ಜೋಗಿ ಬರೆದಿದ್ದಾರೆ: ಪಿಶಾಚಿಗಳ ಹುಡಕಾಟದಲ್ಲಿ…

as ನಾನು ಆರನೇ ತರಗತಿಯ ತನಕ ಓದಿದ್ದು ಗುರುವಾಯನಕೆರೆ ಎಂಬ ಪುಟ್ಟ ಊರಲ್ಲಿ. ನಮ್ಮೂರಲ್ಲಿ ಅದೇ ಹೆಸರಿನ ಒಂದು ಕೆರೆಯೂ ಇದೆ. ಒಂದು ಬೆಳಗ್ಗೆ ಸ್ಕೂಲಿಗೆ ಹೋಗಬೇಕಾದರೆ, ಕೆರೆಯಲ್ಲಿ ಅಪರಿಚಿತ ಶವವೊಂದು ತೇಲುತ್ತಿತ್ತು. ಆವತ್ತಿನಿಂದ ಆ ಕೆರೆ ದಂಡೆಯಲ್ಲಿ ಆಕೆ ಪಿಶಾಚಿಯಾಗಿ ಓಡಾಡಿಕೊಡಿದ್ದಾಳೆ ಅಂತ ನಮ್ಮೂರ ಮಂದಿ ಮಾತಾಡಿಕೊಳ್ಳುತ್ತಿದ್ದರು. ಬೆಳ್ತಂಗಡಿಯ ಭಾರತ್ ಟಾಕೀಸಿನಲ್ಲಿ ಆನಂದ ಚಿಕ್ಕಪ್ಪನ ಜೊತೆ ‘ನಂದಗೋಕುಲ’ ಸಿನೆಮಾ ನೋಡಿಕೊಂಡು ಬರುತ್ತಿದ್ದ ಒಂದು ರಾತ್ರಿ, ತುಂಬಿಕೊಂಡಿದ್ದ ಗುರುವಾಯನಕೆರೆಯಲ್ಲಿ ಯಾರೋ ಕೈ ಕಾಲು ಬಡಿಯುತ್ತಿದ್ದ ಸದ್ದು ಕೇಳಿಸಿತು. ಸಣ್ಣಗೆ ಏನೋ ಗೊಣಗುತ್ತಿದ್ದದೂ ಕೇಳಿಸಿತು. ನನಗೆ ಆಕೆಯ ಪಿಶಾಚಿಯ ನೆನಪಾಯಿತು. ನಾನು ಹಿಂತಿರುಗಿ ನೋಡುತ್ತಿದ್ದಂತೆ ಚಿಕ್ಕಪ್ಪ ನನ್ನನ್ನು ದರದರ ಎಳೆದುಕೊಂಡೇ ಕೆರೆದಂಡೆ ದಾಟಿಸಿದ್ದರು.
 
ಆವತ್ತಿನಿಂದ ದೆವ್ವಗಳ ಬಗ್ಗೆ ಸೆಳೆತ ಶುರುವಾಯಿತು. ನಮ್ಮೂರಲ್ಲಿ ದೆವ್ವಗಳಿಗೇನು ಕೊರತೆ ಇರಲಿಲ್ಲ. ವರುಷಕ್ಕೊಬ್ಬರೋ ಇಬ್ಬರೋ ಆತ್ಮಹತ್ಯೆ ಮಾಡಿಕೊಳ್ಳುತ್ತಾ, ಆಕಸ್ಮಿಕವಾಗಿ ಸಾಯುತ್ತಾ ದೆವ್ವಗಳ ಜನಸಂಖ್ಯೆ ಕುಗ್ಗದ ಹಾಗೆ ನೋಡಿಕೊಳ್ಳುತ್ತಿದ್ದರು. ಹೊಸ ದೆವ್ವ ಬಂದ ತಕ್ಷಣ ಹಳೇ ದೆವ್ವಗಳು ಜಾಗ ಖಾಲಿ ಮಾಡುತ್ತಿದ್ದವು.
 
ಗುರುವಾಯನಕೆರೆಯಿಂದ ವೇಣೂರಿಗೆ ಹೋಗುವ ಹಾದಿಯಲ್ಲಿ ಆಲದ ಮರಕ್ಕೆ ಜೋತುಬಿದ್ದಿದ್ದ ಸರ್ಪ ಪಿಶಾಚಿಯೇ, ನಾನು ನೋಡಿದ ದೀರ್ಘಾಯುಷಿ ದೆವ್ವ . ಆ ಮರದ ಕೆಳಗೆ ಒಂದು ದಿನ ಸರ್ಪ ಸತ್ತುಬಿದ್ದಿದ್ದನ್ನು ಯಾರೋ ನೋಡಿ ಗಾಬರಿಯಾಗಿ ಊರಿಗೆಲ್ಲ ಸುದ್ದಿ ಹಬ್ಬಿಸಿದರು. ತೊಡೆಯಷ್ಟು ದಪ್ಪ, ಸುಮಾರು ಆರೇಳು ಮೀಟರ್ ಉದ್ದ ಇದ್ದ ಆ ಸರ್ಪವನ್ನು ನೋಡಿದವರೆಲ್ಲ ಅದನ್ನು ಏಳು ಹೆಡೆಯ ನಾಗರಹಾವು ಎಂದೇ ಭಾವಿಸಿಬಿಟ್ಟಿದ್ದರು. ಅದಕ್ಕೆ ಸರ್ಪ ಸಂಸ್ಕಾರ ಮಾಡಲೇ ಬೇಕು ಎಂದು ತೀರ್ಮಾನಿಸಿದ್ದರು. ಆದರೆ ಅಷ್ಟರಲ್ಲೇ ಸರ್ಪ ಅಲ್ಲಿಂದ ಮಾಯವಾಗಿತ್ತು.
 
ಅದು ದೆವ್ವವಾಗಿ ರಸ್ತೆ ಬದಿಯಲ್ಲಿರುವ ಆಲದ ಮರದಲ್ಲಿ ನೆಲೆಸಿದೆ ಎಂದು ವದಂತಿ ಹಬ್ಬಿತ್ತು. ಅದಕ್ಕೆ ತಕ್ಕಂತೆ ಬೆಳದಿಂಗಳ ರಾತ್ರಿಯಲ್ಲಿ ಆಲದ ಮರದ ಬಿಳಲುಗಳು ದೂರಕ್ಕೆ ಜೋತುಬಿದ್ದ ಹಾವಿನ ಹಾಗೆಯೇ ಕಾಣಿಸುತ್ತಿದ್ದವು. ಸಣ್ಣಗೆ ಗಾಳಿ ಆಡಿದರೆ ಸಾಕು ಆ ಬಿಳಲುಗಳು ಅತ್ತಿತ್ತ ಜೋಲಾಡಿ ಮತ್ತಷ್ಟು ಭಯಗೊಳಿಸುತ್ತಿದ್ದವು. ಅದೇ ಜಾಗದಲ್ಲಿ, ಅದೇನು ಕಾರಣವೋ ಏನೋ, ನಾಲ್ಕೈದು ಅಪಘಾತಗಳೂ ಸಂಭವಿಸಿ ಅಲ್ಲಿ ಸರ್ಪ ಪಿಶಾಚಿ ಇದೆ ಎಂಬ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸಿ ರಾತ್ರಿ ಹೊತ್ತಲ್ಲಿ ಅಲ್ಲಿ ಓಡಾಡುವುದನ್ನೂ ನಮ್ಮೂರಿನ ಮಂದಿ ನಿಲ್ಲಿಸಿದ್ದರು.
 
ಅಷ್ಟು ಹೊತ್ತಿಗೆ ನಾನು ಗುರುವಾಯನಕೆರೆ ಬಿಟ್ಟು ಉಪ್ಪಿನಂಗಡಿಗೆ ಬಂದೆ. ಆದರೆ, ದೆವ್ವಗಳ ಕುರಿತು ಕುತೂಹಲ ತಣಿದಿರಲಿಲ್ಲ. ನಮ್ಮನ್ನು ದೆವ್ವಗಳ ಕುರಿತ ಚಿತ್ರ ವಿಚಿತ್ರ ಕತೆಗಳನ್ನು ಹೇಳಿ, ಸತ್ಯ ಸುಳ್ಳುಗಳು ನಡುವಿನ ಗೆರೆ ಅಳಿಸಿ ಹೋಗುವಂತೆ ಮಾಡಿದ್ದರು. ಅಂಥ ಕತೆಗಳಲ್ಲಿ ಇದೂ ಒಂದು.
 
ಒಮ್ಮೆ ನಮ್ಮಜ್ಜ ಬೆಳದಿಂಗಳ ರಾತ್ರಿಯಲ್ಲಿ ಎಲ್ಲಿಂದಲೋ ನಡೆದುಕೊಂಡು ಬರುತ್ತಿದ್ದರಂತೆ. ಇದ್ದಕ್ಕಿದ್ದಂತೆ ಅವಯ ಮುಂದೆ ಮೋಟು ದೆವ್ವ ಪ್ರತ್ಯಕ್ಷವಾಯಿತಂತೆ. ರಕ್ಷಣೆಗೆಂದು ಕೈಯಲ್ಲಿ ಹಿಡಿದುಕೊಂಡಿದ್ದ ಬೆತ್ತದಿಂದ ವೋಟು ದೆವ್ವಕ್ಕೆ ಸರಿಯಾಗಿ ಭಾರಿಸಿ,ಅಜ್ಜ ಓಡೋಡಿಯೇ ಮನೆ ತಲುಪಿದರಂತೆ. ಮನೆ ತಲುಪಿ, ಏದುಸಿರು ಬಿಡುತ್ತಾ ಹಾಸಿಗೆಯಲ್ಲಿ ಬಿದ್ದವರು ಮೂರು ವಾರ ಜ್ವರದಿಂದ ನರಳಿದ್ದರು.
 
ಅಜ್ಜನಿಗೆ ಕಾಣಿಸಿದ್ದು ದೆವ್ವ ಅಲ್ಲ, ಅದು ದಾರಿಯಲ್ಲಿರುವ ಯಾವತ್ತೋ ಕಡಿದ ವೋಟು ಬೊಡ್ಡೆ. ರಾತ್ರಿ ಅವರಿಗೆ ಅದು ದೆವ್ವದಂತೆ ಕಾಣಿಸಿತ್ತು ಅಷ್ಟೇ. ಆ ಮರದ ಬೊಡ್ಡೆಯನ್ನೇ ಅವರು ಚೆನ್ನಾಗಿ ಥಳಿಸಿ ಬಂದಿದ್ದರು. ಮಾರನೇ ದಿನ ಚೂರುಚೂರಾಗಿ ಬಿದ್ದ ಅವರ ಬೆತ್ತದ ತುಂಡುಗಳು ಆ ಬೊಡ್ಡೆಯ ಹತ್ತಿರ ಕಾಣಿಸಿಕ್ಕಿದ್ದುವಂತೆ. ದಿನಾ ನೋಡುತ್ತಿದ್ದ ಆ ಬೊಡ್ಡೆ ಅವರಿಗೆ ಆ ರಾತ್ರಿ ಯಾಕೆ ವೋಟು ದೆವ್ವದ ಹಾಗೆ ಕಾಣಿಸಿತು. ಯಾವುದೋ ಯೋಚನೆಯಲ್ಲಿದ್ದ ಅವರಿಗೆ ಅದಯ ಧುತ್ತೆಂದು ಎದುರಾದಾಗ ಹಾಗೆನ್ನಿಸಿತಾ? ಬೆಳಕಿನ ವಿಚಿತ್ರ ವಿನ್ಯಾಸದಲ್ಲಿ ಅದು ಚಲಿಸಿದಂತೆ ಕಂಡು ಅಜ್ಜ ಗಾಬರಿ ಆಗಿದ್ದರಾ? ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕುವುದಕ್ಕೆ ನಾನು ಪ್ರಯತ್ನಿಸುತ್ತಿದ್ದೆ.  
 
ಉಪ್ಪಿನಂಗಡಿಯಲ್ಲೂ ದೆವ್ವಗಳಿಗೇನು ಕೊರತೆ ಇರಲಿಲ್ಲ. ನಮ್ಮ ಮನೆ ಸ್ಕೂಲಿಗೆ ಆರೇಳು ಕಿಲೋಮೀಟರ್, ಭತ್ತದ ಗದ್ದೆಗಳ ದಾರಿಯಲ್ಲಿ ಸಾಗಿದರೆ ನಾಲ್ಕೈದು ಕಿಲೋಮೀಟರ್. ನಡುರಾತ್ರಿಯ ತನಕವೂ ಊರು ಸುತ್ತುತ್ತಾ ನೇತ್ರಾವತಿಯ ದಂಡೆಯಲ್ಲಿ ಸಿಗರೇಟು ಸುಡುತ್ತಾ,ನಮ್ಮ ಕಲ್ಪನೆಗಳನ್ನು ಹರಿಬಿಡುತ್ತಾ ಕೂತಿದ್ದು ಹನ್ನೊಂದು ಗಂಟೆಗೆ ಮನೆಗೆ ಹೊರಟಾಗ ಭಯ ಶುರುವಾಗುತ್ತಿತ್ತು. ಕಾಳಗತ್ತಲ ಹಾದಿಯಲ್ಲಿ ಸುಮಾರು ಒಂದು ಗಂಟೆಯ ಹಾದಿ ಸಾಗುವುದನ್ನು ಊಹಿಸಿಕೊಳ್ಳಿ .
ಆ ಹಾದಿಯಲ್ಲೂ ದೆವ್ವಗಳಿದ್ದವು. ಆಕಸ್ಮಿಕವಾಗಿ ಸತ್ತವರು, ಮರಕ್ಕೆ ನೇಣು ಹಾಕಿಕೊಂಡವರು ಆಗಾಗ ಕಾಣಿಸಿಕೊಂಡು ಮಂದಿಯನ್ನು ಬೆಚ್ಚಿಬೀಳಿಸಿದ್ದರು. ಕತ್ತಲೆಯಲ್ಲಿ ನಡೆಯುವಾಗ ಬೆನ್ನ ಹಿಂದೆ ಅಷ್ಟು ದೂರದಲ್ಲಿ ದೆವ್ವವೊಂದು ಹಿಂಬಾಲಿಸಿಕೊಂಡು ಬರುತ್ತಿದೆ ಎನ್ನುವ ಭಯ ಬೆನ್ನಹುರಿಯುದ್ದಕ್ಕೂ ಛಳಕು ಹುಟ್ಟಿಸುತ್ತಿತ್ತೇ ವಿನಾ, ತಿರುಗಿ ನೋಡಿದರೆ ಅದೇ ಕತ್ತಲ ಹಾದಿ. ಕಾಲಗತ್ತಲೆಯಾದರೆ ಪರವಾಗಿಲ್ಲ. ಇಡೀ ಜಗತ್ತೇ ಕಪ್ಪಗೆ ಕಾಣುತ್ತಿತ್ತು. ಬೆಳದಿಂಗಳೇನಾದರೂ ಇದ್ದರೆ ಮುಗಿಯಿತು, ಪ್ರತಿಯೊಂದು ಪೊದೆಗೂ ಚಲನೆ ಬರುತ್ತಿತ್ತು. ಗಾಳಿಗೆ ಮರದ ಎಲೆಗಳು ಅಲ್ಲಾಡಿ, ನೆರಳಿನ ನಡುವಿನ ಹಾಲುಬಣ್ಣದ ಬೆಳಕೂ ಅಲ್ಲಾಡಿ ನಖಶಿಖಾಂತ ಭಯವಾಗುತ್ತಿತ್ತು.
 
ಅದೇ ಸುಮಾರಿಗೆ ಒಂದಾದರೂ ದೆವ್ವ ಕಣ್ಣಿಗೆ ಕಾಣಿಸಲಿ ಅಂತ ನಾನು ಆಸೆಪಟ್ಟಿದ್ದು. ನನಗೆ ಜೊತೆಯಾಗಿ ನಿಂತವನು ನನ್ನ ಜೊತೆಗೇ ಓದುತ್ತಿದ್ದ ಸುಭ್ರಾಯ. ಇಬ್ಬರಿಗೂ ಒಂದೇ ಒಂದು ಸಲ ದೆವ್ವದ ಜೊತೆ ಮುಖಾಮುಖಿ ಆಗಲೇ ಬೇಕು ಅನ್ನುವ ವಾಂಛೆ ಶುರುವಾಯಿತು. ಹೀಗಾಗಿ ಎಲ್ಲೆಲ್ಲಿ ದೆವ್ವಗಳಿವೆ ಎಂದು ಜನ ಗುಲ್ಲೆಬ್ಬಿಸಿದ್ದರೋ ಅಲ್ಲೆಲ್ಲ ಹೋಗಿ ದೆವ್ವಗಳನ್ನು ಹುಡುಕತೊಡಗಿದೆವು.
 
ಪುತ್ತೂರಿನಿಂದ ವಿಟ್ಲಕ್ಕೆ ಹೋಗುವ ಹಾದಿಯಲ್ಲಿರುವ ತೋಟವೊಂದರ ನಡುವಿನಲ್ಲಿರುವ ಮನೆಯಲ್ಲಿ ಪಾತ್ರೆ ಪರಡಿಗಳು ಹಾರಾಡುತ್ತವೆ. ಹೆಂಚಿನ ಮೇಲೆ ಕಲ್ಲು ಬೀಳುತ್ತದೆ. ಆ ತೋಟದಲ್ಲಿ ದೆವ್ವವಿದೆ ಎಂಬ ಸುದ್ದಿ ಹಬ್ಬಿತ್ತು. ಅಲ್ಲಿಗೆ ಹೋದ ನಮಗೆ ನಿರಾಸೆ ಕಾದಿತ್ತು. ಆ ಮನೆಯೊಡೆಯ ನಮ್ಮನ್ನು ಒಳಗೆ ಬಿಡಲೇ ಇಲ್ಲ. ಯಾರೋ ಸತ್ತು ದೆವ್ವ ಆಗಿದ್ದಾರೆ. ಇನ್ನು ನೀವು ಇಲ್ಲಿ ರಾತ್ರಿ ವಾಸ ಮಾಡಿ ಸತ್ತು ಇನ್ನೆರಡು ದೆವ್ವಗಳಾಗೋದು ಬೇಡ. ಇರೋ ದೆವ್ವವೇ ಸಾಕು, ಹೋಗಿಹೋಗಿ ಎಂದು ನಮ್ಮನ್ನು ಅಟ್ಟಿದ್ದರು. ಆದರೂ ಹಟಬಿಡದೇ, ಅವರಿಗೆ ಗೊತ್ತಾಗದ ಹಾಗೆ,ಅವರ ತೋಟದಲ್ಲಿ ರಾತ್ರಿ ಅವಿತು ಕೂತಿದ್ದೆವು , ಯಾವ ಅಪರಿಚಿತ ಸದ್ದೂ ಕಿವಿಗೆ ಬಿದ್ದಿರಲಿಲ್ಲ. ಯಾವ ದೆವ್ವವೂ ಕಣ್ಣಿಗೆ ಬಿದ್ದಿರಲಿಲ್ಲ.
 
ಉಪ್ಪಿನಂಗಡಿಯಿಂದ ಪುತ್ತೂರಿಗೆ ಹೋಗುವ ಹಾದಿಯಲ್ಲಿ ಹಳೆಯ ಕಾಲದ ಅರಮನೆಯೊಂದಿತ್ತು. ಅದು ಪಾಳುಬಿದ್ದು ಎಷ್ಟೋ ವರುಷಗಳಾಗಿದ್ದವು. ಅದರ ಸುತ್ತ ಮುತ್ತ ದೆವ್ವ ಓಡಾಡುತ್ತದೆ ಎಂಬ ಪ್ರತೀತಿಯಿತ್ತು. ಒಂದು ಸಂಜೆ ಆ ಮನೆಗೆ ಹೋದವರಿಗೆ ಅಚ್ಚರಿ ಕಾದಿತ್ತು. ಅದು ನಿಜಕ್ಕೂ ಅದ್ಭುತವಾದ ಅರಮನೆ. ರಾಣಿಯ ಅಂತಃಪುರ ಸ್ನಾನಗೃಹ,ವಿಶಾಲವಾದ ಸಭಾಮಂಟಪಗಳ ಬಾಗಿಲು ಮುರಿದುಬಿದ್ದದ್ದರಿಂದ ಅಲ್ಲಿಗೆಲ್ಲ ಸಲೀಸಾಗಿ ಹೋಗಿ ಬರಬಹುದಾಗಿತ್ತು.
 
ಆ ಪಾಳುಬಿದ್ದ ಅರಮನೆಯಲ್ಲಿ ರಾತ್ರಿಗಳನ್ನು ಕಳೆದಿದ್ದಾಯಿತು. ಯಾವ ದೆವ್ವವೂ ಕಾಣಿಸಿಕೊಳ್ಳಲಿಲ್ಲ. ಅದಾದ ನಂತರ ಸಕಲೇಶಪುರದ ಸಮೀಪ ಇರುವ ಮಂಜರಾಬಾದ್ ಕೋಟೆ, ಬಿಸಲೆಘಾಟಿಯ ಬೂದಿಚೌಡಿ ಚೌಕಿಯ ಆಸುಪಾಸು, ಟಿಪ್ಪುಸುಲ್ತಾನ ಕಟ್ಟಿಸಿದ ಜಮಲಾಬಾದ್ ಕೋಟೆ, ವೇಣೂರಿನ ಕಾಡುಗಳು, ಗುರುವಾಯನಕೆರೆಯ ಕಟ್ಟಡ-ಯೇಲ್ಲಲವನ್ನೂ ಸುತ್ತಾಡಿದ್ದಾಯಿತು.
 
ಕೊನೆಗೊಂದು ದಿನ ದೆವ್ವಗಳಿಲ್ಲ,ಅದೆಲ್ಲ ಸುಳ್ಳು ಎಂಬ ಖಚಿತ ತೀರ್ಮಾನಕ್ಕೆ ಬರುವ ಹೊತ್ತಿಗೆ ನಮ್ಮೂರ ಜೋಯಿಸರು ‘ದೆವ್ವಗಳು ಮನುಷ್ಯರಿಗೆ ಮಾತ್ರ ಕಾಣಿಸುತ್ತೆ ಕಣ್ರೋ’ ಎಂದು ಎಲ್ಲರೆದರೂ ಹೇಳಿ ನಕ್ಕಿದ್ದರು.
 
ಅವರು ತಮಾಷೆ ಮಾಡಿರಲಿಲ್ಲ ಎಂದು ಆಮೇಲೆ ಗೊತ್ತಾಯಿತು. ಜನ್ಮ ನಕ್ಷತ್ರದ ಪ್ರಕಾರ ಪ್ರತಿಯೊಬ್ಬರೂ ಮೂರು ಗಣಗಳ ಪೈಕಿ ಒಂದು ಗಣಕ್ಕೆ ಸೇರಿದವರಂತೆ. ಆ ಮೂರು ಗಣಗಳು: ದೇವ ಗಣ ,ರಾಕ್ಷಸ ಗಣ ,ಮನುಷ್ಯಗಣ. ದೇವ ಗಣಕ್ಕೆ ಸೇರಿದವರಿಗೆ ದೆವ್ವಗಳೆಲ್ಲ ಕಾಣಿಸುವುದೇ ಇಲ್ಲ. ಅವರನ್ನು ನೋಡಿ ತಕ್ಷಣ ದೆವ್ವಗಳೇ ಹೆದರಿ ಮುಖ ಮರೆಸಿಕೊಂಡು ಬಿಡುತ್ತದೆ. ರಾಕ್ಷಸ ಗಣದವರಿಗೆ ಅಪ್ಪಿತಪ್ಪಿ ಕಾಣಿಸುವುದುಂಟು. ಆದರೆ ಅವರ ತಂಟೆಗೆ ಬರುವುದಿಲ್ಲ. ದೆವ್ವಗಳು ಕಾಡುವುದು ಈ ಮನುಷ್ಯ ಗಣಕ್ಕೆ ಸೇರಿದವರೇಅಲ್ಲ. ಹೀಗಾಗಿ ದೆವ್ವಗಳನ್ನು ಎಷ್ಟು ಹುಡುಕಿದರೂ ನಮ್ಮ ಹುಡುಕಾಟ ಕೊನೆಗೊಳಿಸಿದ್ದರು.
….
 
ಈಗಲೂ ನಮ್ಮೂರಲ್ಲಿ ದೆವ್ವಗಳಿವೆ. ನನ್ನ ಮಾವ ಒಮ್ಮೆ ಜೀಪು ಓಡಿಸಿಕೊಂಡು ಹೋಗುತ್ತಿದ್ದಾಗ ಉಪ್ಪಿನಂಗಡಿ, ಬೆಳ್ತಂಗಡಿ ಹಾದಿಯಲ್ಲಿರುವ ಕುಪ್ಪೆಟ್ಟಿ ಎಂಬ ಊರಿನ ಸೇತುವೆಯ ಬಳಿ ರಸ್ತೆ ಬದಿಯಲ್ಲಿ ಯಾರೋ ನಿಂತಿದ್ದನ್ನು ನೋಡಿದರಂತೆ. ಜೀಪು ಹತ್ತಿರ ಬರುತ್ತಿದ್ದಂತೆ ಆ ವ್ಯಕ್ತಿ ಇದ್ದಕ್ಕಿದ್ದಂತೆ ರಸ್ತೆ ಮದ್ಯಕ್ಕೆ ಓಡಿ ಬಂದಂತಾಯಿತಂತೆ. ಗಾಬರಿಯಿಂದ ನೋಡಿದರೆ ಯಾರೂ ಜೀಪಿಗೆ ಬಡಿದ ಸದ್ದೂ ಇಲ್ಲ. ಅಲ್ಲಿ ಜಾಗದಲ್ಲಿ ಯಾವತ್ತೋ ಯಾರೋ ಜೀಪಿನೆಡೆಗೆ ಬಿದ್ದು ತೀರಿಕೊಂಡಿದ್ದರು. ಅವರೇ ದೆವ್ವವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನುವ ವದಂತಿ ಹಬ್ಬಿತ್ತು.
 
ಕೊಳ್ಳಿದೆವ್ವ, ಬೀಡಿದೆವ್ವ, ರಕ್ತಕಾರಿ ಸಾಯುವಂತೆ ಮಾಡುವ ದೆವ್ವ, ಪರದೇಸೀದೆವ್ವ, ಅಳೊದೆವ್ವ,ಕತೆ ಹೇಳೋದೆವ್ವ… ಹೀಗೆ ಚಿತ್ರ ವಿಚಿತ್ರ ದೆವ್ವಗಳ ಕತೆಗಳನ್ನು ನಾನು ಕೇಳಿದ್ದೇನೆ. ನಮ್ಮೂರಿನ ಬೀಡಿ ದೆವ್ವಗಳದ್ದೇ ಒಂದು ಕತೆ. ಅವು ಹಾದಿಹೋಕರ ಹತ್ತಿರ ಬೀಡಿ ಕೇಳುತ್ತವಂತೆ. ಕೊಟ್ಟ ಬೀಡಿಯನ್ನು ನೆಲಕ್ಕೆ ಬೀಳಿಸುತ್ತವಂತೆ. ಅದನ್ನು ಎತ್ತಿಕೊಡಲು ಬಾಗಿದರೆ ಜುಟ್ಟು ಹಿಡಿಕೊಂಡು ಹೆಗಲೇರುತ್ತವಂತೆ ಅಂಥ ಅನುಭವ ಆದವರನ್ನು ನಾನೆಂದೂ ಕಂಡಿಲ್ಲ. ದೆವ್ವಗಳಿಗೆ ಎದುರಾದವರೆಲ್ಲ ಚಿತ್ರ ವಿಚಿತ್ರವಾಗಿ ಅದರಿಂದ ಪಾರಾಗಿ ಬಂದವರೇ.
 
ದೆವ್ವ ಕಾಣಿಸಿದಾಗ ಸುತ್ತಲೂ ಉಚ್ಚೆ ಹೊಯ್ದು ನಡುವೆ ನಿಂತುಬಿಡಬೇಕು, ಬಟ್ಟೆ ಬಿಚ್ಚಿ ಬೆತ್ತಲೆ ನಿಂತು ಬಿಡಬೇಕು, ದೆವ್ವಕ್ಕೇ ಬಾಗಿ ಬಿಡಿ ಎತ್ತಿಕೊಡುವಂತೆ ಹೇಳಿ ಅದು ಬಾಗಿದಾಗ ಅದರ ಕೂದಲು ಕಿತ್ತುಕೊಳ್ಳಬೇಕು ಎಂದು ತರಹೇವಾರಿ ಉಪಾಯಗಳನ್ನೆಲ್ಲ ಹೇಳಿಕೊಡುವ ಮಂದಿಯೂ ನಮ್ಮೂರಲ್ಲಿದ್ದರು.
 
ಇಲೆಕ್ಟ್ರಿಸಿಟಿ ಬಂದ ನಂತರ ನಮ್ಮೂರ ದೆವ್ವಗಳೂ ಸತ್ತುಹೋದು. ಆಮೇಲೆ ಊರಿಗೆ ಹೋದಾಗ ಸರ್ಪಪಿಶಾಚಿ ಇದ್ದ ಮರವನ್ನು ನೋಡಲು ಹೋಗಿದ್ದೆ. ಅದರ ಆಸುಪಾಸಿನಲ್ಲಿ ಲೈಟ್ ಕಂಬ ಹಾಕಿ ಟ್ಯೂಬ್ ಲೈಟು ಹಾಕಿದ್ದರು. ಹೀಗಾಗಿ ಮರ ಮರವಾಗಿಯೇ ಬಿಳಲು ಬಿಳಲಾಗಿಯೇ ಕಾಣಿಸುತ್ತಿತ್ತು. ಯಾವ ಭಯವೂ ಕಲ್ಪನೆಗೂ ಅವಕಾಶ ಇರಲಿಲ್ಲ. ಇಲೆಕ್ಟ್ರಿಸಿಟಿದೆವ್ವದ ಜೊತೆಗೆ ನಮ್ಮ ಕಲ್ಪನೆಗಳಲ್ಲೂ ಕಥನ ಶಕ್ತಿಯನ್ನೂ ಸಾಯಿಸಿಬಿಟ್ಟಿತೇನೋ ಅನ್ನಿಸುತ್ತಿದೆ.
 
ವಾಸ್ತವದಿಂದ ಪಾರಾಗುವುದಕ್ಕೆ ಇಂಥ ದೆವ್ವಗಳ ಸಹವಾಸ ನೆರವಾಗುತ್ತದೆ. ತುಂಬ ವಾಸ್ತವವಾದಿ ಸಿನೆಮಾಗಳನ್ನು ಮಾಡುತ್ತಿದ್ದ ಸತ್ಯಜಿತ್ ರೆ ಸೊಗಸಾದ ದೆವ್ವದ ಕತೆಗಳನ್ನು ಬರೆಯುತ್ತಿದ್ದರು. ನಾವು ದೆವ್ವದ ಕತೆಗಳನ್ನು ಓದುವುದಕ್ಕೆ ಆರಂಭಿಸಿದಾಗ ಕುತೂಹಲ ಹುಟ್ಟಿಸಿದ ಪಿಶಾಚಿಯೆಂದರೆ ಬೇತಾಳ ಕತೆಗಳಲ್ಲಿ ಬರುವ ವಿಕ್ರಮಾದಿತ್ಯನಿಗೆ ಕತೆ ಹೇಳುವ ಬೇತಾಳ.
 
ಇವತ್ತಿನ ಮಕ್ಕಳಿಗೆ ದೆವ್ವಗಳೆಂದರೆ ಟೀವಿ ಸೀರಿಯಲ್ಲುಗಳಲ್ಲಿ, ಸಿನೆಮಾಗಳಲ್ಲಿ ಕಾಣುವ ಸಂಗತಿಗಳಾಗಿ ಉಳಿದಿವೆ. ಹಳ್ಳಿಗಳಲ್ಲೂ ಅಷ್ಟಾಗಿ ದೆವ್ವಗಳಿದ್ದಂತಿಲ್ಲ. ನಾವೆಲ್ಲ ಬುದ್ದಿವಂತರೂ ತರ್ಕಬದ್ಧರಾಗಿ ಯೋಚಿಸಬಲ್ಲವರೂ ಜಾಣರೂ ಆದ ಮೇಲೆ ದೆವ್ವಗಳೆಲ್ಲ ಆಸ್ತಿತ್ವ ಕಳಕೊಂಡು ಬಿಟ್ಟಿವೆ.
ನಿಮಗೂ ಹಾಗನ್ನಿಸುತ್ತಿಲ್ಲವೇ.   

‍ಲೇಖಕರು avadhi

November 5, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

16 ಪ್ರತಿಕ್ರಿಯೆಗಳು

 1. srikanth hunasavadi

  e kathe odutiddare idu nanna jeevanadalliye
  nadeda kathe annuva reethi bhasabaguttide. nanu
  halli parisaradinda bandavanagidarinda kathe
  tumba ista aithu. nanu e reethiya devvada
  bagge kelididine.

  ಪ್ರತಿಕ್ರಿಯೆ
 2. Tina

  ಜೋಗಿಯವರೆ,
  ಕನಸುಗಳು ಇಮ್ಯಾಜಿನೇಶನ್ನು ಇರೋತನಕ ದೆವ್ವಗಳಂಥ ಫ್ಯಾಂಟಸಿಗಳು ಸಾಯುವದು ಸಾಧ್ಯವೇ ಇಲ್ಲ ಅಂತ ನಂಗೆ ಅನ್ನಿಸ್ತದೆ. ಈಗ್ನೋಡಿ,ನೀವೆ ಬರ್ದಿಲ್ವೆ? ಹೀಗೇ ಯಾರಾದ್ರು ಅವನ್ನ ’ಜೀವಂತ’(What a cliche!!) ಮಾಡ್ತಲೆ ಇರ್ತಾರೆ.
  ಶಾಂತಲಾ,
  ನಿಮ್ಮ ಚುಟುಕು ಉತ್ತರ ನೋಡಿ ಜೋರು ನಗು ಬಂತು!! ಒಂಥರ ಪ್ರೈಮರಿ ಸ್ಕೂಲಲ್ಲಿ ಮೇಷ್ಟರ ’ಹೌದೇ ಇಲ್ಲವೆ ತಿಳಿಸಿ’ಪ್ರಶ್ನೆಗೆ ಉತ್ತರ ಕೊಟ್ಟಹಾಗೆ!!

  ಪ್ರತಿಕ್ರಿಯೆ
 3. malathi S

  We too were in Belthangady and Ujire for a few years. Remembered the kere and the Konkani maama’s mess very near guruvayankere bus stand. Stories of bhoota/devva are quite common there. was fun to read this
  🙂
  malathi S

  ಪ್ರತಿಕ್ರಿಯೆ
 4. jogi

  ಮಾಲತಿಯವರೇ,
  ನೀವು ಹೇಳ್ತಿರೋದು ಶೆಣೈ ಮಾಮನ ಹೋಟೆಲ್. ಈಗಲೂ ಅದ್ಭುತವಾದ ತಿಂಡಿ ಸಿಗುತ್ತದೆ. ಅಲ್ಲಿನ ಗಸಿಯಂತೂ ಬ್ರಹ್ಮಾಂಡ. ಈಗಲೂ ಆ ಕಡೆ ಹೋದಾಗ ಆ ಹೋಟೆಲಿಗೆ ಹೋಗಿಯೇ ಬರೋದು.

  ಪ್ರತಿಕ್ರಿಯೆ
 5. channu Mulimani

  Kathe adbuthvagide. balyadallin devvagala katakke akshar roop nidi adbuthavagi barediddiri

  ಪ್ರತಿಕ್ರಿಯೆ
 6. ಶಾಂತಲಾ ಭಂಡಿ

  ಟೀನಾ ಅವರೆ…
  ಜೋಗಿಯವರು ಇವತ್ತಿನ ಮಕ್ಕಳ ಬಗ್ಗೆ ಪ್ರಶ್ನೆ ಕೇಳಿದಾರಲ್ವ? ನಾನಂತೂ ಟೀವಿಗೀವಿಲಿ ದೆವ್ವ ನೋಡೋಲ್ಲ. ಅದ್ಕೆ ‘ಇಲ್ಲ’ ಅಂದೆ.
  ಭೂತ, ಗುಮ್ಮ, ದೆವ್ವ, ಪಿಶಾಚಿ, ಬೇತಾಳ ಇವೆಲ್ಲದ್ರ ಕಥೆ ಗೊತ್ತಿದೆ ನಂಗೆ. ನೋಡಿದೀನಿ ಕೂಡ….ಸಿರಿಯವರ ಕಥೆ ಓದಿದ್ ಮೇಲೆ ಎಲ್ಲಾ ಭೂತಗಳೂ ಹಾಸ್ಟೆಲ್ ಅಲ್ಲೇ ಇರತ್ವೆ ಅಂತ ಇನ್ನೂ ಭಯ ಆಗಿದೆ. ಯಾಕೇಂದ್ರೆ ನಾ ನೋಡಿದ್ ಭೂತನೂ ನಮ್ ಹಾಸ್ಟೆಲ್ ಅಲ್ಲೇ ಇತ್ತು…ಹ್ಞೂಂ….
  ನೀವ್ ಯಾವಾಗಾದ್ರೂ ಸಿಕ್ಕಾಗ ನೆನಪ್ಸಿ, ನಿಮಗೆ ಗುಮ್ಮನ ಕಥೆ ಹೇಳ್ತೀನಿ.

  ಪ್ರತಿಕ್ರಿಯೆ
  • prabhkar

   ನನಗು ದೆವ್ವ ನೋಡೋ ಆಸೆ ಆದ್ರೆ ಅದು ನನಗೆ ಕಾಣಿಸ್ತಾ ಇಲ್ಲ ಐಡಿಯಾ ಇದ್ರೆ ಹೇಳಿ ಪ್ಲೀಸ್

   ಪ್ರತಿಕ್ರಿಯೆ
 7. malathi S

  Dear Jogi,
  Breakfast at Shenoy mess was my favourite cos I hated to cook.:-) When my folks from Mumbai used to visit me it was their favourite haunt. glad it is still functional. Hope to go there next time.
  🙂
  Malathi S

  ಪ್ರತಿಕ್ರಿಯೆ
 8. BHanu PRiya.R

  it was k n i hav heard when my dad used to say me that even he have seen a devil
  i dnt trust devil but i trust wat my dad said about devil
  Let me cross my fingure not 2 see devil in my life
  yakandre nangae dhevva andhre baya

  ಪ್ರತಿಕ್ರಿಯೆ
 9. Kiran Shetty

  ಭೂತವಿಲ್ಲ ಪಿಶಾಚಿ ಇಲ್ಲ.. !!
  ನನಗೆ ಕತ್ತಲೆಯಲ್ಲಿ ಭೂತಗಳ ಭಯವಿಲ್ಲ.. ಆದರೆ ಪ್ರಾಣಿಗಳ,ಹಾವು ವಿಷ ಜಂತುಗಳ ಭಯ ಅಷ್ಟೇ…

  ಪ್ರತಿಕ್ರಿಯೆ
 10. sowmya m

  i think evagiro persons yargu yavdakku bhaya padalla anta devva annodanna create madtidira??????????????????????

  ಪ್ರತಿಕ್ರಿಯೆ
 11. Prajwal Dev

  Devva idya??? Idre yellide heltira nange adanna nodbeku anta ond ketta kutuuhala ide please yaaradru heli

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: