ಜೋಗಿ ಬರೆದಿದ್ದಾರೆ… ನಮ್ಮ ಸಾಹಿತ್ಯ ಜೀವಂತವಾಗಿದೆ..

ನೀವು ಇತ್ತೀಚಿಗೆ ಓದಿದ ಇಂಗ್ಲಿಷ್ ಕವಿತೆ ಯಾವುದು?
ಬೈರನ್‌ನ ಫೇರ್‌ವೆಲ್ ಓದ್ತಿದ್ದೆ.. ತುಂಬಾ ಇಷ್ಟವಾಯ್ತು..’ಅಷ್ಟು ಹಳೆಯದಲ್ಲ ನಾನು ಕೇಳಿದ್ದು, ಇತ್ತೀಚಿಗೆ ಓದಿದ ಇತ್ತೀಚಿನ ಕವಿತೆ ಯಾವುದು?
ಅವರು ಒಂದು ಕ್ಷಣ ಮೌನವಾದರು. ಇತ್ತೀಚಿನ ಕವಿತೆ ಯಾವುದು ಎಂದು ನೆನಪಿಸಿಕೊಳ್ಳಲು ಯತ್ನಿಸಿದರು. ಅದು ಎಷ್ಟು ಇತ್ತೀಚಿನದಾಗಿರಬೇಕು ಎಂದು ತಮ್ಮನ್ನು ತಾವೇ ಕೇಳಿಕೊಂಡರು. ಆಡೆನ್ ನೆನಪಾದ, ನಿಸ್ಸಿಮ್ ಎಜಿಕೆಲ್ ನೆನಪಾದ. ಅದರಾಚೆಗೆ ಯಾರು ಬರೆದಿದ್ದಾರೆ? ಯಾರು ಕವಿತೆ ಬರೆಯುತ್ತಿದ್ದಾರೆ. ಅವರು ತಲೆಯಾಡಿಸಿದರು.
ಹೋಗಲಿ ಬಿಡಿ, ಇತ್ತೀಚೆಗೆ ಓದಿದ ಇತ್ತೀಚಿನ ಸಣ್ಣಕತೆ ಯಾವುದು?
ಅಲ್ಲೂ ಅದೇ ಹುಡುಕಾಟ. ಓ ಹೆನ್ರಿ, ಚೆಕಾಫ್, ಬ್ರೆಕ್ಟ್, ಟಾಲ್‌ಸ್ಟಾಯ್, ಜೇಮ್ಸ್ ಜಾಯ್ಸ್- ಅಲ್ಲಿಂದಾಚೆ ಯಾವ ಹೆಸರೂ ಹೊಳೆಯಲಿಲ್ಲ. ಸಾಹಿತ್ಯ ಕೂಡ ಚರಿತ್ರೆ ಆಗಿದೆ ಅನ್ನಿಸುತ್ತಿಲ್ಲವೇ. ನಮ್ಮ ಹುಡುಗರ ಸ್ಥಿತಿ ನೋಡಿ. ಇಂಗ್ಲಿಷ್ ಲಿಟರೇಚರ್ ಅಂದರೆ ಅದೇ ಶೆಲ್ಲಿ, ವರ್ಡ್‌ವರ್ಥ್, ಲ್ಯಾಂಬ್, ಕೀಟ್ಸ್, ಯೇಟ್ಸ್, ಬೈರನ್, ಮಾರ್ವೆಲ್, ಆಡೆನ್… ಅಲ್ಲಿಗೆ ನಿಂತು ಹೋಗುತ್ತದೆ. ಪ್ರಬಂಧದಲ್ಲೂ ಅದೇ ಹಳೆಯ ಬೇಕನ್, ಆರ್ವೆಲ್ ಹೆಸರೇ. ನಾಟಕಕಾರನ್ನು ಹುಡುಕುತ್ತಾ ಹೋದರೆ ಅದೇ ಷೇಕ್ಸ್‌ಪಿಯರ್, ಚೆಕಾಫ್, ಬ್ರೆಕ್ಟ್, ಬೆಕೆಟ್, ದಾರಿಯೋ ಫೋ ತೀರಾ ಇತ್ತೀಚೆಗೆ ಬಂದರೆ ಹೆರಾಲ್ಡ್ ಪಿಂಟರ್. ಹನಿಗವಿತೆಗಳನ್ನು ಓದಲು ಹುಡುಕಾಡಿದರೆ ಅದೇ ಅನಾದಿಕಾಲದ ಲಿಮೆರಿಕ್ಕು, ಅದದೇ ಹಾಯ್ಕು.
ಇಷ್ಟೇನಾ?
ಯಾವ ಇಂಗ್ಲಿಷ್ ಪತ್ರಿಕೆ ಕತೆಗಳನ್ನು ಪ್ರಕಟಿಸುತ್ತೆ ಹೇಳಿ? ಟೈಮ್ಸಾಫಿಂಡಿಯಾದಲ್ಲೋ ಅಥವಾ ಅದರಂಥ ಯಾವುದಾದರೂ ಇಂಗ್ಲಿಷ್ ಪತ್ರಿಕೆಯಲ್ಲೋ ಕವಿತೆ ಪ್ರಿಂಟಾಗುತ್ತಾ? ಹೋಗಲಿ ಅಂದರೆ ಒಂದು ಪ್ರಬಂಧ, ಒಂದು ಹನಿಗವಿತೆ. ಹುಡುಕಿದರೂ ಸಿಗುವುದಿಲ್ಲ. ಇಂಗ್ಲಿಷ್ ಭಾಷೆ ಎಷ್ಟು ಬರಡಾಗಿ ಹೋಗಿದೆ ಎಂದು ಯೋಚಿಸುತ್ತಾ ಕೂತೆ. ಅದು ಕೇವಲ ಮಾಹಿತಿಯನ್ನು ರವಾನಿಸುವ ಭಾಷೆಯಾಗಿದೆ. ತನ್ನ ಕಲಾತ್ಮಕ ಅಭಿವ್ಯಕ್ತಿಯನ್ನು ಕಳಕೊಂಡಿದೆ. ರಸಹೀನವಾಗಿದೆ. ಸುದ್ದಿಯನ್ನೂ ಮಾಹಿತಿಯನ್ನೂ ವರದಿಗಳನ್ನೂ ಪಠ್ಯಪುಸ್ತಕಗಳನ್ನೂ ಅದರಲ್ಲಿ ಬರೆಯಬಹುದು. ಈ ದಾರಿ ಎಲ್ಲಿಗೆ ಹೋಗುತ್ತದೆ ಎಂದು ಕೇಳಿ ಉತ್ತರ ಪಡೆಯಬಹುದು. ದಾರಿ ನೂರಾರಿವೆ ಬೆಳಕಿನರಮನೆಗೆ ಎಂದು ರೂಪಕದಲ್ಲಿ ಹೇಳುವುದಕ್ಕೆ ಅದನ್ನು ಯಾರೂ ಬಳಸುತ್ತಿಲ್ಲ.
ಪೂರ್ಣ ಓದಿಗೆ ಭೇಟಿ ನೀಡಿ-ನುಡಿನಮನ

‍ಲೇಖಕರು avadhi

February 21, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

2 ಪ್ರತಿಕ್ರಿಯೆಗಳು

 1. Prasad Koila

  ಈ ಲೇಖನ ಇಂಗ್ಲೀಷ್ ನಲ್ಲೂ ಪ್ರಕಟವಾದರೆ ಒಂದು ಒಳ್ಳೆಯ ಚರ್ಚೆಗೆ ವಿಷಯವಾಗಬಲ್ಲುದು ಅಂಥ ನನ್ನ ಅನಿಸಿಕೆ.
  ಉತ್ತಮ ಸಾಹಿತ್ಯ ಅವಲೋಕನ ಜೋಗಿ ಸಾರ್.

  ಪ್ರತಿಕ್ರಿಯೆ
 2. ಶಿವ

  Deccan Herald ಪ್ರಕಟಿಸುತ್ತೆ. ಅದರಲ್ಲಿ ಕತೆ, ಪ್ರವಾಸ ಕಥನ ಇನ್ನಿತರ ಸಾಹಿತ್ಯ ಗಳು ಬರುತ್ತವೆ. ಈಗ ಕಡಿಮೆಯಾಗಿರಬಹುದು. ಕಾರಣವೆಂದರೆ ಬರೆಯುವವರಿಲ್ಲ. ಇಂಗ್ಲೀಷನ್ನು ಮಾತಾಡುವ, ವ್ಯವಹಾರಕ್ಕಷ್ಟೇ ಬಳಸುವ ಮತ್ತು ಓದುವ ಭಾಷೆಯಾಗಿ ಈಗಿನ ಜನಾಂಗ ಸ್ವೀಕರಿಸಿದೆ. ಬರೇ times of india ಮತ್ತದರ ಅನೈತಿಕ ಸಂತಾನದಂತಿರುವ ಇತರ ಪತ್ರಿಕೆಗಳ ಕತೆ ಮಾತ್ರ ಜೋಗಿ ಹೇಳಿದಂತಿದೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: