ಹೇಳಿದ್ದು: ಖ್ಡಟಿ, ಹಂಸಲೇಖ ಹೇಳಿದ್ದು: ಖ್ಟಟಿ. ಪದಕೋಶ ಮುಂದಿಟ್ಟುಕೊಂಡು ಬರೆಯುವಂತೆ ಕಾಣಿಸುವ ಕಲ್ಯಾಣ್, ತೀರ ಸರಳವಾಗಿ ಬರೆಯುತ್ತಿರುವ ಇವತ್ತಿನ ಸಿನಿಮಾ ಕವಿಗಳ ಮಧ್ಯೆ ಹಂಸಲೇಖಾ ಸಿನಿಮಾದ ಒಳಗುಟ್ಟು ಅರಿತವರಂತೆ ಬರೆದರು. ಅವರು ಆ ಮಟ್ಟಿಗೆ ರೂಪಕ ಚಕ್ರವತರ್ಿ. ಯಾವುದನ್ನೂ ಹಂಸಲೇಖ ಅಷ್ಟು ನೇರವಾಗಿ ಹೇಳಲಿಲ್ಲ. ರವಿಚಂದ್ರನ್ ನಟಿಸಿದ ್ಚಸಿಪಾಯಿ’ ಚಿತ್ರದಲ್ಲಿ ಚಿರಂಜೀವಿ ನಟಿಸಿದ್ದರು. ಇಬ್ಬರ ಸ್ನೇಹವನ್ನು ಹೊಗಳುವ ಹಾಡು ಬರೆಯಬೇಕಾಗಿತ್ತು ಹಂಸಲೇಖ. ಆ ಸಾಲುಗಳನ್ನು ಆ ಚಿತ್ರದ ಹೊರಗೂ ಓದಿ ಮೆಚ್ಚಿಕೊಳ್ಳುವಂತಿತ್ತು: ಪಕ್ಕದ ಊರು ನನ್ನೂರು ಹಿಂದೊಮ್ಮೆ ಎರಡೂ ಒಂದೂರು ಇಲ್ಲಿನ ಜನರು ನಿನ್ನೋರು ಒಂದಾಗಿ ಇರುವ ಅನ್ನೋರು ನಿಮ್ಮೂರ ದಾಸಪದ ನಮ್ಮೂರಲ್ಲಿ ನಮ್ಮೂರ ಜಾನಪದ ನಿಮ್ಮೂರಲ್ಲಿ ತಿಮ್ಮ ನಿಮ್ಮವನು, ರಾಯ ನಮ್ಮವನು ನಮ್ಮ ದೇವರೊಂದೆ. ತೆಲುಗು ಮತ್ತು ಕನ್ನಡದ ನಡುವಿನ ಸಂಬಂಧವನ್ನು ಇಷ್ಟು ಸೊಗಸಾಗಿ ಹೇಳುವುದಕ್ಕೆ ಹಂಸಲೇಖಾಗೆ ಮಾತ್ರ ಸಾಧ್ಯ ಅನ್ನಿಸುವಂತಿತ್ತು ಈ ಗೀತೆ. ಕೊನೆಕೊನೆಯ ಸಾಲುಗಳಲ್ಲಿ ಅವೆಲ್ಲವನ್ನೂ ಮೀರಿಸುವ ಹಾಗೆ ‘ನಿಮ್ಮೂರ ಚಂದಿರನೆ ನಮ್ಮೂರಲ್ಲಿ, ನಮ್ಮೂರ ಮನ್ಮಥನೇ ನಿಮ್ಮೂರಲ್ಲಿ’ ಎಂದು ಹಂಸಲೇಖಾ, ಥೇಟ್ ಕವಿಯೇ ಆಗಿಬಿಡುತ್ತಿದ್ದರು. ಹೀಗಾಗಿಯೇ ಅವರ ಸಿನಿಮಾಗೀತೆಗಳಿಗೂ ಒಂದು ಪ್ರತ್ಯೇಕ, ಸ್ವಯಂ ಅಸ್ತಿತ್ವ ಪ್ರಾಪ್ತಿಯಾಗುತ್ತಿತ್ತು. ಅವುಗಳನ್ನು ಸುಮ್ಮನೆ ಕೇಳಿದಾಗಲೂ ಇನ್ನೇನೋ ಹೊಳೆದು ಖುಷಿಯಾಗುತ್ತಿತ್ತು. ‘ಕೂರಕ್ ಕುಕ್ಕರಳ್ಳಿ ಕೆರೆ, ತೇಲಕ್ ಕಾರಂಜಿಕೆರೆ’ ಹಾಡು ಕೇಳುತ್ತಾ ಕೂತಿದ್ದಾಗ ಅಪಾರ ರಘು ಹೇಳುತ್ತಿದ್ದ: ಮೈಸೂರಿಗೆ ಇದಕ್ಕಿಂತ ಒಳ್ಳೆಯ ನಾಡಗೀತೆ ಬೇಕಿಲ್ಲ. ಇದಕ್ಕಿಂತ ಚೆನ್ನಾಗಿ ಮೈಸೂರನ್ನು ವರ್ಣಿಸುವುದೂ ಸಾಧ್ಯವಿಲ್ಲ. ಹಂಸಲೇಖ. ‘ಮನಸಿದ್ರೆ ಮಾನವ, ಮದವಿದ್ರೆ ದಾನದ, ಗುಣವಿದ್ರೆ ಪಾಂಡವ, ಇರದೋನೆ ಕೌರವ’ ಹೀಗೆ ದಾಸಪದ, ಜಾನಪದ, ಪುರಾಣ, ಗಾದೆ, ವೇದ, ಸರ್ವಜ್ಞ, ಕುವೆಂಪು, ವೇಮನ, ತಿರುವಳ್ಳುವರ್ ಎಲ್ಲರೂ ಹಂಸಲೇಖ ಹಾಡಲ್ಲಿ ಬಂದುಹೋಗುತ್ತಿದ್ದರು. ‘ದ್ರೌಪದೀ, ದ್ರೌಪದೀ, ಎಂದಿನದೇ ಈ ಕದನ, ಷಟ್ಪದಿ, ಚೌಪದಿ, ಯಾವುದರಲೇ ಈ ಕವನ’ ಎಂಬ ಸಾಲುಗಳನ್ನು ಮತ್ತೊಂದು ಗಂಡಿಗೆ ಹಂಬಲಿಸುವ ಹೆಣ್ಣಿನ ಮನಸ್ಥಿತಿಯನ್ನಿಟ್ಟುಕೊಂಡು ಬರೆದವರು ಹಂಸಲೇಖ. ಪಂಚಪಾಂಡವರಿಗೆ ತನ್ನನ್ನು ಒಪ್ಪಿಸಿಕೊಂಡ ದ್ರೌಪದಿ, ಷಟ್ಪದಿ, ಚೌಪದಿಗಳ ಬಗ್ಗೆ ಯೋಚಿಸುತ್ತಾಳೆ ಎಂದು ಕಲ್ಪಿಸಿಕೊಳ್ಳಬಲ್ಲವರಾಗಿದ್ದರು ಅವರು. ‘ಒಂದು ಮೂಕ ಭಂಗಿಗೆ, ಕೋಟಿ ಭಾವ ತೆರೆಯುವ ಚತುರ ಶಿಲಾಬಾಲಿಕೆ’, ‘ಕಳೆತೆಗೆಯೋ ಭರದಲ್ಲಿ ತೆನೆಕಿತ್ತಳು ಬದುಕಲ್ಲಿ’, ‘ಆಕಾಶದ ನಕ್ಷತ್ರದ ಸಂಸಾರ ನೋಡ್ತಿದ್ದರೆ, ಮೈಗೂಡಿನಲ್ಲಿ ಶ್ರೀಚಂದ್ರನು ಸಂಚಾರ ಮಾಡ್ತಿದ್ದನು’, ‘ಮನಸಿನ ಮಧುವಿನ ಮಹಲೊಳಗೆ ಮದನ ಮಣಿಯಬೇಕು’, ‘ಲತೆಬಳ್ಳಿಯಿಂದ ಸಿಗ್ಗನ್ನು ತಂದ, ಸಿಗ್ಗನ್ನು ಇವಳ ನಡುವಾಗು ಅಂತ, ನಡುವನ್ನು ಅಳಿಸೆ ಎದೆಭಾರ ತಂದ’.. ಹಂಸಲೇಖಾ ಬರೆದ ಗೀತೆಗಳನ್ನು ಕೇಳುತ್ತಿದ್ದರೆ ಅಲ್ಲಿ ಪದಗಳ ಮೆರವಣಿಗೆ. +++ ತನ್ನ ಬಗ್ಗೆ ತಮಾಷೆ ಮಾಡಿಕೊಳ್ಳುತ್ತಾ, ಮಗನ ಬಗ್ಗೆ ಹೇಳಿಕೊಳ್ಳುತ್ತಾ, ತನ್ನನ್ನೇ ತಾನು ಅಲ್ಲಗಳೆಯುತ್ತಾ, ಸುಮ್ಮನೆ ಸುಮ್ಮನೆ ಜಗಳ ಕಾಯುತ್ತಾ, ಹೊತ್ತುಕಳೆಯಲೆಂದೇ ವಾದಿಸುತ್ತಾ, ಅವಿವೇಕಿಗಳನ್ನು ದೂರವಿಡಲು ಶ್ರಮಿಸುತ್ತಾ, ತಾನು ಬರೆಯುತ್ತಿರುವ ಗೀತೆಗಳ ತಾಕತ್ತು ಮತ್ತು ನಿರರ್ಥಕತೆ ಎರಡನ್ನೂ ಅರಿತವರಂತೆ ಕಾಣಿಸುತ್ತಿದ್ದ ಹಂಸಲೇಖ, ಇತ್ತೀಚೆಗೆ ಗಂಭೀರರಾಗಿದ್ದಾರೆ. ಸಾಮಾನ್ಯವಾಗಿ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮಾಧ್ಯಮದ ಜೊತೆ ಮಾತಾಡುವುದೂ ಇಲ್ಲ. ಟೀವಿಯವರು ಮಾತಾಡಿ ಅಂದರೆ ನೇರವಾಗಿ ್ಚಎಷ್ಟು ಸಂಭಾವನೆ ಕೊಡುತ್ತೀರಿ?’ ಎಂದು ಕೇಳುತ್ತಾರೆ ಎಂಬ ಆರೋಪವೂ ಅವರ ಮೇಲಿದೆ. ಸಿನಿಮಾಕ್ಕೆ ಸಂಗೀತ ನೀಡಿ ಎಂದರೆ ಕೊಂಚ ಹೆಚ್ಚೇ ಸಂಭಾವನೆ ಕೇಳುತ್ತಾರೆ ಎಂದು ಕೆಲವರು ಮುಸುಮುಸು ಅಳುತ್ತಾರೆ. ಹಂಸಲೇಖ ತಮ್ಮ ಸ್ಕೂಲು, ನಾಟಕ ಮತ್ತು ಮಕ್ಕಳಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಹಂಸಲೇಖಾ ಮನೆಗೆ ಹೋದರೆ ಅಲ್ಲಿ ಕವಿ ಸಿದ್ಧಲಿಂಗಯ್ಯ ಕೂತಿದ್ದರು. ಅವರ ್ಚಇಕ್ರಲಾ, ವದೀಲರ್ಾ’ ಹಾಡಿಗೆ ನೂರಿನ್ನೂರು ಹುಡುಗರನ್ನಿಟ್ಟುಕೊಂಡು ಹಂಸಲೇಖಾ ರಿಹರ್ಸಲ್ ಮಾಡಿಸುತ್ತಿದ್ದರು. ಡೋಲು, ತಮಟೆ, ಚಂಡೆಮದ್ದಳೆಗಳ ಸದ್ದಿನಲ್ಲಿ ಸಿದ್ಧಲಿಂಗಯ್ಯನವರ ಗೀತೆ ಹೊಸರೂಪ ಪಡೆದುಕೊಂಡು ನಳನಳಿಸುತ್ತಿತ್ತು. ಅದು ತನ್ನದೇ ಗೀತೆ ಎನ್ನುವುದನ್ನೂ ಮರೆತವರಂತೆ ಸಿದ್ಧಲಿಂಗಯ್ಯ ಕೂತಿದ್ದರು. ಸಿನಿಮಾ ಗೀಳಿನಿಂದ ಹೊರಬರಲಾರದೇ, ಮತ್ತೊಂದು ಅವಕಾಶಕ್ಕಾಗಿ ಹಾತೊರೆಯುತ್ತಾ, ಮತ್ತೆ ನಿರ್ಮಾಪಕರಿಗಾಗಿ ಕಾಯುತ್ತಾ, ನಿರ್ದೇಶಕರ ಎದುರು ‘ಇದು ಹೇಗಿದೆ ಹೇಳಿ?’ ಎಂದು ಅಂಗಲಾಚುತ್ತಾ ಕಾಯುವ ಪ್ರತಿಭಾವಂತರ ಮಧ್ಯೆ, ಹಂಸಲೇಖ ಮತ್ತೊಂದು ಜಗತ್ತನ್ನು ಕಟ್ಟಿಕೊಂಡ ಸ್ವಾಭಿಮಾನಿ. ಹಾಗೆ ಕಟ್ಟಿಕೊಂಡ ಸ್ವರ್ಗ ತ್ರಿಶಂಕುಸ್ಥಿತಿಯಾಗುವ ಅಪಾಯದಿಂದಲೂ ಪಾರಾದವರು. ಒಂಚೂರು ಪೋಲೀತನ, ಒಂದಿಷ್ಟು ಹತಾಶೆ, ಪಂಚೇರು ಜೀವ, ಅರೆಪಾವು ಗುಂಡಿಗೆ, ಇದನ್ನೆಲ್ಲ ಮೀರಿದವನು ಎಂಬ ಒಳಸತ್ಯ, ಈಸಬೇಕು ಇದ್ದು ಜೈಸಬೇಕು ಎಂಬ ನಿತ್ಯಸತ್ಯ, ಒಂದು ದಿವ್ಯನಿರ್ಲಕ್ಷ್ಯ ಹಾಗೂ ಅಪ್ಪಟ ವ್ಯಾವಹಾರಿಕತೆಯ ಜೊತೆಗೇ ಹಂಸಲೇಖಾ ನಮಗೆ ಎದುರಾಗುತ್ತಾರೆ. ದೂರದಿಂದ ನೋಡುವವರ ಪಾಲಿಗೆ ಅವರು ಒಳ್ಳೆಯ ಹಾಡುಗಳನ್ನು ಬರೆದ ಗೀತರಚನಕಾರ. ಸಮೀಪದಿಂದ ನೋಡಿದವರ ಪಾಲಿಗೆ ಅರ್ಥವೇ ಆಗದ ಒಗಟು, ಶಿಷ್ಯಂದಿರ ಪಾಲಿಗೆ ಎಷ್ಟು ಕಲಿತರೂ ಮುಗಿಯದ ವಿದ್ಯಾಸಾಗರ, ಸಿನಿಮಾದವರ ಪಾಲಿಗೆ ಒಂದು ಕಾಲಕ್ಕೆ ಕೇಳಿದ್ದನ್ನು ಕೊಡುವ ಕಲ್ಪವೃಕ್ಷ, ಇವತ್ತು ಕೇಳಿದರೂ ಕೊಡದ ಬಿರು ಆಕಾಶ. ಹಂಸಲೇಖ ಇನ್ನೂ ಏನೇನೋ ಮಾಡಬಹುದಾಗಿತ್ತು ಎಂದು ಅನಿಸುವ ಹೊತ್ತಿಗೇ, ಅವರ ಮೊದಲ ಗೀತೆ ನೆನಪಾಗುತ್ತದೆ. ನೀನೇನಾ ಭಗವಂತಾ ಎಂದು ಯಾರೋ ಕೇಳಿದಂತಾಗುತ್ತದೆ. ಗಂಗರಾಜು ಎಂಬ ಹಸಿದ ಹುಡುಗನ ಕೊರಳಿಗೆ ಜೋತುಬಿದ್ದ ಹಾರ್ಮೋನಿಯಂ ಕಣ್ಮುಂದೆ ಬರುತ್ತದೆ. ‘ಮೇಲೆ ನೋಡಿದರೆ ಅಲ್ಲಿ, ಚಂದ್ರನಿಲ್ಲ ಬಾನಿನಲ್ಲಿ’ ಎಂಬ ಸಾಲುಗಳು ಪ್ರೇಮಗೀತೆಯಂತೆ ಕಾಣಿಸದೇ, ಚಂದಿರನಿಲ್ಲದ ತರುಣರ ಅಂಧಕಾರದ ಇರುಳಿನಂತೆ ಭಾಸವಾಗುತ್ತದೆ. ಅಂಥ ಸ್ಥಿತಿಯಲ್ಲಿದ್ದ ನಮ್ಮನ್ನೆಲ್ಲ ಹುರಿಗೊಳಿಸಿದ ‘ಬದುಕೆ ಯುದ್ಧಕಾಂಡ, ಹೃದಯ ಯಜ್ಞಕುಂಡ’ ಎಂಬ ಹಂಸಲೇಖಾರ ಸಾಲುಗಳು ನೆನಪಾಗುತ್ತವೆ. ಜೊತೆಗೇ, ‘ಪ್ರೇಮಕೂ ಅಗ್ನಿಪರೀಕ್ಷೆ ಸುಳಿವಿಲ್ಲದೆ ಕೊಡುತಾನೆ, ಬದುಕೇ ಪಯಣ ನಡೆಯೋ ಮುಂದೆ, ಒಲವೆ ನೆರಳು ನಮಗೆ ಹಿಂದೆ’ ಎಂಬ ಹುರುಪುಗೊಳಿಸುವ ಗೀತೆ ಕೂಡ.]]>

‍ಲೇಖಕರು avadhi

June 28, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

5 ಪ್ರತಿಕ್ರಿಯೆಗಳು

 1. visharada

  ಜನಪದ ಶೃಂಗಾರ ಹಾಡುಗಳಲ್ಲಿ ನವಿರು ಪೋಲಿತನವಿರುತ್ತದೆ. ‘ಹಂಸ’ಗೀತೆಗಳಲ್ಲೂ ಆ ಪೋಲಿತನ ಇಣುಕುತ್ತದೆ. ಇದರಿಂದ ಹುಡುಗಿಯರಿಗೆ ಸಿಟ್ಟು ಬರುವುದಿಲ್ಲ; ನಾಚಿ ನೀರಾಗುತ್ತಾರೆ. ಇಂತಹ ಜನಪದೀಯ ಗುಣವುಳ್ಳ ‘ಪೋಲಿ’ಗೀತೆಗಳು ‘ಹಂಸಲೇಖ’ನಿಯಿಂದ ಇನ್ನಷ್ಟು ಬರಲಿ.

  ಪ್ರತಿಕ್ರಿಯೆ
 2. jyothi

  The person who penned “ye Gangu ee biku kalisikondo” song could write “devaru hosedaa.. premada haara”.. I couldnt believe.. even “mama pranadheesham… shivam shivam..” entha song..!! wow! Hamsalekha nijakkoo superb…

  ಪ್ರತಿಕ್ರಿಯೆ
 3. Narasimha

  Jogi avre .,
  Hamsalekha avra huttuhabbake udugore agi tumba olle ‘Nudinamana’vanee kottidira.,nijaku ondu olle adbuta lekhana,
  keep penning..,all the very best

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: