ಜೋಗಿ ಕಥೆ ಈಗ ತೆರೆಯ ಮೇಲೆ,,

-ನಾಡೋಡಿ

ಈ ಕನಸು

ಚಂದ್ರಮಾವಿನಕೊಪ್ಪಲಿನ ರಾಜಶೇಖರ ಮೂರ್ತಿಗಳ ಮನೆ ಒಂದು… ಗಿಳಲಗುಂಡಿಯ ಶಂಕರಪ್ಪನನವರ ಮನೆ ಇನ್ನೊಂದು. ನಾನು ಇಬ್ಬರ ಮನಗೂ ಹೋಗಿ ಕೊನೆಗೆ ರಾಜಶೇಖರ ಮೂರ್ತಿಗಳ ಮನೆಯನ್ನು ಆರಿಸಿಕೊಂಡೆ… ಯಾಕೆಂದರೆ ಆ ಮನೆಯಲ್ಲಿ ರಾಜಶೇಖರ ಮೂರ್ತಿಗಳಾಗಲೀ ಅವರ ಕುಟುಂಬದವರಾಗಲೀ ವಾಸಮಾಡುತ್ತಿರಲಿಲ್ಲ. ಅವರ ಮಗ ಬೆಂಗಳೂರಿನಲ್ಲಿ ಓದುತ್ತಿದ್ದ . ಮೂರ್ತಿಗಳೂ ರಾಜಕೀಯದಲ್ಲಿ ಸಣ್ಣಮಟ್ಟಿಗೆ ಹೆಸರು ಮಾಡಿ ಬೆಂಗಳೂರು – ಧಾರಾವಾಡ ಅಂತ ಓಡಾಡಿಕೊಂಡಿದ್ದರು. ಹೀಗಾಗಿ ಆ ಮನೆಯ ಏಕಾಂತ ನನಗೆ ತುಂಬಾ ಹಿಡಿಸಿತ್ತು…!!!

2008ರಲ್ಲಿ ಎಚ್.ಗಿರೀಶ್ ರಾವ್ ಅವರ `ರಾಯಭಾಗದ ರಹಸ್ಯ ರಾತ್ರಿ'(ಜೋಗಿ ಕಥೆಗಳು) ಪುಸ್ತಕ ಪ್ರಥಮ ಮುದ್ರಣವಾದಾಗ ತಂಗಿ ಧೀಷ್ಮಾ ಕೈಗಿತ್ತು ಓದು ಚೆನ್ನಾಗಿದೆ ಅಂದಿದ್ದಳು. ಆ ಇಡೀ ಪುಸ್ತಕದ ಪೈಕಿ ನನಗೆ ಬಹಳ ಕಾಡಿದ್ದು `ಕಣ್ಮರೆ’ ಯಾಕೋ ಏನೋ… ಆ ಕಥೆಯಲ್ಲಿ ಬರುವ `ಚಂದ್ರಮಾವಿನ ಕೊಪ್ಪಲು’ ಎಂಬ ಸಣ್ಣ ಹಳ್ಳಿ… ಮಿಲಿಟರಿ ನಿವೃತ್ತ ಅಧಿಕಾರಿ, ರಾಜಶೇಖರ ಮೂರ್ತಿ, ಸಾಗರ, ಸರೋಜಿನಿ…ಸಂಜೆಯ ಭೀಕರ ಮಳೆ… ಸಾವು..ಕೊಲೆ… ಅಮೂರ್ತವಾಗಿರುವ ದೆವ್ವ, ಭೂತಗಳ ಚಿತ್ರಣ…ಇದೆಲ್ಲ ನನ್ನ ಮನದಲ್ಲಿ ಮತ್ತೆ ಮತ್ತೆ ಕಾಡುತ್ತಿತ್ತು… ಕಥೆಯ ಕೊನೆಯಲ್ಲಿರುವ ಸಾಲುಗಳಂತೆ…“ ಆದರೆ ಮಗು ಸಿಗೋಲ್ಲ… ಅನ್ನುವುದು ನನಗೆ ಗೊತ್ತಿತ್ತು. ಅದನ್ನು ಅವರಿಗೆ ವಿವರಿಸಿ ಹೇಳುವ ಹಾದಿ ಗೊತ್ತಿರಲಿಲ್ಲ… ಮಗು ಸಿಗೋಲ್ಲ… ಯಾಕೆಂದರೆ …. ವಿವರಿಸುವ ಶಕ್ತಿ ನನಗಿಲ್ಲ…” ಎಂಬಂತೆ…!!!

ಜೈನಕಾಶಿ ಮೂಡಬಿದಿರೆಯ ಫಿರ್ಕಾಕ್ಕೆ ಬರುವ ಹೊಸಂಗಡಿ – ಮಾರೂರು ಒಂದು ಪುಟ್ಟ ಹಳ್ಳಿ. ಅಲ್ಲೊಂದು ಮನೆಯಿದೆ. ಹೌದು ಒಂದೊಮ್ಮೆ `ಅರಮನೆ’ಯಾಗಿ ಮೆರೆದಿತ್ತು. ಈಗ ಆ ರಾಜವಂಶಸ್ಥರು ಅಲ್ಲಿದ್ದಾರೆ. ಅರಮನೆಯೂ ಇದೆ…ಆ ಬೃಹದಾಕಾರದ ಹಳೆಯ ಅರಮನೆಯೇ ಈ `ಕಣ್ಮರೆ’ ಕಥೆಗೊಂದು `ಲೊಕೇಷನ್’…

`ಜೋಗಿ’ ಎಂದೇ ಖ್ಯಾತರಾದ ಎಚ್.ಗಿರೀಶ್ ರಾವ್ ಇದೀಗ `ಕಣ್ಮರೆ’ಯನ್ನು ಕಿರುತೆರೆಗೆ ತರಲಿದ್ದಾರೆ. ಅದಕ್ಕಾಗಿ ಚಿತ್ರೀಕರಣ ಕಳೆದೆರಡು ದಿನಗಳಿಂದ ಸಾಗುತ್ತಿದೆ. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಈ ಚಿತ್ರೀಕರಣದಲ್ಲಿ ಪಾಲುಪಡೆದುಕೊಂಡಿದ್ದಾರೆ. ಪ್ರತೀ ಹಂತವನ್ನೂ ಅತ್ಯಂತ ಕಾಳಜಿ, ಸೂಕ್ಷ್ಮವಾಗಿ ಚಿತ್ರೀಕರಿಸುತ್ತಿದ್ದಾರೆ ಸತ್ಯಬೋಧ ಜೋಶಿ. ಜೋಗಿ , ಅನಿಲ್ ಭಾರಧ್ವಾಜ್ ನಿರ್ದೇಶನದಲ್ಲಿದ್ದಾರೆ.ಅಂದಹಾಗೆ `ಸುವರ್ಣ 24×7 ‘ ವಾಹಿನಿಯಲ್ಲಿ ಇದು ಮೂಡಿಬರಲಿದೆ.

‍ಲೇಖಕರು avadhi

April 21, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

8 ಪ್ರತಿಕ್ರಿಯೆಗಳು

 1. ಹರಿ

  ಶುಭ ಹಾರೈಕೆಗಳು.
  ಕನ್ನಡ ಸಾಹಿತ್ಯಕ್ಕೆ ಉತ್ತಮ ಲೇಖಕ ದೊರೆತಂತೆ ಚಿತ್ರೋದ್ಯಮಕ್ಕೆ ಉತ್ತಮ ನಿರ್ದೇಶಕ ದೊರೆಯುವಂತಾಗಲಿ.

  ಪ್ರತಿಕ್ರಿಯೆ
 2. Sushrutha

  All the bestu saar..

  Aadre ee photodalli jogi sirru vayassaadora thara kaaNthare.. 😉

  ಪ್ರತಿಕ್ರಿಯೆ
 3. Netravathi Abbokkaraka Ubar

  jogi innu kirutereyalli modi maadalu horatiddare.shubashayagalu

  ಪ್ರತಿಕ್ರಿಯೆ
 4. ವಸುಧೇಂದ್ರ

  ಜೋಗಿ,

  ಅಭಿನಂದನೆಗಳು. ಒಳ್ಳೆಯ ಚಿತ್ರವನ್ನು ಮಾಡಿ ಕೊಡಿ. ಕನ್ನಡಿಗರು ನಾವು ಒಳ್ಳೆಯ ಸಿನಿಮಾಗಳಿಗಾಗಿ ಕಾದು ಕುಳಿತಿದ್ದೇವೆ.

  ವಸುಧೇಂದ್ರ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: