ಜೋಗಿ ಬರೆದ ಕವಿತೆ: ಕಾಡಿ ಬರೆಸಿದ ಅವಳಿಗೆ

XXL_JaiZharotia-L-559207583

ಸೀತಾಮಾತೆ

ಲಕ್ಷ್ಮಣರೇಖೆ

ದಾಟಿದರೆ

ಖಾತ್ರಿ ಅಶೋಕವನ

ಲಂಕಾದಹನ ಸೇತುಬಂಧನ.

ರಾವಣನೇ

ದಾಟಿದ್ದರೆ ಏನಾಗುತ್ತಿತ್ತೇ ಗೆಳತಿ.

ಹಾ.. ಲಕ್ಷ್ಮಣ ಎಂಬ ಉದ್ಗಾರ ಶೂನ್ಯ.

ಪ್ರೇಮದ ಉತ್ಕಟತೆಯಲ್ಲಿ ರಾವಣ

ದಾಟಿದ ಕಾಲಲ್ಲೇ ಉರಿದುರಿದು

ಸುಗ್ರೀವನಿಗೆ ಸಿಗುತ್ತಿರಲಿಲ್ಲ ತಾರೆ.

ಕುಂಭಕರ್ಣನಿಗೆ ನಿದ್ದೆ ನಿರ್ವಿಘ್ನ.

ಅರಗಿನ ಮನೆಯಿಂದ

ಹೊರಬಿದ್ದರೆ ಹಿಡಿಂಬವನ

ಏಕಚಕ್ರನಗರಿ ಬಕಾಸುರ ವಧೆ.

ನಡುವೆ ಹಿಡಿಂಬೆಯ ಜೊತೆ ಸರಸ.

ಕೊನೆಯಲ್ಲಿ ಸಿಕ್ಕವಳು ಪಾಂಚಾಲಿ.

ಕರ್ಣನ ಕರ್ಣಕಠೋರ ನಿರ್ಧಾರದಲ್ಲಿ

ಪಾಂಚಾಲಿಗೆ ಐವರೇ ಗತಿ.

ದ್ರೌಪದಿಯ ಸಂಗವಾದರೂ ಬಲಭೀಮ

ಸಿಕ್ಕಾಪಟ್ಟೆ ಸಂತ.

ರಸಿಕ ಅರ್ಜುನನಿಗೆ ಸದಾ ನವವಸಂತ.

ಸಾವು ಅವಳ ಸಂಗದಲ್ಲಿದೆ ಎಂದು

ಗೊತ್ತಿದ್ದೂ

ಪಾಂಡು ನಿರುದ್ವಿಗ್ನ.

ಸಂಗಮದಲ್ಲಿ ಮಹಾಸಂಗಮ.

ಗಂಡನ ಚಿತೆಯೆದುರು ತಾಯಹಂಬಲದ

ಮಾದ್ರಿ.

ಮತ್ತದೇ ಶ್ಲೋಕ: ಮಾ ನಿಷಾಧ.

ಬೇಡ.. ಬೇಡ..

ಮಿಲನಕ್ಕೆ ಹಾರೈಸುವ ಮೈಮನಗಳಿಗೆ

ಸಣ್ಣದೊಂದು ಎಚ್ಚರಿಕೆ.

ಮಾಡು ಇಲ್ಲವೆ ಮಡಿ.

ಮಾಡಿ ಮಡಿವವರ ನುಡಿ.

ಮಾಡೂ ಸಿಗದೇ ಗೂಡೂ ಸಿಗದೆ

ಸಂತರ ಸಂತತಿಗೆ

ನಿರಾತಂಕ

ಗುಡಿ.

ನಾನು ನೀನೆಂಬುದು

ಬೇರಲ್ಲ ಕಾಣಿರೋ.

ತಾಯಿ

ಬೇರು.

‍ಲೇಖಕರು avadhi

July 18, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಣ್ಣ ಕಾಯಕ ಕಾಯುವುದಷ್ಟೇ…

ಮಣ್ಣ ಕಾಯಕ ಕಾಯುವುದಷ್ಟೇ…

ಸಂತೆಬೆನ್ನೂರು ಫೈಜ್ನಟ್ರಾಜ್ ಎಷ್ಟೇ ಬಿಡಿಸಿದರೂ ಅಲ್ಲೊಂದು ಇಲ್ಲೊಂದು ಮೊಗ್ಗು ಬಳ್ಳಿಯಲೇ ಉಳಿದಂತೆ ಅಗೋ ಉಳಿದಿವೆ ನೋಡು ಆಡದ ಎಷ್ಟೋ...

ಹಣತೆ…

ಹಣತೆ…

ಸರೋಜ ಪ್ರಶಾಂತಸ್ವಾಮಿ ಹಚ್ಚುವ ಹಣತೆಯದು ಕಿಚ್ಚಿಗಲ್ಲಮೆಚ್ಚುಗೆಗೂ ಅಲ್ಲ...ಕದಲಿದ ಮನಗಳ ಬೆಳಕಲಿಒಂದುಗೂಡಿಸಿರೆಲ್ಲ... ತೈಲವ ಕುಡಿದು,ಬತ್ತಿಯ...

ಉಂಡು ಮರೆತ ಒಡಲ ಕನಸು

ಉಂಡು ಮರೆತ ಒಡಲ ಕನಸು

ಪ್ರೊ. ಚಂದ್ರಶೇಖರ ಹೆಗಡೆ ಪಲವಿನ್ನೂ ಹಸಿ ಹಸಿಯಾಗಿದೆಬನ್ನಿ ಗಿರಾಕಿಗಳೇ ಮುಖವಿಟ್ಟು ಆಸ್ವಾದಿಸಿಬಿಡಿ ಖಾಲಿಯಾಗಿರುವ ಎದೆಯ...

೧ ಪ್ರತಿಕ್ರಿಯೆ

  1. Santhosh Ananthapura

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಾರ್…..” ಇಂತಹ ಒಳನೋಟಗಳ ಜೊತೆಗಿನ ಆಟ ಜೋಗಿಯದ್ದೇ ದಿಟ ” ನಿಜಕ್ಕೂ ಕಾಡಿ ಬರೆಸಿದಂತಿದೆ…….! ಇಷ್ಟವಾಯಿತು……
    – ಸಂತೋಷ್ ಅನಂತಪುರ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: